Tag: ಮೆಗ್ಗಾನ್ ಆಸ್ಪತ್ರೆ

  • ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಬಾಣಂತಿ ಸಾವು

    ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಬಾಣಂತಿ ಸಾವು

    ಶಿವಮೊಗ್ಗ: ಹೆರಿಗೆಯಾದ ಕೆಲವೇ ಗಂಟೆಯಲ್ಲಿ ಬಾಣಂತಿಯೊಬ್ಬರು‌ ಮೃತಪಟ್ಟಿರುವ ಘಟನೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ನಡೆದಿದೆ. ಮೃತಪಟ್ಟ ಬಾಣಂತಿಯನ್ನು ದಾವಣಗೆರೆ ಜಿಲ್ಲೆ ಹರಿಹರ ಮೂಲದ ಕವಿತಾ (24) ಎಂದು ಗುರುತಿಸಲಾಗಿದೆ.

    ತೀವ್ರ ರಕ್ತಸ್ರಾವವಾಗಿ ಹೃದಯಾಘಾತ ಸಂಭವಿಸಿ ಬಾಣಂತಿ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ. ಜನವರಿ 1ರಂದು ಹೆರಿಗೆಗೆ ಮೆಗ್ಗಾನ್‌ ಆಸ್ಪತ್ರೆಗೆ ದಾಖಲಾಗಿದ್ದ ಕವಿತಾ, ಜನವರಿ 3ರಂದು ಬೆಳಗ್ಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಸ್ವಲ್ಪ ಸಮಯದ ಬಳಿಕ ಕವಿತಾಗೆ ತೀವ್ರ ರಕ್ತಸ್ರಾವ ಉಂಟಾಗಿದೆ. ಕೆಲವೇ ಕ್ಷಣಕ್ಕೆ ಹೃದಯಾಘಾತ ಸಂಭವಿಸಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ತಿಮ್ಮಪ್ಪ ತಿಳಿಸಿದ್ದಾರೆ. ಇದನ್ನೂ ಓದಿ: ಮರದ ಕೊಂಬೆ ಬಿದ್ದು 15ರ ಬಾಲಕಿ ದುರ್ಮರಣ

     

    ಗರ್ಭ ಚೀಲದಲ್ಲಿ ನೀರಿನ ಅಂಶ ಸೋರಿಕೆಯಾಗಿ ಹೊರ ಬರುತ್ತದೆ. ಅಪರೂಪದಲ್ಲಿ ಅಪರೂಪದ ಪ್ರಕರಣಗಳಲ್ಲಿ ಈ ನೀರಿನ ಅಂಶ ರಕ್ತನಾಳಕ್ಕೆ ಸೇರುತ್ತದೆ. ಆಗ ತೀವ್ರ ರಕ್ತಸ್ರಾವ ಉಂಟಾಗುತ್ತದೆ. ಇಂತಹ ಸಂದರ್ಭ ಹೃದಯಾಘಾತ ಸಂಭವಿಸುತ್ತದೆ ಎಂದು  ಡಾ. ತಿಮ್ಮಪ್ಪ ಹೇಳಿದರು.

     

  • ನಾಯಿಯಿಂದ ಕಚ್ಚಿಸಿಕೊಂಡು ಚಿಕಿತ್ಸೆ ಫಲಕಾರಿಯಾಗದೇ ಓರ್ವ ಮಹಿಳೆ ಸಾವು

    ನಾಯಿಯಿಂದ ಕಚ್ಚಿಸಿಕೊಂಡು ಚಿಕಿತ್ಸೆ ಫಲಕಾರಿಯಾಗದೇ ಓರ್ವ ಮಹಿಳೆ ಸಾವು

    ಶಿವಮೊಗ್ಗ: ನಾಯಿ ಕಚ್ಚಿ ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹೊಸನಗರ (Hosanagar) ಪಟ್ಟಣದಲ್ಲಿ ನಡೆದಿದೆ.

    ಮೃತ ಮಹಿಳೆಯನ್ನು ಹೊಸನಗರ ತಾಲೂಕಿನ ಗೇರುಪುರ (Gerupura) ಮೂಲದ ಸಂಗೀತ (38) ಎಂದು ಗುರುತಿಸಲಾಗಿದೆ. ಹೊಸನಗರ ಪಟ್ಟಣದಲ್ಲಿ ವಾಸವಾಗಿದ್ದ ಸಂಗೀತ ಅವರು ಜುಲೈ 14 ರಂದು ನಾಯಿ ಕಡಿತಕ್ಕೊಳಗಾಗಿದ್ದರು. ಹೊಸನಗರದಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು.ಇದನ್ನೂ ಓದಿ: ವಿಮೆ ಹಣ ದೋಚಲು ಅಮಾಯಕ ವ್ಯಕ್ತಿಯ ಮರ್ಡರ್ ಮಿಸ್ಟ್ರಿ- ಹಾಸನದಲ್ಲಿ ನಟೋರಿಯಸ್ ದಂಪತಿ ಅರೆಸ್ಟ್

