Tag: ಮೂಲ ಸೌಕರ್ಯ

  • ಮಂಡ್ಯ ಮಿಮ್ಸ್‌ನಲ್ಲಿ ಅವ್ಯವಸ್ಥೆಯ ಆಗರ – ಅಧಿಕಾರಿಗಳಿಗೆ ಡಿಸಿ ತೀವ್ರ ತರಾಟೆ

    ಮಂಡ್ಯ ಮಿಮ್ಸ್‌ನಲ್ಲಿ ಅವ್ಯವಸ್ಥೆಯ ಆಗರ – ಅಧಿಕಾರಿಗಳಿಗೆ ಡಿಸಿ ತೀವ್ರ ತರಾಟೆ

    ಮಂಡ್ಯ: ಬಡವರಿಗೆ ಕಡಿಮೆ ದುಡ್ಡಲ್ಲಿ ಉತ್ತಮ ಆರೋಗ್ಯ ಸೇವೆ ನೀಡುವುದು ಸರ್ಕಾರಿ ಆಸ್ಪತ್ರೆಗಳ (Government Hospitals) ಕರ್ತವ್ಯ. ಆದ್ರೆ ಸರ್ಕಾರಿ ಆಸ್ಪತ್ರೆಗಳು ತನ್ನ ಜವಾಬ್ದಾರಿ ಮರೆತು ಜನರ ಜೀವದ ಜೊತೆ ಚೆಲ್ಲಾಟ ಆಡುತ್ತಿವೆ. ಮಂಡ್ಯದ ಮಿಮ್ಸ್ (MIMS) ಆಸ್ಪತ್ರೆ ಕೂಡ ಅವ್ಯವಸ್ಥೆ ಆಗರವಾಗಿದ್ದು, ಆಸ್ಪತ್ರೆಗೆ ದಿಢೀರ್ ಭೇಟಿ ಕೊಟ್ಟ ಜಿಲ್ಲಾಧಿಕಾರಿ ಅಲ್ಲಿನ ಬೇಜವಾಬ್ದಾರಿ ನಿರ್ವಹಣೆ ಕಂಡು ಶಾಕ್ ಆಗಿದ್ದಾರೆ.

    ಗಬ್ಬು ನಾರುತ್ತಿರುವ ವಾರ್ಡ್‌ಗಳು, ಎಲ್ಲೆಂದರಲ್ಲಿ ಬಿದ್ದ ಕಸದ ರಾಶಿ, ಬಾತ್‌ರೂಂ ಇಲ್ಲದ ಡೋರ್‌ಗಳು ಇಂತಹ ಅವ್ಯವಸ್ಥೆ ಕಂಡುಬಂದಿದ್ದು ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ. ಸದಾ ವಿವಾದಗಳಿಂದಲೇ ಸುದ್ದಿಗೆ ಬರುವ ಮಂಡ್ಯ ಮಿಮ್ಸ್‌ಗೆ ನಿನ್ನೆ ಜಿಲ್ಲಾಧಿಕಾರಿ ಡಾ.ಕುಮಾರ್‌ ದಿಢೀರ್ ಭೇಟಿ ಕೊಟ್ಟಿದ್ರು. ಆಸ್ಪತ್ರೆಯ ಅಶುಚಿತ್ವ, ಅಸಮರ್ಪಕ ನಿರ್ವಹಣೆಯನ್ನ ಕಣ್ಣಾರೆ ಕಂಡ ಡಿಸಿಗೆ ಒಂದು ಕ್ಷಣ ದಂಗುಬಡಿದಂತಾಯಿತು. ಇದನ್ನೂ ಓದಿ: ಲಾರಿ-ಟ್ಯಾಂಕರ್ ನಡುವೆ ಭೀಕರ ಅಪಘಾತ – ಸ್ಥಳದಲ್ಲೇ ಓರ್ವ ಸಾವು

