Tag: ಮೆಕ್‌ಡೋನಾಲ್ಡ್‌

  • ರಷ್ಯಾದಲ್ಲಿ ವ್ಯಾಪಾರ ನಿಲ್ಲಿಸಿದ ಮೆಕ್‍ಡೋನಾಲ್ಡ್, ಸ್ಟಾರ್‌ಬಕ್ಸ್‌, ಪೆಪ್ಸಿ ಕಂಪನಿಗಳು

    ರಷ್ಯಾದಲ್ಲಿ ವ್ಯಾಪಾರ ನಿಲ್ಲಿಸಿದ ಮೆಕ್‍ಡೋನಾಲ್ಡ್, ಸ್ಟಾರ್‌ಬಕ್ಸ್‌, ಪೆಪ್ಸಿ ಕಂಪನಿಗಳು

    ಮಾಸ್ಕೋ: ಉಕ್ರೇನ್ ವಿರುದ್ಧ ಯುದ್ಧ ಸಾರಿರುವ ರಷ್ಯಾಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ನಿರ್ಬಂಧಗಳು ಮತ್ತಷ್ಟು ಹೆಚ್ಚಾಗುತ್ತಿದೆ. ಇದೀಗ ಅಮೆರಿಕ ಮೂಲದ ಮೆಕ್‍ಡೋನಾಲ್ಡ್, ಸ್ಟಾರ್‌ಬಕ್ಸ್‌, ಪೆಪ್ಸಿ ಸೇರಿದಂತೆ ಕೆಲ ಕಂಪನಿಗಳ ಆಹಾರ ಉತ್ಪನ್ನಗಳ ಅಂಗಡಿಗಳನ್ನು ರಷ್ಯಾದಲ್ಲಿ ಮುಚ್ಚಲು ತೀರ್ಮಾನಿಸಿದೆ.

    ರಷ್ಯಾ-ಉಕ್ರೇನ್ ವಿರುದ್ಧ ಯುದ್ಧ ಘೋಷಿಸಿ ಈಗಾಗಲೇ ಸಾವಿರಾರೂ ಸಂಖ್ಯೆಗಳಲ್ಲಿ ಜನರ ಸಾವು-ನೋವಿಗೆ ಕಾರಣವಾಗಿದೆ. ಇದರಿಂದ ವಿಶ್ವದ ಕೆಲ ರಾಷ್ಟ್ರಗಳ ಪ್ರತಿಷ್ಠಿತ ಕಂಪನಿಗಳು ರಷ್ಯಾ ಮಾರುಕಟ್ಟೆಗೆ ನಿರ್ಬಂಧ ವಿಧಿಸಲು ಮುಂದಾಗಿದೆ. ಇದೀಗ ಅಮೆರಿಕಾ ಮೂಲದ ಆಹಾರ ಉತ್ಪನ್ನಗಳಾದ ಮೆಕ್‍ಡೋನಾಲ್ಡ್, ಸ್ಟಾರ್‌ಬಕ್ಸ್‌, ಪೆಪ್ಸಿ, ಕೋಕಾ ಕೋಲಾ ರಷ್ಯಾದಲ್ಲಿರುವ ತನ್ನ ಅಂಗಡಿಗಳನ್ನು ಮುಚ್ಚಲು ತೀರ್ಮಾನಿಸಿದೆ. ಇದನ್ನೂ ಓದಿ: ಕಚ್ಚಾ ತೈಲ ಬೆಲೆ ಬ್ಯಾರೆಲ್‍ಗೆ 300 ಡಾಲರ್‌ಗೆ ಏರಬಹುದು: ರಷ್ಯಾ ಎಚ್ಚರಿಕೆ

    ಈ ಬಗ್ಗೆ ಸ್ಪಷ್ಟನೆ ನೀಡಿರುವ ಮೆಕ್‍ಡೋನಾಲ್ಡ್ ಅಧ್ಯಕ್ಷ ಮತ್ತು ಸಿಇಒ ಕ್ರಿಸ್ ಕೆಂಪ್‍ಜಿನ್ಸ್ಕಿ, ಉಕ್ರೇನ್‍ನಲ್ಲಿ ಅನಾವಶ್ಯಕವಾದ ದಾಳಿಯಿಂದಾದ ಸಾವು ನೋವುಗಳನ್ನು ಸಹಿಸುವುದಿಲ್ಲ. ಹಾಗಾಗಿ ನಮ್ಮ ಶಾಪ್‍ಗಳನ್ನು ಸದ್ಯದ ಮಟ್ಟಿಗೆ ಮುಚ್ಚುತ್ತಿರುವುದಾಗಿ ಉದ್ಯೋಗಿಗಳಿಗೆ ಪತ್ರದ ಮೂಲಕ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ನ್ಯಾಟೋ ಸದಸ್ಯತ್ವಕ್ಕೆ ಪಟ್ಟು ಹಿಡಿಯಲ್ಲ ಎಂದ ಉಕ್ರೇನ್‌: ರಷ್ಯಾದ 2 ಷರತ್ತಿಗೆ ಒಪ್ಪಿಗೆ

