Tag: ಮೆಕ್ಕೆಜೋಳ

  • ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಮೆಕ್ಕೆಜೋಳದ ರಾಶಿಗೆ ಬೆಂಕಿ – 10 ಲಕ್ಷಕ್ಕೂ ಅಧಿಕ ಮೌಲ್ಯದ ಮೆಕ್ಕೆಜೋಳ ಭಸ್ಮ

    ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಮೆಕ್ಕೆಜೋಳದ ರಾಶಿಗೆ ಬೆಂಕಿ – 10 ಲಕ್ಷಕ್ಕೂ ಅಧಿಕ ಮೌಲ್ಯದ ಮೆಕ್ಕೆಜೋಳ ಭಸ್ಮ

    ಹಾವೇರಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ (Short Circuit) ಮೆಕ್ಕೆಜೋಳದ ರಾಶಿಗೆ ಬೆಂಕಿ ಬಿದ್ದು 10 ಕ್ಕೂ ಅಧಿಕ ಬಣವೆಗಳು ಸುಟ್ಟು ಭಸ್ಮವಾದ ಘಟನೆ ಹಾವೇರಿ (Haveri) ಜಿಲ್ಲೆ ಸವಣೂರು (Savanur) ತಾಲ್ಲೂಕಿನ ಕಲಕೋಟಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ರೈತರ 4 ಮೆಕ್ಕೆಜೋಳದ ತೆನೆಯ ರಾಶಿ, 6 ಮೇವಿನ ಬಣವೆಗಳು ಸುಟ್ಟು ಭಸ್ಮವಾಗಿದೆ. ರೈತರಾದ ದ್ಯಾಮಣ್ಣ ತಳವಾರ ಮತ್ತು ಮೃತ್ಯುಂಜಯ ಹಿರೇಮಠ ಸೇರಿದಂತೆ ಹಲವು ರೈತರು ಮೆಕ್ಕೆಜೋಳದ ರಾಶಿ ಮಾಡಲು ಹಾಕಿದ್ದರು. ಅಲ್ಲಿದ್ದ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬಣವೆಗಳಿಗೆ ಬೆಂಕಿ ಹತ್ತಿ ಸುಟ್ಟು ಭಸ್ಮವಾಗಿದೆ. ಇದನ್ನೂ ಓದಿ: ಕಾಂಗ್ರೆಸ್ ಬಂದ್ಮೇಲೆ ಸಂಕ್ರಾಂತಿಗೆ ಹಸುವಿನ ಕೆಚ್ಚಲು ಕೊಯ್ದಿರೋ ಗಿಫ್ಟ್ ಕೊಟ್ಟಿದ್ದಾರೆ: ಅಶೋಕ್ ಕಿಡಿ

    ಸುಮಾರು 10 ಲಕ್ಷಕ್ಕೂ ಅಧಿಕ ಮೌಲ್ಯದ ಮೆಕ್ಕೆಜೋಳದ ತೆನೆಯ ರಾಶಿ ಸುಟ್ಟು ಭಸ್ಮವಾಗಿದೆ. ಗ್ರಾಮಸ್ಥರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಸವಣೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇದನ್ನೂ ಓದಿ: ಹಸುಗಳನ್ನು ಹೋರಾಟಕ್ಕೆ ಕರೆದುಕೊಂಡು ಹೋಗಿದ್ದಕ್ಕೆ ಕೆಚ್ಚಲಿಗೆ ಕತ್ತರಿ!

