Tag: ಮೂಳೆ

  • 32 ಅಡಿ ಉದ್ದ, 8 ಅಡಿ ಅಗಲ, 18 ಅಡಿ ಆಳದ ಗುಂಡಿ ತೋಡಿದ್ರೂ  ಸಿಕ್ಕಿಲ್ಲ ಮೂಳೆ!

    32 ಅಡಿ ಉದ್ದ, 8 ಅಡಿ ಅಗಲ, 18 ಅಡಿ ಆಳದ ಗುಂಡಿ ತೋಡಿದ್ರೂ ಸಿಕ್ಕಿಲ್ಲ ಮೂಳೆ!

    ಮಂಗಳೂರು: ಸತತ ಎರಡು ದಿನಗಳಿಂದ ನಡೆಯುತ್ತಿದ್ದ ಪಾಯಿಂಟ್‌ 13ರ ಶೋಧ ಕಾರ್ಯ ಅಂತ್ಯಗೊಂಡಿದ್ದು ಯಾವುದೇ ಮೂಳೆ ಸಿಕ್ಕಿಲ್ಲ.

    ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವ ಹೂತಿರುವ (Dharmasthala Burial Case) ಮುಸುಕುಧಾರಿ ಆರೋಪದ ಮೇರೆಗೆ ಎಸ್‌ಐಟಿ ಶೋಧ ಕಾರ್ಯ ಆರಂಭಿಸಿ ಇಂದಿಗೆ 14 ಕಳೆದಿದೆ. ದೂರುದಾರನ ಮನವಿಯಂತೆ ಪಾಯಿಂಟ್ 13ರ ಉತ್ತರ ದಿಕ್ಕಿನಲ್ಲಿ ಶೋಧಕಾರ್ಯ ನಡೆಯಿತು. ಇದನ್ನೂ ಓದಿ: ಹೆಣ ಹೂತಿದ್ದು ಈತನಲ್ಲ, ಈತನೇ ಹೆಣ ಹೂತಿದ್ದು ಇಬ್ಬರು ದೂರುದಾರರ ಹೇಳಿಕೆಯಿಂದ ಎಸ್‌ಐಟಿಗೆ ಗೊಂದಲ

     

    ಸಣ್ಣ ಹಿಟಾಚಿ ಬಳಿಕ ದೊಡ್ಡ ಹಿಟಾಚಿ ಯಂತ್ರದ ಮೂಲಕ ಗುಂಡಿ ತೋಡುವ ಕಾರ್ಯ ನಡೆಯಿತು. ಉತ್ಖನನದ ವೇಳೆ ಮಳೆ ಬಂದು ಗುಂಡಿಯಲ್ಲಿ ನೀರು ಒರತೆ ರೂಪದಲ್ಲಿ ಬರುತ್ತಿತ್ತು. ಇದನ್ನೂ ಓದಿಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡೋರನ್ನ ಗುಂಡಿಕ್ಕಿ ಕೊಲ್ಲಿರೇಣುಕಾಚಾರ್ಯ

    ಎಸ್‌ಐಟಿ ಅಧಿಕಾರಿಗಳು ಪಂಪ್‌ಸೆಟ್ ಮೂಲಕ ಗುಂಡಿಯಲ್ಲಿದ್ದ ನೀರನ್ನು ಹೊರ ಹಾಕಿದರು. 32 ಅಡಿ ಉದ್ದ, 8 ಅಡಿ ಅಗಲ, 18 ಅಡಿ ಆಳ ಗುಂಡಿ ತೋಡಿದರೂ ಯಾವುದೇ ಮೂಳೆಗಳು ಪತ್ತೆಯಾಗಲಿಲ್ಲ. ಸತತ 6 ಗಂಟೆ ಕಾರ್ಯಾಚರಣೆ ನಡೆಸಿದರೂ ಏನು ಸಿಗದ ಕಾರಣ ಕೊನೆಗೆ ತೆಗೆದ ಗುಂಡಿಗೆ ಅದೇ ಮಣ್ಣನ್ನು ಸುರಿದು ಮುಚ್ಚಲಾಯಿತು.

     

  • ಗರ್ಭಿಣಿಯಾಗಲು ಮಹಿಳೆಗೆ ಮಾನವನ ಮೂಳೆ ತಿನ್ನುವಂತೆ ಒತ್ತಾಯಿಸಿದ ಪಾಪಿ ಪತಿ

    ಗರ್ಭಿಣಿಯಾಗಲು ಮಹಿಳೆಗೆ ಮಾನವನ ಮೂಳೆ ತಿನ್ನುವಂತೆ ಒತ್ತಾಯಿಸಿದ ಪಾಪಿ ಪತಿ

    ಪುಣೆ: ಗರ್ಭಿಣಿಯಾಗಲು ಮಹಿಳೆಯೊಬ್ಬಳಿಗೆ (Woman) ಮಾನವನ ಮೂಳೆಯನ್ನು (Human Bones) ತಿನ್ನುವಂತೆ ಆಕೆಯ ಪತಿ ಹಾಗೂ ಅತ್ತೆ ಒತ್ತಾಯಿಸಿದ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ (Pune) ನಡೆದಿದೆ.

    ಘಟನೆಯು ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದ್ದು, ಅತ್ತೆ ಹಾಗೂ ಪತಿ ಸೇರಿ ಮಹಿಳೆಗೆ ಮಕ್ಕಳಾಗುವಂತೆ ಮಾಟಗಾರರ (black magic) ಸಲಹೆ ಮೇರೆಗೆ ಅನೇಕ ಮೂಢನಂಬಿಕೆಗಳನ್ನು ಆಚರಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಅತ್ತೆ, ಹಾಗೂ ಪತಿ ಅಮವಾಸ್ಯೆ ಬಂದರೆ ಮಹಿಳೆಗೆ ಮಕ್ಕಳಾಗಲು ಅನೇಕ ಮೂಢ ನಂಬಿಕೆಯ ಆಚರಣೆಗಳನ್ನು ಮಾಡಲು ಒತ್ತಾಯಿಸುತ್ತಿದ್ದರು. ಅಷ್ಟೇ ಅಲ್ಲದೇ ಆಕೆಯಳೊಬ್ಬಳನ್ನೇ ರಾತ್ರಿ ಸ್ಮಶಾನಕ್ಕೆ ಕಳುಹಿಸುವುದು ಜೊತೆಗೆ ಸತ್ತ ಮಾನವರ ಮೂಳೆಗಳನ್ನು ತಿನ್ನಲು ಬಲವಂತ ಮಾಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ.

