Tag: ಮೆಡಿಕಲ್ ಸ್ಟೋರ್

  • ಅಡ್ರೆಸ್ ಕೇಳುವ ನೆಪದಲ್ಲಿ ಬಂದು ಬಾಲಕಿ ಕಿಡ್ನ್ಯಾಪ್‌ – ವಿವಿಧೆಡೆ ಕರೆದೊಯ್ದು ಅತ್ಯಾಚಾರ, ಓರ್ವ ಅರೆಸ್ಟ್‌

    ಅಡ್ರೆಸ್ ಕೇಳುವ ನೆಪದಲ್ಲಿ ಬಂದು ಬಾಲಕಿ ಕಿಡ್ನ್ಯಾಪ್‌ – ವಿವಿಧೆಡೆ ಕರೆದೊಯ್ದು ಅತ್ಯಾಚಾರ, ಓರ್ವ ಅರೆಸ್ಟ್‌

    ಲಕ್ನೋ: ತರಕಾರಿ (Vegetables) ಖರೀದಿಸಲು ಹೊರಗೆ ಹೋಗಿದ್ದ 13 ವರ್ಷದ ಬಾಲಕಿಯನ್ನ ಕಿಡ್ನ್ಯಾಪ್‌ ಮಾಡಿ ವಿವಿಧ ಸ್ಥಳಗಳಿಗೆ ಕರೆದೊಯ್ದು ಅತ್ಯಾಚಾರ ಎಸಗಿರುವ ಘಟನೆ ಉತ್ತರ ಪ್ರದೇಶದ ಇಟಾವಾದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಿರುವುದಾಗಿ ಪೊಲೀಸರು (UP Police) ತಿಳಿಸಿದ್ದಾರೆ.

    ಏನಿದು ಘಟನೆ?
    ಕಳೆದ ಏಪ್ರಿಲ್‌ 26ರಂದು ಸಂಜೆ ಬಾಲಕಿ ತರಕಾರಿ ಖರೀದಿಸಲು ಮನೆಯಿಂದ ಹೊರಗೆ ಹೋಗಿದ್ದಳು. ಸ್ವಲ್ಪ ದೂರ ಹೋಗುತ್ತಿದ್ದಂತೆ ಅಲ್ಲೇ ಕಾರಿನಲ್ಲಿ ಕುಳಿತಿದ್ದ ವ್ಯಕ್ತಿ‌ ಅಡ್ರಸ್‌ ಕೇಳುವ ನೆಪದಲ್ಲಿ ಬಾಲಕಿಯನ್ನ ಮಾತನಾಡಿಸಿದ್ದಾನೆ. ಆಕೆ ಅಡ್ರಸ್‌ ಹೇಳಲು ಮುಂದಾಗುತ್ತಿದ್ದಂತೆ ಕಾರಿನಲ್ಲಿದ್ದ ವಿಷ್ಣು ಎನ್ನುವ ವ್ಯಕ್ತಿ ಆಕೆಯನ್ನ ಕಾರಿನೊಳಗೆ ಎಳೆದುಕೊಂಡು ಕಿಡ್ನ್ಯಾಪ್‌ (Kidnapped) ಮಾಡಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದ ಬುಡಕ್ಕೆ `ಜಲ’ಬಾಂಬ್ ಹಾಕಿದ ಭಾರತ!

    ಸ್ವಲ್ಪ ಮುಂದೆ ಹೋದ ನಂತ್ರ ಮೆಡಿಕಲ್‌ ಸ್ಟೋರ್‌ನಲ್ಲಿ ನೀರು ಮತ್ತು ಔಷಧಿಗಳನ್ನ ತೆಗೆದುಕೊಂಡಿದ್ದಾರೆ. ಬಳಿಕ ನೀರಿನಲ್ಲಿ ಪ್ರಜ್ಞೆ ತಪ್ಪುವ ಔಷಧ ಬೆರಸಿ ಬಲವಂತವಾಗಿ ಬಾಲಕಿಗೆ ಕುಡಿಸಿದ್ದಾರೆ. ಕುಡಿದ ಬಳಿಕ ಬಾಲಕಿ ಪ್ರಜ್ಞೆ ತಪ್ಪಿದ್ದಾಳೆ. ನಂತರ ಹೋಟೆಲ್‌ಗೆ ಕರೆದೊಯ್ದು ನಕಲಿ ಐಡಿ ಕೊಟ್ಟು, ಬೆರಳಚ್ಚಿನಿಂದ ಸಹಿ ಪಡೆದಿದ್ದಾರೆ. ಬಳಿಕ ಆಕೆ ಮೇಲೆ ಅತ್ಯಾಚಾರ ಎಸಗಿದ್ದಾರೆ. ಇದನ್ನೂ ಓದಿ: ಕಾಶ್ಮೀರದಲ್ಲಿ 2 ಜಲವಿದ್ಯುತ್ ಯೋಜನೆಗಳಿಗೆ ಚಾಲನೆ – ಪಾಕ್‌ಗೆ ಶಾಕ್‌

