Tag: ಮೆಟ್ರೋ ಪಿಲ್ಲರ್

  • ಮೆಟ್ರೋ ಮೊಂಡಾಟ- ಅನಾಹುತ ಆಗಿದ್ರೂ ಕಳ್ಳ ಮಾರ್ಗದಲ್ಲಿ ಸೆಟ್ಲ್ಮೆಂಟ್!

    ಮೆಟ್ರೋ ಮೊಂಡಾಟ- ಅನಾಹುತ ಆಗಿದ್ರೂ ಕಳ್ಳ ಮಾರ್ಗದಲ್ಲಿ ಸೆಟ್ಲ್ಮೆಂಟ್!

    ಬೆಂಗಳೂರು: ಸಿಲಿಕಾನ್ ಸಿಟಿಯ ಜನರ ನಾಡಿಮಿಡಿತವಾಗಿರೋ ಬಿಎಂಟಿಸಿಗೆ (BMTC) ಜನ ಕಿಲ್ಲರ್ ಬಿಎಂಟಿಸಿ ಅಂತಾ ಹಣೆಪಟ್ಟಿ ಕಟ್ಟಿದ್ರು. ಈಗ ಈ ಬಿರುದನ್ನ `ನಮ್ಮ ಮೆಟ್ರೋ’ (Namma Metro) ಪಡೆದುಕೊಂಡಂತಿದೆ. 2023ರ ವರ್ಷಾರಂಭದಲ್ಲೇ ಎರಡು ಅಮಾಯಕರನ್ನ ಬಲಿ ಪಡೆದಿದೆ.

    ಬ್ರಿಗೇಡ್ ರೋಡ್ ಮತ್ತು ದೊಡ್ಡನಕುಂದಿಯಲ್ಲಿ ಸ್ವಲ್ಪ ಎಚ್ಚರಿಕೆ ತಪ್ಪಿದ್ರೇ ಇನ್ನೂ ಹಲವರ ಪ್ರಾಣ ಕಳೆದುಕೊಳ್ಳಬೇಕಾಗಿತ್ತು. ಅದರೇ ಬಿಎಂಆರ್‌ಸಿಎಲ್ (BMRCL) ಮಾತ್ರ ಅರೇ ನಮ್ಮದೇನು ತಪ್ಪೇ ಇಲ್ಲ ಎಂಬಂತೆ ನಡೆದುಕೊಳ್ಳುತ್ತಿದೆ. ಇದನ್ನೂ ಓದಿ: ನಗರ ಭಾಗದಲ್ಲೂ ಕಂಬಳ ಕಹಳೆ- ಕಾಂತಾರದಿಂದ ಮತ್ತಷ್ಟು ರಂಗೇರಿದ ಹವಾ

    ಈ ಮೆಟ್ರೋ ಬ್ಯಾರಿಗೇಡ್ ಬಿದ್ದು ಕಾರು ಜಖಂ ಪ್ರಕರಣ ಬೆಂಗಳೂರು ಜನರ ಕಣ್ಣಮುಂದಿದೆ. ಅಲ್ಲದೇ ಆದ್ರೆ ಬಿಎಂಆರ್‌ಸಿಎಲ್ ಮತ್ತೆ ಕಳ್ಳಾಟವಾಡ್ತಾ ಇದೆ ಅನ್ನಿಸ್ತಿದೆ. ತನ್ನ ಮೊಂಡಾಟ ಬಿಡದೇ ಪ್ರಕರಣ ಮುಚ್ಚಿಹಾಕುವ ತಂತ್ರ ಮಾಡಿದೆ. ಮೆಟ್ರೋ ಪಿಲ್ಲರ್ ದುರಂತದಲ್ಲೂ ತನ್ನದು ತಪ್ಪೇ ಇಲ್ಲ ಅಂತ ವಾದಿಸಿದ್ದ ಬಿಎಂಆರ್‌ಸಿಎಲ್ ಈಗ ಕಾರಿನ ಮೇಲೆ ಬ್ಯಾರಿಕೇಡ್ ಬಿದ್ದ ಘಟನೆಯನ್ನ ಮುಚ್ಚಿ ಹಾಕಲು ಪ್ರಕರಣ ದಾಖಲಾಗದಂತೆ ನೋಡಿಕೊಂಡಿದೆ. ಇದನ್ನೂ ಓದಿ: ನಗರ ಭಾಗದಲ್ಲೂ ಕಂಬಳ ಕಹಳೆ- ಕಾಂತಾರದಿಂದ ಮತ್ತಷ್ಟು ರಂಗೇರಿದ ಹವಾ

    ಹೌದು. ಕಾರಿನ ಮೇಲೆ ಮೆಟ್ರೋ ಬ್ಯಾರಿಕೇಡ್ ಬಿದ್ದಿದ್ದನ್ನ ಮುಚ್ಚಿ ಹಾಕಲು ಹಾಗೂ ಮತ್ತೆ ಬ್ಲಾಕ್ ಮಾರ್ಕ್ ಅನ್ನೋ ಕಾರಣಕ್ಕೆ ಪೊಲೀಸ್ ಪ್ರಕರಣವನ್ನೇ ದಾಖಲು ಮಾಡಲು ಬಿಡದೇ ಬಿಎಂಆರ್‌ಸಿಎಲ್ ಕಾರನ್ನ ಸಂಪೂರ್ಣ ರಿಪೇರಿ ಮಾಡಿಕೊಡೋ ಸೆಟ್ಲ್ಮೆಂಟ್ ಮಾಡಿಕೊಂಡಿದೆ. ಪೊಲೀಸರು ದೂರು ನೀಡಿ ಅಂದ್ರೂ ಕಂಪ್ಲೆಂಟ್ ಕೊಡಿಸದೇ ಸೆಟ್ಲ್ಮೆಂಟ್ ಮಾಡಿಕೊಂಡಿದ್ದಾರೆ ಎನ್ನಲಾಗ್ತಿದೆ. ಹುಂಡೈ I-10 ಕಾರಿನ ಮೇಲೆ ಬ್ಯಾರಿಕೇಡ್ ಬಿದ್ದಿದ್ದರಿಂದ ಕಾರು ಸಂಪೂರ್ಣ ಜಖಂ ಆಗಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇದನ್ನ ಪ್ರಕರಣ ದಾಖಲು ಮಾಡಲು ಬಿಡದೇ ಪ್ರಕರಣದಲ್ಲೀ ತಮ್ಮದೇನು ತಪ್ಪೇ ಇಲ್ಲ ಅನ್ನೋ ಮಟ್ಟಕ್ಕೆ ನಿರಾಳರಾಗಿದ್ದಾರೆ.

    ಇನ್ನೂ ಈ ಬಗ್ಗೆ ಉತ್ತರಿಸಿ ಅಂದ್ರೇ ಬಿಎಂಆರ್‌ಸಿಎಲ್ ಎಂಡಿ ಅಂಜುಂ ಪರ್ವೇಜ್ ಪ್ರತಿಕ್ರಿಯೆ ನೀಡಿಲ್ಲ. ಸಿಎಂ ಖುದ್ದು ಕೇಸ್ ದಾಖಲಿಸಿ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದರೂ ಬಿಎಂಆರ್‌ಸಿಎಲ್ ಮಾತ್ರ ನಾವೇನು ಮಾಡೇ ಇಲ್ಲ. ನಮ್ಮದೇನು ತಪ್ಪೇ ಇಲ್ಲ ಅನ್ನೋ ಮನೋಭಾವನೆಯಲ್ಲಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸರಣಿ ಅವಘಡಗಳು ಆಗ್ತಿದ್ರೂ ನಿದ್ರೆಯಲ್ಲಿರೋ ನಮ್ಮ ಮೆಟ್ರೋ!

    ಸರಣಿ ಅವಘಡಗಳು ಆಗ್ತಿದ್ರೂ ನಿದ್ರೆಯಲ್ಲಿರೋ ನಮ್ಮ ಮೆಟ್ರೋ!