    husband forced a woman to eat human bones to get pregnant

    ಘಟನೆಗೆ ಸಂಬಂಧಿಸಿ ಮಹಿಳೆಯು ಪುಣೆ ಪೊಲೀಸರಿಗೆ ದೂರು ನೀಡಿದ್ದಾಳೆ. ಮಹಿಳೆ ನೀಡಿದ ದೂರಿನನ್ವಯ ಪತಿ, ಅತ್ತೆ ಹಾಗೂ ಮಾವ ಸೇರಿದಂತೆ 7 ಜನರ ವಿರುದ್ಧ ಮೂಢನಂಬಿಕೆ ವಿರೋಧಿ ಕಾಯ್ದೆಯಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಅರಬ್ಬೀ ಸಮುದ್ರದಲ್ಲಿ ಪರ್ಷಿಯನ್ ಬೋಟ್ ಮುಳುಗಡೆ – 17 ಮೀನುಗಾರರ ರಕ್ಷಣೆ

    POLICE

    ಈ ವೇಳೆ ಮಹಿಳೆಯು ಪತಿ ಹಾಗೂ ಅತ್ತೆ ಇಬ್ಬರೂ ಮದುವೆ ಸಮಯದಲ್ಲಿ ನಗದು, ಚಿನ್ನ, ಹಾಗೂ ಬೆಳ್ಳಿ ಆಭರಣಗಳನ್ನು ಒಳಗೊಂಡ ವರದಕ್ಷಿಣೆ ನೀಡುವಂತೆ ಒತ್ತಾಯಿಸಿದ್ದರ ಬಗ್ಗೆಯೂ ಆಕೆ ಆರೋಪಿಸಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುವುದಾಗಿ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಕೋಲಾರದಲ್ಲಿ ಸಿದ್ದರಾಮಯ್ಯರನ್ನ ಹಣಿಯಲು ರಣತಂತ್ರ- ದಲಿತರಿಂದ ಕರಪತ್ರ ಹಂಚಿ ಅಭಿಯಾನ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕೊಳೆತ ಸ್ಥಿತಿಯಲ್ಲಿ ಶವ  ಪತ್ತೆ – ಮೂಳೆಗಳನ್ನ ಎಳೆದಾಡಿದ ನಾಯಿಗಳು  -ಗ್ರಾಮಸ್ಥರಲ್ಲಿ ಆತಂಕ

    ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ – ಮೂಳೆಗಳನ್ನ ಎಳೆದಾಡಿದ ನಾಯಿಗಳು -ಗ್ರಾಮಸ್ಥರಲ್ಲಿ ಆತಂಕ

    ಮಂಡ್ಯ: ನಾಯಿಗಳು ಮೂಳೆಗಳನ್ನು ಎಳೆದಾಡುವುದನ್ನು ನೋಡಿದ ಜನ ಇದೇನಿದು ಎಂದು ನೋಡಿದ್ದಾರೆ. ಕೊಳೆತ ಸ್ಥಿತಿಯಲ್ಲಿ ಇದ್ದ ಮನುಷ್ಯನ ಶವ ಪತ್ತೆಯಾಗಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.

    ಜಿಲ್ಲೆಯ ಬಸರಾಳು ಗ್ರಾಮದ ಚಿಕ್ಕಕೆರೆಯ ಬಳಿ ನಾಯಿಗಳು ಮೂಳೆಗಳು ಎಳೆದಾಡುತ್ತಿದ್ದವು. ಇದನ್ನು ಕಂಡ ಗ್ರಾಮಸ್ಥರು ಇಷ್ಟು ದೊಡ್ಡದ ಮೂಳೆಗಳು ನಾಯಿಗಳಿಗೆ ಎಲ್ಲಿ ಸಿಕ್ಕಿತು ಎಂದು ಹುಡುಕಿದ ವೇಳೆ ಅಲ್ಲೇ ಪಕ್ಕದಲ್ಲಿ ಇದ್ದ ಪೊದೆಯಲ್ಲಿ ಕೊಳೆದ ಸ್ಥಿತಿಯಲ್ಲಿ ಇದ್ದ ಮನುಷ್ಯನ ಶವ ಪತ್ತೆಯಾಗಿದೆ. ಇದನ್ನು ಕಂಡ ಗ್ರಾಮಸ್ಥರು ಗಾಬರಿಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಶಿಖರ್ ಧವನ್ ಕೊಳಲು ನಾದ- ಪೃಥ್ವಿ ಶಾ ಗಾಯನ

    ಗ್ರಾಮಸ್ಥರ ಮಾಹಿತಿಯನ್ನು ಆಧಾರಿಸಿ ಸ್ಥಳಕ್ಕೆ ಬಂದ ಪೊಲೀಸರು ಕೊಳೆತ ಶವವನ್ನು ಪರಿಶೀಲನೆ ನಡೆಸಿದಾಗ ಕೂದಲು ಬಟ್ಟೆಯನ್ನು ಕಂಡು ಇದು ಯುವತಿಯ ಶವ ಇರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಸದ್ಯ ಇಲ್ಲಿ ದೊರೆತಿರುವ ಕಳೆಬರಹಳನ್ನು ಡಿಎನ್‍ಎ ಪರೀಕ್ಷೆಗೆ ಲ್ಯಾಬ್‍ಗೆ ಕಳುಹಿಸಲಾಗಿದೆ. ಸದ್ಯ ಈ ಕುರಿತು ಬಸರಾಳು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

