ಬೆಂಗಳೂರು: ಟೀ (Tea) ಚೆನ್ನಾಗಿಲ್ಲ ಎಂದಿದ್ದಕ್ಕೆ ಬಿಎಂಟಿಸಿ ಬಸ್ ಚಾಲಕನ ಮೇಲೆ ಟೀ ಶಾಪ್ ಸಿಬ್ಬಂದಿ ಹಲ್ಲೆ ಮಾಡಿದ ಘಟನೆ ಮೆಜೆಸ್ಟಿಕ್ (Majestic) ಬಸ್ ನಿಲ್ದಾಣದಲ್ಲಿ ನಡೆದಿದೆ.
46ನೇ ಚಾಲಕ ಮೂಗಪ್ಪ ಅವರ ಮೇಲೆ ಟೀ ಸ್ಟಾಲ್ ಸಿಬ್ಬಂದಿ ಗುರುರಾಜ್ ಫ್ಲಾಸ್ಕ್‌ನಿಂದ ಹೊಡೆದು ಹಲ್ಲೆ ಮಾಡಿದ್ದಾನೆ. ಚಾಲಕ ಟೀ ಚೆನ್ನಾಗಿಲ್ಲ ಎಂದಿದ್ದಕ್ಕೆ ರೊಚ್ಚಿಗೆದ್ದ ಗುರುರಾಜ್ ರಕ್ತ ಬರುವಂತೆ ಫ್ಲಾಸ್ಕ್‌ನಿಂದ ತಲೆಗೆ ಹೊಡೆದಿದ್ದಾನೆ. ಇದನ್ನೂ ಓದಿ: ಆರೋಪಿ ನಟ ದರ್ಶನ್ ಮನೆಯಲ್ಲಿ 3 ಲಕ್ಷ ನಗದು ಕಳ್ಳತನ
ಹಲ್ಲೆಗೊಳಗಾದ ಚಾಲಕ ಉಪ್ಪಾರಪೇಟೆ ಪೊಲೀಸ್ (Upparpet Police) ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಹಲ್ಲೆ ಮಾಡಿದ ಗುರುರಾಜ್‌ನನ್ನು ಬಂಧಿಸಿ, ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
– ಧರೆಗುರುಳಿದ ಬೃಹತ್ ಮರಗಳು – ಒಂದೇ ಮಳೆಗೆ ಕೆರೆಯಂತಾದ ಸಿಲಿಕಾನ್ ಸಿಟಿ
ಬೆಂಗಳೂರು: ಮಂಗಳವಾರ ಸಂಜೆ ಬೆಂಗಳೂರಲ್ಲಿ(Bengaluru) ವರುಣರಾಯ ಆರ್ಭಟಿಸಿದ್ದು, ನಗರದ ಬಾಣಸವಾಡಿ, ಕಲ್ಯಾಣನಗರ ಪ್ರದೇಶದಲ್ಲಿ ಆಲಿಕಲ್ಲು ಮಳೆ ಹಾಗೂ ಬಿರುಗಾಳಿ ಸಹಿತ ಮಳೆಯಾಗಿದೆ. ಬಿರುಗಾಳಿ ಮಳೆಗೆ ಟೆರೆಸ್ ಮೇಲಿನ ಗಾರ್ಡನ್ ಚೆಲ್ಲಾಪಿಲ್ಲಿಯಾಗಿವೆ.