    ಹೆಚ್ಚಿನ ಚಿಕಿತ್ಸೆಗಾಗಿ ಸಂಗೀತ ಜಿಲ್ಲೆಯ ಮೆಗ್ಗಾನ್ ಆಸ್ಪತ್ರೆಗೆ (Meggan Hospital) ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಂಗೀತ ಆ.23ರಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.ಇದನ್ನೂ ಓದಿ: ಹಿಂದೂ ಯುವತಿಯರನ್ನು ಗುರಿಯಾಗಿಸಿಕೊಂಡು ಕೃತ್ಯ, ಇದೊಂದು ಪೂರ್ವಯೋಜಿತ ಪ್ಲ್ಯಾನ್- ಸುನೀಲ್ ಕುಮಾರ್

  • 5 ದಿನಗಳ ಹಿಂದಷ್ಟೇ ವಸತಿ ಶಾಲೆಗೆ ದಾಖಲಾಗಿದ್ದ ವಿದ್ಯಾರ್ಥಿನಿ ಸಾವು

    5 ದಿನಗಳ ಹಿಂದಷ್ಟೇ ವಸತಿ ಶಾಲೆಗೆ ದಾಖಲಾಗಿದ್ದ ವಿದ್ಯಾರ್ಥಿನಿ ಸಾವು

    – ಮಗಳ ಸಾವಿನ ಬಗ್ಗೆ ಪೋಷಕರು ಅನುಮಾನ

    ಶಿವಮೊಗ್ಗ: ಖಾಸಗಿ ವಸತಿ ಶಾಲೆಯಲ್ಲಿ 8 ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದವಾಗಿ ಮೃತಪಟ್ಟ ಪ್ರಕರಣ ಸಾಗರದಲ್ಲಿ (Sagar) ನಡೆದಿದೆ.

    ಮೃತ ವಿದ್ಯಾರ್ಥಿನಿಯನ್ನು ಸೊರಬ ತಾಲೂಕಿನ ಶಿವಪುರ ಗ್ರಾಮದ ತೇಜಸ್ವಿನಿ (13) ಎಂದು ಗುರುತಿಸಲಾಗಿದೆ. ಈಕೆ ಸಾಗರದ ವನಶ್ರೀ ವಸತಿ ಶಾಲೆಗೆ (Residential School) ಕಳೆದ ಐದು ದಿನಗಳ ಹಿಂದೆ ದಾಖಲಾಗಿದ್ದಳು. ಗುರುವಾರ ಪ್ರಜ್ಞಾ ಹೀನಾ ಸ್ಥಿತಿಯಲ್ಲಿದ್ದ ತೇಜಸ್ವಿಯನ್ನು ಶಾಲೆಯ ಶಿಕ್ಷಕರು ಸಾಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ವಿದ್ಯಾರ್ಥಿನಿ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಇದನ್ನೂ ಓದಿ: ಖಲಿಸ್ತಾನಿ ಬೆಂಬಲಿಗರಿಂದ ಇಂದಿರಾ ಗಾಂಧಿ ಹತ್ಯೆಯ ಸ್ತಬ್ಧಚಿತ್ರ ಮೆರವಣಿಗೆ

    ಇದೀಗ ಮಗಳ ಸಾವಿನ ಬಗ್ಗೆ ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗದ (Shivamogga) ಮೆಗ್ಗಾನ್ ಆಸ್ಪತ್ರೆಯಲ್ಲಿ (McGann Hospital) ಮರಣೋತ್ತರ ಶವ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಅಲ್ಲದೇ ವಿದ್ಯಾರ್ಥಿನಿ ಸಾವಿನ ಬಗ್ಗೆ ತನಿಖೆ ನಡೆಸುವಂತೆ ವಿದ್ಯಾರ್ಥಿನಿ ಕುಟುಂಬಸ್ಥರು ಹಾಗೂ ಶಾಸಕ ಬೇಳೂರು ಗೋಪಾಲಕೃಷ್ಣ ಆಗ್ರಹಿಸಿದ್ದಾರೆ. ಇದನ್ನೂ ಓದಿ: 32 ವರ್ಷದ ಗೆಳತಿಯನ್ನು ಕೊಂದು ಪೀಸ್ ಪೀಸ್ ಮಾಡಿದ 56 ವರ್ಷದ ವ್ಯಕ್ತಿ ಅರೆಸ್ಟ್

