Tag: ಮೆಜೆಸ್ಟಿಕ್

  • ದೇವರ ದರ್ಶನಕ್ಕೆಂದು ಹೊರಟಿದ್ದ ನಿವೃತ್ತ ಪೊಲೀಸ್ ಶವವಾಗಿ ಪತ್ತೆ – ಮೃತರ ಬಳಿಯಿದ್ದ ಚಿನ್ನಾಭರಣ, ಹಣ ನಾಪತ್ತೆ

    ದೇವರ ದರ್ಶನಕ್ಕೆಂದು ಹೊರಟಿದ್ದ ನಿವೃತ್ತ ಪೊಲೀಸ್ ಶವವಾಗಿ ಪತ್ತೆ – ಮೃತರ ಬಳಿಯಿದ್ದ ಚಿನ್ನಾಭರಣ, ಹಣ ನಾಪತ್ತೆ

    ಬೆಂಗಳೂರು: ದೇವರ ದರ್ಶನಕ್ಕೆ ತೆರಳುವುದಾಗಿ ಹೊರಟ ವ್ಯಕ್ತಿ ಶವವಾಗಿ ಪತ್ತೆಯಾದ ಘಟನೆ ಮೆಜೆಸ್ಟಿಕ್‌ನ (Majestic) ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ.

    ದೊಡ್ಡಬಳ್ಳಾಪುರದ (Doddaballapura) ಮದುರನ ಹೊಸಹಳ್ಳಿ ನಿವಾಸಿ, ನಿವೃತ್ತ ಪೊಲೀಸ್ (Retired police) ಸಿಬ್ಬಂದಿ ಮುನಿ ಆಂಜನೇಯ ಮೃತ ವ್ಯಕ್ತಿ. ಗೆಳೆಯರ ಜೊತೆ ಧರ್ಮಸ್ಥಳಕ್ಕೆ (Dharmasthala) ತೆರಳುವುದಾಗಿ ಮುನಿ ಆಂಜನೇಯ ಸೋಮವಾರ 2 ಗಂಟೆಗೆ ಮನೆಯಿಂದ ಹೊರಟಿದ್ದರು. ಬಳಿಕ ಮೆಜೆಸ್ಟಿಕ್‌ನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ (KSRTC bus stand) ಗೆಳೆಯರಿಗಾಗಿ ಕಾದು ಕುಳಿತಿದ್ದಾಗ ಸಂಶಯಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಬೆಳಗಿನ ಜಾವ 3 ಗಂಟೆ ಸುಮಾರಿಗೆ ಶವ ಪತ್ತೆಯಾಗಿದೆ. ಇದನ್ನೂ ಓದಿ: ಹೋಳಿ ಬಣ್ಣ ತಾಗಬಾರದೆಂದು ಇಡೀ ಮಸೀದಿಯನ್ನೇ ಟಾರ್ಪಲ್‌ನಿಂದ ಮುಚ್ಚಿದ್ರು

    ಮೃತರ ಬಳಿ ಇದ್ದ ಚಿನ್ನಾಭರಣ ಹಾಗೂ ಕ್ಯಾಶ್ ನಾಪತ್ತೆಯಾಗಿದ್ದು, ಸಾವಿನ ಹಿಂದೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ಸದ್ಯ ಇವರ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಕುರಿತು ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮಾಜಿ ಪ್ರಿಯಕರನಿಂದ ನಟಿ ಮೇಲೆ ಮಾರಣಾಂತಿಕ ಹಲ್ಲೆ: ಫೋಟೋ ಶೇರ್ ಮಾಡಿದ ಅನಿಕಾ

  • ಬಗೆದಷ್ಟು ಬಯಲಾಗ್ತಿದೆ ಬಿಬಿಎಂ ಕರ್ಮಕಾಂಡ

    ಬಗೆದಷ್ಟು ಬಯಲಾಗ್ತಿದೆ ಬಿಬಿಎಂ ಕರ್ಮಕಾಂಡ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮೆಜೆಸ್ಟಿಕ್‌ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಅಗ್ನಿ ಅವಘಡ

    ಮೆಜೆಸ್ಟಿಕ್‌ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಅಗ್ನಿ ಅವಘಡ

    ಬೆಂಗಳೂರು: ಮೆಜೆಸ್ಟಿಕ್‌ನಲ್ಲಿರುವ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದಲ್ಲಿ(KSRTC Bus Stand) ಅಗ್ನಿ ಅವಘಡ ಸಂಭವಿಸಿದೆ.

    ಇಂದು ಸಂಜೆ ಟರ್ಮಿನಲ್‌1 ರ ಪವರ್ ರೂಂನಲ್ಲಿ ಶಾರ್ಟ್‌ ಸರ್ಕ್ಯೂಟ್‌ನಿಂದ(Short Circuit) ಬೆಂಕಿ ಹೊತ್ತಿಕೊಂಡಿದೆ.  ಇದನ್ನೂ ಓದಿ: ಒಂದೇ ವರ್ಷದಲ್ಲಿ ಬೆಂಗಳೂರಿನಲ್ಲಿ ವಾಯು ಮಾಲಿನ್ಯ ಭಾರೀ ಏರಿಕೆ!