ವರುಣನ ಅಬ್ಬರಕ್ಕೆ ಯಲಚೇನಹಳ್ಳಿ ಬಳಿ ಮೂರು ಮರಗಳು ಧರಾಶಾಹಿಯಾಗಿದ್ದು, ಮರ ಬಿದ್ದ ಪರಿಣಾಮ ನಾಲ್ಕು ಕಾರುಗಳು ಜಖಂಗೊಂಡಿವೆ. ಬಿಬಿಎಂಪಿ ಸಿಬ್ಬಂದಿ ಮರ ತೆರವು ಕಾರ್ಯ ಮಾಡಿದರು. ಮಲ್ಲೇಶ್ವರಂನ(Malleshwaram) ಪಿಯುಸಿ ಬೋರ್ಡ್ ಬಳಿ ಮರವೊಂದು ರಸ್ತೆಗುರುಳಿದ್ದು, ಸದ್ಯ ಯಾವುದೇ ಹಾನಿ ಸಂಭವಿಸಿಲ್ಲ. ಅಲ್ಲದೇ ಕಾವೇರಿ ಜಂಕ್ಷನ್(Cauvery Junction) ಬಳಿ ಮರದ ಕೊಂಬೆಗಳು ಮುರಿದು ಬಿದ್ದಿದ್ದು, ವಿಂಡ್ಸನ್ ಮ್ಯಾನರ್ ಅಂಡರ್ ಪಾಸ್‌ನಿಂದ ಅರಮನೆ ಮೈದಾನ ಕಡೆ ಹೋಗುವ ಮಾರ್ಗದಲ್ಲಿ ಮುರಿದು ಬಿದ್ದಿದೆ. ಮರದ ಕೊಂಬೆ ಮುರಿದು ಬೀಳುವಾಗ ಯಾವುದೇ ವಾಹನ ಸಂಚಾರವಿರದ ಕಾರಣ ದೊಡ್ಡ ಅನಾಹುತವೊಂದು ತಪ್ಪಿದೆ. ಇದನ್ನೂ ಓದಿ: ಬೆಂಗಳೂರಿಗೆ ಯಲ್ಲೋ ಅಲರ್ಟ್ – ಮುಂದಿನ 3 ಗಂಟೆ ಭಾರೀ ಮಳೆ
ಇನ್ನು ಒಂದೇ ಮಳೆಗೆ ಮೆಜೆಸ್ಟಿಕ್ ಬಸ್ ನಿಲ್ದಾಣಯು(Majestic Busstand) ಕೆರೆಯಂತಾಗಿದೆ. ಮಳೆ ನೀರು ಬಸ್ ನಿಲ್ದಾಣದ ಒಳಗೆ ನುಗ್ಗಿ, ಪ್ರಯಾಣಿಕರು ಪರದಾಡುವಂತಾಯಿತು. ಮಳೆಯ ಅವಾಂತರಕ್ಕೆ ನಾಗವಾರ ಹೆಬ್ಬಾಳ ಮುಖ್ಯ ರಸ್ತೆಯಲ್ಲಿ ಬಿಎಂಟಿಸಿ ಬಸ್ಸೊಂದು ಜಲಾವೃತವಾಗಿದೆ. ಜಲಾವೃತವಾಗಿದ್ದ ರಸ್ತೆಯಿಂದ ಬಸ್‌ನ ಒಳಗೆ ನೀರು ನುಗ್ಗಿದ್ದು, ಪ್ರಯಾಣಿಕರು ಮಳೆ ನೀರಿನಲ್ಲೇ ಕುಳಿತಿರುವಂತ ಪರಿಸ್ಥಿತಿ ಎದುರಾಗಿತ್ತು. ಇದನ್ನೂ ಓದಿ: ಪಾಕ್ ಮತ್ತೆ ದಾಳಿ ಮಾಡಿದ್ರೆ ಭಾರತ ನುಗ್ಗಿ ಹೊಡೆಯುತ್ತೆ: ಮೋದಿ
ಭಾರೀ ಮಳೆಗೆ ಕೆ ಆರ್ ಮಾರ್ಕೆಟ್(K R Market) ರಸ್ತೆ ಕೆರೆಯಂತಾಗಿದ್ದು, ಕಿಲೋಮೀಟರ್‌ಗಟ್ಟಲೇ ನಿಂತಿರೋ ನೀರಿನಲ್ಲಿ ವಾಹನ ಸವಾರರ ಪರದಾಡಿದರು. ಒಂದು ತಾಸಿನ ಮಳೆಗೆ ಬ್ರ‍್ಯಾಂಡ್ ಬೆಂಗಳೂರು ಅಸಲಿಯತ್ತು ಅನಾವರಣಗೊಂಡಿದೆ. ಕುಮಾರಸ್ವಾಮಿ ಲೇಔಟ್ ರಸ್ತೆಯಲ್ಲಿ ನೀರು ನಿಂತಿದ್ದ ಕಾರಣ ಆಟೋದ ಮುಂದಿನ ಚಕ್ರ ಗುಂಡಿಗೆ ಬಿದ್ದು ಆಟೋ ಚಾಲಕ ಒದ್ದಾಡಿದ್ದಾರೆ. ಇದನ್ನೂ ಓದಿ: ತೆಲುಗಿಗೆ ‘ಕಾಂತಾರ’ ಲೀಲಾ- ‘ಮೂಡ್ ಆಫ್ ತಮ್ಮುಡು’ ಚಿತ್ರದ ಟೀಸರ್ ಔಟ್
ಇನ್ನು ಸಾಯಿ ಲೇಔಟ್‌ನ ಜನರಿಗೆ ಮತ್ತೆ ಜಲಸಂಕಷ್ಟ ಎದುರಾಗಿದೆ. ಸಣ್ಣ ಮಳೆಗೂ ಈ ರಸ್ತೆಯಲ್ಲಿ ನೀರು ನಿಲ್ಲುತ್ತಿದ್ದು, ಜನ ಹೈರಣಾಗಿದ್ದಾರೆ.
