Tag: ಮೆಜೆಸ್ಟಿಕ್

  • ‘ನನ್ನನ್ನು ಮನೆಗೆ ಕಳಿಸಿ, ಭಯ ಆಗುತ್ತೆ’- ರೈಲ್ವೆ ನಿಲ್ದಾಣದಲ್ಲಿ ವೃದ್ಧ ಹಠ

    ‘ನನ್ನನ್ನು ಮನೆಗೆ ಕಳಿಸಿ, ಭಯ ಆಗುತ್ತೆ’- ರೈಲ್ವೆ ನಿಲ್ದಾಣದಲ್ಲಿ ವೃದ್ಧ ಹಠ

    ಬೆಂಗಳೂರು: ರಾಜ್ಯದಲ್ಲಿ ಕ್ವಾರಂಟೈನ್ ರಾದ್ದಾಂತಗಳು ಮುಂದುವರಿದಿವೆ. ಮುಂಬೈ ರೈಲಿನಲ್ಲಿ ಬಂದಿದ್ದ ವೃದ್ಧ ತಮ್ಮನ್ನು ಮನೆಗೆ ಕಳಿಸಿ ಭಯ ಆಗುತ್ತೆ ಎಂದು ಹಠ ಹಿಡಿದು ಬೆಂಗಳೂರಿನ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ಕುಳಿತಿದ್ದ ಘಟನೆ ನಡೆದಿದೆ.

    ಮೊದಲು ಹೋಂ ಕ್ವಾರಂಟೈನ್‍ಗೆ ಹೋದರೆ ಮಕ್ಕಳಿಗೆ ತೊಂದರೆ ಆಗುತ್ತೆ ಅಂತ ಸ್ವಯಂಪ್ರೇರಿತವಾಗಿ ಹೋಟೆಲ್ ಕ್ವಾರಂಟೈನ್‍ಗೆ ವೃದ್ಧ ಮುಂದಾಗಿದ್ರು. ಆದರೆ ಬಸ್ಸಿನಲ್ಲಿ ಕುಳಿತವರನ್ನು ನೋಡಿ ಮನಸ್ಸು ಬದಲಿಸಿ, ನಾನು ಇವರೊಂದಿಗೆ ಹೋಗಲ್ಲ. ನಾನು ಹೋಂ ಕ್ವಾರಂಟೈನ್‍ಗೆ ಹೋಗ್ತೀನಿ ಅಂತ ಹೇಳಿದರು. ಇದಕ್ಕೆ ಕರಗಿದ ಬಿಬಿಎಂಪಿ ಸಿಬ್ಬಂದಿ ವೃದ್ಧನನ್ನ ಮನೆಗೆ ಕಳಿಸಿದರು.

    ವಿಜಯಪುರದ ಇಂಗಳೇಶ್ವರ ತಾಂಡಾದಲ್ಲಿ ಕೊರೊನಾ ಸೋಂಕಿತನನ್ನ ಕರೆದೊಯ್ಯಲು ಬಂದ ಆರೋಗ್ಯ ಸಿಬ್ಬಂದಿಗೆ ವೃದ್ಧೆಯೊಬ್ಬರು ಅವಾಜ್ ಹಾಕಿ ಕೊಲೆ ಬೆದರಿಕೆ ಹಾಕಿದ್ದಾರೆ. ನನ್ ಮೊಮ್ಮಗನನ್ನ ಕರೆದೊಯ್ದರೇ ಅಷ್ಟೇ ಅಂತ ಅಬ್ಬರಿಸಿದರು. ಕೊನೆಗೆ ಹರಸಾಹಸ ಮಾಡಿ ಅಜ್ಜಿ ಮನವೊಲಿಸಿದ ಅಧಿಕಾರಿಗಳು ಸೋಂಕಿತನನ್ನ ಆಸ್ಪತ್ರೆಗೆ ಕರೆದೊಯ್ದರು.

  • 4 ಸಾವಿರ ಬಸ್ ಅಂತ ಆಟವಾಡಿದ ಬಿಎಂಟಿಸಿ- ಕಡಿಮೆ ಬಸ್‍ಗಳಿಗೆ ಮುಗಿಬಿದ್ದ ಪ್ರಯಾಣಿಕರು

    4 ಸಾವಿರ ಬಸ್ ಅಂತ ಆಟವಾಡಿದ ಬಿಎಂಟಿಸಿ- ಕಡಿಮೆ ಬಸ್‍ಗಳಿಗೆ ಮುಗಿಬಿದ್ದ ಪ್ರಯಾಣಿಕರು

    – ಮೆಜೆಸ್ಟಿಕ್‍ನಲ್ಲಿ ಬೆಳಗ್ಗೆಯಿಂದಲೇ ಜನವೋ ಜನ

    ಬೆಂಗಳೂರು: ಇಂದಿನಿಂದ ಬಿಎಂಟಿಸಿ ಬಸ್ಸಿನಲ್ಲಿ ಪ್ರಯಾಣಿಕರಿಗೆ ಟಿಕೆಟ್ ಕೊಡಲು ತೀರ್ಮಾನಿಸಲಾಗಿದೆ. ಅಲ್ಲದೇ ಹೆಚ್ಚುವರಿಯಾಗಿ ನಾಲ್ಕು ಸಾವಿರ ಬಸ್‍ಗಳು ಸಂಚಾರ ಆರಂಭವಾಗಲಿವೆ ಎಂದು ಬಿಎಂಟಿಸಿ ತಿಳಿಸಿತ್ತು. ಆದರೆ ಬಸ್ಸುಗಳಿಲ್ಲದೇ ಪ್ರಯಾಣಿಕರು ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದಾರೆ.

