Tag: ಮೆಟ್ರೋ ಕಾಮಗಾರಿ

  • ವಾಹನ ಸವಾರರ ಗಮನಕ್ಕೆ – ಬೆಂಗಳೂರಿನ ಈ ರಸ್ತೆಯಲ್ಲಿ 45 ದಿನ ಸಂಚಾರ ಬಂದ್

    ವಾಹನ ಸವಾರರ ಗಮನಕ್ಕೆ – ಬೆಂಗಳೂರಿನ ಈ ರಸ್ತೆಯಲ್ಲಿ 45 ದಿನ ಸಂಚಾರ ಬಂದ್

    ಬೆಂಗಳೂರು: ಔಟರ್ ರಿಂಗ್ ರೋಡ್‌ನ (Outer Ring Road) 9ನೇ ಮೇನ್ ಜಂಕ್ಷನ್ ನಿಂದ 5ನೇ ಮೇನ್‌ವರೆಗಿನ ಸರ್ವಿಸ್ ರಸ್ತೆಯನ್ನು ಮೆಟ್ರೋ ಸ್ಟೇಷನ್ ಕಾಮಗಾರಿಗಾಗಿ (Metro Station Work) ಮುಂದಿನ 45 ದಿನಗಳ ಕಾಲ ಬಂದ್ ಮಾಡಲಾಗುತ್ತಿದ್ದು, ಓಆರ್‌ಆರ್ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆಗಳಿವೆ. ಈ ಹಿನ್ನೆಲೆ ಔಟರ್ ರಿಂಗ್ ರೋಡ್‌ನಲ್ಲಿ ಸಂಚರಿಸುವ ವಾಹನ ಸವಾರರು ಬದಲಿ ಮಾರ್ಗದಲ್ಲಿ ಸಂಚರಿಸಲು ಸಂಚಾರಿ ಪೊಲೀಸರು (Traffic Police)  ಮನವಿ ಮಾಡಿದ್ದಾರೆ.

    ಹೌದು, ಹೆಚ್.ಎಸ್.ಆರ್ ಲೇಔಟ್ ಸಂಚಾರ ಪೊಲೀಸ್ ಠಾಣಾ ಸರಹದ್ದಿನ ಹೊರವರ್ತುಲ ರಸ್ತೆಯ 9ನೇ ಮುಖ್ಯರಸ್ತೆ ಜಂಕ್ಷನ್‌ನಿಂದ 5ನೇ ಮುಖ್ಯ ರಸ್ತೆ ಜಂಕ್ಷನ್ ವರೆಗೆ ಸರ್ವಿಸ್ ರಸ್ತೆಯಲ್ಲಿ ಮೇಟ್ರೋ ಸ್ಟೇಷನ್ ಕಾಮಗಾರಿ ಪ್ರಗತಿಯಲ್ಲಿದ್ದು, ಅ.6ರಿಂದ 45 ದಿನಗಳ ಕಾಲ ಕಾಮಗಾರಿ ನಡೆಯಲಿದೆ. 9ನೇ ಮುಖ್ಯ ರಸ್ತೆ ಜಂಕ್ಷನ್ ನಿಂದ 5ನೇ ಮುಖ್ಯ ರಸ್ತೆ ಜಂಕ್ಷನ್‌ವರೆಗಿನ ಹೊರವರ್ತುಲ ರಸ್ತೆ ಸರ್ವಿಸ್ ರಸ್ತೆಯನ್ನು ಕಾಮಗಾರಿಗಾಗಿ ಉಪಯೋಗಿಸಿಕೊಳ್ಳಲಾಗುತ್ತದೆ. ಇದನ್ನೂ ಓದಿ: ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಘರ್ಷಣೆ; 11 ಪಾಕಿಸ್ತಾನಿ ಸೈನಿಕರು, ಟಿಟಿಪಿಯ 19 ಉಗ್ರರು ಸಾವು