ಬೆಂಗಳೂರು: ನಂದಿನಿ ಕರ್ನಾಟಕದ ಹೆಮ್ಮೆಯ ಬ್ರ್ಯಾಂಡ್, ಈಗ ಸರ್ಕಾರದ ಅಂಗ ಸಂಸ್ಥೆಯಾದ ಬಿಎಂಟಿಸಿಗೆ (BMTC) ಬೇಡವಾಗಿದೆ. ಶಕ್ತಿ ಯೋಜನೆಯ ಖರ್ಚು ಸರಿದೂಗಿಸಬೇಕಾದ ಒತ್ತಡದಲ್ಲಿ, ಹೆಚ್ಚು ಆದಾಯದ ಆಸೆಯಿಂದ ನಂದಿನಿ ಪಾರ್ಲರ್‌ಗಳನ್ನ ಜನರಲ್ ಸ್ಟೋರ್ (General Store) ಆಗಿ ಬದಲಾಯಿಸುವ ಮೂಲಕ ನಂದಿನಿ ಬೂತ್ (Nandini Parlor) ಎತ್ತಂಗಡಿ ಮಾಡಿದೆ.
2023ರ ವಿಧಾನಸಭಾ ಚುನಾವಣೆ (Election 2023) ಸಂಧರ್ಭದಲ್ಲಿ ನಂದಿನಿ ವಿಚಾರವನ್ನೇ ಹೆಚ್ಚು ಬಳಕೆ ಮಾಡಿಕೊಂಡಿದ್ದ ಕಾಂಗ್ರೆಸ್, ಅಧಿಕಾರಕ್ಕೆ ಬಂದ ಬಳಿಕ ಬಹುಶಃ ನಾಡಿನ ಹೆಮ್ಮೆಯ ನಂದಿನಿಯನ್ನೇ ಮರೆತಂತೆ ಕಾಣುತ್ತಿದೆ. ಬಿಎಂಟಿಸಿ ತನ್ನ ಆದಾಯದ ಮೂಲವನ್ನ ಹೆಚ್ಚಿಸಿಕೊಳ್ಳಬೇಕಾದ ಭರದಲ್ಲಿ, ತನ್ನ ವ್ಯಾಪ್ತಿಯ ವ್ಯಾಪಾರ ಸ್ಥಳಗಳಲ್ಲಿದ್ದ ನಂದಿನಿ ಪಾರ್ಲರ್‌ಗಳನ್ನ ಏಕಾಏಕಿ ಜನರಲ್ ಸ್ಟೋರ್‌ಗಳನ್ನಾಗಿ ಪರಿವರ್ತನೆ ಮಾಡುವ ಕೆಲಸಕ್ಕೆ ಮುಂದಾಗಿದೆ.