    ಬೆಂಗಳೂರು: ರಾಜ್ಯ ರಾಜಧಾನಿ ಹೈಟೆಕ್ ಗಾರ್ಡನ್ ಸಿಟಿ ದಿನದಿಂದ ದಿನಕ್ಕೆ ಅಭಿವೃದ್ಧಿಯ ಮಹಾಶಿಖರವನ್ನು ಏರುತ್ತಿದೆ. ಐಟಿಬಿಟಿ ಸಿಟಿಯಾಗಿರೋ ಸಿಲಿಕಾನ್ ಸಿಟಿಯಲ್ಲಿ ಬಿಎಂಟಿಸಿ (BMTC) ಬಳಿಕ ಅತ್ಯಂತ ಜನಪ್ರಿಯತೆ ಹೊಂದಿರುವುದು ನಮ್ಮ ಮೆಟ್ರೋ (Namma Metro). ಸದ್ಯ ಇರೋ 42.5 ಕಿ.ಮೀ ಮೆಟ್ರೋ ಮಾರ್ಗದಲ್ಲಿ ಪ್ರತಿನಿತ್ಯ ಲಕ್ಷಾಂತರ ಜನರು ಪ್ರಯಾಣ ಮಾಡುತ್ತಿದ್ದಾರೆ. ಈ ಮೆಟ್ರೋ ಕಾರಿಡಾರ್ ಅನ್ನು ನಗರದ ನಾನಾ ಭಾಗಗಳಿಗೆ ವಿಸ್ತರಣೆ ಮಾಡುವ ಕೆಲಸವೂ ಶರವೇಗದಲ್ಲಿ ನಡೆಯುತ್ತಿದೆ. ಆದರೆ ಅದರಿಂದ ಆಗುತ್ತಿರುವ ಅವಘಡಗಳಿಗೆ ಮಾತ್ರ ಜನರು ಬಲಿಪಶುಗಳಾಗುತ್ತಿದ್ದಾರೆ.

    ಹೌದು, 2023 ಯಾಕೋ ಮೆಟ್ರೋ ಕಾಮಗಾರಿಗಳಿಗೆ ಬ್ಯಾಡ್ ಇಯರ್ ಆಗ್ತಿದೆ. ಈ ವರ್ಷದ ಮೊದಲ ತಿಂಗಳ 3 ವಾರದಲ್ಲೇ ಮೆಟ್ರೋ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ 3ನೇ ದುರಂತ ಭಾನುವಾರ ನಡೆದಿದೆ. ಜನವರಿ 10 ರಂದು ನಾಗವಾರದ ಬಳಿ ಮೆಟ್ರೋ ಪಿಲ್ಲರ್ (Metro Pillar) ಬಿದ್ದು ತಾಯಿ-ಮಗು ಸ್ಥಳದಲ್ಲೇ ಮೃತರಾಗಿದ್ದರು. ಜನವರಿ 12 ರಂದು ಬ್ರಿಗೇಡ್ ರೋಡ್‌ನಲ್ಲಿ ಮೆಟ್ರೋ ಅಂಡರ್ ಗ್ರೌಂಡ್ ಕಾಮಗಾರಿಯ ಫಲವಾಗಿ ರಸ್ತೆ ಕುಸಿತವಾಗಿತ್ತು. ಇದರಿಂದ ಇಬ್ಬರು ಬೈಕ್ ಸವಾರರಿಗೆ ಗಾಯಗಳಾಗಿದ್ದವು.

    ಭಾನುವಾರ ಸಂಜೆ ವೈಟ್ ಫೀಲ್ಡ್ ಬಳಿ ನಡೆಯುತ್ತಿರುವ ಮೆಟ್ರೋ ಕಾಮಗಾರಿಯಿಂದ ಕಾರಿನಲ್ಲಿ ಹೋಗುತ್ತಿದ್ದವರು ಪ್ರಾಣಾಪಾಯದಿಂದ ಜಸ್ಟ್ ಮಿಸ್ ಆಗಿದ್ದಾರೆ. ಹೌದು ದೊಡ್ಡನಕುಂದಿ ಜಂಕ್ಷನ್ ಬಳಿ ಚಲಿಸುತ್ತಿದ್ದ ಕಾರಿನ ಮೇಲೆ ಮೆಟ್ರೋ ಬ್ಯಾರಿಕೇಡ್ ಬಿದ್ದು ಕಾರು ಜಖಂ ಆಗಿದೆ. ಹುಂಡೈ ಐ10 ಕಾರಿನ ಮೇಲೆ ಬ್ಯಾರಿಕೇಡ್ ಬಿದ್ದಿದ್ದು ಕಾರಿನಲ್ಲಿದ್ದವರು ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ಅನಾಹುತದಿಂದ ತಪ್ಪಿಸಿಕೊಂಡಿದ್ದಾರೆ.

    ಒಂದರ ಬಳಿಕ ಒಂದು ಅವಘಡಗಳು ಆಗುತ್ತಿದ್ದರೂ ಬಿಎಂಆರ್‌ಸಿಎಲ್ ಮಾತ್ರ ಇದಕ್ಕೂ ನಮಗೂ ಸಂಬಂಧವೇ ಇಲ್ಲವೇನೋ ಎನ್ನುವಂತೆ ಪರಿಹಾರ ಕೊಡ್ತೀವಿ, ಸರಿ ಮಾಡ್ತೀವಿ ಎನ್ನುತ್ತಿದ್ದಾರೆ. ಆದರೆ ಕಾಮಗಾರಿ ಮಾಡುವಾಗ ಏಕೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರವೇ ಸಿಗುತ್ತಿಲ್ಲ. ಟೆಂಡರ್ ಪಡೆದವರು, ಕಾಮಗಾರಿಯ ಸೈಟ್ ಎಂಜಿನಿಯರುಗಳು ಏನು ಮಾಡುತ್ತಿದ್ದಾರೆ? ಇವರು ಕೆಲಸ ಮಾಡಿಸುವಾಗ ಯಾವ ರೀತಿ ಸೇಫ್ಟಿ ಮೆಜರ್ಮೆಂಟ್ ತೆಗೆದುಕೊಳ್ಳಬೇಕು ಎನ್ನುವುದೇ ಗೊತ್ತಿಲ್ವಾ? ಈ ಎಲ್ಲಾ ಪ್ರಶ್ನೆಗಳಿಗೂ ಬಿಎಂಆರ್‌ಸಿಎಲ್ ಉತ್ತರಿಸಬೇಕಿದೆ. ಇದನ್ನೂ ಓದಿ: ಪೊಲೀಸರಿಗೂ ಕ್ಯಾರೆ ಅನ್ನದೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಡೆಡ್ಲಿ ಬೈಕ್ ರೈಡ್

    ನಾಗವಾರದ ದುರಂತವಾಗುತ್ತಿದ್ದಂತೆ ಸಿಎಂ ಕೂಡಾ ಬಿಎಂಆರ್‌ಸಿಎಲ್ ಎಂಡಿ, ಅಜುಂ ಪರ್ವೇಜ್ ಮತ್ತು ಹಿರಿಯ ಅಧಿಕಾರಿಗಳನ್ನು ಕರೆಸಿ ವಾರ್ನಿಂಗ್ ಕೂಡಾ ಕೊಟ್ಟಿದ್ದರು. ಸಿಎಂ ವಾರ್ನಿಂಗ್ ಕೊಟ್ಟಿದ್ದರೂ ಪದೇ ಪದೇ ಹೀಗೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಇನ್ನೂ ಈ ಕಿಲ್ಲರ್ ಮೆಟ್ರೋಗೆ ಅದೆಷ್ಟು ಬಲಿ ಬೇಕೋ ಗೊತ್ತಿಲ್ಲ. ಇದನ್ನೂ ಓದಿ: ಪ್ಲೀಸ್ ಮುಕ್ತಿ ಕೊಡಿಸಿ ಸರ್- ಎಮ್ಮೆಗಳ ವಿರುದ್ಧ ಅರವಿಂದ ಲಿಂಬಾವಳಿಗೆ ಟೆಕ್ಕಿಗಳಿಂದ ದೂರು!

