Tag: ಮೆಡಿಕಲ್ ಕಾಲೇಜ್

  • ಕನಕಪುರ, ರಾಮನಗರದಲ್ಲಿ ಮೆಡಿಕಲ್‌ ಕಾಲೇಜ್‌ ಇಲ್ಲ – ಮೂರು ಪ್ರಸ್ತಾಪಕ್ಕೆ ಒಪ್ಪಿಗೆ

    ಕನಕಪುರ, ರಾಮನಗರದಲ್ಲಿ ಮೆಡಿಕಲ್‌ ಕಾಲೇಜ್‌ ಇಲ್ಲ – ಮೂರು ಪ್ರಸ್ತಾಪಕ್ಕೆ ಒಪ್ಪಿಗೆ

    ಬೆಂಗಳೂರು: ಕನಕಪುರ (Kanakpura) ಹಾಗೂ ರಾಮನಗರದಲ್ಲಿ (Ramangara) ಮೆಡಿಕಲ್ ಕಾಲೇಜು (Medical College) ಸ್ಥಾಪಿಸಲು ಮುಂದಾಗಿದ್ದ ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಯತ್ನಕ್ಕೆ ಹಿನ್ನಡೆಯಾಗಿದೆ. ಎರಡು ಕಾಲೇಜುಗಳ ಪ್ರಸ್ತಾವನೆಯನ್ನು ರಾಷ್ಟ್ರೀಯ ವೈದ್ಯಕೀಯ ಆಯೋಗ (NMC) ತಿರಸ್ಕರಿಸಿದೆ.

    ಪ್ರಸ್ತಾವಿತ ಐದು ಕಾಲೇಜುಗಳ ಪೈಕಿ ಮೂರಕ್ಕೆ ಮಾತ್ರ ಎನ್‌ಎಂಸಿ ಒಪ್ಪಿಗೆ ಕೊಟ್ಟಿದೆ. ಎನ್‌ಎಂಸಿ ನಿರ್ಧಾರವನ್ನು ಕೇಂದ್ರ ಸಚಿವ ಕುಮಾರಸ್ವಾಮಿ (HD Kumaraswamy) ಸಮರ್ಥಿಸಿಕೊಂಡಿದ್ದಾರೆ. ಬಿಲ್ಡಿಂಗ್ ಇಲ್ಲದೇ ಕಾಲೇಜು ಹೇಗೆ ಆಗಲಿದೆ ಅಂತ ಪ್ರಶ್ನಿಸಿದ್ದಾರೆ. ಈ ವಿಚಾರದಲ್ಲಿ ತಾವು ರಾಜಕೀಯ ಮಾಡುವುದಿಲ್ಲ ಎಂದಿದ್ದಾರೆ.

     

    ಸಿಬ್ಬಂದಿ ಕೊರತೆ ಮತ್ತು ತಾಂತ್ರಿಕ ಸಮಸ್ಯೆಗಳ ಕಾರಣ ನೀಡಿ ರಾಮನಗರ ಮತ್ತು ಕನಕಪುರದಲ್ಲಿ ವೈದ್ಯಕೀಯ ಕಾಲೇಜ್ ಸ್ಥಾಪನೆ ಪ್ರಸ್ತಾವನೆಯನ್ನು ತಿರಸ್ಕರಿಸಲಾಗಿದೆ. ಇದನ್ನೂ ಓದಿ: ಗ್ಯಾರಂಟಿಗಳ ಭಾರದಿಂದ ಕಂಗೆಟ್ಟ ಸರ್ಕಾರ -ಆಪರೇಷನ್ ಬಿಪಿಎಲ್ ಕಾರ್ಡ್‌ಗೆ ಪ್ಲಾನ್!

    ಬೆಂಗಳೂರು ಉತ್ತರದ ವ್ಯಾಪ್ತಿಯ ಬಿಜಿಎಸ್​​ ವೈದ್ಯಕೀಯ ಕಾಲೇಜು, ಪಿಇಎಸ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಸೈನ್ಸಸ್ ಆಂಡ್‌ ರಿಸರ್ಚ್‌ ಸೆಂಟರ್ ಹಾಗೂ ಬಾಗಲಕೋಟೆಯ ಎಸ್‌ಆರ್ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಎನ್‌ಎಂಸಿ ಒಪ್ಪಿಗೆ ನೀಡಿದೆ.

    ವಿಧಾನಸೌಧದಲ್ಲಿ ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್ ಅವರು, ರಾಮನಗರ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ತರಬೇಕು ಎನ್ನುವುದು ನಮ್ಮೆಲ್ಲರ ಬೇಡಿಕೆಯಾಗಿತ್ತು. ಈ ಪ್ರಸ್ತಾಪವನ್ನು ಬಜೆಟ್‌ನಲ್ಲೂ ಸೇರಿಸಲಾಗಿತ್ತು. ಆದರೆ ಸಿಬ್ಬಂದಿ ಕೊರತೆ ಎಂದು ಅನುಮತಿ ನೀಡಿಲ್ಲ ಎಂಬ ವಿಚಾರ ತಿಳಿಸಿದ್ದು, ಈ ಬಗ್ಗೆ ಗಮನಹರಿಸುತ್ತೇವೆ ಎಂದು ಹೇಳಿದರು.

     

  • ಮೇ ತಿಂಗಳಿನಲ್ಲಿ 65 ಸಾವು – ಮೃತ್ಯು ಕೂಪವಾಗಿದೆ ಕೊಪ್ಪಳ ಜಿಲ್ಲಾಸ್ಪತ್ರೆ

    ಮೇ ತಿಂಗಳಿನಲ್ಲಿ 65 ಸಾವು – ಮೃತ್ಯು ಕೂಪವಾಗಿದೆ ಕೊಪ್ಪಳ ಜಿಲ್ಲಾಸ್ಪತ್ರೆ

    ಕೊಪ್ಪಳ: ಜೀವ ಉಳಿಸಬೇಕಾದ ಸರ್ಕಾರಿ ಆಸ್ಪತ್ರೆ ಈಗ ಜೀವ ತೆಗೆಯುವ ಆಸ್ಪತ್ರೆಯಾಗಿ ಬದಲಾಗಿದೆ. ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ (Koppal District Hospital) ಮೇ ಒಂದೇ ತಿಂಗಳಿನಲ್ಲಿ 65 ಮಂದಿ ಮೃತಪಟ್ಟಿದ್ದಾರೆ.

