Tag: ಮೆಂತೆ ಸೊಪ್ಪು

  • ಮೆಂತೆ ಸೊಪ್ಪಿನ ಸೇವನೆಯಿಂದ ಸಿಗಲಿದೆ ಆರೋಗ್ಯಕರ ಅಂಶ

    ಮೆಂತೆ ಸೊಪ್ಪಿನ ಸೇವನೆಯಿಂದ ಸಿಗಲಿದೆ ಆರೋಗ್ಯಕರ ಅಂಶ

    ದೇಹದ ಆರೋಗ್ಯ ಕಾಪಾಡಿಕೊಳ್ಳಲು ಹಣ್ಣು, ತರಕಾರಿಗಳು ಹಾಗೂ ಸೊಪ್ಪುಗಳ ಸೇವನೆ ಬಹು ಮುಖ್ಯವಾಗಿದ್ದು ಆಹಾರದಲ್ಲಿ ಹಸಿರು ಸೊಪ್ಪು ಮತ್ತು ತರಕಾರಿಗಳನ್ನು ಬಳಸಿಕೊಂಡರೆ ಆರೋಗ್ಯದ ಸಮಸ್ಯೆಗಳನ್ನು ನಾವು ಅರ್ಧಭಾಗದಷ್ಟು ಪರಿಹರಿಸಬಹು. ತರಕಾರಿ, ಸೊಪ್ಪುಗಳ ಮಹತ್ವವನ್ನೇ ಜನರು ಮರೆತು ಹೋಗುತ್ತಿದ್ದಾರೆ. ಪ್ರತೀ ಕಾಯಿಲೆ, ಸಮಸ್ಯೆಗಳಿಗೂ ವೈದ್ಯರ ಮೊರೆ ಹೋಗುವುದು ಸಾಮಾನ್ಯವಾಗಿ ಹೋಗಿದೆ. ಮೆಂತೆ ಸೊಪ್ಪಿನ ಸೇವನೆಯಿಂದ ಆರೋಗ್ಯಕ್ಕೆ ಬೇಕಾಗುವ ಅಂಶಗಳು ದೊರೆಯಲಿದೆ.

    * ಕೆಮ್ಮು  ಚರ್ಮದ ಸಮಸ್ಯೆಯನ್ನು ಮೆಂತೆ ಸುಪ್ಪು ಸೇವನೆಯಿಂದ ನಿವಾರಣೆ ಮಾಡಿಕೊಳ್ಳ ಬಹುದಾಗಿದೆ.

    * ದೇಹದ ನೋವು, ಕಿಡ್ನಿ ಸಮಸ್ಯೆ ಮತ್ತು ಊತವನ್ನು ಇದು ಕಡಿಮೆ ಮಾಡುವುದು.

    * ರಕ್ತ ಹೀನತೆ ಸಮಸ್ಯೆ ಇರುವವರು ಮೆಂತೆಯ ಆಹಾರ ಮತ್ತು ಇತರ ತರಕಾರಿಗಳ ಜೊತೆ ಸಲಾಡ್ ರೂಪದಲ್ಲಿ ಹಸಿ ಮೆಂತೆಯ ಸೊಪ್ಪನ್ನು ಸೇವಿಸಿದರೆ ಹಿಮೋಗ್ಲೋಬಿನ್ ಪ್ರಮಾಣ ಏರಿಕೆ ಆಗುವುದು.

    * ದೇಹಕ್ಕೆ ಬೇಕಾಗುವ ನಾರಿನಂಶವನ್ನು ಅಧಿಕ ಪ್ರಮಾಣದಲ್ಲಿ ನೀಡುತ್ತದೆ. ಮಲಬದ್ಧತೆಯ ಸಮಸ್ಯೆಯನ್ನು ಪರಿಹಾರ ಗೊಳಿಸುವುದರ ಜೊತೆಗೆ ಕರುಳಿನ ಚಲನೆಯನ್ನು ಮೃದುಗೊಳಿಸುತ್ತದೆ. ಇದನ್ನೂ ಓದಿ:   ಕಿವಿಹಣ್ಣು ಸೇವಿಸಿ ಆರೋಗ್ಯ ಸುಧಾರಿಸಿಕೊಳ್ಳಿ

    * ಮೆಂತ್ಯೆ ಎಲೆಗಳು ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಿ, ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ತಗ್ಗಿಸುತ್ತವೆ. ಇದನ್ನೂ ಓದಿ:  ಚಳಿಗಾಲದಲ್ಲಿ ನೀವು ಸೇವಿಸುವ ಆಹಾರದಲ್ಲಿ ಈ ಅಂಶಗಳು ಇರಲಿ