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮೆಟ್ರೋ ಪಿಲ್ಲರ್ ದುರಂತ – ಶನಿವಾರ BMRCL ಕೈ ಸೇರಲಿದೆ IISC ವರದಿ

    ಮೆಟ್ರೋ ಪಿಲ್ಲರ್ ದುರಂತ – ಶನಿವಾರ BMRCL ಕೈ ಸೇರಲಿದೆ IISC ವರದಿ

    ಬೆಂಗಳೂರು: ಮೆಟ್ರೋ ಪಿಲ್ಲರ್ (Metro Pillar) ದುರಂತ ಆಗಿ ಒಂದು ವಾರ ಕಳೆದಿದ್ದು, ಘಟನೆ ಸಂಬಂಧ ಐಐಎಸ್‌ಸಿ (IISC) ಸಿದ್ಧವಾಗಿದೆ. ಇದರ ವರದಿ ಶನಿವಾರದೊಳಗೆ ಬಿಎಂಆರ್‌ಸಿಎಲ್ (BMRCL) ಕೈ ಸೇರಲಿದೆ.

    ಕಳೆದ ವಾರ ಮೆಟ್ರೋ ಪಿಲ್ಲರ್ ಕುಸಿದು ತಾಯಿ-ಮಗು ಸಾವನ್ನಪ್ಪಿದ ಘಟನೆ ಸಂಬಂಧ ಪ್ರಕರಣದ ತನಿಖೆ ನಡೆಸಿದ್ದ ಐಐಎಸ್‌ಸಿ ವರದಿ ಸಿದ್ಧಪಡಿಸಿದೆ. ತಜ್ಞರ ತಂಡ ಇದೇ ಶನಿವಾರ ಬಿಎಂಆರ್‌ಸಿಎಲ್‌ಗೆ ತನಿಖೆ ರೀಪೋರ್ಟ್ ಸಲ್ಲಿಸಲಿದ್ದು, ತನಿಖೆಯಲ್ಲಿ ಘಟನೆಗೆ ಕಾರಣವಾದ ಅಂಶ ಹೊರಬಿದ್ದಿದೆ.

    ಪಿಲ್ಲರ್ ದುರಂತಕ್ಕೆ ಸಂಬಂಧಪಟ್ಟಂತೆ ಐಐಎಸ್‌ಸಿ ತಜ್ಞರು ಘಟನೆ ಬಳಿಕ ಒಂದು ವಾರದಿಂದ ತನಿಖೆ ಕೈಗೊಂಡಿದ್ದರು. ಸದ್ಯ ತನಿಖೆಯಲ್ಲಿ ಗುತ್ತಿಗೆ ಕಂಪನಿ ಎನ್ಸಿಸಿ ನಿರ್ಲಕ್ಷ್ಯ ಬಟಾಬಯಲಾಗಿದೆ. ಈ ಬಗ್ಗೆ ಪಬ್ಲಿಕ್ ಟಿವಿಗೆ ಖುದ್ದು ಐಐಎಸ್‌ಸಿ ತಜ್ಞ ಚಂದ್ರ ಕಿಶನ್ ಮಾಹಿತಿ ನೀಡಿದ್ದು, ಸ್ಥಳೀಯ ಗುತ್ತಿಗೆ ಕಂಪನಿಯ ಸ್ಥಳೀಯ ಎಂಜಿನಿಯರ್‌ಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳದೆ, ಅಷ್ಟು ಎತ್ತರದ ಪಿಲ್ಲರ್ ನಿರ್ಮಾಣ ಮಾಡಿದ್ದೇ ಪಿಲ್ಲರ್ ಬೀಳಲು ಕಾರಣವಾಗಿದೆ. ಜೊತೆಗೆ ಈ ವೇಳೆ ಎಂಜಿನಿಯರ್‌ಗಳು ಕೆಲಸಗಾರರಿಗೆ ಅಗತ್ಯ ಕ್ರಮಗಳ ಬಗ್ಗೆ ಸೂಚನೆ ನೀಡಿರುವುದು ಕೂಡ ಗಮನಕ್ಕೆ ಬಂದಿದೆ. ಈ ಎಲ್ಲಾ ವಿಚಾರಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ತಜ್ಞರು ತಿಳಿಸಿದ್ದಾರೆ. ಇದನ್ನೂ ಓದಿ: ಎಂಟಿಬಿಯಿಂದ ಕವ್ವಾಲಿ ಆಯೋಜನೆ – ಹಣದ ಮಳೆ ಸುರಿಸಿದ ಮುಸ್ಲಿಂ ಮುಖಂಡರು

    ಇತ್ತ ಐಐಟಿ (IIT) ವರದಿ ಕೂಡ ಸಿದ್ಧವಾಗಿದ್ದು, ಪೊಲೀಸರ ಕೈ ಸೇರಲಿದೆ. ಕಳೆದ ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ಐಐಟಿ ತಂಡ ಹಲವು ಸ್ಯಾಂಪಲ್‌ಗಳನ್ನು ಸಂಗ್ರಹಿಸಿತ್ತು. ರಿಪೋರ್ಟ್ನಲ್ಲಿ ಘಟನೆಗೆ ಕಾರಣ, ಯಾರ ನಿರ್ಲಕ್ಷ್ಯ ಎನ್ನುವುದರ ಸಂಪೂರ್ಣ ವರದಿ ಸಿದ್ಧಪಡಿಸಿದ್ದು, ಈ ಎಲ್ಲದರ ಬಗ್ಗೆ ವರದಿಯನ್ನು ಪೂರ್ವ ವಿಭಾಗ ಡಿಸಿಪಿ ಭೀಮಾಶಂಕರ್ ಗುಳೇದ್‌ಗೆ ನೀಡಲಿದ್ದಾರೆ. ಇದನ್ನೂ ಓದಿ: ಜೋಡೋ ಯಾತ್ರೆ ವೇಳೆ ಭದ್ರತಾ ಲೋಪ – ರಾಗಾ ಅಪ್ಪಿಕೊಳ್ಳಲು ಓಡಿದ ವ್ಯಕ್ತಿ

    ಒಟ್ಟಾರೆ 2 ವರದಿಗಳು ಶನಿವಾರದೊಳಗೆ ಬಿಎಂಆರ್‌ಸಿಎಲ್ ಕೈ ಸೇರಲಿದೆ. ಬಳಿಕ ಘಟನೆಗೆ ಕಾರಣ ಏನು ಎನ್ನುವುದು ಕೂಡ ಸ್ಪಷ್ಟವಾಗಿ ತಿಳಿದು ಬರಲಿದೆ. ಆದರೆ ಬಳಿಕ ಬಿಎಂಆರ್‌ಸಿಎಲ್ ತಪ್ಪಿತಸ್ಥರ ವಿರುದ್ಧ ಏನು ಕ್ರಮ ಕೈಗೊಳ್ಳಲಿದೆ ಅನ್ನೋದನ್ನು ಕಾದು ನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮೆಟ್ರೋ ಪಿಲ್ಲರ್‌ ಕುಸಿದು ತಾಯಿ, ಮಗು ಸಾವು ಕೇಸ್ – ಹೈಕೋರ್ಟ್‌ನಿಂದ ಸ್ವಯಂಪ್ರೇರಿತ ಪ್ರಕರಣ ದಾಖಲು

    ಮೆಟ್ರೋ ಪಿಲ್ಲರ್‌ ಕುಸಿದು ತಾಯಿ, ಮಗು ಸಾವು ಕೇಸ್ – ಹೈಕೋರ್ಟ್‌ನಿಂದ ಸ್ವಯಂಪ್ರೇರಿತ ಪ್ರಕರಣ ದಾಖಲು

    ಬೆಂಗಳೂರು: ಮೆಟ್ರೋ ಪಿಲ್ಲರ್‌ ಕುಸಿದು (Bengaluru Metro Pillar Collapse) ತಾಯಿ, ಮಗು ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ (Karnataka High Court) ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ. ಆ ಮೂಲಕ ರಾಜ್ಯ ಸರ್ಕಾರ, ಬಿಎಂಆರ್‌ಸಿಎಲ್‌ಗೆ (BMRCL) ಕೋರ್ಟ್‌ ಮಾಸ್ಟರ್‌ ಸ್ಟ್ರೋಕ್‌ ಕೊಟ್ಟಿದೆ.