    ಬೆಂಕಿ ಕಂಡ ತಕ್ಷಣ ಸ್ಥಳದಲ್ಲಿದ್ದ ಪ್ರಯಾಣಿಕರು, ಅಂಗಡಿ ವ್ಯಾಪಾರಸ್ಥರನ್ನು ಸಿಬ್ಬಂದಿ ಬೇರೆಡೆಗೆ ಕಳುಹಿಸಿ ಸಮಯ ಪ್ರಜ್ಞೆ ತೋರಿಸಿದ್ದಾರೆ. ಸಾರಿಗೆ ಸಿಬ್ಬಂದಿ Fire Extinguisher ಬಳಸಿ ಬೆಂಕಿ ನಂದಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಮ್ಮ ಮೆಟ್ರೋಗೆ ಹೈಟೆಕ್ ಟಚ್ – ನಿಲ್ದಾಣದ ಒಳಗೆ ಮಾಲ್, ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಾಣಕ್ಕೆ ಪ್ಲ್ಯಾನ್

    ನಮ್ಮ ಮೆಟ್ರೋಗೆ ಹೈಟೆಕ್ ಟಚ್ – ನಿಲ್ದಾಣದ ಒಳಗೆ ಮಾಲ್, ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಾಣಕ್ಕೆ ಪ್ಲ್ಯಾನ್

    ಬೆಂಗಳೂರು: ನಮ್ಮ ಮೆಟ್ರೋಗೆ (Namma Metro) ಹೈಟೆಕ್ ಟಚ್ ಸಿಗ್ತಿದೆ. ಮೆಟ್ರೋ ನಿಲ್ದಾಣದ ಒಳಗೆ ಮಾಲ್, ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಾಣಕ್ಕೆ ಬಿಎಂಆರ್‌ಸಿಎಲ್‌ (BMRCL) ಪ್ಲ್ಯಾನ್ ಮಾಡಿದೆ. ಆದಾಯ ಸಂಗ್ರಹಣೆ ಭಾಗವಾಗಿ ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್‍ನಲ್ಲಿ (Majestic)  ಇನ್ನೂ 4 ಮಹಡಿಗಳನ್ನು ನಿರ್ಮಾಣ ಮಾಡಲು ಮುಂದಾಗಿದೆ.

    ಬೆಂಗಳೂರಿನ (Bengaluru) ಮೆಜೆಸ್ಟಿಕ್ ಸದಾ ಜನದಟ್ಟಣೆಯಿಂದ ಕೂಡಿರುವ ಪ್ರದೇಶ. ಪ್ರತಿನಿತ್ಯ ಲಕ್ಷಾಂತರ ಜನರು ಈ ಪ್ರದೇಶಕ್ಕೆ ಭೇಟಿ ನೀಡುತ್ತಾರೆ. ನಮ್ಮ ಮೆಟ್ರೋ ಹೊರತುಪಡಿಸಿ ಕೆಎಸ್‍ಆರ್‌ಟಿಸಿ (KSRTC) ಮತ್ತು ಬಿಎಂಟಿಸಿ (BMTC) ಬಸ್ ನಿಲ್ದಾಣ, ರೈಲು ನಿಲ್ದಾಣ ಸಹ ಇದೇ ಪ್ರದೇಶದಲ್ಲಿದೆ. ಇಲ್ಲಿ ವಾಣಿಜ್ಯ ಚಟುವಟಿಕೆ ಆರಂಭಿಸಿದರೆ ಅನುಕೂಲವಾಗಲಿದೆ ಎಂಬುದು ಬಿಎಂಆರ್‌ಸಿಎಲ್‌ ಲೆಕ್ಕಾಚಾರ. ಈ ಕಾರಣಕ್ಕಾಗಿಯೇ ಮೆಟ್ರೋ ನಿಲ್ದಾಣದಲ್ಲಿ ನಾಲ್ಕು ಮಹಡಿಗಳನ್ನು ನಿರ್ಮಾಣ ಮಾಡಿ ಶಾಪಿಂಗ್ ಮಾಲ್, ಥಿಯೇಟರ್, ಕಚೇರಿಗಳಿಗೆ ಬಾಡಿಗೆ ನೀಡಲು ಬಿಎಂಆರ್‌ಸಿಎಲ್‌ ನಿರ್ಧರಿಸಿದೆ. ಇದನ್ನೂ ಓದಿ: ರಾಜಕೀಯ ಎದುರಾಳಿಗಳಿಗೆ ಸಿದ್ದರಾಮಯ್ಯ ಪ್ರತ್ಯಾಸ್ತ್ರ- ಕ್ಷೇತ್ರ ಘೋಷಣೆ ಮುಂದೂಡಿಕೆಗೆ ಮಾಸ್ಟರ್‌ಪ್ಲಾನ್‌

    ಮೆಜಸ್ಟಿಕ್ ಮೆಟ್ರೋ ನಿಲ್ದಾಣವನ್ನು ಭವಿಷ್ಯದ ವಾಣಿಜ್ಯ ಚಟುವಟಿಕೆಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಮಾಣ ಮಾಡಲಾಗಿದೆ. ನೆಲದಡಿಯಲ್ಲಿಯೇ ಹೊಸದಾಗಿ ನಾಲ್ಕು ಮಹಡಿ ನಿರ್ಮಾಣ ಮಾಡಿ, ವಾಣಿಜ್ಯ ಚಟುವಟಿಕೆಗಳನ್ನು ಆರಂಭಿಸಲಾಗುತ್ತದೆ. ಬಿಎಂಆರ್‌ಸಿಎಲ್‌ ನೆಲದಡಿಯಲ್ಲಿ ನಿರ್ಮಾಣ ಮಾಡಿರುವ ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್ 7 ಎಕರೆ ಪ್ರದೇಶದಲ್ಲಿದೆ. ಜೊತೆಗೆ ನೇರಳೆ ಮಾರ್ಗವನ್ನು ಬೈಯಪ್ಪನಹಳ್ಳಿಯಿಂದ ವೈಟ್‍ಫೀಲ್ಡ್ ತನಕ ವಿಸ್ತರಣೆ ಮಾಡಲಾಗುತ್ತಿದೆ. ಇದನ್ನೂ ಓದಿ: ದಲಿತರು ಬಿಜೆಪಿ ಜೊತೆಗಲ್ಲ, ನನ್ನ ಹೃದಯದಲ್ಲಿದ್ದಾರೆ: ಸಿ.ಟಿ.ರವಿ