    ಮಂಡ್ಯ ಜಿಲ್ಲಾಸ್ಪತ್ರೆಗೆ ಅನಿರೀಕ್ಷಿತ ಭೇಟಿ ಕೊಟ್ಟ ಜಿಲ್ಲಾಧಿಕಾರಿ ಡಾ. ಕುಮಾರ ಹೊರರೋಗಿಗಳ ವಿಭಾಗ, ಸರ್ಜರಿ ಹಾಗೂ ಪುರುಷರು, ಮಹಿಳೆಯರ ವಾರ್ಡ್ ಪರಿಶೀಲಿಸಿದರು. ಗಬ್ಬು ನಾರುತ್ತಿದ್ದ ವಾರ್ಡ್‌ಗಳು, ಎಲ್ಲೆಂದರಲ್ಲಿ ಬಿದ್ದಿದ್ದ ಹಾಸಿಗೆ, ಬೆಡ್‌ಶೀಟ್‌ಗಳು ಜಿಲ್ಲಾಧಿಕಾರಿಗಳ ಅಸಮಾಧಾನಕ್ಕೆ ಕಾರಣವಾಯಿತು. ಶೌಚಾಲಯದಲ್ಲಿ ನೀರು ಬಂದ್ ಆಗಿತ್ತು. ಮಹಿಳೆಯರ ಬಾತ್‌ರೂಂ‌ಗೆ ಬಾಗಿಲನ್ನು ಹಾಕಿಸದೇ ಅಧಿಕಾರಿಗಳು ನಿರ್ಲಕ್ಷ್ಯ ತೋರಿರುವುದು ಈ ವೇಳೆ ಕಂಡುಬಂದಿತು.

    ಹೀಗೆ ಆಸ್ಪತ್ರೆಯ ಹತ್ತು ಹಲವು ಸಮಸ್ಯೆಗಳನ್ನು ಕಣ್ಣಾರೆ ಕಂಡ ಡಿಸಿ ಕುಮಾರ ಅಕ್ಷರಶಃ ಸುಸ್ತಾಗಿ ಹೋದ್ರು. ಅಲ್ಲೇ ಇದ್ದ ಮಿಮ್ಸ್ ನಿರ್ದೇಶಕ ಡಾ. ನರಸಿಂಹಮೂರ್ತಿ, ಸೂಪರಿಂಟೆಂಡೆಂಟ್ ಡಾ.ಶಿವಕುಮಾರ್‌ ಅವರನ್ನ ತರಾಟೆಗೆ ತೆಗೆದುಕೊಂಡರು. ನೀವೆಲ್ಲಾ ಮನುಷ್ಯರ ಮೃಗಗಳಾ? ನಿಮ್ಮ ಮನೆಯನ್ನ ಹೀಗೆ ಇಟ್ಕೋತೀರಾ ಎಂದು ಅಧಿಕಾರಿಗಳ ಬೆವರಿಳಿಸಿದ್ರು.

    ಪರಿಶೀಲನೆ ಬಳಿಕ ಸಭೆ ನಡೆಸಿದ ಡಿಸಿ, ಆಸ್ಪತ್ರೆಯ ಸಮರ್ಪಕ ನಿರ್ವಹಣೆಗೆ ಸೂಚಿಸಿದ್ರು. ಜಿಲ್ಲಾಧಿಕಾರಿಗಳ ಮುಂದೆ ತಲೆಯಾಡಿಸಿದ ಅಧಿಕಾರಿಗಳು ಇನ್ಮುಂದಾದರೂ ಬಡವರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವ ಕೆಲಸ ಮಾಡ್ತಾರಾ ಅನ್ನೋದೆ ಸದ್ಯದ ಪ್ರಶ್ನೆ. ಇದನ್ನೂ ಓದಿ: MUDA Scam | ಕೊನೇ ಹಂತದಲ್ಲಿದೆ ಸಿಎಂ ವಿರುದ್ಧದ ತನಿಖೆ

  • ನೆಲಮಂಗಲದ ಗೋವಿಂದಪುರ ಗ್ರಾಮದ ಯುವಕರಿಗಿಲ್ಲ ಮದುವೆ ಭಾಗ್ಯ!

    ನೆಲಮಂಗಲದ ಗೋವಿಂದಪುರ ಗ್ರಾಮದ ಯುವಕರಿಗಿಲ್ಲ ಮದುವೆ ಭಾಗ್ಯ!

    ನೆಲಮಂಗಲ: ಬೆಂಗಳೂರು ನಗರ ಸೇರಿದಂತೆ ತುಮಕೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಮೀಪದ ಕುಗ್ರಾಮದಲ್ಲಿರುವ ಸಮಸ್ಯೆಯಿಂದ ಯುವಕ-ಯುವತಿಯರ ಮದುವೆ ಮುರಿದು ಬಿದ್ದಿದೆ. ಈ ಗ್ರಾಮಕ್ಕೆ ಹೆಣ್ಣು ಅಥವಾ ಗಂಡು ಕೊಡಲು ಹೆತ್ತವರು ಹಿಂದೇಟು ಹಾಕುತ್ತಿದ್ದಾರೆ.