    ಮಾಧ್ಯಮಗಳ ಸುದ್ದಿ ಆಧರಿಸಿ ಹೈಕೋರ್ಟ್‌ ಸ್ವಯಂಪ್ರೇರಿತ ಕೇಸ್‌ ದಾಖಲಿಸಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ಯಾವೆಲ್ಲಾ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿದೆ? ಮುಂಜಾಗ್ರತಾ ಕ್ರಮದ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆಯೇ ಎಂಬ ಬಗ್ಗೆ ರಿಟ್‌ ಅರ್ಜಿ ಸಲ್ಲಿಸಲು ರಿಜಿಸ್ಟರ್‌ ಜನರಲ್‌ಗೆ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಮೆಟ್ರೋ ದುರಂತ: ತನಿಖೆ ನಡೆಸಿ ವರದಿ ಸಲ್ಲಿಸಿಲು ಐಐಎಸ್‍ಸಿಗೆ ಮನವಿ – ಮತ್ತಷ್ಟು ಅಧಿಕಾರಿಗಳ ತಲೆದಂಡ ಸಾಧ್ಯತೆ

    karnataka highcourt

    ಘಟನೆಯೇನು?: ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿದು ತಾಯಿ, ಮಗು ಸಾವನ್ನಪ್ಪಿದ ದಾರುಣ ಘಟನೆ ಬೆಂಗಳೂರಿನ (Bengaluru) ನಾಗವಾರ ರಿಂಗ್ ರಸ್ತೆಯ ಹೆಚ್‍ಬಿಆರ್ ಲೇಔಟ್‍ನಲ್ಲಿ ನಡೆದಿತ್ತು. ಬೆಳಗ್ಗೆ 10:30ರ ಸುಮಾರಿನಲ್ಲಿ ಗದಗ ಮೂಲದ ಸಿವಿಲ್ ಎಂಜಿನಿಯರ್ ಲೋಹಿತ್, ಪತ್ನಿ ಮತ್ತು ಇಬ್ಬರು ಅವಳಿ ಮಕ್ಕಳ ಸಮೇತ ಮನೆಯಿಂದ ಹೊರಟಿದ್ದರು. ಪತ್ನಿಯನ್ನು ಕೆಲಸಕ್ಕೆ, ಇಬ್ಬರು ಮಕ್ಕಳನ್ನು ಡೇ ಕೇರ್‌ನಲ್ಲಿ ಬಿಡಲು ಮಾನ್ಯತಾ ಟೆಕ್‍ಪಾರ್ಕ್ ಕಡೆ ಲೋಹಿತ್ ತೆರಳುತ್ತಿದ್ದಾಗ ಹೆಣ್ಣೂರು ಬಳಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ದಿಢೀರ್ ಎಂದು ಕುಸಿದಿತ್ತು.

    ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಬಿಎಂಆರ್‌ಸಿಎಲ್‌ನಿಂದ 20 ಲಕ್ಷ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 10 ಲಕ್ಷ ರೂ. ಪರಿಹಾರ ಘೋಷಿಸಿದರು. ಅಲ್ಲದೇ ಮೆಟ್ರೋ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಿರ್ಮಾಣ ಹಂತದಲ್ಲಿರುವ ಮೆಟ್ರೋ ಪಿಲ್ಲರ್ ಕುಸಿದಿದೆ ಎಂಬ ಆರೋಪ ಕೇಳಿಬಂದಿದ್ದರಿಂದ ಮೂವರು ಎಂಜಿನಿಯರ್‌ಗಳನ್ನು ಅಮಾನತು ಮಾಡಲಾಯಿತು. ಜೊತೆಗೆ ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್‌ ದಾಖಲಿಸುವಂತೆ ಸಿಎಂ ಸೂಚನೆ ನೀಡಿದ್ದರು. ಇದನ್ನೂ ಓದಿ: ಡೆಡ್ಲಿ ಮೆಟ್ರೋಗೆ ಇಬ್ಬರು ಬಲಿ – ಪಿಲ್ಲರ್ ದುರಂತಕ್ಕೆ ಕಾರಣಗಳೇನು?

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮೆಟ್ರೋ ಸುರಂಗ ಕಾಮಗಾರಿ – ಬೈಕಿನಲ್ಲಿ ತೆರಳುತ್ತಿದ್ದಾಗ ದಿಢೀರ್ ಕುಸಿದ ರಸ್ತೆ

    ಮೆಟ್ರೋ ಸುರಂಗ ಕಾಮಗಾರಿ – ಬೈಕಿನಲ್ಲಿ ತೆರಳುತ್ತಿದ್ದಾಗ ದಿಢೀರ್ ಕುಸಿದ ರಸ್ತೆ

    ಬೆಂಗಳೂರು: ನಾಗಾವರದ ಮೆಟ್ರೋ ಪಿಲ್ಲರ್ (Metro Pillar) ದುರಂತದ ಬೆನ್ನಲ್ಲೇ ಮೆಟ್ರೋ (Namma Metro) ಸುರಂಗಮಾರ್ಗ ಕಾಮಗಾರಿ ನಡೆಯುತ್ತಿದ್ದ ಜಾಗದಲ್ಲಿ ಆಳವಾಗಿ ರಸ್ತೆ ಕುಸಿದು ಇಬ್ಬರು ಸವಾರರು ಗಾಯಗೊಂಡಿದ್ದಾರೆ.

    ಹೌದು. ಬ್ರಿಗೇಡ್ ರಸ್ತೆಯ ಬಳಿ ಟ್ರಿನಿಟಿ ಸರ್ಕಲ್ ನಿಂದ ಶಿವಾಜಿನಗರದ ವರೆಗೆ ಮೆಟ್ರೊ ಕಾಮಗಾರಿ ನಡೆಯುತ್ತಿದೆ. ಶಿವಾಜಿನಗರದಿಂದ 2ನೇ ಹಂತದಲ್ಲಿ ಮೆಟ್ರೋ ಸುರಂಗ ಮಾರ್ಗ ಕಾಮಗಾರಿ ನಡೆಯುತ್ತಿದ್ದು, ಮಧ್ಯಭಾಗದಲ್ಲೇ ರಸ್ತೆ ಆಳವಾಗಿ ಕುಸಿದಿದೆ. ಸದ್ಯ ಸ್ಥಳಕ್ಕೆ ದೌಡಾಯಿಸಿರುವ ಪೊಲೀಸರು ರಸ್ತೆ ಸಂಪೂರ್ಣ ಬಂದ್ ಮಾಡಿದ್ದಾರೆ. ಸಾರ್ವಜನಿಕರ ಸಂಚಾರಕ್ಕೆ ಪರ್ಯಾಯ ಮಾರ್ಗ ಕಲ್ಪಿಸಿದ್ದಾರೆ. ಇದನ್ನೂ ಓದಿ: ಶಾಸಕ ಶಿವಲಿಂಗೇಗೌಡ ಕಾಂಗ್ರೆಸ್ ಸೇರ್ಪಡೆ ಖಚಿತ: ಧ್ರುವನಾರಾಯಣ್

    ಸದ್ಯ ರಸ್ತೆ ದುರಸ್ತಿಗೆ ಕ್ರಮ ಕೈಗೊಂಡಿರುವ ಬಿಎಂಆರ್‌ಸಿಎಲ್ (BMRCL), ರಿಚ್ಮಂಡ್ ಸರ್ಕಲ್ ಮೂಲಕ ಪರ್ಯಾಯ ಮಾರ್ಗ ಕಲ್ಪಿಸಿದೆ. ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಬಿಎಂಆರ್‌ಸಿಎಲ್ ಕ್ಲಿಯರೆನ್ಸ್ ಕೊಡುವವರೆಗೆ ನಾವು ಸಂಚಾರ ಮುಕ್ತ ಮಾಡಲ್ಲ ಎಂದು ಹೇಳಿದೆ.