  • ಚುನಾವಣಾ ಕರ್ತವ್ಯಕ್ಕೆ ಪಾನಮತ್ತರಾಗಿ ಆಗಮಿಸಿದ್ದ ಇಬ್ಬರು ಸಿಬ್ಬಂದಿ ಅಮಾನತು

    ಚುನಾವಣಾ ಕರ್ತವ್ಯಕ್ಕೆ ಪಾನಮತ್ತರಾಗಿ ಆಗಮಿಸಿದ್ದ ಇಬ್ಬರು ಸಿಬ್ಬಂದಿ ಅಮಾನತು

    ಶಿವಮೊಗ್ಗ: ಚುನಾವಣಾ (Election) ಕರ್ತವ್ಯಕ್ಕೆ ಪಾನಮತ್ತರಾಗಿ ಆಗಮಿಸಿದ್ದ ಇಬ್ಬರು ಸಿಬ್ಬಂದಿಯನ್ನು ಅಮಾನತುಗೊಳಿಸಿರುವ (Suspend) ಘಟನೆ ಶಿವಮೊಗ್ಗದಲ್ಲಿ (Shivamogga) ನಡೆದಿದೆ.

    ಅಮಾನತುಗೊಂಡವರನ್ನು ಮಾಲತೇಶ್ ಹಾಗು ರಮೇಶ್ ಎಂದು ಗುರುತಿಸಲಾಗಿದೆ. ರಮೇಶ್ ತೋಟಗಾರಿಕೆ ಇಲಾಖೆಯ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರೆ ಮಾಲತೇಶ್ ಶಿಕ್ಷಕರಾಗಿದ್ದರು. ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಮಸ್ಟರಿಂಗ್‌ನಲ್ಲಿ ಇಬ್ಬರೂ ಪಾನಮತ್ತರಾಗಿ ಕರ್ತವ್ಯಕ್ಕೆ ಹಾಜರಾಗಿದ್ದರು. ಇದನ್ನು ಗಮನಿಸಿದ ಚುನಾವಣಾ ಅಧಿಕಾರಿ (Election Officer) ಇಬ್ಬರನ್ನೂ ಮೆಗ್ಗಾನ್ ಆಸ್ಪತ್ರೆಗೆ (Meggan Hospital) ಕಳುಹಿಸಿದ್ದರು. ಇದನ್ನೂ ಓದಿ: ಮತಗಟ್ಟೆ ತರಬೇತಿಯಲ್ಲಿ ಉದ್ಧಟತನ – ಮಹಿಳಾ ಇನ್‌ಸ್ಪೆಕ್ಟರ್‌ ಅಮಾನತು

    ಮೆಗ್ಗಾನ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದ ಬಳಿಕ ಇವರಿಬ್ಬರೂ ಪಾನಮತ್ತರಾಗಿರುವುದು ಸಾಬೀತಾಗಿದೆ. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಇಬ್ಬರನ್ನೂ ಅಮಾನತು ಮಾಡುವಂತೆ ಆದೇಶ ನೀಡಿದ್ದಾರೆ. ಇದನ್ನೂ ಓದಿ: ರಾಹುಲ್ ದ್ರಾವಿಡ್ ಸ್ವಾಗತ ಕಮಾನು – ಯಂಗ್ ವೋಟರ್ಸ್ ಸೆಳೆಯಲು ಯುವ ಮತಗಟ್ಟೆ

  • ಹೃದಯದ ಸಮಸ್ಯೆ- ಮೆಗ್ಗಾನ್ ಆಸ್ಪತ್ರೆಗೆ ಮುರುಘಾ ಶ್ರೀ ಶಿಫ್ಟ್

    ಹೃದಯದ ಸಮಸ್ಯೆ- ಮೆಗ್ಗಾನ್ ಆಸ್ಪತ್ರೆಗೆ ಮುರುಘಾ ಶ್ರೀ ಶಿಫ್ಟ್

    ಚಿತ್ರದುರ್ಗ: ಪೋಕ್ಸೋ (POCSO) ಪ್ರಕರಣ ಸಂಬಂಧ ಸೆಪ್ಟೆಂಬರ್ 27ರವರೆಗೆ ನ್ಯಾಯಾಂಗ ಬಂಧನದಲ್ಲಿರುವ ಮುರುಘಾ ಶ್ರೀಯನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಆರೋಪಿ ಮುರುಘಾಶ್ರೀ (Murugha Shree) ಗೆ ಹೃದಯ ಸಮಸ್ಯೆ ಹಿನ್ನೆಲೆ ಅವರನ್ನು ಕೂಡಲೇ ಆಸ್ಪತ್ರೆಗೆ ರವಾನಿಸಲಾಗಿದೆ. ಕರೋನರಿ ಆಂಜಿಯೋಗ್ರಾಮ್ (Coronary angiogram) ನಿಂದ ಬಳಲುತ್ತಿದ್ದಾರೆ ಎಂದು ಮುರುಘಾಶ್ರೀ ಪರ ವಕೀಲ ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಚಿತ್ರದುರ್ಗ 2ನೇ ಅಪರ ಜಿಲ್ಲಾ & ಸತ್ರ ನ್ಯಾಯಾಲಯದ ನ್ಯಾಯಾಧೀಶರ ಸೂಚನೆ ಮೇರೆಗೆ ಶಿಫ್ಟ್ ಮಾಡಲಾಗಿದೆ. ಇದನ್ನೂ ಓದಿ: ಮುರುಘಾ ಶ್ರೀಗಳಿಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ

    ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆ (McGann Hospital) ಗೆ ಕರೆದೊಯ್ಯಲು ಕೋರ್ಟ್ ಸೂಚನೆ ನೀಡಿದಂತೆ ಅವರನ್ನು ಚಿತ್ರದುರ್ಗ ಜಿಲ್ಲಾ ಕಾರಾಗೃಹದಿಂದ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದುಕೊಮಡು ಹೋಗಲಾಗಿದೆ. ಬಿಗಿ ಭದ್ರತೆಯಲ್ಲಿಯೇ ಪೊಲೀಸ್ ವ್ಯಾನ್ ನಲ್ಲಿ ಮುರುಘಾಶ್ರೀಯನ್ನು ಶಿವಮೊಗ್ಗಕ್ಕೆ ಕರೆದೊಯ್ಯಲಾಗಿದೆ. ಮುರುಘಾಮಠದ ಮುಂಭಾಗದಿಂದಲೇ ಶಿವಮೊಗ್ಗಕ್ಕೆ ಪೊಲೀಸ್ ವ್ಯಾನ್ ತೆರಳಿದೆ.

    Live Tv
    [brid partner=56869869 player=32851 video=960834 autoplay=true]

  • ಕೊರೊನಾ ಸೋಂಕಿಗೆ ಒಂದು ವರ್ಷದ ಕಂದಮ್ಮ ಬಲಿ

    ಕೊರೊನಾ ಸೋಂಕಿಗೆ ಒಂದು ವರ್ಷದ ಕಂದಮ್ಮ ಬಲಿ

    ಶಿವಮೊಗ್ಗ: ಕೊರೊನಾ ಸೋಂಕಿಗೆ ಒಂದು ವರ್ಷದ ಕಂದಮ್ಮ ಬಲಿಯಾದ ಮನಕಲಕುವ ಘಟನೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ನಡೆದಿದೆ.

    ಮೃತಪಟ್ಟ ಮಗುವನ್ನು ಉದಮ (1) ಎಂದು ಗುರುತಿಸಲಾಗಿದೆ. ಶಿವಮೊಗ್ಗದ ಗಾಂಧಿ ಬಜಾರಿನ ಮಡಿವಾಳರ್ ಕೇರಿ ನಿವಾಸಿಯಾಗಿರುವ ಉದಯ – ಚೈತ್ರಾ ದಂಪತಿಯ ಮಗು ಕೊರೊನಾ ಸೋಂಕಿಗೆ ಬಲಿಯಾಗಿದೆ. ಇದನ್ನೂ ಓದಿ : ವಿವಾಹವಾದ ನಾಲ್ಕೇ ದಿನಕ್ಕೆ ಕೊರೊನಾಗೆ ಬಲಿಯಾದ ನವ ವಿವಾಹಿತೆ

    ಮಗುವಿಗೆ ಬಿಳಿ ರಕ್ತಕಣ ಕಡಿಮೆಯಾಗಿದೆ ಎಂದು ಹೆತ್ತವರು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಮಗುಗೆ ಆಕ್ಸಿಜನ್ ಸಮಸ್ಯೆ ಎದುರಾಗಿದೆ. ನಂತರ ಮಗುವನ್ನು ಚಿಕಿತ್ಸೆಗೆಂದು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದನ್ನೂ ಓದಿ : ಮದುವೆಯಾದ ನಾಲ್ಕೇ ದಿನಕ್ಕೆ ನವವಿವಾಹಿತೆ ಕೊರೊನಾಗೆ ಬಲಿ..!

    ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ ನಂತರ ಮಗುವನ್ನು ಕೋವಿಡ್ ಟೆಸ್ಟ್‍ಗೆ ಒಳಪಡಿಸಿದ್ದಾರೆ. ನಂತರ ಮಗುಗೆ ಕೋವಿಡ್ ಸೋಂಕಿರುವುದು ದೃಢಪಟ್ಟಿದೆ. ಚಿಕಿತ್ಸೆ ಪಡೆಯುತ್ತಿದ್ದ ಮಗು ನಿನ್ನೆ ರಾತ್ರಿ ಉಸಿರಾಟದ ಸಮಸ್ಯೆಯಿಂದ ಮೃತಪಟ್ಟಿದೆ. ಮಗು ಮೃತಪಟ್ಟ ನಂತರ ಹೆತ್ತವರು ಹಾಗೂ ಕುಟುಂಬಸ್ಥರ ರೋಧನೆ ಮುಗಿಲು ಮುಟ್ಟಿದೆ. ಇದನ್ನೂ ಓದಿ:  ಸೋಂಕು ಬಗ್ಗೆ ಜಾಗೃತಿ ಮೂಡಿಸುತ್ತಿದ್ದ ವ್ಯಕ್ತಿಯೇ ಕೊರೊನಾಗೆ ಬಲಿ

