Tag: ಮೆಟ್ ಗಾಲಾ

  • ದುಬಾರಿ ಚಿನ್ನದುಡೆಗೆಯಲ್ಲಿ ಗಮನ ಸೆಳೆದ ನಟಿ ಕಾರಾ ಡಿಲಿವಿಂಗೆ : ಬೆಲೆ ಗಾಬರಿ ಮೂಡಿಸುತ್ತೆ

    ದುಬಾರಿ ಚಿನ್ನದುಡೆಗೆಯಲ್ಲಿ ಗಮನ ಸೆಳೆದ ನಟಿ ಕಾರಾ ಡಿಲಿವಿಂಗೆ : ಬೆಲೆ ಗಾಬರಿ ಮೂಡಿಸುತ್ತೆ

    ಜಗತ್ತಿನ ಅತೀ ದೊಡ್ಡ ಶ್ರೀಮಂತರು ಮತ್ತು ಖ್ಯಾತ ಮಾಡೆಲ್ ಗಳು ಪಾಲ್ಗೊಳ್ಳುವ ಜಗತ್ತಿನ ಏಕೈಕ ಶ್ರೀಮಂತ ಫ್ಯಾಷನ್ ಶೋಗಳಲ್ಲಿ ಮೆಟ್ ಗಾಲಾ ಕೂಡ ಒಂದು. ಬಹುತೇಕವಾಗಿ ಇಲ್ಲಿ ಶ್ರೀಮಂತ ಉದ್ಯಮಿಗಳೂ ಮತ್ತು ಹೆಸರಾಂತ ಮಾಡೆಲ್ ಗಳು ಈ ಶೋನಲ್ಲಿ ಭಾಗಿಯಾಗುತ್ತಾರೆ. ಅದೊಂದು ಪ್ರತಿಷ್ಠೆಯನ್ನಾಗಿ ಸ್ವೀಕರಿಸಿದ್ದಾರೆ. ಇದನ್ನೂ ಓದಿ : ಜೂನ್ 9ಕ್ಕೆ ನಯನತಾರಾ ಮದುವೆ ಫಿಕ್ಸ್ – ತಿರುಪತಿಯಲ್ಲಿ ವಿವಾಹ

    ಇಂಥದ್ದೊಂದು ಶೋ ಈ ಬಾರಿ ಅಮೆರಿಕಾದ ನ್ಯೂಯಾರ್ಕನಲ್ಲಿ ನಡೆದಿದ್ದು, ನಟಿ ಕಾರಾ ಡಿಲಿವಿಂಗೆ ಸೇರಿದಂತೆ ಜಗತ್ತಿನ ಹೆಸರಾಂತ ರೂಪದರ್ಶಿಗಳು ಈ ಶೋನಲ್ಲಿ ಭಾಗಿಯಾಗಿದ್ದರು. ಒಬ್ಬರಿಗಿಂತ ಒಬ್ಬರು ಗಮನ ಸೆಳೆಯುವಂತಹ ಕಾಸ್ಟ್ಯೂಮ್ ಧರಿಸಿದ್ದರು. ಅದರಲ್ಲೂ ಸೂಪರ್ ಮಾಡೆಲ್ ಮತ್ತು ನಟಿ ಕಾರಾ ಡಿಲಿವಿಂಗ್ ಈ ಶೋನಲ್ಲಿ ಚಿನ್ನದುಡೆಗೆ ತೊಟ್ಟು ಗಮನ ಸೆಳೆದಿದ್ದಾರೆ. ಇದನ್ನೂ ಓದಿ : ಮಿಸೆಸ್ ಇಂಡಿಯಾ ಆಗಲು ನಿವೇದಿತಾ ಗೌಡ ತಯಾರಿ : ಕ್ಯಾಟ್ ವಾಕ್ ವಿಡಿಯೋದಲ್ಲಿ ಚಂದನ್ ಶೆಟ್ಟಿ ಬೊಂಬೆ