    * ಮೆಂತ್ಯ ಸೊಪ್ಪು ಸೇವನೆಯಿಂದ ಪುರುಷರಲ್ಲಿ ಲೈಂಗಿಕ ಹಾರ್ಮೋನ್ ಗಳ ಉತ್ಪತ್ತಿ ಹೆಚ್ಚುತ್ತದೆ ಮತ್ತು ಲೈಂಗಿಕಾಸಕ್ತಿ ಹೆಚ್ಚಿಸುತ್ತದೆ ಎನ್ನಲಾಗಿದೆ. ಇದನ್ನೂ ಓದಿ: ಅಕ್ಕಿ ತೊಳೆದ ನೀರಿನಿಂದ ನಿಮ್ಮ ಸೌಂದರ್ಯ ಹೆಚ್ಚಿಸಬಹುದು

  • ಮೆಂತೆ ಎಂದು ಗಾಂಜಾ ಸೊಪ್ಪು ತಿಂದ್ರು – ಐವರು ಅಸ್ವಸ್ಥ

    ಮೆಂತೆ ಎಂದು ಗಾಂಜಾ ಸೊಪ್ಪು ತಿಂದ್ರು – ಐವರು ಅಸ್ವಸ್ಥ

    -ಆಸ್ಪತ್ರೆಗೆ ದಾಖಲಾದ ಕುಟುಂಬಸ್ಥರು

    ಲಕ್ನೋ: ಮೆಂತೆ ಸೊಪ್ಪು ಎಂದು ತಿಳಿದ ಕುಟುಂಬಸ್ಥರು ಗಾಂಜಾ ಸೊಪ್ಪನ್ನು ಬೇಯಿಸಿ ತಿಂದು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಉತ್ತರ ಪ್ರದೇಶದ ಕನ್ನೌಜ್ ನಲ್ಲಿ ನಡೆದಿದೆ. ಪ್ರಕರಣ ಸಂಬಂಧ ಪೊಲೀಸರು ಓರ್ವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    ಕನ್ನೌಜ್ ಜಿಲ್ಲೆಯ ಕೋತವಾಲಿ ಕ್ಷೇತ್ರದ ಮಿಯಾಗಂಜ್ ಗ್ರಾಮದ ಕಿಶೋರ್ ಎಂಬಾತ ಓಂಪ್ರಕಾಶ್ ಎಂಬವರ ಪುತ್ರ ನಿತೇಶ್‍ಗೆ ಒಣಗಿಸಿದ ಮೆಂತೆ ಸೊಪ್ಪು ಎಂದು ಹೇಳಿ ನೀಡಿದ್ದಾನೆ. ಕಿಶೋರ್ ನೀಡಿದ ಸೊಪ್ಪನ್ನು ತೆಗದುಕೊಂಡು ನಿತೇಶ್ ಮನೆಯಲ್ಲಿ ಅತ್ತಿಗೆಗೆ ನೀಡಿದ್ದಾನೆ. ಸೊಪ್ಪು ಎಂದು ತಿಳಿದ ನಿತೇಶ್ ಅತ್ತಿಗೆ ಅದನ್ನ ಅಡುಗೆಯಲ್ಲಿ ಬಳಸಿದ್ದಾರೆ. ಗಾಂಜಾ ಸೊಪ್ಪಿನಿಂದ ಮಾಡಿದ ಅಡುಗೆ ಸೇವಿಸಿದ ಓಂ ಪ್ರಕಾಶ್, ನಿತೇಶ್, ಮನೋಜ್ ಕಮಲೇಶ್, ಪಿಂಕಿ ಮತ್ತು ಆರತಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

    ದಿಢೀರ್ ಅಂತ ಕುಟುಂಬಸ್ಥರು ಅಸ್ವಸ್ಥಗೊಂಡಿದ್ದನ್ನ ಗಮನಿಸಿದ ನೆರೆಹೊರೆಯವರು ಎಲ್ಲರನ್ನ ಆಸ್ಪತ್ರೆಗೆ ದಾಖಲಿಸಿ ಪೊಲೀಸರಿಗೂ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಮನೆಯಲ್ಲಿದ್ದ ಅಡುಗೆ ವಶಕ್ಕೆ ಪಡೆದುಕೊಂಡು ಲ್ಯಾಬ್ ಗೆ ಕಳುಹಿಸಿದ್ದಾರೆ. ಇತ್ತ ಮನೆಯಲ್ಲಿದ್ದ ಗಾಂಜಾ ಸೊಪ್ಪು ಸಿಕ್ಕಿದೆ. ಗಾಂಜಾ ನೀಡಿದ್ದ ಕಿಶೋರ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.