    ಜನಾಕ್ರೋಶ: ಬಿಎಂಆರ್‌ಸಿಎಲ್ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಕೆಲಸ ಮಾಡುವ ಸಂಸ್ಥೆ ಎಂದು ಹೇಳ್ತಾರೆ, ಆದ್ರೆ ಜನರ ಜೀವಕ್ಕೆ ಕಂಟಕವಾಗ್ತಾ ಇದೆ. ಜೀವ ಹೋದ್ರೆ ಯಾರು ಹೊಣೆ ಅಂತಾ ಸಾರ್ವಜನಿಕರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. ಇಬ್ಬರು ದ್ವಿಚಕ್ರ ವಾಹನ ಸವಾರರು ಸಾವಿನ ದವಡೆಯಿಂದ ಪಾರಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

    ಅಲ್ಲದೇ ಸಾಕಷ್ಟು ಜನ ದ್ವಿಚಕ್ರವಾಹನ ಸವಾರರು ಇಲ್ಲಿ ಹಾದು ಹೋದಾಗ ಜಂಪ್ ಆಗ್ತಾ ಇತ್ತು. ಮಹಿಳೆಯೊಬ್ಬರ ಹೆಲ್ಮೆಟ್ ಕೂಡ ಕೆಳಗೆ ಬಿದ್ದಿತ್ತು. ಆಮೇಲೆ ನಿಧಾನವಾಗಿ ರಸ್ತೆ ಕುಸಿತವಾಗ್ತಿತ್ತು. ಇದೇ ಸ್ಥಳದಲ್ಲಿ ವ್ಯಕ್ತಿಯೊಬ್ಬರು ಕುಸಿದು ಬಿದ್ದು, ಗಾಯಗೊಂಡರು ಎಂಬುದಾಗಿಯೂ ಪ್ರತ್ಯಕ್ಷದರ್ಶಿಗಳು ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಬಿಹಾರ ಶಿಕ್ಷಣ ಸಚಿವರ ನಾಲಿಗೆ ತಂದವರಿಗೆ 10 ಕೋಟಿ ಬಹುಮಾನ – ಅಯೋಧ್ಯೆ ಸ್ವಾಮೀಜಿ

    ಎರಡು ದಿನಗಳ ಹಿಂದೆಯಷ್ಟೇ ನಾಗಾವರದ ಮೆಟ್ರೋ ಪಿಲ್ಲರ್ ಕುಸಿದು ತಾಯಿ ಮಗು ಸಾವನ್ನಪ್ಪಿದ್ದರು. ಪ್ರಕರಣದಲ್ಲಿ ಮತ್ತೊಂದು ಮಗು ಹಾಗೂ ತಂದೆ ಲೋಹಿತ್ ಪಾರಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಎಂಜಿನಿಯರ್‌ಗಳನ್ನು ಅಮಾನತುಗೊಳಿಸಿ ಬಿಎಂಆರ್‌ಸಿಎಲ್ ಆದೇಶ ಹೊರಡಿಸಿದೆ. ಅಲ್ಲದೇ ಮೂರು ದಿನಗಳಲ್ಲಿ ಗುತ್ತಿಗೆದಾರರಿಂದ ಸಂಪೂರ್ಣ ವರದಿಯನ್ನು ಕೇಳಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮೆಟ್ರೋ ಪಿಲ್ಲರ್‌ ಕುಸಿದು ತಾಯಿ, ಮಗು ಸಾವು ಪ್ರಕರಣ – ಮೂವರು ಎಂಜಿನಿಯರ್‌ ಅಮಾನತು

    ಮೆಟ್ರೋ ಪಿಲ್ಲರ್‌ ಕುಸಿದು ತಾಯಿ, ಮಗು ಸಾವು ಪ್ರಕರಣ – ಮೂವರು ಎಂಜಿನಿಯರ್‌ ಅಮಾನತು

    ಬೆಂಗಳೂರು: ಮೆಟ್ರೋ ಪಿಲ್ಲರ್‌ ಕುಸಿದು (Metro Pilllar Collapse) ತಾಯಿ, ಮಗು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಎಂಜಿನಿಯರ್‌ಗಳನ್ನು ಅಮಾನತುಗೊಳಿಸಿ ಬಿಎಂಆರ್‌ಸಿಎಲ್‌ (BMRCL) ಆದೇಶ ಹೊರಡಿಸಿದೆ.

    ನಿರ್ಲಕ್ಷ್ಯ ವಹಿಸಿದ ಆರೋಪದ ಮೇಲೆ ಮೆಟ್ರೋ ಡೆಪ್ಯುಟಿ ಚೀಫ್ ಎಂಜಿನಿಯರ್‌, ಎಕ್ಸಿಕ್ಯೂಟಿವ್ ಎಂಜಿನಿಯರ್, ಸೆಕ್ಷನ್ ಎಂಜಿನಿಯರ್ ಅಮಾನತುಗೊಳಿಸಿ  ಆದೇಶಿಸಲಾಗಿದೆ ಎಂದು ಬಿಎಂಆರ್‌ಸಿಎಲ್‌ ಎಂಡಿ ಅಂಜುಂ ಫರ್ವೇಜ್‌ ತಿಳಿಸಿದ್ದಾರೆ. ಇದನ್ನೂ ಓದಿ: ದಾವಣಗೆರೆಗೆ ಬಂದ ಮೃತ ತೇಜಸ್ವಿನಿ, ಪುತ್ರನ ಶವ- ತಾಯಿ, ಮಗುವಿನ ಪ್ರತ್ಯೇಕ ಅಂತ್ಯಸಂಸ್ಕಾರ

    ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಮೆಟ್ರೋ ನಿಗಮ, ಎನ್‌ಸಿಸಿ ಕಂಪನಿಗೆ ನೋಟಿಸ್ ಮೇಲೆ ನೋಟಿಸ್ ನೀಡುತ್ತಿದೆ. ಮಂಗಳವಾರ ದುರಂತದ ಬಳಿಕ ಮೆಟ್ರೋ ಚೀಫ್ ಎಂಜಿನಿಯರ್‌ರಿಂದ ಎನ್‌ಸಿಸಿ ಕಂಪನಿಗೆ ನೋಟಿಸ್ ನೀಡಲಾಗಿದೆ. ಬುಧವಾರ ಮೆಟ್ರೋ ನಿರ್ದೇಶಕರಿಂದ ಎನ್‌ಸಿಸಿ ಆಡಳಿತ ವಿಭಾಗಕ್ಕೆ ಮತ್ತೊಂದು ನೋಟಿಸ್ ಬಂದಿದೆ. ಮೂರು ದಿನಗಳ ಒಳಗೆ ಸಂಪೂರ್ಣ ವರದಿ ನೀಡುವಂತೆ ಸೂಚಿಸಲಾಗಿದೆ.

    ಎನ್‌ಸಿಸಿ ಕಂಪನಿಯ ಮೇಲೆ ಈಗಾಗಲೇ ಕ್ರಿಮಿನಲ್ ಕೇಸ್ ದಾಖಲಾಗಿದ್ದು, ಪೋಲಿಸರು ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ಅಂಜುಂ ಫರ್ವೇಜ್‌ ಹೇಳಿದ್ದಾರೆ. ಇದನ್ನೂ ಓದಿ: ಪತ್ನಿ, ಮಗನ ಸಾವಿಗೆ ಕಾರಣರಾದವ್ರ ವಿರುದ್ಧ ಕ್ರಮಕ್ಕೆ ಲೋಹಿತ್ ದೂರು- ಎಫ್‍ಐಆರ್

    ಬೆಂಗಳೂರು ಮೆಟ್ರೋ ಕಾಮಗಾರಿ ದುರಂತ ಪ್ರಕರಣವು ಕೇಂದ್ರದ ಅಂಗಳ ತಲುಪಿದೆ. ಪ್ರಕರಣ ಸಂಬಂಧ ವರದಿ ನೀಡುವಂತೆ ಕೇಂದ್ರ ನಗರಾಭಿವೃದ್ಧಿ ಇಲಾಖೆ ಕೇಳಿದೆ. ಅಂಜುಂ ಫರ್ವೇಜ್‌ಗೆ ಕರೆ ಮಾಡಿ ವರದಿ ಕೇಳಿದೆ. ಎರಡು ದಿನಗಳಲ್ಲಿ ವರದಿ ನೀಡುವುದಾಗಿ ಮೆಟ್ರೋ ನಿಗಮ ತಿಳಿಸಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪತ್ನಿ, ಮಗನ ಸಾವಿಗೆ ಕಾರಣರಾದವ್ರ ವಿರುದ್ಧ ಕ್ರಮಕ್ಕೆ ಲೋಹಿತ್ ದೂರು- ಎಫ್‍ಐಆರ್