    ಸೋಮವಾರದವರೆಗೂ 1,500 ಬಿಎಂಟಿಸಿ ಬಸ್‍ಗಳು ನಗರದಲ್ಲಿ ಸಂಚರಿಸುತ್ತಿದ್ದವು. ಆದರೆ ಇಂದಿನಿಂದ ಹೆಚ್ಚುವರಿಯಾಗಿ 2,262 ಬಿಎಂಟಿಸಿ ಬಸ್‍ಗಳ ಸಂಚಾರ ಮಾಡಲಿವೆ. ಈ ಮೂಲಕ ಇಂದಿನಿಂದ ಇಂದಿನಿಂದ 4 ಸಾವಿರ ಬಿಎಂಟಿಸಿ ಬಸ್‍ಗಳು ರಸ್ತೆಗಿಳಿಯಲಿವೆ ಎಂದು ಬಿಎಂಟಿಸಿ ತಿಳಿಸಿತ್ತು. ಆದರೆ ಇದೀಗ ಬಿಎಂಟಿಸಿ ಆಡಳಿತ ಮಂಡಳಿ ಪ್ರಯಾಣಿಕರ ಜೀವನದ ಜೊತೆ ಚೆಲ್ಲಾಟವಾಡುತ್ತಿದಿಯಾ ಎಂಬ ಅನುಮಾನ ಶುರುವಾಗಿದೆ.

    ಬೆಳಗ್ಗೆ 9 ಗಂಟೆಯಾದರೂ ಬಿಎಂಟಿಸಿ ಬಸ್ ನಿಲ್ದಾಣಕ್ಕೆ ಬೆರಳಣಿಕೆ ಬಸ್‍ಗಳು ಮಾತ್ರ ಬಂದಿವೆ. ಬರುವ ಒಂದೊಂದು ಬಸ್ಸಿಗಾಗಿ ಪ್ರಯಾಣಿಕರು ಮುಗಿಬೀಳುತ್ತಿದ್ದಾರೆ. ಅಲ್ಲದೇ ಬಸ್ ಇಲ್ಲ, ಒಂದು ತಾಸು ಕಾದರೂ ಒಂದು ಬಸ್ ಇಲ್ಲ. ಬಿಎಂಟಿಸಿ ಆಡಳಿತ ಮಂಡಳಿ ಇಂದಿನಿಂದ ಬಸ್ ವ್ಯವಸ್ಥೆ ಮಾಡುತ್ತೀವಿ ಎಂದಿತ್ತು. ಈಗ ಕಡಿಮೆ ಬಸ್ ಇರುವುದರಿಂದ ಪ್ರಯಾಣಿಕರು ಮುಗಿಬೀಳುತ್ತಿದ್ದಾರೆ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಕಡಿಮೆ ಬಿಎಂಟಿಸಿ ಬಸ್ ಇರುವುದರಿಂದ ಪ್ರಯಾಣಿಕರು ಬಸ್‍ಗಾಗಿ ಮುಗಿಬೀಳುತ್ತಿದ್ದಾರೆ. ಯಾವುದೇ ಸಾಮಾಜಿಕ ಅಂತರವಿಲ್ಲದೇ ಬಸ್ ಹತ್ತಲು ನೂಕು-ನುಗ್ಗಲು ಉಂಟಾಗಿದೆ. ಅಲ್ಲದೇ ಒಂದು ಬಸ್ಸಿನಲ್ಲಿ 30 ಜನರಿಗಷ್ಟೇ ಅವಕಾಶ ಎಂದು ಸರ್ಕಾರ ಆದೇಶಿಸಿತ್ತು. ಆದರೆ ಈಗ ಬಸ್ ಫುಲ್ ರಶ್ ಆಗುತ್ತಿದೆ. ಜೊತೆಗೆ ಬಸ್ ನಿಲ್ದಾಣದಲ್ಲಿ ಥರ್ಮಲ್ ಸ್ಕ್ರೀನಿಂಗ್ ಕೂಡ ಮಾಡುತ್ತಿಲ್ಲ. ಹೀಗಾಗಿ ಬಸ್ ಸಿಗದೇ ಪ್ರಯಾಣಿಕರು ಪರದಾಡುತ್ತಿದ್ದಾರೆ.

  • ಕ್ವಾರಂಟೈನ್‍ನಲ್ಲಿ ಇರ್ಬೇಕಾದ ದಂಪತಿ ಓಡಾಟ- ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಪತ್ತೆ

    ಕ್ವಾರಂಟೈನ್‍ನಲ್ಲಿ ಇರ್ಬೇಕಾದ ದಂಪತಿ ಓಡಾಟ- ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಪತ್ತೆ

    ಬೆಂಗಳೂರು: ಕೊರೊನಾ ಮಹಾಮಾರಿ ರಾಜ್ಯಕ್ಕೆ ಒಕ್ಕರಿಸಿ ತಾಂಡವವಾಡುತ್ತಿದ್ದರೂ ಜನ ಮಾತ್ರ ಕ್ಯಾರೇ ಅಂತಿಲ್ಲ. ಕೈಗೆ ಸೀಲ್ ಹಾಕಿ ಕ್ವಾರಂಟೈನ್ ನಲ್ಲಿ ಇರಿ ಅಂದರೂ ಜನ ಮಾತ್ರ ಹೊರಗಡೆ ಓಡಾಡುತ್ತಾನೆ ಬಂದಿದ್ದಾರೆ. ಇಂದು ಕೂಡ ಇದೇ ರೀತಿಯಲ್ಲಿ ದಂಪತಿ ಮೆಜೆಸ್ಟಿಕ್ ನಲ್ಲಿ ಸಿಕ್ಕಿಬಿದ್ದಿದ್ದಾರೆ.