    ಮೆಜೆಸ್ಟಿಕ್ ಮೆಟ್ರೋ ನಿಲ್ದಾಣವನ್ನು ಭವಿಷ್ಯದ ವಾಣಿಜ್ಯ ಚಟುವಟಿಕೆಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಮಾಣ ಮಾಡಲಾಗಿದೆ. ನೆಲದಡಿಯಲ್ಲಿಯೇ ಹೊಸದಾಗಿ ನಾಲ್ಕು ಮಹಡಿ ನಿರ್ಮಾಣ ಮಾಡಿ, ವಾಣಿಜ್ಯ ಚಟುವಟಿಕೆಗಳನ್ನು ಆರಂಭಿಸಲಾಗುತ್ತದೆ. ಬಿಎಂಆರ್‌ಸಿಎಲ್‌ ನೆಲದಡಿಯಲ್ಲಿ ನಿರ್ಮಾಣ ಮಾಡಿರುವ ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್ 7 ಎಕರೆ ಪ್ರದೇಶದಲ್ಲಿದೆ. ಜೊತೆಗೆ ನೇರಳೆ ಮಾರ್ಗವನ್ನು ಬೈಯಪ್ಪನಹಳ್ಳಿಯಿಂದ ವೈಟ್‍ಫೀಲ್ಡ್ ತನಕ ವಿಸ್ತರಣೆ ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಯಾಣಿಕರು ಮೆಜೆಸ್ಟಿಕ್ ನಿಲ್ದಾಣಕ್ಕೆ ಭೇಟಿ ನೀಡುವ ನಿರೀಕ್ಷೆ ಇದೆ. ಬರುವಂತಹ ಪ್ರಯಾಣಿಕರಿಗೆ ಈ ಯೋಜನೆ ಉಪಯೋಗವಾಗುವ ನಿಟ್ಟಿನಲ್ಲಿ ಈ ಪ್ಲ್ಯಾನ್ ಮಾಡಲಾಗಿದ್ದು, ನಗರದ ಎರಡು ನಿಲ್ದಾಣಗಳಲ್ಲಿ ಮೊದಲ ಹಂತದಲ್ಲಿ ಈ ಯೋಜನೆಗೆ ಮಾಡಲಿದ್ದು, ಇನ್ನೆರೆಡು ತಿಂಗಳಲ್ಲಿ ಕೆಲಸ ಆರಂಭಿಸುವ ತಯಾರಿ ನಡೆದಿದೆ ಎಂದು ಅಂಜುಂ ಪರ್ವೇಜ್, ಮೆಟ್ರೋ ವ್ಯವಸ್ಥಾಪಕ ನಿರ್ದೇಶಕರು ಮಾಹಿತಿ ಹಂಚಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬೆಂಗಳೂರಿನಲ್ಲಿ ರಾತ್ರಿ ಸುರಿದ ಮಳೆಗೆ ಭಾರೀ ಅವಾಂತರ

    ಬೆಂಗಳೂರಿನಲ್ಲಿ ರಾತ್ರಿ ಸುರಿದ ಮಳೆಗೆ ಭಾರೀ ಅವಾಂತರ

    -ಬಹುತೇಕ ಅಂಡರ್‌ಪಾಸ್‌ಗಳು, ರಸ್ತೆಗಳು ಜಲಾವೃತ

    ಬೆಂಗಳೂರು: ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಅವಾಂತರ ಸೃಷ್ಟಿಯಾಗಿದೆ. ನಗರದ ಬಹುತೇಕ ಅಂಡರ್‌ಪಾಸ್‌ಗಳು, ರಸ್ತೆಗಳು ಜಲಾವೃತವಾಗಿದ್ದು, ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗಿ ರಾತ್ರಿ ನಿದ್ದೆ ಇಲ್ಲದೆ ಪರದಾಡುವಂತಾಗಿದೆ.

    ರಾತ್ರಿ ಸುರಿದ ಗುಡುಗು, ಮಿಂಚು ಸಹಿತ ಭಾರೀ ಮಳೆ ಅವಾಂತರವನ್ನೇ ಸೃಷ್ಟಿಸಿತ್ತು. ನಗರದ ಬಹುತೇಕ ಅಂಡರ್‌ಪಾಸ್‌ಗಳು, ರಸ್ತೆಗಳು ಜಲಾವೃತವಾಗಿದ್ದವು. ಮೆಜೆಸ್ಟಿಕ್ ರೈಲ್ವೇ ಅಂಡರ್‌ಪಾಸ್‌, ವಿಂಡ್ಸನ್ ಬ್ರಿಡ್ಜ್, ಸೆವೆನ್ ಮಿಸಿಸ್ಟರ್ ಕ್ವಾಟ್ರಸ್ ರಸ್ತೆ ಜಲಾವೃತಗೊಂಡಿತ್ತು. ಮಂತ್ರಿಮಾಲ್ ಬಳಿ ರಸ್ತೆ ಕೆರೆಯಂತಾಗಿತ್ತು. ಪರಿಣಾಮ ಐಶಾರಾಮಿ ಬಿಎಂಡಬ್ಲ್ಯೂ ಕಾರು, ಆಟೋಗಳು ನೀರಲ್ಲಿ ಸಿಲುಕಿ ಕೆಟ್ಟು ನಿಲ್ಲುವಂತಾಗಿತ್ತು. ಇದನ್ನೂ ಓದಿ: ಬೆಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ – ಕಾರಿನಲ್ಲಿದ್ದ ಇಬ್ಬರು ಗ್ರೇಟ್ ಎಸ್ಕೇಪ್