ಮೆಜೆಸ್ಟಿಕ್ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಕಳೆದ ಅನೇಕ ವರ್ಷಗಳಿಂದ ನಂದಿನಿ ಪಾರ್ಲರ್‌ಗಳನ್ನ ತೆರೆಯಲಾಗಿತ್ತು. ಪ್ರತಿ ತಿಂಗಳು 30 ಸಾವಿರ ಬಾಡಿಗೆ ಕೂಡ ಪಡೆಯುತ್ತಿತ್ತು. ಆದರೀಗ ಆದಾಯ ಹೆಚ್ಚಿಸುವ ಭರದಲ್ಲಿ ಎಲ್ಲಾ ಪಾರ್ಲರ್‌ಗಳನ್ನ ಜನರಲ್ ಸ್ಟೋರ್‌ಗಳನ್ನಾಗಿ ಬದಲಾಯಿಸಿದೆ. ಕಾರಣ ನಂದಿನಿ ಪಾರ್ಲರ್‌ಗಳಿಗೆ ಹೋಲಿಕೆ ಮಾಡಿದ್ರೆ ಜನರಲ್ ಸ್ಟೋರ್‌ಗಳಿಂದ ಬಿಎಂಟಿಸಿಗೆ ಆದಾಯ ಹೆಚ್ಚು. ಟೆಂಡರ್‌ನಲ್ಲಿ ಪ್ರತಿ ಜನರಲ್ ಸ್ಟೋರ್‌ಗಳು ತಿಂಗಳಿಗೆ 90 ಸಾವಿರ ಬಾಡಿಗೆ ಪಡೆಯುವುದಾಗಿ ಬಿಡ್ ಪಡೆದಿವೆ. ನಂದಿನಿ ಪಾರ್ಲರ್‌ಗಿಂತ ಮೂರು ಪಟ್ಟು ಹೆಚ್ಚಿಗೆ ಹಣವನ್ನ ಜನರಲ್ ಸ್ಟೋರ್ ನೀಡುತ್ತಿರೋ ಕಾರಣ ಪಾರ್ಲರ್‌ಗಳನ್ನೇ ಪರಿವರ್ತನೆ ಮಾಡಲು ನಿಗಮ ಮುಂದಾಗಿದೆ. ಇದನ್ನೂ ಓದಿ: ‘ಕೈ’ ತೆಲಂಗಾಣ ಗೆದ್ದಿದ್ದಕ್ಕೆ ಬಿಜೆಪಿ ಅಸೂಯೆ ಪಡುವ ಬದಲು ತಾನು ಗೆದ್ದ ರಾಜ್ಯಗಳಲ್ಲಿ ಸಿಎಂ ಆಯ್ಕೆ ಮಾಡಲಿ: ದಿನೇಶ್ ಗುಂಡೂರಾವ್
ಇನ್ನೂ ಮೆಜೆಸ್ಟಿಕ್ ಬಿಎಂಟಿಸಿ ನಿಲ್ದಾಣದಲ್ಲಿ 14 ನಂದಿನಿ ಪಾರ್ಲರ್‌ಗಳನ್ನ ಈಗಾಗಲೇ ಕ್ಲೋಸ್ ಮಾಡಲಾಗಿದೆ. ಕೆಲವು ಪಾರ್ಲರ್‌ಗಳನ್ನ ಜನರಲ್ ಸ್ಟೋರ್‌ಗಳಾಗಿ ಬದಲಾಯಿಸಿ ನಂದಿನಿ ಹೆಸರಿನ ಮೇಲೆಯೇ ಜನರಲ್ ಸ್ಟೋರ್ ಅನ್ನೋ ಬೋರ್ಡಗಳನ್ನ ಹಾಕಲಾಗಿದೆ. ಬಿಎಂಟಿಸಿಯ ಈ ನಡೆ ಕನ್ನಡ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ. ಕೂಡಲೇ ಸಚಿವರು, ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಕರಾವಳಿಯಲ್ಲಿ ಮತ್ತೆ ಧರ್ಮ ದಂಗಲ್ – ಕುಡುಪು ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ?
ಬೆಂಗಳೂರು: ಸೋಮವಾರ ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ಜನ ತಮ್ಮೂರುಗಳತ್ತ ಪ್ರಯಾಣ ಬೆಳೆಸಿದ್ದಾರೆ. ಪ್ರಯಾಣಿಕರಿಂದ ಮೆಜೆಸ್ಟಿಕ್ ನ KSRTC ಬಸ್ ನಿಲ್ದಾಣ ತುಂಬಿ ತುಳುಕ್ತಿದ್ದು, ಹೆಚ್ಚುವರಿಯಾಗಿ 12,00 ಬಸ್ ಗಳನ್ನ ಬಿಡಲಾಗಿದೆ. ಬಿಎಂಟಿಸಿ ಬಸ್ ಗಳು ಕೂಡ ಜಿಲ್ಲೆಗಳಿಗೆ ಸಂಚಾರ ಮಾಡ್ತಿವೆ.
