Tag: ಮೆಟ್ಟೆ ಫ್ರೆಡ್ರಿಕ್ಸೆನ್

  • ಮೋದಿ ಗಿಫ್ಟ್‌ಗೆ ವಿಶೇಷ ಸ್ಥಾನಕೊಟ್ಟ ಡೆನ್ಮಾರ್ಕ್ ಪ್ರಧಾನಿ

    ಮೋದಿ ಗಿಫ್ಟ್‌ಗೆ ವಿಶೇಷ ಸ್ಥಾನಕೊಟ್ಟ ಡೆನ್ಮಾರ್ಕ್ ಪ್ರಧಾನಿ

    ಕೋಪನ್‍ಹ್ಯಾಗನ್: ಡ್ಯಾನಿಶ್ ಪ್ರಧಾನಿ ಮೆಟ್ಟೆ ಫ್ರೆಡ್ರಿಕ್ಸೆನ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಒಂದು ವಿಶೇಷ ಗಿಫ್ಟ್ ಕೊಟ್ಟಿದ್ದರು. ಈ ಗಿಫ್ಟ್ ಗೆ ಮೆಟ್ಟೆ ಫ್ರೆಡ್ರಿಕ್ಸೆನ್ ವಿಶೇಷ ಸ್ಥಾನ ಕೊಟ್ಟಿದ್ದಾರೆ.

    PM Modi holds talks with his Danish counterpart Mette Frederiksen in Copenhagen | Deccan Herald

    ಕಳೆದ ವರ್ಷ ಮೆಟ್ಟೆ ಫ್ರೆಡ್ರಿಕ್ಸೆನ್ ಅವರು ಭಾರತಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿ ಮೋದಿ ಅವರು ಮೆಟ್ಟೆ ಫ್ರೆಡ್ರಿಕ್ಸೆನ್ ಅವರಿಗೆ ಉಡುಗೊರೆಯಾಗಿ ಪಟ್ಟಚಿತ್ರ ಪೇಂಟಿಂಗ್‍ವೊಂದನ್ನು ನೀಡಿದ್ದರು. ಈ ವರ್ಷ ಮೋದಿ ಅವರು ಡ್ಯಾನಿಶ್ ಪ್ರಧಾನಿ ಮೆಟ್ಟೆ ಫ್ರೆಡ್ರಿಕ್ಸೆನ್ ಅವರನ್ನು ಮಂಗಳವಾರ ಅವರ ನಿವಾಸದಲ್ಲಿಯೇ ಭೇಟಿ ಮಾಡಿದ್ದರು. ಈ ವೇಳೆ ಅವರು ತಾವು ಕೊಟ್ಟ ಗಿಫ್ಟ್ ಗೆ ಮೆಟ್ಟೆ ಫ್ರೆಡ್ರಿಕ್ಸೆನ್ ನೀಡಿದ್ದ ಗೌರವ ಕಂಡು ಸಂತೋಷ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಫಿನ್‍ಲ್ಯಾಂಡ್ ಪ್ರಧಾನಿಯನ್ನು ಭೇಟಿ ಮಾಡಿದ ಮೋದಿ – ಕಾರಣವೇನು? 

    ಈ ಕುರಿತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಭಾರತದ ಮೃದು ಶಕ್ತಿ ಮತ್ತು ಒಡಿಶಾದ ನಿಧಿ ಪಟ್ಟಚಿತ್ರ ಪೇಂಟಿಂಗ್ ರೂಪದಲ್ಲಿ ಡೆನ್ಮಾರ್ಕ್ ಪ್ರಧಾನಿ ಫ್ರೆಡ್ರಿಕ್ಸೆನ್ ಅವರ ನಿವಾಸವನ್ನು ಹೇಗೆ ಅಲಂಕರಿಸಿದೆ ನೋಡಿ. ಫ್ರೆಡ್ರಿಕ್ಸೆನ್ ಅವರು ತಮ್ಮ ಕೊನೆಯ ಭಾರತ ಭೇಟಿಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಉಡುಗೊರೆಯಾಗಿ ನೀಡಿದ್ದ ವರ್ಣಚಿತ್ರವನ್ನು ತಮ್ಮ ಮನೆಯಲ್ಲಿ ಅಲಂಕರಿಸಿರುವುದಾಗಿ ತೋರಿಸಿದ್ದರು. ಇದು ಹೆಮ್ಮೆಯ ಕ್ಷಣ ಎಂದು ಟ್ವೀಟ್ ಮಾಡಿದ್ದಾರೆ.