Tag: ಮೆಟ್ರೋ ಟ್ರೇನ್‌

  • ಮೆಟ್ರೋ ಟಿಕೆಟ್‌ ದರದಲ್ಲಿ 50% ರಿಯಾಯಿತಿ, ಉಚಿತ ವಿದ್ಯುತ್‌, ನೀರು – ದೆಹಲಿ ಚುನಾವಣೆಗೆ 15 ಗ್ಯಾರಂಟಿ ಘೋಷಿಸಿದ ಕೇಜ್ರಿವಾಲ್

    ಮೆಟ್ರೋ ಟಿಕೆಟ್‌ ದರದಲ್ಲಿ 50% ರಿಯಾಯಿತಿ, ಉಚಿತ ವಿದ್ಯುತ್‌, ನೀರು – ದೆಹಲಿ ಚುನಾವಣೆಗೆ 15 ಗ್ಯಾರಂಟಿ ಘೋಷಿಸಿದ ಕೇಜ್ರಿವಾಲ್

    ನವದೆಹಲಿ: ಮುಂದಿನ ಫೆ.5ರಂದು ನಡೆಯಲಿರುವ ವಿಧಾನಸಭಾ ಚುನಾವಣೆ ಹಿನ್ನೆಲೆ ಮಾಜಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್ (Arvind Kejriwal) ಅವರು 15 ಗ್ಯಾರಂಟಿಗಳನ್ನೊಳಗೊಂಡ ಎಎಪಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.

    ದೆಹಲಿಯಲ್ಲಿ ಆಮ್‌ ಆದ್ಮಿ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಯುವಕರಿಗೆ ಉದ್ಯೋಗ, ಮಹಿಳೆಯರಿಗೆ ಮಹಿಳಾ ಸಮ್ಮಾನ್ ಯೋಜನೆ, 24 ಗಂಟೆ ಉಚಿತ ನೀರು, ಉಚಿತ ವಿದ್ಯುತ್‌, ದಲಿತ ವಿದ್ಯಾರ್ಥಿಗಳಿಗಾಗಿ ಅಂಬೇಡ್ಕರ್ ಸ್ಕಾಲರ್‌ ಶಿಪ್, ಯಮುನಾ ನದಿ ಶುದ್ಧೀಕರಣ ಸೇರಿದಂತೆ ವಿವಿಧ ಯೋಜನೆಗಳನ್ನು ಜಾರಿಗೆ ತರುವುದಾಗಿ ʻಕೇಜ್ರವಾಲ್ ಕಿ ಗ್ಯಾರಂಟಿʼ (Kejriwal Ki Guarantee) ಹೆಸರಿನ ಪ್ರಣಾಳಿಕೆಯಲ್ಲಿ ತಿಳಿಸಿದ್ದಾರೆ.

    ಹಿರಿಯ ನಾಗರಿಕರಿಗೆ ಉಚಿತ ಚಿಕಿತ್ಸೆ, ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣ ಮತ್ತು ಮೆಟ್ರೋ ಪ್ರಯಾಣ ದರದಲ್ಲಿ (Metro Ticket Price) ಶೇ.50ರಷ್ಟು ರಿಯಾಯಿತಿ ನೀಡುವುದಾಗಿಯೂ ಭರವಸೆ ನೀಡಿದ ಕೇಜ್ರಿವಾಲ್‌ ಇದು ಮೋದಿ ಅವರ ʻನಕಲಿ ಗ್ಯಾರಂಟಿʼ ಅಲ್ಲ ʻಕೇಜ್ರಿವಾಲ್‌ ಕೀ ಗ್ಯಾರಟಿʼ ಅಂತ ಹೇಳಿದ್ದಾರೆ.

