Tag: ಮೆಡಿಕಲ್ ಸೀಟ್

  • ಮೆಡಿಕಲ್ ಸೀಟ್ ಕೊಡಿಸುವುದಾಗಿ 20 ಜನರಿಗೆ ಲಕ್ಷ ಲಕ್ಷ ವಂಚನೆ – ಆರೋಪಿ ಅಂದರ್

    ಮೆಡಿಕಲ್ ಸೀಟ್ ಕೊಡಿಸುವುದಾಗಿ 20 ಜನರಿಗೆ ಲಕ್ಷ ಲಕ್ಷ ವಂಚನೆ – ಆರೋಪಿ ಅಂದರ್

    ಬೆಂಗಳೂರು: ಮೆಡಿಕಲ್ ಸೀಟ್ (Medical Seat) ಕೊಡಿಸುವುದಾಗಿ ಅಭ್ಯರ್ಥಿಗಳಿಂದ ಲಕ್ಷ ಲಕ್ಷ ಹಣ ವಸೂಲಿ ಮಾಡುತ್ತಿದ್ದ ಆರೋಪಿಯನ್ನು ಸಂಜಯ್ ನಗರ ಪೊಲೀಸರು (Police) ಬಂಧಿಸಿದ್ದಾರೆ. ಬಂಧಿತನಿಂದ ಅಭ್ಯರ್ಥಿಗಳಿಂದ ಪಡೆದಿದ್ದ 47.80 ಲಕ್ಷ ರೂ. ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಬಂಧಿತ ಆರೋಪಿಯನ್ನು ತೆಲಂಗಾಣ ಮೂಲದ ಶರತ್ ಗೌಡ ಎಂದು ಗುರುತಿಸಲಾಗಿದೆ. ನೀಟ್ ಪರೀಕ್ಷೆಯ ಫಲಿತಾಂಶದ ಮೂಲಕ ವಿದ್ಯಾರ್ಥಿಗಳ ಪೋಷಕರಿಗೆ ಗಾಳ ಹಾಕುತ್ತಿದ್ದ. ಪರೀಕ್ಷೆಯಲ್ಲಿ ಕಡಿಮೆ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳನ್ನೇ ಆರೋಪಿ ಟಾರ್ಗೆಟ್ ಮಾಡುತ್ತಿದ್ದ. ಒಳ್ಳೆಯ ಕಾಲೇಜ್‍ನಲ್ಲಿ ಸೀಟ್ ಕೊಡಿಸುವುದಾಗಿ ಲಕ್ಷ ಲಕ್ಷ ಹಣ ಪಡೆಯುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಚಿರತೆ ಸೆರೆಗೆ ಬಂದ ಮೈಸೂರಿನ ಸ್ಪೆಷಲ್ ಎಕ್ಸ್‌ಪರ್ಟ್‌ ಟೀಂ

    ಆರಂಭಿಕ ತನಿಖೆಯಲ್ಲಿ ಇದೇ ಮಾದರಿಯಲ್ಲಿ 20ಕ್ಕೂ ಅಧಿಕ ಮಂದಿಗೆ ವಂಚನೆ (Fraud Case) ಮಾಡಿರುವುದು ಬೆಳಕಿಗೆ ಬಂದಿದೆ. ಹಣ ಕಳೆದುಕೊಂಡವರಲ್ಲಿ ಕೆಲವರು ದೂರು ದಾಖಲಿಸಿದ್ದರಿಂದ ಆರೋಪಿಯನ್ನು ಬಂಧಿಸಲಾಗಿದೆ. ಪ್ರಕರಣದ ತನಿಖೆ ಬಳಿಕ ಹೆಚ್ಚಿನ ಮಾಹಿತಿ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಸಂಬಂಧ ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿರುವುದು ಏಕಪಕ್ಷ ಸಮ್ಮಿಶ್ರ ಸರ್ಕಾರ- ಬಿಜೆಪಿ ವ್ಯಂಗ್ಯ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮೆಡಿಕಲ್ ಸೀಟ್ ಕೊಡಿಸುವುದಾಗಿ 1 ಲಕ್ಷ ರೂ. ವಂಚನೆ