  • ವೆಂಟಿಲೇಟರ್ ಸಿಗದೇ ಕೊರೊನಾ ಸೋಂಕಿತ ಸಾವು

    ವೆಂಟಿಲೇಟರ್ ಸಿಗದೇ ಕೊರೊನಾ ಸೋಂಕಿತ ಸಾವು

    ಶಿವಮೊಗ್ಗ: ವೆಂಟಿಲೇಟರ್ ಸಿಗದೇ ಕೊರೊನಾ ಸೋಂಕಿತ ವ್ಯಕ್ತಿಯೋರ್ವ ನರಳಿ ನರಳಿ ಪ್ರಾಣ ಬಿಟ್ಟ ಘಟನೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ನಡೆದಿದೆ.

    ಶಿಕಾರಿಪುರದ ಆನಂದ್ (45) ಮೃತರಾಗಿದ್ದಾರೆ. ಆನಂದ್ ಕೊರೊನಾ ಸೋಂಕಿಗೆ ತುತ್ತಾಗಿ ಹೋಂ ಐಸೋಲೇಷನ್‍ಗೆ ಒಳಗಾಗಿದ್ದರು. ಆದರೆ ನಿನ್ನೆ ಇದ್ದಕ್ಕಿದ್ದಂತೆ ಆರೋಗ್ಯದಲ್ಲಿ ಏರುಪೇರು ಉಂಟಾದ ಪರಿಣಾಮ ಮೃತ ಆನಂದ್ ಕುಟುಂಬಸ್ಥರು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಿದ್ದರು.

    ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಸೋಂಕಿತ ವ್ಯಕ್ತಿಗೆ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ನೀಡಬೇಕಿತ್ತು. ಆದರೆ ಮೆಗ್ಗಾನ್ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಖಾಲಿ ಇಲ್ಲದ ಕಾರಣ ಸಾಮಾನ್ಯ ಕೋವಿಡ್ ವಾರ್ಡ್‍ನಲ್ಲಿಯೇ ಸೋಂಕಿತನಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು. ನಿನ್ನೆ ರಾತ್ರಿ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ಈ ವೇಳೆ ಸುಮಾರು ಎರಡು ಗಂಟೆಗಳ ಕಾಲ ಸೋಂಕಿತ ಆನಂದ್ ನರಳಾಡಿದ್ದಾರೆ. ಆದರೆ ಈ ವೇಳೆ ವೈದ್ಯರು ಆಗಲಿ, ಆರೋಗ್ಯ ಸಿಬ್ಬಂದಿ ಆಗಲಿ ಆತನಿಗೆ ಅಗತ್ಯ ಚಿಕಿತ್ಸೆ ನೀಡಲು ಮುಂದಾಗಿಲ್ಲ. ಹೀಗಾಗಿ ಸೋಂಕಿತ ವೆಂಟಿಲೇಟರ್ ಸಿಗದೇ ನರಳಾಡಿ ಪ್ರಾಣಬಿಟ್ಟಿದ್ದಾರೆ.

    ಮೆಗ್ಗಾನ್ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ದೊರೆಯದ ಕಾರಣ ಸೋಂಕಿತ ಮೃತಪಟ್ಟಿದ್ದಾನೆ ಎಂದು ಆತನ ಕುಟುಂಬಸ್ಥರು ಇದೀಗ ವೈದ್ಯರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೃತ ಸೋಂಕಿತ ಪ್ರಾಣಬಿಡುವ ಮುನ್ನ ನರಳಾಡುತ್ತಿರುವ ದೃಶ್ಯವನ್ನು ಕೋವಿಡ್ ವಾರ್ಡ್‍ನಲ್ಲಿದ್ದ ಇತರೆ ಸೋಂಕಿತರು ತಮ್ಮ ಮೊಬೈಲ್‍ನಲ್ಲಿ ಸರೆ ಹಿಡಿದಿದ್ದಾರೆ.

    ಒಟ್ಟಿನಲ್ಲಿ ಮುಖ್ಯಮಂತ್ರಿ ತವರು ಜಿಲ್ಲೆಯಲ್ಲಿ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ. ಸರಿಯಾದ ಚಿಕಿತ್ಸೆ ದೊರೆಯದೇ ಸೋಂಕಿತರು ಮೃತಪಡುತ್ತಿದ್ದಾರೆ ಎಂಬ ಅಂಶ ಈ ಘಟನೆಯಿಂದ ಬೆಳಕಿಗೆ ಬಂದಿದೆ.