  • 10 ಲಕ್ಷ ಮೌಲ್ಯದ ಹುಲಿ ಉಗುರು, ಹಲ್ಲು, ಮೂಳೆ ವಶ – ಇಬ್ಬರ ಬಂಧನ

    10 ಲಕ್ಷ ಮೌಲ್ಯದ ಹುಲಿ ಉಗುರು, ಹಲ್ಲು, ಮೂಳೆ ವಶ – ಇಬ್ಬರ ಬಂಧನ

    – ಲೈಂಗಿಕ ಶಕ್ತಿ ವೃದ್ಧಿಗೆ ಔಷಧಿಯಾಗಿ ಬಳಕೆ
    – ವಿದೇಶದಲ್ಲಿ ಭಾರೀ ಬೇಡಿಕೆ

    ಚಿಕ್ಕಮಗಳೂರು: ನಗರದ ರೈಲ್ವೇ ನಿಲ್ದಾಣದ ಬಳಿ ಸ್ವಿಫ್ಟ್ ಕಾರಿನಲ್ಲಿ ಹುಲಿಯ ಉಗುರು, ಹಲ್ಲು ಹಾಗು ಮೂಳೆಗಳನ್ನ ಮಾರಲು ಯತ್ನಿಸುತ್ತಿದ್ದ ಇಬ್ಬರನ್ನ ಪೊಲೀಸರು ಬಂಧಿಸಿದ್ದಾರೆ.

    ಬಂಧಿತರನ್ನ ಹಾಸನ ಜಿಲ್ಲೆ ಅಂಬುಗ ಗ್ರಾಮದ ಲೋಕೇಶ್ ಹಾಗೂ ಚಿಕ್ಕಮಗಳೂರು ತಾಲೂಕಿನ ಅರಿಶಿನಗುಪ್ಪೆ ಗ್ರಾಮದ ಸಾಗರ್ ಎಂದು ಗುರುತಿಸಲಾಗಿದೆ. ಬಂಧಿತರಿಂದ ಸುಮಾರು 10 ಲಕ್ಷ ಮೌಲ್ಯದ ಎಂಟು ಹುಲಿ ಉಗುರು, ಒಂದು ಹುಲಿ ಚರ್ಮ, ಒಂದು ದೊಡ್ಡ ಕೋರೆ ಹಲ್ಲು ಹಾಗೂ ಹದಿನಾಲ್ಕು ಹಲ್ಲಿನ ಮೂಳೆಗಳನ್ನ ವಶಪಡಿಸಿಕೊಂಡಿದ್ದಾರೆ. ಬಂಧಿತರು ಹಾಗೂ ಬಂಧಿತರಿಂದ ವಶಪಡಿಕೊಂಡ ವಸ್ತುಗಳನ್ನ ಚಿಕ್ಕಮಗಳೂರು ವಲಯ ಅರಣ್ಯಾಧಿಕಾರಿಗಳ ವಶಕ್ಕೆ ನೀಡಿದ್ದಾರೆ.

    ಬಂಧಿತರನ್ನ ವಿಚಾರಣೆಗೆ ಒಳಪಡಿಸಿರೋ ಅಧಿಕಾರಿಗಳು ಈ ದಂಧೆಯಲ್ಲಿ ಇವರಿಬ್ಬರೇ ಇದ್ದಾರೋ ಅಥವಾ ಇದೊಂದು ತಂಡವೋ ಎಂದು ಮಾಹಿತಿ ಕಲೆ ಹಾಕುತ್ತಿದ್ದಾರೆ. ಯಾಕೆಂದರೆ ಇದು ಒಬ್ಬಿಬ್ಬರ ಕೈನಲ್ಲಿ ಆಗುವ ಕೆಲಸವಲ್ಲ ಎಂಬ ಅನುಮಾನ ಪೊಲೀಸರದ್ದು. ಹುಲಿಯ ಹಲ್ಲು, ಉಗುರು, ಚರ್ಮವನ್ನ ಎಲ್ಲಿಂದ ತಂದಿದ್ದಾರೆ. ಇವರೇ ಹುಲಿಯನ್ನ ಕೊಂದಿದ್ದಾರಾ ಅಥವ ಬೇರೆಯವರು ಕೊಂದು ಇವರಿಗೆ ಈ ವಸ್ತುಗಳನ್ನ ಕೊಟ್ಟಿದ್ದಾರಾ ಎಂಬ ಎಲ್ಲಾ ರೀತಿಯ ತನಿಖೆ ಕೈಗೊಂಡಿದ್ದಾರೆ.

    ಹುಲಿ ಸೇರಿದಂತೆ ಕಾಡುಪ್ರಾಣಿಗಳ ಮೂಳೆಗಳಿಗೆ ವಿದೇಶದಲ್ಲಿ ಭಾರೀ ಬೇಡಿಕೆ ಇದೆ. ಹುಲಿ, ಜಿಂಕೆ ಸೇರಿದಂತೆ ಕಾಡುಪ್ರಾಣಿಗಳ ಮೂಳೆಗಳಿಗೆ ವಿದೇಶದಲ್ಲಿ ಭಾರೀ ಬೇಡಿಕೆ ಇದೆ. ಸೌಂದರ್ಯವರ್ಧಕ, ಇಂಟಿರಿಯಲ್ ಡಿಸೈನ್‍ಗಳಿಗೂ ಇವುಗಳನ್ನ ಬಳಸುತ್ತಾರೆ. ಅದಕ್ಕಿಂತ ಮಿಗಿಲಾಗಿ ಲೈಂಗಿಕ ಶಕ್ತಿ ವೃದ್ಧಿಯಾಗಲು ಬಳಸುವ ಔಷಧಿಗಳಿಗೂ ಕಾಡುಪ್ರಾಣಿಗಳ ಮೂಳೆಗಳನ್ನ ಬಳಸುವುದರಿಂದ ಮಲೆನಾಡಲ್ಲಿ ಕಾಡುಪ್ರಾಣಿಗಳ ಭೇಟಿ ತಂಡ ಸಕ್ರಿಯವಾಗಿದ್ಯಾ ಎಂಬ ಅನುಮಾನ ಪೊಲೀಸ್ ಹಾಗೂ ಅರಣ್ಯ ಅಧಿಕಾರಿಗಳದ್ದು. ಹಾಗಾಗಿ ಇಷ್ಟು ದೊಡ್ಡ ಪ್ರಮಾಣದ ಹುಲಿಯ ವಸ್ತುಗಳನ್ನ ತಂದು ಮಾರಾಟ ಮಾಡಲು ಯತ್ನಿಸುತ್ತಿರುವ ಇವರನ್ನ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