    ಮೆಡಿಕಲ್ ಸೀಟ್ ಕೊಡಿಸುವುದಾಗಿ 1 ಲಕ್ಷ ರೂ. ವಂಚನೆ

    – ಹಣ ಖಾತೆಗೆ ಬರುತ್ತಿದ್ದಂತೆ ವ್ಯಕ್ತಿ ನಾಪತ್ತೆ

    ಶಿವಮೊಗ್ಗ: ಮೆಡಿಕಲ್ ಸೀಟ್ ಕೊಡಿಸುವುದಾಗಿ ನಂಬಿಸಿ, ಒಂದು ಲಕ್ಷ ರೂ. ಹಣ ಪಡೆದು ನಾಪತ್ತೆಯಾಗಿರುವ ಘಟನೆ ಶಿವಮೊಗ್ಗದ ಭದ್ರಾವತಿಯಲ್ಲಿ ನಡೆದಿದೆ.

    ಮೆಡಿಕಲ್ ಸೀಟ್ ಕೊಡುವುದಾಗಿ ವಂಚಿಸಿರುವ ವ್ಯಕ್ತಿ ರಿತೇಷ್ ಅಗರ್ವಾಲ್ ಎಂದು ಗುರುತಿಸಲಾಗಿದೆ. ಈತ ಕೋಲ್ಕತ್ತಾ ಮೂಲದವನಾಗಿದ್ದಾನೆ. ಮೋಸ ಹೋಗಿರುವವರು ರಫಿಕ್ ಅಹಮದ್ ಆಗಿದ್ದಾರೆ. ಇವರು ಭದ್ರಾವತಿಯ ಭೂತನಗುಡಿ ನಿವಾಸಿಯಾಗಿದ್ದಾರೆ.

    ರಫಿಕ್ ಅಹಮದ್ ಅವರ ಮಗನಿಗೆ ಮೆಡಿಕಲ್ ಕಾಲೇಜಿನಲ್ಲಿ ಸರ್ಕಾರಿ ಸೀಟ್ ಕೊಡಿಸುವುದಾಗಿ ವ್ಯಕ್ತಿ ನಂಬಿಸಿದ್ದನು. ಇದಕ್ಕೂ ಮೊದಲು ಮೆಡಿಕಲ್ ಕಾಲೇಜಿಗೆ ಸೀಟು ಕೊಡಿಸುವ ಬಗ್ಗೆ ಎಸ್.ಎಂ.ಎಸ್. ಕಳಿಸಿದ್ದನು. ಮೆಡಿಕಲ್ ಕಾಲೇಜು ಸೀಟ್ ಬೇಕಾದರೆ 6 ಲಕ್ಷ ರೂ. ನೀಡಬೇಕು ಎಂದು ಹೇಳಿದ್ದನು. ಆದರೆ ಸೀಟ್ ಕೊಡಿಸುವ ಮೊದಲು ಒಂದು ಲಕ್ಷ ರೂ. ತನ್ನ ಖಾತೆಗೆ ಹಾಕುವಂತೆ ಹೇಳಿದ್ದನು. ಸೀಟ್ ಕೊಡಿಸುತ್ತೇನೆ ಎಂದು ಹೇಳುತ್ತಾ ಯಾಮಾರಿಸಿ 1 ಲಕ್ಷ ರೂ. ಹಣವನ್ನು ಇವರಿಂದ ಪಡೆದುಕೊಂಡಿದ್ದನು.

