Tag: ಮೆಗ್ಗನ್ ಆಸ್ಪತ್ರೆ

  • ಸಾವರ್ಕರ್ ಪೋಸ್ಟರ್ ವಿವಾದ – ನಾಲ್ವರು ಅರೆಸ್ಟ್

    ಸಾವರ್ಕರ್ ಪೋಸ್ಟರ್ ವಿವಾದ – ನಾಲ್ವರು ಅರೆಸ್ಟ್

    ಶಿವಮೊಗ್ಗ: ವೀರ ಸಾವರ್ಕರ್ ಭಾವಚಿತ್ರ ಇಡುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ನಡೆದ ಕಿತ್ತಾಟದಿಂದ ಯುವಕನೋರ್ವನಿಗೆ ದುಷ್ಕರ್ಮಿಗಳು ಚಾಕು ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಿರುವುದಾಗಿ ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.

    ಇಂದು ಮೆಗ್ಗನ್ ಆಸ್ಪತ್ರೆಗೆ ಭೇಟಿ ನೀಡಿ ಐಸಿಯುನಲ್ಲಿರುವ ಪ್ರೇಮ್ ಸಿಂಗ್ ಅವರನ್ನು ವಿಚಾರಿಸಿ ನಂತರ ಘಟನೆ ಬಗ್ಗೆ ಮಾಹಿತಿ ಪಡೆದರು. ನಂತರ ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಲ್ಲೆಗೊಳಗಾದ ಪ್ರೇಮ್‍ಸಿಂಗ್, ಹಾಗೂ ಗುಂಡೇಟು ತಿಂದ ಮಹಮ್ಮದ್ ಜಭೀಯಿಂದ ಮಾಹಿತಿ ಪಡೆದಿದ್ದೇನೆ. ಪ್ರೇಮ್ ಸಿಂಗ್ ಅಣ್ಣ ಆತನ ಜೊತೆ ಇದ್ದು ನೋಡಿಕೊಳ್ಳುತ್ತಿದ್ದಾರೆ. ರಾಜಸ್ಥಾನದಲ್ಲಿರುವ ಅವರ ತಂದೆ, ತಾಯಿಗೆ ಮಾಹಿತಿ ನೀಡಲಾಗಿದೆ. ಅವರು ಶಿವಮೊಗ್ಗಕ್ಕೆ ಬರಲಿದ್ದಾರೆ. ಇಬ್ಬರ ಆರೋಗ್ಯವೂ ಸ್ಥಿರವಾಗಿದ್ದು, ಇಲ್ಲೇ ಚಿಕಿತ್ಸೆ ಮುಂದುವರೆಯಲಿದೆ. ಆರೋಪಿ ಮೊಹಮ್ಮದ್ ಜಭೀಯಿಂದಲೂ ಮಾಹಿತಿ ಪಡೆದಿದ್ದೇನೆ. ಎಎ ಸರ್ಕಲ್‍ನಲ್ಲಿ ಫ್ಲೆಕ್ಸ್ ತೆರವು ವೇಳೆ ನಡೆದ ಗಲಭೆಯಲ್ಲಿ ಜಭೀ ಪಾಲ್ಗೊಂಡಿದ್ದರು. ಇದೀಗ ಘಟನೆ ಸಂಬಂಧ ನಾಲ್ವರನ್ನು ಬಂಧಿಸಲಾಗಿದೆ. ಉಳಿದವರವನ್ನು ಪತ್ತೆಹಚ್ಚಿ ಬಂಧಿಸಲಾಗುವುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು- ಪೊಲೀಸರಿಗೂ ಚಾಕು ಇರಿಯಲು ಮುಂದಾದ ಕಿಡಿಗೇಡಿ

    ಶಿವಮೊಗ್ಗದ ಅಮೀರ್ ಅಹಮದ್ ವೃತ್ತದಲ್ಲಿ ಸೋಮವಾರ ಎರಡು ಕೋಮಿನ ನಡುವೆ ಜಟಾಪಟಿ ನಡೆದಿತ್ತು. ಒಂದು ಗುಂಪು ಸಾವರ್ಕರ್ ಫೋಟೋ ತೆಗೆದು ಟಿಪ್ಪು ಫೋಟೋ ಇಡಲು ಹೊರಟಿತ್ತು. ಈ ವೇಳೆ ಎರಡು ಕೋಮಿನ ನಡುವೆ ಜಟಾಪಟಿ ನಡೆದಿತ್ತು. ಈ ವೇಳೆ ಸಾವರ್ಕರ್ ಫೋಟೊವನ್ನು ಬೀಳಿಸುವುರ ಜೊತೆಗೆ ಅಲ್ಲೇ ಪಕ್ಕದಲ್ಲಿದ್ದ ರಾಷ್ಟ್ರಧ್ವಜವನ್ನು ನೆಲಕ್ಕೆ ಬೀಳಿಸುವುದರ ಮೂಲಕ ರಾಷ್ಟ್ರಧ್ವಜಕ್ಕೂ ಅವಮಾನ ಮಾಡಿದ್ದರು. ಇದನ್ನೂ ಓದಿ: ಧ್ವಜಾರೋಹಣವಾದ ಕೆಲವೇ ಗಂಟೆಗಳಲ್ಲಿ ಟಿಆರ್‌ಎಸ್ ಮುಖಂಡನ ಬರ್ಬರ ಹತ್ಯೆ