    ಹೌದು. ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಗೋವಿಂದಪುರ ಅಭಿವೃದ್ಧಿ ಕಾಣದೆ ಕಣ್ಣು ಹಾಯಿಸಿದ ಕಡೆಯೆಲ್ಲಾ ಕೊಳಚೆ ತುಂಬಿದೆ. ಈ ಗ್ರಾಮಕ್ಕೆ ಯಾವುದೇ ಮೂಲಭೂತ ಸೌಕರ್ಯಗಳಿಲ್ಲ. ಅರೇಬೊಮ್ಮನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಈ ಕುಗ್ರಾಮದಲ್ಲಿ ಅಲ್ಪಸಂಖ್ಯಾತ ಸಮುದಾಯದ ಸುಮಾರು 150ಕ್ಕೂ ಹೆಚ್ಚು ಮನೆಯಿದ್ದು 800-900 ಜನ ಸಂಖ್ಯೆ ಇದೆ. ಆದರೆ ಈ ಗ್ರಾಮ ರಸ್ತೆ, ಚರಂಡಿ, ನೀರಿನ ವ್ಯವಸ್ಥೆ, ಮೂಲಭೂತ ಸೌಕರ್ಯಗಳಿಂದ ಸೊರಗಿದೆ. ಹೀಗಾಗಿ ಈ ಗ್ರಾಮದ ಯುವಕರಿಗೆ ಹೆಣ್ಣು ಕೊಡಲು ಹಿಂದೆ-ಮುಂದೆ ನೋಡ್ತಿದ್ದಾರೆ ಎಂದು ಗ್ರಾಮಸ್ಥರು ಹೇಳುತ್ತಾರೆ.

    2018ರಲ್ಲಿ ನೆಲಮಂಗಲ ಯೋಜನಾ ಪ್ರಾಧಿಕಾರದಿಂದ 30 ಲಕ್ಷ, ಅಲ್ಪಸಂಖ್ಯಾತ ನಿಧಿಯಿಂದ 15 ಲಕ್ಷ, ಒಟ್ಟು 45 ಲಕ್ಷ ಹಣ ಗ್ರಾಮದ ಅಭಿವೃದ್ಧಿಗೆ ಅನುದಾನ ಬಂದಿದ್ದರೂ, ಸ್ಥಳೀಯ ರಾಜಕೀಯ ದ್ವೇಷಕ್ಕೆ ಅನುದಾನವೂ ವಾಪಸ್ ಹಾಗಿದೆ. ವೋಟ್ ಕೆಳೋ ಸಂದರ್ಬದಲ್ಲಿ ಮನೆ ಬಾಗಿಲಿಗೆ ಬರೋ ಜನಪ್ರತಿನಿಧಿಗಳು ಸಮಸ್ಯೆ ಅಂದಾಗ ಪತ್ತೆಯೇ ಇರಲ್ಲ ಅಂತ ಇಲ್ಲಿನ ಜನ ಹಿಡಿಶಾಪ ಹಾಕ್ತಿದ್ದಾರೆ. ಇದನ್ನೂ ಓದಿ: ಮದುವೆಯಾದ 3 ದಿನದವರೆಗೆ ಈ ದೇಶದಲ್ಲಿ ವಧು, ವರ ಟಾಯ್ಲೆಟ್‍ಗೆ ಹೋಗುವಂತಿಲ್ಲ!

    Live Tv
    [brid partner=56869869 player=32851 video=960834 autoplay=true]

  • ಊರಿನ ರಸ್ತೆ ಆಗುವರೆಗೂ ಮದುವೆಯಾಗುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ ಯುವತಿ

    ಊರಿನ ರಸ್ತೆ ಆಗುವರೆಗೂ ಮದುವೆಯಾಗುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ ಯುವತಿ

