Tag: ಮೆಕ್ಸಿಕೊ

  • ಮೆಕ್ಸಿಕೊದಲ್ಲಿ ಧಾರ್ಮಿಕ ಆಚರಣೆ ವೇಳೆ ಗುಂಡಿನ ದಾಳಿ; 12 ಮಂದಿ ಬಲಿ

    ಮೆಕ್ಸಿಕೊದಲ್ಲಿ ಧಾರ್ಮಿಕ ಆಚರಣೆ ವೇಳೆ ಗುಂಡಿನ ದಾಳಿ; 12 ಮಂದಿ ಬಲಿ

    ಮೆಕ್ಸಿಕೊ: ಮೆಕ್ಸಿಕನ್‌ (Mexico) ರಾಜ್ಯ ಗುವಾನಾಜುವಾಟೊದ ಇರಪುವಾಟೊ ನಗರದಲ್ಲಿ ಬಂದೂಕುಧಾರಿಯೊಬ್ಬ ನಡೆಸಿದ ಗುಂಡಿನ ದಾಳಿಗೆ 12 ಮಂದಿ ಸಾವನ್ನಪ್ಪಿದ್ದಾರೆ.

    ಧಾರ್ಮಿಕ ಆಚರಣೆಯೊಂದು ನಡೆಯುತ್ತಿತ್ತು. ಜನರು ಬೀದಿಯಲ್ಲಿ ನೃತ್ಯ ಮಾಡುತ್ತಾ, ಮದ್ಯಪಾನ ಮಾಡುತ್ತಿದ್ದರು. ಈ ವೇಳೆ ಗುಂಡಿನ ದಾಳಿ ನಡೆದಿದೆ. ಗುಂಡಿನ ದಾಳಿಯಿಂದ ಭಯಭೀತರಾಗಿ ಜನರು ಓಡಿದ ದೃಶ್ಯಗಳಿರುವ ವೀಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ. ಇದನ್ನೂ ಓದಿ: ಮೇಘಸ್ಫೋಟ | ರಣ ಪ್ರವಾಹಕ್ಕೆ ಹಲವೆಡೆ ಭೂಕುಸಿತ – 171 ರಸ್ತೆಗಳು ಹಾಳು, 150ಕ್ಕೂ ಹೆಚ್ಚು ಪ್ರವಾಸಿ ವಾಹನಗಳು ಜಖಂ

    ಇರಾಪುವಾಟೊ ಅಧಿಕಾರಿ ರೊಡಾಲ್ಫೊ ಗೊಮೆಜ್ ಸೆರ್ವಾಂಟೆಸ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಲಿಯಾದವರ ಸಂಖ್ಯೆ 12 ಕ್ಕೆ ಏರಿದೆ. ಸುಮಾರು 20 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.

    ಅಧ್ಯಕ್ಷೆ ಕ್ಲೌಡಿಯಾ ಶೀನ್‌ಬಾಮ್ ದಾಳಿಯ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದು, ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ. ಕಳೆದ ತಿಂಗಳು, ಗ್ವಾನಾಜುವಾಟೊದ ಸ್ಯಾನ್ ಬಾರ್ಟೊಲೊ ಡಿ ಬೆರಿಯೊಸ್‌ನಲ್ಲಿ ಕ್ಯಾಥೋಲಿಕ್ ಚರ್ಚ್‌ನಲ್ಲಿ ಪಾರ್ಟಿ ಆಯೋಜಿಸಿದ್ದಾಗಲೂ ಗುಂಡಿನ ದಾಳಿ ನಡೆದಿತ್ತು. ಆಗ 7 ಮಂದಿ ಮೃತಪಟ್ಟಿದ್ದರು. ಇದನ್ನೂ ಓದಿ: ಸೈಬರ್‌ ಪೊಲೀಸರ ಸೋಗಿನಲ್ಲಿ ಬ್ಲ್ಯಾಕ್‌ಮೇಲ್‌ – ಖರ್ತನಾಕ್‌ ಲೇಡಿ ಸೇರಿ 7 ಲಕ್ಷ ಸುಲಿಗೆ ಮಾಡಿದ್ದ ಐವರು ಅರೆಸ್ಟ್‌

    ವರ್ಷದ ಮೊದಲ ಐದು ತಿಂಗಳುಗಳಲ್ಲಿ ರಾಜ್ಯದಲ್ಲಿ 1,435 ನರಹತ್ಯೆಗಳು ನಡೆದಿವೆ. ಇದು ಇತರ ರಾಜ್ಯಕ್ಕಿಂತ ಎರಡು ಪಟ್ಟು ಹೆಚ್ಚು ಎಂದು ಅಂಕಿಅಂಶಗಳಿಂದ ತಿಳಿದುಬಂದಿದೆ.

  • ಮೆಕ್ಸಿಕೊದಲ್ಲಿ ಟ್ರಕ್‌ ಅಪಘಾತಕ್ಕೆ 10 ವಲಸಿಗರು ಬಲಿ

    ಮೆಕ್ಸಿಕೊದಲ್ಲಿ ಟ್ರಕ್‌ ಅಪಘಾತಕ್ಕೆ 10 ವಲಸಿಗರು ಬಲಿ

    ಮೆಕ್ಸಿಕೋ ಸಿಟಿ: ದಕ್ಷಿಣ ಮೆಕ್ಸಿಕನ್ (Mexico) ರಾಜ್ಯವಾದ ಚಿಯಾಪಾಸ್‌ನಲ್ಲಿ ಸರಕು ಸಾಗಣೆ ಮಾಡುತ್ತಿದ್ದ ಟ್ರಕ್ ಅಪಘಾತಕ್ಕೀಡಾಗಿ 10 ಮಂದಿ ವಲಸಿಗರು ದಾರುಣ ಸಾವಿಗೀಡಾಗಿದ್ದಾರೆ. 17 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

