Tag: ಮೃಣಾಲ್

  • ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ ವಿಜಯ್ ದೇವರಕೊಂಡ ಟೀಮ್

    ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ ವಿಜಯ್ ದೇವರಕೊಂಡ ಟೀಮ್

    ದಿ ಫ್ಯಾಮಿಲಿ ಸ್ಟಾರ್ ಕುರಿತಂತೆ ತಪ್ಪು ಮಾಹಿತಿಗಳನ್ನು ಹಂಚುತ್ತಿರುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ತೆಲುಗಿನ ಹೆಸರಾಂತ ನಟ ವಿಜಯ್ ದೇವರಕೊಂಡ ಟೀಮ್ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದೆ. ಸಿನಿಮಾ ಕುರಿತಂತೆ ನೆಗೆಟಿವ್ ಸುದ್ದಿ ಹರಡುತ್ತಿರುವುದರಿಂದ ತಮ್ಮ ಸಿನಿಮಾಗೆ ಅದು ದೊಡ್ಡ ಮಟ್ಟದಲ್ಲಿ ಪೆಟ್ಟು ನೀಡುತ್ತಿದೆ ಎಂದು ಆರೋಪಿಸಲಾಗಿದೆ.

    ಮೊನ್ನೆಯಷ್ಟೇ ವಿಜಯ್ ದೇವರಕೊಂಡ (Vijay Devarakonda) ನಟನೆಯ ‘ಫ್ಯಾಮಿಲಿ ಸ್ಟಾರ್’ (Family Star) ಸಿನಿಮಾ ರಿಲೀಸ್ ಆಗಿದೆ. ರಿಲೀಸ್ ಆದ ಎರಡನೇ ದಿನಕ್ಕೆ ಚಿತ್ರಮಂದಿರದಲ್ಲಿ ಡುಮ್ಕಿ ಹೊಡೆದಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆಯಂತೆ. ವಿಜಯ್ ಮತ್ತು ಮೃಣಾಲ್ ಠಾಕೂರ್ (Mrunal Thakur) ನಟನೆಯ ಈ ಚಿತ್ರದ ಮೇಲೆ ಭಾರೀ ನಿರೀಕ್ಷೆಯಿತ್ತು. ಆದರೆ ಸಿನಿಮಾ ಈಗ ನೆಲಕಚ್ಚಿದೆ ಎನ್ನುವ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ಲೈಗರ್, ಖುಷಿ ಸಿನಿಮಾದ ನಂತರ ‘ಫ್ಯಾಮಿಲಿ ಸ್ಟಾರ್’ ಚಿತ್ರದ ಮೇಲೆ ಫ್ಯಾನ್ಸ್‌ಗೆ ನಿರೀಕ್ಷೆಯಿತ್ತು. ಈ ಸಿನಿಮಾ ವಿಜಯ್ ದೇವರಕೊಂಡ ಕೆರಿಯರ್‌ಗೆ ತಿರುವು ಕೊಡಲಿದೆ ಎಂದೇ ಹೇಳಲಾಗಿತ್ತು. ಆದರೆ ಚಿತ್ರದ ಕುರಿತು ಇದೀಗ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಲೆಕ್ಷನ್‌ನಲ್ಲಿ ಸಿನಿಮಾ ಎಡವಿದೆ.‌

     

    ವಿಜಯ್ ಮತ್ತು ಮೃಣಾಲ್ (Mrunal Thakur) ಟ್ರ್ಯಾಕ್ ಅದ್ಭುತವಾಗಿ ಮೂಡಿ ಬಂದಿದೆ. ಕಥೆಯಲ್ಲಿ ಸಿನಿಮಾ ತಂಡ ಪಲ್ಟಿ ಹೊಡೆದಿದೆ. ಸ್ಟೋರಿ ಲೈನ್ ಜನರ ಗಮನ ಸೆಳೆಯುವಲ್ಲಿ ವಿಫಲವಾಗಿದೆ ಎನ್ನುವುದು ಹರಿದು ಬರುತ್ತಿರುವ ಮಾಹಿತಿ. ಏ.5ರಂದು ಫ್ಯಾಮಿಲಿ ಸ್ಟಾರ್ ತೆಲುಗು ಮತ್ತು ತಮಿಳಿನಲ್ಲಿ ರಿಲೀಸ್ ಆಗಿದೆ.

  • ‘ಫ್ಯಾಮಿಲಿ ಸ್ಟಾರ್’ ಜೊತೆ ಒಂದಾದ ರಶ್ಮಿಕಾ ಮಂದಣ್ಣ

    ‘ಫ್ಯಾಮಿಲಿ ಸ್ಟಾರ್’ ಜೊತೆ ಒಂದಾದ ರಶ್ಮಿಕಾ ಮಂದಣ್ಣ

    ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಈ ಬಾರಿ ಅವರು ನಾಯಕಿಯಾಗಿ ನಟಿಸುವುದರ ಬದಲು ಅತಿಥಿ ಪಾತ್ರವನ್ನು ಮಾಡಲಿದ್ದಾರೆ ಎನ್ನುವ ಮಾಹಿತಿ ಇದೆ. ವಿಜಯ್ ದೇವರಕೊಂಡ (Vijay Devarakonda) ಹಾಗೂ ಮೃಣಾಲ್ (Mrunal) ಕಾಂಬಿನೇಷನ್ ನ ಫ್ಯಾಮಿಲಿ ಸ್ಟಾರ್  (Family Star) ಸಿನಿಮಾದಲ್ಲಿ ರಶ್ಮಿಕಾ ಅತಿಥಿ ಪಾತ್ರ ಮಾಡಲಿದ್ದಾರೆ ಎನ್ನುವ ಮಾಹಿತಿ ಹರಿದಾಡುತ್ತಿದೆ.