    ಕಾಮಗಾರಿ ಮುಗಿಯುವವರೆಗೆ ಇಬ್ಬಲೂರ್ ಕಡೆಯಿಂದ ಬಂದು ಸಿಲ್ಕ್ ಬೋರ್ಡ್ ಜಂಕ್ಷನ್ ಕಡೆಗೆ ಸಂಚರಿಸುವ ವಾಹನ ಸವಾರರು 14ನೇ ಮುಖ್ಯ ರಸ್ತೆ ಫೈಓವರ್ ಮೂಲಕ ಮುಖ್ಯರಸ್ತೆಯಲ್ಲಿಯೇ 5ನೇ ಮುಖ್ಯರಸ್ತೆ ಜಂಕ್ಷನ್‌ಗೆ ಸಾಗಿ ಅಥವಾ ಇತರ ಹೆಚ್.ಎಸ್.ಆರ್. ಲೇಔಟ್ ಒಳಭಾಗದ ರಸ್ತೆಗಳ ಮೂಲಕ ಸಾಗಿ ಸಿಲ್ಕ್ ಬೋರ್ಡ್ ಹಾಗು ಹೊಸೂರು ಮುಖ್ಯರಸ್ತೆಯಲ್ಲಿ ಸಂಚರಿಸಬೇಕು ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ ಮನೆಗೆ ಬೀಗ; ಸರ್ಕಾರದಿಂದ ಸುದೀಪ್ ಟಾರ್ಗೆಟ್: ಛಲವಾದಿ ನಾರಾಯಣಸ್ವಾಮಿ

  • ಮೆಟ್ರೋ ಯಡವಟ್ಟಿಗೆ ಮತ್ತೊಂದು ಬಲಿ – ವಯಾಡೆಕ್ಟ್ ಉರುಳಿ ಬಿದ್ದು ಆಟೋ ಅಪ್ಪಚ್ಚಿ, ಚಾಲಕ ಸಾವು!

    ಮೆಟ್ರೋ ಯಡವಟ್ಟಿಗೆ ಮತ್ತೊಂದು ಬಲಿ – ವಯಾಡೆಕ್ಟ್ ಉರುಳಿ ಬಿದ್ದು ಆಟೋ ಅಪ್ಪಚ್ಚಿ, ಚಾಲಕ ಸಾವು!

    – ಮಧ್ಯರಸ್ತೆಯಲ್ಲೇ ಎರಡು ತುಂಡಾದ ಲಾರಿ
    – ಆಟೋ ಪ್ರಯಾಣಿಕ ಗ್ರೇಟ್‌ ಎಸ್ಕೇಪ್‌

    ಬೆಂಗಳೂರು: ನಮ್ಮ ಮೆಟ್ರೋ ಕಾಮಗಾರಿ (Namma Metro Work) ವೇಳೆ ನಿರ್ಲಕ್ಷ್ಯ ತೋರಿದ ಪರಿಣಾಮ ಮತ್ತೊಂದು ದುರಂತ ಸಂಭವಿಸಿದೆ. ಮೆಟ್ರೋ ಕಾಮಗಾರಿಗೆ ಕೊಂಡೊಯ್ಯುತ್ತಿದ್ದ ವಯಾಡೆಕ್ಟ್ ಉರುಳಿ ಬಿದ್ದು, ಓರ್ವ ಆಟೋ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ (Bengaluru) ಕೋಗಿಲು ಕ್ರಾಸ್ ಬಳಿ ನಡೆದಿದೆ.

    ಖಾಸಿಂ ಸಾಬ್ ಮೃತ ಆಟೋ ಚಾಲಕ. ಈತ ಮೂಲತಃ ಹೆಗಡೆನಗರದ ನಿವಾಸಿ. ಪ್ಯಾಸೆಂಜರ್ ಪಿಕ್ ಮಾಡಿಕೊಂಡು ನಾಗವಾರದ ಕಡೆಗೆ ಹೋಗುತ್ತಿದ್ದ ವೇಳೆ ದುರಂತ ಸಂಭವಿಸಿದೆ. ತಡರಾತ್ರಿ 12:05 ಗಂಟೆ ಸುಮಾರಿಗೆ ಘಟನೆ ಸಂಭವಿಸಿದೆ. ಆದ್ರೆ ಆಟೋದಲ್ಲಿದ್ದ ಪ್ಯಾಸೆಂಜರ್‌ ಕೊಂಚದರಲ್ಲೇ ಎಸ್ಕೇಪ್‌ ಆಗಿದ್ದಾರೆ.

    ದುರಂತ ಸಂಭವಿಸಿದ್ದು ಹೇಗೆ?
    ಮೆಟ್ರೋ ತಡೆಗೋಡೆ ನಿರ್ಮಾಣಕ್ಕಾಗಿ ಬೃಹತ್‌ ಗಾತ್ರದ ವಯಾಡೆಕ್ಟ್ (ಸಿಮೆಂಟ್‌ ಗೋಡೆ) ಕೊಂಡೊಯ್ಯಲಾಗುತ್ತಿತ್ತು. ಏರ್ಪೋಟ್ ಮಾರ್ಗದ ಮೆಟ್ರೋ ಕಾಮಗಾರಿಗಾಗಿ 18 ಚಕ್ರದ ದೊಡ್ಡ ಲಾರಿಯಲ್ಲಿ ವಯಾಡೆಕ್ಟ್ ತೆಗೆದುಕೊಂಡು ಹೋಗಲಾಗುತ್ತಿತ್ತು. ಕೋಗಿಲು ಕ್ರಾಸ್‌ನಲ್ಲಿ ತಿರುವು ತೆಗೆದುಕೊಳ್ಳುವ ವೇಳೆ ಲಾರಿಯೇ ಎರಡು ತುಂದಾಗಿದೆ. ಪರಿಣಾಮ ವಯಾಡೆಕ್ಟ್‌ ನೆಲಕ್ಕುರುಳಿದೆ.

    ಇದೇ ಸಂದರ್ಭದಲ್ಲಿ ಲಾರಿ ಪಕ್ಕದಲ್ಲೇ ಇದ್ದ ಆಟೋ ಮೇಲೆ ವಯಾಡೆಕ್ಟ್‌ ಬಿದ್ದಿದೆ. ಲಾರಿ ತುಂಡಾಗಿ ವಯಾಡೆಕ್ಟ್‌ ಬೀಳುತ್ತಿದ್ದಂತೆ ಆಟೋದಲ್ಲಿದ್ದ ಪ್ಯಾಸೆಂಜರ್‌ ತಕ್ಷಣಕ್ಕೆ ಇಳಿದು ಓಡಿಹೋಗಿದ್ದಾರೆ, ಆದ್ರೆ, ಚಾಲಕ ಇಳಿಯುವಷ್ಟರಲ್ಲಿ ಆಟೋ ಮೇಲೆ ಬಿದ್ದು, ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆಟೋ ಸಹ ಸಂಪೂರ್ಣ ಅಪ್ಪಚ್ಚಿಯಾಗಿದೆ.

    2023ರ ಜನವರಿಯಲ್ಲಿ ಇದೇ ರೀತಿ ನಾಗವಾರ ಮುಖ್ಯ ರಸ್ತೆಯಲ್ಲಿ ಹೋಗುವಾಗ ಏಕಾಏಕಿ ಬೃಹತ್‌ ಗಾತ್ರದ ಡೆಕ್ಟ್‌ ಕುಸಿದು ಬೈಕ್‌ ಸವಾರ ಸಾವಪ್ಪಿದ ಘಟನೆ ನಡೆದಿತ್ತು. ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಮೆಟ್ರೋ ಕಾಮಗಾರಿ – 30 ಅಡಿ ಮಣ್ಣು ಕುಸಿತ, ತಪ್ಪಿತು ಭಾರೀ ಅನಾಹುತ