    ಮರುದಿನ ಆರೋಪಿ ವಿಷ್ಣು ಮತ್ತು ಸಹವರ್ತಿ ನಾರಾಯಣ್‌ ಇಬ್ಬರೂ ಸೇರಿ ಬಾಲಕಿಯನ್ನ ದಾರಿಯಲ್ಲಿ ಬಿಟ್ಟುಬಂದಿದ್ದಾರೆ. ನಂತರ ಸಂಜಯ್‌ ಎಂಬಾತ ಆಕೆಯನ್ನ ತನ್ನ ಮನೆಗೆ ಕರೆದುಕೊಂಡು ಹೋಗಿದ್ದಾನೆ. ಆಕೆಗೆ‌ ಕೂಲ್‌ಡ್ರಿಂಗ್ಸ್‌ ಕೊಟ್ಟಿದ್ದಾನೆ, ಕುಡಿಯುತ್ತಿದ್ದಂತೆ ಆಕೆ ಪ್ರಜ್ಞೆತಪ್ಪಿದ್ದು, ಆತನೂ ಅತ್ಯಾಚಾರ ಎಸಗಿದ್ದಾನೆ. ಮರುದಿನ ಬೆಳಗ್ಗೆ ಆಕೆ ಎಚ್ಚರಗೊಂಡು ತನ್ನ ಫೋನ್‌ ಕೇಳಿದಾಗ ಸಿಮ್‌ಕಾರ್ಡ್‌ ಇಲ್ಲದೇ ಬರೀ ಫೋನ್‌ ಕೊಟ್ಟು ಕಳಿಸಿದ್ದಾನೆ.

    ಹುಡುಗಿಯ ಪ್ರಕಾರ, ಆರೋಪಿ ವಿಷ್ಣು ತನ್ನ ಸಹಚರ ನಾರಾಯಣ್‌ಗೆ ಕರೆ ಮಾಡಿ, ಇಬ್ಬರೂ ಸೇರಿ ಹುಡುಗಿಯನ್ನು ದಾರಿಯಲ್ಲಿ ಬಿಟ್ಟು ಬಂದನು. ಸಂಜಯ್ ಎಂಬ ಮತ್ತೊಬ್ಬ ವ್ಯಕ್ತಿ ಅವಳನ್ನು ಕರೆದುಕೊಂಡು ಹೋಗಿ ತನ್ನ ಮನೆಗೆ ಕರೆದೊಯ್ದನು. ಅಲ್ಲಿಂದ ಸಂಜಯ್‌ ಬಾಲಕಿಯನ್ನ ತನ್ನ ಸಹೋದರನ ಮನೆಗೆ ಕರೆದೊಯ್ದು ತನ್ನ ಸಹೋದರನನ್ನು ಮದುವೆಯಾಗುವಂತೆ ಒತ್ತಾಯಿಸಿದ್ದ ಎಂದು ಬಾಲಕಿ ದೂರಿನಲ್ಲಿ ತಿಳಿಸಿದ್ದಾಳೆ. ಇದನ್ನೂ ಓದಿ: ಜಡ್ಜ್‌ ನಿವಾಸದಲ್ಲಿ ಕಂತೆ ಕಂತೆ ನಗದು ಪತ್ತೆ ಕೇಸ್ – ಸಿಜೆಐ ಕೈ ಸೇರಿದ ತನಿಖಾ ವರದಿ

    ಸಂತ್ರಸ್ತ ಬಾಲಕಿಯ ಪೋಷಕರು ದೆಹಲಿಯಲ್ಲಿ ವಾಸಿಸುತ್ತಿದ್ದಾರೆ. ಬಾಲಕಿ ತನ್ನ ಅಜ್ಜಿಯೊಂದಿಗೆ ಹಳ್ಳಿಯಲ್ಲಿದ್ದಳು. ಏಪ್ರಿಲ್‌ 26ರಂದು ಕಾಣೆಯಾಗಿ ಮೇ 1ರಂದು ಪತ್ತೆಯಾಗಿದ್ದಳು. ಈ ಸಮಯದಲ್ಲಿ ಅನೇಕ ಸ್ಥಳಗಳಿಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ ಎಂದು ಬಾಲಕಿಯ ತಂದೆ ಶಿವರಾಮ್ ಸಿಂಗ್ ಹೇಳಿದ್ದಾರೆ.