    ರಶ್ಮಿಕಾ ಮಂದಣ್ಣ (Rashmika Mandanna) ಈಗ ಪ್ಯಾನ್ ಇಂಡಿಯಾ ಸ್ಟಾರ್ ನಟಿಯಾಗಿ ಮಿಂಚ್ತಿದ್ದಾರೆ. ಸದ್ಯ ಬಾಲಿವುಡ್‌ನ ‘ಅನಿಮಲ್’ (Animal) ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ತಮ್ಮ ತಂಡದ ಜೊತೆ ನಟಿ ಬೆಂಗಳೂರಿಗೆ ಬಂದಿದ್ದರು. ಸಿನಿಮಾ ಬಗ್ಗೆ ಹಲವು ವಿಚಾರಗಳ ಮಾತನಾಡಿದರು. ಈ ವೇಳೆ, ಮತ್ತೆ ಕನ್ನಡ ಸಿನಿಮಾದಲ್ಲಿ ರಶ್ಮಿಕಾ ನಟಿಸಲಿದ್ದಾರಾ ಎಂಬ ಮಾತು ತೂರಿ ಬಂತು.

    ಈ ಕುರಿತು ಮಾತನಾಡಿರುವ ರಶ್ಮಿಕಾ, ನಾನು ಪ್ಯಾನ್ ಇಂಡಿಯಾ ಸಿನಿಮಾ ಮಾಡುವಾಗ ಕನ್ನಡದಲ್ಲಿ ಡಬ್ ಮಾಡುವ ಅವಕಾಶ ಸಿಕ್ಕರೆ, ಖಂಡಿತಾ ಮಾಡ್ತೀನಿ. ಇನ್ನೂ ನನಗೆ ಅನಿಸುತ್ತಾ ಇಲ್ಲ, ನಾನು ಕನ್ನಡ ಇಂಡಸ್ಟ್ರಿಯಿಂದ ದೂರ ಇದ್ದೀನಿ ಅಂತ. ಅದರಲ್ಲೂ ಕನ್ನಡದ ಸಿನಿಮಾ ಬಗ್ಗೆ ಇದೀಗ ಮಾತುಕತೆ ನಡೆಯುತ್ತಿದೆ. ಅದರ ಬಗ್ಗೆ ಸದ್ಯದಲ್ಲೇ ಮಾಹಿತಿ ಕೊಡ್ತೀನಿ. ಅವಕಾಶ ಸಿಕ್ಕರೆ ಕಂಡಿತಾ ಕನ್ನಡದ ಸಿನಿಮಾದಲ್ಲಿ ನಟಿಸುತ್ತೇನೆ ಎಂದಿದ್ದಾರೆ.

  • ನಾನಿ 30ನೇ ಸಿನಿಮಾಗೆ ಟೈಟಲ್ ಫಿಕ್ಸ್: ಮೃಣಾಲ್ ನಾಯಕಿ

    ನಾನಿ 30ನೇ ಸಿನಿಮಾಗೆ ಟೈಟಲ್ ಫಿಕ್ಸ್: ಮೃಣಾಲ್ ನಾಯಕಿ

    ಸರಾ ಸಿನಿಮಾ ಮೂಲಕ ಬ್ಲಾಕ್ ಬಸ್ಟರ್ ಹಿಟ್ ಬಳಿಕ ನ್ಯಾಚುರಲ್ ಸ್ಟಾರ್ ನಾನಿ ನಟಿಸುತ್ತಿರುವ 30ನೇ ಸಿನಿಮಾಗೆ ಟೈಟಲ್ ಫಿಕ್ಸ್ ಮಾಡಲಾಗಿದೆ. ಸಣ್ಣದೊಂದು ಝಲಕ್ ಮೂಲಕ ಚಿತ್ರತಂಡ ಶೀರ್ಷಿಕೆಯನ್ನು ಘೋಷಿಸಿದೆ. ನಾನಿ 30 ಚಿತ್ರಕ್ಕೆ ‘ಹಾಯ್ ನಾನ್ನ’ ಎಂಬ ಶೀರ್ಷಿಕೆಯನ್ನು ಇಡಲಾಗಿದೆ.

    ಹಾಯ್ ನಾನ್ನ ಎಂಬ ತೆಲುಗು ಸಾಲಿನ ಅರ್ಥ ‘ಹಾಯ್ ಅಪ್ಪ’ ಎಂಬುದಾಗಿದೆ. ಸೌತ್ ಭಾಷೆಯಲ್ಲಿ ಒಂದೇ ಟೈಟಲ್ ಇರಲಿ ಎಂಬ ಉದ್ದೇಶದಿಂದ ಚಿತ್ರತಂಡ ಕನ್ನಡ, ತಮಿಳು, ಮಲಯಾಳಂ ಭಾಷೆಯಲ್ಲಿಯೂ ಹಾಯ್ ನಾನ್ನ ಎಂದೇ ಶೀರ್ಷಿಕೆ ಫಿಕ್ಸ್ ಮಾಡಿದೆ. ಇದನ್ನೂ ಓದಿ:ಗಂಡು ಮಗುವಿಗೆ ಜನ್ಮ ನೀಡಿದ ರಾಧಿಕಾ ರಾವ್