    ರಾತ್ರಿ ವೇಳೆ ನೀರಲ್ಲಿ ಕಟ್ಟು ನಿಂತಿದ್ದ ಈ ವಾಹನಗಳನ್ನು ಟೋಯಿಂಗ್ ಮಾಡಲಾಯ್ತು. ಕೆ.ಆರ್ ಪುರಂನಲ್ಲಿ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ರಾತ್ರಿ ಇಡೀ ಜನ ನಿದ್ದೆ ಇಲ್ಲದೆ ಮನೆಯ ಒಳಭಾಗದಲ್ಲಿದ್ದ ನೀರನ್ನು ಹೊರ ಹಾಕುವುದರಲ್ಲಿ ಕಾಲ ಕಳೆಯವಂತಾಯಿತು. ಇದನ್ನೂ ಓದಿ: ಫ್ರೀಯಾಗಿ ಕೋಳಿ ಕೊಡಲಿಲ್ಲ- ಹಿಗ್ಗಾಮುಗ್ಗ ಥಳಿಸಿದ್ರು

  • ಮೆಜೆಸ್ಟಿಕ್‌ ಮೆಟ್ರೋ ನಿಲ್ದಾಣ ಬಂದ್‌

    ಮೆಜೆಸ್ಟಿಕ್‌ ಮೆಟ್ರೋ ನಿಲ್ದಾಣ ಬಂದ್‌

    ಬೆಂಗಳೂರು: ಕರ್ನಾಟಕ ಬಂದ್‌ ಹಿನ್ನೆಲೆಯಲ್ಲಿ ಮೆಜೆಸ್ಟಿಕ್‌ನಲ್ಲಿರುವ ಮೆಟ್ರೋ ನಿಲ್ದಾಣವನ್ನು ಬಂದ್‌ ಮಾಡಲಾಗಿದೆ.

    ನೆರಳೆ ಮತ್ತು ಹಸಿರು ಮಾರ್ಗಗಳನ್ನು ಜೋಡಿಸುವ ಕಂಪೇಗೌಡ ನಿಲ್ದಾಣದಿಂದ ಪ್ರತಿದಿನ ಸಾವಿರಾರು ಮಂದಿ ಪ್ರಯಾಣಿಸುತ್ತಾರೆ. ಆದರೆ ಕರ್ನಾಟಕ ಬಂದ್‌ ಹಿನ್ನೆಲೆಯಲ್ಲಿ ಈ ನಿಲ್ದಾಣವನ್ನು ಬಂದ್‌ ಮಾಡಲಾಗಿದೆ.

    ಮೇಲಾಧಿಕಾರಿಗಳ ಸೂಚನೆ ಮೇರೆಗೆ ಬಂದ್‌ ಮಾಡುತ್ತಿರುವುದಾಗಿ ಸಿಬ್ಬಂದಿ ತಿಳಿಸಿದ್ದಾರೆ. ಬಂದ್‌ ಆದ ಹಿನ್ನೆಲೆಯಲ್ಲಿ ಪ್ರಯಾಣಕ್ಕೆ ಬಂದ ಪ್ರಯಾಣಿಕರು ವಾಪಸ್‌ ತೆರಳುತ್ತಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಕರ್ನಾಟಕ ಬಂದ್‌ ಬಿಸಿಯೇ ಇಲ್ಲ- ಮಾರುಕಟ್ಟೆಯಲ್ಲಿ ಜನವೋ ಜನ

    ಪಬ್ಲಿಕ್‌ ಟಿವಿಗೆ ಭದ್ರತಾ ಸಿಬ್ಬಂದಿ ಪ್ರತಿಕ್ರಿಯಿಸಿ, ಸದ್ಯಕ್ಕೆ ನಿಲ್ದಾಣ ತೆರೆಯದಂತೆ ಸೂಚನೆ ಸಿಕ್ಕಿದೆ. ಮೇಲಾಧಿಕಾರಿಗಳು ಹೇಳುವವರೆಗೂ ಮೆಟ್ರೋ ಸಂಚಾರ ಇಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ನಗರದ ಎಲ್ಲ ಮೆಟ್ರೋ ನಿಲ್ದಾಣಗಳಿಗೆ ಪೊಲೀಸ್ ಭದ್ರತೆ ನೀಡಲಾಗಿದೆ.

  • ಲಾಕ್‍ಡೌನ್ ಮೊದಲ ದಿನ – ನಗರದ ಬಹುತೇಕ ರಸ್ತೆಗಳು ಖಾಲಿ ಖಾಲಿ

    ಲಾಕ್‍ಡೌನ್ ಮೊದಲ ದಿನ – ನಗರದ ಬಹುತೇಕ ರಸ್ತೆಗಳು ಖಾಲಿ ಖಾಲಿ

    ಬೆಂಗಳೂರು: ಲಾಕ್‍ಡೌನ್‍ನ ಮೊದಲ ದಿನ ನವಯುಗ ಟೋಲ್, ಮಲ್ಲೇಶ್ವರಂ, ಮೆಜೆಸ್ಟಿಕ್ ಸೇರಿದಂತೆ ಬಹುತೇಕ ರಸ್ತೆಗಳು ಸಂಪೂರ್ಣವಾಗಿ ಬಂದ್ ಆಗಿದೆ.