  • ಹೈಸ್ಕೂಲ್ ಆವರಣದಲ್ಲಿ ಮನುಷ್ಯರ ತಲೆ ಬುರುಡೆ, ಮೂಳೆಗಳ ರಾಶಿ ಪತ್ತೆ: ಸಾರ್ವಜನಿಕರಲ್ಲಿ ಆತಂಕ

    ಹೈಸ್ಕೂಲ್ ಆವರಣದಲ್ಲಿ ಮನುಷ್ಯರ ತಲೆ ಬುರುಡೆ, ಮೂಳೆಗಳ ರಾಶಿ ಪತ್ತೆ: ಸಾರ್ವಜನಿಕರಲ್ಲಿ ಆತಂಕ

    ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮನುಷ್ಯರ ಬುರುಡೆ, ಮೂಳೆಗಳ ರಾಶಿ ಪತ್ತೆಯಾಗಿದೆ. ನಗರದ ಮೂರು ಸಾವಿರ ಮಠದ ಸಾವಿತ್ರಿ ಶೆಟ್ಟಿ ಹೈಸ್ಕೂಲ್ ಆವರಣದಲ್ಲಿ ಮೂಳೆ, ಬುರುಡೆ ರಾಶಿ ಸಿಕ್ಕಿದೆ.

    ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಅಣ್ಣಿಗೇರಿ ಪಟ್ಟಣದಲಿ ಆರು ವರ್ಷಗಳ ಹಿಂದೆ ಸುಮಾರು 600 ತಲೆಬುರುಡೆಗಳು ಪತ್ತೆಯಾಗಿದ್ದವು. ಇವುಗಳ ಇತಿಹಾಸ ತಿಳಿಯುವ ಸಲುವಾಗಿ ನಡೆಸಲಾಗಿದ್ದ ಕಾರ್ಬನ್ ಪರೀಕ್ಷೆಯಲ್ಲಿ ಇವು 638 ವರ್ಷಗಳಷ್ಟು ಹಳೆಯದ್ದು ಅನ್ನೋ ಮಾಹಿತಿ ಲಭ್ಯವಾಗಿತ್ತು.

    ಸದ್ಯ ಬುರುಡೆ ಮತ್ತು ಮೂಳೆ ಸಿಕ್ಕಿರುವ ಪ್ರೌಢಾಶಾಲೆಯ ಏರಿಯಾದಲ್ಲಿ ಆತಂಕದ ವಾತಾವರಣ ಉಂಟಾಗಿದೆ.

  • ಬೀದರ್‍ನಲ್ಲಿ ಗೋವುಗಳ ಮಾರಣಹೋಮ – ಅಕ್ರಮ ಕಸಾಯಿಖಾನೆಗಳಲ್ಲಿ ಮೂಳೆ, ಕೊಂಬುಗಳ ರಾಶಿ

    ಬೀದರ್‍ನಲ್ಲಿ ಗೋವುಗಳ ಮಾರಣಹೋಮ – ಅಕ್ರಮ ಕಸಾಯಿಖಾನೆಗಳಲ್ಲಿ ಮೂಳೆ, ಕೊಂಬುಗಳ ರಾಶಿ

    ಬೀದರ್: ಗಡಿ ಜಿಲ್ಲೆ ಬೀದರ್‍ನಲ್ಲಿ ಅಕ್ರಮವಾಗಿ ಕಸಾಯಿಖಾನೆಗಳು ಎಗ್ಗಿಲ್ಲದೆ ಸಾಗಿದ್ದು ಪೊಲೀಸ್ ಇಲಾಖೆ ಕಣ್ಣು ಮುಚ್ಚಿಕೊಂಡಿದೆ. ಗೋವುಗಳ ಮಾರಣಹೋಮಕ್ಕೆ ಈ ದೃಶಾವಳಿಗಳು ಸಾಕ್ಷಿಯಾಗಿದೆ.

    ಬೀದರ್ ತಾಲೂಕಿನ ಕಂಗನಕೋಟೆ ಗ್ರಾಮದ ಹೊರವಲಯದ ಅರಣ್ಯ ಪ್ರದೇಶದ ಬಳಿ ಹಲವು ವರ್ಷಗಳಿಂದ ಕಾಸಾಯಿಖಾನೆ ಅಕ್ರಮವಾಗಿ ನಡೆಯುತ್ತಿದ್ದು, ಗೋವುಗಳ ಕತ್ತು, ಕಾಲು, ಮೂಳೆ, ಕೊಂಬುಗಳು ಸೇರಿದಂತೆ ಗೋವುಗಳ ಅಸ್ಥಿಪಂಜರಗಳು ರಾಶಿ ರಾಶಿಯಾಗಿ ಪತ್ತೆಯಾಗಿವೆ. ಕಂಗನಕೋಟೆ, ಮಂದಕನಹಳ್ಳಿ, ಶೆಮಶ್‍ನಗರ್ ಮತ್ತು ಕೆಲ ತಾಂಡಗಳು ಸೇರಿದಂತೆ ಎಲ್ಲಾ ಗ್ರಾಮದ ಜನರು ಅಕ್ರಮ ಕಸಾಯಿಖಾನೆಯ ವಾಸನೆಗೆ ಬೇಸತ್ತು ಹೋಗಿದ್ದಾರೆ.