    ಚಿಯಾಪಾಸ್‌ನಲ್ಲಿರುವ ಪಿಜಿಜಿಯಾಪಾನ್-ಟೋನಾಲಾ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ವಲಸಿಗರನ್ನು ಸಾಗಿಸುತ್ತಿದ್ದ ಟ್ರಕ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ರಾಷ್ಟ್ರೀಯ ವಲಸೆ ಸಂಸ್ಥೆ (ಐಎನ್‌ಎಂ) ತಿಳಿಸಿದೆ. ಇದನ್ನೂ ಓದಿ: 350 ವರ್ಷಗಳ ಬಳಿಕ ಭಾರತಕ್ಕೆ ಮರಳಲಿದೆ ಶಿವಾಜಿ ಮಹಾರಾಜರ `ವ್ಯಾಘ್ರ ನಖ’

    ಟ್ರಕ್‌ನ್ನು ಚಾಲಕ ವೇಗವಾಗಿ ಚಲಾಯಿಸುತ್ತಿದ್ದ. ನಿಯಂತ್ರಣ ತಪ್ಪಿ ಟ್ರಕ್‌ ಪಲ್ಟಿಯಾಗಿದೆ ಎಂಬುದು ಪ್ರಾಥಮಿಕ ವರದಿಯಿಂದ ತಿಳಿದುಬಂದಿದೆ. ಮಗು ಸೇರಿದಂತೆ 10 ಮಂದಿ ವಲಸಿಗರು ಮೃತಪಟ್ಟಿದ್ದಾರೆ. ಗಾಯಗೊಂಡ 17 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

    ವಲಸಿಗರನ್ನು ಒಳಗೊಂಡ ರಸ್ತೆ ಅಪಘಾತಗಳು ಮೆಕ್ಸಿಕೋದಲ್ಲಿ ಸಾಮಾನ್ಯ ಎನ್ನುವಂತಾಗಿದೆ. ಮೆಕ್ಸಿಕೊದಿಂದ ಅಮೆರಿಕ ದೇಶಕ್ಕೆ ವಲಸೆ ಹೋಗುವವರ ಸಂಖ್ಯೆ ಹೆಚ್ಚು. ಸೂಕ್ತ ನಿರ್ವಹಣೆ ಇಲ್ಲದ ವಾಹಗಳಲ್ಲೇ ಹೆಚ್ಚಿನ ಮಂದಿ ವಲಸೆ ಹೋಗುತ್ತಾರೆ. ಹೀಗಾಗಿ ಅಪಘಾತಗಳ ಸಂಖ್ಯೆ ಹೆಚ್ಚಾಗಿದೆ ಎಂದು ಸಂಸ್ಥೆ ತಿಳಿಸಿದೆ. ಇದನ್ನೂ ಓದಿ: ಭಾರತಕ್ಕೆ ಬೇಕಾಗಿದ್ದ ಮೋಸ್ಟ್‌ ವಾಂಟೆಡ್‌ ಉಗ್ರ ಕರಾಚಿಯಲ್ಲಿ ಗುಂಡೇಟಿಗೆ ಬಲಿ

    2021ರ ಡಿಸೆಂಬರ್‌ನಲ್ಲೂ ಭೀಕರ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಸುಮಾರು 54 ಮಂದಿ ಮೃತಪಟ್ಟಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜೈಲಿನ ಮೇಲೆ ಗುಂಡಿನ ದಾಳಿ – 10 ಭದ್ರತಾ ಸಿಬ್ಬಂದಿ ಸೇರಿ 14 ಮಂದಿ ಸಾವು, 24 ಕೈದಿಗಳು ಎಸ್ಕೇಪ್‌

    ಜೈಲಿನ ಮೇಲೆ ಗುಂಡಿನ ದಾಳಿ – 10 ಭದ್ರತಾ ಸಿಬ್ಬಂದಿ ಸೇರಿ 14 ಮಂದಿ ಸಾವು, 24 ಕೈದಿಗಳು ಎಸ್ಕೇಪ್‌

    ಮೆಕ್ಸಿಕೊ: ಇಲ್ಲಿನ ಸಿಯುಡಾಡ್ ಜುವಾರೆಜ್‌ನಲ್ಲಿ ಬಂದೂಕುಧಾರಿಗಳು ಜೈಲಿನ ಮೇಲೆ (Mexican Border Prison) ಗುಂಡಿನ ದಾಳಿ ನಡೆಸಿದ್ದು, 10 ಭದ್ರತಾ ಸಿಬ್ಬಂದಿ ಮತ್ತು 4 ಮಂದಿ ಕೈದಿಗಳು ಮೃತಪಟ್ಟಿದ್ದಾರೆ.

    ಕೈದಿಗಳ ಕುಟುಂಬದವರು ತಮ್ಮ ಸದಸ್ಯರನ್ನು ಭೇಟಿ ಮಾಡಲು ಜೈಲಿಗೆ ತೆರಳಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಬಂದೂಕುಧಾರಿಗಳು ಪೆನಿಟೆನ್ಷಿಯರಿ ಸೆಂಟರ್‌ಗೆ ವಾಹನಗಳಲ್ಲಿ ಬಂದಿದ್ದಾರೆ. ನಂತರ ಭದ್ರತಾ ಅಧಿಕಾರಿಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಪರಿಸ್ಥಿತಿ ಉದ್ವಿಗ್ನಗೊಂಡ ಸನ್ನಿವೇಶದಲ್ಲಿ 24 ಕೈದಿಗಳು ಜೈಲಿನಿಂದ ಪರಾರಿಯಾಗಿದ್ದಾರೆ. ಇದನ್ನೂ ಓದಿ: ಪೊಲೀಸ್ ಕಾನ್‌ಸ್ಟೇಬಲ್ ಪರೀಕ್ಷೆಗೆ ಹಾಜರಾದ 32 ಸಾವಿರ ಜನ – ಪೆನ್ನು, ಪೇಪರ್ ಹಿಡಿದು ಸ್ಟೇಡಿಯಂನಲ್ಲೆ ಕುಳಿತ್ರು

