Tag: ಮೆಡಿಕಲ್ ವಿದ್ಯಾರ್ಥಿ

  • ಉಕ್ರೇನ್ ರಿಟರ್ನ್ ವಿದ್ಯಾರ್ಥಿಗಳು ಶೀಘ್ರವೇ ಗುಡ್ ನ್ಯೂಸ್: ಸುಧಾಕರ್

    ಉಕ್ರೇನ್ ರಿಟರ್ನ್ ವಿದ್ಯಾರ್ಥಿಗಳು ಶೀಘ್ರವೇ ಗುಡ್ ನ್ಯೂಸ್: ಸುಧಾಕರ್

    ಚಿಕ್ಕಬಳ್ಳಾಪುರ: ಉಕ್ರೇನ್‌ನಿಂದ ಭಾರತಕ್ಕೆ ಮರಳಿದ ವಿದ್ಯಾರ್ಥಿಗಳಿಗೆ ಶೀಘ್ರವೇ ಗುಡ್ ನ್ಯೂಸ್ ಸಿಗುತ್ತೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಭರವಸೆ ಕೊಟ್ಟರು.

    ಉಕ್ರೇನ್ ವಿದ್ಯಾರ್ಥಿಗಳ ಬಗ್ಗೆ ಮಾತನಾಡಿದ ಅವರು, ವೈದ್ಯಕೀಯ ವಿದ್ಯಾರ್ಥಿಗಳಿಗೆ ಶೀಘ್ರವೇ ಶುಭ ಸುದ್ದಿ ಸಿಗಲಿದೆ. ಉಕ್ರೇನ್ ರಿಟರ್ನ್ ವಿದ್ಯಾರ್ಥಿಗಳು ಶೀಘ್ರವೇ ಗುಡ್ ನ್ಯೂಸ್ ಸಿಗುತ್ತೆ. ಈಗಾಗಲೇ ಈ ಕುರಿತು ಕೇಂದ್ರ ಸರ್ಕಾರದ ಜೊತೆ ನಾವು ಸಂಪರ್ಕದಲ್ಲಿದ್ದೇವೆ. ಈ ಬಗ್ಗೆ ಸಮತಿ ರಚನೆ ಮಾಡಿದ್ದೇವೆ. ಅದಷ್ಟು ಬೇಗ ಶುಭ ಸುದ್ದಿ ಸಿಗಲಿದೆ ಎಂದು ತಿಳಿಸಿದರು. ಇದನ್ನೂ ಓದಿ:  ಆನೆ ದಂತದಲ್ಲಿ ಚೆಸ್ ಪಾನ್ ಕೆತ್ತನೆ – ಮಾರಾಟ ಮಾಡುವಾಗ ಸಿಕ್ಕಿಬಿದ್ದ 

    CORONA

    ಕೋವಿಡ್-19 ಕುರಿತು ಮಾತನಾಡಿದ ಅವರು, ಏರ್ಪೋರ್ಟ್ ಪ್ರಯಾಣಿಕರ ಮೇಲೆ ನಿಗಾ ಇಡಲಾಗಿದೆ. ಕೋವಿಡ್ ಹೆಚ್ಚಿರುವ 7-8 ದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ಗಮನ ಹರಿಸಲು ಸೂಚನೆಯನ್ನು ಕೊಡಲಾಗಿದೆ. ಮನೆಗಳಿಗೆ ಹೋದ ಮೇಲೆ ಟೆಲಿಮಾನಿಟಿರಿಂಗ್ ಮಾಡ್ತಿದ್ದೇವೆ. ಅವಶ್ಯಕತೆ ಇದ್ರೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಿದ್ದೇವೆ ಎಂದು ಹೇಳಿದರು.

  • ರಾಜ್ಯದ ಏಕೈಕ ಹಸಿರುವಲಯಕ್ಕೂ ಕೊರೊನಾ- ಪುಣೆಯಿಂದ ಬಂದ ಮೆಡಿಕಲ್ ವಿದ್ಯಾರ್ಥಿಗೆ ಸೋಂಕು?