    ಈ ವರ್ಷದ ಜನವರಿಯಿಂದ ಇಲ್ಲಿಯವರೆಗೂ ಈ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ರೋಗಿಗಳ ಸಂಖ್ಯೆ 354. ಕೊಪ್ಪಳದ ಕಿಮ್ಸ್ ಆಡಳಿತ ಮಂಡಳಿಯೇ ಈ ಅಂಕಿ ಅಂಶಗಳನ್ನು ನೀಡಿದೆ. ಇಲ್ಲಿಗೆ ಬರುವ ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ಸಿಗುತ್ತಿಲ್ಲ. ಐಸಿಯು ಬೆಡ್‌ ಇಲ್ಲ. ಸರಿಯಾದ ವೈದ್ಯರಿಲ್ಲ ಎಂಬ ಹಲವು ದೂರುಗಳು ಈ ಆಸ್ಪತ್ರೆಯ ಮೇಲಿದೆ. ಇದನ್ನೂ ಓದಿ:  ಟೀಂ ಇಂಡಿಯಾದ ಉಪನಾಯಕ ಹಾರ್ದಿಕ್‌ ಪಾಂಡ್ಯ ಈಗ ಎಲ್ಲಿದ್ದಾರೆ?

    ಸದ್ಯ ಈ ಆಸ್ಪತ್ರೆಯಲ್ಲಿಸಾವು ಹೆಚ್ಚಾಗುತ್ತಿದ್ದರೂ ಕಿಮ್ಸ್ ಆಡಳಿತ ಮಂಡಳಿ ಇಲ್ಲಿ ಏನು ನಡೆದಿಲ್ಲ ಎಂಬಂತೆ ವರ್ತನೆ ಮಾಡುತ್ತಿದೆ. ಸಾವಿನ ಸಂಖ್ಯೆಯ ಬಗ್ಗೆ ಕಿಮ್ಸ್ ನಿರ್ದೇಶಕ ವಿಜಯ ಇಟಗಿ ಅವರನ್ನ ಕೇಳಿದರೆ ಅವರು ಬೇರೆಯೇ ಉತ್ತರ ನೀಡುತ್ತಾರೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು ನಮ್ಮಲ್ಲಿ ಬಂದು ಒಂದೇ ದಿನದಲ್ಲಿ ಸಾವನ್ನಪ್ಪುತ್ತಾರೆ. ಹೀಗಾಗಿ ನಮ್ಮಲ್ಲಿ ಸಾವಿನ ಸಂಖ್ಯೆ ಹೆಚ್ಚಾಗ್ತಿದೆ ಎಂದು ಹೇಳುವ ಮೂಲಕ ಜಾರಿಕೊಂಡಿದ್ದಾರೆ.

    ಕೂಡಲೇ ಸರ್ಕಾರ ಹಾಗೂ ಆಡಳಿತ ಮಂಡಳಿ ಜನರಿಗೆ ಉತ್ತಮ ಸೇವೆ ನೀಡುವತ್ತ ಗಮನ ಹರಿಸಬೇಕಿದೆ.

     

  • ಮೆಡಿಕಲ್ ಕಾಲೇಜ್ ಸ್ಥಳಾಂತರಕ್ಕೆ ಆಕ್ರೋಶ – ರಾಮನಗರ ಬಂದ್‍ಗೆ ಕರೆ

    ಮೆಡಿಕಲ್ ಕಾಲೇಜ್ ಸ್ಥಳಾಂತರಕ್ಕೆ ಆಕ್ರೋಶ – ರಾಮನಗರ ಬಂದ್‍ಗೆ ಕರೆ

    ರಾಮನಗರ: ರಾಜೀವ್ ಗಾಂಧಿ ಮೆಡಿಕಲ್ ಕಾಲೇಜ್ (Medical College) ಸ್ಥಳಾಂತರ ವಿಚಾರವಾಗಿ ಸೆ.8 ರಂದು ರಾಮನಗರ (Ramanagar) ಬಂದ್‍ಗೆ ಕೆಂಗಲ್ ಹನುಮಂತಯ್ಯ ಮೆಡಿಕಲ್ ಕಾಲೇಜ್ ಹೋರಾಟ ಸಮಿತಿ ಕರೆ ನೀಡಿದೆ. ಬಂದ್‍ಗೆ ಸಾರ್ವಜನಿಕರು ಸಹಕಾರ ನೀಡುವಂತೆ ಅಂಗಡಿ ಮುಂಗ್ಗಟ್ಟು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಪೋಸ್ಟರ್ ಅಂಟಿಸಲಾಗಿದೆ.

    ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ವಿರುದ್ಧ ತವರು ಜಿಲ್ಲೆಯಲ್ಲೇ ಈ ಬಗ್ಗೆ ಆಕ್ರೋಶ ಹೆಚ್ಚಾಗಿದೆ. ಕನಕಪುರಕ್ಕೆ ಮೆಡಿಕಲ್ ಕಾಲೇಜ್ ಸ್ಥಳಾಂತರ ಮಾಡಬಾರದು. ಸರ್ಕಾರ ನಿಮ್ಮದೇ ಇದೆ. ನಿಮಗೆ ಅಧಿಕಾರ ಇದೆ. ಕನಕಪುರಕ್ಕೆ ಬೇಕಿದ್ದರೆ ಮತ್ತೊಂದು ಮೆಡಿಕಲ್ ಕಾಲೇಜನ್ನು ಮಂಜೂರು ಮಾಡಿಕೊಳ್ಳಿ. ಆದರೆ ರಾಮನಗರಕ್ಕೆ ಮಂಜೂರಾಗಿರುವ ಕಾಲೇಜನ್ನು ಯಾವುದೇ ಕಾರಣಕ್ಕೂ ಜಿಲ್ಲಾ ಕೇಂದ್ರದಿಂದ ಸ್ಥಳಾಂತರ ಮಾಡಬಾರದು ಎಂಬುದು ಹೋರಾಟಗಾರರ ಒತ್ತಾಯವಾಗಿದೆ. ಇದನ್ನೂ ಓದಿ: ಗೃಹಲಕ್ಷ್ಮೀ ಹೇಗೆ ಮುಂದುವರೆಯುತ್ತದೆ ನೋಡೋಣ: ಹೆಚ್‍ಡಿಡಿ ವ್ಯಂಗ್ಯ