    ಮೆಕ್ಸಿಕನ್ ಸೈನಿಕರು ಮತ್ತು ರಾಜ್ಯ ಪೊಲೀಸರು ತಕ್ಷಣ ಜೈಲಿನ ನಿಯಂತ್ರಣ ಪಡೆದಿದ್ದಾರೆ. ದಾಳಿ ನಡೆಸಿದವರು ಯಾರು ಎಂಬುದು ಇನ್ನೂ ತಿಳಿದುಬಂದಿಲ್ಲ. ಮೆಕ್ಸಿಕನ್ ಜೈಲುಗಳಲ್ಲಿ ಈ ಹಿಂದೆಯೂ ಹಲವಾರು ಹಿಂಸಾಚಾರದ ದಾಳಿಗಳಾಗಿವೆ.

    ಜೈಲಿನ ಮೇಲೆ ದಾಳಿ ಮಾಡುವುದಕ್ಕೂ ಮೊದಲು, ಮುನ್ಸಿಪಲ್ ಪೊಲೀಸರನ್ನು ಗುರಿಯಾಗಿಸಿ ದಾಳಿ ನಡೆದಿತ್ತು. ದಾಳಿಕೋರರನ್ನು ಹಿಂಬಾಲಿಸಿ ನಾಲ್ವರನ್ನು ಪೊಲೀಸರು ಬಂಧಿಸಿದ್ದರು. ಅಲ್ಲದೇ ಎಸ್‌ಯುವಿಯಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಬಂದೂಕುಧಾರಿಗಳನ್ನು ಹತ್ಯೆಗೈದಿದ್ದರು. ಇದನ್ನೂ ಓದಿ: ಕಾಬೂಲ್‌ ಮಿಲಿಟರಿ ವಿಮಾನ ನಿಲ್ದಾಣದಲ್ಲಿ ಸ್ಫೋಟ – 10 ಮಂದಿ ಸಾವು

    Live Tv
    [brid partner=56869869 player=32851 video=960834 autoplay=true]

  • ಹೆಲಿಕಾಪ್ಟರ್ ಪತನ – ಮೆಕ್ಸಿಕನ್ ರಾಜ್ಯದ ಭದ್ರತಾ ಮುಖ್ಯಸ್ಥ ಸೇರಿ ಐವರ ಸಾವು

    ಹೆಲಿಕಾಪ್ಟರ್ ಪತನ – ಮೆಕ್ಸಿಕನ್ ರಾಜ್ಯದ ಭದ್ರತಾ ಮುಖ್ಯಸ್ಥ ಸೇರಿ ಐವರ ಸಾವು

    ಮೆಕ್ಸಿಕೊ ಸಿಟಿ: ಮಧ್ಯ ಮೆಕ್ಸಿಕನ್ (Mexico) ರಾಜ್ಯವಾಗಿರುವ ಅಗ್ವಾಸ್ಕಾಲಿಯೆಂಟೆಸ್‌ನ ಭದ್ರತಾ ಮುಖ್ಯಸ್ಥ ಸೇರಿದಂತೆ ಒಟ್ಟು ಐವರು ವಿಮಾನ ಪತನದ (Helicopter crash) ವೇಳೆ ಸಾವನ್ನಪ್ಪಿರುವ ಘಟನೆ ಗುರುವಾರ ನಡೆದಿದೆ.

    ಹೆಲಿಕಾಪ್ಟರ್ ನೆಲಕ್ಕೆ ಅಪ್ಪಳಿಸುತ್ತಿರುವ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿವೆ. ಹೆಲಿಕಾಪ್ಟರ್‌ನಲ್ಲಿ ಒಟ್ಟು ಐವರು ಪ್ರಯಾಣಿಸುತ್ತಿದ್ದು, ಹೆಲಿಕಾಪ್ಟರ್ ನಿಯಂತ್ರಣಕ್ಕೆ ಸಿಗದೆ ನೆಲಕ್ಕೆ ಅಪ್ಪಳಿಸಿರುವುದು ವೀಡಿಯೋದಲ್ಲಿ ಕಂಡುಬಂದಿದೆ. ಇದನ್ನೂ ಓದಿ: ಇತಿಹಾಸ ನಿರ್ಮಿಸಿದ ಭಾರತ – ಮೊದಲ ಖಾಸಗಿ ನಿರ್ಮಿತ ರಾಕೆಟ್ ಉಡಾಯಿಸಿದ ಇಸ್ರೋ

    ಹೆಲಿಕಾಪ್ಟರ್‌ನಲ್ಲಿ ಸಾರ್ವಜನಿಕ ಭದ್ರತಾ ಸಚಿವ ಪೊರ್ಫಿರಿಯೋ ಜೇವಿಯರ್ ಸ್ಯಾಂಚೆಜ್ ಮೆಂಡೋಜಾ ಸೇರಿದಂತೆ ಐವರು ಪ್ರಯಾಣಿಸುತ್ತಿದ್ದರು. ಸದ್ಯ ಹೆಲಿಕಾಪ್ಟರ್ ಖಾಲಿ ಪ್ರದೇಶಕ್ಕೆ ಅಪ್ಪಳಿಸಿದ್ದರಿಂದ ಹೆಚ್ಚಿನ ಸಾವು ನೋವುಗಳಾಗಿಲ್ಲ. ಆದರೆ ಹೆಲಿಕಾಪ್ಟರ್‌ನಲ್ಲಿದ್ದ ಐವರು ಕೂಡಾ ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಮತ ಹಾಕದಿದ್ದರೆ 2024ರ ಚುನಾವಣೆಯೇ ನನ್ನ ಕೊನೆಯ ಎಲೆಕ್ಷನ್: ಚಂದ್ರಬಾಬು ನಾಯ್ಡು

    Live Tv
    [brid partner=56869869 player=32851 video=960834 autoplay=true]

