Tag: ಮೆಡಿಸನ್

  • AOMSI ನಿಂದ UK ಉತ್ಪಾದಿತ ಬ್ಲ್ಯಾಕ್ ಫಂಗಸ್ ಔಷಧ ಮಂಗಳೂರಿಗೆ

    AOMSI ನಿಂದ UK ಉತ್ಪಾದಿತ ಬ್ಲ್ಯಾಕ್ ಫಂಗಸ್ ಔಷಧ ಮಂಗಳೂರಿಗೆ

    ಮಂಗಳೂರು: ಶಾಸಕ ಡಾ.ಭರತ್ ಶೆಟ್ಟಿ ಪ್ರಯತ್ನದಿಂದಾಗಿ ಎಓಎಂಎಸ್‍ಐ ನಿಂದ ಯುಕೆ ಉತ್ಪಾದಿತ ಬ್ಲ್ಯಾಕ್ ಫಂಗಸ್ ಔಷಧವನ್ನು ಮಂಗಳೂರಿಗೆ ತರಿಸಲಾಗಿದೆ.

    ಮಂಗಳೂರಿನಲ್ಲಿ ಬ್ಲ್ಯಾಕ್ ಫಂಗಸ್ ರೋಗಕ್ಕೆ ಔಷಧದ ಕೊರತೆ ಇರುವುದನ್ನು ಮನಗಂಡ ಮಂಗಳೂರು ನಗರ ಉತ್ತರ ಶಾಸಕರಾದ ಡಾ.ವೈ ಭರತ್ ಶೆಟ್ಟಿಯವರು ಮಾಡಿದ ವಿಶೇಷ ಪ್ರಯತ್ನದ ಫಲವಾಗಿAssociation of Oral and Maxillofacial Surgeons of India (AOMSI) ಸಂಘಟನೆಯ ಮಾಜಿ ಅಧ್ಯಕ್ಷರಾದ ಡಾ.ಕೃಷ್ಣಮೂರ್ತಿ ಬೊನತಾಯ ಹಾಗೂ ಡಾ.ಬದ್ರಿ ಅವರು ಯುನೈಟೆಡ್ ಕಿಂಗಡಂನಿಂದ ಬ್ಲ್ಯಾಕ್ ಫಂಗಸ್ ಗೆ ಬೇಕಾಗಿರುವ Amphotericin ಔಷಧವನ್ನು ಭಾರತಕ್ಕೆ ತರಿಸಿದ್ದಾರೆ. ಇದನ್ನು ಓದಿ: ಬ್ಲಾಕ್ ಫಂಗಸ್‍ಗೆ ಕೇಂದ್ರದಿಂದ ರಾಜ್ಯಕ್ಕೆ ಹೆಚ್ಚುವರಿ ಔಷಧ ಪೂರೈಕೆ – ಡಿವಿಎಸ್

    ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಶಾಸಕರಾದ ಡಾ.ವೈ ಭರತ್ ಶೆಟ್ಟಿಯವರಿಗೆ ಮಂಗಳವಾರ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ AOMSI ಅಧ್ಯಕ್ಷರಾದ ಡಾ.ಮಂಜುನಾಥ ರೈ ಹಾಗೂ ಮಾಜಿ ಅಧ್ಯಕ್ಷರಾದ ಡಾ.ಮುಸ್ತಫಾ ಖಾದರ್ ಉಪಸ್ಥಿತರಿದ್ದರು.

    ಡಾ.ವೈ ಭರತ್ ಶೆಟ್ಟಿಯವರು ಕೇಂದ್ರ ಹಾಗೂ ರಾಜ್ಯ ಸರಕಾರದೊಂದಿಗೆ ನಿರಂತರ ಸಂವಹನ ನಡೆಸಿದ ಪ್ರಯತ್ನ ಆಡಳಿತಾತ್ಮಕ ಕಾರ್ಯಗಳು ಸುಗಮವಾಗಿ ನಡೆದು ಔಷಧ ಮಂಗಳೂರಿಗೆ ಬರಲು ಸಹಕಾರಿಯಾಯಿತು. ಬ್ಲ್ಯಾಕ್ ಫಂಗಸ್ ರೋಗಕ್ಕೆ ಚಿಕಿತ್ಸೆ ನೀಡುವಲ್ಲಿ AOMSI ಸಂಘಟನೆ ಮುಂಚೂಣಿಯಲ್ಲಿದ್ದು, ಕೋವಿಡ್ 19 ಸಾಂಕ್ರಾಮಿಕ ರೋಗ ನಿಯಂತ್ರಣದಲ್ಲಿಯೂ ಸರ್ಕಾರದೊಂದಿಗೆ ಕೈಜೋಡಿಸಿದೆ. ಇದನ್ನು ಓದಿ:ಕೊರೊನಾ ಸೋಂಕಿನಲ್ಲಿ ಭಾರಿ ಇಳಿಮುಖ – ಬೀದರ್ ರಾಜ್ಯಕ್ಕೆ ಮಾದರಿ