    ಕೆಂಪು ಪ್ಯಾಂಟ್ ಮೇಲೆ ಚಿನ್ನದುಡೆಗೆ ತೊಟ್ಟಿದ್ದ ಕಾರಾ ಡಿಲಿವಿಂಗ್ ಅತ್ಯಂತ ದುಬಾರಿ ಕಾಸ್ಟ್ಯೂಮ್ ತೊಡುವ ಮೂಲಕ ನೆರೆದಿದ್ದವರ ಗಮನವನ್ನು ಸೂಜಿಗಲ್ಲಿನಂತೆ ಸೆಳೆದರು. 29ರ ವಯಸ್ಸಿನ ಈ ರೂಪದರ್ಶಿಯು ಈ ಬಾರಿ ಫ್ಯಾಷನ್ ಶೋನ ಕೇಂದ್ರಬಿಂದು ಕೂಡ ಆಗಿದ್ದರು. ಕಾರಾ ಡಿಲಿವಿಂಗ್ ತೊಟ್ಟ ಆ ಉಡುಗೆಯು ಕೋಟಿ ಮೊತ್ತದ್ದಾಗಿತ್ತು ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ : ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಜತೆ ಇರೋ ಹುಡುಗ ಯಾರು?

    ಕೆಂಪು ಪ್ಯಾಂಟ್ ಮತ್ತು ಚಿನ್ನದ ಟಾಪ್ ಫ್ಯಾಷನ್ ಲೋಕದ ಅಪರೂಪದ ಕಾಸ್ಟ್ಯೂಮ್ ಎನ್ನಲಾಗುತ್ತಿದ್ದು, ಅದನ್ನು ವಿಶೇಷವಾಗಿ ಡಿಸೈನ್ ಮಾಡಿದ್ದರಿಂದ ಕಾರಾ ಅವರ ಅಂದವನ್ನು ಅದು ಮತ್ತಷ್ಟು ಹೆಚ್ಚಿಸಿತ್ತು ಎಂದು ಫ್ಯಾಷಲ್ ಲೋಕದ ದಿಗ್ಗಜರು ಅಭಿಪ್ರಾಯ ಪಟ್ಟಿದ್ದಾರೆ. ಈ ಕಾಸ್ಟ್ಯೂಮ್ ಕೇವಲ ಅಂದವನ್ನು ಮಾತ್ರ ಹೆಚ್ಚಿಸಿಲ್ಲ, ಆತ್ಮವಿಶ್ವಾಸವನ್ನೂ ಹೆಚ್ಚಿಸಿರುವುದಾಗಿ ವರದಿಯಾಗಿದೆ.

  • ತನ್ನ ಮೆಟ್ ಗಾಲಾ ಮಿಸ್ ಫ್ರೂಟಿ ಲುಕ್ ರಿವೀಲ್ ಮಾಡಿದ ನಟಿ ರಾಖಿ ಸಾವಂತ್

    ತನ್ನ ಮೆಟ್ ಗಾಲಾ ಮಿಸ್ ಫ್ರೂಟಿ ಲುಕ್ ರಿವೀಲ್ ಮಾಡಿದ ನಟಿ ರಾಖಿ ಸಾವಂತ್

    ಮುಂಬೈ: ಬಾಲಿವುಡ್ ಡ್ರಾಮಾ ಕ್ವೀನ್ ರಾಖಿ ಸಾವಂತ್ ತನ್ನ ‘ಮೆಟ್ ಗಾಲಾ’ ಲುಕ್ ರಿವೀಲ್ ಮಾಡಿದ್ದಾರೆ.

    ರಾಖಿ ಸಾವಂತ್ ತಮ್ಮ ಮೆಟ್ ಗಾಲಾ ಲುಕ್‍ನ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ರಾಖಿ ಕಪ್ಪು ಬಣ್ಣದ ಉಡುಪು ಧರಿಸಿ ತಲೆ ಮೇಲೆ ಪ್ಲಾಸ್ಟಿಕ್ ಹಣ್ಣಿನ ಕ್ಯಾಪ್ ಧರಿಸಿದ್ದಾರೆ.

    ರಾಖಿ ಸಾವಂತ್ ಈ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಾಕಿ ಅದಕ್ಕೆ ‘ಮಿಸ್ ಫ್ರೂಟಿ’ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ರಾಖಿ ಸಾವಂತ್ ಫೋಟೋ ನೋಡಿದ ಅಭಿಮಾನಿಗಳು ಅವರನ್ನು ಸಾಕಷ್ಟು ಟ್ರೋಲ್ ಮಾಡುತ್ತಿದ್ದಾರೆ.