    ಮೆಗಾಸ್ಟಾರ್ ಚಿರಂಜೀವಿ ಆಶೀರ್ವಾದೊಂದಿಗೆ ಕಿಕ್ ಸ್ಟಾರ್ಟ್ ಸಿಕ್ಕಿರುವ ನಾನಿ 30ನೇ ಸಿನಿಮಾವನ್ನು, ಶೌರ್ಯುವ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನಿರ್ದೇಶಕನಾಗಿ ಇದು ಇವರ ಮೊದಲ ಸಿನಿಮಾವಾಗಿದೆ. ಎಮೋಶನಲ್ ಫ್ಯಾಮಿಲಿ ಎಂಟರ್ ಟೇನ್ಮೆಂಟ್ ಸಬ್ಜೆಕ್ಟ್ ಒಳಗೊಂಡ ಈ ಚಿತ್ರ ಅಪ್ಪ-ಮಗಳ ಬಾಂದವ್ಯದ ಸುತ್ತ ಹೆಣೆಯಲಾದ ವಿಭಿನ್ನ ಕಥಾಹಂದರ ಒಳಗೊಂಡಿದೆ. ನಾನಿ ಜೋಡಿಯಾಗಿ ‘ಸೀತಾ ರಾಮಂ’ ಖ್ಯಾತಿಯ ಮೃಣಾಲ್ ಠಾಕೂರ್ ತೆರೆ ಹಂಚಿಕೊಳ್ಳುತ್ತಿದ್ದಾರೆ.

    ವೈರ ಎಂಟಟೈನ್ಮೆಂಟ್ಸ್ ಬ್ಯಾನರ್ ನಡಿ ಮೋಹನ್ ಚೆರುಕುರಿ, ಡಾ.ವಿಜೇಂದ್ರ ರೆಡ್ಡಿ ಹಾಗೂ ಮೂರ್ತಿ ಕಲಗಾರ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಸಾನು ಜಾನ್ ವರ್ಗೀಸ್ ISC ಕ್ಯಾಮೆರಾ ವರ್ಕ್ ಚಿತ್ರಕ್ಕಿರಲಿದ್ದು, ‘ಹೃದಯಂ’ ಸಿನಿಮಾ ಖ್ಯಾತಿಯ ಹೇಶಮ್ ಅಬ್ದುಲ್ ವಹಾಬ್ ಸಂಗೀತ ನಿರ್ದೇಶನ, ಪ್ರವೀಣ್ ಆಂಥೋನಿ ಸಂಕಲನ ಚಿತ್ರಕ್ಕಿರಲಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಶ್ಮಿಕಾ ಮಂದಣ್ಣರ ‘ನ್ಯಾಷನಲ್ ಕ್ರಶ್’ ಪಟ್ಟ ಕಿತ್ತುಕೊಂಡ ಮೃಣಾಲ್

    ರಶ್ಮಿಕಾ ಮಂದಣ್ಣರ ‘ನ್ಯಾಷನಲ್ ಕ್ರಶ್’ ಪಟ್ಟ ಕಿತ್ತುಕೊಂಡ ಮೃಣಾಲ್

    ನ್ನಡದ ಹೆಸರಾಂತ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರಿಗೆ ನ್ಯಾಷನಲ್ ಕ್ರಶ್ ಎಂದು ಹೆಮ್ಮೆಯಿಂದ ಅಭಿಮಾನಿಗಳು ಕರೆಯುತ್ತಿದ್ದರು. ಸಾಲು ಸಾಲು ಚಿತ್ರಗಳು ಹಿಟ್ ಆದ ಹಿನ್ನೆಲೆಯಲ್ಲಿ 2020ರಲ್ಲಿ ಗೂಗಲ್ ನ್ಯಾಷನಲ್ ಕ್ರಶ್ (National Crush) ಟ್ರೆಂಡಿಂಗ್ ಪಟ್ಟವನ್ನು ರಶ್ಮಿಕಾಗೆ ನೀಡಿತ್ತು. ಇದೀಗ  ಆ ಪಟ್ಟವನ್ನು ಮತ್ತೋರ್ವ ನಟಿ ಕಸಿದುಕೊಂಡಿದ್ದಾರೆ.

    ಈ ಬಾರಿಯ ಕಾನ್ ಚಿತ್ರೋತ್ಸವದಲ್ಲಿ ಮೃಣಾಲ್ (Mrunal Thakur) ಭಾಗಿಯಾಗಿದ್ದಾರೆ. ಕಾನ್ ಫೆಸ್ಟಿವೆಲ್ ನಲ್ಲಿ ಭಾಗಿಯಾದ ಫೋಟೋಗಳನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆ ಫೋಟೋಗಳು ವೈರಲ್ ಆಗಿದ್ದು, ನೆಟ್ಟಿಗರು ಮೃಣಾಲ್ ಗೆ ನ್ಯಾಷನಲ್ ಕ್ರಶ್ ಎಂದು ಕರೆದಿದ್ದಾರೆ. ಅದು ಟ್ರೆಂಡ್ ಕೂಡ ಆಗಿದೆ. ಹೀಗಾಗಿ ರಶ್ಮಿಕಾ ಹೆಸರಿನಲ್ಲಿದ್ದ ಆ ಹೊಗಳಿಕೆ ಇದೀಗ ಮೃಣಾಲ್ ಗೆ ಸಿಕ್ಕಿದೆ.