    ಹೈದರಾಬಾದ್‍ನಿಂದ ಆಗಮಿಸಿರೋ ದಂಪತಿ ಕ್ವಾರಂಟೈನ್ ಸೀಲ್ ಇದ್ದರೂ ಮೆಜೆಸ್ಟಿಕ್‍ನಲ್ಲಿ ಓಡಾಡಿದ್ದಾರೆ. ಚಿತ್ರದುರ್ಗಕ್ಕೆ ತೆರಳಲು ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಓಡಾಟ ನಡೆಸಿದ್ದಾರೆ. ಈ ವೇಳೆ ದಂಪತಿ ಕೈಯಲ್ಲಿ ಸೀಲ್‍ನೋಡಿ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಗಾಬರಿಗೊಳಗಾಗಿದ್ದಾರೆ. ಕೊನೆಗೆ ಆಟೋ ಮೂಲಕ ಜಯನಗರ ಸೌತ್ ಅಂಡ್‍ಗೆ ದಂಪತಿ ತೆರಳಿದ್ದಾರೆ.

    ಇತ್ತ ಮತ್ತೊಬ್ಬ ಹೋಮ್ ಕ್ವಾರಟೈನ್ ಕೂಡ ಮೆಜೆಸ್ಟಿಕ್ ನಲ್ಲಿ ಇಂದು ಪತ್ತೆಯಾಗಿದ್ದಾನೆ. ಟ್ರೈನ್ ಇಳಿದು ತಮ್ಮ ತಮ್ಮ ಊರಿಗೆ ಹೋಗೋದಕ್ಕೆ ಹೊರ ರಾಜ್ಯದವರು ಮೆಜೆಸ್ಟಿಕ್ ಕಡೆ ಬರುತ್ತಿದ್ದಾರೆ. ಹಾಗೆಯೇ ಉತ್ತರ ಪ್ರದೇಶದಿಂದ ಬಂದಿರುವ ವ್ಯಕ್ತಿಯೊಬ್ಬ ಬಾಗಲಕೋಟೆ ಬಸ್ ಹತ್ತಲು ಬಂದಿದ್ದಾನೆ.

    ಈ ವೇಳೆ ಆತನ ಕೈಯಲ್ಲಿ ಕ್ವಾರಂಟೈನ್ ಸೀಲ್ ನೋಡಿದ ಕೆಎಸ್ ಆರ್ ಟಿಸಿ ಸಿಬ್ಬಂದಿ ಖಾಸಗಿ ವಾಹನದಲ್ಲಿ ತೆರಳುವಂತೆ ಹೇಳಿದ್ದಾರೆ. ಅಲ್ಲದೆ ಮೆಜೆಸ್ಟಿಕ್ ನಿಂದ ಹೊರ ಭಾಗದಲ್ಲೇ ಪೊಲೀಸರು ಕೂಡ ಆತನನ್ನು ತಡೆದಿದ್ದಾರೆ.

  • ಬೆಳಗ್ಗೆಯ ಬಸ್ಸಿಗೆ ರಾತ್ರಿಯೆಲ್ಲಾ ಕಾದ್ರು- ಕೊರೊನಾಗೆ ನಲುಗಿ ಊರಿನತ್ತ ಹೊರಟ ಜನ

    ಬೆಳಗ್ಗೆಯ ಬಸ್ಸಿಗೆ ರಾತ್ರಿಯೆಲ್ಲಾ ಕಾದ್ರು- ಕೊರೊನಾಗೆ ನಲುಗಿ ಊರಿನತ್ತ ಹೊರಟ ಜನ

    ಬೆಂಗಳೂರು: ಬೆಳಗ್ಗೆಯ ಬಸ್‍ಗೆ ಜನರು ರಾತ್ರಿ ಮಕ್ಕಳ ಜೊತೆ ಬಸ್ ನಿಲ್ದಾಣದಲ್ಲಿ ಕಳೆದಿದ್ದಾರೆ.

    ಸಂಜೆ ಆರು ಗಂಟೆಗೆ ಬಂದ ಬಹುತೇಕ ಜನಕ್ಕೆ ಬಸ್ ಸಿಕ್ಕಿರಲಿಲ್ಲ. ಇನ್ನು ವಾಪಸ್ ಮನೆಗೆ ಹೋಗಲು ಯಾವುದೇ ವಾಹನದ ವ್ಯವಸ್ಥೆ ಇಲ್ಲ. ಹಾಗಾಗಿ ಜನ ಬಸ್ ನಿಲ್ದಾಣದಲ್ಲಿಯೇ ರಾತ್ರಿ ಕಳೆದಿದ್ದಾರೆ. ಒಂದು ಬಸ್ ಗೆ ಕೇವಲ 30 ಜನರಿಗೆ ಮಾತ್ರ ಅವಕಾಶ ನೀಡಲಾಗ್ತಿದೆ. ಹಾಗಾಗಿ ಬಸ್ ಸಿಗದಿದ್ದರೆ ಹೇಗೆ ಅಂತ ಬಹುತೇಕರು ಪ್ರಯಾಣಿಕರು ನಿಲ್ದಾಣದಲ್ಲಿಯೇ ಇರುವಂತಾಯ್ತು.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಮಹಿಳೆ, ನಾವು ಶಿರಗುಪ್ಪಕ್ಕೆ ಹೋಗಬೇಕು. ರಾತ್ರಿ ಬಸ್ ಇರುತ್ತೆ ಅಂತ ಸಂಜೆ ಆರು ಗಂಟೆಗೆ ಮೆಜೆಸ್ಟಿಕ್ ಗೆ ಬಂದರೆ ಯಾವುದೇ ಬಸ್ ಸಿಗಲಿಲ್ಲ. ಮತ್ತೆ ಮನೆಗೆ ಹೋಗಲು ಆಗಲ್ಲ. ಅನಿವಾರ್ಯವಾಗಿ ಬಸ್ ನಿಲ್ದಾಣದಲ್ಲಿ ಇದ್ದೇವೆ ಅಂತಾ ಹೇಳಿದರು.