  • ಆಸ್ಪತ್ರೆಗೆ ಅಮ್ಮನನ್ನ ನೋಡಲು ಬಂದ ಬಾಲಕಿಯ ಮೇಲೆ ಗ್ಯಾಂಗ್‍ರೇಪ್

    ಆಸ್ಪತ್ರೆಗೆ ಅಮ್ಮನನ್ನ ನೋಡಲು ಬಂದ ಬಾಲಕಿಯ ಮೇಲೆ ಗ್ಯಾಂಗ್‍ರೇಪ್

    – ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ವಾರ್ಡ್ ಬಾಯ್‍ನಿಂದ ಕೃತ್ಯ

    ಶಿವಮೊಗ್ಗ: ಆಸ್ಪತ್ರೆಗೆ ದಾಖಲಾಗಿದ್ದ ತಾಯಿಯನ್ನ ನೋಡಲು ಬಂದ ಬಾಲಕಿಯ ವಾರ್ಡ್ ಬಾಯ್ ತನ್ನ ಗೆಳೆಯರ ಜೊತೆ ಸೇರಿ ಅತ್ಯಾಚಾರಗೈದಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

    ಅಪ್ರಾಪ್ತೆ ತಾಯಿ ಅನಾರೋಗ್ಯ ಹಿನ್ನೆಲೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ತಾಯಿಯನ್ನ ನೋಡಲು ಬರುತ್ತಿದ್ದ ಬಾಲಕಿಯನ್ನ ಆಸ್ಪತ್ರೆಯ ವಾರ್ಡ್ ಬಾಯ್ ಪರಿಚಯ ಮಾಡಿಕೊಂಡಿದ್ದಾನೆ. ಬಜರಂಗದಳದ ಕಾರ್ಯಕರ್ತನ ಮೇಲೆ ಹಲ್ಲೆ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ನಿಷೇಧಾಜ್ಞೆ ಜಾರಿ ಹಿನ್ನೆಲೆ ಬಹುತೇಕ ಹೋಟೆಲ್ ಗಳು ಮುಚ್ಚಿವೆ. ಇದನ್ನೇ ಲಾಭವಾಗಿ ಬಳಸಿಕೊಂಡ ಆಸ್ಪತ್ರೆಯ ವಾರ್ಡ್ ಬಾಯ್ ಊಟ ಕೊಡಿಸುವದಾಗಿ ಹೇಳಿ ಬಾಲಕಿಯನ್ನ ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾನೆ.

    ಶಿವಮೊಗ್ಗದ ಸಾಗರ ರಸ್ತೆಯಲ್ಲಿ ತನ್ನ ಮೂವರು ಸ್ನೇಹಿತರ ಜೊತೆ ಸೇರಿ ಅತ್ಯಾಚಾರ ಎಸಗಿದ್ದಾನೆ. ಸದ್ಯ ಬಾಲಕಿಯನ್ನ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಸಂಬಂಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆಸ್ಪತ್ರೆಯ ವಾರ್ಡ್ ಬಾಯ್ ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ವಾರ್ಡ್ ಬಾಯ್ ಮೂವರು ಗೆಳೆಯರು ನಾಪತ್ತೆಯಾಗಿದ್ದು, ಬಂಧನಕ್ಕಾಗಿ ಪೊಲೀಸರು ವಿಶೇಷ ತಂಡ ರಚಿಸಿ ಬಲೆ ಬೀಸಿದ್ದಾರೆ.

  • ಮೆಗ್ಗಾನ್ ಆಸ್ಪತ್ರೆಯ ಕೊರೊನಾ ವಾರ್ಡ್‌ನಲ್ಲಿ ಕಾಣಿಸಿಕೊಂಡ ಹೊಗೆ

    ಮೆಗ್ಗಾನ್ ಆಸ್ಪತ್ರೆಯ ಕೊರೊನಾ ವಾರ್ಡ್‌ನಲ್ಲಿ ಕಾಣಿಸಿಕೊಂಡ ಹೊಗೆ

    – ರೋಗಿಗಳು ಇಲ್ಲದ್ದರಿಂದ ತಪ್ಪಿತು ಅನಾಹುತ

    ಶಿವಮೊಗ್ಗ: ನಗರದ ಮೆಗ್ಗಾನ್ ಭೋಧನಾ ಆಸ್ಪತ್ರೆಯ ಕೋವಿಡ್-19 ವಾರ್ಡ್ ನಲ್ಲಿ ಹೊಗೆ ಕಾಣಿಸಿಕೊಂಡ ಪರಿಣಾಮ ಕೆಲ ಕಾಲ ಆಸ್ಪತ್ರೆ ಆವರಣದಲ್ಲಿ ಆತಂಕ ಉಂಟಾಗಿತ್ತು.