    ಈ ಹಿನ್ನೆಲೆಯಲ್ಲಿ ಇದೇ ಸೆ.8ರಂದು ರಾಮನಗರ ಬಂದ್ ಮಾಡುವ ಮೂಲಕ ಸರ್ಕಾರದ ಗಮನ ಸೆಳೆಯಲಾಗುತ್ತದೆ. ಇದಕ್ಕೂ ಸರ್ಕಾರ ಸ್ಪಂದಿಸದೇ ಇದ್ದರೆ ಮುಂದಿನ ದಿನಗಳಲ್ಲಿ ಉಗ್ರಹೋರಾಟ ಮಾಡುವ ಎಚ್ಚರಿಕೆಯನ್ನೂ ನೀಡಲಾಗಿದೆ. ಜನಜಾಗೃತಿಗಾಗಿ ಇಂದಿನಿಂದ ಪೋಸ್ಟರ್ ಚಳವಳಿ ಆರಂಭಿಸಲಾಗಿದೆ. ಬಂದ್‍ಗೆ ಎಲ್ಲಾ ಕನ್ನಡಪರ ಸಂಘಟನೆಗಳು, ಕಾರ್ಮಿಕ, ದಲಿತ ಮತ್ತು ಜವಳಿ ಸಂಘಟನೆಗಳು ಬೆಂಬಲ ಘೋಷಿಸಿವೆ.

    ಇದರ ನಡುವೆಯೇ ಡಿಕೆ ಬ್ರದರ್ಸ್ ನಡೆ ವಿರುದ್ಧ ಕರವೇ ಸ್ವಾಭಿಮಾನಿ ಬಣದ ರಾಜ್ಯಾಧ್ಯಕ್ಷ ಕೃಷ್ಣೇಗೌಡ ಕಿಡಿಕಾರಿದ್ದಾರೆ. ನಿಮ್ಮ ವರ್ತನೆ ಬದಲಿಸಿಕೊಳ್ಳಬೇಕು. ನೀವು ಕನಕಪುರಕ್ಕೆ ಮಾತ್ರ ಡಿಸಿಎಂ ಅಲ್ಲ, ಇಡೀ ರಾಜ್ಯಕ್ಕೆ ಡಿಸಿಎಂ ಎಂಬುದನ್ನು ಮರೆಯಬಾರದು. ಇಲ್ಲಿ ಧಮ್ಕಿ ನಡವಳಿಕೆಗೆ ಬಗ್ಗುವುದಿಲ್ಲ ಎಂದು ಗುಡುಗಿದ್ದಾರೆ. ಇದನ್ನೂ ಓದಿ: INDIA ಒಕ್ಕೂಟದ ರಾಷ್ಟ್ರವಿರೋಧಿ ಮಾನಸಿಕತೆ ಬಹಿರಂಗವಾಗಿದೆ – ತೇಜಸ್ವಿ ಸೂರ್ಯ ಕಿಡಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಧಾರವಾಡ ಮೆಡಿಕಲ್ ಕಾಲೇಜಿನಲ್ಲಿ ಮತ್ತೆ 116 ಮಂದಿಗೆ ಕೊರೊನಾ

    ಧಾರವಾಡ ಮೆಡಿಕಲ್ ಕಾಲೇಜಿನಲ್ಲಿ ಮತ್ತೆ 116 ಮಂದಿಗೆ ಕೊರೊನಾ

    ಧಾರವಾಡ: ಧಾರವಾಡ ಎಸ್‌ಡಿಎಂ ಮೆಡಿಕಲ್ ಕಾಲೇಜಿನಲ್ಲಿ ಮತ್ತೆ ಕೊರೊನಾ ಸೋಂಕು ಸ್ಫೋಟಗೊಂಡಿದೆ. ಮಧ್ಯರಾತ್ರಿ ಮತ್ತೆ 116 ಜನರಲ್ಲಿ ಸೋಂಕು ದೃಢಪಟ್ಟಿದೆ. ಮೊದಲು 66 ಮಂದಿಯಲ್ಲಿ ಕಾಣಿಸಿಕೊಂಡಿತ್ತು. ಈಗ 66 ಸೇರಿ ಒಟ್ಟು 182 ಮಂದಿಗೆ ಕೊರೊನಾ ಬಂದಿದೆ.

    ನ.17 ರಂದು ಕಾಲೇಜಿನ ವಿರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಲವು ಪಾಲಕರು ಕೂಡ ಭಾಗಿಯಾಗಿದ್ದರು ಎಂದು ತಿಳಿದು ಬಂದಿದೆ. ಭಾಗಿಯಾಗಿದ್ದವರು ಕೋವಿಡ್ ಪರೀಕ್ಷೆಗೆ ಒಳಪಡಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಕೆ ಪಾಟೀಲ ಸೂಚಿಸಿದ್ದಾರೆ. ಇದನ್ನೂ ಓದಿ: ಕೋವಿಡ್‌ ಲಸಿಕೆ ಪಡೆದವರು ಯೂರೋಪ್‌ಗೆ ಪ್ರಯಾಣಿಸಲು 9 ತಿಂಗಳಷ್ಟೇ ಮಾನ್ಯತೆ

    ಗುರುವಾರ ಸಂಜೆಯವರೆಗೆ ಮತ್ತೆ ಎಸ್‌ಡಿಎಂ ಆವರಣದಲ್ಲಿ 690 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಕಿಮ್ಸ್, ಡಿಮ್ಹಾನ್ಸ್ ಹಾಗೂ ಎಸ್‌ಡಿಎಂನ ಕೋವಿಡ್ ಪ್ರಯೋಗಾಲಯಗಳಲ್ಲಿ ಈ ಮಾದರಿಗಳನ್ನು ಪರೀಕ್ಷಿಸಲಾಗಿದೆ. 116 ಜನರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಇದನ್ನೂ ಓದಿ: ಬೆಂಗಳೂರಿನ ಶಾಲೆಯಲ್ಲಿ ಕೊರೊನಾ ಸ್ಫೋಟ – 33 ವಿದ್ಯಾಥಿಗಳಿಗೆ ಸೋಂಕು

    ಮಧ್ಯರಾತ್ರಿಯ ನಂತರ ಈ ವರದಿಗಳು ಲಭ್ಯವಾಗಿದ್ದು, ಎಲ್ಲರೂ ಕೋವಿಡ್ ನಿರೋಧಕ ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದಿರುವುದರಿಂದ ಯಾರಲ್ಲಿಯೂ ರೋಗದ ಗಂಭೀರ ಸ್ವರೂಪದ ಲಕ್ಷಣಗಳಿಲ್ಲ.