    ಲಾಕ್‍ಡೌನ್ ಹಿನ್ನೆಲೆಯಲ್ಲಿ ಮೆಜೆಸ್ಟಿಕ್‍ನಲ್ಲಿ ಬಿಎಂಟಿಸಿ ಮತ್ತು ಕೆಎಸ್ಆರ್‌ಟಿಸಿ ಎಂಟ್ರಿ ಮತ್ತು ಎಕ್ಸಿಟ್‍ಗಳನ್ನ ಬ್ಯಾರಿಕೇಡ್‍ಗಳನ್ನ ಹಾಕಿ ಮುಚ್ಚಲಾಗಿದೆ. ಯಾವುದೇ ಬಸ್‍ಗಳ ಓಡಾಟವಿಲ್ಲ. ಇಡೀ ಮೆಜೆಸ್ಟಿಕ್ ಸುತ್ತಮುತ್ತ ಪೊಲೀಸರು ರಸ್ತೆಯನ್ನು ಬಂದ್ ಮಾಡಿದ್ದಾರೆ. ಅಲ್ಲದೇ ಮೆಜೆಸ್ಟಿಕ್ ನಿಲ್ದಾಣದ ಅಂಗಡಿ ಮುಂಗಟ್ಟು ಸಹ ಸಂಪೂರ್ಣ ಬಂದ್ ಆಗಿವೆ. ಹೋಟೆಲ್, ಟೀ ಅಂಗಡಿಗಳು ಓಪನ್ ಇಲ್ಲ.

    ಪ್ರತಿ ನಿತ್ಯ ಇಷ್ಟೊತ್ತಿಗಾಗಲೇ ಗಿಜಿಗುಡುತ್ತಿದ್ದ ಮೆಜೆಸ್ಟಿಕ್ ಈಗ ಪ್ರಯಾಣಿಕರಿಲ್ಲದೇ ಖಾಲಿ ಖಾಲಿ ಆಗಿದೆ. ಕೇವಲ ತುರ್ತು ಸೇವೆಗಷ್ಟೇ ಬಿಎಂಟಿಸಿ ಬಸ್ ಲಭ್ಯವಿರುತ್ತದೆ. ಎರ್ಮೆಜೆನ್ಸಿ ಬಸ್‍ಗಳು ಬೆಳಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆವರೆಗೆ ಓಡಾಡುತ್ತವೆ. ಕೆಲವರು ಬಸ್ ಇಲ್ಲದ ಕಾರಣ ನಡೆದುಕೊಂಡೇ ಹೋಗುತ್ತಿದ್ದಾರೆ.

    ಕಳೆದ ದಿನದವರೆಗೂ ತುಂಬಾ ಟ್ರಾಫಿಕ್ ಇದ್ದ ನೆಲಮಂಗಲ ನವಯುಗ ಟೋಲ್ ಈಗ ಫುಲ್ ಖಾಲಿಯಾಗಿದೆ. ಕೊರೊನಾಗೆ ಹೆದರಿ ಊರು ಬಿಡುತ್ತಿದ್ದವರಿಂದ ಫುಲ್ ಟ್ರಾಫಿಕ್ ಉಂಟಾಗಿತ್ತು. ಆದರೆ ಲಾಕ್‍ಡೌನ್ ಹಿನ್ನೆಲೆ ಪೂರ್ತಿ ಖಾಲಿ ಖಾಲಿಯಾಗಿದೆ. ಸರಕು ಸಾಗಣೆ ವಾಹನಗಳು ಎಂದಿನಂತೆ ಓಡಾಡುತ್ತಿವೆ. ಜೊತೆಗೆ ತೀರ ವಿರಳವಾಗಿ ದ್ವಿಚಕ್ರ ವಾಹನಗಳು ಕಾಣಿಸಿಕೊಳ್ಳುತ್ತಿವೆ.

    ನೆಲಮಂಗಲ ಬಳಿಯ ತುಮಕೂರು ಹಾಗೂ ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗೂಡ್ಸ್ ವಾಹನಗಳು ಮಾತ್ರ ಸಂಚಾರ ಮಾಡುತ್ತಿದ್ದಾವೆ. ಕೇವಲ ಬೆರಳೆಣಿಕೆಯಷ್ಟು ಜನರರು ಖಾಸಗಿ ವಾಹನಗಳಲ್ಲಿ ಸಂಚಾರ ಮಾಡುತ್ತಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗಡಿಯಲ್ಲಿ ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗಿದೆ. ನೆಲಮಂಗಲ ಪೊಲೀಸರು ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ನಗರ ಪ್ರವೇಶಕ್ಕೆ ನಿರ್ಬಂಧ ಮಾಡಿದ್ದಾರೆ.

    ಮಲ್ಲೇಶ್ವರಂ ಮಾರುಕಟ್ಟೆಯಲ್ಲಿ ಹಾಲು, ತರಕಾರಿ, ಹಣ್ಣು ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಆದರೂ ರಸ್ತೆಗಳು ಖಾಲಿ ಖಾಲಿಯಾಗಿವೆ. ಅಗತ್ಯ ವಸ್ತುಗಳ ಖರೀದಿಗಷ್ಟೇ ಜನರ ಓಡಾಡುತ್ತಿದ್ದಾರೆ.

  • ಲಾಕ್‍ಡೌನ್: ಮತ್ತೆ ಬೆಂಗಳೂರು ಬಿಟ್ಟು ಹೊರಟ ಜನ!

    ಲಾಕ್‍ಡೌನ್: ಮತ್ತೆ ಬೆಂಗಳೂರು ಬಿಟ್ಟು ಹೊರಟ ಜನ!

    ಬೆಂಗಳೂರು: ಒಂದು ವಾರ ಬೆಂಗಳೂರು ಲಾಕ್‍ಡೌನ್ ಹಿನ್ನೆಲೆ ನಗರ ತೊರೆಯುವವರ ಸಂಖ್ಯೆ ಹೆಚ್ಚಾಗಿದೆ. ಮೆಜೆಸ್ಟಿಕ್ ಕೆಎಸ್‍ಆರ್ ಟಿಸಿ ಬಸ್ ನಿಲ್ದಾಣದಿಂದ ಸಾವಿರಾರು ಜನರು ಊರಿಗೆ ತೆರಳ್ತಿದ್ದಾರೆ. ಲಗೇಜ್ ಹಿಡಿದುಕೊಂಡು ಸಂಸಾರ ಸಮೇತ ಊರಿಗೆ ಹೊರಡುತ್ತಿದ್ದಾರೆ.