    ಇಂದು ಆಕ್ರೋಶಗೊಂಡ ಜನ ಕಸಾಯಿಖಾನೆಗೆ ನುಗ್ಗಿ ಟಿನ್‍ಗಳನ್ನು ಒಡೆದುಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ರು. ಕಸಾಯಿಖಾನೆ ವಾಸನೆಯಿಂದ ಊಟ ಮಾಡಲು ಅಸಾಧ್ಯವಾಗಿದೆ. ವಾಂತಿಯಾಗುವಷ್ಟರ ಮಟ್ಟಿಗೆ ಇಲ್ಲಿ ವಾಸನೆಯಿದೆ. ಈ ಬಗ್ಗೆ ಅಶೋಕ್ ಖೇಣಿ ಹಾಗೂ ಪೊಲೀಸರ ಗಮನಕ್ಕೆ ತಂದರೂ ಇಬ್ಬರೂ ಸಹ ತಲೆಕೆಡಿಸಿಕೊಂಡಿಲ್ಲ. ಸಿಂಗಪುರ್ ಮಾಡುವುದಾಗಿ ಹೇಳಿ ನಮ್ಮ ಗ್ರಾಮಗಳನ್ನು ಕೊಳಕು ಗ್ರಾಮಗಳನ್ನಾಗಿ ಮಾಡಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಶಾಸಕರಿಗೆ ಈ ಬಗ್ಗೆ ಮಾಹಿತಿ ರವಾನಿಸಿದ್ದೇವೆ. ಅವರು ಕ್ರಮ ಕೈಗೊಳ್ಳುತ್ತೇವೆ ಅಂತಾ ಹೇಳಿದ್ದರು. ಆದ್ರೆ ಇಲ್ಲಿಯವರೆಗೆ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಅವಾಗ ಸಣ್ಣ ಪ್ರಮಾಣದ ಕಸಾಯಿಖಾನೆಯಿತ್ತು. ಜನ ಈ ಬಗ್ಗೆ ಗಮನಹರಿಸದ ಹಿನ್ನೆಲೆಯಲ್ಲಿ ಇದೀಗ ದೊಡ್ಡ ಪ್ರಮಾಣದಲ್ಲಿ ವಹಿವಾಟುಗಳು ನಡೆಯುತ್ತಿವೆ. ಸಂಜೆಯ ಹೊತ್ತಲ್ಲಿ ತಂಪುಗಾಳಿಯ ಜೊತೆ ದುರ್ವಾಸನೆಯೂ ಬರುತ್ತಿದೆ. ಒಟ್ಟಿನಲ್ಲಿ ನೆಮ್ಮದಿಯಾಗಿ ಮಲಗಲು ಸಾಧ್ಯವಾಗದ ಸ್ಥಿತಿ ಎದುರಾಗಿದೆ ಅಂತಾ ಸ್ಥಳೀಯ ನಿವಾಸಿಯೊಬ್ಬರು ಹೇಳಿದ್ರು.

  • ಕುಡಿಯೋಕೆ ನೀರಿಲ್ಲದೆ ಸಾವನ್ನಪ್ಪುತ್ತಿವೆ ಪ್ರಾಣಿಗಳು: ಇಲ್ಲಿದೆ ಕರ್ನಾಟಕದ ಬರದ ಚಿತ್ರಣ

    ಕುಡಿಯೋಕೆ ನೀರಿಲ್ಲದೆ ಸಾವನ್ನಪ್ಪುತ್ತಿವೆ ಪ್ರಾಣಿಗಳು: ಇಲ್ಲಿದೆ ಕರ್ನಾಟಕದ ಬರದ ಚಿತ್ರಣ

    ಅರುಣ್ ಸಿ  ಬಡಿಗೇರ್
    ಬೆಂಗಳೂರು: ಸಾಯುವ ಸ್ಥಿತಿಯಲ್ಲಿ ಬಾಯ್ತೆರೆದು ನಿಂತಿದ್ದಾಳೆ ಧರಿತ್ರಿ. ಹನಿ ನೀರಿಗಾಗಿ ಪರದಾಡುತ್ತಿದ್ದಾರೆ ಭೂ ತಾಯಿ ಮಕ್ಕಳು. ಇನ್ನೊಂದು ತಿಂಗಳು ಕಳೆದರೆ ಬಿಸಿಲಿನ ಬೇಗುದಿಗೆ ಸುಟ್ಟು ಕರಕಲಾಗಲಿವೆ ದೇಹಗಳು. ಒಣಗಿ ಹೋಗಲಿವೆ ಮರಗಿಡಗಳು. ಅನಾಥ ಶವವಾಗಿ ಬೀಳಲಿವೆ ಪ್ರಾಣಿ ಪಕ್ಷಿಗಳು. ಬತ್ತಿ ಹೋಗಿವೆ ಕೆರೆ ಕಟ್ಟೆಗಳು. ಬರಿದಾಗಿದೆ ನದಿಗಳ ಒಡಲು. ಇಂಗಿ ಹೋಗಿದೆ ಭೂ ಜಲದಗಣ್ಣು. ಕಣ್ಣೀರಿಡಲು ಬತ್ತಿ ಹೋಗಿದೆ ದೇಹದ ನೀರು. ಇದೆಲ್ಲವು ರಾಜ್ಯದ ಭೀಕರ ಬರಗಾಲದ ರೌದ್ರ ಚಿತ್ರಣ. ಬರ ಹೇಗಿದೆ ಎನ್ನುವುದನ್ನು ತಿಳಿಯಲು ರಾಜ್ಯದಲ್ಲಿ 2500 ಕಿಮೀ ಸಂಚರಿಸಿ ಪಬ್ಲಿಕ್ ಟಿವಿಯ ತಂಡ ಪ್ರತ್ಯಕ್ಷ ವರದಿ ಮಾಡಿದೆ. ಈ ಸಂದರ್ಭದಲ್ಲಿ ನಮ್ಮ ತಂಡಕ್ಕೆ ಕಂಡಿರೋ ಬರಗಾಲದ ಸ್ಥಿತಿಯನ್ನ ನಿಮ್ಮ ಮುಂದೆ ಇಡುವ ಪ್ರಯತ್ನವಿದು.