    ರಾಜ್ಯದ ಏಕೈಕ ಹಸಿರುವಲಯಕ್ಕೂ ಕೊರೊನಾ- ಪುಣೆಯಿಂದ ಬಂದ ಮೆಡಿಕಲ್ ವಿದ್ಯಾರ್ಥಿಗೆ ಸೋಂಕು?

    ಚಾಮರಾಜನಗರ: ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಇದೀಗ ಹಸಿರು ವಲಯದಲ್ಲಿರುವ ಗಡಿ ಜಿಲ್ಲೆಗೂ ಮಹಾಮಾರಿ ಕೊರೊನಾ ಬರುವ ಆತಂಕ ಈಗ ಹೆಚ್ಚಾಗಿದೆ.

    ಮಹಾರಾಷ್ಟ್ರದ ಪುಣೆಯಿಂದ ಬಂದ ಕುಟುಂಬದಲ್ಲಿನ ಯುವಕನಿಗೆ ಸೋಂಕಿನ ಲಕ್ಷಣ ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದೆ. ಶನಿವಾರ ಮಹಾರಾಷ್ಟ್ರದಿಂದ ಬಂದಿದ್ದ 22 ವರ್ಷದ ಮೆಡಿಕಲ್ ವಿದ್ಯಾರ್ಥಿ ಒಬ್ಬನಿಗೆ ಬೇಧಿ, ಹೊಟ್ಟೆನೋವು, ವಿಪರೀತ ಕೆಮ್ಮು ಕಾಣಿಸಿಕೊಂಡಿದೆ. ಈ ಮೂಲಕ ಚಾಮರಾಜನಗರಕ್ಕೂ ಕೊರೊನಾ ಬರುತ್ತಾ ಎಂಬ ಆತಂಕ ಜಿಲ್ಲೆಯ ಜನರಲ್ಲಿ ಮೂಡಿದೆ.

    ಮೆಡಿಕಲ್ ವಿದ್ಯಾರ್ಥಿಯ ತಾಯಿ ಮನೆ ಹನೂರು ತಾಲೂಕಿನ ಪಾಲಿಮೇಡು ಗ್ರಾಮದಲ್ಲಿದೆ. ಹೀಗಾಗಿ ಚಾಮರಾಜನಗರ ಸೇಫ್ ಝೋನ್ ಅಂತ ಬಂದಿದ್ದಾನೆ. ಪುಣೆಯಿಂದ ಬೆಂಗಳೂರಿಗೆ ಶ್ರಮಿಕ್ ರೈಲಿನಲ್ಲಿ ಬಂದಿದ್ದು, ಬೆಂಗಳೂರಿನಿಂದ ಮಾವನ ಜೊತೆ ಕಾರಿನಲ್ಲಿ ಬಂದಿದ್ದಾನೆ.

    ಮೆಡಿಕಲ್ ವಿದ್ಯಾರ್ಥಿಯನ್ನು ಹನೂರು ಪಟ್ಟಣದ ಹಾಸ್ಟೆಲ್‍ನಲ್ಲಿ ಕ್ವಾರಂಟೈನ್‍ನಲ್ಲಿರಿಸಲಾಗಿತ್ತು. ಸೋಂಕಿನ ಲಕ್ಷಣ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕೋವಿಡ್ ಆಸ್ಪತ್ರೆಗೆ ಶಿಪ್ಟ್ ಮಾಡಿದೆ. ಹಸಿರು ವಲಯದಲ್ಲಿ ತಳಮಳ ಆರಂಭಗೊಂಡಿದ್ದು, ಸಂಜೆ ಬಿಡುಗಡೆಯಾಗುವ ಹೆಲ್ತ್ ಬುಲೆಟಿನ್‍ನಲ್ಲಿ ಎಲ್ಲಾ ಅನುಮಾನಗಳಿಗೆ ತೆರೆ ಬೀಳಲಿದೆ.