    ಕೊರೊನಾ ಭಯದಲ್ಲಿ ಬೆಂಗಳೂರು ನಗರವನ್ನು ಬಿಟ್ಟು ಜನರು ತಮ್ಮ ತವರು ಗ್ರಾಮಗಳತ್ತ ಸಾಗುತ್ತಿದ್ದು, ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ವಿವಿಧ ಜಿಲ್ಲೆಗಳಿಗೆ ತೆರಳುತ್ತಿರುವ ಜನ ಸಂಖ್ಯೆ ಹೆಚ್ಚಾಗಿ ಬೆಳಗ್ಗೆಯೇ ಕಂಡು ಬಂದಿತ್ತು. ಹುಬ್ಬಳ್ಳಿ, ಬಳ್ಳಾರಿ, ಬೆಳಗಾವಿ, ವಿಜಯಪುರ, ಚಿತ್ರದುರ್ಗ, ಯಾದಗಿರಿ, ದಾವರಣಗೆರೆಗೆ ಬೆಳ್ಳಂಬೆಳಗ್ಗೆ ಏಳು ಬಸ್ ಹೊರಟರೆ, ಹೊಸಪೇಟೆ ಕಡೆ ಮೂರು ಬಸ್ ಸೇರಿದಂತೆ ಸುಮಾರು 83ಕ್ಕೂ ಬಸ್ ಹೆಚ್ಚು ಬಸ್‍ಗಳಲ್ಲಿ ವಿವಿಧ ಜಿಲ್ಲೆಗಳಿಗೆ ಬೆಳಗ್ಗೆ 8 ಗಂಟೆ ವೇಳೆಗೆ ತೆರಳಿದ್ದರು.

    ನಗರದಲ್ಲಿ ಗಾರೆ ಕೆಲಸ, ಬಿಲ್ಡಿಂಗ್ ನಿರ್ಮಾಣ ಮತ್ತು ಗಾರ್ಮೆಂಟ್ಸ್ ನೌಕರರು ಹೀಗೆ ಎಲ್ಲಾ ವಿಧದ ಕಾರ್ಮಿಕರು ಬಸ್ ನಿಲ್ದಾಣದಲ್ಲಿ ಕಂಡು ಬಂದರು. ಈ ವೇಳೆ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಕೆಲ ಕಾರ್ಮಿಕರು, ಒಂದಿನ ಕೆಲಸ ಸಿಕ್ಕರೆ, ಇನ್ನೊಂದು ದಿನ ಕೆಲಸ ಇರೋದಿಲ್ಲ. ಮನೆ ಬಾಡಿಗೆ ಕಟ್ಟಬೇಕು, ಮಕ್ಕಳು, ಸಂಸಾರವನ್ನು ನೋಡಿಕೊಳ್ಳಬೇಕು. ಆದ್ದರಿಂದ ಜೀವನ ಕಷ್ಟ ಆಗಿ ಊರಿಗೆ ಹೋಗುತ್ತಿದ್ದೇವೆ. ಈಗಲೂ ಊಟವಿಲ್ಲದೆ ಉಪವಾಸದಿಂದಲೇ ಊರಿಗೆ ಹೊರಟ್ಟಿದ್ದೇವೆ ಎಂದರು.

    ಲಾಕ್‍ಡೌನ್ ಹಿನ್ನೆಲೆಯಲ್ಲಿ ಪ್ರಯಾಣಿಕರು ಸಂಖ್ಯೆ ಹೆಚ್ಚಾಗುತ್ತದೆ ಎಂದು ಊಹಿಸಿದ್ದ ಕೆಎಸ್‍ಆರ್ ಟಿಸಿ ಹೆಚ್ಚುವರಿ 300 ಬಸ್‍ಗಳ ನಿಯೋಜನೆ ಮಾಡಿದೆ. ಪ್ರತಿನಿತ್ಯ 600 ಬಸ್‍ಗಳು ರಾಜ್ಯದ ವಿವಿಧ ಭಾಗಗಳಿಗೆ ಮೆಜೆಸ್ಟಿಕ್ ನಿಂದ ಪ್ರಯಾಣ ಬೆಳೆಸುತ್ತಿದ್ದವು. ಇಂದು ಒಟ್ಟು 900 ಬಸ್‍ಗಳನ್ನು ಕೆಎಸ್‍ಆರ್ ಟಿಸಿ ನಿಯೋಜನೆ ಮಾಡಿದೆ. ಪ್ರಯಾಣಿಕರ ಅಗತ್ಯದ ಮೇರೆಗೆ ಹೆಚ್ಚುವರಿ ಬಸ್ ನಿಯೋಜಿಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.

  • ಬೆಂಗ್ಳೂರು ಸಂಪೂರ್ಣ ಸ್ತಬ್ಧ- ರಸ್ತೆಗಳು ಖಾಲಿ ಖಾಲಿ

    ಬೆಂಗ್ಳೂರು ಸಂಪೂರ್ಣ ಸ್ತಬ್ಧ- ರಸ್ತೆಗಳು ಖಾಲಿ ಖಾಲಿ

    ಬೆಂಗಳೂರು: ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸ್ಫೋಟವಾಗುತ್ತಿದೆ. ಇದಕ್ಕೆ ಬ್ರೇಕ್ ಹಾಕಲು ಇದೇ ಮೊದಲ ಸಂಡೇ ಲಾಕ್‍ಡೌನ್ ಜಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಮೆಜೆಸ್ಟಿಕ್, ಮಲ್ಲೇಶ್ವರಂ, ತುಮಕೂರು, ಮೈಸೂರು ರಸ್ತೆ ಸೇರಿದಂತೆ ಬೆಂಗಳೂರಿನ ಬಹುತೇಕ ರಸ್ತೆಗಳು ಖಾಲಿ ಖಾಲಿಯಾಗಿವೆ.