    ರಾಖಿ ಸಾವಂತ್ ಅವರನ್ನು ಮೆಟ್ ಗಾಲಾಗೆ ಯಾರು ಕರೆದಿಲ್ಲ. ಆದರೂ ಸಹ ಅವರು ದೀಪಿಕಾ ಪಡುಕೋಣೆ ಹಾಗೂ ಪ್ರಿಯಾಂಕಾ ಚೋಪ್ರಾ ಅವರ ಲುಕ್ ಅನ್ನು ಮೀರಿಸಲು ತಮ್ಮ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಾಕಿಕೊಂಡು ‘ಮೀಟ್ ಗಾಲಾ’ 2019 ಎಂದು ಹ್ಯಾಶ್‍ಟ್ಯಾಗ್ ಬಳಸಿಕೊಂಡಿದ್ದಾರೆ.

    ರಾಖಿ ಸಾವಂತ್ ಈಗ ಕುಲು-ಮನಾಲಿಯಲ್ಲಿ ತಮ್ಮ ಮುಂದಿನ ‘ದಾರಾ -370’ ಚಿತ್ರಕ್ಕಾಗಿ ಶೂಟಿಂಗ್ ನಡೆಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ವೇಳೆ ರಾಖಿ ಸಾವಂತ್ ಪಾಕಿಸ್ತಾನದ ಧ್ವಜವನ್ನು ಅಪ್ಪಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟ್ರೋಲ್ ಆಗಿದ್ದರು.

    ಮೆಟ್ ಗಾಲಾ ಕಾರ್ಯಕ್ರಮದಲ್ಲಿ ಬಾಲಿವುಡ್ ನಟಿಯರಾದ ದೀಪಿಕಾ ಪಡುಕೋಣೆ ಹಾಗೂ ಪ್ರಿಯಾಂಕಾ ಚೋಪ್ರಾ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ದೀಪಿಕಾ 400 ಕಸೂತಿ ತುಣುಕುಗಳೊಂದಿಗೆ ಅಲಂಕರಿಸಲ್ಪಟ್ಟ, ಝಾಕ ಪೊಸೆನ್ ವಿನ್ಯಾಸದ ಗುಲಾಬಿ ಬಣ್ಣದ ಲೋರೆಕ್ಸ್ ಜಾಕ್ವಾರ್ಡ್ ಗೌನ್ ಧರಿಸಿದ್ದರು. ಪ್ರಿಯಾಂಕಾ ಡಿಯೋರ್ ವಿನ್ಯಾಸದ ಡ್ರಾಮಾಟಿಕ್ ಡಿಯೋರ್ ಗೌನ್ ಧರಿಸಿ ಅದಕ್ಕೆ ಬಿಳಿ ಬಣ್ಣದ ಐಬ್ರೋ ಹಾಗೂ ಐಲ್ಯಾಶಸ್ ಮಾಡಿಸಿದ್ದರು.

  • ಮೆಟ್ ಗಾಲಾದಲ್ಲಿ ಪ್ರಿಯಾಂಕಾ ಧರಿಸಿದ ಗೌನ್ ಬೆಲೆ ರಿವೀಲ್

    ಮೆಟ್ ಗಾಲಾದಲ್ಲಿ ಪ್ರಿಯಾಂಕಾ ಧರಿಸಿದ ಗೌನ್ ಬೆಲೆ ರಿವೀಲ್

    ಮುಂಬೈ: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ‘ಮೆಟ್ ಗಾಲಾ 2019’ ಕಾರ್ಯಕ್ರಮದಲ್ಲಿ ಧರಿಸಿದ್ದ ಗೌನಿನ ಬೆಲೆ ರಿವೀಲ್ ಆಗಿದೆ. ಪ್ರಿಯಾಂಕಾ ಚೋಪ್ರಾ ಈ ಕಾರ್ಯಕ್ರಮಕ್ಕೆ ಬರೋಬ್ಬರಿ 45 ಲಕ್ಷ ರೂ. ವೆಚ್ಚದ ಗೌನ್ ಧರಿಸಿದ್ದಾರೆ.