  • 2026ರ ಫಿಫಾ ವಿಶ್ವಕಪ್‌ಗೆ ಮೂರು ರಾಷ್ಟ್ರಗಳ ಆತಿಥ್ಯ – 32 ರಾಷ್ಟ್ರಗಳ 48 ತಂಡಗಳು ಭಾಗಿ

    2026ರ ಫಿಫಾ ವಿಶ್ವಕಪ್‌ಗೆ ಮೂರು ರಾಷ್ಟ್ರಗಳ ಆತಿಥ್ಯ – 32 ರಾಷ್ಟ್ರಗಳ 48 ತಂಡಗಳು ಭಾಗಿ

    ವಾಷಿಂಗ್ಟನ್: 2026ರ ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿ ಇದೇ ಮೊದಲ ಬಾರಿಗೆ ಮೂರು ರಾಷ್ಟ್ರಗಳ ಆತಿಥ್ಯದಲ್ಲಿ ನಡೆಯಲಿದೆ. ಈಗಾಗಲೇ ಫಿಫಾ ಅಧ್ಯಕ್ಷ ಗಿಲಾನಿ ಇನ್ ಫ್ಯಾಂಟಿನೊ 2026ರ ವಿಶ್ವಕಪ್ ಟೂರ್ನಿಗೆ ಸಿದ್ಧತೆಗಳನ್ನು ಆರಂಭಿಸುವಂತೆ ಅಮೆರಿಕ, ಕೆನಡಾ ಮತ್ತು ಮೆಕ್ಸಿಕೊಗೆ ಸೂಚಿಸಿದ್ದಾರೆ.

    ಮೂರು ರಾಷ್ಟ್ರಗಳ ಆತಿಥ್ಯದಲ್ಲಿ ನಡೆಯುವುದರಿಂದ ಈ ಬಾರಿ ವಿಶ್ವಕಪ್ ಟೂರ್ನಿಯ ತಂಡಗಳ ಸಂಖ್ಯೆಯನ್ನೂ ಹೆಚ್ಚಿಸಲಾಗಿದೆ. ಈ ಬಾರಿ 32 ರಾಷ್ಟ್ರಗಳಿಂದ 48 ತಂಡಗಳು ಪಾಲ್ಗೊಳ್ಳಲಿದ್ದು, 1994ರ ಫೈನಲಿಸ್ಟ್ ಉತ್ತರ ಅಮೆರಿಕ ತಂಡ ಇದೇ ಮೊದಲ ಬಾರಿ ವಿಶ್ವಕಪ್ ಅಖಾಡಕ್ಕೆ ಇಳಿಯಲಿದೆ. ಇದನ್ನೂ ಓದಿ: ಏಕದಿನ ಕ್ರಿಕೆಟ್‍ನಲ್ಲಿ ದಾಖಲೆಯ 498 ರನ್ ಸಿಡಿಸಿದ ಇಂಗ್ಲೆಂಡ್ – ಮೈದಾನದೆಲ್ಲೆಡೆ ಸಿಕ್ಸರ್, ಬೌಂಡರಿಗಳ ಅಬ್ಬರ

    ಅಮೆರಿಕದ 11, ಮೆಕ್ಸಿಕೊದ 3, ಕೆನಡಾದ 2 ಮೈದಾನಗಳಲ್ಲಿ ವಿಶ್ವಕಪ್ ಪಂದ್ಯಗಳು ನಡೆಯಲಿವೆ. ಒಟ್ಟಾರೆ 80 ಪಂದ್ಯಗಳ ಪೈಕಿ 60 ಪಂದ್ಯಗಳು ಅಮೆರಿಕದಲ್ಲಿ, ಮೆಕ್ಸಿಕೊ ಹಾಗೂ ಕೆನಡಾದಲ್ಲಿ ತಲಾ 10 ಪಂದ್ಯಗಳು ನಡೆಯಲಿದ್ದು, ಇದರಲ್ಲಿ ಫೈನಲ್, ಸೆಮಿಫೈನಲ್ ಮತ್ತು ಕ್ವಾರ್ಟರ್ ಫೈನಲ್ ಪಂದ್ಯಗಳೂ ಸೇರಿವೆ.

    Live Tv

  • ಮೆಕ್ಸಿಕೋ ರಸ್ತೆಯಲ್ಲಿ ಗುಂಡಿನ ದಾಳಿ- 5 ವಿದ್ಯಾರ್ಥಿಗಳು ಸೇರಿ 6 ಜನರ ಹತ್ಯೆ

    ಮೆಕ್ಸಿಕೋ ರಸ್ತೆಯಲ್ಲಿ ಗುಂಡಿನ ದಾಳಿ- 5 ವಿದ್ಯಾರ್ಥಿಗಳು ಸೇರಿ 6 ಜನರ ಹತ್ಯೆ

    ಮೆಕ್ಸಿಕೋ: ಮಧ್ಯ ಮೆಕ್ಸಿಕೋದಲ್ಲಿ ರಸ್ತೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ 5 ವಿದ್ಯಾರ್ಥಿಗಳು ಸೇರಿದಂತೆ 6 ಜನ ಮೃತಪಟ್ಟ ಘಟನೆ ನಡೆದಿದೆ.

    ಮೆಕ್ಸಿಕೋದಲ್ಲಿ ನಡೆದ ಘಟನೆಯಲ್ಲಿ ವಿದ್ಯಾರ್ಥಿಗಳ ಗುಂಪಿನ ಮೇಲೆ ಬಂದೂಕುದಾರಿ ಗುಂಡು ಹಾರಿಸಿದ್ದಾನೆ. ಇದರ ಪರಿಣಾಮವಾಗಿ ಮೂವರು ಬಾಲಕರು ಹಾಗೂ ಇಬ್ಬರು ಬಾಲಕಿಯರು ಸೇರಿದಂತೆ ಅದೇ ಪ್ರದೇಶದಲ್ಲಿದ್ದ 65 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ.