ಹಬ್ಬದ ಸಲುವಾಗಿ ಊರಿಗೆ ಹೋಗಲಿರುವ ಹಲವಾರು ಮಂದಿ ಇಂದೇ ಹೊರಟಿರುವುದರಿಂದ ಬೆಂಗಳೂರಿನ ಮೆಜೆಸ್ಟಿಕ್ ನಿಲ್ದಾಣದ ಸುತ್ತಮುತ್ತ ಜನರಿಂದ ತುಂಬಿ ತುಳುಕಿದೆ. ಮಾತ್ರವಲ್ಲದೆ ಸಂಚಾರ ದಟ್ಟಣೆಯಿಂದಾಗಿ ಸಾರ್ವಜನಿಕರೂ ಪರದಾಡುವಂತಾಗಿದೆ. ಕಾರ್ಪೋರೇಷನ್, ಮೆಜೆಸ್ಟಿಕ್,ಮೈಸೂರು ಬ್ಯಾಂಕ್ ಸರ್ಕಲ್ , ನವರಂಗ್ ಸೇರಿದಂತೆ ವಿವಿಧ ರಸ್ತೆಗಳು ಸಂಪೂರ್ಣ ಜಾಮ್ ಆಗಿವೆ.
ವಾರಾಂತ್ಯದ ರಜೆ ಜೊತೆಗೆ ಹಬ್ಬದ ರಜೆಯೂ ಸೇರಿ ಮೂರ್ನಾಲ್ಕು ದಿನಗಳ ಸರಣಿ ರಜೆ ಸಿಗುವುದರಿಂದ ಹಲವರು ಇಂದೇ ಊರಿಗೆ ಹೊರಟಿದ್ದಾರೆ. ಹೀಗಾಗಿ ಮೆಜೆಸ್ಟಿಕ್ ಹಾಗೂ ಸುತ್ತಮುತ್ತಲ ಸುತ್ತಮುತ್ತಲಿನ ರಸ್ತೆಗಳು ಬಹುತೇಕ ಜಾಮ್ ಆಗಿವೆ. ಜನಸಂಚಾರ ಜಾಸ್ತಿ ಇರುವುದರಿಂದ ಊರಿಗೆ ಹೊರಟ ಬಸ್ ಹಾಗೂ ಇತರ ವಾಹನಗಳ ಸಂಖ್ಯೆಯೂ ಹೆಚ್ಚಿರುವುದರಿಂದ ಟೌನ್ಹಾಲ್ನಿಂದ ಮೆಜೆಸ್ಟಿಕ್ವರೆಗೂ ವಾಹನಗಳು ಸಾಲುಗಟ್ಟಿ ನಿಂತ ದೃಶ್ಯಗಳು ಕಂಡುಬಂದಿತ್ತು.
ಟ್ರಾಫಿಕ್ ಜಾಮ್ ಕೂಡ ಜಾಸ್ತಿ ಇದ್ದಿದ್ದರಿಂದ 2-3 ಕಿ.ಮೀ. ದೂರ ವಾಹನದಟ್ಟಣೆ ಉಂಟಾಗಿ, ನಿಧಾನಗತಿಯ ಚಲನೆ ಕಂಡುಬಂದಿದೆ. ಪರಿಣಾಮವಾಗಿ ಕೆಲವರು ನಡೆದೇ ಬಸ್ ನಿಲ್ದಾಣ ತಲುಪುವಂತಾಗಿದೆ.
ಬೆಂಗಳೂರು: ಮಾಸ್ಕ್ ಹಾಕದ್ದನ್ನು ಪ್ರಶ್ನಿಸಿದ್ದಕ್ಕೆ ಮಾರ್ಷಲ್ ಮೇಲೆ ವಿದೇಶಿ ಪ್ರಜೆಯೊಬ್ಬ ಹಲ್ಲೆ ಮಾಡಿದ ಘಟನೆ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ನಡೆದಿದೆ.