  • ಮದ್ಯವೇ ನಿಜವಾದ ಔಷಧಿ, ಲಿಕ್ಕರ್ ಶಾಪ್ ತೆರೆದರೆ ಆಸ್ಪತ್ರೆಯ ಬೆಡ್ ಖಾಲಿ – ಮಹಿಳೆ ವೀಡಿಯೋ ವೈರಲ್

    ಮದ್ಯವೇ ನಿಜವಾದ ಔಷಧಿ, ಲಿಕ್ಕರ್ ಶಾಪ್ ತೆರೆದರೆ ಆಸ್ಪತ್ರೆಯ ಬೆಡ್ ಖಾಲಿ – ಮಹಿಳೆ ವೀಡಿಯೋ ವೈರಲ್

    ನವದೆಹಲಿ: ಮೆಡಿಸನ್‍ಗಿಂತ ಮದ್ಯ ಸೇವಿಸಬೇಕೆಂದು ಮಾತನಾಡಿರುವ ಮಹಿಳೆಯ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ.

    ವೀಡಿಯೋದಲ್ಲಿ ವಯಸ್ಸಾದ ಡಾಲಿ ಎಂಬಾಕೆ, ಯಾವುದೇ ಲಸಿಕೆ ಆಲ್ಕೋಹಾಲ್‍ಗೆ ಸಮವಾದದ್ದಲ್ಲ. ಆಲ್ಕೋಹಾಲ್‍ಲೇ ನಿಜವಾದ ಔಷಧಿ. 35 ವರ್ಷಗಳಿಂದ ನಾನು ಕುಡಿಯುತ್ತಿದ್ದೇನೆ ಮತ್ತು ನನಗೆ ಯಾವುದೇ ಔಷಧಿಯ ಅಗತ್ಯವಿಲ್ಲ ಎಂದಿದ್ದಾಳೆ.

    ದೆಹಲಿಯಲ್ಲಿ ಮದ್ಯದಂಗಡಿಯನ್ನು ಮತ್ತೆ ತೆರೆಯುವಂತೆ ದೆಹಲಿ ಸರ್ಕಾರಕ್ಕೆ ಮನವಿ ಮಾಡಿದ್ದಾಳೆ. ಅಲ್ಲದೆ ಮದ್ಯದಂಗಡಿಯನ್ನು ತೆರೆದರೆ ಆಸ್ಪತ್ರೆಯ ಬೆಡ್‍ಗಳು ಸಂಪೂರ್ಣವಾಗಿ ಖಾಲಿಯಾಗುತ್ತದೆ. ಸರ್ಕಾರವು ಯಾವುದೇ ಸಮಸ್ಯೆಗಳನ್ನು ಎದುರಿಸಬೇಕಾಗುವುದಿಲ್ಲ ಎಂದು ನುಡಿದಿದ್ದಾಳೆ.

    ಹೌದು, ಮದ್ಯದಂಗಡಿಯನ್ನು ತೆರೆದರೆ ಆಸ್ಪತ್ರೆಗಳಲ್ಲಿರುವ ಬೆಡ್‍ಗಳು ಖಾಲಿಯಾಗುತ್ತದೆ ಮತ್ತು ದೆಹಲಿ ಸರ್ಕಾರವು ಅಷ್ಟೊಂದು ತೊಂದರೆಗಳನ್ನು ಎದುರಿಸಬೇಕಾಗಿರುವುದಿಲ್ಲ. ಆಕ್ಸಿಜನ್ ಸಿಲಿಂಡರ್ ಸಮಸ್ಯೆಗಳು ಹೋಗುತ್ತದೆ. ಒಮ್ಮೆ ಜನರು ಮದ್ಯ ಸೇವಿಸಿದರೆ, ಕೊರೊನಾ ಮಾಯವಾಗುತ್ತದೆ ಎಂದು ಮಹಿಳೆ ವೀಡಿಯೋದಲ್ಲಿ ಹೇಳಿದ್ದಾಳೆ.