    ಟಾಲಿವುಡ್ ನ ಸೀತಾ ರಾಮಂ  ಸಿನಿಮಾದ ಮೂಲಕ ಗಮನ ಸೆಳೆದವರು ಮೃಣಾಲ್. ಇದು ಇವರ ಮೊದಲ ಚಿತ್ರವಾದರೂ, ಸಾಕಷ್ಟು ಹೆಸರು ತಂದುಕೊಟ್ಟಿತು. ಈ ಸಿನಿಮಾದಲ್ಲಿನ ನಟನೆಗೆ ಬಹುತೇಕರು ಫಿದಾ ಆಗಿದ್ದರು. ಆ ಸಿನಿಮಾನೇ ಇಂದು ಕಾನ್ ಚಿತ್ರೋತ್ಸವಕ್ಕೆ ಹೋಗುವಂತೆ ಮಾಡಿದೆ. ಅಲ್ಲದೇ, ಮೃಣಾಲ್ ಧರಿಸಿದ್ದ ಕಾಸ್ಟ್ಯೂಮ್ ಕೂಡ ಟ್ರೆಂಡ್ ಆಗಿದೆ. ಟಾಲಿವುಡ್ (Tollywood) ನಲ್ಲೇ ರಶ್ಮಿಕಾ ಮತ್ತು ಮೃಣಾಲ್ ಗೆ ಪೈಪೋಟಿ ಏರ್ಪಟ್ಟಿದೆ.

    ರಶ್ಮಿಕಾ ಮಂದಣ್ಣ ಕನ್ನಡ ಚಿತ್ರರಂಗದ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟವರು. ಆನಂತರ ತಮಿಳು, ತೆಲುಗಿನಲ್ಲೂ ಹಲವು ಚಿತ್ರಗಳನ್ನು ಮಾಡಿದರು. ಕೇವಲ ದಕ್ಷಿಣದ ಸಿನಿಮಾಗಳಲ್ಲಿ ಮಾತ್ರವಲ್ಲ, ಹಿಂದಿಯಲ್ಲೂ ಇದೀಗ ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಬಾಲಿವುಡ್ ನಲ್ಲೂ ಅವರು ಬ್ಯುಸಿಯಾಗಿದ್ದಾರೆ.

  • ಸೀತಾ ರಾಮ್ ಹುಡುಕಾಟದಲ್ಲಿ ರಶ್ಮಿಕಾ ಮಂದಣ್ಣ: ಹೇಗಿದೆ ಸಿನಿಮಾದ ಟ್ರೈಲರ್‌?

    ಸೀತಾ ರಾಮ್ ಹುಡುಕಾಟದಲ್ಲಿ ರಶ್ಮಿಕಾ ಮಂದಣ್ಣ: ಹೇಗಿದೆ ಸಿನಿಮಾದ ಟ್ರೈಲರ್‌?

    ಕ್ಷಿಣ ಭಾರತದ ಟಾಪ್ ನಟಿಯರ ಸಾಲಿನಲ್ಲಿ ಒಬ್ಬರಾಗಿ ಗಮನ ಸೆಳೆದಿರುವ ರಶ್ಮಿಕಾ ಮಂದಣ್ಣ ಈಗ ಮಾಲಿವುಡ್‌ನಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಸದ್ಯ ಸೀತಾ ರಾಮಂ ಟ್ರೈಲರ್‌ ಮೂಲಕ ʻಪುಷ್ಪʼ ಬ್ಯೂಟಿ ಹೈಪ್ ಕ್ರಿಯೇಟ್ ಮಾಡಿದ್ದಾರೆ. ಸೀತಾ ರಾಮ್‌ನನ್ನು ಹುಡುಕಿ ಹೊರಟಿರೋ ರಶ್ಮಿಕಾ ಮಂದಣ್ಣ ಪಾತ್ರದ ಕುರಿತು ಅಭಿಮಾನಿಗಳ ವಲಯದಲ್ಲಿ ಕ್ಯೂರಿಯಸ್ ಬಿಲ್ಡ್ ಆಗಿದೆ.

     

    View this post on Instagram

     

    A post shared by Vyjayanthi Movies (@vyjayanthimovies)

    ದುಲ್ಕರ್ ಸಲ್ಮಾನ್, ಮೃಣಾಲ್, ರಶ್ಮಿಕಾ ನಟನೆಯ `ಸೀತಾ ರಾಮಂ’ ಚಿತ್ರದ ಟ್ರೈಲರ್‌ ರಿಲೀಸ್ ಆಗಿದೆ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಈ ಪ್ರೇಮಕಥೆ ವ್ಯಾಪಿಸಿದೆ. ಚಿತ್ರದಲ್ಲಿ ದುಲ್ಕರ್ ರಾಮ್ ಪಾತ್ರ ನಿರ್ವಹಿಸಿದ್ದು, ಲೆಫ್ಟಿನೆಂಟ್ ಆಗಿ ಕಾಣಿಸಿಕೊಂಡ್ರೆ, ನಾಯಕಿ ಮೃಣಾಲ್ ಸೀತಾ ಪಾತ್ರಕ್ಕೆ ಜೀವತುಂಬಿದ್ದಾರೆ. ಇವರಿಬ್ಬರಿಗೂ ಹೇಗೆ ಪ್ರೀತಿ ಮೂಡುತ್ತದೆ ಎಂದು ತೋರಿಸಲಾಗಿದೆ. ಇದನ್ನೂ ಓದಿ:ಸಿನಿಮಾರಂಗಕ್ಕೆ ಗುಡ್ ಬೈ: ರಾಜಕೀಯ ಅಖಾಡಕ್ಕೆ ರಶ್ಮಿಕಾ ಮಂದಣ್ಣ