    ಮೆಟ್ರೋ ಕಾಮಗಾರಿ – 30 ಅಡಿ ಮಣ್ಣು ಕುಸಿತ, ತಪ್ಪಿತು ಭಾರೀ ಅನಾಹುತ

    ಬೆಂಗಳೂರು: ನಗರದ ಟ್ಯಾನರಿ ರಸ್ತೆಯಲ್ಲಿ ನಡೆಯುತ್ತಿದ್ದ ಮೆಟ್ರೋ ಕಾಮಗಾರಿ ವೇಳೆ 30 ಅಡಿ ಮಣ್ಣು ಕುಸಿದು ಸಂಭವಿಸಬೇಕಿದ್ದ ಭಾರೀ ಅನಾಹುತ ತಪ್ಪಿದೆ.  ಇದನ್ನೂ ಓದಿ:ರಾತ್ರಿ ರಾಜಕಾರಣ ಮಾಡುವ ಸಂಸ್ಕೃತಿ ಬಿಜೆಪಿಯದ್ದಲ್ಲ ಕಾಂಗ್ರೆಸ್ಸಿನದ್ದು: ಸಂಜಯ್ ಪಾಟೀಲ್

    Metro Work

    ಗೊಟ್ಟಿಗೆರೆಯಿಂದ ನಾಗವಾರದವರೆಗೆ ಮೆಟ್ರೋ ಕಾಮಗಾರಿ ನಡೆಯುತ್ತಿದ್ದು, ಇತ್ತೀಚೆಗಷ್ಟೇ ಸುರಂಗ ಕೊರೆದು ಟಿಬಿಎಂ ಹೊರಬಂದಿತ್ತು. ಆದರೆ ಈ ಒತ್ತಡಕ್ಕೆ ಮುಂಜಾನೆ 3 ಗಂಟೆಗೆ ಮುಚ್ಚಿದ್ದ ಬಾವಿಗೆ ಮಣ್ಣು ಕುಸಿದು ಕೆಳಗೆ ಬಿದ್ದಿದೆ. ಇದರಿಂದ ಸಂಭವಿಸಬೇಕಾಗಿದ್ದ ಭಾರೀ ಅನಾಹುತ ತಪ್ಪಿದೆ. ಇದನ್ನೂ ಓದಿ: ನಾವು ಸತ್ತ ಮೇಲೂ ನೀನು ನೆಮ್ಮದಿಯಾಗಿರಬಾರದು – ಶಂಕರ್‌ಗೆ ಮಗನದ್ದೇ ಖೆಡ್ಡಾ

    ಮಾಲೀಕ ಝಬೀ ಎಂಬವರಿಗೆ ಸೇರಿದ ಜಾಗ ಇದಾಗಿದ್ದು, ಘಟನೆ ಸಂಭವಿಸಲು ಬಿಎಂಆರ್‌ಸಿಎಲ್ ಅಧಿಕಾರಿಗಳೇ ಕಾರಣ. ಹೀಗಾಗಿ ನಮ್ಮ ಮೆಟ್ರೋ ಈ ಜಾಗ ಪಡೆದು ಇದಕ್ಕೆ ಪರಿಹಾರ ನೀಡಲಿ ಎಂದು ಮಾಲೀಕರು ಆಗ್ರಹಿಸಿದ್ದಾರೆ.  ಇದನ್ನೂ ಓದಿ: ನಾಯಕ ದೇವರಕೊಂಡಗಿಂತಲೂ ದುಬಾರಿ ಸಂಭಾವನೆ ಪಡೆಯಲಿದ್ದಾರೆ ಮೈಕ್ ಟೈಸನ್

  • ಕಾರಿನ ಮೇಲೆ ಬಿದ್ದ ಮೆಟ್ರೋ ಕಾಮಗಾರಿಯ ಕಾಂಕ್ರಿಟ್- ಅಪಾಯದಿಂದ ನಟಿ ಪಾರು

    ಕಾರಿನ ಮೇಲೆ ಬಿದ್ದ ಮೆಟ್ರೋ ಕಾಮಗಾರಿಯ ಕಾಂಕ್ರಿಟ್- ಅಪಾಯದಿಂದ ನಟಿ ಪಾರು

    ತಿರುವನಂತಪುರ: ಮಲಯಾಳಂ ನಟಿ ಪ್ರಯಾಣ ಮಾಡುತ್ತಿದ್ದ ಕಾರಿನ ಮೇಲೆ ಕಾಮಗಾರಿಯ ಕಾಂಕ್ರಿಟ್ ಬಿದ್ದು ಅವಘಡ ಸಂಭವಿಸಿದೆ. ಆದರೆ ಅದೃಷ್ಟವಶಾತ್ ನಟಿ ಅಪಾಯದಿಂದ ಪಾರಾಗಿದ್ದಾರೆ.