    ಈ ಬಗ್ಗೆ ಗ್ವಾನಾಜುವಾಟೊ ರಾಜ್ಯದ ಪಟ್ಟಣದ ಮೇಯರ್ ಸೀಸರ್ ಪ್ರೀಟೊ ಮಾತನಾಡಿ, ಬ್ಯಾರನ್ ಸಮುದಾಯದಲ್ಲಿ 6 ಜನರು ಸಶಸ್ತ್ರ ದಾಳಿಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿಸಿದ್ದು, ಅವರ ಸಾವಿಗೆ ಸಂತಾಪವನ್ನು ಸೂಚಿಸಿದ್ದಾರೆ. ಈ ಬಗ್ಗೆ ಅಲ್ಲಿನ ಪೊಲೀಸರು ಆರೋಪಿಯ ಬಗ್ಗೆ ಮಾಹಿತಿಯನ್ನು ಬಹಿರಂಗ ಪಡಿಸಿಲ್ಲ. ಇದನ್ನೂ ಓದಿ: ಬಾಲಕಿಯರಿಗೆ ರೈಫಲ್ ತರಬೇತಿ, ಸೂಸೈಡ್ ಬಾಂಬ್ ತರಬೇತಿ ನೀಡಿದ್ದೆ – ಐಸಿಸ್ ಸೇರಿದ್ದ ಶಿಕ್ಷಕಿಯಿಂದ ತಪ್ಪೊಪ್ಪಿಗೆ

    CRIME 2

    ಎರಡು ವಾರಗಳ ಹಿಂದಷ್ಟೇ ಗ್ವಾನಾಜುವಾಟೊದಲ್ಲಿನ ಮತ್ತೊಂದು ಮಹಾನಗರವಾದ ಸೆಲಯಾದಲ್ಲಿನ ಎರಡು ಬಾರ್‌ಗಳು ಮತ್ತು ಲಾಡ್ಜ್‍ನಲ್ಲಿನ ಗ್ಯಾಂಗ್‍ಲ್ಯಾಂಡ್ ಪ್ರತೀಕಾರದ ದಾಳಿಯಲ್ಲಿ 8 ಮಹಿಳೆಯರು ಹಾಗೂ 3 ಪುರುಷರು ಹತ್ಯೆ ನಡೆದಿತ್ತು. ಡಿಸೆಂಬರ್ 2006ರಿಂದ ಫೆಡರಲ್ ಸರ್ಕಾರವು ಮಾದಕ ದ್ರವ್ಯ-ವಿರೋಧಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು. ಇದಾದ ಬಳಿಕ ಮೆಕ್ಸಿಕೋ 340,000ಕ್ಕಿಂತ ಹೆಚ್ಚು ಹತ್ಯೆಗಳು ನಡೆದಿವೆ. ಇದನ್ನೂ ಓದಿ: ಮೈಕ್‌ ದಂಗಲ್‌ – ಇಂದು ಬಿಜೆಪಿ ಮುಖಂಡರ ಮನೆ ಮುಂದೆ ಶ್ರೀರಾಮ ಸೇನೆಯಿಂದ ಪ್ರತಿಭಟನೆ

  • ಗ್ಯಾಂಗ್ ವಾರ್ ದ್ವೇಷಕ್ಕೆ ಇಬ್ಬರು ಮಕ್ಕಳು ಸೇರಿ 8 ಮಂದಿ ಬಲಿ

    ಗ್ಯಾಂಗ್ ವಾರ್ ದ್ವೇಷಕ್ಕೆ ಇಬ್ಬರು ಮಕ್ಕಳು ಸೇರಿ 8 ಮಂದಿ ಬಲಿ

    ಮೆಕ್ಸಿಕೊ: ಗ್ಯಾಂಗ್ ವಾರ್ ದ್ವೇಷಕ್ಕೆ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಎಂಟು ಮಂದಿ ಸಾವನ್ನಪ್ಪಿರುವ ಘಟನೆ ಮೆಕ್ಸಿಕೊದಲ್ಲಿ ನಡೆದಿದೆ.

    ಮಂಗಳವಾರ ತಡರಾತ್ರಿ ಬೈಕ್‍ನಲ್ಲಿ ಬಂದ ಇಬ್ಬರು ಬಂದೂಕುಧಾರಿಗಳು ಗ್ವಾನಾಜುವಾಟೊ ರಾಜ್ಯದ ಸಿಲಾವೊ ಪುರಸಭೆಯ ವ್ಯಾಪ್ತಿಯ ಮನೆಗಳ ಬಳಿ ಗುಂಡಿನ ದಾಳಿ ನಡೆಸಿದ್ದಾರೆ. ಗುಂಡಿನ ದಾಳಿಗೆ ಜನರ ಮೇಲೆ ಏಕಾಏಕಿ ಗುಂಡು ಹಾರಿಸಿದ್ದಾರೆ. ಪರಿಣಾಮವಾಗಿ ಒಂದು ವರ್ಷದ ಮಗು ಮತ್ತು 16 ವರ್ಷದ ಬಾಲಕಿ ಸೇರಿದಂತೆ 8 ಜನರು ಸ್ಥಳದಲ್ಲಿ ಮೃತಪಟ್ಟಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ 6 ಭಯೋತ್ಪಾದಕರ ಹತ್ಯೆ

    ಕಾರಣವೇನು?
    ಸಾಂಟಾ ರೋಸಾ ಡಿ ಲಿಮಾ ಮತ್ತು ಜಾಲಿಸ್ಕೊ ನ್ಯೂ ಜನರೇಷನ್ ಕಾರ್ಟೆಲ್‍ಗಳ ನಡುವಿನ ಸಂಘರ್ಷದಿಂದಾಗಿ ಗ್ವಾನಾಜುವಾಟೊ ಮೆಕ್ಸಿಕೊ ಅತ್ಯಂತ ಹಿಂಸಾತ್ಮಕ ರಾಜ್ಯಗಳಲ್ಲಿ ಒಂದಾಗಿದೆ.