    ಪತ್ನಿ, ಮಗನ ಸಾವಿಗೆ ಕಾರಣರಾದವ್ರ ವಿರುದ್ಧ ಕ್ರಮಕ್ಕೆ ಲೋಹಿತ್ ದೂರು- ಎಫ್‍ಐಆರ್

    ಬೆಂಗಳೂರು: ಹೆಣ್ಣೂರಿನ ಎಚ್‍ಬಿಆರ್ ಲೇಔಟ್ (HBR Lay Out) ಬಳಿ ಮಂಗಳವಾರ ನಡೆದ ಮೆಟ್ರೋ ಪಿಲ್ಲರ್ ದುರಂತಕ್ಕೆ ಸಂಬಂಧಿಸಿದಂತೆ ಪತ್ನಿ, ಮಗನ ಸಾವಿಗೆ ಕಾರಣರಾದವರ ವಿರುದ್ಧ ಕ್ರಮಕ್ಕೆ ಪತಿ ಲೋಹಿತ್ (Lohith) ದೂರು ನೀಡಿದ್ದಾರೆ. ಕಿಲ್ಲರ್ ಪಿಲ್ಲರ್ ಮಹಾದುರಂತದ ಬಗ್ಗೆ ವಿವರಣಾತ್ಮಕ ದೂರು ನೀಡಿದ್ದು, ಗೋವಿಂದಪುರ ಠಾಣೆ (Govindapura Police Station) ಯ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ.

    ಲೋಹಿತ್ ಪೊಲೀಸರಿಗೆ ಕೊಟ್ಟಿರೋ ದೂರಿನ ಸಾರಾಂಶ: ನನಗೆ ಇಬ್ಬರು ಮಕ್ಕಳಿದ್ದು ಹೆಂತಿ ಮಕ್ಕಳ ಜೊತೆ ಹೊರ ಮಾವು ಕಲ್ಕರೆಯಲ್ಲಿರೋ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿದ್ದೀನಿ. ವೃತ್ತಿಯಲ್ಲಿ ನಾನು ನನ್ನ ಹೆಂಡತಿ ಸಿವಿಲ್ ಎಂಜಿನಿಯರಿಂಗ್ ಆಗಿ ಕೆಲಸ ಮಾಡಿಕೊಂಡಿರುತ್ತೇವೆ. ನಮಗೆ 2 ವರ್ಷ ಆರು ತಿಂಗಳ ಸುಶ್ಮಿತಾ ಹಾಗೂ ವಿಹಾನ್ ಎಂಬ ಇಬ್ಬರು ಮಕ್ಕಳಿದ್ದಾರೆ. ಇಬ್ಬರು ಕೆಲಸಕ್ಕೆ ಹೋಗುವ ಮುನ್ನ ಇಬ್ಬರು ಮಕ್ಕಳನ್ನು ಮಾನ್ಯತಾ ಟೆಕ್ ಪಾರ್ಕ್ ನಲ್ಲಿರುವ ಬೇಬಿ ಸಿಟ್ಟಿಂಗ್ ನಲ್ಲಿ ಬಿಟ್ಟು ಕೆಲಸಕ್ಕೆ ಹೋಗ್ತಾ ಇರುತ್ತೇವೆ.

    ಪ್ರತಿ ದಿನದಂತೆ ಮಂಗಳವಾರವೂ ಹೀರೋ ಹೊಂಡಾ ಗ್ಲಾಮರ್ ಗಾಡಿಯಲ್ಲಿ ಬೇಬಿ ಸಿಟ್ಟಿಂಗ್ ಗೆ ಮಕ್ಕಳನ್ನ ಬಿಟ್ಟು ಪತ್ನಿ ತೇಜಸ್ವಿನಿಯನ್ನು ಅಲ್ಲಿಯೇ ಕೆಲಸಕ್ಕೆ ಬಿಟ್ಟು ಹೋಗಲಿಕ್ಕೆ ಹೋಗುತ್ತಾ ಇದ್ದೆ. ಬೆಳಗ್ಗೆ 10 ಗಂಟೆಗೆ ಮನೆ ಬಿಟ್ಟು ಹೆಣ್ಣೂರು ಕ್ರಾಸ್ ಕಡೆಯಿಂದ ಮಾನ್ಯತಾ ಟೆಕ್ ಪಾರ್ಕ್ ಕಡೆ ಹೋಗುತ್ತಿದ್ದೆ. ನಾನು ವಾಹನ ಚಾಲನೆ ಮಾಡುತ್ತಿದ್ದರಿಂದ ಹಿಂದೆ ಮಗಳು, ಮಗ ಹಾಗೂ ಪತ್ನಿ ಕುತಿರುತ್ತಾರೆ. ಇದನ್ನೂ ಓದಿ: ದಾವಣಗೆರೆಗೆ ಬಂದ ಮೃತ ತೇಜಸ್ವಿನಿ, ಪುತ್ರನ ಶವ- ತಾಯಿ, ಮಗುವಿನ ಪ್ರತ್ಯೇಕ ಅಂತ್ಯಸಂಸ್ಕಾರ

    ಹೆಚ್ ಬಿ ಆರ್ ಲೇಔಟ್ ಆಕ್ಸಿಸ್ ಬ್ಯಾಂಕ್ ಬಳಿ ನಾವು ಬಂದಾಗ ಮೆಟ್ರೋ ಪಿಲ್ಲರ್ (Metro Pillar) ಒಮ್ಮೆಲೆ ನಮ್ಮ ಮೇಲೆ ಬಿದ್ದಿದೆ. ಘಟನೆಯಲ್ಲಿ ನನ್ನ ಪತ್ನಿ ತೇಜಸ್ವಿನಿ ಹಾಗೂ ಮಗ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಕೂಡಲೇ ಸ್ಥಳೀಯರ ಸಾಹದಿಂದ ಪಕ್ಕದಲ್ಲಿದ್ದ ಆಸ್ಪತ್ರೆ ದಾಖಲಿಸಲಾಯ್ತು. ಮಗ ಮತ್ತು ಪತ್ನಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದರು. ಹಾಗಾಗಿ ಘಟನೆಗೆ ಕಾರಣರಾದ ಸೈಟ್ ಎಂಜಿನಿಯರ್ಸ್ ಹಾಗೂ ಬಿಎಂಆರ್ಸಿಎಲ್ ಅಧಿಕಾರಿಗಳು, ಮೆಟ್ರೋ ಕಾಮಾಗಾರಿಯ ಗುತ್ತಿಗೆದಾರರ ವಿರುದ್ಧ ಕ್ರಮ ಜರಗಿಸುವಂತೆ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ದಾವಣಗೆರೆಗೆ ಬಂದ ಮೃತ ತೇಜಸ್ವಿನಿ, ಪುತ್ರನ ಶವ- ತಾಯಿ, ಮಗುವಿನ ಪ್ರತ್ಯೇಕ ಅಂತ್ಯಸಂಸ್ಕಾರ

    ದಾವಣಗೆರೆಗೆ ಬಂದ ಮೃತ ತೇಜಸ್ವಿನಿ, ಪುತ್ರನ ಶವ- ತಾಯಿ, ಮಗುವಿನ ಪ್ರತ್ಯೇಕ ಅಂತ್ಯಸಂಸ್ಕಾರ

    ದಾವಣಗೆರೆ: ಸಿಲಿಕಾನ್ ಸಿಟಿಯಲ್ಲಿ ಮಂಗಳವಾರ ಮೆಟ್ರೋ ಕಾಮಗಾರಿಗೆ ಬಲಿಯಾದ ತಾಯಿ- ಮಗುವಿನ ಮೃತದೇಹ ದಾವಣಗೆರೆಗೆ ತಲುಪಿದ್ದು, ಬುಧವಾರ ಅಂತ್ಯಸಂಸ್ಕಾರ (Funeral) ನಡೆಯಲಿದೆ.

    ದಾವಣಗೆರೆ ನಗರದ ಕುಂದವಾಡ ರಸ್ತೆಯ ಬಸವೇಶ್ವರ ನಗರದ ತೇಜಸ್ವಿನಿ (Tejaswini) ತಂದೆ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ತಾಯಿ-ಮಗುವಿನ ಅಂತ್ಯಸಂಸ್ಕಾರವನ್ನು ಕುಟುಂಬಸ್ಥರು ಪ್ರತ್ಯೇಕವಾಗಿ ಮಾಡಲಿದ್ದಾರೆ. ಇದನ್ನೂ ಓದಿ: ಮೆಟ್ರೋ ಎಂಜಿನಿಯರ್ ಸಸ್ಪೆಂಡ್, ಕಂಟ್ರಾಕ್ಟರ್ ಮೇಲೆ ಕ್ರಿಮಿನಲ್ ಕೇಸ್ – ಸಿಎಂ ಸೂಚನೆ

    10.30ಕ್ಕೆ ದಾವಣಗೆರೆ ನಗರದ ಹಳೇ ಪಿಬಿ ರಸ್ತೆಯಲ್ಲಿ ವೈಕುಂಠಧಾಮದಲ್ಲಿ ಅಗ್ನಿ ಸ್ಪರ್ಶದೊಂದಿಗೆ ತೇಜಸ್ವಿನಿ ಅಂತ್ಯಸಂಸ್ಕಾರ ನಡೆಯಲಿದೆ. ಮಗುವಿನ ಶವಸಂಸ್ಕಾರ ದಾವಣಗೆರೆ ನಗರದ ಬಾಟಲಿ ಬಿಲ್ಡಂಗ್ ಹಿಂಭಾಗದ ಸ್ಮಶಾನದಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಡೆಡ್ಲಿ ಮೆಟ್ರೋಗೆ ಇಬ್ಬರು ಬಲಿ – ಪಿಲ್ಲರ್ ದುರಂತಕ್ಕೆ ಕಾರಣಗಳೇನು?

    ನಡೆದಿದ್ದೇನು..?: ಮಂಗಳವಾರ ಬೆಳಗ್ಗೆ 10:30ರ ವೇಳೆಗೆ ಗದಗ ಮೂಲದ ಸಿವಿಲ್ ಎಂಜಿನಿಯರ್ ಲೋಹಿತ್, ಪತ್ನಿ ಮತ್ತು ಅವಳಿ ಮಕ್ಕಳೊಂದಿಗೆ ಮನೆಯಿಂದ ಹೊರಟಿದ್ದರು. ಈ ವೇಳೆ ಹೆಣ್ಣೂರು ಬಳಿ ಲೋಹಿತ್ ಕುಟುಂಬವಿದ್ದ ಬೈಕ್ ಮೇಲೆ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ (Metro Pillar) ದಿಢೀರ್ ಎಂದು ಕುಸಿದಿದೆ.

    ಘಟನೆಯಲ್ಲಿ 35 ವರ್ಷದ ತೇಜಸ್ವಿನಿ, ಎರಡೂವರೆ ವರ್ಷದ ಮಗು ವಿಹಾನ್ ಸಾವನ್ನಪ್ಪಿದ್ದಾರೆ. ಸಣ್ಣಪುಟ್ಟ ಗಾಯಗಳೊಂದಿಗೆ ಲೋಹಿತ್ ಮತ್ತು ಅವರ ಎರಡೂವರೆ ವರ್ಷದ ಮಗಳು ವಿಸ್ಮಿತಾ ಬದುಕುಳಿದಿದ್ದಾರೆ. ದುರಂತಕ್ಕೆ ಕಳಪೆ ಕಾಮಗಾರಿಯೇ ಕಾರಣ ಎಂಬ ಆರೋಪ ಕೇಳಿಬಂದಿದ್ದು, ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಮೆಟ್ರೋ ತಜ್ಞರು ಮೆಟ್ರೋ ಪಿಲ್ಲರ್ ಕುಸಿತಕ್ಕೆ ಕಾರಣಗಳೇನು ಎಂಬ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮೆಟ್ರೋ ಎಂಜಿನಿಯರ್ ಸಸ್ಪೆಂಡ್, ಕಂಟ್ರಾಕ್ಟರ್ ಮೇಲೆ ಕ್ರಿಮಿನಲ್ ಕೇಸ್ – ಸಿಎಂ ಸೂಚನೆ

    ಮೆಟ್ರೋ ಎಂಜಿನಿಯರ್ ಸಸ್ಪೆಂಡ್, ಕಂಟ್ರಾಕ್ಟರ್ ಮೇಲೆ ಕ್ರಿಮಿನಲ್ ಕೇಸ್ – ಸಿಎಂ ಸೂಚನೆ

    ಬೆಂಗಳೂರು: ನಗರದಲ್ಲಿ ನಿರ್ಮಾಣ ಹಂತದ ನಮ್ಮ ಮೆಟ್ರೋ ಪಿಲ್ಲರ್ (Metro Pillar) ಕುಸಿದು ಬಿದ್ದು, ತಾಯಿ ಮಗು ಸಾವನ್ನಪ್ಪಿರುವ ಘಟನೆ ಬೆಂಗಳೂರಿಗರನ್ನು (Bengaluru) ತಲ್ಲಣಗೊಳಿಸಿದೆ. ಘಟನೆ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಆಘಾತ ವ್ಯಕ್ತಪಡಿಸಿದ್ದಲ್ಲದೇ ತುರ್ತು ಸಭೆ ನಡೆಸಿ ದುರಂತಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಲು ಆದೇಶಿಸಿದ್ದಾರೆ.

    ಮಂಗಳವಾರ ಸಿಎಂ ಗೃಹ ಕಚೇರಿಯಲ್ಲಿ ಬೊಮ್ಮಾಯಿ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಹಾಗೂ ಡಿಸಿಪಿಯೊಂದಿಗೆ ಸಭೆ ನಡೆಸಿದ್ದಾರೆ. ಮೆಟ್ರೋ ಅಧಿಕಾರಿಗಳಿಂದ ಘಟನೆ ಬಗ್ಗೆ ಮಾಹಿತಿ ಪಡೆದಿದ್ದು, ಕಾಮಗಾರಿಯ ಕಾಂಟ್ರಾಕ್ಟರ್ ಹಾಗೂ ಎಂಜಿನಿಯರ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು ಮಾಡಲು ಸೂಚನೆ ನೀಡಿದ್ದಾರೆ.

    ಸಭೆ ಬಳಿಕ ಮಾತನಾಡಿದ ಬೊಮ್ಮಾಯಿ, ಮೆಟ್ರೋ ಪಿಲ್ಲರ್ ಕುಸಿತಕ್ಕೆ ಸಂಬಂಧಪಟ್ಟಂತೆ ತಪ್ಪಿತಸ್ಥರ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಲು ತಿಳಿಸಿದ್ದೇನೆ. ಕಾಂಟ್ರಾಕ್ಟರ್ ಹಾಗೂ ಕಂಪನಿಯವರ ಮೇಲೆ ಕೇಸ್ ದಾಖಲಿಸಲು ಸೂಚಿಸಿದ್ದೇನೆ. ಜೊತೆಗೆ ಕಾಮಗಾರಿ ಎಂಜಿನಿಯರ್‌ನನ್ನು ಅಮಾನತು ಮಾಡಲು ಆದೇಶಿಸಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ಡೆಡ್ಲಿ ಮೆಟ್ರೋಗೆ ಇಬ್ಬರು ಬಲಿ – ಪಿಲ್ಲರ್ ದುರಂತಕ್ಕೆ ಕಾರಣಗಳೇನು?

    ದುರ್ಘಟನೆಗೆ ಸಂಬಂಧಿಸಿದಂತ ತನಿಖೆಯನ್ನು ಯಾವ ರೀತಿ ಮಾಡಬೇಕು ಎಂಬುದನ್ನು ಬುಧವಾರ ತೀರ್ಮಾನ ಮಾಡಲಾಗುವುದು. ಸದ್ಯ ಮೆಟ್ರೋ ಕಡೆಯವರಿಂದ ಮೃತರ ಕುಟುಂಬಕ್ಕೆ 20 ಲಕ್ಷ ರೂ. ಪರಿಹಾರ ನೀಡಲಾಗುತ್ತಿದ್ದು, ನಮ್ಮ ಕಡೆಯಿಂದ 10 ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ ಎಂದು ತಿಳಿಸಿದರು.