  • ವಿಜಯಪುರದಲ್ಲಿ ದುರಂತ – ಮೆಕ್ಕೆಜೋಳ ಮೂಟೆ ತುಂಬುವ ಯಂತ್ರ ಕುಸಿದು ಮೂವರು ಕಾರ್ಮಿಕರು ಸಾವು

    ವಿಜಯಪುರದಲ್ಲಿ ದುರಂತ – ಮೆಕ್ಕೆಜೋಳ ಮೂಟೆ ತುಂಬುವ ಯಂತ್ರ ಕುಸಿದು ಮೂವರು ಕಾರ್ಮಿಕರು ಸಾವು

    – ಸಾವಿನ ಸಂಖ್ಯೆ ಮತ್ತಷ್ಟು ಏರಿಕೆ ಸಾಧ್ಯತೆ

    ವಿಜಯಪುರ: ಇಲ್ಲಿನ ರಾಜಗುರು ಗೋದಾಮಿನ (Warehouse) ಸಂಸ್ಕರಣಾ ಘಟಕದಲ್ಲಿ ಮೆಕ್ಕೆ ಜೋಳ (Maize) ಮೂಟೆ ತುಂಬುವ ಯಂತ್ರ ಕುಸಿದು, ಮೂವರು ಮೂವರು ಕಾರ್ಮಿಕರು (Workers) ಸಾವನ್ನಪ್ಪಿರುವ ಘಟನೆ ನಡೆದಿದೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

    ವಿಜಯಪುರದ ಕೈಗಾರಿಕಾ ಪ್ರದೇಶದಲ್ಲಿರುವ ರಾಜಗುರು ಇಂಡಸ್ಟ್ರೀಸ್‌ನ ಗೋದಾಮಿನಲ್ಲಿ ಈ ದುರಂತ ಸಂಭವಿಸಿದೆ. ರಾಜೇಶ್ ಮುಖಿಯಾ(25), ರಾಮ್ರೀಜ್ ಮುಖಿಯಾ(29), ಶಂಭು ಮುಖಿಯಾ(26) ಮೃತ ಕಾರ್ಮಿಕರು. ಇದನ್ನೂ ಓದಿ: ಜಾರಕಿಹೊಳಿ ಆಪ್ತನಿಗೆ ಚಾಕು ಇರಿತ – ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರನಿಂದ ಕೃತ್ಯ ಆರೋಪ

    ಅವಶೇಷಗಳ ಅಡಿಯಲ್ಲಿ ಇನ್ನೂ 6-7 ಮಂದಿ ಸಿಲುಕಿದ್ದು, ಮೃತಪಟ್ಟಿರುವ ಶಂಕೆಯೂ ವ್ಯಕ್ತವಾಗಿದೆ. ಎಸ್‌ಡಿಆರ್‌ಎಫ್ ತಂಡದಿಂದ ಶೋಧ ಕಾರ್ಯ ನಡೆಯುತ್ತಿದೆ. ಮೃತ ಕಾರ್ಮಿಕರೆಲ್ಲರೂ ಬಿಹಾರ ಮೂಲದವರು ಎಂದು ಗುರುತಿಸಲಾಗಿದೆ. ಕಳೆದ ಹಲವು ವರ್ಷಗಳಿಂದ ಆ ಕಾರ್ಮಿಕರು ಇದೇ ಇಂಡಸ್ಟ್ರೀಜ್‍ನಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಇದನ್ನೂ ಓದಿ: ಸಿಪಿವೈ ಬಾವ ನಾಪತ್ತೆ ಪ್ರಕರಣ ದುರಂತ ಅಂತ್ಯ – ಮೃತದೇಹ ಮರಣೋತ್ತರ ಪರೀಕ್ಷೆಗೆ ರವಾನೆ, ಅಂತ್ಯಕ್ರಿಯೆಗೆ ಸಿದ್ಧತೆ

    ಅವಶೇಷಗಳ ಅಡಿ ಸಿಲುಕಿರುವ ಕಾರ್ಮಿಕರು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ರಾತ್ರಿಯಿಂದಲೂ 4 ಜೆಸಿಬಿಗಳ ಮೂಲಕ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ. ಸ್ಥಳದಲ್ಲಿ ಕಾರ್ಮಿಕರು, ಅವರ ಸಂಬಂಧಿಕರು ಗುಂಪುಗೂಡಿದ್ದು, ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಜಿಲ್ಲಾಧಿಕಾರಿ, ಪೊಲೀಸ್‌ ವರಿಷ್ಠಾಧಿಕಾರಿ, ಸ್ಥಳದಲ್ಲೇ ಬೀಡುಬಿಟ್ಟು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ವೈದ್ಯರ ತಂಡವೂ ಕಾರ್ಮಿಕರಿಗೆ ಆಮ್ಲಜನಕ ಪೂರೈಕೆ ಮಾಡುತ್ತಿದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿ, ಪೊಲೀಸರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.