    ಈ ಗ್ಯಾಂಗ್‍ಗಳು ಲಾಭದಾಯಕ ಮಾದಕವಸ್ತುಗಳ ಕಳ್ಳಸಾಗಣೆ ವಿಚಾರದಲ್ಲಿ ಪರಸ್ಪರ ಪೈಪೋಟಿ ನಡೆಸುತ್ತಿವೆ. ಈ ಹಿನ್ನೆಲೆಯಲ್ಲಿ ಆಗಾಗ ಘರ್ಷಣೆಯಾಗುತ್ತಿದೆ. ಇದೇ ರೀತಿ ನವೆಂಬರ್‍ನಲ್ಲಿಯೂ ಎರಡು ದಾಳಿಗಳು ಸಿಲಾವೊದಲ್ಲಿ ನಡೆದಿದ್ದು, ಈ ವೇಳೆ 11 ಜನರು ಹತ್ಯೆಯಾಗಿದ್ದರು. ಇದನ್ನೂ ಓದಿ: ಇಂದು 566 ಪ್ರಕರಣ – ಬೆಂಗಳೂರಿನಲ್ಲಿ 400 ಕೇಸ್, 4 ಸಾವು

    2006ರಿಂದ ಸರ್ಕಾರವು ಮಾದಕ ದ್ರವ್ಯ ವಿರೋಧಿ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ.

  • ಕೊರೊನಾ ನಿಯಂತ್ರಣಕ್ಕಾಗಿ ಈಟಿಂಗ್ ಮಾಸ್ಕ್

    ಕೊರೊನಾ ನಿಯಂತ್ರಣಕ್ಕಾಗಿ ಈಟಿಂಗ್ ಮಾಸ್ಕ್

    ಮೆಕ್ಸಿಕೊ: ಕೊರೊನಾ ಸೋಂಕು ಮಾತನಾಡುವಾಗ ಮತ್ತು ಆಹಾರ ಸೇವಿಸುವಾಗ ಹರಡದಂತೆ ತಡೆಗಟ್ಟಲು ಮೂಗನ್ನು ಮಾತ್ರ ಮುಚ್ಚುವ ಮಾದರಿಯ ಮಾಸ್ಕ್ ನ್ನು ಮೆಕ್ಸಿಕೊದ ಸಂಶೋಧಕರ ತಂಡವೊಂದು ತಯಾರಿಸಿದೆ.

    ಮೆಕ್ಸಿಕೊದ ಸಂಶೋಧಕರ ಪ್ರಕಾರ ಜನರು ಮಾತನಾಡುವಾಗ ಮತ್ತು ತಿನ್ನುವಾಗ ಮಾಸ್ಕ್ ನ್ನು ತೆಗೆಯುತ್ತಾರೆ ಈ ವೇಳೆ ಕೊರೊನಾ ಸೋಂಕು ಹರಡುತ್ತದೆ ಹಾಗಾಗಿ ಇದನ್ನು ತಡೆಗಟ್ಟಲು ಕೇವಲ ಮೂಗಿಗೆ ಮಾತ್ರ ಬಳಸುವ ಮಾಸ್ಕ್ ಗಳನ್ನು ತಯಾರಿಸಿದ್ದಾರೆ. ಇದರಿಂದ ಕೊರೊನಾ ಹರಡುವುದನ್ನು ನಿಯಂತ್ರಿಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

    ಯುಎಸ್‍ಎನ ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾನಿಲಯದ ಪ್ರಕಾರ, ಕೊರೊನಾ ವೈರಸ್ ಜನರ ವಾಸನೆಯ ಅಂಗವಾದ ಮೂಗಿನ ಮೂಲಕ ದೇಹದ ಒಳ ಸೇರುತ್ತಿದೆ. ಹಾಗಾಗಿ ಈರೀತಿ ಮಾಸ್ಕ್ ಬಳಸುವುದು ಮುಖ್ಯ. ಈ ಮೊದಲು ಕೊರೊನಾ ಹರಡದಂತೆ ತಡೆಗಟ್ಟಲು ಬಾಯಿ, ಮೂಗು ಮತ್ತು ಗಲ್ಲವನ್ನು ಮುಚ್ಚುವಂತಹ ಮಾಸ್ಕ್ ಬಳಸುವಂತೆ ವಿಶ್ವ ಆರೋಗ್ಯ ಸಂಸ್ಥೆ ಜನರಿಗೆ ತಿಳಿಸಿತ್ತು.

    ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಅಧ್ಯಯನದ ಪ್ರಕಾರ ಮಾಸ್ಕ್ ನ ಬಳಕೆ ಅತೀ ಮುಖ್ಯವಾಗಿದೆ. ಮಾಸ್ಕ್ ನ್ನು ಧರಿಸುವ ಮೂಲಕ ವೇಗವಾಗಿ ಹರಡುತ್ತಿರುವ ಕೊರೊನಾ ಸೋಂಕನ್ನು ತಡೆಗಟ್ಟಬಹುದು ಎಂದು ಯುಎಸ್‍ಎನ ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

    ಕೊರೊನಾ ತಡೆಗಾಗಿ ಭಾರತ ಸರ್ಕಾರ ದೇಶದಾದ್ಯಂತ ಜನರು ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿದೆ. ರಿಪಬ್ಲಿಕನ್ ಗವರ್ನರ್ ಎರಿಕ್ ಹಾಲ್‍ಕಾಂಬ್ ತಮ್ಮ ಸ್ಟೇಟ್‍ಹೌಸ್ ಭಾಷಣದಲ್ಲಿ ಕೊರೊನಾ ತಡೆಗಾಗಿ ಸರ್ಕಾರ ಸಿದ್ಧವಾಗಿದ್ದು ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಎಪ್ರಿಲ್ 6 ರಿಂದ ಕೊರೊನಾ ಲಸಿಕೆಯನ್ನು ನೀಡಲು ತಯಾರಿ ನಡೆಸಲಾಗುತ್ತಿದೆ ಎಂದಿದ್ದಾರೆ.