    ಈ ಘಟನೆ ಕೇರಳದ ಕೊಚ್ಚಿಯಲ್ಲಿ ನಡೆದಿದೆ. ಮಲಯಾಳಂ ನಟಿ ಅರ್ಚನಾ ಕವಿ ಅಪಾಯದಿಂದ ಪಾರಾಗಿದ್ದಾರೆ. ಈ ಬಗ್ಗೆ ನಟಿ ತಮ್ಮ ಟ್ವಿಟ್ಟರ್ ನಲ್ಲಿ ಕಾರಿನ ಫೋಟೋಗಳನ್ನ ಪೋಸ್ಟ್ ಮಾಡಿ ಮೆಟ್ರೋ ಅಧಿಕಾರಿಗಳಿಗೆ ಮತ್ತು ಕೊಚ್ಚಿ ಪೊಲೀಸರ ಗಮನಕ್ಕೆ ತಂದಿದ್ದಾರೆ.

    “ನಾವು ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದೇವೆ. ಕಾರಿನಲ್ಲಿ ಏರ್ ಪೋರ್ಟ್ ಗೆ ಹೋಗುತ್ತಿದ್ದ ವೇಳೆ ಕಾರಿನ ಮೇಲೆ ಮೆಟ್ರೋ ಕಾಮಗಾರಿಯ ಕಾಂಕ್ರಿಟ್ ಬಿದ್ದವು. ಸದ್ಯ ಯಾವುದೇ ಅಪಾಯ ಸಂಭವಿಸಿಲ್ಲ. ಆದರೆ ಮೆಟ್ರೋ ಅಧಿಕಾರಿಗಳು ಮತ್ತು ಪೊಲೀಸರು ಈ ಬಗ್ಗೆ ಗಮನ ಹರಿಸಬೇಕು. ಕಾರಿಗೆ ಡ್ಯಾಮೇಜ್ ಆಗಿದೆ. ಹೀಗಾಗಿ ಕಾರಿನ ಮಾಲೀಕರಿಗೆ ಪರಿಹಾರ ನೀಡಬೇಕು. ಮುಂದಿನ ದಿನದಲ್ಲಿ ಈ ರೀತಿ ಅವಘಡ ಸಂಭವಿಸಿದಂತೆ ಜಾಗೃತಿವಹಿಸಬೇಕು’ ಎಂದು ಮನವಿ ಮಾಡಿದ್ದಾರೆ.

    ನಟಿ ಅರ್ಚನಾ ಕವಿ ಟ್ವೀಟ್‍ಗೆ ಮೆಟ್ರೋ ಅಧಿಕಾರಿಗಳು ‘ಈ ಘಟನೆಯನ್ನ ಗಂಭೀರವಾಗಿ ಪರಿಗಣಿಸಿ ಕಾರು ಚಾಲಕನ ಜೊತೆ ಮಾತನಾಡುವುದಕ್ಕೆ ಪ್ರಯತ್ನ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಈ ರೀತಿಯ ಅವಘಡ ಸಂಭವಿಸದಂತೆ ಸುರಕ್ಷಿತವಾಗಿ ಕ್ರಮ ಕೈಗೊಳ್ಳುತ್ತೇನೆ” ಎಂದು ಪ್ರತಿಕ್ರಿಯಿಸಿದ್ದಾರೆ.

    ಈ ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ನಟಿ ಅರ್ಚನಾ ಕವಿ ‘ಹನಿ ಬಿ’, ‘ಪಟ್ಟಂ ಪೋಲೆ, ‘ನಾಡೋಡಿಮನಂ’ ಸಿನಿಮಾಗಳಲ್ಲಿ ನಟಿಸಿದ್ದಾರೆ. ಜೊತೆಗೆ ತಮಿಳಿನ ‘ಅರವಾನ್’, ‘ಜ್ಞಾನ ಕಿರುಕ್ಕುನ್’ ಅಂತಹ ಚಿತ್ರದಲ್ಲೂ ಅಭಿನಯಿಸಿದ್ದಾರೆ.