  • ವರದಾ, ತುಂಗಭದ್ರಾ ನದಿಯಲ್ಲಿ ಹೆಚ್ಚಿದ ನೀರು – ಮೆಕ್ಕೆಜೋಳ ಸೇರಿ ವಿವಿಧ ಬೆಳೆ ಜಲಾವೃತ

    ವರದಾ, ತುಂಗಭದ್ರಾ ನದಿಯಲ್ಲಿ ಹೆಚ್ಚಿದ ನೀರು – ಮೆಕ್ಕೆಜೋಳ ಸೇರಿ ವಿವಿಧ ಬೆಳೆ ಜಲಾವೃತ

    ಹಾವೇರಿ: ರಾಜ್ಯಾದ್ಯಂತ ಮಳೆರಾಯನ ಅರ್ಭಟ ಮುಂದುವರಿದಿದೆ. ಅದರಲ್ಲೂ ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಹೆಚ್ಚು ಮಳೆಯಾಗುತ್ತಿರುವ ಹಿನ್ನೆಲೆ ಹಾವೇರಿ ಜಿಲ್ಲೆಯ ವರದಾ, ತುಂಗಭದ್ರಾ ನದಿ ನೀರಿನ ಪ್ರಮಾಣ ಹೆಚ್ಚಾಗುತ್ತಿದೆ.

    ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಕುಣಿಮೆಳ್ಳಿಹಳ್ಳಿ, ಹಲಸೂರು, ಹಾನಗಲ್ ತಾಲೂಕಿನ ಹರವಿ, ಕೂಡಲ, ಹಾವೇರಿ ತಾಲೂಕಿನ ವರದಹಳ್ಳಿ, ನಾಗನೂರು ಸೇರಿದಂತೆ ಹಲವು ಗ್ರಾಮಗಳ ರೈತರ ಜಮೀನುಗಳು ಜಲಾವೃತಗೊಂಡಿವೆ. ಜಮೀನಿನಲ್ಲಿ ಬೆಳೆದಿದ್ದ ಸುಗಂಧಿ ಹೂವು, ಗಲಾಟೆ ಹೂವು, ಮೆಕ್ಕೆಜೋಳ, ಕಬ್ಬು, ಹೂಕೋಸು ಸೇರಿದಂತೆ ಹಲವು ಬೆಳೆಗಳು ಸಂಪೂರ್ಣ ಜಲಾವೃತಗೊಂಡಿವೆ. ಇದನ್ನೂ ಓದಿ:  ಎಸಿಬಿ ವಿರುದ್ಧ ನ್ಯಾ. ಸಂದೇಶ್ ಮಾಡಿದ್ದ ಆರೋಪಕ್ಕೆ ಸುಪ್ರೀಂ ಕೋರ್ಟ್ ಬ್ರೇಕ್

    ನೀರಿನಲ್ಲಿ ನಿಂತು ಎಲ್ಲ ಬೆಳೆಗಳು ಕೊಳೆತು ಹಾಳಾಗುತ್ತಿದ್ದು, ಬೋರವೇಲ್, ಪಂಪ್‍ಸೇಟ್ ಹಾಗೂ ಪೈಪ್ ಮುಳುಗಡೆಯಾಗಿವೆ. ಇದರಿಂದ ಅನ್ನದಾತರು ದಿಕ್ಕು ತೋಚದಂತಾಗಿದೆ. ನದಿ ಪಾತ್ರಗಳ ಸಾವಿರಾರು ಎಕರೆ ಪ್ರದೇಶದಲ್ಲಿನ ಬೆಳೆಗಳು ಹಾಳಾಗಿವೆ. ಸರ್ಕಾರ ರೈತರಿಗೆ ಸೂಕ್ತವಾದ ಪರಿಹಾರ ಘೋಷಣೆ ಮಾಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕಟಾವಿಗೆ ಬಂದಿದ್ದ ಮೆಕ್ಕೆಜೋಳ ಸುಟ್ಟು ಭಸ್ಮ