  • ದ.ಕ ಜಿಲ್ಲೆಗೆ ಸರ್ಕಾರಿ ಮೆಡಿಕಲ್ ಕಾಲೇಜಿಗಾಗಿ ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ವಿದ್ಯಾರ್ಥಿಗಳಿಂದ ಧರಣಿ

    ದ.ಕ ಜಿಲ್ಲೆಗೆ ಸರ್ಕಾರಿ ಮೆಡಿಕಲ್ ಕಾಲೇಜಿಗಾಗಿ ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ವಿದ್ಯಾರ್ಥಿಗಳಿಂದ ಧರಣಿ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜ್ ಸ್ಥಾಪಿಸಬೇಕೆಂದು ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ನಡೆಸುತ್ತಿರುವ ಜನಾಂದೊಲನದ ಭಾಗವಾಗಿ ಗುರುವಾರ ಮಂಗಳೂರಿನ ಮಿನಿ ವಿಧಾನಸೌಧ ಮುಂಭಾಗದಲ್ಲಿ ವಿದ್ಯಾರ್ಥಿಗಳು ಧರಣಿಯನ್ನು ನಡೆಸಿದರು.

    ಮುಸ್ಲಿಂ ಒಕ್ಕೂಟ ದಕ್ಷಿಣ ಕನ್ನಡ ಜಿಲ್ಲೆಯ ಅಧ್ಯಕ್ಷರಾದ ಅಶ್ರಫ್ ಮೇಯರ್, ಸರ್ಕಾರಿ ಮೆಡಿಕಲ್ ಕಾಲೇಜಿಗಾಗಿ ಹೋರಾಟ ಕೇವಲ ಕ್ಯಾಂಪಸ್ ಫ್ರಂಟ್ ನ ಹೋರಾಟವಲ್ಲ. ಇದು ಜಿಲ್ಲೆಯ ಜನತೆಯ ಹೋರಾಟವಾಗಿದೆ. ಇದು ಸಂಸದರು, ಶಾಸಕರ ನಿರ್ಲಕ್ಷ್ಯವಾಗಿದ್ದು, ಪ್ರತಿಯೊಂದು ಸಂಘಟನೆಯ ನಾಯಕರು ಈ ಹೋರಾಟಕ್ಕೆ ಕೈಜೋಡಿಸಬೇಕಾಗಿದೆ ಎಂದು ಹೇಳಿದರು.

    ಕ್ಯಾಂಪಸ್ ಫ್ರಂಟ್ ರಾಜ್ಯ ಕೋಶಾಧಿಕಾರಿಯಾದ ಸವಾದ್ ಕಲ್ಲರ್ಪೆ ಮಾತನಾಡಿ, 8 ಶಾಸಕರು, 7 ವಿಧಾನ ಪರಿಷತ್ತು ಸದಸ್ಯರು, 1 ಲೋಕಸಭಾ ಸದಸ್ಯ, 2 ರಾಜ್ಯ ಸಚಿವರು, 1 ಕೇಂದ್ರ ಸಚಿವೆ ಜಿಲ್ಲೆಯ ಇಷ್ಟು ಜನರು ಜವಾಬ್ದಾರಿಯುತ ಸ್ಥಾನದಲ್ಲಿದ್ದರೂ ಮೆಡಿಕಲ್ ಕಾಲೇಜು ಇಷ್ಟರವರೆಗೆ ಜಿಲ್ಲೆಗೆ ಸ್ಥಾಪಿಸಲು ಸಾಧ್ಯವಾಗಿಲ್ಲ ಎಂದಾದರೆ ಜಿಲ್ಲೆಯ ಜನತೆಗೆ ಮಾಡುವ ಘೋರ ಅನ್ಯಾಯವಾಗಿದೆ ಎಂದು ಆಕ್ರೋಶ ಹೊರಹಾಕಿದರು.

    ಕ್ಯಾಂಪಸ್ ಫ್ರಂಟ್ ರಾಜ್ಯಧ್ಯಕ್ಷರಾದ ಅಥಾವುಲ್ಲಾ ಪುಂಜಾಲಕಟ್ಟೆ ಮಾತನಾಡಿ, ಖಾಸಗಿ ವೈದ್ಯಕೀಯ ಕಾಲೇಜುಗಳ ಅಟ್ಟಹಾಸವನ್ನು ನಿಲ್ಲಿಸಲು ಕ್ಯಾಂಪಸ್ ಫ್ರಂಟ್ ವಿದ್ಯಾರ್ಥಿ ಸಂಘಟನೆಯು ಮುಂಚೂಣಿಯಲ್ಲಿದ್ದು, ಈ ಧರಣಿಯು ಹೋರಾಟದ ಮೊದಲ ಹಂತವಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಜನತೆಯನ್ನು ಸೇರಿಸಿ ಬೃಹತ್ ಹೋರಾಟವನ್ನು ನಡೆಸಲಿದ್ದೇವೆ ಎಂದು ಎಚ್ಚರಿಸಿದರು.

    ಮಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಪಟ್ಟಾಭಿರಾಮ ಸೋಮಯಾಜಿ ಮಾತನಾಡಿ, ಶಿಕ್ಷಣ ಮತ್ತು ಆರೋಗ್ಯ ವೆಂಬುದು ಸಂವಿಧಾನ ನೀಡಿದ ಮೂಲಭೂತ ಹಕ್ಕಾಗಿದ್ದು, ಈ ಎರಡರಲ್ಲೂ ಖಾಸಗೀಕರಣ ಸಲ್ಲದು. ದ.ಕ ಜಿಲ್ಲೆಗೆ ಸರಕಾರಿ ಮೆಡಿಕಲ್ ಕಾಲೇಜು ಅತ್ಯಾವಶ್ಯಕವಾಗಿದ್ದು, ಈ ಹೋರಾಟದ ಮುಂದುವರಿಕೆ ಅನಿವಾರ್ಯವಾಗಿದೆ. ಎಂದು ಹೇಳಿದರು.