    ಹಣವನ್ನು ತನ್ನ ಖಾತೆಗೆ ವರ್ಗಾವಣೆ ಮಾಡಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಕೋಲ್ಕತ್ತಾ ಬ್ರಾಂಚ್‍ನ ಖಾತೆ ವಿವರವನ್ನು ನೀಡಿದ್ದನು. ಹಣ ತನ್ನ ಖಾತೆಗೆ ಬರುತ್ತಿದ್ದಂತೆ ರಿತೇಷ್ ಅಗರ್ವಾಲ್ ಕೂಡ ನಾಪತ್ತೆಯಾಗಿದ್ದಾನೆ. ರಫಿಕ್ ಅಹಮದ್ ತನ್ನ ಮಗನಿಗೆ ಮೇಡಿಕಲ್ ಸೀಟ್ ಕೊಡಿಸುವಂತೆ ಕರೆಮಾಡಿದ್ದಾರೆ. ಆದರೆ ಫೋನ್ ಕರೆಯನ್ನು ರಿತೇಷ್ ಅಗರ್ವಾಲ್ ಸ್ವೀಕರಿಸಿಲ್ಲ. ಆತಂಕಗೊಂಡ ರಫಿಕ್ ಅಹಮದ್ ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಭದ್ರಾವತಿ ಓಲ್ಡ್ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪರಂ ಅಣ್ಣನ ಮಗನಿಂದಲೇ ಮೆಡಿಕಲ್ ಸೀಟ್ ಬ್ಲಾಕ್ ಅಕ್ರಮ

    ಪರಂ ಅಣ್ಣನ ಮಗನಿಂದಲೇ ಮೆಡಿಕಲ್ ಸೀಟ್ ಬ್ಲಾಕ್ ಅಕ್ರಮ

    – ಬಂದ ಹಣವನ್ನು ಸಿನಿಮಾದಲ್ಲಿ ಹೂಡಿಕೆ
    – ಖಾದರ್ ಭೇಟಿಗೆ ಅವಕಾಶ ನೀಡದ ಐಟಿ ಅಧಿಕಾರಿಗಳು

    ಬೆಂಗಳೂರು: ಮಾಜಿ ಡಿಸಿಎಂ ಪರಮೇಶ್ವರ್ ಅವರ ಅಣ್ಣನ ಮಗ ಸೀಟ್ ಬ್ಲಾಕ್ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

    ಹೌದು. ಪರಮೇಶ್ವರ್ ಸಹೋದರ ಶಿವಪ್ರಸಾದ್ ಅವರ ಮಗ ಆನಂದ್ ನೇತೃತ್ವದಲ್ಲೇ ಸೀಟ್ ಬ್ಲಾಕ್ ದಂಧೆ ನಡೆಯುತಿತ್ತು. ಸರ್ಕಾರಕ್ಕೆ ಮರೆಮಾಚಿ ಅಕ್ರಮವಾಗಿ ಮೆಡಿಕಲ್ ಸೀಟ್ ಹಂಚಿಕೆ ಮಾಡುತ್ತಿದ್ದ ಆನಂದ್ ಬಂದ ಹಣವನ್ನು ಸಿನಿಮಾದಲ್ಲಿ ಹೂಡಿಕೆ ಮಾಡುತ್ತಿದ್ದರು ಎಂಬ ಆರೋಪ ಈಗ ಬಂದಿದೆ. ಇದನ್ನು ಓದಿ: ಇಬ್ಬರು ವಿದ್ಯಾರ್ಥಿಗಳಿಂದಾಗಿ ಪರಮೇಶ್ವರ್ ಮೇಲೆ ದಾಳಿ – ಸೀಟ್ ಬ್ಲಾಕ್ ಹೇಗೆ ಮಾಡಲಾಗುತ್ತೆ?