    ಕಟಾವಿಗೆ ಬಂದಿದ್ದ ಮೆಕ್ಕೆಜೋಳ ಸುಟ್ಟು ಭಸ್ಮ

    ಹಾವೇರಿ: ವಿದ್ಯುತ್ ಟ್ರಾನ್ಸ್‌ಫಾರ್ಮರ್ ಬ್ಲಾಸ್ಟ್ ಆಗಿ ಕಟಾವಿಗೆ ಬಂದಿದ್ದ ಮೆಕ್ಕೆಜೋಳ ಸುಟ್ಟು ಭಸ್ಮವಾದ ಘಟನೆ ಜಿಲ್ಲೆಯ ಬ್ಯಾಡಗಿ ತಾಲೂಕಿನ ಹೊಸಶಿಡೇನೂರ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ರೈತ ಪರಮೇಶಪ್ಪ ನಂದೀಹಳ್ಳಿ ಎಂಬವರಿಗೆ ಸೇರಿದ್ದ ಜಮೀನಿನಲ್ಲಿ ಬೆಳೆದಿದ್ದ ಮೆಕ್ಕೆಜೋಳ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಇದನ್ನೂ ಓದಿ: ಅಶ್ವಿನಿ ಪುನೀತ್ ರಾಜ್‍ಕುಮಾರ್ ತಂದೆ ಹೃದಯಾಘಾತದಿಂದ ನಿಧನ

    ಪರಮೇಶಪ್ಪ ಅವರು ತಮ್ಮ ನಾಲ್ಕು ಎಕರೆ ಜಮೀನಿನಲ್ಲಿ ಬೆಳೆದಿದ್ದು, ಸುಮಾರು ಎರಡೂವರೆ ಲಕ್ಷ ರೂಪಾಯಿ ಮೌಲ್ಯದ ಮೆಕ್ಕೆಜೋಳ ಸುಟ್ಟು ಕರಕಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರು ಬೆಂಕಿ ನಂದಿಸುವ ಕಾರ್ಯವನ್ನ ಮಾಡಿದ್ದಾರೆ. ರೈತನಿಗೆ ಸೂಕ್ತ ಪರಿಹಾರವನ್ನ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.ಇದನ್ನೂ ಓದಿ: ಪೊಲೀಸ್ ಮಗಳನ್ನೆ ಕತ್ತು ಹಿಸುಕಿ ಕೊಂದ ಸ್ನೇಹಿತೆಯ ಪತಿ!

    ಘಟನೆ ಕುರಿತು ಬ್ಯಾಡಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

  •  ಕಂಟೇನರ್​ಗೆ ಲಾರಿ ಡಿಕ್ಕಿ – ಇಬ್ಬರ ದುರ್ಮರಣ

     ಕಂಟೇನರ್​ಗೆ ಲಾರಿ ಡಿಕ್ಕಿ – ಇಬ್ಬರ ದುರ್ಮರಣ

    ಬೆಳಗಾವಿ: ಕಂಟೇನರ್​ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಇಬ್ಬರು ಸಾವನ್ನಪ್ಪಿರುವ ದಾರುಣ ಘಟನೆ ಬೆಳಗಾವಿಯ ಹೊರ ವಲಯದಲ್ಲಿರುವ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬಳಿಯ ವಂಟಮೂರಿ ಘಾಟ್‍ನಲ್ಲಿ ನಡೆದಿದೆ.

    ಮಂಗಳವಾರ ತಡರಾತ್ರಿ 1 ಗಂಟೆ ಸುಮಾರಿಗೆ ಈ ದುರ್ಘಟನೆ ಸಂಭವಿಸಿದ್ದು, ಶಿಗ್ಗಾಂವಿ ಕಡೆಯಿಂದ ಮಹಾರಾಷ್ಟ್ರಕ್ಕೆ ಮೆಕ್ಕೆಜೋಳದ ಹಿಟ್ಟನ್ನು ತುಂಬಿಕೊಂಡು ಹೋಗುತ್ತಿದ್ದ ಕಂಟೇನರ್, ರಾಷ್ಟ್ರೀಯ ಹೆದ್ದಾರಿ-4ರ ಸುತಗಟ್ಟಿ ಇಳಿಜಾರು ಪ್ರದೇಶದಲ್ಲಿ ಡಿವೈಡರ್ ಹಾರಿ ಮಹಾರಾಷ್ಟ್ರ ಕಡೆಯಿಂದ ಬೆಳಗಾವಿಗೆ ಈರುಳ್ಳಿ ತುಂಬಿಕೊಂಡು ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ.

    ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ನೀರಜ್ ಹಾಗೂ ರಾಜೇಂದ್ರ ಎಂಬ ಇಬ್ಬರು ಮೃತಪಟ್ಟಿದ್ದಾರೆ. ಡಿಕ್ಕಿ ಹೊಡೆದ ರಭಸಕ್ಕೆ ಕಂಟೇನರ್ ನ ಮೇಲ್ಭಾಗ ಕಿತ್ತು ಬಿದ್ದು, ಔಷಧಿ ತುಂಬಿಕೊಂಡು ನಿಂತಿದ್ದ ಕಂಟೇನರ್​ಗೆ ಡಿಕ್ಕಿ ಹೊಡೆದಿದೆ. ಸ್ಥಳಕ್ಕೆ ಕಾಕತಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ:ಮಹಿಳೆಗೆ ಪ್ಯಾಂಟ್ ಬಿಚ್ಚಿ ಮರ್ಮಾಂಗ ತೋರಿಸಿದ ಗ್ರೇಡ್ 2 ತಹಶೀಲ್ದಾರ್

  • ಆಕಸ್ಮಿಕ ಬೆಂಕಿಗೆ ಮೆಕ್ಕೆಜೋಳದ ರಾಶಿ ಸುಟ್ಟು ಭಸ್ಮ

    ಆಕಸ್ಮಿಕ ಬೆಂಕಿಗೆ ಮೆಕ್ಕೆಜೋಳದ ರಾಶಿ ಸುಟ್ಟು ಭಸ್ಮ

    ಹಾವೇರಿ: ಆಕಸ್ಮಿಕ ಬೆಂಕಿಗೆ ರಾಶಿ ಮಾಡಲು ಹಾಕಿದ್ದ ಮೆಕ್ಕೆಜೋಳದ ತೆನೆಗಳು ಸಂಪೂರ್ಣ ಸುಟ್ಟು ಭಸ್ಮವಾದ ಘಟನೆ ಹಾವೇರಿ ಜಿಲ್ಲೆ ರಟ್ಟೀಹಳ್ಳಿ ತಾಲೂಕಿನ ಕಡೂರು ಗ್ರಾಮದಲ್ಲಿ ನಡೆದಿದೆ.

    ಕಡೂರು ಗ್ರಾಮದ ಎಂಟು ಜನ ರೈತರಿಗೆ ಸೇರಿದ ಮೆಕ್ಕೆಜೋಳ ರಾಶಿಯಾಗಿದ್ದು, 20 ಎಕರೆ ಜಮೀನಿನಲ್ಲಿ ಬೆಳೆದಿದ್ದರು. ರಾಶಿ ಮಾಡಲು ಹಾಕಿದ್ದ ವೇಳೆ ಆಕಸ್ಮಿಕ ಬೆಂಕಿ ಬಿದ್ದು ಸಂಪೂರ್ಣ ಸುಟ್ಟು ಕರಕಲಾಗಿವೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಲಕ್ಷಾಂತರ ರೂಪಾಯಿ ಮೌಲ್ಯದ 700 ಕ್ವಿಂಟಾಲ್ ಗೂ ಅಧಿಕ ಮೆಕ್ಕೆಜೋಳ ಹಾನಿಯಾಗಿದೆ.

    ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಸರಕಾರದಿಂದ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ. ರಟ್ಟಿಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • ಆಕಸ್ಮಿಕವಾಗಿ ಬೆಂಕಿ ಬಿದ್ದು 5 ಲಕ್ಷ ರೂ.ಮೌಲ್ಯದ ಮೆಕ್ಕೆಜೋಳ ಭಸ್ಮ

    ಆಕಸ್ಮಿಕವಾಗಿ ಬೆಂಕಿ ಬಿದ್ದು 5 ಲಕ್ಷ ರೂ.ಮೌಲ್ಯದ ಮೆಕ್ಕೆಜೋಳ ಭಸ್ಮ

    ಹಾವೇರಿ: ಆಕಸ್ಮಿಕವಾಗಿ ಬೆಂಕಿ ಬಿದ್ದು ಮೆಕ್ಕೆಜೋಳದ ತೆನೆಗಳು ಸುಟ್ಟು ಕರಕಲಾದ ಘಟನೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಮಣಕೂರು ಗ್ರಾಮದಲ್ಲಿ ನಡೆದಿದೆ.