    ಇಲ್ಲಿ ಪರಿಹಾರ ಮುಖ್ಯವಲ್ಲ. ಈ ಘಟನೆಗೆ ಕಾರಣ ಯಾರು? ಸಮಸ್ಯೆ ಏನಾಗಿತ್ತು ಎನ್ನುವುದನ್ನು ಪತ್ತೆ ಹಚ್ಚಿ ಕ್ರಮ ತೆಗೆದುಕೊಳ್ಳಬೇಕು. ಕೂಡಲೇ ತನಿಖೆಗೆ ಆದೇಶಿಸಲಾಗಿದ್ದು, ಈ ರೀತಿಯ ಘಟನೆಗಳು ಮತ್ತೆ ನಡೆಯದಂತೆ ಸೂಚಿಸಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ: ಮೆಟ್ರೋ ಪಿಲ್ಲರ್ ಕುಸಿತ – ಮೃತರ ಕುಟುಂಬಕ್ಕೆ 20 ಲಕ್ಷ ಪರಿಹಾರ : BMRCL

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಡೆಡ್ಲಿ ಮೆಟ್ರೋಗೆ ಇಬ್ಬರು ಬಲಿ – ಪಿಲ್ಲರ್ ದುರಂತಕ್ಕೆ ಕಾರಣಗಳೇನು?

    ಡೆಡ್ಲಿ ಮೆಟ್ರೋಗೆ ಇಬ್ಬರು ಬಲಿ – ಪಿಲ್ಲರ್ ದುರಂತಕ್ಕೆ ಕಾರಣಗಳೇನು?

    ಬೆಂಗಳೂರು: ಇಷ್ಟು ದಿನ ಬೆಂಗಳೂರಲ್ಲಿ (Bengaluru) ರಸ್ತೆ ಗುಂಡಿಗಳಷ್ಟೇ ಜನರನ್ನು ಬಲಿ ಪಡೆಯುತ್ತಿದ್ದವು. ಇದೀಗ ಇದಕ್ಕೆ ಮತ್ತೊಂದು ಸೇರ್ಪಡೆ ಆಗಿದ್ದು ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ (Metro Pillar) ಕುಸಿದು ತಾಯಿ, ಮಗು ಸಾವನ್ನಪ್ಪಿದ ದಾರುಣ ಘಟನೆ ನಾಗವಾರ ರಿಂಗ್ ರಸ್ತೆಯಲ್ಲಿ ನಡೆದಿದೆ.

    ಮಂಗಳವಾರ ಬೆಳಗ್ಗೆ 10:30ರ ವೇಳೆಗೆ ಗದಗ ಮೂಲದ ಸಿವಿಲ್ ಎಂಜಿನಿಯರ್ ಲೋಹಿತ್, ಪತ್ನಿ ಮತ್ತು ಅವಳಿ ಮಕ್ಕಳೊಂದಿಗೆ ಮನೆಯಿಂದ ಹೊರಟಿದ್ದರು. ಈ ವೇಳೆ ಹೆಣ್ಣೂರು ಬಳಿ ಲೋಹಿತ್ ಕುಟುಂಬವಿದ್ದ ಬೈಕ್ ಮೇಲೆ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ದಿಢೀರ್ ಎಂದು ಕುಸಿದಿದೆ. ಇದನ್ನೂ ಓದಿ: Top Performing Airports 2022 – ವಿಶ್ವದಲ್ಲೇ ಬೆಂಗಳೂರು ನಂ.2

    ಘಟನೆಯಲ್ಲಿ 35 ವರ್ಷದ ತೇಜಸ್ವಿನಿ, ಎರಡೂವರೆ ವರ್ಷದ ಮಗು ವಿಹಾನ್ ಸಾವನ್ನಪ್ಪಿದ್ದಾರೆ. ಸಣ್ಣಪುಟ್ಟ ಗಾಯಗಳೊಂದಿಗೆ ಲೋಹಿತ್ ಮತ್ತು ಅವರ ಎರಡೂವರೆ ವರ್ಷದ ಮಗಳು ವಿಸ್ಮಿತಾ ಬದುಕುಳಿದಿದ್ದಾರೆ. ದುರಂತಕ್ಕೆ ಕಳಪೆ ಕಾಮಗಾರಿಯೇ ಕಾರಣ ಎಂಬ ಆರೋಪ ಕೇಳಿಬಂದಿದ್ದು, ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಮೆಟ್ರೋ ತಜ್ಞರು ಮೆಟ್ರೋ ಪಿಲ್ಲರ್ ಕುಸಿತಕ್ಕೆ ಕಾರಣಗಳೇನು ಎಂಬ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.

    ದುರಂತ ನಡೆದ 4 ಗಂಟೆ ನಂತ್ರ ಸ್ಥಳಕ್ಕೆ ಬಂದ ಬಿಎಂಆರ್‌ಸಿಎಲ್‌ (BMRCL) ಎಂಡಿ ಅಂಜುಂ ಪರ್ವೇಜ್, ಐಐಎಸ್‍ಸಿಯಿಂದ ವರದಿ ಕೇಳಿದ್ದೇವೆ. ನಂತರ ನಿಖರ ಕಾರಣ ಗೊತ್ತಾಗಲಿದೆ. ಮೃತರ ಕುಟುಂಬಸ್ಥರಿಗೆ 20 ಲಕ್ಷ ಪರಿಹಾರ ನೀಡುವುದಾಗಿ ತಿಳಿಸಿದರು. ಸಿಎಂ ಬೊಮ್ಮಾಯಿ (CM Bommai) ಸಂತಾಪ ವ್ಯಕ್ತಪಡಿಸಿ 10 ಲಕ್ಷ ಪರಿಹಾರ ಪ್ರಕಟಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸೂಚಿಸಲಾಗಿದೆ ಎಂದರು.

    ಮೆಟ್ರೋ ಅಧಿಕಾರಿಗಳು, ಗುತ್ತಿಗೆದಾರರ ವಿರುದ್ಧ ನಿರ್ಲಕ್ಷ್ಯದ ಆರೋಪದಡಿ ಎಫ್‍ಐಆರ್ ದಾಖಲಿಸಿಕೊಂಡ ಗೋವಿಂದಪುರ ಪೊಲೀಸರು ತನಿಖೆ ನಡೆಸಿದ್ದಾರೆ. ಪಿಲ್ಲರ್ ಕುಸಿಯುವ ವೇಳೆ ಅದರ ಮೇಲೆಯೇ ನಾಲ್ವರು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಕುಸಿಯುವ ಸಂದರ್ಭದಲ್ಲಿ ಕೆಳಕ್ಕೆ ಹಾರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂಬ ವಿಚಾರ ಈಗ ಬಯಲಾಗಿದೆ.

    ಮೆಟ್ರೋ ಪಿಲ್ಲರ್ ದುರಂತಕ್ಕೆ ಕಾರಣಗಳೇನು?
    ಪಿಲ್ಲರ್ ನಿರ್ಮಾಣಕ್ಕೆ ಅಳವಡಿಸಿದ್ದ ಕಬ್ಬಿಣದ ಸರಳಿನ ಸ್ಟ್ರಕ್ಚರ್ ಕುಸಿತವಾಗಿದೆ. ಕಬ್ಬಿಣದ ಸರಳಿನ ಸ್ಟ್ರಕ್ಚರ್ ತೂಕ ಕನಿಷ್ಠ ಅಂದರೂ 3 ಟನ್‍ನಷ್ಟಿರುತ್ತದೆ. ಕಾಂಕ್ರೀಟ್ ತುಂಬುವ ಮುನ್ನ ಈ ಸ್ಟ್ರಕ್ಚರ್‌ಗೆ ಸಪೋರ್ಟಿಂಗ್ ಕಂಬಿ ನೀಡಬೇಕು. ಆದರೆ ಇಂದು ಕುಸಿದ ಪಿಲ್ಲರ್‌ಗೆ ಸಪೋರ್ಟಿಂಗ್ ಕಂಬಿ ನೀಡಿರಲಿಲ್ಲ. ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳದೇ ಜನನಿಬಿಡ ರಸ್ತೆಯಲ್ಲೇ ಕಾಮಗಾರಿ ನಡೆಸಲಾಗಿದೆ. ಹೈದರಾಬಾದ್ ಮೂಲದ ಎನ್‍ಸಿಸಿ ಕಂಪನಿ ಪಿಲ್ಲರ್ ನಿರ್ಮಾಣ ಕಾಮಗಾರಿ ನಡೆಸುತ್ತಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k