    ಇದೇ ವಿಚಾರವಾಗಿ ಪ್ರೇಮ್ ಸಿಂಗ್ (26) ಚಾಕು ಇರಿದ ಘಟನೆ ಶಿವಮೊಗ್ಗದ ಗಾಂಧಿ ಬಜಾರಿನಲ್ಲಿ ನಡೆದಿದೆ. ಬೈಕ್‍ನಲ್ಲಿ ಬಂದ ದುಷ್ಕರ್ಮಿಗಳು ಮನೆ ಮುಂದೆ ನಿಂತಿದ್ದ ಪ್ರೇಮ್ ಸಿಂಗ್ ಮೇಲೆ ದಾಳಿ ನಡೆಸಿ ಚಾಕು ಇರಿದಿದ್ದರು. ಚಾಕು ಇರಿತಕ್ಕೊಳಗಾದ ಯುವಕ ಪ್ರೇಮ್ ಸಿಂಗ್‍ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

    Live Tv
    [brid partner=56869869 player=32851 video=960834 autoplay=true]

  • ಮೆಗ್ಗಾನ್ ಆಸ್ಪತ್ರೆಯಲ್ಲಿ ಅಮಾನವೀಯ ಘಟನೆ: ಪ್ರಶ್ನೆ ಕೇಳಿದ್ದಕ್ಕೆ ಗರಂ ಆಗಿ ಉಡಾಫೆಯ ಉತ್ತರ ನೀಡಿದ ಸಿಎಂ

    ಮೆಗ್ಗಾನ್ ಆಸ್ಪತ್ರೆಯಲ್ಲಿ ಅಮಾನವೀಯ ಘಟನೆ: ಪ್ರಶ್ನೆ ಕೇಳಿದ್ದಕ್ಕೆ ಗರಂ ಆಗಿ ಉಡಾಫೆಯ ಉತ್ತರ ನೀಡಿದ ಸಿಎಂ

    ಬೆಂಗಳೂರು: ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಯಲ್ಲಿನ ಅಮಾನವೀಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಉಡಾಫೆಯ ಉತ್ತರ ನೀಡಿದ್ದಾರೆ.

    ಮಾಧ್ಯಮಗಳು ವಿಧಾನಸೌಧದಲ್ಲಿ ಪ್ರತಿಕ್ರಿಯೆ ಕೇಳಿದ್ದಕ್ಕೆ, ಕೋಪದಿಂದ “ಏಯ್ ಬಿಡ್ರಿ, ಯಾವ ಮೆಗ್ಗಾನ್ ಇಲ್ಲ” ಎಂದು ಸಿಟ್ಟಿನಿಂದ ಲೋಗೋವನ್ನು ತಳ್ಳಿಕೊಂಡೇ ಕಚೇರಿಯ ಒಳಗಡೆ ಹೋಗಿದ್ದಾರೆ.

    ಏನಿದು ಪ್ರಕರಣ?
    ಮೆಗ್ಗಾನ್ ಆಸ್ಪತ್ರೆಯ ಕಾರಿಡಾರ್‍ನಲ್ಲಿ ವಯೋವೃದ್ಧರೊಬ್ಬರನ್ನು ಅವರ ಪತ್ನಿ ನೆಲದ ಮೇಲೆ ಮಲಗಿಸಿ ಪ್ರಾಣಿಯಂತೆ ಎಳೆದುಕೊಂಡು ಹೋಗುತ್ತಿರುವ ದೃಶ್ಯ ಗುರುವಾರ ಮಧ್ಯಾಹ್ನ ಕಂಡು ಬಂದಿತ್ತು.

    ಎರಡನೇ ಮಳಿಗೆಯಿಂದ ಈ ವೃದ್ಧರನ್ನು ಕೆಳಗೆ ಕರೆದುಕೊಂಡು ಹೋಗಲು ಗಾಲಿ ಕುರ್ಚಿ ಕೇಳಿದರೂ ಆಸ್ಪತ್ರೆ ಸಿಬ್ಬಂದಿ ಕೊಟ್ಟಿರಲಿಲ್ಲ. ಇವತ್ತೂ ಎಕ್ಸರೇ ತೆಗೆಸದಿದ್ದರೆ ತೊಂದರೆ ಆದೀತು ಎಂದು ಫಾಮಿದಾ ಗಂಡನನ್ನು ಎಳೆದುಕೊಂಡು ಎಕ್ಸರೇ ತೆಗೆಸಲು ಹೋಗಿದ್ದರು.

    ಈ ಬಗ್ಗೆ ಆರೋಗ್ಯ ಸಚಿವ ರಮೇಶ್ ಕುಮಾರ್ ಪ್ರತಿಕ್ರಿಯಿಸಿದ್ದು ರಾಜ್ಯದ ಜನತೆಯ ಕ್ಷಮೆ ಕೇಳಿದ್ದಾರೆ. ನಮಗೆ ಈ ಸ್ಥಾನದಲ್ಲಿ ಕುಳಿತುಕೊಳ್ಳೊದಕ್ಕೂ ನಾಚಿಕ ಆಗುತ್ತದೆ. ನಾನು ಈಗಾಗಲೇ ಶಿವಮೊಗ್ಗ ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿ ಆಸ್ಪತ್ರೆಗೆ ಭೇಟಿ ಮಾಡಲು ತಿಳಿಸಿದ್ದೇನೆ. ವೈದ್ಯಕೀಯ ಶಿಕ್ಷಣ ಸಚಿವರ ಜೊತೆ ಮಾತನಾಡಿ ಕೂಡಲೇ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದೇನೆ ಅಂದ್ರು.

    ಇದನ್ನೂ ಓದಿ: ವ್ಹೀಲ್‍ಚೇರ್ ಕೊಡದ ಆಸ್ಪತ್ರೆ ಸಿಬ್ಬಂದಿ- ಪತಿಯನ್ನು ನೆಲದ ಮೇಲೆಯೇ ಎಳೆದುಕೊಂಡು ಹೋದ ಪತ್ನಿ

    https://www.youtube.com/watch?v=Yce9ghRNKJ4