    ಮೆಕ್‍ಡೋನಾಲ್ಡ್‌ನ 800 ಶಾಪ್‍ಗಳನ್ನು ರಷ್ಯಾದಲ್ಲಿ ಮುಚ್ಚಲು ತೀರ್ಮಾನಿಸಿದೆ. ಆದರೆ ಅಲ್ಲಿ ಉದ್ಯೋಗ ಮಾಡುತ್ತಿದ್ದ 62 ಸಾವಿರ ಉದ್ಯೋಗಿಗಳಿಗೆ ವೇತನವನ್ನು ಈ ಹಿಂದಿನಂತೆ ಮುಂದುವರಿಸಲು ನಿರ್ಧರಿಸಿದೆ.

    ರಷ್ಯಾದಲ್ಲಿರುವ ಸ್ಟಾರ್‌ಬಕ್ಸ್‌ನ 130 ಶಾಪ್‍ಗಳನ್ನು ಮುಚ್ಚಲು ತೀರ್ಮಾನಿಸಿದ್ದು, ಆದರೆ ಇಲ್ಲಿನ 2,000 ಉದ್ಯೋಗಿಗಳಿಗೆ ಸಂಬಳವನ್ನು ಮಾತ್ರ ಈ  ಹಿಂದಿನಂತೆ ಕೊಡುವುದಾಗಿ ಸ್ಟಾರ್‌ಬಕ್ಸ್‌ ಕಂಪನಿಯ ಅಧ್ಯಕ್ಷ ಮತ್ತು ಸಿಇಒ ಕೆವಿನ್ ಜಾನ್ಸನ್ ತಿಳಿಸಿದ್ದಾರೆ. ಇದನ್ನೂ ಓದಿ: ನಿರ್ಬಂಧಕ್ಕೆ ಒಳಪಟ್ಟ ದೇಶಗಳ್ಯಾವುವು? ಕಾರಣ ಏನು? ಪಟ್ಟಿಯಲ್ಲಿ ರಷ್ಯಾ ನಂ.1

    ಪೆಪ್ಸಿ ಮತ್ತು ಕೋಕಾ ಕೋಲಾ ಕಂಪನಿ ರಷ್ಯಾದ ಮಾರುಕಟ್ಟೆಯಲ್ಲಿ ಹೆಚ್ಚಿನ ಉತ್ಪನ್ನಗಳನ್ನು ಬಂದ್ ಮಾಡಲು ತೀರ್ಮಾನಿಸಿದೆ. ಆದರೆ ಮಕ್ಕಳ ಆಹಾರ, ಹಾಲು ಇನ್ನಿತರ ಕೆಲ ಆಹಾರ ಉತ್ಪನ್ನಗಳನ್ನು ಮುಂದುವರಿಸಲು ತೀರ್ಮಾನಿಸಿದೆ. ರಷ್ಯಾದ 20 ಸಾವಿರ ಉದ್ಯೋಗಿಗಳು ಮತ್ತು 40 ಸಾವಿರ ಕೃಷಿಕರು ಈ ಆಹಾರ ಉತ್ಪನ್ನಗಳೊಂದಿಗೆ ಕೈ ಜೋಡಿಸಿರುವ ಪರಿಣಾಮ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಸ್ಪಷ್ಟಪಡಿಸಿದೆ.