    ಕೋವಿಡ್ ವಾರ್ಡ್ ಗೆ ಆಕ್ಸಿಜನ್ ಪೂರೈಕೆ ಮಾಡುವ ಹೆಚ್‍ಎಫ್‍ಎನ್‍ಸಿ ಯಂತ್ರ 24 ಗಂಟೆಗಳ ಕಾಲ ಸತತವಾಗಿ ಕಾರ್ಯ ನಿರ್ವಹಿಸುತ್ತದೆ. ಹೀಗಾಗಿ ಯಂತ್ರದಲ್ಲಿ ಹೆಚ್ಚು ಶಾಖ ಉಂಟಾದ ಪರಿಣಾಮ ಹೊಗೆ ಕಾಣಿಸಿಕೊಂಡಿದೆ ಎಂದು ಅಂದಾಜಿಸಲಾಗಿದೆ. ಆದರೆ ಈ ವೇಳೆ ವಾರ್ಡ್ ನಲ್ಲಿ ಯಾವುದೇ ರೋಗಿಗಳು ಇಲ್ಲದಿದ್ದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ.

    ಆತಂಕಪಡುವ ಅಗತ್ಯವಿಲ್ಲ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಇನ್ನು ಆಸ್ಪತ್ರೆಯಲ್ಲಿ ಹೊಗೆ ಕಾಣಿಸಿಕೊಂಡ ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ವಾರ್ಡ್ ನಲ್ಲಿ ಆವರಿಸಿಕೊಂಡಿದ್ದ ಹೊಗೆಯನ್ನು ಮುಕ್ತಗೊಳಿಸಿದರು. ಇದೀಗ ಪರಿಣಿತರ ತಂಡ ಈ ಕುರಿತು ಪರಿಶೀಲನೆ ನಡೆಸುತ್ತಿದೆ.

  • ಮೆಗ್ಗಾನ್ ಸಿಬ್ಬಂದಿ ಎಡವಟ್ಟು- ಆಸ್ಪತ್ರೆಯಲ್ಲಿ ಅಸುನೀಗಿದ ಮಗು ಅದಲು, ಬದಲು

    ಮೆಗ್ಗಾನ್ ಸಿಬ್ಬಂದಿ ಎಡವಟ್ಟು- ಆಸ್ಪತ್ರೆಯಲ್ಲಿ ಅಸುನೀಗಿದ ಮಗು ಅದಲು, ಬದಲು

    – ಪೊಲೀಸ್ ಠಾಣೆ ಮೆಟ್ಟಿಲೇರಿದ ಪೋಷಕರು

    ಶಿವಮೊಗ್ಗ: ಆಸ್ಪತ್ರೆಯಲ್ಲಿ ಮೃತಪಟ್ಟ ನವಜಾತ ಶಿಶುವನ್ನು ಪೋಷಕರಿಗೆ ನೀಡದೇ, ಬದುಕಿರುವ ಮಗುವಿನ ಪೋಷಕರಿಗೆ ಸಿಬ್ಬಂದಿ ನೀಡಿರುವ ಆಘಾತಕಾರಿ ಘಟನೆ ನಗರದ ಮೆಗ್ಗಾನ್ ಆಸ್ಪತ್ರೆಯಲ್ಲಿ ನಡೆದಿದೆ.

    ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕುಣೆಬೆಳಕೆರೆ ನಿವಾಸಿಗಳಾದ ಸುಮಾ, ಅಂಜನಪ್ಪ ದಂಪತಿಗೆ ಕಳೆದ ಸೋಮವಾರ ಮೆಗ್ಗಾನ್ ಆಸ್ಪತ್ರೆಯಲ್ಲಿ ಗಂಡು ಮಗು ಜನನವಾಗಿದೆ. ಅದೇ ದಿನ ಶಿವಮೊಗ್ಗ ಜಿಲ್ಲೆಯ ಸೊರಬದ ಸುಮಾ, ಗೋಪಾಲಪ್ಪ ದಂಪತಿಗೂ ಹೆಣ್ಣು ಮಗು ಜನಿಸಿದೆ. ಇಬ್ಬರ ಮಕ್ಕಳನ್ನು ಆರೋಗ್ಯದ ದೃಷ್ಟಿಯಿಂದ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇಡಲಾಗಿತ್ತು. ಈ ವೇಳೆ ಸುಮಾ-ಅಂಜನಪ್ಪನವರ ಗಂಡು ಮಗು ಮೃತವಾಗಿದೆ. ಸುಮಾ, ಗೋಪಾಲಪ್ಪ ದಂಪತಿಯ ಹೆಣ್ಣು ಮಗು ಚಿಕಿತ್ಸೆಯಲ್ಲಿದೆ. ಗಂಡು ಮಗು ಮೃತವಾಗುತ್ತಿದ್ದಂತೆಯೇ ಆಸ್ಪತ್ರೆಯ ಸಿಬ್ಬಂದಿ ಮೃತ ಮಗುವನ್ನು ಸೊರಬದ ಸುಮಾ ಅವರಿಗೆ ನೀಡಿ ಕಳುಹಿಸಿದ್ದಾರೆ.

