Tag: ಮೆಣಸಿನಕಾಯಿ ಪುಡಿ

  • ಗಾಂಜಾ ವ್ಯಸನಿ ಮಗನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ, ಖಾರದ ಪುಡಿ ಹಾಕಿ ಥಳಿಸಿದ ತಾಯಿ

    ಗಾಂಜಾ ವ್ಯಸನಿ ಮಗನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ, ಖಾರದ ಪುಡಿ ಹಾಕಿ ಥಳಿಸಿದ ತಾಯಿ

    ಹೈದರಾಬಾದ್: ಗಾಂಜಾ ವ್ಯಸನಿಯಾಗಿದ್ದ 15 ವರ್ಷದ ಮಗನನ್ನು ತಾಯಿಯೊಬ್ಬಳು ಕಂಬಕ್ಕೆ ಕಟ್ಟಿ, ಆತನಿಗೆ ಹಿಗ್ಗಾಮುಗ್ಗ ಥಳಿಸಿ, ಮುಖಕ್ಕೆ ಮೆಣಸಿನ ಪುಡಿ ಹಚ್ಚಿರುವ ಘಟನೆ ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ ನಡೆದಿದೆ.

    ಮಗ ಗಾಂಜಾ ವ್ಯಸನಿಯಾಗಿರುವುದನ್ನು ನೋಡಿ ಸಹಿಸಲಾಗದೇ ತಾಯಿ ಹುಡುಗನಿಗೆ ಥಳಿಸಿ ಮುಖಕ್ಕೆ ಮೆಣಸಿನಕಾಯಿ ಪುಡಿ ಹಚ್ಚಿದ್ದಾರೆ. ಒಂದು ವರ್ಷದೊಳಗೆ ಗಾಂಜಾ ಸೇವಸಿವುದನ್ನು ಬಿಡುವುದಾಗಿ ಭರವಸೆ ನೀಡಿದ ಬಳಿಕ ಆತನನ್ನು ಬಿಟ್ಟಿದ್ದಾರೆ. ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಮನೆಯಲ್ಲಿ ನಿಲ್ಲಿಸಿದ್ದ ಕಾರುಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಕಿಡಿಗೇಡಿ

    ದಿನಗೂಲಿ ಕೆಲಸ ಮಾಡುತ್ತಿದ್ದ ರಮಣ ಅವರು ಆರಂಭದಲ್ಲಿ ಮಗನಿಗೆ ಗಾಂಜಾ ಸೇವನೆ ಬಿಡುವಂತೆ ಕೇಳಿಕೊಂಡಿದ್ದಾರೆ. ಆದರೆ ಎಲ್ಲ ಪ್ರಯತ್ನಗಳು ವ್ಯರ್ಥವಾಯಿತು. ಕೊನೆಗೆ ಮಗನಿಗೆ ತಕ್ಕ ಪಾಠ ಕಲಿಸಬೇಕು ಎಂದು ನಿರ್ಧರಿಸಿ, ತಮ್ಮ ಮಗನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಆತನ ಕಣ್ಣಿಗೆ ಮೆಣಸಿನಕಾಯಿಯ ಪುಡಿ ಎರಚಿ ಶಿಕ್ಷಿಸಿದ್ದಾರೆ.

    ಇತ್ತೀಚಿನ ದಿನಗಳಲ್ಲಿ ತೆಲಂಗಾಣದಲ್ಲಿ ಡ್ರಗ್ಸ್ ಹಾವಳಿ ಹೆಚ್ಚಾಗಿದ್ದು, ರಾಜ್ಯದಲ್ಲಿ ಮಾದಕ ವ್ಯಸನ ಮತ್ತು ಮಾದಕ ವಸ್ತುಗಳ ಸೇವನೆಗೆ ಕಡಿವಾಣ ಹಾಕುವಂತೆ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದನ್ನೂ ಓದಿ:  ಮೈಸೂರಿನಿಂದ ಬಂದ ರಾಯಲ್ ಎನ್‍ಫೀಲ್ಡ್ ಆಂಧ್ರದಲ್ಲಿ ಸ್ಫೋಟ

    ಇತ್ತೀಚೆಗಷ್ಟೇ ಬಿಟೆಕ್ ವಿದ್ಯಾರ್ಥಿಯೊಬ್ಬ ಡ್ರಗ್ಸ್ ಸೇವನೆಯಿಂದ ಸಾವನ್ನಪ್ಪಿದ್ದು, ಈ ಬೆನ್ನಲ್ಲೇ ಈ ವಾರದ ಆರಂಭದಲ್ಲಿ ಹೈದರಾಬಾದ್ ಪೊಲೀಸರು ಸ್ಟಾರ್ ಹೋಟೆಲ್‍ನಲ್ಲಿ ರೇವ್ ಪಾರ್ಟಿಯಲ್ಲಿ ಭಾಗವಹಿಸಿದ್ದಕ್ಕಾಗಿ ಹೈ-ಪ್ರೊಫೈಲ್ ಕುಟುಂಬಗಳಿಗೆ ಸೇರಿದ ಸುಮಾರು 150 ಜನರನ್ನು ಬಂಧಿಸಿದ್ದಾರೆ.