  • ಅಧ್ಯಯನಕ್ಕೆ ತರಿಸಿದ್ದ ಮೃತ ದೇಹಕ್ಕೆ ಪೂಜೆ ಸಲ್ಲಿಸಿದ ಮೆಡಿಕಲ್ ವಿದ್ಯಾರ್ಥಿಗಳು

    ಅಧ್ಯಯನಕ್ಕೆ ತರಿಸಿದ್ದ ಮೃತ ದೇಹಕ್ಕೆ ಪೂಜೆ ಸಲ್ಲಿಸಿದ ಮೆಡಿಕಲ್ ವಿದ್ಯಾರ್ಥಿಗಳು

    ತುಮಕೂರು: ಅಧ್ಯಯನದ ಉದ್ದೇಶದಿಂದ ತರಿಸಿಕೊಳ್ಳಲಾದ ಮೃತದೇಹಕ್ಕೆ ವೈದ್ಯಕೀಯ ವಿದ್ಯಾರ್ಥಿಗಳು ಹಾರ ಹಾಕಿ ವಿಶೇಷವಾಗಿ ಬರಮಾಡಿಕೊಂಡ ಅಪರೂಪದ ಘಟನೆ ತುಮಕೂರಿನ ಶ್ರೀದೇವಿ ಮೆಡಿಕಲ್ ಕಾಲೇಜಿನಲ್ಲಿ ನಡೆದಿದೆ.

    ಬೆಳಗಾವಿ ಹಾರೋಗೇರಿ ಪಟ್ಟಣದಿಂದ ತರಿಸಿಕೊಳ್ಳಲಾದ ವ್ಯಕ್ತಿಯೊಬ್ಬರ ಮೃತದೇಹಕ್ಕೆ ಶ್ರೀದೇವಿ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಹೂವಿನ ಹಾರ ಹಾಕಿ ಪೂಜೆ ಸಲ್ಲಿಸಿದರು. ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದ ನಿವಾಸಿ ಹಣಮಂತ ಸಿದ್ದಪ್ಪ ಬೀರಾದಾರ ಪಾಟೀಲ (76) ಎಂಬುವರು ಇತ್ತೀಚೆಗೆ ಅನಾರೋಗ್ಯದಿಂದ ನಿಧನರಾಗಿದ್ದರು.

    ಶ್ರೀದೇವಿ ಮೆಡಿಕಲ್ ಕಾಲೇಜು ಆಡಳಿತ ಮಂಡಳಿಯ ಮನವಿಯಂತೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಎಸ್.ಜಿ.ವಿ. ಆಯುರ್ವೇದಿಕ್ ಮೆಡಿಕಲ್ ಕಾಲೇಜ್, ಡಾ. ರಾಮಣ್ಣವರ ಚಾರಿಟೇಬಲ್ ಟ್ರಸ್ಟ್ ಹಾಗೂ ಹಾರೂಗೇರಿಯ ಶರಣ ವಿಚಾರ ವಾಹಿನಿಯ ಮುಖಾಂತರ ಪಾಟೀಲರ ಮೃತದೇಹವನ್ನು ತುಮಕೂರಿಗೆ ತರಿಸಿಕೊಳ್ಳಲಾಯಿತು.

    ಈ ವೇಳೆ ವಿದ್ಯಾರ್ಥಿಗಳು ಪೂಜೆ ಸಲ್ಲಿಸಿ ಬಳಿಕ ಶರೀರ ರಚನಾ ವಿಭಾಗಕ್ಕೆ ಗೌರವಪೂರ್ವಕವಾಗಿ ಸಾಗಿಸಲಾಯ್ತು. ಮೃತಪಟ್ಟ ನಂತರ ತನ್ನ ದೇಹವನ್ನು ವೈದ್ಯಕೀಯ ಅಧ್ಯಯನಕ್ಕಾಗಿ ದಾನ ಮಾಡಬೇಕೆಂಬ ಇಂಗಿತವನ್ನು ಹಣಮಂತ ಸಿದ್ದಪ್ಪ ಬಿರಾದಾರ್ ಪಾಟೀಲ್ ಅವರು ಬದುಕಿದ್ದಾಗಲೇ ವ್ಯಕ್ತಪಡಿಸಿದ್ದರು.