    ಸೀತಾ ರಾಮ್ ಪ್ರೀತಿ ಸಾಗೋದು 1964ರ ಕಥೆಯಾಗಿದೆ. ಈ ಘಟನೆ ನಡೆದು 20 ವರ್ಷಗಳ ನಂತರ ರಶ್ಮಿಕಾ ಅವರನ್ನು ಹುಡುಕಿ ಬರುತ್ತಾರೆ. ಈ ಕಥೆಯ ಎಳೆಯನ್ನೇ ಟ್ರೈಲರ್‌ನಲ್ಲಿ ತೋರಿಸಲಾಗಿದೆ. ಇದೊಂದು ಪಕ್ಕಾ ಮ್ಯಾಜಿಕಲ್ ಲವ್ ಸ್ಟೋರಿಯಾಗಿದ್ದು, ಇದೇ ಆಗಸ್ಟ್ 5ಕ್ಕೆ ತೆರೆಗೆ ಬರಲಿದೆ. ತೆಲುಗು, ಮಲಯಾಳಂ, ತಮಿಳು ಮತ್ತು ಹಿಂದಿಯಲ್ಲಿ ತೆರೆ ಕಾಣಲಿದೆ. ಹನು ರಾಘವಪುಡಿ ನಿರ್ದೇಶನದ ಈ ಚಿತ್ರ ಸದ್ಯ ಟ್ರೈಲರ್‌ ಮತ್ತು ಬ್ಯೂಟಿಫುಲ್ ಹಾಡುಗಳ ಮೂಲಕ ಮೋಡಿ ಮಾಡುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಹಿಂದಿ ಆಯ್ತು, ಇದೀಗ ಮರಾಠಿಯಲ್ಲೂ ಕನ್ನಡದ ದಿಯಾ

    ಹಿಂದಿ ಆಯ್ತು, ಇದೀಗ ಮರಾಠಿಯಲ್ಲೂ ಕನ್ನಡದ ದಿಯಾ

    ಪೃಥ್ವಿ ಅಂಬರ್ ಮುಖ್ಯ ಭೂಮಿಕೆಯಲ್ಲಿ ಮೂಡಿ ಬಂದ ‘ದಿಯಾ’ ಸಿನಿಮಾ 2020ರಲ್ಲಿ ರಿಲೀಸ್ ಆಗಿ, ಬಾಕ್ಸ್ ಆಫೀಸ್ ಅನ್ನು ಭರ್ತಿ ಮಾಡಿತ್ತು. ಬಹುತೇಕ ಹೊಸಬರೇ ತುಂಬಿದ್ದ ಈ ಸಿನಿಮಾ ಕೇವಲ ಹಣ ಗಳಿಕೆಯಲ್ಲಿ ಮಾತ್ರವಲ್ಲ, ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು. ವಿಮರ್ಶೆಕರೂ ಮೆಚ್ಚಿಕೊಂಡಿದ್ದರು. ಹೀಗಾಗಿ ಪೃಥ್ವಿ ಅಂಬರ್ ಯುವ ಪೀಳಿಗೆಯ ಭರವಸೆಯ ನಟ ಅನಿಸಿಕೊಂಡರು. ಇದನ್ನೂ ಓದಿ : ಸಿಂಬು ನಟನೆಯ ಚಿತ್ರಕ್ಕೆ ಐಶ್ವರ್ಯ ರಜನೀಕಾಂತ್ ನಿರ್ದೇಶಕಿ

    ನಂತರ ಈ ಸಿನಿಮಾವನ್ನು ಹಿಂದಿಯಲ್ಲಿ ರಿಮೇಕ್ ಮಾಡಲಾಯಿತು. ಹಿಂದಿಯಲ್ಲಿ ರೀಮೇಕ್ ಆದರೂ, ನಿರ್ದೇಶಕ ಕೆ.ಎಸ್. ಅಶೋಕ್, ತನ್ನ ಹೀರೋನನ್ನು ತಮ್ಮೊಂದಿಗೆ ಬಾಲಿವುಡ್ ಗೂ ಕರೆದುಕೊಂಡು ಹೋದರೂ, ಇನ್ನೇನು ಆ ಸಿನಿಮಾ ಸಂಪೂರ್ಣ ಶೂಟಿಂಗ್ ಮುಗಿಸಿದೆ ಎನ್ನುವ ಹೊತ್ತಿಗೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ಈ ಸಿನಿಮಾ ಇದೀಗ ಮರಾಠಿಯಲ್ಲೂ ರಿಮೇಕ್ ಆಗುತ್ತಿದೆ. ಇದನ್ನೂ ಓದಿ : ಅಂದು ಸುದೀಪ್ ಪುಸ್ತಕ ಬಿಡುಗಡೆ ಮಾಡಿದ್ದ ಪುನೀತ್, ಇಂದು ಪುನೀತ್ ಪುಸ್ತಕ ಬಿಡುಗಡೆ ಮಾಡಿದ ಸುದೀಪ್