    ದಾವಣಗೆರೆ: ಸ್ವಾತಂತ್ರ್ಯ ಬಂದು 7 ದಶಕಗಳೇ ಕಳೆದಿವೆ, ಅದರೂ ಕೂಡ ದಾವಣಗೆರೆ ಜಿಲ್ಲೆಯ ಮಾಯಕೊಂಡ ಕ್ಷೇತ್ರದ ಹೆಚ್ ರಾಮಪುರ ಗ್ರಾಮಕ್ಕೆ ಇಂದಿಗೂ ಸರ್ಕಾರಿ ಬಸ್ ವ್ಯವಸ್ಥೆ ಇಲ್ಲ. ಹೀಗೆ ಹಲವಾರು ಸಮಸ್ಯೆಯನ್ನು ಕಂಡು ಬೇಸತ್ತ ಈ ಗ್ರಾಮದ ಯುವತಿಯೊಬ್ಬಳು ದಿಟ್ಟತನ ಪ್ರದರ್ಶನ ಮಾಡಿದ್ದು, ಪ್ರಧಾನಿ, ಮುಖ್ಯಮಂತ್ರಿಗೆ ಪತ್ರ ಬರೆದು ನಮ್ಮ ಊರಿನ ರಸ್ತೆ ಆಗುವವರೆಗೂ ನಾನು ಮದುವೆಯಾಗುವುದಿಲ್ಲ ಎಂದು ಶಪತ ಮಾಡಿದ್ದಾಳೆ.

    ರಾಂಪುರ ಜಿಲ್ಲಾ ಕೇಂದ್ರದಿಂದ ಕೇವಲ 30 ಕಿಲೋ ಮೀಟರ್ ದೂರವಿದ್ದರೆ, ಮಾಯಕೊಂಡ ವಿಧಾನಸಭಾ ಕ್ಷೇತ್ರದಿಂದ 6 ಕಿಲೋ ಮೀಟರ್ ದೂರವಷ್ಟೇ ಇದೆ. ಆದರೂ ಈ ಊರು ಇಂದಿಗೂ ಮೂಲಭೂತ ಸೌಕರ್ಯದಿಂದ ವಂಚಿತಗೊಂಡಿದೆ. ಈ ಊರಲ್ಲಿ ಯುವತಿಯರು ಶಾಲಾ-ಕಾಲೇಜ್‍ಗೆ ಹೋಗಬೇಕೆಂದರೆ ನಡೆದುಕೊಂಡೆ ಹೋಗಬೇಕು. ಮಳೆಗಾಲದಲ್ಲಿ ಮಣ್ಣಿನ ರಸ್ತೆಯಲ್ಲಿ ನಡೆದು ಶಾಲಾ-ಕಾಲೇಜ್‍ಗೆ ತೆರಳಬೇಕಾದ ಪರಿಸ್ಥಿತಿ ಇದೆ. ಸ್ವಾತಂತ್ರ್ಯ ಬಂದು 7 ದಶಕಗಳಾದರೂ ಈ ಗ್ರಾಮಕ್ಕೆ ಇನ್ನೂ ಸರ್ಕಾರಿ ಸಾರಿಗೆ ವ್ಯವಸ್ಥೆ ಇಲ್ಲ. ಬಸ್ ಇಲ್ಲದ ಕಾರಣ ಗ್ರಾಮದಲ್ಲಿ ಎಷ್ಟೋ ಯುವತಿಯರು ವಿದ್ಯಾಭ್ಯಾಸವನ್ನೇ ಮೊಟುಕುಗೊಳಿಸಿದ್ದಾರೆ. ಇದರಿಂದ ಬಾಲ್ಯ ವಿವಾಹ ಕೂಡ ಹೆಚ್ಚಾಗುತ್ತಿವೆ. ವಿಪರ್ಯಾಸವೆಂದರೆ ಓದುವ ಆಸೆಯಿದ್ದರು ಸರಿಯಾದ ಬಸ್ ವ್ಯವಸ್ಥೆ ಇಲ್ಲ ಎಂಬ ಕಾರಣ ಮಹಿಳೆಯರು ಮನೆಯಲ್ಲೇ ಕೂರುವಂತಾಗಿದೆ. ಇದರಿಂದ ಈ ಊರಲ್ಲಿ ಹೆಣ್ಣು ಮಕ್ಕಳು ಹೆಚ್ಚಿನ ವಿದ್ಯಾಭ್ಯಾಸ ಮಾಡಿಲ್ಲ ಎಂದು ಮದುವೆಯಾಗಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ನಾಪತ್ತೆಯಾಗಿದ್ದ ಬಾಲಕ ಶವವಾಗಿ ಕೆರೆಯಲ್ಲಿ ಪತ್ತೆ