    ಸಾಮಾಜಿಕ ಹೋರಾಟಗಾರರು ಹಾಗೂ ಬರಹಗಾರರಾದ ಇಸ್ಮತ್ ಫಜೀರ್ ಅವರು, ಇಂದು ಜಿಲ್ಲೆಯಲ್ಲಿ ವೈದ್ಯಕೀಯ ಸೀಟು ನೀಡುತ್ತಿರುವುದು ಶ್ರೀಮಂತಿಕೆಯ ಆಧಾರದಲ್ಲಿಯೇ ಹೊರತು ಅವರ ಸಾಮರ್ಥ್ಯದ ಆಧಾರದಲ್ಲಿ ಎಂಬುದು ವಿಷಾದನೀಯ. ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಯಾಗುವ ಮುಖಾಂತರ ಜಿಲ್ಲೆಯ ಬಡ, ಮಧ್ಯಮ ವರ್ಗದ ವಿದ್ಯಾರ್ಥಿಗಳ ಪಾಲಿಗೆ ಆಶಾಕಿರಣವಾಗಬೇಕಾಗಿದೆ ಎಂದು ಹೇಳಿದರು.

    ಎಸ್.ಡಿ.ಪಿ.ಐ ದ.ಕ ಜಿಲ್ಲಾ ಕಾರ್ಯದರ್ಶಿ ಅನ್ವರ್ ಸಾದಾತ್ ಅವರು, ಜಿಲ್ಲೆಯಲ್ಲಿ ನಡೆಯುತ್ತಿರುವ ಮೆಡಿಕಲ್ ಮಾಫಿಯಾಗೆ ಕಡಿವಾಣ ಹಾಕಬೇಕಾದರೆ ದ.ಕ ಜಿಲ್ಲೆಗೆ ಸರ್ಕಾರಿ ಮೆಡಿಕಲ್ ಕಾಲೇಜು ಅವಶ್ಯಕ. ಲಕ್ಷ – ಕೋಟಿ ಫೀಸು ನೀಡಿ ವೈದ್ಯರಾದ ಜಿಲ್ಲೆಯ ಹಲವಾರು ಖಾಸಗಿ ವೈದ್ಯರುಗಳು ಇಂದು ಆರೋಗ್ಯ ಕ್ಷೇತ್ರವನ್ನು ವ್ಯಾಪಾರೀಕರಣ ಮಾಡದೆ ಮತ್ತೇನು ಮಾಡ್ಯಾರು? ಎಂದು ಹೇಳಿದರು. ಮಂಗಳೂರು ಜಿಲ್ಲಾಧ್ಯಕ್ಷರಾದ ಇನಾಯತ್ ಅಲಿ ಸ್ವಾಗತಿಸಿ ಕಾರ್ಯದರ್ಶಿ ಮುನೀರ್ ಬಜಾಲ್ ಧನ್ಯವಾದಗೈದರು.

    ಈ ಸಂದರ್ಭದಲ್ಲಿ ಕ್ಯಾಂಪಸ್ ಪ್ರಂಟ್ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಸಿರಾಜ್ ಸುರತ್ಕಲ್, ಜಿಲ್ಲಾ ಮುಖಂಡರಾದ ಶರ್ಫುಧ್ಧೀನ್ ಬಜ್ಪೆ,ಅನ್ಸಾರ್ ಪುತ್ತೂರು, ಯಾಸೀನ್ ಬೆಳ್ತಂಗಡಿ, ಫಯಾಝ್ ವಿಟ್ಲ ಉಪಸ್ಥಿತರಿದ್ದರು.

  • ಬಿಜೆಪಿ ಮುಖಂಡನ ಮೆಡಿಕಲ್ ಕಾಲೇಜ್ ಮೇಲೆ ಐಟಿ ದಾಳಿ

    ಬಿಜೆಪಿ ಮುಖಂಡನ ಮೆಡಿಕಲ್ ಕಾಲೇಜ್ ಮೇಲೆ ಐಟಿ ದಾಳಿ

    ತುಮಕೂರು: ಇಂದು ಬೆಳ್ಳಂಬೆಳಗ್ಗೆ ಬಿಜೆಪಿ ಮುಖಂಡನ ಮೆಡಿಕಲ್ ಕಾಲೇಜಿನ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

    ಶಿರಾಗೇಟ್ ಬಳಿ ಇರುವ ಬಿಜೆಪಿ ಮುಖಂಡ ಡಾ.ಹುಲಿನಾಯಕ್ ಒಡೆತನದ ಶ್ರೀ ದೇವಿ ಮೆಡಿಕಲ್ ಕಾಲೇಜಿನ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲಿಸುತ್ತಿದ್ದಾರೆ.

    ಸುಮಾರು 30 ಜನ ಅಧಿಕಾರಿಗಳ ತಂಡ ಹುಲಿನಾಯ್ಕರ್ ಒಡೆತನದ ಮೆಡಿಕಲ್ ಕಾಲೇಜ್, ಎಂಜಿನಿಯರಿಂಗ್ ಕಾಲೇಜು ಹಾಗೂ ಎಸ್ ಎಸ್ ಪುರಂ ನಲ್ಲಿರುವ ಮನೆ ಮೇಲೆ ದಾಳಿ ಮಾಡಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

  • ಕೇರಳ ಆಸ್ಪತ್ರೆಯಿಂದ ಓಡಿ ಹೋಗಿದ್ದ ಅಮೆರಿಕ ದಂಪತಿ ಕೊನೆಗೂ ಪತ್ತೆ

    ಕೇರಳ ಆಸ್ಪತ್ರೆಯಿಂದ ಓಡಿ ಹೋಗಿದ್ದ ಅಮೆರಿಕ ದಂಪತಿ ಕೊನೆಗೂ ಪತ್ತೆ

    – ಅಲೆಪ್ಪಿ ಆಸ್ಪತ್ರೆಯಿಂದ ಶುಕ್ರವಾರ ಪರಾರಿ
    – ದಂಪತಿಗಾಗಿ ಶೋಧ ಕಾರ್ಯ ನಡೆಸಿದ್ದ ಪೊಲೀಸರು

    ತಿರುವನಂತಪುರಂ: ಆಸ್ಪತ್ರೆಗೆ ದಾಖಲಾದ ಬಳಿಕ ಪರಾರಿಯಾಗಿದ್ದ ಅಮೆರಿಕ ಪ್ರಜೆಗಳು ಕೊನೆಗೂ ಪತ್ತೆಯಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