    ಅಕ್ರಮವಾಗಿ ಮೆಡಿಕಲ್ ಸೀಟು ಹಂಚಿಕೆಯಾಗುತ್ತಿರುವುದನ್ನು ಕಂಡು ಹಣ ನೀಡಲು ಸಾಧ್ಯವಾಗದ ಪೋಷಕರು ಆದಾಯ ತೆರಿಗೆ ಇಲಾಖೆಗೆ ದೂರು ನೀಡಿದ್ದರು. ಈ ಕಾರಣಕ್ಕಾಗಿಯೇ ಪರಮೇಶ್ವರ್ ನಿವಾಸದ ಮೇಲೆ ದಾಳಿ ನಡೆದಿದ್ದು, ಆನಂದ್ ಅವರನ್ನು ಐಟಿ ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ.

    ಎಕೆ 56 ಸಿನಿಮಾದಲ್ಲೂ ಆನಂದ್ ಹೀರೋ ಆಗಿ ನಟಿಸಿದ್ದರು. ಓಂ ಪ್ರಕಾಶ್ ರಾವ್ ನಿರ್ದೇಶನದ ಈ ಸಿನಿಮಾ 2012ರಲ್ಲಿ ತೆರೆ ಕಂಡಿತ್ತು.

    ವಿಚಾರಣೆ ಮುಂದುವರಿಕೆ:
    ಸದಾಶಿವನಗರ ಮನೆಯಲ್ಲೇ ನಾಲ್ಕು ಮಂದಿ ಐಟಿ ಅಧಿಕಾರಿಗಳು ಠಿಕಾಣಿ ಹೂಡಿದ್ದು ಇಂದು ಮತ್ತೆ ವಿಚಾರಣೆ ನಡೆಸುತ್ತಿದ್ದಾರೆ. ಮಧ್ಯರಾತ್ರಿ 12.30ರ ವರೆಗೂ ವಿಚಾರಣೆ ನಡೆಸಿ ಪರಮೇಶ್ವರ್ ನಿವಾಸದಲ್ಲೇ ಈ ಅಧಿಕಾರಿಗಳು ನಿದ್ದೆ ಮಾಡಿದ್ದರು.

    ಮೊದಲ ದಿನ 10ಕ್ಕೂ ಹೆಚ್ಚು ಅಧಿಕಾರಿಗಳು ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ಕಲೆ ಹಾಕಿದ್ದರು. ರಾತ್ರಿ ನಾಲ್ಕು ಜನರನ್ನು ಬಿಟ್ಟು ಉಳಿದ ಅಧಿಕಾರಿಗಳು ವಾಹನದಲ್ಲಿ ತೆರಳಿದ್ದರು. ಇಂದು ಮತ್ತೆ 5 ಮಂದಿ ಅಧಿಕಾರಿಗಳು ಪರಮೇಶ್ವರ್ ನಿವಾಸಕ್ಕೆ ಆಗಮಿಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಇದನ್ನು ಓದಿ: ಗ್ರಾಮ ಪಂಚಾಯತ್ ತೆರಿಗೆ ಕಟ್ಟದ ಪರಮೇಶ್ವರ್

    ಭೇಟಿಗೆ ಅವಕಾಶವಿಲ್ಲ: ಮಾಜಿ ಸಚಿವ ಯುಟಿ ಖಾದರ್ ಅವರು ಇಂದು ಬೆಳಗ್ಗೆ ಪರಮೇಶ್ವರ್ ಅವರನ್ನು ಭೇಟಿ ಮಾಡಲು ಸದಾಶಿವನಗರಕ್ಕೆ ಆಗಮಿಸಿದ್ದರು. ಆದರೆ ಅಧಿಕಾರಿಗಳು ಭೇಟಿಗೆ ಅವಕಾಶ ನೀಡಲಿಲ್ಲ.