    ರಾಜ್ಯದಲ್ಲಿ ಈಗಾಗಲೇ ಕೊರೊನಾದಿಂದಾಗಿ 13,000 ಜನ ಸಾವಿಗೀಡಾಗಿದ್ದಾರೆ. ರಾಜ್ಯದಲ್ಲೂ ಕೂಡ ಮಾಸ್ಕ್ ಬಳಕೆ ಕಡ್ಡಾಯ ಮಾಡಲಾಗಿದ್ದು, ಜನರ ಆರೋಗ್ಯದಲ್ಲಿ ಏರುಪೇರು ಕಂಡುಬಂದರೆ ಕೂಡಲೇ ಲಸಿಕೆಯನ್ನು ನೀಡುವ ಕಾರ್ಯಕ್ಕೂ ಮುಂದಾಗುತ್ತಿದ್ದೇವೆ. ಸಾರ್ವಜನಿಕ ಸ್ಥಳ, ಬಾರ್ ಮತ್ತು ರೆಸ್ಟೋರೆಂಟ್‍ಗಳಲ್ಲಿ ಮಾಸ್ಕ್ ಬಳಕೆ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂದು ಜನರೊಂದಿಗೆ ಹಾಲ್‍ಕಾಂಬ್ ಮನವಿ ಮಾಡಿಕೊಂಡಿದ್ದಾರೆ.

  • ಮೃತ ಸ್ನೇಹಿತನಿಂದ ಗೋಲ್ ಹೊಡೆಸಿ ತಬ್ಬಿ ದುಃಖಪಟ್ಟ ಗೆಳೆಯರು: ವಿಡಿಯೋ ವೈರಲ್

    ಮೃತ ಸ್ನೇಹಿತನಿಂದ ಗೋಲ್ ಹೊಡೆಸಿ ತಬ್ಬಿ ದುಃಖಪಟ್ಟ ಗೆಳೆಯರು: ವಿಡಿಯೋ ವೈರಲ್

    – ಸ್ನೇಹಿತನ ಮೃತದೇಹವನ್ನು ಫುಟ್‍ಬಾಲ್ ಸ್ಟೇಡಿಯಂಗೆ ತಂದ ಸ್ನೇಹಿತರು

    ಮೆಕ್ಸಿಕೊ: ಮೃತ ಸ್ನೇಹಿತನಿಂದ ಕೊನೆಯ ಗೋಲ್ ಹೊಡೆಸಿ ಕೊನೆಯಲ್ಲಿ ಶವದ ಪೆಟ್ಟಿಗೆಯನ್ನು ಅನ್ನು ತಬ್ಬಿಕೊಂಡು ಸ್ನೇಹಿತರೆಲ್ಲ ದುಃಖ ಪಡುವ ಮನಕಲಕುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ಸಾಮಾಜಿಕ ಜಾಲತಾಣದಲ್ಲಿ ಕೆಲವೊಮ್ಮೆ ನಾವು ನೋಡುವ ವಿಡಿಯೋಗಳು ನಮ್ಮನ್ನು ಮೂಕವಿಸ್ಮಿತರಾನ್ನಾಗಿ ಮಾಡುತ್ತವೆ. ಈಗ ಮೆಕ್ಸಿಕೋದಲ್ಲಿ ಸಾವನ್ನಪ್ಪಿದ ಸ್ನೇಹಿತನಿಗೆ ಆತನ ಗೆಳೆಯರೆಲ್ಲರೂ ಸೇರಿ ವಿಶೇಷವಾಗಿ ಅಂತಿಮ ನಮನ ಸಲ್ಲಿಸುವ ವಿಡಿಯೋ ಎಲ್ಲರ ಕಣ್ಣಿನ ಅಂಚಿನಲ್ಲಿ ನೀರು ತರಿಸಿದೆ.

    ಈ ವಿಡಿಯೋ ಕ್ಲಿಪ್ ಅನ್ನು ಮೆಕ್ಸಿಕೊದಿಂದ ಟಿವಿ ಬಸ್ ಅವರು ಮೊದಲಿಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಾಕಿಕೊಂಡಿದ್ದಾರೆ. ಈ ವಿಡಿಯೋವನ್ನು ಟ್ವಿಟ್ಟರ್ ಬಳಕೆದಾರ ಅಲೆಕ್ಸ್ ಸ್ಟೋನ್ ಅವರು ಶೇರ್ ಮಾಡಿ “ಮೆಕ್ಸಿಕೊದಲ್ಲಿ 16 ವರ್ಷದ ಬಾಲಕನನ್ನು ಕೊಲೆ ಮಾಡಲಾಗಿದೆ. ಅವರ ತಂಡದ ಸದಸ್ಯರು ಅವರನ್ನು ಫುಟ್‍ಬಾಲ್ ಆಡುವ ಸ್ಥಳಕ್ಕೆ ಕರೆದುಕೊಂಡು ಹೋದರು ಮತ್ತು ಕೊನೆಯ ಬಾರಿಗೆ ಗೋಲ್ ಹೊಡೆಯಲು ಅವಕಾಶ ಮಾಡಿಕೊಟ್ಟರು. ಈ ರೀತಿಯದನ್ನು ನಾನು ಎಂದೂ ನೋಡಿಲ್ಲ ಎಂದು ಬರೆದುಕೊಂಡಿದ್ದಾರೆ.