    ರೈತ ರಂಗಪ್ಪ ಕಂಬಳಿಯವರ ಎಂಬವರಿಗೆ ಸೇರಿದ ಮೆಕ್ಕಜೋಳ ರಾಶಿ ಬೆಂಕಿಗೆ ಆಹುತಿಯಾಗಿದೆ. ಕಟಾವು ಮಾಡಿ ರಾಶಿ ಮಾಡಲು ಹಾಕಿದ್ದ ತೆನೆಗಳು ಸುಟ್ಟು ಕರಕಲಾಗಿವೆ. ಫಸಲುನ್ನು ಕಳೆದುಕೊಂಡ ರೈತ ರಂಗಪ್ಪ ಕಣ್ಣೀರು ಹಾಕುತ್ತಿದ್ದಾರೆ.

    ಇಪ್ಪತ್ತು ಎಕರೆ ಜಮೀನಿನಲ್ಲಿ ಬೆಳೆದಿದ್ದ ಮೆಕ್ಕೆಜೋಳ ಸಂಪೂರ್ಣ ಸುಟ್ಟ ಕರಕಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಷ್ಟರಲ್ಲಿ ಸುಟ್ಟು ಹೋಗಿವೆ. ಸುಮಾರು ಐದು ಲಕ್ಷ ರೂಪಾಯಿ ಮೌಲ್ಯದ ಮೆಕ್ಕೆಜೋಳ ಹಾನಿಗೊಳಗಾಗಿದೆ. ಹಲಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

  • ಮೆಕ್ಕೆಜೋಳ ರಾಶಿಗೆ ಆಕಸ್ಮಿಕ ಬೆಂಕಿ – ಸುಟ್ಟು ಕರಕಲಾದ ತೆನೆಗಳು

    ಮೆಕ್ಕೆಜೋಳ ರಾಶಿಗೆ ಆಕಸ್ಮಿಕ ಬೆಂಕಿ – ಸುಟ್ಟು ಕರಕಲಾದ ತೆನೆಗಳು

    ಹಾವೇರಿ: ಮೆಕ್ಕೆಜೋಳ ತೆನೆಗಳ ರಾಶಿಗೆ ಆಕಸ್ಮಿಕ ಬೆಂಕಿ ತಗುಲಿ ಧಗಧಗ ಹೊತ್ತಿ ಉರಿದಿರುವ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಚಿನ್ನಿಕಟ್ಟಿ ಗ್ರಾಮದಲ್ಲಿ ನಡೆದಿದೆ.

    ಗಣೇಶಪ್ಪ ಹಳೇಮನಿ, ವಿಜಯಕುಮಾರ ಹಳೇಮನಿ ಮತ್ತು ಪರಶುರಾಮ ಹಳೇಮನಿ ಎಂಬ ರೈತರು ಹದಿನೆಂಟು ಎಕರೆ ಜಮೀನಿನಲ್ಲಿ ಮೆಕ್ಕೆಜೋಳ ಬೆಳೆದಿದ್ದರು. ಈ ರೈತರು ಒಕ್ಕಣೆ ಮಾಡಲು ಕಣದಲ್ಲಿ ಹಾಕಿದ್ದ ಮೆಕ್ಕೆಜೋಳದ ತೆನೆಗಳಿಗೆ ಅದು ಹೇಗೋ ಆಕಸ್ಮಿಕ ಬೆಂಕಿ ತಗುಲಿ ಮೆಕ್ಕೆಜೋಳದ ತೆನೆಗಳು ಧಗಧಗ ಹೊತ್ತಿ ಉರಿದು ಸುಟ್ಟು ಕರಕಲಾಗಿದೆ.

    ವಿಷಯ ತಿಳಿದು ಬೆಂಕಿ ನಾಂದಿಸಲು ಕೂಡಲೇ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿದ್ದು, ಬೆಂಕಿ ನಂದಿಸುವ ಕಾರ್ಯ ಮಾಡುತ್ತಿದ್ದಾರೆ. ಈ ಕುರಿತಂತೆ ಬ್ಯಾಡಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