    ಬಳ್ಳಾರಿ ರೋಡ್ ಮತ್ತು ಮೇಕ್ರಿ ಸರ್ಕಲ್ ಸುತ್ತಮುತ್ತ ರಸ್ತೆಗಳು ಫುಲ್ ಖಾಲಿ ಖಾಲಿಯಾಗಿವೆ. ಪ್ರಮುಖ ಪ್ಲೈಓವರ್‌ಗೆ ಬ್ಯಾರಿಕೇಡ್ ಹಾಕಿ ಪೊಲೀಸರು ಮುಚ್ಚಿದ್ದಾರೆ. ಹೀಗಾಗಿ ರಸ್ತೆಗಳು ಖಾಲಿ ಖಾಲಿ ಇರುವುದರಿಂದ ಹೆಬ್ಬಾಳದ ರಸ್ತೆ ಬದಿಯಲ್ಲಿ ಜನರು ವಾಕಿಂಗ್ ಮಾಡುತ್ತಿದ್ದಾರೆ.

    ಇನ್ನೂ ಲಾಕ್‍ಡೌನ್ ಹಿನ್ನೆಲೆಯಲ್ಲಿ ಮೆಜೆಸ್ಟಿಕ್ ಸಂಪೂರ್ಣ ನಿಶಬ್ಧವಾಗಿದೆ. ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್ ನಿಲ್ದಾಣಗಳು ಫುಲ್ ಖಾಲಿ ಖಾಲಿಯಾಗಿವೆ. ಮೆಜೆಸ್ಟಿಕ್‍ನಲ್ಲಿ ಆಟೋಗಳ ಸಂಚಾರ ಹೊರತು ಪಡಿಸಿದರೆ ಬೇರೆ ವಾಹನಗಳ ಓಡಾಟ ಸಂಪೂರ್ಣ ಬಂದ್ ಆಗಿದೆ. ಇಂದಿನಿಂದ ನಾಳೆ ಬೆಳಗ್ಗೆಯ ತನಕ ಲಾಕ್‍ಡೌನ್ ವಿಚಾರ ತಿಳಿದು ಮೆಜೆಸ್ಟಿಕ್ ಕಡೆ ಪ್ರಯಾಣಿಕರು ಬರುತ್ತಿಲ್ಲ.

    ಮಲ್ಲೇಶ್ವರಂನಲ್ಲಿ ಹಾಲು ಮಾರಾಟಕ್ಕೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ. ಹೀಗಾಗಿ ಮಲ್ಲೇಶ್ವರಂ ಮುಖ್ಯ ರಸ್ತೆಗಳು ಖಾಲಿ ಖಾಲಿಯಾಗಿವೆ. ಆದರೆ ದ್ವಿಚಕ್ರ ವಾಹನದಲ್ಲಿ ಜನರು ಓಡಾಡುತ್ತಿದ್ದಾರೆ. ಸಂಡೇ ಕರ್ಫ್ಯೂ ಹಿನ್ನೆಲೆಯಲ್ಲಿ ಮುಜರಾಯಿ ಇಲಾಖೆ ಆದೇಶ ಹೊರಡಿಸಿದ್ದು, ನಗರದ ದೇವಾಲಯಗಳು ಕೂಡ ಬಂದ್ ಆಗಿದೆ. ಮಲ್ಲೇಶ್ವರಂನ ಸಾಯಿ ಬಾಬಾ ದೇವಾಲಯ ಬಂದ್ ಆಗಿದೆ. ಆದರೆ ಗುರು ಪೂರ್ಣಮಿ ಹಿನ್ನೆಲೆಯಲ್ಲಿ ಸಾಯಿ ಬಾಬಾ ದರ್ಶನಕ್ಕೆ ಬಂದ ಭಕ್ತಾಧಿಗಳು ರಸ್ತೆಯಲ್ಲೇ ನಮಸ್ಕಾರ ಮಾಡಿ ವಾಪಸ್ ಹೋಗುತ್ತಿದ್ದಾರೆ.

    ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್‍ಗಳ ಸಂಚಾರ ನಿಷೇಧ ಹಿನ್ನೆಲೆಯಲ್ಲಿ ಮೈಸೂರು ರಸ್ತೆಯ ಸೆಟಲೈಟ್ ಫುಲ್ ಖಾಲಿ ಖಾಲಿಯಗಿದೆ. ನಿಲ್ದಾಣದಲ್ಲಿ ಬ್ಯಾರಿಕೇಡ್‍ನಿಂದ ಕ್ಲೋಸ್ ಮಾಡಲಾಗಿದೆ. ಇತ್ತ ಮೈಸೂರು ರಸ್ತೆ ಕೂಡ ಫುಲ್ ಖಾಲಿ ಖಾಲಿಯಾಗಿದೆ. ಮಾಗಡಿ ರೋಡ್ ಕೂಡ ಸಂಪೂರ್ಣ ಸ್ತಬ್ಧವಾಗಿದೆ.

