Tag: ಮೆಗಾ ಬ್ಲ್ಯಾಕ್ ಬಸ್ಟರ್

  • ಹೊಸ ಪ್ರಾಜೆಕ್ಟ್ ಘೋಷಿಸಿದ ರಶ್ಮಿಕಾ ಮಂದಣ್ಣ

    ಹೊಸ ಪ್ರಾಜೆಕ್ಟ್ ಘೋಷಿಸಿದ ರಶ್ಮಿಕಾ ಮಂದಣ್ಣ

    ಕ್ಷಿಣ ಭಾರತದ ಸ್ಟಾರ್ ನಟಿಯಾಗಿ ಮಿಂಚುತ್ತಿರುವ ರಶ್ಮಿಕಾ ಮಂದಣ್ಣ ಸದಾ ಒಂದಲ್ಲಾ ಒಂದು ಸುದ್ದಿಯ ಮೂಲಕ ಸದ್ದು ಮಾಡುತ್ತಿರುತ್ತಾರೆ. ಈಗಾಗಲೇ ನಟಿಸಿರುವ ಸಿನಿಮಾಗಳು ರಿಲೀಸ್‌ಗೆ ರೆಡಿ ಇರುವ ಬೆನ್ನಲ್ಲೇ ಹೊಸ ಪ್ರಾಜೆಕ್ಟ್‌ವೊಂದನ್ನ ರಶ್ಮಿಕಾ ಮಂದಣ್ಣ ಅನೌನ್ಸ್ ಮಾಡಿದ್ದಾರೆ.

    ಸೌತ್ ಸಿನಿಮಾಗಳ ಜೊತೆ ಬಾಲಿವುಡ್‌ನಲ್ಲೂ ಸೌಂಡ್ ಮಾಡುತ್ತಿರುವ `ಪುಷ್ಪ’ ಬ್ಯೂಟಿ ರಶ್ಮಿಕಾ ಮಂದಣ್ಣ ಸದ್ಯ ಹೊಸ ಪ್ರಾಜೆಕ್ಟ್ ಮೂಲಕ ಅಭಿಮಾನಿಗಳಿಗೆ ಕುತೂಹಲ ಕೆರಳಿಸಿದ್ದಾರೆ. ನಟಿಸಿರುವ ಸಾಲು ಸಾಲು ಸಿನಿಮಾಗಳು ತೆರೆ ಕಾಣುವ ಮೊದಲೇ ಹೊಸ ಪ್ರಾಜೆಕ್ಟ್ವೊಂದನ್ನ ಘೋಷಣೆ ಮಾಡಿದ್ದಾರೆ. `ಮೆಗಾ ಬ್ಲ್ಯಾಕ್ ಬಸ್ಟರ್’ ಪ್ರಾಜೆಕ್ಟ್ ಟೈಟಲ್ ಜತೆ ಸೆಪ್ಟೆಂಬರ್ 4ಕ್ಕೆ ಟ್ರೈಲರ್ ರಿಲೀಸ್ ಮಾಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ:ಮ್ಯೂಸಿಕಲ್ ಲವ್ ಸ್ಟೋರಿಗೆ ನಾಯಕಿಯಾದ ಮೇಘಶ್ರೀ

    ನಟಿ ರಶ್ಮಿಕಾ ಹೊಸ ಜಾಹಿರಾತಿನಲ್ಲಿ ನಟಿಸಿದ್ದಾರೆ ಎನ್ನಲಾಗುತ್ತಿದೆ. ರಶ್ಮಿಕಾ ಒಬ್ಬರೇ `ಮೆಗಾ ಬ್ಲ್ಯಾಕ್ ಬಸ್ಟರ್’ ಪೋಸ್ಟರ್ ಶೇರ್ ಮಾಡಿಕೊಂಡಿರುವುದಲ್ಲ. ತ್ರೀಷಾ ಕೃಷ್ಣ, ನಟ ಕಾರ್ತಿ, ಕಪಿಲ್ ಶರ್ಮಾ, ಸೌರವ್‌ ಗಂಗೂಲಿ, ದೀಪಿಕಾ ಪಡುಕೋಣೆ ಹೀಗೆ ಹಲವರು ಪೋಸ್ಟರ್ ಶೇರ್ ಮಾಡಿದ್ದಾರೆ. ಈ ಪ್ರಾಜೆಕ್ಟ್ ಕುರಿತು ಅಭಿಮಾನಿಗಳು ಕ್ಯೂರಿಯಸ್ ಆಗಿದ್ದಾರೆ.

    ಸದ್ಯ ಬಹುಬೇಡಿಕೆಯ ನಾಯಕಿಯರಲ್ಲಿ ಒಬ್ಬರಾಗಿರುವ ರಶ್ಮಿಕಾ ಮಂದಣ್ಣ ಹೊಸ ಪ್ರಾಜೆಕ್ಟ್‌ನ ಅಪ್‌ಡೇಟ್‌ಗಾಗಿ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]