  • ಒಕ್ಕಣೆಗೆ ಹಾಕಿದ್ದ ಮೆಕ್ಕೆಜೋಳ ರಾಶಿಗೆ ಬೆಂಕಿ – ಒಂದೂವರೆ ಲಕ್ಷ ರೂ. ಮೌಲ್ಯದ ಬೆಳೆ ನಾಶ

    ಒಕ್ಕಣೆಗೆ ಹಾಕಿದ್ದ ಮೆಕ್ಕೆಜೋಳ ರಾಶಿಗೆ ಬೆಂಕಿ – ಒಂದೂವರೆ ಲಕ್ಷ ರೂ. ಮೌಲ್ಯದ ಬೆಳೆ ನಾಶ

    ಹಾವೇರಿ: ಒಕ್ಕಣೆ ಮಾಡಲು ಜಮೀನಿನಲ್ಲಿ ಸಂಗ್ರಹಿಸಿಟ್ಟಿದ್ದ ಮೆಕ್ಕೆಜೋಳದ ರಾಶಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿ ಪರಾರಿ ಆಗಿರೋ ಘಟನೆ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಕಳಸೂರು ಗ್ರಾಮದಲ್ಲಿ ನಡೆದಿದೆ.

    ಮಾರುತಿ ಕಾಳಪ್ಪನವರ ರೈತರು ಬೆಳೆದಿದ್ದ ಮೆಕ್ಕೆಜೋಳ ಬೆಳೆ ನಾಶವಾಗಿದೆ. ಇವರು ಐದು ಎಕರೆ ಜಮೀನಿನಲ್ಲಿ ಮೆಕ್ಕೆಜೋಳ ಬೆಳೆದಿದ್ದರು. ಮೆಕ್ಕೆಜೋಳದ ತೆನೆಗಳನ್ನ ಒಕ್ಕಣೆ ಮಾಡಲೆಂದು ಜಮೀನಿನಲ್ಲಿ ಸಂಗ್ರಹಿಸಿಟ್ಟಿದ್ದರು. ತಡರಾತ್ರಿ ಯಾರೋ ಕಿಡಿಗೇಡಿಗಳು ರಾಶಿಗೆ ಬೆಂಕಿ ಇಟ್ಟಿದ್ದಾರೆ. ಇದರಿಂದ ಬೆಳೆ ನಾಶವಾಗಿದೆ. ಒಂದೂವರೆ ಲಕ್ಷ ರುಪಾಯಿ ಮೌಲ್ಯದ ಮೆಕ್ಕೆಜೋಳದ ಸುಟ್ಟು ಹಾನಿಯಾಗಿದೆ. ಫಸಲಿಗೆ ಬೆಂಕಿ ಹತ್ತಿ ಉರಿಯುತ್ತಿರುವುದನ್ನು ಕಂಡು ಮಾರುತಿ ಕಾಳಪ್ಪನವರು ಕಣ್ಣೀರು ಹಾಕುತ್ತಿದ್ದಾರೆ.

    ವಿಷಯ ತಿಳಿದು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸೋವಷ್ಟರಲ್ಲಿ ಮೆಕ್ಕೆಜೋಳದ ತೆನೆಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಸವಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

  • ನಮ್ಮೂರಿಗೂ ‘ಎಣ್ಣೆ’ ಅಂಗಡಿ ಮಂಜೂರಿ ಮಾಡಿಕೊಡಿ- ಸಚಿವ ಶೆಟ್ಟರ್‌ಗೆ ವ್ಯಕ್ತಿಯ ಮನವಿ

    ನಮ್ಮೂರಿಗೂ ‘ಎಣ್ಣೆ’ ಅಂಗಡಿ ಮಂಜೂರಿ ಮಾಡಿಕೊಡಿ- ಸಚಿವ ಶೆಟ್ಟರ್‌ಗೆ ವ್ಯಕ್ತಿಯ ಮನವಿ

    ಧಾರವಾಡ: ಲಾಕ್‍ಡೌನ್ ನಡುವೆಯೂ ಮದ್ಯದ ಮಾರಾಟ ಭರ್ಜರಿಯಾಗಿ ನಡೆಯುತ್ತಿರುವಾಗಲೇ ನಮ್ಮೂರಿಗೂ ಎಣ್ಣೆ ಅಂಗಡಿ ಮಂಜೂರಿ ಮಾಡಿಕೊಡಿ ಎಂದು ವ್ಯಕ್ತಿಯೊಬ್ಬ ಸಚಿವರಿಗೆ ಮನವಿ ಮಾಡಿಕೊಂಡಿರುವ ವಿಚಿತ್ರ ಪ್ರಸಂಗ ಧಾರವಾಡದಲ್ಲಿ ನಡೆದಿದೆ.