    ಈ ಎಲ್ಲಾ ಸಮಸ್ಯೆಗಳನ್ನ ಗ್ರಾಮದ ಬಿಂದು ಎಂಬ ಯುವತಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮೂಲಭೂತ ಸೌಕರ್ಯ ಒದಗಿಸುವಂತೆ ಪತ್ರ ಬರೆದಿದ್ದಾರೆ. ತಮ್ಮ ಗ್ರಾಮದ ಸಮಸ್ಯೆ ಬಗೆಹರಿಸಿಕೊಡಿ ಎಂದು ಮನವಿ ಮಾಡಿಕೊಂಡಿದ್ದು, ಅಲ್ಲದೆ ಗ್ರಾಮಕ್ಕೆ ರಸ್ತೆ ಆಗುವರೆಗೂ ತಾನು ಮದುವೆಯಾಗುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾಳೆ.

    ರಾಜಕಾರಣಿಗಳು ಚುನಾವಣೆ ಮಾತ್ರ ಬರುತ್ತಾರೆ ನಂತರ ಯಾರು ಬರಲ್ಲ ಎಂದು ಅಳಲು ತೋಡಿಕೊಂಡಿರುವ ಗ್ರಾಮಸ್ಥರು, ಮಕ್ಕಳನ್ನ ಹೆಚ್ಚು ಓದಿಸಬೇಕೆಂದು ಆಸೆ ಇದೆ ಆದರೆ, ಬಸ್ ಹಾಗೂ ರಸ್ತೆ ವ್ಯವಸ್ಥೆ ಇಲ್ಲ ಎಂಬ ಕಾರಣ ವಿದ್ಯಾಭ್ಯಾಸವನ್ನು ಮೊಟುಕುಗೊಳಿಸಬೇಕಾದ ಅನಿವಾರ್ಯವಿದೆ ಮೊಬೈಲ್ ಟವರ್, ಸರಿಯಾದ ರಸ್ತೆ, ಬಸ್ ವ್ಯವಸ್ಥೆ ಇದಲ್ಲದೆ ಸರ್ಕಾರ ನೀಡುವ ಪಡಿತರ ಅಕ್ಕಿಯನ್ನು ಪಡೆಯಲು 12 ಕಿಲೋಮೀಟರ್ ಹೋಗಿ ಬರಬೇಕಾದ ಪರಿಸ್ಥಿತಿ ಇದೆ. ಯಾವುದೇ ಮೂಲಭೂತ ಸೌಕರ್ಯಗಳಿಲ್ಲದ ಈ ಊರಿಗೆ ಬೇರೆ ಗ್ರಾಮದಿಂದ ಯಾರು ಕೂಡ ಹುಡುಗರಿಗೆ ಮದುವೆಯಾಗಲು ಹೆಣ್ಣು ಕೊಡುತ್ತಿಲ್ಲ, ಹಾಗೂ ಇಲ್ಲಿಂದ ಹೆಣ್ಣನ್ನು ಮದುವೆ ಮಾಡಿಕೊಂಡು ಹೋಗುತ್ತಿಲ್ಲ. ಅಷ್ಟರ ಮಟ್ಟಿಗೆ ಇಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ ಗ್ರಾಮದ ಜನರು ತೊಂದರೆ ಅನುಭವಿಸುತ್ತಿದ್ದಾರೆ.

    ಬಿಂದು ತಮ್ಮ ಊರಿನ ಸಮಸ್ಯೆಗಳ ಬಗ್ಗೆ ಪ್ರಧಾನಿ ಹಾಗೂ ಸಿಎಂಗೆ ಬರೆದ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ನಡುವೆ ಸಿಎಂ ಕೂಡ ಅವರ ಪತ್ರಕ್ಕೆ ಸ್ಪಂದಿಸಿದ್ದು ರಸ್ತೆ ಮಾಡಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಸಿಎಂ ಅಧಿಕೃತ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸಿದ ಬುಡಕಟ್ಟು ಜನಾಂಗದ ನಾಲ್ವರು

  • ನಗರಸಭೆ ವಿರುದ್ಧ ಪೌರಕಾರ್ಮಿಕರಿಂದ ಅರೆಬೆತ್ತಲೆ ಪ್ರತಿಭಟನೆ

    ನಗರಸಭೆ ವಿರುದ್ಧ ಪೌರಕಾರ್ಮಿಕರಿಂದ ಅರೆಬೆತ್ತಲೆ ಪ್ರತಿಭಟನೆ

    ಗದಗ: ಸರಿಯಾಗಿ ಸಂಬಳ ನೀಡದ ಹಿನ್ನೆಲೆಯಲ್ಲಿ ವೇತನ ಜಾರಿಗಾಗಿ ಆಗ್ರಹಿಸಿ ಪೌರಕಾರ್ಮಿಕರು ಗದಗ-ಬೆಟಗೇರಿ ನಗರಸಭೆಯ ಮುಂಭಾಗ ಅರೆಬೆತ್ತಲೆ ಪ್ರತಿಭಟನೆ ಮಾಡಿದ್ದಾರೆ.