    ಅಮೆರಿಕದ ಮೂಲದ ದಂಪತಿ ದೋಹಾ ಮೂಲಕ ಮಾರ್ಚ್ 9 ರಂದು ಕೇರಳದ ಕೊಚ್ಚಿಗೆ ಬಂದಿದ್ದರು. ದಂಪತಿ ಪೈಕಿ ಒಬ್ಬರಲ್ಲಿ ಕೊರೊನಾ ಲಕ್ಷಣದ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅಲೆಪ್ಪಿ ಮೆಡಿಕಲ್ ಕಾಲೇಜಿಗೆ ದಾಖಲಾಗಿದ್ದರು.

    ಆಸ್ಪತ್ರೆ ದಾಖಲಾಗುವಾಗ ನಾವು ಅಮೆರಿಕದ ಪ್ರಜೆಗಳು, ಕಳೆದ ಮೂರು ವರ್ಷಗಳಿಂದ ಲಂಡನ್ ನಲ್ಲಿ ನೆಲೆಸಿದ್ದೇವೆ ಎಂದು ತಿಳಿಸಿದ್ದರು. ಆಸ್ಪತ್ರೆಯ ಸಿಬ್ಬಂದಿ ನಿಮ್ಮನ್ನು  ಕೊರೊನಾ ಪರೀಕ್ಷೆಗೆ ಒಳಪಡಿಸಬೇಕು. ಪ್ರತ್ಯೇಕ ನಿಗಾದಲ್ಲಿರಬೇಕು ಎಂದು ಸೂಚಿಸಿದ್ದರು. ಅದರೆ ದಂಪತಿ ಕೊರೊನಾ ಪರೀಕ್ಷೆ ನಡೆಸಲು ಅನುಮತಿ ನೀಡಿರಲಿಲ್ಲ.

    ಈ ಸಂಬಂಧ ಪೊಲೀಸರು ಮಾಹಿತಿ ನೀಡಿ ಆಸ್ಪತ್ರೆ ಸಿಬ್ಬಂದಿ ಹೆಚ್ಚಿನ ಪರೀಕ್ಷೆಗೆ ವೈರಾಲಜಿ ಆಸ್ಪತ್ರೆಗೆ ದಾಖಲಾಗಬೇಕು, ಪ್ರತ್ಯೇಕ ನಿಗಾದಲ್ಲಿರಬೇಕು ಎಂದು ಸೂಚಿಸಿದ್ದರು. ಈ ಮಧ್ಯೆ ದಂಪತಿ ಯಾರಿಗೂ ತಿಳಿಸದೇ ಶುಕ್ರವಾರ ಆಸ್ಪತ್ರೆಯಿಂದ ಪರಾರಿಯಾಗಿದ್ದರು. ನಾಪತ್ತೆಯಾದ ಈ ದಂಪತಿ ಪತ್ತೆ ಹಚ್ಚಲು ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದರು.

    ಇಂದು ಬೆಳಗ್ಗೆ ಈ ದಂಪತಿಯನ್ನು ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಪತ್ತೆ ಮಾಡಲಾಗಿದ್ದು, ಈಗ ಆಸ್ಪತ್ರೆಗೆ ದಾಖಲಿಸಿ ನಿಗಾ ಇಡಲಾಗಿದೆ. ದಂಪತಿ ಕ್ಯಾಬ್ ಮೂಲಕ ಪ್ರಯಾಣಿಸಿದ್ದು ಕ್ಯಾಬ್ ಚಾಲಕನನ್ನು ಸಹ ದಾಖಲಿಸಿ ನಿಗಾ ಇಡಲಾಗಿದೆ.

    ಕೇರಳದಲ್ಲಿ 19 ಮಂದಿ ಕೊರೊನಾ ಪೀಡಿತರಿದ್ದಾರೆ. ಶುಕ್ರವಾರ ಒಂದು ಕೇಸ್ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಸಂಖ್ಯೆ 19ಕ್ಕೆ ಏರಿಕೆ ಆಗಿತ್ತು.

  • ರಮೇಶ್ ಕುಮಾರ್ ಏನೋ ಕುರಿ ವ್ಯಾಪಾರ ಮಾಡ್ತವರಂತೆ: ಸುಧಾಕರ್ ಟೀಕೆ

    ರಮೇಶ್ ಕುಮಾರ್ ಏನೋ ಕುರಿ ವ್ಯಾಪಾರ ಮಾಡ್ತವರಂತೆ: ಸುಧಾಕರ್ ಟೀಕೆ

    ಚಿಕ್ಕಬಳ್ಳಾಪುರ: ಈಗ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಏನೋ ಕುರಿ ವ್ಯಾಪಾರ ಮಾಡುತ್ತಿದ್ದಾರಂತೆ ಎಂದು ಶಾಸಕ ಸುಧಾಕರ್ ಟೀಕಿಸಿದ್ದಾರೆ.

    ಚಿಕ್ಕಬಳ್ಳಾಪುರ ತಾಲೂಕಿನ ಆರೂರು ಬಳಿ ನೂತನ ಸರ್ಕಾರಿ ಮೆಡಿಕಲ್ ಕಾಲೇಜಿಗೆ ಬೆಂಬಲಿಗರ ಸಮ್ಮುಖದಲ್ಲಿ ಭೂಮಿ ಪೂಜೆ ನೇರವೇರಿಸಿ ಸುಧಾಕರ್ ಅವರು ಮಾತನಾಡಿದರು. ಬೆಂಬಲಿಗರನ್ನ ಉದ್ದೇಶಿಸಿ ಮಾತನಾಡುತ್ತ ಸುಧಾಕರ್ ಅವರು ರಮೇಶ್ ಕುಮಾರ್ ವಿರುದ್ಧ ಕಿಡಿಕಾರಿದರು. ಈಗ ರಮೇಶ್ ಕುಮಾರ್ ಕುರಿ ವ್ಯಾಪಾರ ಮಾಡುತ್ತಿದ್ದಾರಂತೆ ಎಂದು ಬೆಂಬಲಿಗರು ಹೇಳಿದ್ದನ್ನು ಪುನರುಚ್ಚರಿಸಿದ ಸುಧಾಕರ್ ಅವರು, ‘ಹಾ ಏನೋ ಕುರಿಗಳ ವ್ಯಾಪಾರ ಮಾಡ್ತಾವರಂತೆ, ನನಗೆ ಗೊತ್ತಿಲ್ಲ’ ಎಂದು ನಗುತ್ತಾ ವ್ಯಂಗ್ಯವಾಡಿದರು.

