Tag: ಮೆಕ್ಸಿಕೋ. Woman

  • ಸಾರ್ವಜನಿಕ ಸ್ಥಳದಲ್ಲಿ ಸ್ತನಪಾನ ಮಾಡಿಸ್ತಿದ್ದ ಮಹಿಳೆಗೆ ಸ್ತನ ಮುಚ್ಚಿಕೋ ಎಂದು ಸಲಹೆ

    ಸಾರ್ವಜನಿಕ ಸ್ಥಳದಲ್ಲಿ ಸ್ತನಪಾನ ಮಾಡಿಸ್ತಿದ್ದ ಮಹಿಳೆಗೆ ಸ್ತನ ಮುಚ್ಚಿಕೋ ಎಂದು ಸಲಹೆ

    -ಮಹಿಳೆ ಕೊಟ್ಟ ಉತ್ತರ ಹೀಗಿತ್ತು!

    ಮೆಕ್ಸಿಕೋ: ಸಾರ್ವಜನಿಕ ಸ್ಥಳದಲ್ಲಿ ಸ್ತನಪಾನ ಮಾಡಿಸುತ್ತಿದ್ದ ಮಹಿಳೆಗೆ ವ್ಯಕ್ತಿಯೊಬ್ಬ ಸ್ತನ ಮುಚ್ಚಿಕೋ ಎಂದು ಸಲಹೆ ನೀಡಿದ್ದು, ಆ ವ್ಯಕ್ತಿಗೆ ಮಹಿಳೆ ಸರಿಯಾದ ಉತ್ತರವನ್ನು ಕೊಟ್ಟ ಘಟನೆ ಮೆಕ್ಸಿಕೋದ ಕ್ಯಾಬೋ ಸನ್ ಲುಕಾಸ್‍ನಲ್ಲಿ ನಡೆದಿದೆ.

    ಮೆಲಾನಿ ಡ್ಯೂಡ್ಲಿ ಮಗುವಿಗೆ ಎದೆ ಹಾಲುವುಣಿಸುತ್ತಿದ್ದ ಮಹಿಳೆ. ಮೆಲಾನಿ ತನ್ನ 4 ತಿಂಗಳ ಗಂಡು ಮಗುವಿಗೆ ರೆಸ್ಟೋರೆಂಟ್‍ವೊಂದರಲ್ಲಿ ಎದೆಹಾಲು ಉಣಿಸುತ್ತಿದ್ದರು. ಆಗ ಅಲ್ಲಿ ತಿರುಗಾಡುತ್ತಿದ್ದ ವ್ಯಕ್ತಿಯೊಬ್ಬ ಮೆಲಾನಿಗೆ ತನ್ನ ಸ್ತನವನ್ನು ಮುಚ್ಚಿಕೋ ಎಂದು ಸಲಹೆ ನೀಡಿದ್ದಾನೆ.

    ಆ ವ್ಯಕ್ತಿಯ ಮಾತನ್ನು ಕೇಳಿಸಿಕೊಂಡ ಮೆಲಾನಿ ಏನೂ ಪ್ರತಿಕ್ರಿಯಿಸದೇ ತನ್ನ ದುಪಟ್ಟಾದಿಂದ ಸ್ತನವನ್ನು ಮುಚ್ಚಿಕೊಳ್ಳುವುದರ ಬದಲು ತನ್ನ ಮುಖವನ್ನು ಮುಚ್ಚಿಕೊಂಡಿದ್ದಾರೆ. ಈ ವೇಳೆ ಮೆಲಾನಿ ಜೊತೆಯಲ್ಲಿದ್ದ ವ್ಯಕ್ತಿ ಆಕೆಯ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾನೆ.

    ನನ್ನ ಸ್ನೇಹಿತನ ಸೊಸೆ ತನ್ನ ಮಗುವಿಗೆ ಸ್ತನಪಾನ ಮಾಡಿಸುತ್ತಿದ್ದರು. ಆಗ ಅಲ್ಲಿದ್ದ ವ್ಯಕ್ತಿಯೊಬ್ಬ ಆಕೆಗೆ ತನ್ನ ಸ್ತನವನ್ನು ಮುಚ್ಚಿಕೊಳ್ಳುವಂತೆ ಸಲಹೆ ನೀಡಿದ್ದನು. ಆ ವ್ಯಕ್ತಿಯ ಮಾತಿಗೆ ಮೆಲಾನಿ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಅವರನ್ನು ಎಂದಿಗೂ ಭೇಟಿ ಆಗಿಲ್ಲ. ಆದರೆ ಅವರು ಅದ್ಭುತ ಎಂದು ನನಗೆ ಅನಿಸುತ್ತಿದೆ ಎಂದು ಮೆಲಾನಿ ಕುಟುಂಬದ ಆಪ್ತ ಕಾರೋಲ್ ಲಾಕ್‍ವುಡ್ ಫೋಟೋ ಹಾಕಿ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.

    ನಾನು ರಜೆ ಕಳೆಯಲು ನನ್ನ ಇಡೀ ಕುಟುಂಬದ ಜೊತೆ ಕ್ಯಾಬೋ ಸನ್ ಲುಕಾಸ್ ಗೆ ಹೋಗಿದ್ದೇವು. ಆಗ ಅಲ್ಲಿದ್ದ ವ್ಯಕ್ತಿಯೊಬ್ಬ ನನ್ನ ಸ್ತನ ಮುಚ್ಚಿಕೋ ಎಂದು ಸಲಹೆ ನೀಡಿದ್ದನು. ಆಗ ನಾನು ನನ್ನ ದುಪಟ್ಟಾದಿಂದ ನನ್ನ ಮುಖವನ್ನು ಮುಚ್ಚಿಕೊಂಡೆ. ಆದರೆ ರೆಸ್ಟೋರೆಂಟ್‍ನಲ್ಲಿ ನಾವು ಹಿಂದಿನ ಸೀಟ್‍ನಲ್ಲಿ ಕುಳಿತ್ತಿದ್ದೇವು ಎಂದು ಮೆಲಾನಿ ತಿಳಿಸಿದ್ದಾರೆ.

    ಸದ್ಯ ಮೆಲಾನಿ ತನ್ನ ಮಗುವಿಗೆ ಸ್ತನಪಾನ ಮಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಅಲ್ಲದೇ ಹೆಚ್ಚು ಲೈಕ್ಸ್ ಹಾಗೂ ಶೇರ್ ಪಡೆದಿದೆ. ಸದ್ಯ ಮೆಲಾನಿ ಆ ವ್ಯಕ್ತಿಗೆ ನೀಡಿದ ಪ್ರತಿಕ್ರಿಯೆಗೆ ಜನರು ತಮ್ಮ ಮಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews