Tag: ಮೆಂತ್ಯ ವಡಾ

  • ಈ ರೀತಿ ಮಾಡಿ ಕ್ರಿಸ್ಪಿ ಮೆಂತ್ಯ ವಡಾ

    ಈ ರೀತಿ ಮಾಡಿ ಕ್ರಿಸ್ಪಿ ಮೆಂತ್ಯ ವಡಾ

    ರೋಗ್ಯಕ್ಕೂ ಹಿತವೆನಿಸಬೇಕು, ರುಚಿರುಚಿಯೂ ಆಗಿರಬೇಕೆಂದರೆ ಅಂತಹ ರೆಸಿಪಿ ಸಿಗೋದು ಅಪರೂಪ. ಆದರೂ ನಾವಿಂದು ಹೇಳಿಕೊಡುತ್ತಿರೋ ಕ್ರಿಸ್ಪಿಯಾದ ಮೆಂತ್ಯ ವಡಾ ರುಚಿಗೂ ಕಮ್ಮಿಯಿಲ್ಲ, ಆರೋಗ್ಯಕ್ಕೂ ಬೆಸ್ಟ್ ಆಗಿದೆ. ಬಾಯಲ್ಲಿ ನೀರೂರಿಸೋ ಮಸಾಲೆಯುಕ್ತ ಮೆಂತ್ಯ ವಡಾವನ್ನು ಗ್ರೀನ್ ಚಟ್ನಿ ಅಥವಾ ಸಾಸ್ ನೊಂದಿಗೆ ಸವಿಯಬಹುದು. ಕ್ರಿಸ್ಪಿ ಮೆಂತ್ಯ ವಡಾ ರೆಸಿಪಿ ಇಲ್ಲಿದೆ.

    ಬೇಕಾಗುವ ಪದಾರ್ಥಗಳು:
    ಹಸಿರು ಮೆಣಸಿನಕಾಯಿ – 2
    ಬೆಳ್ಳುಳ್ಳಿ – 10
    ಶುಂಠಿ – ಒಂದೂವರೆ ಇಂಚು
    ಜೀರಿಗೆ – 1 ಟೀಸ್ಪೂನ್
    ಕೊತ್ತಂಬರಿ ಬೀಜ – 1 ಟೀಸ್ಪೂನ್
    ಅವಲಕ್ಕಿ – 1 ಕಪ್
    ತಾಜಾ ಮೆಂತ್ಯ ಸೊಪ್ಪು – 2 ಕಪ್
    ಎಳ್ಳು – 1 ಟೀಸ್ಪೂನ್
    ಕೆಂಪು ಮೆಣಸಿನಪುಡಿ – 1 ಟೀಸ್ಪೂನ್
    ಅರಿಶಿನ ಪುಡಿ – ಕಾಲು ಟೀಸ್ಪೂನ್
    ಹಿಂಗ್ – ಕಾಲು ಟೀಸ್ಪೂನ್
    ಆಮ್‌ಚೂರ್ ಪುಡಿ – 1 ಟೀಸ್ಪೂನ್
    ಹೆಚ್ಚಿದ ಈರುಳ್ಳಿ – 1
    ಕಡಲೆ ಹಿಟ್ಟು – ಮುಕ್ಕಾಲು ಕಪ್
    ಎಣ್ಣೆ – 1 ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು
    ಎಣ್ಣೆ – ಡೀಪ್ ಫ್ರೈ ಅಥವಾ ಶ್ಯಾಲೋ ಫ್ರೈಗೆ ಬೇಕಾಗುವಷ್ಟು ಇದನ್ನೂ ಓದಿ: ಸಿಂಪಲ್ಲಾಗಿ ಮಾಡಿ ಮಶ್ರೂಮ್ 65..

    ಮಾಡುವ ವಿಧಾನ:
    * ಮೊದಲಿಗೆ ಒಂದು ಮಿಕ್ಸರ್ ಜಾರ್‌ನಲ್ಲಿ ಹಸಿರು ಮೆಣಸಿನಕಾಯಿ, ಶುಂಠಿ, ಬೆಳ್ಳುಳ್ಳಿ, ಜೀರಿಗೆ, ಕೊತ್ತಂಬರಿ ಸೇರಿಸಿ ಒರಟಾಗಿ ರುಬ್ಬಿಕೊಳ್ಳಿ.
    * ಅವಲಕ್ಕಿ ತೆಗೆದುಕೊಂಡು ಅದನ್ನು 2-3 ಬಾರಿ ತೊಳೆಯಿರಿ. ಅದನ್ನು ಒಂದು ತಟ್ಟೆಗೆ ಹಾಕಿ ಕೈಗಳಿಂದ ನಿಧಾನವಾಗಿ ಮ್ಯಾಶ್ ಮಾಡಿಕೊಳ್ಳಿ.
    * ಮೆಂತ್ಯ ಸೊಪ್ಪನ್ನು ತೊಳೆದು, ಒಣಗಿಸಿ, ಕೈಗಳಿಂದ ಪುಡಿ ಮಾಡಿ.
    * ಮೆಂತ್ಯ ಸೊಪ್ಪು ಹಾಗೂ ಅವಲಕ್ಕಿಯನ್ನು ಒಂದು ಬೌಲ್‌ಗೆ ಹಾಕಿ, ಎಳ್ಳು, ರುಬ್ಬಿಕೊಂಡ ಮಸಾಲೆ, ಕೆಂಪು ಮೆಣಸಿನಪುಡಿ, ಅರಿಶಿನ ಪುಡಿ, ಹಿಂಗ್, ಆಮ್‌ಚೂರ್ ಪೌಡರ್ ಸೇರಿಸಿ ಮಿಶ್ರಣ ಮಾಡಿ.
    * ಅದಕ್ಕೆ ಈರುಳ್ಳಿ, ಅಗತ್ಯವಿದ್ದರೆ ನೀರು, ಉಪ್ಪು, ಎಣ್ಣೆ ಸೇರಿಸಿ ಮೃದುವಾದ ಹಿಟ್ಟಿನ ಹದಕ್ಕೆ ಬೆರೆಸಿಕೊಳ್ಳಿ.
    * ಈಗ ತಯಾರಿಸಿಟ್ಟ ಹಿಟ್ಟನ್ನು ಸಣ್ಣ ಸಣ್ಣ ವಡೆಗಳ ರೂಪಕ್ಕೆ ತನ್ನಿ.
    * ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ವಡೆಗಳನ್ನು ಎಣ್ಣೆಯಲ್ಲಿ ಬಿಟ್ಟು ಮಧ್ಯಮ ಉರಿಯಲ್ಲಿ ಫ್ರೈ ಮಾಡಿಕೊಳ್ಳಿ.
    * ವಡೆಗಳ ಎರಡೂ ಬದಿಗಳಲ್ಲಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಗರಿಗರಿಯಾಗಿ ಹುರಿಯಿರಿ.
    * ನಂತರ ಅವುಗಳನ್ನು ಟಿಶ್ಯೂ ಪೇಪರ್ ಹರಡಿದ ತಟ್ಟೆಗೆ ವರ್ಗಾಯಿಸಿ.
    * ಇದೀಗ ಕ್ರಿಸ್ಪಿ ಮೆಂತ್ಯ ವಡಾ ತಯಾರಾಗಿದ್ದು, ಗ್ರೀನ್ ಚಟ್ನಿ ಅಥವಾ ಸಾಸ್‌ನೊಂದಿಗೆ ಸವಿಯಿರಿ. ಇದನ್ನೂ ಓದಿ: ಫ್ರೀ ಟೈಮ್‌ನಲ್ಲಿ ಬೇಕೆನಿಸುತ್ತೆ ಚಟ್‌ಪಟಾ ಆಲೂ ಚಾಟ್