ಬೆಳ್ಳಂಬೆಳಗ್ಗೆ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಮಾರ್ಷಲ್ ಹಾಗೂ ವಿದೇಶಿ ವ್ಯಕ್ತಿ ನಡುವೆ ಜಟಾಪಟಿ ನಡೆದಿದೆ. ವಿದೇಶಿ ಪ್ರಜೆಯು ಮಾಸ್ಕ್ ಹಾಕಿಕೊಳ್ಳದೇ ಬರುತ್ತಿದ್ದದ್ದನ್ನು ಮಾರ್ಷಲ್ ಗಮನಿಸಿದ್ದಾರೆ. ಈ ವೇಳೆ ಅವರು ಮಾಸ್ಕ್ ಎಲ್ಲಿದೆ ಎಂದು ಪ್ರಶ್ನಿಸಿದ್ದಾರೆ. ಆಗ ವ್ಯಕ್ತಿಯು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಈ ಮಧ್ಯೆ ಇಬ್ಬರ ನಡುವೆ ಬಸ್ ನಿಲ್ದಾಣದ ಆವರಣದಲ್ಲೇ ತಳ್ಳಾಟ ನಡೆದಿದ್ದು, ಜಗಳ ತಾರಕ್ಕಕ್ಕೇರಿ ಹೊಡೆದಾಡಿಕೊಂಡಿದ್ದಾರೆ. ಇದನ್ನೂ ಓದಿ:ದೇಶದಲ್ಲಿ ಒತ್ತಾಯದಿಂದ ಯಾರಿಗೂ Corona Vaccine ನೀಡಲ್ಲ: ಕೇಂದ್ರ ಸರ್ಕಾರ
ಈ ನಡುವೆ ಮಾರ್ಷಲ್ಸ್‍ಗಳನ್ನು ತರಾಟೆಗೆ ತೆಗೆದುಕೊಂಡ ಸಾರ್ವಜನಿಕರು ದಂಡ ವಿಧಿಸಲು ಬಂದ ಮಾರ್ಷಲ್ಸ್‍ಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ತುಂಬಾ ಓವರ್ ಆಗಿ ಮಾರ್ಷಲ್ಸ್‍ಗಳು ನಡೆದುಕೊಳ್ಳುತ್ತಾರೆ. ವಿದೇಶಿ ಪ್ರಜೆಗೆ ಇವರ ಕೈಯಲ್ಲಿ ಏನು ಮಾಡುವುದಕ್ಕೆ ಆಗಿಲ್ಲ. ಈಗ ನಮ್ಮನ್ನ ಕೇಳುವುದಕ್ಕೆ ಬರುತ್ತೀರಾ ಎಂದು ಅವಾಜ್ ಹಾಕಿದ್ದಾರೆ.
ಬಸ್ ನಿಲ್ದಾಣದಲ್ಲಿದ್ದ ಮಹಿಳೆಯೊಬ್ಬಳು ಸಹ ಮಾರ್ಷಲ್ಸ್‌ಗಳಿಗೆ ತರಾಟೆಗೆ ತೆಗೆದುಕೊಂಡಿದ್ದು ಅವನು ಹೊರದೇಶದವನಾಗಿದ್ದು, ಹೊಡೆದಿದ್ದಕ್ಕೆ ಬಿಟ್ಟರು. ಅವನಿಗೊಂದು ನ್ಯಾಯ ನಮ್ಮಗೊಂದು ನ್ಯಾಯನಾ ನಾವು ಇಲ್ಲೇ ಹುಟ್ಟಿರುವವರು ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಪಾಕ್ ಆರ್ಥಿಕತೆ ಭಾರತಕ್ಕಿಂತ ಚೆನ್ನಾಗಿದೆ: ಇಮ್ರಾನ್ ಖಾನ್
ಬೆಂಗಳೂರು: ಒಂದು ವಾರ ಬೆಂಗಳೂರು ಲಾಕ್‍ಡೌನ್ ಹಿನ್ನೆಲೆ ನಗರ ತೊರೆಯುವವರ ಸಂಖ್ಯೆ ಹೆಚ್ಚಾಗಿದೆ. ಮೆಜೆಸ್ಟಿಕ್ ಕೆಎಸ್‍ಆರ್ ಟಿಸಿ ಬಸ್ ನಿಲ್ದಾಣದಿಂದ ಸಾವಿರಾರು ಜನರು ಊರಿಗೆ ತೆರಳ್ತಿದ್ದಾರೆ. ಲಗೇಜ್ ಹಿಡಿದುಕೊಂಡು ಸಂಸಾರ ಸಮೇತ ಊರಿಗೆ ಹೊರಡುತ್ತಿದ್ದಾರೆ.