  • ಪತಿಯನ್ನು ಬಚಾವ್ ಮಾಡಲು ಪೊಲೀಸರಿಗೆ ಖಾರದ ಪುಡಿ ಎರಚಿದ್ಲು

    ಪತಿಯನ್ನು ಬಚಾವ್ ಮಾಡಲು ಪೊಲೀಸರಿಗೆ ಖಾರದ ಪುಡಿ ಎರಚಿದ್ಲು

    ಹೈದರಾಬಾದ್: ಪತಿಯನ್ನು ಬಚಾವ್ ಮಾಡಲು ಮಹಿಳೆ ಉತ್ತರಾಖಂಡ ಎಸ್‍ಟಿಎಫ್ ಪೊಲೀಸರಿಗೆ ಮತ್ತು ರಾಜೇಂದ್ರನಗರ ಪೊಲೀಸರ ತಂಡಕ್ಕೆ ಮೆಣಸಿನ ಕಾಯಿ ಪುಡಿ ಎರಚಿರುವ ಘಟನೆ ತೆಲಂಗಾಣದ ಅತ್ತಾಪುರದಲ್ಲಿ ನಡೆದಿದೆ.

    ಸದ್ಯ ಪೊಲೀಸರ ಕರ್ತವ್ಯಕ್ಕೆ ಅಡ್ಡ ಪಡಿಸಿದ ಮಹಿಳೆ ವಿರುದ್ಧ ಭಾರತೀಯ ದಂಡ ಸಂಹಿತೆಯ(ಐಪಿಸಿ)ಸೆಕ್ಷನ್ 353ರ ಅಡಿ ಪೊಲೀಸರು ಪ್ರಕರಣ ದಾಖಲಿಸಿದ್ದು, ಮಹಿಳೆಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    2019 ರ ಕೊಲೆ ಪ್ರಕರಣದ ವಾಟೆಂಡ್ ಕ್ರಿಮಿನಲ್ ಆಗಿದ್ದ ಮಹಿಳೆಯ ಪತಿಯನ್ನು ಬಂಧಿಸಲು ಉತ್ತರಾಖಂಡ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಆದರೆ ಹೈದರಾಬಾದ್‍ನ ಅತ್ತಾಪುರದ ಸುಲೇಮಾನ್ ನಗರದಲ್ಲಿ ಆರೋಪಿ ವಾಸಿಂ ಪತ್ನಿಯನ್ನು ಭೇಟಿಯಾಗಿರುವ ಬಗ್ಗೆ ಪೊಲೀಸರಿ ಮಾಹಿತಿ ಸಿಕ್ಕಿದೆ. ಈ ವಿಚಾರವನ್ನು ಖಚಿತಪಡಿಸಿಕೊಂಡ ಉತ್ತರಾಖಂಡದ ವಿಶೇಷ ಕಾರ್ಯಪಡೆ (ಎಸ್‍ಟಿಎಫ್) ಪೊಲೀಸ್ ತಂಡದೊಂದಿಗೆ ವಾಸಿಂ ಮನೆಗೆ ತೆರಳಿದೆ. ಈ ವೇಳೆ ಅವರೊಂದಿಗೆ ರಾಜೇಂದ್ರನಗರ ಪೊಲೀಸ್ ಠಾಣೆಯ ಮೂವರು ಕಾನ್‍ಸ್ಟೆಬಲ್‍ಗಳು ತೆರಳಿದ್ದರು. ಇದನ್ನೂ ಓದಿ: ಬೂಸ್ಟರ್ ಡೋಸ್ ಅಗತ್ಯತೆ ಬಗ್ಗೆ ಅಧ್ಯಯನ ನಡೆಸಲು ಮೋದಿ ಸೂಚನೆ

    ಪೊಲೀಸರು ಕಂಡ ಕೂಡಲೇ ಮಹಿಳೆ ಎಸ್‍ಟಿಎಫ್ ಕಾನ್‍ಸ್ಟೇಬಲ್ ಚಮನ್‍ಕುಮಾರ್ ಹಾಗೂ ಸ್ಥಳೀಯ ಕಾನ್‍ಸ್ಟೇಬಲ್‍ಗಳ ಕಣ್ಣಿಗೆ ಮೆಣಸಿನ ಕಾಯಿ ಪುಡಿ ಎರಚಿ ಪತಿಗೆ ಪರಾರಿಯಾಗಲು ಸಹಾಯ ಮಾಡಿದ್ದಾಳೆ. ಅಲ್ಲದೇ ತನಗೆ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಕಿರುಚಾಡಿ ನೆರೆಹೊರೆಯವರೆಲ್ಲಾ ಬಂದು ಸೇರುವಂತೆ ದೊಂಬಿ ಎಬ್ಬಿಸಿದ್ದಾಳೆ. ಈ ಮಧ್ಯೆ ಆರೋಪಿ ವಾಸಿಂ ಮನೆಯಿಂದ ಎಸ್ಕೇಪ್ ಆಗಿದ್ದಾನೆ. ಇದನ್ನೂ ಓದಿ: ಟೋಕನೈಸೇಶನ್ ಜಾರಿಗೆ 6 ತಿಂಗಳ ವಿಳಂಬ