    ಬಾಲಕಿ ಹಾಗೂ ಪೋಷಕರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಓರ್ವನನ್ನ ಬಂಧಿಸಿದ್ದಾರೆ. ಈ ಸಂಬಂಧ ತನಿಖೆ ಮುಂದುವರಿದಿದೆ. ಇದನ್ನೂ ಓದಿ: ಭಾರತ-ಪಾಕ್‌ ನಡುವೆ ಯುದ್ಧ ಛಾಯೆ – ಮೇ 7ರಂದು ದೇಶಾದ್ಯಂತ ಮಾಕ್ ಡ್ರಿಲ್

  • ಔಷಧಿ ಕೊಳ್ಳಲು ಮೆಡಿಕಲ್ ಸ್ಟೋರ್‌ಗೆ ಹೋದಾಗಲೇ ಕುಸಿದು ವ್ಯಕ್ತಿ ಸಾವು

    ಔಷಧಿ ಕೊಳ್ಳಲು ಮೆಡಿಕಲ್ ಸ್ಟೋರ್‌ಗೆ ಹೋದಾಗಲೇ ಕುಸಿದು ವ್ಯಕ್ತಿ ಸಾವು

    ಮೈಸೂರು: ಔಷಧಿ ಕೊಳ್ಳಲು ಮೆಡಿಕಲ್‌ ಸ್ಟೋರ್‌ಗೆ ಹೋಗಿದ್ದಾಗಲೇ ವ್ಯಕ್ತಿಯೊಬ್ಬರು ಹೃದಯಾಘಾತದಿಂದ (Heart Attack) ಕುಸಿದು ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ (Mysuru) ನಡೆದಿದೆ.

    ಕ್ಯಾತಮಾರನಹಳ್ಳಿಯಲ್ಲಿ ಚಿಕನ್ ಅಂಗಡಿ ನಡೆಸುತ್ತಿದ್ದ ಜಗದೀಶ್ (38) ಮೃತ ವ್ಯಕ್ತಿ. ಉದಯಗಿರಿಯ (Udayagiri) ಮೆಡಿಕಲ್ ಸ್ಟೋರ್‌ಗೆ (Medical Store) ಔಷಧಿ ಕೊಳ್ಳಲು ಹೋಗಿದ್ದಾಗ ಜಗದೀಶ್ ಏಕಾಏಕಿ ಕುಸಿದು ಬಿದ್ದಿದ್ದಾರೆ. ಇದಕ್ಕೆ ಸಂಬಂಧಿಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಎದೆ ನೋವು ಕಾಣಿಸಿಕೊಂಡ ಹಿನ್ನೆಲೆ ಜಗದೀಶ್ ಮೆಡಿಕಲ್ ಸ್ಟೋರ್‌ಗೆ ಔಷಧಿ ಕೊಳ್ಳಲು ಬಂದಿದ್ದರು. ಜಗದೀಶ್ ನೋವಿನ ಹಿನ್ನೆಲೆ ತಮ್ಮ ಎದೆಗೆ ಕೈಹಿಡಿದುಕೊಂಡು ಬಂದಿರುವುದು ಸಿಸಿಟಿವಿಯಲ್ಲಿ ಕಂಡುಬಂದಿದೆ. ಮೆಡಿಕಲ್ ಸಿಬ್ಬಂದಿ ಜಗದೀಶ್ ಅವರನ್ನು ವಿಚಾರಿಸುತ್ತಿದ್ದ ವೇಳೆಯೇ ಏಕಾಏಕಿ ಕುಸಿದು ಬಿದ್ದಿದ್ದಾರೆ. ಇದನ್ನೂ ಓದಿ: ಶಿವಮೊಗ್ಗಕ್ಕೆ ಬಿಜೆಪಿ ಸತ್ಯಶೋಧನಾ ಸಮಿತಿ ಭೇಟಿ – ಆಸ್ಪತ್ರೆಯಲ್ಲಿ ಗಾಯಾಳುಗಳ ಆರೋಗ್ಯ ವಿಚಾರಿಸಿದ ನಾಯಕರು