    ಪ್ರಿಯಾಂಕಾ ಮೆಟ್ ಗಾಲಾ ಕಾರ್ಯಕ್ರಮಕ್ಕೆ ಡಿಯೋರ್ ವಿನ್ಯಾಸದ ಡ್ರಾಮಾಟಿಕ್ ಡಿಯೋರ್ ಗೌನ್ ಧರಿಸಿ ಅದಕ್ಕೆ ಬಿಳಿ ಬಣ್ಣದ ಐಬ್ರೋ ಹಾಗೂ ಐಲ್ಯಾಶಸ್ ಮಾಡಿಸಿದ್ದರು.

    ಪ್ರಿಯಾಂಕಾ ಈ ಕಾರ್ಯಕ್ರಮಕ್ಕೆ ಬರೋಬ್ಬರಿ 45 ಲಕ್ಷ ರೂ.ಯ ಗೌನ್ ಧರಿಸಿದ್ದರು. 1500 ಗಂಟೆಗಳ ಕಾಲ ಶ್ರಮವಹಿಸಿ ಈ ಗೌನ್‍ನನ್ನು ಟುಲೆಯಿಂದ ತಯಾರಿಸಲಾಗಿದೆ. ಆ ಗೌನ್‍ಗೆ ಪ್ರಿಯಾಂಕಾ ಸುಮಾರು 10 ಲಕ್ಷ ರೂ. ಮೌಲ್ಯದ ವಜ್ರದ ಇಯರಿಂಗ್ ಹಾಕಿದ್ದರು.

    ಸದ್ಯ ಪ್ರಿಯಾಂಕಾ ಚೋಪ್ರಾ ಅವರ ಮೆಟ್ ಗಾಲಾ ಲುಕ್ ನೋಡಿ ಅಭಿಮಾನಿಗಳು ಅವರನ್ನು ಸಾಕಷ್ಟು ಟ್ರೋಲ್ ಹಾಗೂ ಹಲವಾರು ಮಿಮ್ಸ್ ಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಆದರೆ ಈಗ ಪ್ರಿಯಾಂಕ ಲುಕ್ ಬಗ್ಗೆ ಸ್ವತಃ ಅವರ ತಾಯಿ ಮಧು ಚೋಪ್ರಾ ಅವರು ಪ್ರತಿಕ್ರಿಯೆ ನೀಡಿದ್ದಾರೆ.

    ಪ್ರಿಯಾಂಕಾ ಲುಕ್ ಬಗ್ಗೆ ಅವರ ತಾಯಿ ಮಧು ಚೋಪ್ರಾ ಬಳಿ ಕೇಳಿದ್ದಕ್ಕೆ, “ಇಷ್ಟು ದೂರದಿಂದ ನಾನು ಏನೆಂದು ಪ್ರತಿಕ್ರಿಯಿಸಲಿ. ಪ್ರಿಯಾಂಕಾ ನನ್ನ ಮುಂದೆ ಇದ್ದಿದ್ದರೆ ನಾನು ಅವಳನ್ನು ತಬ್ಬಿಕೊಳ್ಳುತ್ತಿದೆ. ಏಕೆಂದರೆ ಅವಳು ಅಷ್ಟು ಸುಂದರವಾಗಿ ಹಾಗೂ ಸ್ಪೆಷಲ್ ಆಗಿ ಕಾಣಿಸುತ್ತಿದ್ದಳು” ಎಂದು ಹೇಳಿದ್ದಾರೆ.

    ಮೆಟ್ ಗಾಲಾ ಕಾರ್ಯಕ್ರಮಕ್ಕೆ ಪ್ರಿಯಾಂಕ ಪತಿ, ಅಮೆರಿಕದ ಗಾಯಕ ನಿಕ್ ಜೋನಸ್ ಪ್ರಿಸ್ಟಿನ್ ಬಿಳಿ ಬಣ್ಣದ ಸೂಟ್ ಧರಿಸಿ ಪತ್ನಿ ಜೊತೆ ಆಗಮಿಸಿದ್ದರು. ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ಕೂಡ ಡಿಸ್ನಿ ಪ್ರಿನ್ಸೆಸ್ ಲುಕ್‍ನಲ್ಲಿ ಆಗಮಿಸಿದ್ದರು. ಈ ಕಾರ್ಯಕ್ರಮದಲ್ಲಿ ದೀಪಿಕಾ 400 ಕಸೂತಿ ತುಣುಕುಗಳೊಂದಿಗೆ ಅಲಂಕರಿಸಲ್ಪಟ್ಟ, ಝಾಕ ಪೊಸೆನ್ ವಿನ್ಯಾಸದ ಗುಲಾಬಿ ಬಣ್ಣದ ಲೋರೆಕ್ಸ್ ಜಾಕ್ವಾರ್ಡ್ ಗೌನ್ ಧರಿಸಿದ್ದರು.