    ನೀರಿನ ವಿಷ್ಯದಲ್ಲಿ ಬೆಂಗಳೂರಿಗರು ಪುಣ್ಯವಂತರು. 4-5 ಕಿಮೀ ಬಿಂದಿಗೆ ಹಿಡಿದುಕೊಂಡು ನೀರು ಹೊತ್ತು ತರೋ ಪರಿಸ್ಥಿತಿ ಇಲ್ಲಿಲ್ಲ. ಶಾಲೆಬಿಟ್ಟು ನೀರು ತರಬೇಕಾದ ಅನಿವಾರ್ಯತೆ ಇಲ್ಲಿಲ್ಲ. ನೀರು ತರದೆ ಇದ್ದರೆ ಅಪ್ಪ ಅಮ್ಮನ ಕಡೆ ಹೊಡಿಸಿಕೊಳ್ಳುವಷ್ಟು ಹೀನಾಯ ಸ್ಥಿತಿ ಇಲ್ಲಿನ ಮಕ್ಕಳಿಗೆ ಬಂದಿಲ್ಲ. ಕೆಲಸ ಬಿಟ್ಟು ನೀರಿಗಾಗಿ ಬೋರ್‍ವೆಲ್ ಮುಂದೆ ಸರತಿ ಸಾಲಿನಲ್ಲಿ ನಿಲ್ಲೋ ಸ್ಥಿತಿ ಇಲ್ಲಿಲ್ಲ. ನಿದ್ದೆಗೆಟ್ಟು ಕರೆಂಟ್‍ಗಾಗಿ ಕಾದು ರಾತ್ರಿಯೆಲ್ಲ ನೀರಿಗಾಗಿ ಅಲೆದಾಡೋ ಪ್ರಸಂಗ ಬಂದಿಲ್ಲ. ಕುಡಿಯೋ ನೀರಿಗಾಗಿ ಒಂದು ಕಡೆ, ಬಳಸೋ ನೀರಿಗಾಗಿ ಇನ್ನೊಂದು ಕಡೆ ಹೋಗಿ ಬಿಂದಿಗೆ ತುಂಬಿಕೊಂಡು ಬರೋ ದುರ್ದೈವ ಇಲ್ಲಿಲ್ಲ. ನೀರಿಲ್ಲದ ಊರು ಅಂತ ಹೆಣ್ಣು ಕೊಡದೇ ಇರುವಷ್ಟು ಬರಗೆಟ್ಟು ಹೋಗಿಲ್ಲ ಈ ಬೆಂಗಳೂರು. ಬತ್ತಿಹೋದ ನದಿಯಲ್ಲಿ 5 ಅಡಿ ಗುಂಡಿ ತೋಡಿ ಬಂದ ನೀರನ್ನ ಗಂಟೆ ಗಟ್ಟಲೆ ಕುಳಿತು ಒಂದು ಬಿಂದಿಗೆ ತುಂಬಿಸಿಕೊಂಡು 4 ಕಿಮೀ ನಡೆದುಕೊಂಡು ಹೋಗುವ ಹೀನಾಯ ಸ್ಥಿತಿ ಬೆಂಗಳೂರಿನಲ್ಲಿ ಕಾಣಿಸುತ್ತಿಲ್ಲ. ಎಲ್ಲೋ ಹರಿಯೋ ನದಿಯಿಂದ ನೀರನ್ನ ಪಡೆದು ದಾಹ ತೀರಿಸಿಕೊಳ್ಳೋ ಬೆಂಗಳೂರಿನವರಷ್ಟು ಪುಣ್ಯವಂತರು ಹಳ್ಳಿಯ ಜನರಲ್ಲ.

    ಜಲಾಶಯಗಳಲ್ಲಿ ವಾಸನೆ ಬರುತ್ತಿದೆ ನೀರು
    ಕೆಆರ್‍ಎಸ್, ಹಾರಂಗಿ, ಹೇಮಾವತಿ, ಕಬಿನಿ ಜಲಾಶಯ ಸೇರಿದಂತೆ ಹಲವು ಜಲಾಶಯಗಳಲ್ಲಿ ನೀರು ಕಪ್ಪಾಗುತ್ತಿದೆ. ಜಲಾಶಯಗಳು ಬರಿದಾಗುವ ಸ್ಥಿತಿ ಬಂದೊದಗಿದೆ. ಜಲಾಶಯದ ಹಿನ್ನಿರಿನ ಹತ್ತಿರ ಹೋಗ್ತಿದ್ದಂತೆ ಮೀನು ಸತ್ತಾಗ ಬರೋ ವಾಸಯಂತೆ ನೀರು ವಾಸನೆ ಬರುತ್ತಿದೆ. ಈ ನೀರನ್ನ ಶುದ್ಧಿಕರಿಸಿ ಬೇಸಿಗೆಯಲ್ಲಿ ಕುಡಿಯೋಕೆ ನೀರು ಸರಬರಾಜು ಮಾಡಲಾಗುತ್ತೆ. ಇನ್ನು ಈ ಜಲಾಶಯದ ನೀರು ನಾಲೆಗಳ ಮೂಲಕ ಮಂಡ್ಯ ಜಿಲ್ಲೆಗೆ ತಲುಪಬೇಕು. ಆದ್ರೆ ನಾಲೆಯಲ್ಲಿ ನೀರನ್ನ ಬಿಡಲಾಗುತ್ತಿಲ್ಲ. ಹಾಗಾಗಿ ನಾಲೆಯನ್ನ ನಂಬಿರೋ ಮಂಡ್ಯ ಜನಕ್ಕೆ ಎಪ್ರಿಲ್ ನಂತರ ಹಾಹಾಕಾರ ಉಂಟಾಗೋದ್ರಲ್ಲಿ ಯಾವುದೇ ಡೌಟೇ ಇಲ್ಲ.

    ನಾಗರಹೊಳೆ ಹಾಗೂ ಬಂಡಿಪುರ ಕಾಡು ಪ್ರಾಣಿಗಳು ನಂಬಿರೋ ಕಬಿನಿ ಜಲಾಶಯದ ನೀರು ಬರಿದಾಗುತ್ತಾ ಸಾಗಿದೆ. ಎಪ್ರಿಲ್ ಹಾಗೂ ಮೇ ತಿಂಗಳಲ್ಲಿ ಈ ಕಾಡು ಪ್ರಾಣಿಗಳ ಸ್ಥಿತಿ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇನ್ನೊಂದು ದುರ್ದೈವ ಅಂದ್ರೆ ಜಲಾಶಯದ ಪಕ್ಕದಲ್ಲೆ ಇರೋ ಹತ್ತಾರು ಹಳ್ಳಿಗಳಿಗೆ ಕುಡಿಯೋಕೆ ನೀರು ಸಿಗೋದೆ ಇಲ್ಲ. ಜಲಾಶಯದಿಂದ ಸುತ್ತಲಿರೋ ಹಳ್ಳಿಗಳ ಕೆರೆಗಳಿಗೆ ನೀರನ್ನ ತುಂಬಿಸಬೇಕು ಅನ್ನೋ ಕನಿಷ್ಟ ಜ್ಞಾನವೂ ನಮ್ಮ ಜನಪ್ರತಿನಿಧಿಗಳಿಗಿಲ್ಲ.