    ಬೆಂಬಲಿಗರಿಂದ ಪೂಜೆ: ರಾಜಾರಾಜೇಶ್ವರಿ ನಗರದ ದೇವಸ್ಥಾನದಲ್ಲಿ ಪರಮೇಶ್ವರ್ ಅಭಿಮಾನಿಗಳು ಇಂದು ವಿಶೇಷ ಪೂಜೆ ಮಾಡಿದ್ದರು. ಕಾಂಗ್ರೆಸ್ ಮುಖಂಡ ರಾಜ್ ಕುಮಾರ್ ಮತ್ತು ತಂಡದವರು ವಿಶೇಷ ಪೂಜೆ ಮಾಡಿಸಿದ್ದರು. ಬೆಂಬಲಿಗರು ತಂದ ಪೂಜೆಯ ಪ್ರಸಾದವನ್ನು ಪರಮೇಶ್ವರ್ ಅವರಿಗೆ ನೀಡಲು ಅನುಮತಿ ನೀಡಲಾಯಿತು.

  • ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರ ಮಗಳಿಗೆ ಮೆಡಿಕಲ್ ಸೀಟ್ ಕೊಡಿಸ್ತೀನೆಂದು ವಂಚನೆ

    ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರ ಮಗಳಿಗೆ ಮೆಡಿಕಲ್ ಸೀಟ್ ಕೊಡಿಸ್ತೀನೆಂದು ವಂಚನೆ

    ಹೈದರಾಬಾದ್: ಮೆಡಿಕಲ್ ಸೀಟ್ ಕೊಡಿಸ್ತೀನಿ ಅಂತಾ ಯಾರಾದ್ರು ನಿಮ್ಮನ್ನ ಕೇಳಿದ್ದಾರಾ? ಹಾಗಿದ್ರೆ ಹುಷಾರಾಗಿರಿ. ಮೆಡಿಕಲ್ ಸೇಟ್ ಕೊಡಿಸ್ತೀನಿ ಅಂತ ಹೇಳಿ, 40 ಲಕ್ಷ ರೂ. ಹಣ ಪಡೆದು ಪರಾರಿಯಾಗಿದ್ದ ಕಳ್ಳ ಈಗ ಪೊಲೀಸರು ಅಥಿತಿಯಾಗಿದ್ದಾನೆ.

    ಆರೋಪಿ ರೂಪೇಂದ್ರ ಕುಮಾರ್, ಆಂಧ್ರ ಪ್ರದೇಶದ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರ ಮಗಳಿಗೆ ಬೆಂಗಳೂರಿನಲ್ಲಿ ಸೀಟ್ ಕೊಡಿಸುವುದಾಗಿ ಹೇಳಿದ್ದಾನೆ. ನಂತರ ಸೀಟ್‍ಗಾಗಿ 40 ಲಕ್ಷ ರೂ. ಹಣವನ್ನು ಪಡೆದುಕೊಂಡು ಕರ್ನಾಟಕ ರಾಜ್ಯಪಾಲ ವಾಜುಭಾಯ್ ವಾಲಾ ಅವರ ನಕಲಿ ಶಿಫಾರಸು ಪತ್ರವನ್ನು ಅವರಿಗೆ ವಾಟ್ಸಾಪ್ ಮೂಲಕ ಕಳುಹಿದ್ದಾನೆ. ಹಣ ಕೈಗೆ ಬಂದ ತಕ್ಷಣ ಕುಮಾರ್ ಪರಾರಿಯಾಗಿದ್ದಾನೆ.

    ನಂತರ ಪ್ರಾಂಶುಪಾಲರು ಕುಮಾರ್ ವಿರುದ್ಧ ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಆಯೋಪಿಯನ್ನು ಹುಡುಕಿ ಬಂಧಿಸಿದ್ದಾರೆ. ಆರೋಪಿ ಬಳಿ ಇದ್ದ ರಾಜ್ಯಪಾಲರ ಹೆಸರಿನ ನಕಲಿ ವಿಸಿಟಿಂಗ್ ಕಾರ್ಡ್, ಹಾರ್ಡ್ ಡಿಸ್ಕ್, ಮೊಬೈಲ್ ಮತ್ತು ಕೆಲವು ಪೆನ್ ಡ್ರೈವ್‍ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.