ಕೊರೊನಾ ಭಯದಲ್ಲಿ ಬೆಂಗಳೂರು ನಗರವನ್ನು ಬಿಟ್ಟು ಜನರು ತಮ್ಮ ತವರು ಗ್ರಾಮಗಳತ್ತ ಸಾಗುತ್ತಿದ್ದು, ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ವಿವಿಧ ಜಿಲ್ಲೆಗಳಿಗೆ ತೆರಳುತ್ತಿರುವ ಜನ ಸಂಖ್ಯೆ ಹೆಚ್ಚಾಗಿ ಬೆಳಗ್ಗೆಯೇ ಕಂಡು ಬಂದಿತ್ತು. ಹುಬ್ಬಳ್ಳಿ, ಬಳ್ಳಾರಿ, ಬೆಳಗಾವಿ, ವಿಜಯಪುರ, ಚಿತ್ರದುರ್ಗ, ಯಾದಗಿರಿ, ದಾವರಣಗೆರೆಗೆ ಬೆಳ್ಳಂಬೆಳಗ್ಗೆ ಏಳು ಬಸ್ ಹೊರಟರೆ, ಹೊಸಪೇಟೆ ಕಡೆ ಮೂರು ಬಸ್ ಸೇರಿದಂತೆ ಸುಮಾರು 83ಕ್ಕೂ ಬಸ್ ಹೆಚ್ಚು ಬಸ್‍ಗಳಲ್ಲಿ ವಿವಿಧ ಜಿಲ್ಲೆಗಳಿಗೆ ಬೆಳಗ್ಗೆ 8 ಗಂಟೆ ವೇಳೆಗೆ ತೆರಳಿದ್ದರು.
ನಗರದಲ್ಲಿ ಗಾರೆ ಕೆಲಸ, ಬಿಲ್ಡಿಂಗ್ ನಿರ್ಮಾಣ ಮತ್ತು ಗಾರ್ಮೆಂಟ್ಸ್ ನೌಕರರು ಹೀಗೆ ಎಲ್ಲಾ ವಿಧದ ಕಾರ್ಮಿಕರು ಬಸ್ ನಿಲ್ದಾಣದಲ್ಲಿ ಕಂಡು ಬಂದರು. ಈ ವೇಳೆ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಕೆಲ ಕಾರ್ಮಿಕರು, ಒಂದಿನ ಕೆಲಸ ಸಿಕ್ಕರೆ, ಇನ್ನೊಂದು ದಿನ ಕೆಲಸ ಇರೋದಿಲ್ಲ. ಮನೆ ಬಾಡಿಗೆ ಕಟ್ಟಬೇಕು, ಮಕ್ಕಳು, ಸಂಸಾರವನ್ನು ನೋಡಿಕೊಳ್ಳಬೇಕು. ಆದ್ದರಿಂದ ಜೀವನ ಕಷ್ಟ ಆಗಿ ಊರಿಗೆ ಹೋಗುತ್ತಿದ್ದೇವೆ. ಈಗಲೂ ಊಟವಿಲ್ಲದೆ ಉಪವಾಸದಿಂದಲೇ ಊರಿಗೆ ಹೊರಟ್ಟಿದ್ದೇವೆ ಎಂದರು.
ಲಾಕ್‍ಡೌನ್ ಹಿನ್ನೆಲೆಯಲ್ಲಿ ಪ್ರಯಾಣಿಕರು ಸಂಖ್ಯೆ ಹೆಚ್ಚಾಗುತ್ತದೆ ಎಂದು ಊಹಿಸಿದ್ದ ಕೆಎಸ್‍ಆರ್ ಟಿಸಿ ಹೆಚ್ಚುವರಿ 300 ಬಸ್‍ಗಳ ನಿಯೋಜನೆ ಮಾಡಿದೆ. ಪ್ರತಿನಿತ್ಯ 600 ಬಸ್‍ಗಳು ರಾಜ್ಯದ ವಿವಿಧ ಭಾಗಗಳಿಗೆ ಮೆಜೆಸ್ಟಿಕ್ ನಿಂದ ಪ್ರಯಾಣ ಬೆಳೆಸುತ್ತಿದ್ದವು. ಇಂದು ಒಟ್ಟು 900 ಬಸ್‍ಗಳನ್ನು ಕೆಎಸ್‍ಆರ್ ಟಿಸಿ ನಿಯೋಜನೆ ಮಾಡಿದೆ. ಪ್ರಯಾಣಿಕರ ಅಗತ್ಯದ ಮೇರೆಗೆ ಹೆಚ್ಚುವರಿ ಬಸ್ ನಿಯೋಜಿಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.