Tag: ಮೆಳೆ

  • ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್ ಮೊರೆ ಹೋದ ರೈತರು

    ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್ ಮೊರೆ ಹೋದ ರೈತರು

    ಧಾರವಾಡ: ಜಿಲ್ಲೆಯ ನವಲಗುಂದದಲ್ಲಿ ಮುಂಗಾರು ಮಳೆ ನಂಬಿ ಬಿತ್ತನೆ ಮಾಡಿದ್ದ ರೈತರು ಈಗ ತಮ್ಮ ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್‌ಗಳು ಮೊರೆ ಹೋಗಿದ್ದಾರೆ.

    ಹೌದು. ಸಾವಿರಾರು ರೂಪಾಯಿ ಖರ್ಚು ಮಾಡಿ ರೈತರು ಬಾಡಿಗೆ ನೀರು ತರಿಸಿ ತಮ್ಮ ಬೆಳೆಗಳು ಉಸಿರಾಡುವಂತೆ ಮಾಡುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ನವಲಗುಂದ ತಾಲೂಕಿನಲ್ಲಿ ಭೀಕರ ಬರ ಇದೆ. ಈ ಸಲ ಮೇ ಅಂತ್ಯದಲ್ಲಿ ಸ್ವಲ್ಪ ಮಳೆಯಾಗಿತ್ತು. ಇದನ್ನು ನಂಬಿದ ರೈತರು, ಬಿ.ಟಿ. ಹತ್ತಿ ಮತ್ತು ಹೆಸರು ಬಿತ್ತನೆ ಮಾಡಿದ್ದರು.

    ಬೆಳೆ ಮೊಳಕೆಯೊಡೆದು ಈಗ ನೆಲ ಬಿಟ್ಟು ಮೇಲೆದಿದ್ದೆ. ಆದರೆ ಈ ಸಂದರ್ಭದಲ್ಲಿ ಬೇಕಾಗಿರುವ ಮಳೆ ಈಗ ಕೈಕೊಟ್ಟಿದ್ದು ರಣ ಬಿಸಿಲು ಆವರಿಸಿದೆ. ಇದರಿಂದ ರೈತನ ಪರಿಸ್ಥಿತಿ ಚಿಂತಾಜನಕವಾಗಿದೆ. ಹೇಗಾದರೂ ಮಾಡಿ ನೆಲದಿಂದ ಮೇಲೆದ್ದಿರುವ ಹೆಸರು ಮತ್ತು ಬಿಟಿ ಹತ್ತಿ ಉಳಿಸಿಕೊಳ್ಳಬೇಕು ಎಂದು ಸಾಲ ಮಾಡಿ ಬಾಡಿಗೆ ಟ್ಯಾಂಕರ್ ಪಡೆದು ನೀರು ಹಾಕುತ್ತಿದ್ದಾರೆ.

    ಟ್ಯಾಂಕ್‍ವೊಂದಕ್ಕೆ ದಿನಕ್ಕೆ 500 ರೂಪಾಯಿ ಬಾಡಿಗೆ ಕೊಡಬೇಕಾಗಿದೆ. ಒಂದು ಟ್ಯಾಂಕರ್ ನೀರಿಗೆ 150ರಿಂದ 200 ರೂಪಾಯಿ ಕೊಟ್ಟು ಎಲ್ಲೆಲ್ಲಿಂದಲೂ ನೀರು ತುಂಬಿಸಿಕೊಂಡು ಬರುತ್ತಿದ್ದಾರೆ. ಒಣ ಹವೆ ರಭಸವಾಗಿ ಬೀಸುತ್ತಿದ್ದರಿಂದ ತೇವಾಂಶದ ಕೊರತೆಯಿಂದ ಹೊಲದಲ್ಲಿದ್ದ ಬಿ.ಟಿ. ಹತ್ತಿ, ಹೆಸರು, ಒಣಗಿ ಹೋಗುವ ಆತಂಕ ಇರುವುದರಿಂದ ಟ್ಯಾಂಕರ್‌ಗಳು ಮೊರೆ ಹೋಗಿದ್ದಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]