  • ಐಸ್‍ಕ್ರೀಮ್ ಇಷ್ಟನಾ? ಹಾಗಿದ್ರೆ ಮೆಕ್‌ಡೋನಾಲ್ಡ್‌ ಕೊತ್ತಂಬರಿ ಸೊಪ್ಪಿನ ಫ್ಲೇವರ್‌ ಸವಿದು ನೋಡಿ

    ಐಸ್‍ಕ್ರೀಮ್ ಇಷ್ಟನಾ? ಹಾಗಿದ್ರೆ ಮೆಕ್‌ಡೋನಾಲ್ಡ್‌ ಕೊತ್ತಂಬರಿ ಸೊಪ್ಪಿನ ಫ್ಲೇವರ್‌ ಸವಿದು ನೋಡಿ

    ವಾಷಿಂಗ್ಟನ್: ಹೊಸ ಮತ್ತು ವಿಭಿನ್ನವಾದ ಟೇಸ್ಟ್ ಇರುವ ಆಹಾರವನ್ನು ಸೇವಿಸುವುದು ಎಂದರೆ ಆಹಾರ ಪ್ರಿಯರಿಗೆ ಸಖತ್ ಇಷ್ಟ. ಊಟ, ತಿಂಡಿಯಷ್ಟೇ ಪ್ರಾಮುಖ್ಯತೆಯನ್ನು ಕೂಲ್ ಆಗಿರುವ ಐಸ್‍ಕ್ರೀಮ್‍ಗೆ ನೀಡುತ್ತೇವೆ. ಐಸ್‍ಕ್ರೀಮ್ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ, ನಾಲಿಗೆ ಚಪ್ಪರಿಸಿ ತಿನ್ನುವ ಐಸ್‍ಕ್ರೀಮ್ ಪ್ರಿಯರಿಗೆಂದೆ ಮೆಕ್‌ಡೋನಾಲ್ಡ್‌ ಇದೀಗ ಕೊತ್ತಂಬರಿ ಸೊಪ್ಪಿನ ಐಸ್‍ಕ್ರೀಮ್‍ನ್ನು ಮಾರುಕಟ್ಟೆಗೆ ಪರಿಚಯಿಸಿದೆ.

    ಜಗತ್ತಿನ ವಿವಿಧ ದೇಶಗಳಲ್ಲಿ ಹಲವು ಬ್ಯಾಂಚ್‌ ಹೊಂದಿರುವ ಮೆಕ್‌ಡೋನಾಲ್ಡ್‌ ಇದೀಗ ಹೊಸ ಆಹಾರವನ್ನು ಪರಿಚಿಯಿಸಿದೆ. ಕೊತ್ತಂಬರಿ ಸೊಪ್ಪಿನ ಐಸ್‍ಕ್ರೀಮ್‍ನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪರ ವಿರೋಧ ಚರ್ಚೆಗಳು ಆರಂಭವಾಗಿದೆ. ಬಹುತೇಕ ಆಹಾರ ಪ್ರಿಯರು ಕೊತ್ತಂಬರಿ ಐಸ್‍ಕ್ರೀಮ್‍ನ್ನು ನೋಡಿ ಮೂಗು ಮುರಿದಿದ್ದಾರೆ. ಕೆಲವರು ಒಮ್ಮೆಯಾದರೂ ಟೇಸ್ಟ್ ನೋಡಬೇಕು ಎಂದು ಕಾಮೆಂಟ್ ಮಾಡುತ್ತಿದ್ದಾರೆ.

    ಚೀನಾದ ಮೆಕ್‌ಡೋನಾಲ್ಡ್‌ ಕಂಪನಿ ಈ ಕೊತ್ತಂಬರಿ ಐಸ್ ಕ್ರೀಮ್ ಫೆ. 21ರಂದು ಪರಿಚಯಿಸಿದೆ.  ಈ ಹೊಸ ಆಹಾರ ಜಗತ್ತಿನೆಲ್ಲೆಡೆ ವೈರಲ್ ಆಗಿದೆ.  ಮೆಕ್‌ಡೋನಾಲ್ಡ್‌ ಅಮೆರಿಕದ ಆಹಾರ ತಯಾರಿಕಾ ಕಂಪನಿಯಾಗಿದೆ. ಪಿಜ್ಜಾ, ಬರ್ಗರ್‌ನಂತಹ ಹಲವು ಬಗೆಯ ಆಹಾರಗಳನ್ನು ತಯಾರಿಸುವ ಕಂಪನಿಯಾಗಿದೆ. ಜಗತ್ತಿನ ಹಲವು ದೇಶಗಳಲ್ಲಿ ತನ್ನ ಬ್ರಾಂಚ್‍ನ್ನು ಸ್ಥಾಪಿಸಿ ಆಹಾರ ಪ್ರಿಯರ ಗಮನ ಸೆಳೆದಿದೆ. ಇದನ್ನೂ ಓದಿ: ಹರ್ಷ ಮನೆಗೆ ಬಿಜೆಪಿ ನಾಯಕರ ಭೇಟಿ, ಸಾಂತ್ವನ