    ಜಲಾಶಯವೇ ಬತ್ತಿ ಹೋದಾಗ
    50 ವರ್ಷದ ಇತಿಹಾಸ ಹೊಂದಿರೋ ಚಾಮರಾಜನಗರ ಜಿಲ್ಲೆ ಚಿಕ್ಕಹೊಳೆ ಜಲಾಶಯ ಸಂಪೂರ್ಣ ಬರಿದಾಗಿದೆ. ಧರಿತ್ರಿ ಹನಿ ನೀರಿಗೆ ಬಾಯ್ತೆರೆದು ಬಿಸಿಲಿನ ದವಡೆಯಲ್ಲಿ ಒದ್ದಾಡುತ್ತಿದ್ದಾಳೆ. ಸುತ್ತಮುತ್ತಲಿನ 21 ಹಳ್ಳಿಗಳ ಜನರ ದಾಹ ನೀಗಿಸುತ್ತಿದ್ದ ಈ ಜಲಾಶಯದ ದಾಹ ತೀರಿಸುವವರು ಯಾರು. ಈ ಜಲಾಶಯದ ಸುತ್ತಲಿರೋ ಕಾಡು ಪ್ರಾಣಿಗಳಂತೂ ನೀರಿಲ್ಲದೆ ಸಾವಿನ ದವಡೆಯಲ್ಲಿವೆ. ಒಂದು ಕಡೆ ಕಾಡ್ಗಿಚ್ಚು ಇನ್ನೊಂದು ಕಡೆ ನೀರಿನ ಬವಣೆ. ಇದರ ಮಧ್ಯೆ ಕಾಡು ಪ್ರಾಣಿಗಳು ದಿಕ್ಕು ಕಾಣದೆ ಸಾಯೋ ಸ್ಥಿತಿಗೆ ಬಂದು ತಲುಪಿವೆ. ಮನುಷ್ಯರೇನೋ ಟ್ಯಾಂಕರ್ ತರಿಸಿ ನೀರು ಕುಡಿತಾರೆ, ಆದ್ರೆ ಪ್ರಾಣಿಗಳ ಸ್ಥಿತಿ ಏನು..?

    ಮರಳು ದಂಧೆಗೆ ಬೀಳುತ್ತಾ ಕಡಿವಾಣ?
    ಕಾವೇರಿ ಉಗಮ ಸ್ಥಾನದಲ್ಲಿ ಹೆಚ್ಚು ಮಳೆ ಸುರಿದಾಗ ನಮ್ಮ ಆಸ್ತಿ ಪಾಸ್ತಿ ಹಾನಿಯಾಗುತ್ತೆ, ಬೆಳೆದ ಬೆಳೆ ನಾಶವಾಗುತ್ತೆ. ಆಗ ನಮ್ಮನ್ನ ನೋಡೋರೆ ದಿಕ್ಕಿರಲ್ಲ. ಆಗ ಮಂಡ್ಯದ ಜನ ಖುಷಿ ಪಡುತ್ತಾರೆ. ಕಾವೇರಿ ತುಂಬಿ ಹರಿಯುತ್ತಿದ್ದಾಳೆಂದು ಸಂಭ್ರಮಿಸ್ತಾರೆ. ಆದ್ರೆ ನಾವಿಲ್ಲ ಕಣ್ಣೀರು ಹಾಕ್ತೀವಿ ಅಂತಾ ಕೊಡಗಿನ ಭಾಗಮಂಡಲದ ಜನ ನೋವಿನಿಂದ ಹೇಳಿಕೊಳ್ತಾರೆ. ಇದಲ್ಲದೆ ಕಾವೇರಿ ಒಡಲಲ್ಲಿ ಮರಳುದಂಧೆ ಕೂಡ ಎಗ್ಗಿಲ್ಲದೆ ಸಾಗಿದೆ, ಇದೆಲ್ಲದಕ್ಕಿಂತ ಹೆಚ್ಚಾಗಿ ಕಾವೇರಿ ನದಿಯ ಒತ್ತುವರಿ ಮಾಡಿ ಕಟ್ಟಡಗಳನ್ನ ಕಟ್ಟಿಕೊಳ್ಳೋಕೆ ಜನ ಶುರು ಮಾಡಿದ್ದಾರೆ. ಚರಂಡಿ ನೀರನ್ನೆಲ್ಲ ಕಾವೇರಿ ನದಿಗೆ ಹರಿಯಬಿಡ್ತಿದ್ದಾರೆ. ಇದರ ಮಧ್ಯೆ ಕಾವೇರಿ ಕಲುಷಿತಗೊಂಡು ಬತ್ತಿ ಹೋಗುತ್ತಿದ್ದಾಳೆ. ಈಗಲೇ ಇದರ ಸಂರಕ್ಷಣೆ ಮಾಡದೇ ಇದ್ದರೆ ಗಂಗಾ ನದಿಯಂತೆ ಸಂಪೂರ್ಣ ಮಲೀನವಾಗೋದ್ರಲ್ಲಿ ಯಾವುದೇ ಸಂದೇಹವಿಲ್ಲ.