    ಹೌದು, ಕನ್ನಡದ ದಿಯಾ, ಹಿಂದಿಯ ನಂತರ ಮರಾಠಿಯಲ್ಲೂ ಮೂಡಿ ಬರಲಿದೆ. ವಿಶೇಷ ಅಂದರೆ, ನಾಯಕ ಪೃಥ್ವಿ ಅಂಬರ್ ಮರಾಠಿ ಸಿನಿಮಾದಲ್ಲೂ ನಾಯಕನಾಗಿ ಮುಂದುವರೆಯಲಿದ್ದಾರೆ. ಸಿನಿಮಾ ಮರಾಠಿಯಲ್ಲಿ ಮೂಡಿ ಬಂದರೂ, ಕನ್ನಡದ ನೆಲದಲ್ಲೇ ಚಿತ್ರವನ್ನು ಶೂಟ್ ಮಾಡಲಾಗುತ್ತಿದೆ. ಇತ್ತೀಚೆಗಷ್ಟೇ ಬೆಂಗಳೂರಿನಲ್ಲೇ ಚಿತ್ರಕ್ಕೆ ಮುಹೂರ್ತ ನಡೆದಿದೆ. ಮೈಸೂರು, ಮಂಗಳೂರು ಸೇರಿದಂತೆ ಇತರ ಸ್ಥಳಗಳಲ್ಲಿ ಶೂಟಿಂಗ್ ಮಾಡುವ ಪ್ಲ್ಯಾನ್ ಚಿತ್ರತಂಡದ್ದು. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ : ಬಾಲಿವುಡ್ ಮೇಲೆ ಕಿಡಿಕಾರಿದ ಕಂಗನಾ ರಣಾವತ್

    ನಾಯಕಿಯಾಗಿ ರಿತಿಕಾ ಶ್ರೋತ್ರಿ ನಟಿಸುತ್ತಿದ್ದು, ಕಿರುತೆರೆ ನಟಿ ಅಜಿಂಕ್ಯಾ ರಾವುದ್, ಮೃಣಾಲ್ ಕುಲಕರ್ಣಿ ಸೇರಿದಂತೆ ಹಲವು ಕಲಾವಿದರು ತಾರಾಗಣದಲ್ಲಿ ಇರಲಿದ್ದಾರೆ.

  • ಪುತ್ರನ ವಿವಾಹ ಆರತಕ್ಷತೆಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಸಖತ್ ಸ್ಟೆಪ್ಸ್

    ಪುತ್ರನ ವಿವಾಹ ಆರತಕ್ಷತೆಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಸಖತ್ ಸ್ಟೆಪ್ಸ್

    ಬೆಳಗಾವಿ: ಪುತ್ರನ ವಿವಾಹ ಆರತಕ್ಷಣೆಯಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸಖತ್ ಸ್ಟೆಪ್ಸ್ ಹಾಕಿ ಸುದ್ದಿಯಾಗಿದ್ದಾರೆ.

    ಗೋವಾದ ಲೀಲಾ ಪ್ಯಾಲೇಸ್‍ನಲ್ಲಿ 4 ದಿನಗಳ ಕಾಲ ಪುತ್ರನ ವಿವಾಹ ಸಮಾರಂಭ ನಡೆದಿತ್ತು. ಈ ಸಂದರ್ಭದಲ್ಲಿ ಶಾಸಕಿ ಡ್ಯಾನ್ಸ್ ಮಾಡಿದ್ದು, ಇದರ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ಕಾಂಗ್ರೆಸ್ ಶಾಸಕಿ, ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹಾಗೂ ಭದ್ರಾವತಿ ಶಾಸಕ ಬಿ.ಕೆ ಸಂಗಮೇಶ್ ಸಹೋದರ ಬಿ.ಕೆ ಶಿವಕುಮಾರ್ ಪುತ್ರಿ ಡಾ. ಹಿತಾ ಅವರ ಅದ್ದೂರಿ ವಿವಾಹ ಕಳೆದ ಶುಕ್ರವಾರ ನಡೆದಿದೆ. ಕೋವಿಡ್ ಹಿನ್ನೆಲೆ ಆಪ್ತರು, ಗಣ್ಯರಿಗೆ ಮಾತ್ರ ವಿವಾಹ ಸಮಾರಂಭಕ್ಕೆ ಆಹ್ವಾನ ಮಾಡಿದ್ದರು.

    ಗೋವಾದಲ್ಲಿ ನಡೆದ ಮದುವೆ ಸಮಾರಂಭಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಮಾಜಿ ಸಚಿವ ಯು.ಟಿ.ಖಾದರ್, ಶಾಸಕ ಅಜಯ್ ಸಿಂಗ್, ಮಾಜಿ ಶಾಸಕ ಅಶೋಕ್ ಪಟ್ಟಣ್, ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸೇರಿ ಹಲವು ಗಣ್ಯರು ಭಾಗಿಯಾಗಿದ್ದರು.

  • ನಾಳೆ ಗೋವಾದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರನ ಅದ್ಧೂರಿ ವಿವಾಹ

    ನಾಳೆ ಗೋವಾದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರನ ಅದ್ಧೂರಿ ವಿವಾಹ

    ಬೆಳಗಾವಿ: ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮದುವೆ ಅದ್ಧೂರಿಯಾಗಿ ನಾಳೆ ಗೋವಾದಲ್ಲಿ ನಡೆಯಲಿದೆ.