    ನಗರಸಭೆಯ ಹೊರಗುತ್ತಿಗೆ ಕಾರ್ಮಿಕರಿಗೆ ಕಳೆದ 7 ತಿಂಗಳು ಹಾಗೂ ಖಾಯಂ ನೌಕರರಿಗೆ 3 ತಿಂಗಳಿಂದ ವೇತನ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ವೇತನ ನೀಡುವಂತೆ ಆಗ್ರಹಿಸಿ ಕಾರ್ಮಿಕರು ಪ್ರತಿಭಟನೆ ನಡೆಸಿದ್ದಾರೆ.

    ಸರಿಯಾದ ಸಂಬಳ ಸಿಗದ ಕಾರಣಕ್ಕೆ ತಮ್ಮ ಕುಟುಂಬಗಳು ನಿತ್ಯ ಊಟಕ್ಕೂ ಪರಿತಪಿಸುವಂತಾಗಿದೆ. ಆದರೆ ನಗರಸಭೆ ಅಧಿಕಾರಿಗಳಿಗೆ ಮಾತ್ರ ಕಾರ್ಮಿಕರ ಕಷ್ಟ ಕಾಣುತ್ತಿಲ್ಲ. ನಮ್ಮನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ನಗರಸಭೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಪೌರ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದರು.

    ನಗರಸಭೆ ಗೇಟ್ ಬಂದ್ ಮಾಡಿ ಕಚೇರಿ ಎದುರು ವಾಹನಗಳನ್ನು ಇಟ್ಟು ಕಾರ್ಮಿಕರು ಅರೆಬೆತ್ತಲೆ ಸ್ಥಿತಿಯಲ್ಲಿ ಪ್ರತಿಭಟನೆ ನಡೆಸಿದರು. ವೇತನ ನೀಡಿ, ಕಾರ್ಮಿಕರಿಗೆ ಮೂಲಭೂತ ಸೌಲಭ್ಯಗಳನ್ನು ಕೊಡಿ ಎಂದು ಆಗ್ರಹಿಸಿದರು. ಜೊತೆಗೆ ಕಷ್ಟ ಪಟ್ಟು ಮಾಡುವ ಕೆಲಸಕ್ಕೆ ನಮಗೆ ನೀಡಬೇಕಾದ ವೇತನ ಜಾರಿಗೊಳಿಸಲು ಅಧಿಕಾರಿಗಳು ಲಂಚದ ಬೇಡಿಕೆ ಇಡುತ್ತಿದ್ದಾರೆ ಎಂದು ಆರೋಪಿಸಿದರು.

  • ಮೂಲಸೌಕರ್ಯವಿಲ್ಲದೇ ಅಲೆಮಾರಿಗಳ ಬದುಕು ಹೇಗಿದೆ ಗೊತ್ತಾ..?

    ಮೂಲಸೌಕರ್ಯವಿಲ್ಲದೇ ಅಲೆಮಾರಿಗಳ ಬದುಕು ಹೇಗಿದೆ ಗೊತ್ತಾ..?

    ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲೂಕಿನ ಬೀರೂರು ಹೋಬಳಿಯ ವ್ಯಾಪ್ತಿಯಲ್ಲಿ ಬರುವ ಗ್ರಾಮ ಹರಳಘಟ್ಟ. ಈ ಗ್ರಾಮದಲ್ಲಿರುವ ನಿವಾಸಿಗಳು ಹೆಳವ ಸಮುದಾಯಕ್ಕೆ ಸೇರಿದವರು. ಇಲ್ಲಿ ವಾಸವಾಗಿರುವ ಎಲ್ಲಾ ಕುಟುಂಬಕ್ಕೆ 1984ರಲ್ಲಿ ಸರ್ಕಾರವೇ ಆಶ್ರಯ ಯೋಜನೆಯಡಿ ಮನೆ ನೀಡಿ ಹಕ್ಕು ಪತ್ರವನ್ನೂ ನೀಡಿದೆ.