    ಎಎಪಿಯ 15 ಗ್ಯಾರಂಟಿಗಳು ಯಾವುವು?
    * ಉದ್ಯೋಗದ ಖಾತ್ರಿ
    * ಮಹಿಳಾ ಗೌರವ ಯೋಜನೆ – ಪ್ರತಿ ಮಹಿಳೆಗೆ ತಿಂಗಳಿಗೆ 2,100 ರೂ.
    * ಸಂಜೀವನಿ ಯೋಜನೆ – 60 ವರ್ಷ ಮೇಲ್ಪಟ್ಟವರಿಗೆ ಉಚಿತ ಚಿಕಿತ್ಸೆ
    * ತಪ್ಪಾಗಿ ಬಂದ ನೀರಿನ ಬಿಲ್‌ ಮನ್ನಾ
    * 24 ಗಂಟೆ ನೀರು ಪೂರೈಕೆ
    * ಯುರೋಪ್‌ ಮಾದರಿಯಲ್ಲೇ ರಸ್ತೆ ಅಭಿವೃದ್ಧಿ
    * ಯಮುನಾ ನದಿ ಶುದ್ಧೀಕರಣ
    * ಡಾ.ಅಂಬೇಡ್ಕರ್ ವಿದ್ಯಾರ್ಥಿವೇತನ ಯೋಜನೆ
    * ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣ, ದೆಹಲಿ ಮೆಟ್ರೋದಲ್ಲಿ 50% ರಿಯಾಯಿತಿ
    * ಅರ್ಚಕರಿಗೆ 18,000 ಸಾವಿರ ರೂ.
    * ಬಾಡಿಗೆದಾರರಿಗೆ ಉಚಿತ ವಿದ್ಯುತ್ ಮತ್ತು ನೀರು
    * ಒಳಚರಂಡಿ ಶುದ್ಧೀಕರಣ
    * ಪಡಿತರ ಚೀಟಿ
    * ಆಟೋ, ಟ್ಯಾಕ್ಸಿ ಮತ್ತು ಇ-ರಿಕ್ಷಾ ಚಾಲಕರ ಮಗಳ ಮದುವೆಗೆ 1 ಲಕ್ಷ ರೂ., ಮಕ್ಕಳಿಗೆ ಉಚಿತ ತರಬೇತಿ, ಜೀವ ವಿಮೆ
    * RWA ಗಳಿಗೆ (ವಸತಿ ಕಲ್ಯಾಣ ಸಂಘಗಳು) ಖಾಸಗಿ ಭದ್ರತಾ ಸಿಬ್ಬಂದಿ ಒದಗಿಸಲಾಗುವುದು.

  • ಗಮನಿಸಿ – ಜೂ.17ರಂದು ನೇರಳೆ ಮಾರ್ಗದ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ!

    ಗಮನಿಸಿ – ಜೂ.17ರಂದು ನೇರಳೆ ಮಾರ್ಗದ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ!

    ಬೆಂಗಳೂರು: ಮೆಟ್ರೋ ನಿರ್ವಹಣಾ ಕಾರ್ಯದ ಹಿನ್ನೆಲೆಯಲ್ಲಿ ಜೂನ್ 17ರಂದು ನೇರಳೆ ಮಾರ್ಗದ ಮೆಟ್ರೋ (Metro Purple Line) ಸಂಚಾರದಲ್ಲಿ ವ್ಯತ್ಯಯವಾಗಲಿದೆ ಎಂದು ಬಿಎಂಆರ್‌ಸಿಎಲ್ (BMRCL) ತಿಳಿಸಿದೆ.

    ಮೆಟ್ರೋ ನಿರ್ವಹಣಾ ಕಾರ್ಯದ ಹಿನ್ನೆಲೆ ಅಂದು ಕೆಂಗೇರಿಯಿಂದ ಚಲ್ಲಘಟ್ಟ ಮೆಟ್ರೋ ನಿಲ್ದಾಣದ ನಡುವೆ ಸಂಚಾರದಲ್ಲಿ ವ್ಯತ್ಯಯವಾಗಲಿದೆ. ಬೆಳಗ್ಗೆ 5 ಗಂಟೆಯಿಂದ ಮಧ್ಯಾಹ್ನ 1 ಗಂಟೆ ವರೆಗೆ ಮೆಟ್ರೋ ಸಂಚಾರ ಇರುವುದಿಲ್ಲ. ಇದನ್ನೂ ಓದಿ: ಪೋಕ್ಸೊ ಕೇಸಲ್ಲಿ ಬಿಎಸ್‌ವೈಗೆ ರಿಲೀಫ್‌; ಒತ್ತಾಯದ ಕ್ರಮ ಕೈಗೊಳ್ಳುವಂತಿಲ್ಲ ಎಂದು ಹೈಕೋರ್ಟ್‌ ಸೂಚನೆ

    ಮಧ್ಯಾಹ್ನ 1 ಗಂಟೆ ನಂತರ ಚಲ್ಲಘಟ್ಟ ದಿಂದ ವೈಟ್ ಫೀಲ್ಡ್ ನಡುವೆ ಮೆಟ್ರೋ ಸಂಚಾರ ಆರಂಭವಾಗಲಿದೆ ಎಂದು ತಿಳಿಸಿದೆ. ಇದನ್ನೂ ಓದಿ: ದೆಹಲಿಯ ಯಮುನಾ ಬಳಿಯ ಪ್ರಾಚೀನ ಶಿವಮಂದಿರ ಕೆಡವಲು ನೀಡಿದ ಆದೇಶ ಎತ್ತಿಹಿಡಿದ ಸುಪ್ರೀಂ