    ಗೋವಾದ ಲೀಲಾ ಪ್ಯಾಲೇಸ್ ಹೋಟೆಲ್‍ನಲ್ಲಿ ನಡೆಯುವ ಅದ್ಧೂರಿ ಕಾರ್ಯಕ್ರಮದಲ್ಲಿ ಹೆಬ್ಬಾಳ್ಕರ್ ಪುತ್ರ ಮೃಣಾಲ್, ಡಾ.ಹಿತಾ ಅವರ ಕೈಹಿಡಿಯಲಿದ್ದಾರೆ. ನಿನ್ನೆ ರಾತ್ರಿ ಮೆಹಂದಿ ಕಾರ್ಯಕ್ರಮ ನೆರವೇರಿದ್ದು, ಇಂದು ಹಳದಿ ಕಾರ್ಯಕ್ರಮ ನಡೆಯಲಿದೆ. ಡಾ.ಹಿತಾ ಅವರು ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ ಸಹೋದರ ಬಿ.ಕೆ.ಶಿವಕುಮಾರ್ ಪುತ್ರಿ.

    ನಾಳೆ ವಿವಾಹ ಸಮಾರಂಭದಲ್ಲಿ ಗಣ್ಯಾತಿಗಣ್ಯರು ಪಾಲ್ಗೊಳ್ಳುವ ಸಾಧ್ಯತೆ ಇದೆ. ಕೋವಿಡ್ ಹಿನ್ನೆಲೆ ಆಪ್ತರು, ಗಣ್ಯರಿಗೆ ಮಾತ್ರ ವಿವಾಹ ಸಮಾರಂಭಕ್ಕೆ ಆಹ್ವಾನ ನೀಡಲಾಗಿದ್ದು, ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಈಶ್ವರ ಖಂಡ್ರೆ ಪಾಲ್ಗೊಳ್ಳುವ ನಿರೀಕ್ಷೆ ಇದೆ.

    ದೆಹಲಿಯಲ್ಲಿ ವಿಪರೀತ ವಾಯು ಮಾಲಿನ್ಯ ಹಿನ್ನೆಲೆಯಲ್ಲಿ ಈಗಾಗಲೇ ಸೋನಿಯಾ ಗಾಂಧಿ ವೈದ್ಯರ ಸಲಹೆ ಮೇರೆಗೆ ಗೋವಾದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

  • ರಾತ್ರಿ ನಿದ್ದೆ ಬರುತ್ತಿಲ್ಲ, ಕಣ್ಣಲ್ಲಿ ನೀರು ಬರುತ್ತೆ, ತಾಯಿ ಕಷ್ಟ ನೋಡಿ ತಡೆದುಕೊಳ್ಳಲು ಆಗುತ್ತಿಲ್ಲ- ಹೆಬ್ಬಾಳ್ಕರ್ ಪುತ್ರ

    ರಾತ್ರಿ ನಿದ್ದೆ ಬರುತ್ತಿಲ್ಲ, ಕಣ್ಣಲ್ಲಿ ನೀರು ಬರುತ್ತೆ, ತಾಯಿ ಕಷ್ಟ ನೋಡಿ ತಡೆದುಕೊಳ್ಳಲು ಆಗುತ್ತಿಲ್ಲ- ಹೆಬ್ಬಾಳ್ಕರ್ ಪುತ್ರ

    ಬೆಳಗಾವಿ: ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಇಡಿ ಅಧಿಕಾರಿಗಳು ಎರಡು ದಿನಗಳ ಕಾಲ ವಿಚಾರಣೆ ನಡೆಸಿದ್ದು, ಈ ಕುರಿತು ಶಾಸಕಿ ಪುತ್ರ ಮೃಣಾಲ್ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

    ತಾಲೂಕಿನ ಹಿರೇಬಾಗೇವಾಡಿ ಗ್ರಾಮದಲ್ಲಿ ನಡೆದ ಕೆರೆ ಅಭಿವೃದ್ಧಿ ಕುರಿತ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿರುವ ಅವರು, ನನ್ನ ತಾಯಿ ಕಷ್ಟ ನೋಡಿ ನನಗೆ ತಡೆದುಕೊಳ್ಳಲು ಆಗುತ್ತಿಲ್ಲ. ರಾತ್ರಿ ಸರಿಯಾಗಿ ನಿದ್ದೆ ಬರುವುದಿಲ್ಲ, ಕಣ್ಣಲ್ಲಿ ನೀರು ಬರುತ್ತವೆ ಎಂದು ಕ್ಷೇತ್ರದ ಮತದಾರರ ಮುಂದೆ ಮೃಣಾಲ್ ಅಳಲು ತೊಡಿಕೊಂಡಿದ್ದಾರೆ.

    ಯಾವುದೇ ಕಷ್ಟದಲ್ಲೂ ನನ್ನ ತಾಯಿ ಮುಖದಲ್ಲಿ ನಗು ಇರುತ್ತದೆ. ನನ್ನ ತಾಯಿಯ ಈ ಗುಣವನ್ನು ನಾವು ಕಲಿಯಬೇಕು. ನಿಮಗೆ ಕಾಲು ಮುಗಿದು ಕೇಳುತ್ತೇನೆ ನಿಮ್ಮ ಆಶೀರ್ವಾದ ನಮ್ಮ ತಾಯಿಯ ಮೇಲೆ ಇರಲಿ. ನಿಮ್ಮ ಆಶೀರ್ವಾದ ಇದ್ದಷ್ಟು ಒಳ್ಳೆ ಕೆಲಸ ಕ್ಷೇತ್ರದಲ್ಲಿ ಮಾಡುತ್ತೇವೆ. ನನ್ನ ತಾಯಿ ಕಾರಣಾಂತರಗಳಿಂದ ಈ ಕಾರ್ಯಕ್ರಮಕ್ಕೆ ಬಂದಿಲ್ಲ. ತಾಯಿ ಕಾರ್ಯಕ್ರಮಕ್ಕೆ ಬಾರಲು ಸಾಧ್ಯವಾಗಿಲ್ಲ. ಹೀಗಾಗಿ ನಾನು ಬಂದಿದ್ದೇನೆ ಎಂದು ತಿಳಿಸಿದರು.