  • ಲಾಕ್‍ಡೌನ್ ಸಡಿಲಿಕೆಯ ಮೊದ್ಲ ದಿನವೇ ಅಪಘಾತ – ಬಸ್ ಡಿಕ್ಕಿ ಹೊಡೆದು ವ್ಯಕ್ತಿ ಸಾವು

    ಲಾಕ್‍ಡೌನ್ ಸಡಿಲಿಕೆಯ ಮೊದ್ಲ ದಿನವೇ ಅಪಘಾತ – ಬಸ್ ಡಿಕ್ಕಿ ಹೊಡೆದು ವ್ಯಕ್ತಿ ಸಾವು

    ಬೆಂಗಳೂರು: ಸುಮಾರು ಒಂದೂವರೆ ತಿಂಗಳ ನಂತರ ಕರ್ನಾಟಕ ಲಾಕ್‍ಡೌನ್‍ನಿಂದ ಸಡಿಲಿಕೆ ಆಗಿದೆ. ಆದರೆ ಲಾಕ್‍ಡೌನ್ ಸಡಿಲಿಕೆ ಮೊದಲ ದಿನವೇ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಅಪಘಾತ ಸಂಭವಿಸಿದೆ.

    ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ 45 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ. ಫ್ಲಾಟ್ ಫಾರಂ ನಂಬರ್ 15ರಲ್ಲಿ ಈ ಅಪಘಾತ ಸಂಭವಿಸಿದ್ದು, ಕೊಪ್ಪಳ ಘಟಕ ಬಸ್‍ನಿಂದ ಅಪಘಾತವಾಗಿದೆ.

    ಲಾಕ್‍ಡೌನ್ ಸಡಿಲಿಕೆಯಾದ ಪರಿಣಾಮ ಸಾವಿರಾರು ಜನರು ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಜಮಾಯಿಸಿದ್ದಾರೆ. ಹೀಗಾಗಿ ಜನಸಂಖ್ಯೆ ಜಾಸ್ತಿ ಆದ ಪರಿಣಾಮ ಬಸ್ ನಿಲ್ದಾಣದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಹೊರಡುತ್ತಿದ್ದ ಸಂದರ್ಭದಲ್ಲಿ ವ್ಯಕ್ತಿಗೆ ಬಸ್ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.

    ಡಿಕ್ಕಿಯ ರಭಸಕ್ಕೆ ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇನ್ನೂ ಅಪಘಾತದ ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಬಂದು ಸ್ಥಳದಿಂದ ಮೃತದೇಹವನ್ನು ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಅಪಘಾತವಾಗಿ ರಕ್ತ ಚೆಲ್ಲಿದ ಜಾಗಕ್ಕೆ ಮಣ್ಣು ಹಾಕಿ ಮುಚ್ಚಲಾಗಿದೆ. ಇತ್ತ ಅಪಘಾತವಾಗುತ್ತಿದ್ದಂತೆ ಚಾಲಕ ಬಸ್ ಬಿಟ್ಟು ಓಡಿ ಹೋಗಿದ್ದಾನೆ.

  • ಮೆಜೆಸ್ಟಿಕ್‍ನಲ್ಲಿ ಜನವೋ ಜನ – ಅರಮನೆ ಮೈದಾನದಲ್ಲೂ ಸಾವಿರಾರು ಮಂದಿ ಕ್ಯೂ

    ಮೆಜೆಸ್ಟಿಕ್‍ನಲ್ಲಿ ಜನವೋ ಜನ – ಅರಮನೆ ಮೈದಾನದಲ್ಲೂ ಸಾವಿರಾರು ಮಂದಿ ಕ್ಯೂ

    ಬೆಂಗಳೂರು: ಕೊರೊನಾ ಲಾಕ್‍ಡೌನ್‍ನಿಂದ ಅನೇಕ ಕಾರ್ಮಿಕರು ತಮ್ಮ ತಮ್ಮ ಗ್ರಾಮಕ್ಕೆ ಹೋಗಲು ಸಾಧ್ಯವಾಗದೆ ಬೆಂಗಳೂರಿನಲ್ಲಿ ಲಾಕ್ ಆಗಿದ್ದರು. ಆದರೆ ಇಂದು ಲಾಕ್‍ಡೌನ್ ಸಡಿಲಿಕೆ ಆಗಿದ್ದೇ ತಡ ಮೆಜೆಸ್ಟಿಕ್‍ನಲ್ಲಿ ಜನಸಾಗರವೇ ಸೇರಿದೆ.

    ಮೆಜೆಸ್ಟಿಕ್‍ನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಗುಂಪು ಸೇರಿದ್ದಾರೆ. ಮೆಜೆಸ್ಟಿಕ್ ಶಾಂತಲಾ ಸಿಲ್ಕ್ ಹೌಸ್ ರಸ್ತೆ ಬಳಿ ಜನಸಾಗರವೇ ಸೇರಿದ್ದು, ಕಣ್ಣಾಯಿಸಿದಷ್ಟು ದೂರ ಮೆಜೆಸ್ಟಿಕ್‍ನಲ್ಲಿ ಜನರು ಕಾಣುತ್ತಿದ್ದಾರೆ. ಕನಿಷ್ಠ 2 ಸಾವಿರಕ್ಕೂ ಅಧಿಕ ಪ್ರಯಾಣಿಕರು ಒಂದೆಡೆ ಸೇರಿದ್ದಾರೆ. ಜನರ ಗುಂಪು ನೋಡಿ ಪೊಲೀಸರು ಫುಲ್ ಕನ್‍ಫ್ಯೂಶನ್ ಆಗಿದ್ದು, ಇಡೀ ಮೆಜೆಸ್ಟಿಕ್ ನಿಲ್ದಾಣಕ್ಕೆ ಔಷಧಿ ಸಿಂಪಡನೆ ಮಾಡಲಾಗಿದೆ.

    ಕೊರೊನಾ ಲಾಕ್‍ಡೌನ್ ಪರಿಣಾಮದಿಂದ ಮಾಡಲು ಕೆಲಸವಿಲ್ಲದೆ ಕಾರ್ಮಿಕರು ಬೆಂಗಳೂರಿನಲ್ಲಿ ಲಾಕ್ ಆಗಿದ್ದರು. ಸರ್ಕಾರ ಮೂರು ದಿನ ಕಾರ್ಮಿಕರಿಗೆ ಉಚಿತ ಬಸ್ ಸಂಚಾರದ ವ್ಯವಸ್ಥೆ ಮಾಡಿದ್ದಾರೆ. ಹೀಗಾಗಿ ಮುಂಜಾನೆಯಿಂದಲೇ ಲಾಕ್‍ಡೌನ್ ಪ್ರಯಾಣಿಕರು ತಮ್ಮ ತಮ್ಮ ಲಗೇಜ್‍ಗಳನ್ನು ತುಂಬಿಕೊಂಡು ಮೆಜೆಸ್ಟಿಕ್‍ಗೆ ಬಂದಿದ್ದಾರೆ. ಉಚಿತ ಪ್ರಯಾಣ ಎಂದು ಪತ್ನಿ, ಮಕ್ಕಳು ಮನೆಯವರೆಲ್ಲ ಊರಿಗೆ ವಾಪಸ್ ಹೋಗುತ್ತಿದ್ದಾರೆ.

    ಪ್ರಯಾಣಿಕರು ಊರಿಗೆ ಹೋಗುವಾಗ ಅಕ್ಕಿ, ಬೇಳೆ, ಗೋದಿ ಸೇರಿದಂತೆ ಎಲ್ಲಾ ರೇಷನ್ ಸಹ ಜೊತೆಯಲ್ಲಿ ತೆಗೆದುಕೊಂಡು ಹೋಗುತ್ತಿದ್ದಾರೆ. ಪುಟಾಣಿ ಕಂದಮ್ಮ ತೊಡೆಯ ಮೇಲೆ ಹಾಕಿಕೊಂಡು ಬಸ್‍ಗಾಗಿ ಸಾವಿರಾರು ಪ್ರಯಾಣಿಕರು ಕಾದು ಕುಳಿತಿದ್ದಾರೆ. ಹೀಗಾಗಿ ಮೆಜೆಸ್ಟಿಕ್ ಒಳಗೆ ಟ್ರಾಫಿಕ್ ಜಾಮ್ ಉಂಟಾಗಿದೆ.

    ಆಶಾ ಕಾರ್ಯಕರ್ತೆಯರು, ವೈದ್ಯರು, ಡಾಕ್ಟರ್ ಮೆಜೆಸ್ಟಿಕ್‍ನಲ್ಲಿ ಕೆಲಸ ಆರಂಭಿಸಿದ್ದಾರೆ. ಬಸ್ ಹತ್ತುವ ಮುನ್ನ ಡ್ರೈವರ್, ಕಂಡೆಕ್ಟರ್ ಮತ್ತು ಪ್ರಯಾಣಿಕರು ತಪಾಸಣೆಗೆ ಒಳಪಡಬೇಕು. ಹೀಗಾಗಿ ಪ್ಲಾಟ್ ಫಾರಂ ಬಸ್ ಏರಿ ಟೆಂಪರೇಚರ್ ಚೆಕ್ ಅಪ್ ಮಾಡುತ್ತಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಮೆಜೆಸ್ಟಿಕ್ ಎಲ್ಲಾ ಭಾಗಗಳಿಗೂ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

    ಕೊರೊನಾ ಲಾಕ್‍ಡೌನ್ ಬಂದ್ ಸಡಲಿಕೆ ಹಿನ್ನೆಲೆಯಲ್ಲಿ ಇಂದು ಮೆಜೆಸ್ಟಿಕ್ ತುಂಬ ಬಸ್ಸುಗಳದ್ದೇ ಕಾರುಬಾರು ಆಗಿದೆ. ಈ ಮೂಲಕ ಮೆಜೆಸ್ಟಿಕ್ ನಿಲ್ದಾಣ ಸಹಜ ಸ್ಥಿತಿಯತ್ತ ಬರುತ್ತಿದೆ. ಇಷ್ಟು ದಿನ ಖಾಲಿ ಇದ್ದ ರಸ್ತೆಗಳು ಇಂದು ಬಸ್ಸುಗಳಿಂದ ತುಂಬಿ ಹೋಗಿದೆ. ನೂರಾರು ಕೆಎಸ್‌ಆರ್‌ಟಿಸಿ ಬಸ್ಸುಗಳು ಶೆಡ್ಯೂಲ್ ಪ್ರಕಾರ ಸಂಚಾರಕ್ಕೆ ಸಜ್ಜಾಗಿದೆ. ಇನ್ನೂ ಆಟೋ, ದ್ವಿಚಕ್ರ ವಾಹನ, ಕ್ಯಾಬ್ ಕೂಡ ತಮ್ಮ ತಮ್ಮ ಸಂಚಾರ ಆರಂಭಿಸಿದೆ.

    ಅರಮನೆ ಮೈದಾನದಲ್ಲಿ ರಾಜಸ್ಥಾನದ ಜನರು ತುಂಬಿ ತುಳುಕುತ್ತಿದ್ದಾರೆ. ಲಾಕ್‍ಡೌನ್ ಪರಿಣಾಮ ಬೆಂಗಳೂರಿನಲ್ಲಿ ಬೀಡು ಬಿಟ್ಟದ್ದ ರಾಜಸ್ಥಾನದ ಜನರು ಊರಿಗೆ ಹೋಗಲು ಪ್ಯಾಲೇಸ್ ಗ್ರೌಂಡ್ ಮುಂಭಾಗ ಬಂದಿದ್ದಾರೆ. ಬೆಂಗಳೂರು ಟು ಜೈಪರ್ ಟ್ರೈನ್‍ನಿಂದ ಬರುವಂತೆ ಸೂಚಿಸಿದ್ದಾರೆ. ಹೀಗಾಗಿ ಅರಮನೆ ಮೈದಾನದಿಂದ ಬಸ್ ಮೂಲಕ ಬೆಂಗಳೂರು ರೈಲ್ವೇ ಸ್ಟೇಷನ್‍ಗೆ ಹೋಗುತ್ತಾರೆ. ಹೀಗಾಗಿ ಸಾವಿರಾರು ಜನರು ಒಂದು ಕಿಲೋ ಮೀಟರ್‌ವರೆಗೂ ಕ್ಯೂ ನಿಂತಿದ್ದಾರೆ.

  • ಹುಷಾರಾಗಿ ಹೋಗಿ, ಪುಟ್ಟ ಮಗುವಿದೆ- ಧೈರ್ಯ ತುಂಬಿದ ಪೊಲೀಸ್

    ಹುಷಾರಾಗಿ ಹೋಗಿ, ಪುಟ್ಟ ಮಗುವಿದೆ- ಧೈರ್ಯ ತುಂಬಿದ ಪೊಲೀಸ್

    – ಹಸಿದವರಿಗೆ ಅನ್ನ, ನೀರು ನೀಡಿದ ಖಾಕಿ

    ಬೆಂಗಳೂರು: ಕೊರೊನಾ ವೈರಸ್ ಸೃಷ್ಟಿಸಿದ ಆತಂಕದಲ್ಲಿ ಪೊಲೀಸರು ಜನರು ನಿಯಮ ಪಾಲಿಸುವಂತೆ ಕರ್ತವ್ಯ ನಿರ್ವಹಿಸುವುದರ ಜೊತೆಗೆ ಹಸಿದವರಿಗೆ ಅನ್ನ, ನೀರು ನೀಡಿ ಮಾನವೀಯತೆ ಮೆರೆಯುತ್ತಿದ್ದಾರೆ. ಇಂತಹದ್ದೇ ದೃಶ್ಯಗಳು ಶನಿವಾರ ರಾತ್ರಿ ಮೆಜೆಸ್ಟಿಕ್‍ನ ಬಿಎಂಟಿಸಿ ನಿಲ್ದಾಣದಲ್ಲಿ ಕಂಡು ಬಂದವು.

    ಬೆಂಗಳೂರಿನ ವಿವಿಧ ಪ್ರದೇಶಗಳಿಂದ ನೂರಾರು ಜನರು ಶನಿವಾರ ರಾತ್ರಿಯೇ ಮೆಜೆಸ್ಟಿಕ್‍ಗೆ ಬಂದು ತಲುಪಿದ್ದರು. ಉತ್ತರ ಕರ್ನಾಟಕದ ವಲಸೆ ಕಾರ್ಮಿಕರು ಊಟ, ನಿದ್ದೆಯಿಲ್ಲದೆ ಈಡೀ ರಾತ್ರಿ ಜಾಗರಣೆ ಮಾಡಿದರು. ಅವರ ಹಸಿವಿನ ಸಂಕಟಕ್ಕೆ ಸ್ಪಂದಿಸಿದ ಪೊಲೀಸರು ಬಿಸ್ಕೇಟ್, ನೀರು ಹಂಚಿದರು. ಜೊತೆಗೆ ಮಕ್ಕಳು ಮತ್ತು ವಯೋವೃದ್ಧರಿಗೆ ಸ್ಯಾನಿಟೈಸರ್ ಹಾಕಿ ಮಾನವೀಯತೆ ಮೆರೆದರು. ಇದನ್ನೂ ಓದಿ: ಮೆಜೆಸ್ಟಿಕ್‍ನ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಜನ ಜಾತ್ರೆ- ಸಾಮಾಜಿಕ ಅಂತರ ಮರೆತ ಜನ

    ಓರ್ವ ಪೊಲೀಸ್ ಸಿಬ್ಬಂದಿ ಮಗುವನ್ನು ಎತ್ತಿಕೊಂಡು ಕುಳಿತಿದ್ದ ಮಹಿಳೆ ಬಳಿ ಹೋಗಿ ಆಹಾರ ನೀಡಿದರು. ಜೊತೆಗೆ ‘ಹುಷಾರಾಗಿ ನಿಮ್ಮೂರಿಗೆ ಹೋಗಿ. ಪುಟ್ಟ ಮಗು ಇದೆ’ ಎಂದು ಧೈರ್ಯ ತುಂಬಿದ ದೃಶ್ಯಗಳು ಕಂಡು ಮೆಜೆಸ್ಟಿಕ್‍ನಲ್ಲಿ ಕಂಡು ಬಂದವು. ಇದನ್ನೂ ಓದಿ: ಯಾವ ಜಿಲ್ಲೆಯಲ್ಲಿ ಎಷ್ಟು ಕಂಟೈನ್‍ಮೆಂಟ್ ಝೋನ್?

    ವಲಸೆ ಕಾರ್ಮಿಕರು, ತಮ್ಮ ಊರುಗಳಿಗೆ ಹೋಗಲು ಮೆಜಸ್ಟಿಕ್‍ಗೆ ಬಂದಿದ್ದ ಜನರು ರಾತ್ರಿಯಲ್ಲಾ ನರಕಯಾತನೆ ಅನುಭವಿಸುವಂತಾಗಿತ್ತು. ಮಹಿಳೆಯರಿಗೆ ಬಯಲು ಶೌಚವೇ ಗತಿಯಾಗಿತ್ತು. ಕೆಲವರು ಮಕ್ಕಳನ್ನು ತಮ್ಮ ಪಕ್ಕದಲ್ಲೇ ಮಲಗಿಸಿಕೊಂಡು ರಾತ್ರಿ ಕಳೆದರು.