    ವೀಡಿಯೋ ಸೆರೆ ಹಿಡಿಯುತ್ತಿದ್ದ ವ್ಯಕ್ತಿ ನೀವು ಲಾಕ್‍ಡೌನ್ ಸಮಯದಲ್ಲಿ ಮದ್ಯ ಸೇವಿಸುತ್ತಿದ್ದೀರಾ ಎಂದು ಪ್ರಶ್ನೆ ಕೇಳಿದಾಗ, ಡಾಲಿ ಹೌದು ಎಂದು ಹೇಳಿದ್ದಾಳೆ. ಅಲ್ಲದೆ ಇದೀಗ ಸ್ಟಾಕ್ ಮಾಡಿದ್ದ ಮದ್ಯ ಕೂಡ ಖಾಲಿಯಾಗಿದ್ದು, ಸರ್ಕಾರಕ್ಕೆ ಮದ್ಯದಂಗಡಿಯನ್ನು ಮರು ತೆರೆಯಲು ಮನವಿ ಮಾಡಿದ್ದಾಳೆ.

  • ಗಾಂಜಾ ಡ್ರಗ್ ಅಲ್ಲ ಅದು ಮೆಡಿಸಿನ್, ಅದನ್ನು ಕಾನೂನು ಬದ್ಧ ಮಾಡಿ: ಯುವ ನಟ ರಾಕೇಶ್

    ಗಾಂಜಾ ಡ್ರಗ್ ಅಲ್ಲ ಅದು ಮೆಡಿಸಿನ್, ಅದನ್ನು ಕಾನೂನು ಬದ್ಧ ಮಾಡಿ: ಯುವ ನಟ ರಾಕೇಶ್

    – ನಾನು ಗಾಂಜಾ ತೆಗೆದುಕೊಳ್ಳುತ್ತೇನೆ

    ಬೆಂಗಳೂರು: ಗಾಂಜಾ ಡ್ರಗ್ ಅಲ್ಲ ಅದೊಂದು ಮೆಡಿಸಿನ್ ಎಂದು ಯುವನಟ ರಾಕೇಶ್ ಅಡಿಗ ಹೇಳಿದ್ದಾರೆ.

    ಚಂದನವದಲ್ಲಿ ಡ್ರಗ್ಸ್ ಮಾಫಿಯಾದ ಬಗ್ಗೆ ಪಬ್ಲಿಕ್ ಟಿವಿಯ ಜೊತೆ ಮಾತನಾಡಿದ ರಾಕೇಶ್, ಗಾಂಜಾದ ಬಗ್ಗೆ ಎಲ್ಲರಿಗೂ ತಪ್ಪು ಕಲ್ಪನೆ ಇದೆ. ಅದನ್ನು ತೆಗೆದು ಹಾಕಬೇಕು. ಗಂಜಾ ಡ್ರಗ್ ಅಲ್ಲ. ಅದು ಮೆಡಿಸಿನ್ ಆಗಿದ್ದು ಅದನ್ನು ಕಾನೂನು ಬದ್ಧಮಾಡಿ ಎಂದು ತಿಳಿಸಿದ್ದಾರೆ.

    ಡ್ರಗ್ ಎಂಬುದು ಇಡೀ ಪ್ರಪಂಚದಲ್ಲೇ ಇದೆ. ಈಗ ಸ್ಯಾಂಡಲ್‍ವುಡ್‍ನಲ್ಲಿ ಕೆಲವರನ್ನು ಗುರುತಿಸಿ ಅವರನ್ನು ಅಪರಾಧಿಗಳನ್ನಾಗಿ ಮಾಡಬೇಡಿ. ಅವರನ್ನು ಹೊರಗೆ ಇಡುವುದು ಬೇಡ. ಯಾರು ಅದನ್ನು ತೆಗೆದುಕೊಳ್ಳುತ್ತಿದ್ದಾರೆ ಎನ್ನುವುದಕ್ಕಿಂತ ಯಾರು ತಂದು ಮಾರುತ್ತಿದ್ದಾರೆ ಅವರನ್ನು ಹಿಡಿದುಕೊಳ್ಳಬೇಕು. ನಾನು ಒಬ್ಬ ಸಾಮಾನ್ಯ ಪ್ರಜೆಯಾಗಿ ಹೇಳುತ್ತಿದ್ದೇನೆ ಗಾಂಜಾವನ್ನು ಡ್ರಗ್‍ನಿಂದ ದೂರ ಇಡಬೇಕು. ಗಾಂಜಾ ಒಂದು ಗಿಡ, ಅದಕ್ಕೆ ನೂರಾರು ವರ್ಷಗಳ ಇತಿಹಾಸವಿದೆ ಎಂದು ರಾಕೇಶ್ ಹೇಳಿದರು.