    ತಕ್ಷಣ ಮೆಡಿಕಲ್ ಸಿಬ್ಬಂದಿ ಜಗದೀಶ್ ಕಡೆಗೆ ಓಡಿ ಹೋಗಿ ಅವರನ್ನು ಎಬ್ಬಿಸಲು ಪ್ರಯತ್ನಿಸಿದ್ದಾರೆ. ಆದರೆ ಅಷ್ಟೊತ್ತಿಗಾಗಲೇ ಜಗದೀಶ್ ಪ್ರಾಣಪಕ್ಷಿ ಹಾರಿಹೋಗಿದೆ. ಉದಯಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ನಾನು ಕಾಂಗ್ರೆಸ್ ಸದಸ್ಯೆಯಲ್ಲ – ಉಲ್ಟಾ ಹೊಡೆದ ಶಾಸಕಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗ್ರಾಹಕರಿಂದ ಸುಲಿಗೆ – 6 ಮೆಡಿಕಲ್ ಸ್ಟೋರ್ ವಿರುದ್ಧ ಕೇಸ್ ದಾಖಲು

    ಗ್ರಾಹಕರಿಂದ ಸುಲಿಗೆ – 6 ಮೆಡಿಕಲ್ ಸ್ಟೋರ್ ವಿರುದ್ಧ ಕೇಸ್ ದಾಖಲು

    ತುಮಕೂರು: ಕೋವಿಡ್ ಸಂದರ್ಭದಲ್ಲಿ ಮಾಸ್ಕ್, ಸ್ಯಾನಿಟೈಸರ್, ಆಕ್ಸಿಮೀಟರ್‌ಗಳನ್ನು ಎಂಆರ್‌ಪಿಗಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡಿದ 6 ಮೆಡಿಕಲ್ ಸ್ಟೋರ್‌ಗಳ ವಿರುದ್ಧ ಮೊಕದ್ದಮೆ ದಾಖಲಿಸಿದೆ.

    ಕಾನೂನು ಮಾಪನಶಾಸ್ತ್ರ ಇಲಾಖೆಯು ಜಿಲ್ಲೆಯಲ್ಲಿ ಮೇ ಮಾಹೆಯಲ್ಲಿ ನಡೆಸಿದ ತಪಾಸಣೆಯಲ್ಲಿ ಈ ಮೊಕದ್ದಮೆ ದಾಖಲಿಸಲಾಗಿದೆ. ಸಹಾಯಕ ನಿಯಂತ್ರಕರ ನೇತೃತ್ವದಲ್ಲಿ ತುಮಕೂರು ಉಪವಿಭಾಗ-1 ಹಾಗೂ 2, ತಿಪಟೂರು ಉಪವಿಭಾಗ ಮತ್ತು ಮಧುಗಿರಿ ಉಪವಿಭಾಗದ ನಾಲ್ಕು ನಿರೀಕ್ಷಕರ ತಂಡ ತಪಾಸಣೆ ನಡೆಸಿದ್ದು, ಎಂಆರ್‍ಪಿಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ 6 ಔಷಧಿ ಮಳಿಗೆ ಸೇರಿದಂತೆ ಪೊಟ್ಟಣ ಸಾಮಾಗ್ರಿ ರೂಪದ ಅಗತ್ಯ ವಸ್ತುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ 4 ದಿನಸಿ ಅಂಗಡಿಗಳ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ.

    ಒಟ್ಟಾರೆ 26 ಔಷಧಿ ಮಳಿಗೆ, 64 ದಿನಸಿ ಅಂಗಡಿ ಹಾಗೂ 14 ನ್ಯಾಯ ಬೆಲೆ ಅಂಗಡಿಗಳನ್ನು ತಪಾಸಣೆ ಮಾಡಲಾಗಿದೆ. ತಪಾಸಣೆ ಸಂದರ್ಭದಲ್ಲಿ ಮೆಡಿಕಲ್ ಸ್ಟೋರ್ ಗಳಿಂದ 7500 ರೂ. ಹಾಗೂ ದಿನಸಿ ಅಂಗಡಿಗಳಿಂದ 4500 ರೂ.ಗಳನ್ನು ವಸೂಲಿ ಮಾಡಲಾಗಿದೆ.