    ಹೌದು ತಮಗೆ ಇಂತಹದೊಂದು ಮನವಿ ಬಂದಿತ್ತು ಎಂಬುದನ್ನು ಸ್ವಂತ ಸಚಿವ ಜಗದೀಶ ಶೆಟ್ಟರ್ ಅವರೇ ಹೇಳಿಕೊಂಡಿದ್ದಾರೆ. ಧಾರವಾಡದಲ್ಲಿ ಅಧಿಕಾರಿಗಳ ಸಭೆಯ ಬಳಿಕ ಮಾತನಾಡಿದ ಅವರು, ನಮ್ಮೂರಿಗೆ ಎಂಎಸ್‍ಐಎಲ್ ಮಳಿಗೆ ಕೊಡಿ ಎಂದು ವ್ಯಕ್ತಿಯೊಬ್ಬ ಇವತ್ತು ಬೆಳಗ್ಗೆ ನನ್ನ ಬಳಿ ಮನವಿ ಹಿಡಿದುಕೊಂಡು ಬಂದಿದ್ದ. ಏನ್ ಮಾಡೋದು ಇಂತವರು ನಮ್ಮಲ್ಲಿ ಇದಾರೆ. ನಾನು ಅವನಿಗೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮತ್ತು ಊರ ಹಿರಿಯರ ಒಪ್ಪಿಗೆ ತೆಗೆದುಕೊಂಡು ಬಾ ಎಂದು ಹೇಳಿ ಸಾಗ ಹಾಕಿದ್ದೇನೆ ಎಂದು ಹೇಳಿದ ಶೆಟ್ಟರ್ ತಿಳಿಸಿದರು.

    ಜನರ ವಿರೋಧ ಬಂದ ಕಡೆಯ ಮದ್ಯದ ಮಳಿಗೆಗಳನ್ನು ನಾವು ಬಂದ್ ಮಾಡಿಸುತ್ತಿದ್ದೇವೆ. ಇಂತಹ ಸಮಯದಲ್ಲಿ ಹೊಸ ವೈನ್ ಶಾಪ್‍ಗಳಿಗೆ ಅನುಮತಿ ಕೊಡುವುದಿಲ್ಲ ಎಂದರು.

    ಇದೇ ವೇಳೆ ಮೆಕ್ಕೆಜೋಳ ಬೆಂಬಲ ಬೆಲೆ ಖರೀದಿ ಕುರಿತಂತೆ ಮಾತನಾಡಿದ ಅವರು, ರೈತರು ಮೆಕ್ಕೆಜೋಳ ಖರೀದಿ ಕೇಂದ್ರದ ಆಸೆ ಕೈ ಬಿಡುವಂತೆ ಹೇಳಿದ್ದಾರೆ. ಕೆಎಂಎಫ್ ಮೂಲಕ ದೊಡ್ಡ ಪ್ರಮಾಣದಲ್ಲಿ ಮೆಕ್ಕೆಜೋಳ ಖರೀದಿ ಆರಂಭಿಸಲಾಗಿತ್ತು. ಆದರೆ ಅದು ಯಶಸ್ಸು ಆಗಲಿಲ್ಲ. ಹೀಗಾಗಿ ಖರೀದಿ ಕೇಂದ್ರದ ಮೂಲಕ ಪಡೆಯಲು ಆಗುವುದಿಲ್ಲ ಎಂದು ಸರ್ಕಾರ ಐದು ಸಾವಿರ ರೂಪಾಯಿ ಸಬ್ಸಿಡಿ ಘೋಷಿಸಿದೆ. ಇನ್ನು ಮುಂದೆ ರೈತರು ಖರೀದಿ ಕೇಂದ್ರದ ವಿಚಾರ ಬಿಟ್ಟು ಮಾರ್ಕೆಟ್‍ನಲ್ಲಿ ತಮಗೆ ಯಾರಿಗೆ ಬೇಕೋ ಅವರಿಗೆ ಕೊಡಬಹುದು ಎಂದು ಶೆಟ್ಟರ್ ಹೇಳಿದರು.