    ಸುಪ್ರೀಂ ಕೋರ್ಟ್ ರಮೇಶ್ ಕುಮಾರ್ ಗೆ ತಕ್ಕಶಾಸ್ತಿ ಮಾಡಿದ್ದು, ಅದಕ್ಕಿಂತ ಹೆಚ್ಚಾಗಿ ನಾನು ನಂಬಿದ ನೀವು ತಕ್ಕಶಾಸ್ತಿ ಮಾಡಿದ್ದೀರಿ ಅಂತ ರಮೇಶ್ ಕುಮಾರ್ ವಿರುದ್ಧ ಹರಿಹಾಯ್ದರು. ರಮೇಶ್ ಕುಮಾರ್ ನಮ್ಮನ್ನ ಅನರ್ಹರನ್ನಾಗಿ ಮಾಡಿದರು. 4 ವರ್ಷ ನಾವೆಲ್ಲಾ ಮನೆಯಲ್ಲಿರಬೇಕು. ಮತ್ತೆ ಚುನಾವಣೆಗೆ ನಿಲ್ಲಬಾರದು ಅಂತ ಅನರ್ಹರನ್ನಾಗಿ ಮಾಡಿದರು. ಕಾನೂನು ಬಿಟ್ಟು ರಮೇಶ್ ಕುಮಾರ್ ಅಂಬೇಡ್ಕರ್ ಆಗಲು ಹೊರಟರು. ಡಾ ಅಂಬೇಡ್ಕರ್ ಬರೆದಿರೋ ಸಂವಿಧಾನವೇ ಬೇರೆ, ಇವರು ಸಂವಿಧಾನವನ್ನ ಅರ್ಥೈಸಿದ್ದೇ ಬೇರೆ ಎಂದು ವಾಗ್ದಾಳಿ ನಡೆಸಿದರು.

    ಈ ಹಿಂದೆ ಆಂಧ್ರದ ಮದನಪಲ್ಲಿಯ ಅಂಗಲಾ ಹಾಗೂ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ರೋಜೇನಹಳ್ಳಿ ಸಂತೆಗಳಿಗೆ ಭೇಟಿ ನೀಡಿ ರಮೇಶ್ ಕುಮಾರ್ ಕುರಿಗಳನ್ನು ಖರೀದಿಸಿದ್ದರು. ಆ ಬಳಿಕ ಚಿಕ್ಕಬಳ್ಳಾಪುರದ ಬಾಗೇಪಲ್ಲಿ ತಾಲೂಕಿನ ಚೇಳೂರು ಸಂತೆಯಲ್ಲಿ ಕುರಿಗಳನ್ನು ಖರೀದಿಸಿದ್ದರು. ಆಗ ರಾಜಕಾರಣಕ್ಕಿಂತ ಕುರಿ ಸಾಕುವುದು ಲೇಸು ಅಂತಲೋ ಏನೋ ಇತ್ತೀಚೆಗೆ ರಮೇಶ್ ಕುಮಾರ್ ಕುರಿ ಸಂತೆಗಳಲ್ಲಿ ಆಗಮಿಸಿ ಕುರಿ ಕೊಂಡುಕೊಳ್ಳುವ ಕಾಯಕ ಮಾಡುತ್ತಿದ್ದಾರೆ ಎಂಬ ಮಾತುಗಳು ಕೂಡ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿತ್ತು.

  • ಸಿದ್ದರಾಮಯ್ಯ ಏನ್ ಹೇಳಿಲ್ಲ, ಡಿಕೆಶಿ ನನ್ನ ಆಪ್ತ ಸ್ನೇಹಿತ – ಬಿಎಸ್‍ವೈ

    ಸಿದ್ದರಾಮಯ್ಯ ಏನ್ ಹೇಳಿಲ್ಲ, ಡಿಕೆಶಿ ನನ್ನ ಆಪ್ತ ಸ್ನೇಹಿತ – ಬಿಎಸ್‍ವೈ

    – ಸಿದ್ದರಾಮಯ್ಯ ವಿಷ ತುಂಬಿದ ಮನುಷ್ಯ
    – ಮೆಡಿಕಲ್ ಕಾಲೇಜ್ ಕಿತ್ತುಕೊಂಡಿಲ್ಲ

    ಬೆಂಗಳೂರು: ವಿಪಕ್ಷ ನಾಯಕರಾಗಿರುವ ಸಿದ್ದರಾಮಯ್ಯನವರ ಎಲ್ಲ ವಿಚಾರಗಳ ಬಗ್ಗೆ ಮಾತನಾಡುತ್ತಾರೆ. ಹಾಗಾಗಿ ಪ್ರತಿಯೊಂದು ಹೇಳಿಕೆಗೆ ಉತ್ತರ ನೀಡುವ ಅಗತ್ಯವಿಲ್ಲ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಪಬ್ಲಿಕ್ ಟಿವಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