    1998ರಲ್ಲಿ ಅಧಿಕಾರಿಗಳು ವಾಸವಿದ್ದ ಮನೆಗಳು ಸರ್ವೇ ನಂಬರ್ 4ರ ಆರು ಎಕರೆ ಜಾಗ ಸ್ಮಶಾನಕ್ಕೆ ಸೇರಿದ್ದು, ಸ್ಮಶಾನವೆಂದು ನಮೂದಿಸಿ ಇಲ್ಲಿನ ಜನರನ್ನು ಒಕ್ಕಲೆಬ್ಬಿಸುವ ಪ್ರಯತ್ನ ಮಾಡಿದ್ದಾರೆ. ಇಲ್ಲಿನ ಗ್ರಾಮಸ್ಥರು ಸಂಬಂಧಪಟ್ಟ ಆಧಿಕಾರಿಗಳನ್ನು ಭೇಟಿ ಮಾಡಿ ಮನವಿ ಮಾಡಿದ್ರೂ ತಹಶೀಲ್ದಾರ್ ಆಗಲಿ ಜಿಲ್ಲಾಧಿಕಾರಿಗಳು ಮಾತ್ರ ಇವರ ಸಹಾಯಕ್ಕೆ ಬರಲಿಲ್ಲ.

    ಸ್ಮಶಾನಕ್ಕೆ ಮೀಸಲಿಟ್ಟ ಜಾಗವೆಂದು ನಮೂದಿಸಿದಾಗಿನಿಂದ ಈ ಹರಳಘಟ್ಟ ಗ್ರಾಮದಲ್ಲಿ ರಸ್ತೆ, ಕುಡಿಯುವ ನೀರು, ವಿದ್ಯುತ್ ಸಂಪರ್ಕ ಇಲ್ಲದೇ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದರು,. ಇಲ್ಲಿನ ಗ್ರಾಮಸ್ಥರ ಮಕ್ಕಳ ವಿದ್ಯಾಭ್ಯಾಸ ಮರೀಚಿಕೆಯಾಗಿದೆ. ಸುಮಾರು 40 ಮನೆಗಳಿದ್ದು ಕೇವಲ 200 ವೋಟ್ ಎಂದು ರಾಜಕಾರಣಿಗಳು ಈ ಗ್ರಾಮದ ಅಭಿವೃದ್ಧಿಗೆ ಶ್ರಮಿಸುತ್ತಿಲ್ಲ. ಅಷ್ಟೇ ಅಲ್ಲ ಅಲೆಮಾರಿ ಫಂಡ್‍ನಿಂದ 20 ಮನೆಗಳ ನಿರ್ಮಾಣಕ್ಕೆ ಹಣ ಮಂಜುರಾಗಿದ್ರು ಸ್ಮಶಾನದ ಜಾಗವೆಂದು ಕಟ್ಟೋದಕ್ಕೆ ಅಧಿಕಾರಿಗಳು ಬಿಡುತ್ತಿಲ್ಲ. ಅಧಿಕಾರಿಗಳು ಮಾಡಿದ ತಪ್ಪಿನಿಂದ ಈ ಅಲೆಮಾರಿ ಜನಾಂಗದವರು ಇಂದಿಗೂ ಆತಂಕದಿಂದಲೇ ಬದುಕುತ್ತಿದ್ದಾರೆ.

    ಸತತ ಎರಡು ವರ್ಷದಿಂದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮಿ ಹಾಗೂ ಸದಸ್ಯ ಸುಧಾಕಾಂತ್ ಸ್ಮಶಾನ ಜಾಗವನ್ನು ಸ್ಥಳಾಂತರಿಸದಿದ್ದರೆ ಗ್ರಾಮಪಂಚಾಯ್ತಿ ಮೆಟ್ಟಿಲು ತುಳಿಯೋದಿಲ್ಲ ಎಂದು ಶಪಥ ಮಾಡಿ ಹೋರಾಟ ನಡೆಸುತ್ತಿದ್ದಾರೆ. ಆದರೆ ಇವರ ಹೋರಾಟಕ್ಕೆ ಯಾರು ಬೆಂಬಲ ನೀಡುತ್ತಿಲ್ಲ. ನಮ್ಮ ಹೋರಾಟಕ್ಕೆ ಸಹಾಯ ಮಾಡಿ ನಮ್ಮ ಸಮಸ್ಯೆಗೆ ಪರಿಹಾರ ಸೂಚಿಸಿ ಎಂದು ಗ್ರಾಮಸ್ಥರು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದ ಮೊರೆ ಬಂದಿದ್ದಾರೆ. ಸರ್ಕಾರ ಈ ಅಲೆಮಾರಿ ಜನಾಂಗದವರ ನೆರವಿಗೆ ಬರಲಿ ಅನ್ನೋದು ನಮ್ಮ ಆಶಯ.