    ಸದಾ ವಾಹನ ಸಂಚಾರದಿಂದ ಟ್ರಾಫಿಕ್ ಜಾಮ್ ಆಗುತ್ತಿದ್ದ ತುಮಕೂರು ರಸ್ತೆ ಭಾನುವಾರ ಲಾಕ್‍ಡೌನ್ ಹಿನ್ನೆಲೆಯಲ್ಲಿ ಖಾಲಿ ಖಾಲಿಯಾಗಿದೆ. ಬೆರೆಳೆಣಿಕೆಯಷ್ಟು ವಾಹನಗಳು ಸಂಚಾರ ಬಿಟ್ಟರೆ ಬಹುತೇಕ ರಸ್ತೆ ಖಾಲಿ ಇದೆ. ಗೊರಗೊಂಟೆಪಾಳ್ಯದ ಫ್ಲೈ ಓವರ್ ಕ್ಲೋಸ್ ಮಾಡಲಾಗಿದೆ.

  • ಮೆಜೆಸ್ಟಿಕ್‍ನಲ್ಲಿ ಟೆನ್ಶನ್- ಜ್ವರದಿಂದ ಕುಸಿದು ಅನಾಥವಾಗಿ ಬಿದ್ದ ವೃದ್ಧ

    ಮೆಜೆಸ್ಟಿಕ್‍ನಲ್ಲಿ ಟೆನ್ಶನ್- ಜ್ವರದಿಂದ ಕುಸಿದು ಅನಾಥವಾಗಿ ಬಿದ್ದ ವೃದ್ಧ

    – ಪಿಪಿಇ ಕಿಟ್ ಇಲ್ಲದೆ ಪರದಾಡಿದ ಅಂಬುಲೆನ್ಸ್ ಸಿಬ್ಬಂದಿ
    – ಒಂದು ಗಂಟೆ ಬಳಿಕ ವೃದ್ಧ ಆಸ್ಪತ್ರೆಗೆ ಶಿಫ್ಟ್

    ಬೆಂಗಳೂರು: ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ವೃದ್ಧನೋರ್ವ ಜ್ವರದಿಂದ ಕುಸಿದು ಬಿದ್ದಿದ್ದರಿಂದ ಪ್ರಯಾಣಿಕರು ಆತಂಕಕ್ಕೆ ಒಳಗಾಗಿದ್ದಾರೆ.

    ವೃದ್ಧನ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದರೆ ಇಂದು 13ನೇ ಪ್ಲಾಟ್ ಫಾರಂನಲ್ಲಿ ಕುಳಿತಿದ್ದ ವೃದ್ಧ ಏಕಾಏಕಿ ಕುಸಿದು ಬಿದ್ದಿದ್ದ. ಇದನ್ನು ನೋಡಿದ ಪ್ರಯಾಣಿಕರು ಹಾಗೂ ಮಗಳಿಗಳ ಸಿಬ್ಬಂದಿ ಆತಂಕಕ್ಕೆ ಒಳಗಾಗಿ ದೂರ ಸರಿದು ತಕ್ಷಣವೇ ಅಂಬುಲೆನ್ಸ್ ಗೆ ಫೋನ್ ಮಾಡಿ ಮಾಹಿತಿ ನೀಡಿದ್ದರು.

    ಸ್ಥಳಕ್ಕೆ ದೌಡಾಯಿಸಿದ ಅಂಬುಲೆನ್ಸ್ ಸಿಬ್ಬಂದಿ ಪಿಪಿಇ ಕಿಟ್ ಧರಿಸಿರಲಿಲ್ಲ. ಇದರಿಂದಾಗಿ ತಮಗೂ ಸೋಂಕು ಹಬ್ಬಿದರೆ ಹೇಗೆ ಅಂತ ವೃದ್ಧನನ್ನ ಮುಟ್ಟಲು ಹಿಂದೇಟು ಹಾಕಿದರು. ಸುಮಾರು ಒಂದು ಗಂಟೆಯ ಬಳಿಕ ಮತ್ತೊಂದು ಅಂಬುಲೆನ್ಸ್ ಸ್ಥಳಕ್ಕೆ ಆಗಮಿಸಿತು. ಪಿಪಿಇ ಕಿಟ್ ಧರಿಸಿದ್ದ ವೈದ್ಯಕೀಯ ಸಿಬ್ಬಂದಿ ವೃದ್ಧನನ್ನು ಅಂಬುಲೆನ್ಸ್ ನಲ್ಲಿ ಹಾಕಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಕೊರೊನಾ ಆತಂಕದಲ್ಲಿ ಇರುವ ಜನರಿಗೆ ವೃದ್ಧ ಜ್ವರದಿಂದ ಕುಸಿದು ಬಿದ್ದಿದ್ದು  ಮತ್ತಷ್ಟು ಭಯಕ್ಕೆ ದೂಡಿದೆ.

    ಮುಂಜಾಗ್ರತಾ ಕ್ರಮವಾಗಿ ವೃದ್ಧ ಕುಸಿದು ಬಿದ್ದ ಅಕ್ಕಪಕ್ಕದ ಅಂಗಡಿಗಳು ಕ್ಲೋಸ್ ಮಾಡಲಾಗಿದ್ದು, ಸಾನಿಟೈಜರ್ ಸಿಂಪಡಣೆಗೆ ಆರೋಗ್ಯ ಇಲಾಖೆ ಮುಂದಾಗಿದೆ. ವೃದ್ಧನ ಕೋವಿಡ್-19 ಪರೀಕ್ಷೆಯ ವರದಿ ಬರುವವರೆಗೂ ಇಂದು ಮೆಜೆಸ್ಟಿಕ್‍ನಲ್ಲಿದ್ದ ಪ್ರಯಾಣಿಕರು ಹಾಗೂ ಮಳಿಗೆಗಳ ಸಿಬ್ಬಂದಿ ಆತಂಕ ಕಾಡುತ್ತಲೇ ಇರುತ್ತೆ.