Tag: ಮೃತ ಬಾಲಕ

  • ಟ್ರೆಕ್ಕಿಂಗ್ ವೇಳೆ ಬೆಟ್ಟದಿಂದ ಕಾಲು ಜಾರಿ ಬಿದ್ದು ಬಾಲಕ ಸಾವು

    ಟ್ರೆಕ್ಕಿಂಗ್ ವೇಳೆ ಬೆಟ್ಟದಿಂದ ಕಾಲು ಜಾರಿ ಬಿದ್ದು ಬಾಲಕ ಸಾವು

    ತುಮಕೂರು: ಸ್ನೇಹಿತರ ಜೊತೆ ಟ್ರೆಕ್ಕಿಂಗ್ ಹೋಗಿದ್ದಾಗ ಬಾಲಕನೊಬ್ಬ ಬೆಟ್ಟದಿಂದ ಕಾಲು ಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ ಮಧುಗಿರಿ ತಾಲೂಕಿನ ಬಸ್ಮಂಗಿ ಬೆಟ್ಟದಲ್ಲಿ ಸಂಭವಿಸಿದೆ.

    ಶಿರಾ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ತೇಜಸ್(17) ಮೃತ ಬಾಲಕ. ಗುರುವಾರ ಮೂವರು ಸ್ನೇಹಿತರೊಂದಿಗೆ ಕಡಿದಾದ ಬೆಟ್ಟವನ್ನು ಹತ್ತುತ್ತಿದ್ದ ವೇಳೆಯಲ್ಲಿ ಆಯತಪ್ಪಿ ಪ್ರಪಾತಕ್ಕೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ಅವಘಡ ಸಂಭವಿಸಿದ ತಕ್ಷಣ ಭಯಭೀತರಾದ ಇತರ ಸ್ನೇಹಿತರು ಘಟನಾ ಸ್ಥಳದಿಂದ ಪರಾರಿಯಾಗಿದ್ದಾರೆ.

    ಈ ಘಟನೆ ಕುರಿತು ಮೃತ ತೇಜಸ್ ನ ಪೋಷಕರಿಗೂ ಮಾಹಿತಿ ನೀಡಿಲ್ಲ. ಶುಕ್ರವಾರ ಪಾಲಕರು ಕಾಲೇಜಿಗೆ ಹೋಗಿ ವಿಚಾರಿಸಿದಾಗ ಮೃತಪಟ್ಟಿರುವ ವಿಷಯ ಬೆಳಕಿಗೆ ಬಂದಿದೆ. ತಕ್ಷಣ ತೇಜಸ್ ನ ತಂದೆ ಬಡವನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬೆಟ್ಟದಲ್ಲಿ ಹುಡುಕಾಟ ನಡೆಸಿದ್ದ ಪೊಲೀಸರು ಸಂಜೆ ವೇಳೆ ಬಾಲಕನ ಮೃತದೇಹ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.