  • ಮೆಜೆಸ್ಟಿಕ್‍ನ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಜನ ಜಾತ್ರೆ- ಸಾಮಾಜಿಕ ಅಂತರ ಮರೆತ ಜನ

    ಮೆಜೆಸ್ಟಿಕ್‍ನ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಜನ ಜಾತ್ರೆ- ಸಾಮಾಜಿಕ ಅಂತರ ಮರೆತ ಜನ

    ಬೆಂಗಳೂರು: ಇಕ್ಕಟಿನಲ್ಲಿ ಸಿಲುಕಿದ್ದ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳನ್ನು ತವರು ಜಿಲ್ಲೆಗಳಿಗೆ ಕಳಿಸಲು ರಾಜ್ಯ ಸರ್ಕಾರ ಸಾರಿಗೆ ವ್ಯವಸ್ಥೆಯನ್ನ ಮಾಡಿದೆ. ಆದರೆ ಪ್ರಯಾಣಿಕರು ಮಾತ್ರ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ನಿರ್ಲಕ್ಷ್ಯ ವಹಿಸುತ್ತಿದ್ದಾರೆ.

    ಮೆಜೆಸ್ಟಿಕ್‍ನ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಸಾವಿರಾರು ಜನ ಗುಂಪು ಗುಂಪಾಗಿ ಓಡಾಡುವುದು, ನಿಂತುಕೊಂಡಿರುವ ದೃಶ್ಯಗಳು ಸಾಮಾನ್ಯವಾಗಿ ಕಂಡು ಬಂದವು. ಅನೇಕರು ಮಾಸ್ಕ್ ಧರಿಸದೇ ಬಸ್ ನಿಲ್ದಾಣದಲ್ಲಿ ಕುಳಿತಿದ್ದರು ಹಾಗೂ ಓಡಾಡುತ್ತಿದ್ದರು.

    ಸರ್ಕಾರ ಇಷ್ಟೇಲ್ಲ ಅನುಕೂಲ ಒದಗಿಸಿದರೂ ಸಾರ್ವಜನಿಕರು ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದನ್ನು ಮರೆತಿದ್ದು ಬೇಸರದ ಸಂಗತಿಯಾಗಿದೆ. ನೂರಾರು ಜನರು ರಾತ್ರಿಯೇ ಬಸ್ ನಿಲ್ದಾಣಕ್ಕೆ ಬಂದಿದ್ದರಿಂದ ಜನದಟ್ಟನೆ ಹೆಚ್ಚಾಗಿತ್ತು. ಹೀಗಾಗಿ ಜನರು ಎಲ್ಲಂದರಲ್ಲಿ ಕುಳಿತು, ಮಲಗಿ ಕಾಲ ಕಳೆದರು. ಅಷ್ಟೇ ಅಲ್ಲದೆ ಬೆಳಗ್ಗೆಯೂ ಸಾಮಾಜಿಕ ಅಂತರ ಕಂಡು ಬರಲಿಲ್ಲ.

    ಬೆಂಗಳೂರಿನಿಂದ ವಿವಿಧ ಜಿಲ್ಲೆಗಳಿಗೆ ತೆರಳುವವರು ಜಿಲ್ಲಾಧಿಕಾರಿಗಳು ಅಥವಾ ಜಿಲ್ಲಾ ವರಿಷ್ಠಾಧಿಕಾರಿಗಳಿಂದ ಅನುಮತಿ ಪಡೆದು ಖಾಸಗಿ ವಾಹನಗಳಲ್ಲಿಯೂ ಸಂಚರಿಸಬಹುದಾಗಿದೆ. ರೆಡ್‍ಝೋನ್‍ಗಳಿಗೆ ಬಸ್ ಸಂಚಾರ ಇರುವುದಿಲ್ಲ. ರಾಜ್ಯ ಸಾರಿಗೆ ರಸ್ತೆ ಇಲಾಖೆಯು ಪ್ರತಿ ಡಿಪೋದಿಂದ ಒಟ್ಟು 150 ಕೆಎಸ್‌ಆರ್‌ಟಿಸಿ ಬಸ್‍ಗಳನ್ನ ಕರೆಸಿಕೊಂಡಿದೆ. ಈ ಎಲ್ಲಾ ಬಸ್‍ಗಳು ರಾಜ್ಯದ ವಿವಿಧ ಜಿಲ್ಲೆಗಳಿಗೆ ಪ್ರಯಾಣ ಬೆಳೆಸಲಿವೆ.

  • ಮೆಜೆಸ್ಟಿಕ್‍ನಲ್ಲಿ ಪಾರಿವಾಳಗಳ ವಿಹಾರ – ವಿಡಿಯೋ ನೋಡಿ

    ಮೆಜೆಸ್ಟಿಕ್‍ನಲ್ಲಿ ಪಾರಿವಾಳಗಳ ವಿಹಾರ – ವಿಡಿಯೋ ನೋಡಿ

    ಬೆಂಗಳೂರು: ಕೊರೊನಾ ವೈರೆಸ್ ಹಿನ್ನೆಲೆಯಲ್ಲಿ ಮೆಜೆಸ್ಟಿಕ್ ಸಂಪೂರ್ಣವಾಗಿ ಲಾಕ್‍ಡೌನ್ ಆಗಿದೆ. ಈ ಹಿನ್ನೆಲೆಯಲ್ಲಿ ಪರಿವಾಳಗಳು ಆರಾಮಾಗಿ ವಿಹಾರಿಸುತ್ತಿವೆ.

    ಹೌದು..ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಸದಾ ಸಾವಿರಾರು ಜನರು ಓಡಾಡುತ್ತಿದ್ದರು. ಜೊತೆಗೆ ಬೈಕ್, ಕಾರ್, ಬಸ್ ಎಂದು ರಸ್ತೆಗಳು ಯಾವಾಗಲೂ ಜಾಮ್ ಆಗಿರುತ್ತಿತ್ತು. ಆದರೆ ಕೊರೊನಾ ಭೀತಿಯಿಂದ ಪ್ರಧಾನಿ ಮೋದಿ ಅವರು 21 ದಿನ ಲಾಕ್‍ಡೌನ್ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಮೆಜೆಸ್ಟಿಕ್ ಇಂದು ಸಂಪೂರ್ಣ ಸ್ತಬ್ಧವಾಗಿದೆ.