    ಕೆವಲ 54 ಸೆಕೆಂಡ್ ಇರುವ ಈ ವಿಡಿಯೋದಲ್ಲಿ ಮೊದಲಿಗೆ ಸ್ನೇಹಿತರೆಲ್ಲರೂ ಶವದ ಪೆಟ್ಟಿಗೆಯನ್ನು ಗೋಲ್ ನೆಟ್ ಮುಂಭಾಗ ಇಟ್ಟು, ಅದರ ಸುತ್ತ ಬಾಲ್ ಹಿಡಿದು ನಿಂತಿರುತ್ತಾರೆ. ನಂತರ ಓರ್ವ ಫುಟ್‍ಬಾಲ್ ಅನ್ನು ಮೊದಲಿಗೆ ಬೇರೊಬ್ಬನಿಗೆ ಪಾಸ್ ಮಾಡುತ್ತಾನೆ. ನಂತರ ಅವನು ಅ ಬಾಲನ್ನು ಶವದ ಪೆಟ್ಟಿಗೆ ತಳುತ್ತಾನೆ. ಪೆಟ್ಟಿಗೆ ತಾಗಿದ ಬಾಲು ನೇರವಾಗಿ ಗೋಲ್ ಒಳಗೆ ಹೋಗುತ್ತದೆ. ಆಗ ಎಲ್ಲರೂ ಚೀಯರ್ ಮಾಡುವ ರೀತಿ ಕೂಗುತ್ತಾರೆ. ಕೊನೆಯಲ್ಲಿ ಎಲ್ಲರೂ ಶವದ ಪೆಟ್ಟಿಗೆಯನ್ನು ತಬ್ಬಿಕೊಳ್ಳುತ್ತಾರೆ.

    ಅಂದಹಾಗೆ ಅಂತರಾಷ್ಟೀಯ ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ, ಮೃತನನ್ನು 16 ವರ್ಷದ ಅಲೆಕ್ಸಾಂಡರ್ ಮಾರ್ಟಿನೆಜ್ ಎಂದು ಗುರತಿಸಲಾಗಿದೆ. ಆತನನ್ನು ಯಾರೋ ಕೊಲೆ ಮಾಡಿದ್ದಾರೆ. ಆಗ ಆತನ ಶವವನ್ನು ತಾವು ದಿನ ಫುಟ್‍ಬಾಲ್ ಆಡುತ್ತಿದ್ದ ಸ್ಟೇಡಿಯಂಗೆ ತೆಗೆದುಕೊಂಡು ಬಂದ ಮಾರ್ಟಿನೆಜ್ ಸ್ನೇಹಿತರು ಕೊನೆಯದಾಗಿ ಒಂದು ಗೋಲ್ ಹೊಡೆಸಿ ಗುರುವಾರ ಅಂತ್ಯಕ್ರಿಯೆ ಮಾಡಿದ್ದಾರೆ.

    https://twitter.com/cazbabyblu/status/1271702436558721025

    ಸ್ನೇಹಿತರ ಈ ಪ್ರೀತಿಯನ್ನು ನೋಡಿದ ನೆಟ್ಟಿಗರು ಭಾವುಕರಾಗಿದ್ದು, ಈ ವಿಡಿಯೋ ನನ್ನ ಕಣ್ಣಿನಲ್ಲಿ ನೀರು ತರಿಸಿತು ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಇದು ನಮಗೆ ಕ್ರೀಡೆ ಕಲಿಸುವ ಪಾಠ, ವಿಡಿಯೋ ನೋಡಿ ನಮಗೆ ಬಹಳ ನೋವಾಯ್ತು ಎಂದಿದ್ದಾರೆ. ಈ ವಿಡಿಯೋ ನೋಡಿ ಫುಟ್‍ಬಾಲ್‍ಗಿಂತ ಇವರ ಪ್ರೀತಿ ಮತ್ತು ಸ್ನೇಹ ದೊಡ್ಡದು ಎನಿಸಿತು ಎಂದು ಹಲವಾರು ಜನ ಕಮೆಂಟ್ ಮಾಡಿದ್ದಾರೆ.

  • ಲಘು ವಿಮಾನ ಪತನ – ಐವರ ಸಾವು

    ಲಘು ವಿಮಾನ ಪತನ – ಐವರ ಸಾವು

    ಮೆಕ್ಸಿಕೊ: ಪಶ್ಚಿಮ ಮೆಕ್ಸಿಕೋ ಸಿಟಿಯಲ್ಲಿ ಲಘು ವಿಮಾನ ಪತನಗೊಂಡಿದ್ದು, ಐವರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ.

    ಬುಧವಾರ ಮಧ್ಯಾಹ್ನ ಈ ಅವಘಢ ಸಂಭವಿಸಿದ್ದು, ಪತನಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಸಂಬಂಧ ತನಿಖೆ ಆರಂಭಗೊಂಡಿದೆ. ಮೆಕ್ಸಿಕೊ ನಗರದ 460 ಕಿ.ಮೀ. ದೂರದ ಮಡೆರಾ ಪಟ್ಟಣದ ಲಾಂಸ್ ಜುಂಟಾಸ್ ಎಂಬಲ್ಲಿ ವಿಮಾನ ಪತನಗೊಂಡಿದೆ ಎಂದು ಮಿಶೋಕನ್ ರಾಜ್ಯ ಪ್ರಾಸಿಕ್ಯೂಟರಿ ಕಾರ್ಯಾಲಯ ತಿಳಿಸಿದೆ.

    ಮೃತರ ಗುರುತು ಪತ್ತೆಯಾಗಿಲ್ಲ. ಡಯೂರೈಂಗ್ ನಗರದಿಂದ ವಿಮಾನ ಟೇಕ್ ಆಫ್ ಆಗಿತ್ತು. ಲಾಂಸ್ ಜುಂಟಾಸ್ ಬಳಿಯ ನದಿಯಲ್ಲಿ ವಿಮಾನ ಪತನಗೊಂಡಿದ್ದು, ಪ್ಲೇನ್ ನಲ್ಲಿ ಒಟ್ಟು ಆರು ಜನರು ಪ್ರಯಾಣಿಸುತ್ತಿದ್ದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಪ್ರಕಟಿಸಿವೆ.