    ಮೃತ ಮಗುವನ್ನು ಪಡೆದ ಸೊರಬದ ಸುಮಾ, ಗೋಪಾಲಪ್ಪ ದಂಪತಿ ಕಣ್ಣೀರು ಹಾಕುತ್ತಾ ಮಗುವನ್ನು ಪಡೆದುಕೊಂಡು ಆಸ್ಪತ್ರೆಯಿಂದ ತಮ್ಮ ಊರಿಗೆ ತೆರಳಿದ್ದಾರೆ. ಸಂಜೆ ವೇಳೆಗೆ ಇತ್ತ ಮಗು ನೋಡಲೆಂದು ತೀವ್ರ ನಿಗಾ ಘಟಕಕ್ಕೆ ಹೋದ ಸುಮಾ ಅಂಜನಪ್ಪನವರ ಪೋಷಕರಿಗೆ ವೈದ್ಯರು ನಿಮ್ಮ ಮಗು ಸಾವನ್ನಪ್ಪಿದೆ ಎಂದು ಹೇಳಿದ್ದಾರೆ. ಸುಮಾ ಅಂಜನಪ್ಪ ಅವರ ಮಗು ಜನಿಸಿದಾಗ ಮಗು ಒಂದೂವರೆ ಕೆ.ಜಿ ತೂಕ ಇದ್ದ ಕಾರಣ ಚಿಕಿತ್ಸೆಯಲ್ಲಿಡಲಾಗಿತ್ತು. ಸರಿ ಮೃತ ಮಗುವನ್ನು ನೀಡಿ ಎಂದು ಕೇಳಿದಾಗ ಆಸ್ಪತ್ರೆಯ ಸಿಬ್ಬಂದಿ ಮಾಡಿದ ಎಡವಟ್ಟು ಹೊರಬಿದ್ದಿದೆ.

    ಈ ವೇಳೆಗಾಗಲೇ ಸೊರಬದ ಸುಮಗೋಪಾಲಪ್ಪನವರು ಮಗುವನ್ನು ತಮ್ಮೂರಿಗೆ ತೆಗೆದು ಕೊಂಡು ಹೋಗಿ ಅಂತ್ಯಕ್ರಿಯೆಯನ್ನು ಸಹ ಮಾಡಿ ಮುಗಿಸಿದ್ದಾರೆ. ಆದರೆ ಅವರ ಮಗು ಆಸ್ಪತ್ರೆಯಲ್ಲೆ ಚಿಕಿತ್ಸೆ ಪಡೆಯುತ್ತಿದೆ. ಇದರಿಂದ ಕೋಪಗೊಂಡ ಸುಮಾ ಅಂಜನಪ್ಪ ಪೋಷಕರು ತಮಗೆ ಮಗು ಬೇಕು ಎಂದು ದೊಡ್ಡಪೇಟೆ ಪೊಲೀಸ್ ಠಾಣೆ ಮೇಟ್ಟಿಲೇರಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಲು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಶ್ರೀಧರ್ ನಿರಾಕರಿಸಿದ್ದಾರೆ.

    ಇತ್ತ ಮೃತಪಟ್ಟ ಮಗುವಿನ ದೇಹವು ಸಿಗದೆ ಸುಮಾ ಅಂಜನಪ್ಪ ಕುಟುಂಬ ಪರದಾಡುವಂತಾಗಿದೆ. ಇಬ್ಬರು ಮಗುವಿನ ತಾಯಂದಿರ ಹೆಸರು ಒಂದೇ ಆಗಿದ್ದರಿಂದ ಹಾಗೂ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಯ ಬೇಜವಾಬ್ದಾರಿಯಿಂದಾಗಿ ಈ ರೀತಿಯ ಸಮಸ್ಯೆ ಉಂಟಾಗಿದೆ. ಮಗುವನ್ನು ಬದಲಾವಣೆ ಮಾಡಿ ನೋವಿಗೆ ಕಾರಣರಾದವರನ್ನು ಅಮಾನತು ಮಾಡಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ. ಅಲ್ಲದೆ ಘಟನೆ ಕುರಿತು ಮೃತ ಮಗುವಿನ ಪೋಷಕರು ದೊಡ್ಡಪೇಟೆ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.