    ಅತಿವೃಷ್ಟಿಗೆ ಏನು ನೀಡಿದ್ದೇನೆ ಎಂಬುದನ್ನು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸಿದ್ದರಾಮಯ್ಯನವರಿಗೆ ನಂಬಿಕೆ ಬರದಿದ್ದರೆ ಅಧಿಕಾರಿಗಳ ಬಳಿ ಮಾಹಿತಿ ಪಡೆದುಕೊಳ್ಳಬಹುದು. ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ಸಿದ್ದರಾಮಯ್ಯನವರು ನೀಡುವ ಸಲಹೆಯನ್ನು ಸ್ವೀಕರಿಸಲು ಸಿದ್ಧನಿದ್ದೇನೆ. ಪ್ರತಿಯೊಂದು ವಿಷಯಗಳಿಗೂ ಟೀಕೆ ಮಾಡುತ್ತಾ ನಿಂತರೆ ಏನು ಮಾಡಲು ಸಾಧ್ಯ ಎಂದು ಸಿಎಂ ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಅಧ್ಯಕ್ಷ ಕಟೀಲ್ ಜೊತೆಗಿನ ಸಮನ್ವಯತೆಯ ಸೂತ್ರ ಬಿಚ್ಚಿಟ್ಟ ಬಿಎಸ್‍ವೈ

    ಸಿದ್ದರಾಮಯ್ಯನವರು ಸತ್ಯಾಂಶ ತಿಳಿದುಕೊಳ್ಳದೇ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಬೇಕು. ಈ ರೀತಿಯ ಹೇಳಿಕೆಗಳಿಂದ ನಿರಾಶ್ರಿತರು ಗೊಂದಲಕ್ಕೊಳಗಾಗಿ ಕಣ್ಣೀರು ಹಾಕುತ್ತಾರೆ. ನಾನು ನೀಡಿರುವ ಪ್ರಕಟಣೆಯ ಅಂಕಿ ಅಂಶಗಳಲ್ಲಿ ವ್ಯತ್ಯಾಸಗಳಿದ್ದರೆ ಸಿದ್ದರಾಮಯ್ಯ ಹೇಳಿದಂತೆ ಕೇಳಲು ನಾನು ಸಿದ್ಧ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಅಪ್ಪ, ಮಕ್ಕಳು ಈಗ ಸುಧಾರಿಸಿದ್ದಾರೆ – ಸಿಎಂ ಬಿಎಸ್‍ವೈ

    ದುರುದ್ದೇಶದಿಂದ ಟೀಕೆ ಮಾಡುವವರ ಜೊತೆ ಮಾತನಾಡುವ ಅವಶ್ಯಕತೆ ಇಲ್ಲ. ಸಿದ್ದರಾಮಯ್ಯ ವಿಷ ತುಂಬಿದ ಮನುಷ್ಯರಾಗಿದ್ದು, ಅಭಿವೃದ್ಧಿ ಕಾರ್ಯಗಳನ್ನ ಮಾಡದ ರಾಜಕಾರಣಿ. ಹಾಗಾಗಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕೇವಲ ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಕಂಡಿದೆ. ಚುನಾವಣೆಯಲ್ಲಿ ಒಂದು ಸೀಟ್ ಗೆದ್ದವರೂ ನಮಗೆ ಉಪದೇಶ ಮಾಡುತ್ತಿದ್ದಾರೆ ಎಂದು ವ್ಯಂಗ್ಯ ಮಾಡಿದರು. ಇದನ್ನೂ ಓದಿ: ಯಡಿಯೂರಪ್ಪನವರೇ ಯಾಕೆ ಸುಳ್ಳು ಹೇಳ್ತೀರಾ? ಸಿದ್ದರಾಮಯ್ಯ

    ಸರ್ಕಾರದ ಪರವಾಗಿ ಮಾಜಿ ಸಿಎಂ ಕುಮಾರಸ್ವಾಮಿ ನೀಡಿರುವ ಹೇಳಿಕೆಯನ್ನು ಸ್ವಾಗತಿಸೋದು ನನ್ನ ಕರ್ತವ್ಯ. ಹಾಗಂತ ನಾನು ಯಾರೊಂದಿಗೆ ಹೊಸ ಫ್ರೆಂಡ್‍ಶಿಪ್ ಮಾಡಿಕೊಂಡಿಲ್ಲ. ಈ ಮಾತುಗಳಿಗೆ ಸಿದ್ದರಾಮಯ್ಯನವರು ಒಳಒಪ್ಪಂದ ಎಂದು ಅಪಾರ್ಥ ಕಲ್ಪಿಸುವ ಕೆಲಸ ಮಾಡುತ್ತಿದ್ದಾರೆ. ಸಿದ್ದರಾಮಯ್ಯರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಬಿಎಸ್‍ವೈ-ಎಚ್‍ಡಿಕೆ ನಡುವೆ ಒಳ ಒಪ್ಪಂದ: ಸಿದ್ದರಾಮಯ್ಯ ಆರೋಪ

    ಮೆಡಿಕಲ್ ಕಾಲೇಜು ಕಿತ್ತುಕೊಂಡಿಲ್ಲ: ಮಾಜಿ ಸಚಿವರಾದ ಡಿಕೆ ಶಿವಕುಮಾರ್ ನನ್ನ ಆಪ್ತ ಸ್ನೇಹಿತರು. ಸದ್ಯದ ಹಣಕಾಸು ಪರಿಸ್ಥಿತಿಯಲ್ಲಿ ತಾಲೂಕು ಕೇಂದ್ರಗಳಿಗೆ ಮೆಡಿಕಲ್ ಕಾಲೇಜು ನೀಡಲು ಸಾಧ್ಯವಿಲ್ಲ. ಮೊದಲು ಜಿಲ್ಲಾ ಕೇಂದ್ರಗಳಿಗೆ ಆಸ್ಪತ್ರೆ ನೀಡಬೇಕು ಎಂಬುವುದು ಶಿವಕುಮಾರ್ ಅವರಿಗೂ ಗೊತ್ತಿದೆ. ಕೇಂದ್ರ ಸರ್ಕಾರ ಮೂರು ಕ್ಷೇತ್ರಗಳಿಗೆ ಅನುದಾನ ನೀಡಿದೆ. 60:40 (ರಾಜ್ಯ 60% & ಕೇಂದ್ರ 40%) ಅನುಪಾತದಲ್ಲಿ ಹಣ ಬಿಡುಗಡೆಯಾಗಿದ್ದರಿಂದ ಚಿಕ್ಕಬಳ್ಳಾಪುರಕ್ಕೆ ಮೊದಲ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ವಿಡಿಯೋದ ತಪ್ಪು ವ್ಯಾಖ್ಯಾನ ನೀಡಿ ಬಿಜೆಪಿ ವಿಕೃತಾನಂದ: ಸಿದ್ದರಾಮಯ್ಯ