    ಎಲ್ಲೆಲ್ಲೂ ಜಾನುವಾರುಗಳ ಮೂಳೆಗಳೆ ಪತ್ತೆ
    ಇನ್ನು ನಮ್ಮ ತಂಡ ತೆರಳಿದ ಹಲವು ಜಲಾಶಯಗಳು, ಬತ್ತಿಹೋದ ನದಿ, ಹೊಳೆ, ಕಾಲುವೆ, ಕೆರೆ ಪಕ್ಕದಲ್ಲಿ ಪ್ರಾಣಿಗಳ ಮೂಳೆಗಳು ಕಂಡುಬಂದ್ವು. ಒಂದು ಕಡೆ ಮಳೆ ಇಲ್ಲದೆ ಹಸಿರೆಲ್ಲ ಮರೆಯಾಗಿದೆ. ಇನ್ನೊಂದು ಕಡೆ ಬಿಸಿಲಿನ ಝಳ. ಇದರ ಮಧ್ಯೆ ಕುಡಿಯೋಕೆ ನೀರಿಲ್ಲದೆ ಅನೇಕ ಪ್ರಾಣಿಗಳು ಸಾವನ್ನಪ್ಪುತ್ತಿವೆ. ಪ್ರಾಣಿಗಳ ಅವಶೇಷ ನೋಡ್ತಾ ಇದ್ರೆ ಕಣ್ಣಂಚಲ್ಲಿ ನೀರು ಬರದೆ ಇರದು. ಇನ್ನೂ ಕೆಲವು ಕಡೆಯಲ್ಲಂತೂ ನೀರಿಲ್ಲದೆ ಮೀನುಗಳ ಮಾರಣಹೋಮ ನಡೆಯುತ್ತಿದೆ. ಜಲಚರಗಳು ಜೀವನ್ಮರಣದ ಮಧ್ಯೆ ಹೋರಾಡುತ್ತಿವೆ. ಬುದ್ಧಿ ಜೀವಿ ಮನುಷ್ಯ ಮಾತ್ರ ದುಡ್ಡುಕೊಟ್ಟು ನೀರು ಖರೀದಿಸ್ತಾನೆ. ಆದ್ರೆ, ಮೂಖ ಪ್ರಾಣಿಗಳ ವೇದನೆಯನ್ನ ಕೇಳೋರಾದ್ರು ಯಾರು..?

    ಪ್ರಾಣಿಗಳಿಗಾಗಿ ಟ್ಯಾಂಕರ್ ನೀರು.
    ಕುಡಿಯೋಕೆ ನೀರು ಸಿಕ್ರೆ ಸಾಕು ಅನ್ನೋ ಈ ಕಾಲದಲ್ಲಿ ಒಂದು ವಿಶೇಷ ಗ್ರಾಮವೊಂದಿದೆ. ಈ ರಂಗಪುರ ಗ್ರಾಮ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನಲ್ಲಿದೆ. ಈ ಗ್ರಾಮದ ಜನರಿಗೆ ಕುಡಿಯೋಕೆ ನೀರಿನ ಸಮಸ್ಯೆ. ಆದ್ರೆ, ಈ ಗ್ರಾಮದ ಜನ ಮಾತ್ರ ತಮಗೆ ಎಷ್ಟೆ ಕಷ್ಟವಾದ್ರು ಚಿಂತೆಯಿಲ್ಲ ಪ್ರಾಣಿಗಳು ನೀರಿಲ್ಲದೆ ಸಾವನ್ನಪ್ಪಬಾರದು ಅಂತಾ ಒಣಗಿ ಹೋಗಿರೋ ಕೆರೆಗೆ ವಾರಕ್ಕೊಮ್ಮೆ ಟ್ಯಾಂಕರ್‍ನಿಂದ ನೀರು ಸುರಿಯುತ್ತಿದ್ದಾರೆ. ಕೆರೆ ತುಂಬಿಸೋಕೆ ಸಾಧ್ಯವಾಗದೆ ಇದ್ದರು ಕುರಿ, ದನಕರುಗಳು, ಮಂಗಗಳು, ನಾಯಿಗಳು, ಪಕ್ಷಿಗಳು ತಮ್ಮ ದಾಹ ತೀರಿಸಿಕೊಳ್ಳುತ್ತಿವೆ.

    ಗೋ ಶಾಲೆಗಳು
    ನಮ್ಮ ತಂಡ ಹೋದ ಕೆಲವು ಕಡೆ ಗೋ ಶಾಲೆಗಳು ಸಿಕ್ವು. ಸರ್ಕಾರವೇನೋ ಗೋ ಶಾಲೆಗಳ ವ್ಯವಸ್ಥೆ ಮಾಡ್ತಿದೆ. ಆದ್ರೆ, ಕೆಲ ಗೋ ಶಾಲೆಗಳಲ್ಲಿ ಚಿರತೆ ಕಾಟವಿದೆ. ಇನ್ನೂ ಕೆಲವು ಕಡೆ ರಾತ್ರಿ ವಿದ್ಯುತ್ ಸಂಪರ್ಕವೇ ಇಲ್ಲ. ಗೋವುಗಳ ಜೊತೆ ಬಂದ ಮಾಲೀಕರು ಕತ್ತಲಲ್ಲೆ ರಾತ್ರಿ ಕಳೆಯೋ ಹಾಗಾಗಿದೆ. ಹಾವುಗಳ ಕಾಟ ಬೇರೆ ಇದೆ. ಗೋವುಗಳಿಗೆ ನೀರಿನ ವ್ಯವಸ್ಥೆ ಏನೋ ಮಾಡಿದ್ದಾರೆ. ಆದ್ರೆ ಗೋವುಗಳ ಜೊತೆ ಬಂದವರು ಉಪವಾಸ ಕೂರುವಂತಾಗಿದೆ. ಮನೆಗೆ ಹೋಗಿ ಬರಬೇಕಂದ್ರೆ ಹಳ್ಳಿಯಿಂದ 30-40 ಕಿಮೀ ದೂರದಲ್ಲಿದ್ದಾರೆ. ಹೋಗಿ ಬರೋದಕ್ಕೂ ವ್ಯವಸ್ಥೆ ಇಲ್ಲ. ಯಾಕಂದ್ರೆ ಬಹಳಷ್ಟು ಗೋ ಶಾಲೆಗಳಿರೋದು ಮುಖ್ಯ ರಸ್ತೆಯಿಂದ ಬಹುದೂರ ಒಳಗಡೆ. ಅಲ್ಲಿ ಬಸ್ ಸೌಲಭ್ಯವಂತೂ ಇಲ್ಲವೆ ಇಲ್ಲ. ಇದೇನೂ ದೊಡ್ಡ ಸಮಸ್ಯೆ ಅಲ್ಲ. ಆದ್ರೂ ಸಂಬಂಧ ಪಟ್ಟವರು ಸ್ವಲ್ಪ ವ್ಯವಸ್ಥೆ ಮಾಡಿದ್ರೆ ಒಳ್ಳೆಯದಾಗುತ್ತೆ.