    ಶುಕ್ರವಾರವೂ ಸಹ ಇಡಿ ಅಧಿಕಾರಿಗಳ ಎದುರು 2ನೇ ದಿನ ವಿಚಾರಣೆಗೆ ಹಾಜರಾಗಿದ್ದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ 6 ಗಂಟೆಗಳ ವಿಚಾರಣೆ ಎದುರಿಸಿದ್ದರು. ಮಧ್ಯಾಹ್ನ 12 ಗಂಟೆ ವೇಳೆಗೆ ಇಡಿ ಕಚೇರಿಗೆ ತೆರಳಿದ್ದ ಅವರು, ನಗುಮುಖದೊಂದಿಗೆ ಕಂಡರು. ಆದರೆ ಗುರುವಾರ ವಿಚಾರಣೆಗೆ ತೆರಳಿದ್ದ ವೇಳೆ ಅವರ ಮುಖದಲ್ಲಿ ಆತಂಕ ಕಂಡು ಬಂದಿತ್ತು. ಗುರುವಾರ ವಿಚಾರಣೆ ಅಂತ್ಯವಾದ ಬಳಿಕ ಮತ್ತೆ ಶುಕ್ರವಾರ ವಿಚಾರಣೆಗೆ ಬರುವಂತೆ ಇಡಿ ಅಧಿಕಾರಿಗಳು ಸೂಚಿಸಿದ್ದರು.

    ಶುಕ್ರವಾರ ವಿಚಾರಣೆಗೆ ಲಕ್ಷ್ಮಿ ಹೆಬ್ಬಾಳ್ಕರ್ ಹಲವು ದಾಖಲೆಗಳೊಂದಿಗೆ ಹಾಜರಾಗಿದ್ದರು. ಇಡಿ ಅಧಿಕಾರಿಗಳು ಲಕ್ಷ್ಮಿ ಹೆಬ್ಬಾಳ್ಕರ್ ಅವರಿಂದ ದಾಖಲೆ ಸಮೇತ ಮಾಹಿತಿ ಪಡೆದಿದ್ದಾರೆ. ವಿಚಾರಣೆಯ ವೇಳೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರೊಂದಿಗೆ ನಡೆಸಿರುವ ಆರ್ಥಿಕ ವ್ಯವಹಾರಗಳ ಬಗ್ಗೆ ಇಡಿ ಅಧಿಕಾರಿಗಳು ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಪ್ರಶ್ನಿಸಿದ್ದಾರೆ. ಅಲ್ಲದೇ ವಿವಿಧ ಕಂಪನಿಗಳಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಹೂಡಿಕೆ ಹಾಗೂ ಹೂಡಿಕೆ ಮಾಡಿರುವ ಹಣದ ಮೂಲದ ಬಗ್ಗೆ ಮಾಹಿತಿ ಪಡೆದಿದ್ದಾರೆ ಎಂಬ ಸಂಗತಿ ಮೂಲಗಳಿಂದ ಲಭಿಸಿದೆ.

    ವಿಚಾರಣೆಯ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ನಾಳೆ ಮತ್ತೆ ವಿಚಾರಣೆಗೆ ಇಡಿ ಅಧಿಕಾರಿಗಳು ಸಮನ್ಸ್ ನೀಡಿಲ್ಲ. ಮುಂದೆ ವಿಚಾರಣೆ ಬರುವ ಬಗ್ಗೆ ಅಧಿಕಾರಿಗಳು ಏನು ಹೇಳಿಲ್ಲ. ಇಂದಿನ ವಿಚಾರಣೆ ವೇಳೆ ಇಡಿ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದು, ವಿಚಾರಣೆಗೆ ಸಹಕರಿಸಿದ್ದೇನೆ ಎಂದಿದ್ದರು.

    ಡಿಕೆ ಶಿವಕುಮಾರ್ ನನ್ನ ರಾಜಕೀಯ ಗುರು ಎಂದು ಹೇಳಿದ ಲಕ್ಷ್ಮಿ ಹೆಬ್ಬಾಳ್ಕರ್, ನನ್ನನ್ನು ರಾಜಕೀಯವಾಗಿ ಡಿಕೆಶಿ ಬೆಳೆಸಿದ್ದಾರೆ. ಆದರೆ ನನ್ನ ಮತ್ತು ಡಿಕೆಶಿ ಅವರ ನಡುವೆ ಯಾವುದೇ ಹಣ ವರ್ಗಾವಣೆ ನಡೆದಿಲ್ಲ. ನಮ್ಮ ನಡುವೆ ವ್ಯವಹಾರಿಕ ಸಂಬಂಧ ಇಲ್ಲ. ಈ ಕುರಿತು ಇಡಿ ಅಧಿಕಾರಿಗಳು ಕೇಳಿದ ಪ್ರಶ್ನೆಗೆ ದಾಖಲೆ ನೀಡಿ ಉತ್ತರಿಸಿದ್ದೇನೆ. ಈ ಸಂದರ್ಭ ವಿಚಾರಣೆಗೆ ಸಂಬಂಧ ಇಷ್ಟು ಮಾತ್ರ ಹೇಳಬಲ್ಲೆ ಎಂದು ತಿಳಿಸಿದ್ದರು.