    ಗಾಂಜಾ ತೆಗೆದುಕೊಂಡರೆ ಮಾತ್ರ ನಶೆಯಾಗುತ್ತದೆಯೇ, ಡ್ರಿಂಕ್ಸ್ ಮಾಡಿದರೆ ನಶೆ ಆಗುವುದಿಲ್ಲವೇ? ಗಾಂಜಾ ಬಗ್ಗೆ ಮೋದಿಯವರಿಗೂ ಬಹಿರಂಗ ಪತ್ರ ಬರೆಯಲಾಗಿದೆ. ಅಯಷ್ಮಾನ್ ಇಲಾಖೆಯವರು ಇದರ ಬಗ್ಗೆ ಸಂಶೋಧನೆ ಮಾಡುತ್ತಿದ್ದಾರೆ. ಈ ಹಿಂದೆ ಗಾಂಜಾ ಭಾರತೀಯ ಸಂಸ್ಕೃತಿಗೆ ಬೆರೆತು ಹೋಗಿತ್ತು. 1985ರಲ್ಲಿ ಇದು ಬ್ಯಾನ್ ಆಯ್ತು, ಹಾಗಾದರೆ 1985ರವರೆಗೆ ಭಾರತದಲ್ಲಿ ಎಲ್ಲರೂ ಡ್ರಗ್ ಅಡಿಕ್ಟ್ ಆಗಿದ್ರಾ ಎಂದು ರಾಕೇಶ್ ಪ್ರಶ್ನೆ ಮಾಡಿದ್ದಾರೆ.

    ಮಿಡೀಯಾದಲ್ಲಿ ಡ್ರಿಂಕ್ಸ್ ಮಾಡಿ ಅಪರಾಧ ಮಾಡಿದರೆ, ಗಾಂಜಾ ಮತ್ತಿನಲ್ಲಿ ಮಾಡಿದ್ದಾರೆ ಎಂದು ತೋರಿಸುತ್ತಾರೆ. ಇದರ ಬಗ್ಗೆ ವಿಜ್ಞಾನಿಗಳು ಕೇಳಿ ಗಾಂಜಾದ ಉಪಯೋಗಗಳ ಬಗ್ಗೆ ಹೇಳುತ್ತಾರೆ. ನಾವು ಎಲ್ಲ ವಿಚಾರದಲ್ಲೂ ಅಮೆರಿಕವನ್ನು ಫಾಲೋ ಮಾಡುತ್ತೇವೆ. ಅವರು ಅಲ್ಲಿ ಇದನ್ನು ಕಾನೂನು ಬದ್ಧ ಮಾಡಿದ್ದಾರೆ. ಅವರಿಗೆ ಹೆಚ್ಚು ಆದಾಯ ಬರುತ್ತದೆ. ಗಾಂಜಾದಿಂದ ನಮ್ಮ ಆರ್ಥಿಕತೆ ಮತ್ತು ಮೆಡಿಸಿನ್ ವಿಭಾಗಕ್ಕೆ ಲಾಭವಿದೆ. ಮದ್ಯಕ್ಕಿಂತ ಗಾಂಜಾ ಒಳ್ಳೆಯದು ಎಂದು ರಾಕೇಶ್ ಅಭಿಪ್ರಾಯಪಟ್ಟರು.

    ಜೊತೆಗೆ ನಾನೂ ಗಾಂಜಾವನ್ನು ತೆಗೆದುಕೊಳ್ಳುತ್ತಿದ್ದೆ. ಈಗಲೂ ಅದರಿಂದ ಮಾಡಿದ ಕೇಕ್, ಕುಕಿಗಳನ್ನು ಯಾರದರೂ ಮಾಡಿಕೊಟ್ಟರೆ ತಿನ್ನುತ್ತೇನೆ ಎಂದು ರಾಕೇಶ್ ಬಹಿರಂಗವಾಗಿ ಹೇಳಿಕೆ ನೀಡಿದರು.