  • ಡಿಸ್ನಿ ಪ್ರಿನ್ಸೆಸ್ ಲುಕ್‍ನಲ್ಲಿ ಡಿಂಪಲ್ ಬೆಡಗಿ ದೀಪಿಕಾ: ವಿಡಿಯೋ ನೋಡಿ

    ಡಿಸ್ನಿ ಪ್ರಿನ್ಸೆಸ್ ಲುಕ್‍ನಲ್ಲಿ ಡಿಂಪಲ್ ಬೆಡಗಿ ದೀಪಿಕಾ: ವಿಡಿಯೋ ನೋಡಿ

    -ಸ್ಟನ್ನಿಂಗ್ ಲುಕ್‍ನಲ್ಲಿ ದೇಶಿ ಗರ್ಲ್

    ನ್ಯೂಯಾರ್ಕ್: ಬಾಲಿವುಡ್ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ‘ಮೆಟ್ ಗಾಲಾ 2019’ ಕಾರ್ಯಕ್ರಮಕ್ಕೆ ಡಿಸ್ನಿ ಪ್ರಿನ್ಸೆಸ್ ಲುಕ್‍ನಲ್ಲಿ ಆಗಮಿಸಿದ್ದಾರೆ.

    ಸೋಮವಾರ ಸಂಜೆ ದೀಪಿಕಾ ‘ಕ್ಯಾಂಪ್: ಇದುವರೆಗೂ ಯಾರು ಮಾಡದ ಫ್ಯಾಶನ್’ ಎಂಬ ಥೀಮ್ ಇಟ್ಟುಕೊಂಡು ಕಾರ್ಯಕ್ರಮಕ್ಕೆ ಬಂದಿದ್ದರು. ಈ ಕಾರ್ಯಕ್ರಮದಲ್ಲಿ ದೀಪಿಕಾ 400 ಕಸೂತಿ ತುಣುಕುಗಳೊಂದಿಗೆ ಅಲಂಕರಿಸಲ್ಪಟ್ಟ, ಝಾಕ ಪೊಸೆನ್ ವಿನ್ಯಾಸದ ಗುಲಾಬಿ ಬಣ್ಣದ ಲೋರೆಕ್ಸ್ ಜಾಕ್ವಾರ್ಡ್ ಗೌನ್ ಧರಿಸಿದ್ದರು.

    ದೀಪಿಕಾ ಮೂರನೇ ಬಾರಿಗೆ ಮೆಟ್ ಗಾಲಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಈ ಮೊದಲು ಎರಡು ಬಾರಿ ಅವರು ಸಿಂಪಲ್ ಗೌನ್ ಧರಿಸಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆದರೆ ಈ ಬಾರಿ ಗುಲಾಬಿ ಬಣ್ಣದ ಗೌನ್‍ನಲ್ಲಿ ದೀಪಿಕಾ ಡಿಸ್ನಿಯ ರಾಜಕುಮಾರಿಯಂತೆ ಕಾಣಿಸುತ್ತಿದ್ದು, ಎಲ್ಲರ ಗಮನ ತನ್ನತ್ತ ಸೆಳೆದುಕೊಂಡರು.

    ಈ ಕಾರ್ಯಕ್ರಮದಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ಪತಿ, ಪಾಪ್ ಸಿಂಗರ್ ನಿಕ್ ಜೋನಸ್ ಜೊತೆ ಆಗಮಿಸಿದ್ದರು. ಪ್ರಿಯಾಂಕಾ ಈ ಕಾರ್ಯಕ್ರಮದಲ್ಲಿ ಸ್ಟನಿಂಗ್ ಲುಕ್‍ನಲ್ಲಿ ಆಗಮಿಸಿದ್ದರು. ಪ್ರಿಯಾಂಕಾ ಚೋಪ್ರಾ ಅವರ ಈ ಲುಕ್ ನೋಡಿ ಭಾರತದ ಅಭಿಮಾನಿಗಳು ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.