    ಆದ್ದರಿಂದ ಮೆಜೆಸ್ಟಿಕ್‍ನಲ್ಲಿ ಪಾರಿವಾಳಗಳು ವಿಹಾರಿಸುತ್ತಿವೆ. ಪಾರಿವಾಳಗಳು ವಿಹಾರಿಸುಷ್ಟೂ ಮೆಜೆಸ್ಟಿಕ್‍ನಲ್ಲಿ ಪ್ರಶಾಂತತೆ ಇದೆ. ಈ ಮೂಲಕ ಜನರ ಬದಲಿಗೆ ಪಾರಿವಾಳಗಳು ರಸ್ತೆಗಿಳಿದಿವೆ. ವಿರಳ ಸಂಖ್ಯೆಯಲ್ಲಿ ಆಟೋ ಮತ್ತು ಬೈಕ್ ಮೆಜೆಸ್ಟಿಕ್‍ನಲ್ಲಿ ಓಡಾಡುತ್ತಿವೆ.

    ಮಹಾಮಾರಿ ಕೊರೊನಾ ವೈರಸ್ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಆತಂಕ ಹೆಚ್ಚಿಸುತ್ತಿದೆ. ಬುಧವಾರ 51 ಇದ್ದ ಕೊರೊನಾ ಪ್ರಕರಣ ಗುರುವಾರ ದಿಢೀರನೇ 55ಕ್ಕೆ ಏರಿಕೆಯಾಗಿದೆ. ಕಳೆದ ಒಂದೇ ದಿನ ನಾಲ್ಕು ಪಾಸಿಟಿವ್ ಪ್ರಕರಣಗಳ ಪತ್ತೆಯಾಗಿವೆ. ಇದನ್ನ ಗಮನಿಸಿದರೆ ದೇಶದಲ್ಲಿ ಕೊರೊನಾ 3ನೇ ಹಂತಕ್ಕೆ ಕಾಲಿಟ್ಟಿದ್ಯಾ ಎಂಬ ಅನುಮಾನ ಮೂಡಲು ಶುರುವಾಗಿದೆ.

  • ಜನತಾ ಕರ್ಫ್ಯೂ ನಡುವೆಯೇ ಸರಳ ವಿವಾಹ

    ಜನತಾ ಕರ್ಫ್ಯೂ ನಡುವೆಯೇ ಸರಳ ವಿವಾಹ

    ಬೆಂಗಳೂರು: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಜನತಾ ಕರ್ಫ್ಯೂಗೆ ಕರೆ ನೀಡಿದ್ದು, ಈ ಮಧ್ಯೆ ಸರಳ ವಿವಾಹವೊಂದು ನಡೆದಿದೆ.

    ಹೌದು. ನಗರದ ಅಣ್ಣಮ್ಮ ದೇವಾಲಯದಲ್ಲಿ ಜೋಡಿಯೊಂದು ನವ ಜೀವನಕ್ಕೆ ಕಾಲಿಟ್ಟಿದೆ. ಸಮಸ್ಯೆ ಎಂದು ಹೇಳಿ ಕಡಿಮೆ ಜನರೊಂದಿಗೆ ಮದುವೆ ಕಾರ್ಯ ಮುಗಿಸಿದ್ದಾರೆ. ಅಲ್ಲದೆ ಈ ಬಗ್ಗೆ ಮಾತನಾಡಿ, ಕೊರೊನಾ ಹಿನ್ನೆಲೆಯಲ್ಲಿ ಸರಳವಾಗಿ ಕಡಿಮೆ ಜನ ಮದುವೆಗೆ ಬಂದಿದ್ದೀವಿ. ಕಷ್ಟದಲ್ಲಿ ನಾವು ಈಗ ಮದುವೆಗೆ ಮುಂದಾಗಿದ್ದೆವು. ನಾವು ಶೇಷಾದ್ರಿಪುರಂ ನಿವಾಸಿಗಳು ಎಂದು ತಿಳಿಸಿದ್ದಾರೆ.

    ಒಟ್ಟಿನಲ್ಲಿ ಪ್ರಧಾನಿ ಕರೆ ಕೊಟ್ಟ ಜನತಾ ಕರ್ಫ್ಯೂಗೆ ಬೆಂಬಲ ವ್ಯಕ್ತವಾಗುತ್ತಿದೆ. ಬೆಂಗಳೂರಿನ ಹೃದಯ ಭಾಗ ಮೆಜೆಸ್ಟಿಕ್ ಬಸ್ ನಿಲ್ದಾಣ ಜನರಿಲ್ಲದೆ ಭಣಗುಡುತ್ತಿದೆ. ಫ್ಲಾಟ್ ಫಾರಂ 1 ರಿಂದ 34 ರ ರವರೆಗೂ ಜನವೇ ಇಲ್ಲದೇ ಖಾಲಿ ಹೊಡೆಯುತ್ತಿದ್ದು, ಈ ಮೂಲಕ ಜನತಾ ಕರ್ಫ್ಯೂಗೆ ಅಭೂತ ಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ.

    ಮೆಜೆಸ್ಟಿಕ್ ಕಪಾಲಿ ಚಿತ್ರಮಂದಿರ ರಸ್ತೆಯಲ್ಲಿ ಹಾಲು ಮಾರಾಟ ಮಾತ್ರ ನಡೆಯುತ್ತಿದ್ದು, ಬಿಎಂಟಿಸಿ, ಕೆಎಸ್‍ಆರ್‍ಟಿಸಿ, ನಮ್ಮ ಮೆಟ್ರೋ ಸೇವೆ ಬಂದ್ ಆಗಿದೆ.