Tag: ಮೆಕ್ ಇನ್ ಇಂಡಿಯಾ

  • ಬಿಜೆಪಿ ಮೇಕ್ ಇನ್ ಇಂಡಿಯಾ ಉತ್ತೇಜಿಸಿ, ಚೀನಾ ವಸ್ತುಗಳನ್ನು ಖರೀದಿಸುತ್ತೆ: ರಾಹುಲ್ ಗಾಂಧಿ

    ಬಿಜೆಪಿ ಮೇಕ್ ಇನ್ ಇಂಡಿಯಾ ಉತ್ತೇಜಿಸಿ, ಚೀನಾ ವಸ್ತುಗಳನ್ನು ಖರೀದಿಸುತ್ತೆ: ರಾಹುಲ್ ಗಾಂಧಿ

    ನವದೆಹಲಿ: ಭಾರತದಲ್ಲಿ ಚೀನಾದ 59 ಮೊಬೈಲ್ ಆ್ಯಪ್‍ಗಳನ್ನು ಬ್ಯಾನ್ ಮಾಡಿದಾಕ್ಷಣ ಸತ್ಯ ಸುಳ್ಳಾಗುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕುಟುಕಿದ್ದಾರೆ.

    ಭಾರತದಲ್ಲಿ ಚೀನಾ ಆ್ಯಪ್‍ಗಳ ಬ್ಯಾನ್ ಬಳಿಕ ಭಾರತಕ್ಕೆ ಚೀನಾದ ಆಮದು ಪ್ರಮಾಣ ಗ್ರಾಫ್ ಉಲ್ಲೇಖಿಸಿ ಟ್ವೀಟ್ ಮಾಡಿರುವ ರಾಗಾ, ಮೇಕ್ ಇನ್ ಇಂಡಿಯಾ ಯೋಜನೆಯನ್ನು ವ್ಯಂಗ್ಯ ಮಾಡಿದ್ದಾರೆ. ಬಿಜೆಪಿ ಮತ್ತು ಎನ್‍ಡಿಎ ಸರ್ಕಾರ ಮೇಕ್ ಇನ್ ಇಂಡಿಯಾ ಉತ್ತೇಜಿಸುತ್ತೆ ಆದರೆ ಚೀನಾ ವಸ್ತುಗಳನ್ನು ಅತಿ ಹೆಚ್ಚು ಖರೀದಿಸುತ್ತೆ ಆ್ಯಪ್ ಬ್ಯಾನ್ ಮಾಡಿದಾಕ್ಷಣ ಸತ್ಯ ಸುಳ್ಳಾಗುವುದಿಲ್ಲ ಎಂದು ಟೀಕಿಸಿದ್ದಾರೆ.

    2008 ರಿಂದ 2014ವರೆಗೂ ಮನಮೋಹನ್ ಸಿಂಗ್ ಪ್ರಧಾನಮಂತ್ರಿಯಾಗಿದ್ದಾಗ ಚೀನಾದ ಅಮದು ಪ್ರಮಾಣ ಶೇ.14 ಕ್ಕಿಂತ ಕಡಿಮೆ ಇತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಆಡಳಿತಕ್ಕೆ ಬಂದ ಮೇಲೆ ಆಮದು ಪ್ರಮಾಣ ಶೇ.18 ಹೆಚ್ಚಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.