    https://youtu.be/rE8HEQkycPE

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ದಯವಿಟ್ಟು ಮತ ಕೇಳಲು ಬರಬೇಡಿ – ಸ್ಮಾರ್ಟ್ ಸಿಟಿ ದಾವಣಗೆರೆ ಜನತೆಯಿಂದ ಅಭಿಯಾನ

    ದಯವಿಟ್ಟು ಮತ ಕೇಳಲು ಬರಬೇಡಿ – ಸ್ಮಾರ್ಟ್ ಸಿಟಿ ದಾವಣಗೆರೆ ಜನತೆಯಿಂದ ಅಭಿಯಾನ

    ದಾವಣಗೆರೆ: ಮೂಲ ಸೌಕರ್ಯ ಕಲ್ಪಿಸದ ಮಹಾನಗರ ಪಾಲಿಕೆ ವಿರುದ್ಧ ನಗರದ ಸ್ಮಾರ್ಟ್ ಸಿಟಿಯಲ್ಲಿನ ನಿವಾಸಿಗಳು ಕೋಪಗೊಂಡಿದ್ದು, ದಯವಿಟ್ಟು ಮತ ಕೇಳಲು ಬರಬೇಡಿ ಎಂದು ಮತದಾನ ಬಹಿಷ್ಕಾರ ಅಭಿಯಾನ ನಡೆಸುತ್ತಿದ್ದಾರೆ.

    ಮಹಾನಗರ ಪಾಲಿಕೆಯ 18 ನೇ ವಾರ್ಡ್ ವಿನಾಯಕ ನಗರದ “ಎ” ಬ್ಲಾಕ್ ನಲ್ಲಿ 200 ಕ್ಕೂ ಹೆಚ್ಚು ಮನೆಗಳಿವೆ. ಅದರಲ್ಲಿ 100 ಕ್ಕೂ ಹೆಚ್ಚು ಮನೆಗಳ ಮುಂದೆ ಜನ ಮತದಾನ ಬಹಿಷ್ಕಾರದ ಪೋಸ್ಟರ್ ಹಾಕಿದ್ದಾರೆ.

    20 ದಿನಗಳಿಗೊಮ್ಮೆ ಕುಡಿಯೋಕೆ ನೀರು ಬಿಡ್ತಾರೆ. ಅಲ್ಲದೇ ರಾತ್ರಿ ಬೀದಿ ದೀಪದ ವ್ಯವಸ್ಥೆ ಇಲ್ಲ, ರಸ್ತೆ ಗುಂಡಿಮಯವಾಗಿವೆ. ಹಾಗೂ ಸ್ವಚ್ಛತೆ ಅನ್ನೋದು ಮರೀಚಿಕೆಯಾಗಿದೆ. ಸಮಸ್ಯೆಯ ಬಗ್ಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಕೆಲಸ ಆಗದ ಹಿನ್ನೆಲೆಯಲ್ಲಿ ನಾವು ಈ ನಿರ್ಧಾರಕ್ಕೆ ಬಂದಿದ್ದೇವೆ ಎಂದು ನಿವಾಸಿಗಳು ಹೇಳಿದ್ದಾರೆ.

    ಮೂಲ ಸೌಕರ್ಯಕ್ಕೆ ಆಗ್ರಹಿಸಿ ಸತತ ಮೂರು ವರ್ಷಗಳಿಂದ ಹೋರಾಟ ನಡೆಸಿದರೂ ಅಲ್ಲಿನ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಜನರ ಸಮಸ್ಯೆ ಆಲಿಸದೇ ಅತ್ತ ತಿರುಗಿಯೂ ಕೂಡ ನೋಡುತ್ತಿಲ್ಲ. ಹಾಗಾಗಿ ಮೂಲ ಸೌಕರ್ಯ ಒದಗಿಸದ ಹೊರತು ಮತದಾನ ಮಾಡೋದಿಲ್ಲ ಅಂತ ಪಟ್ಟು ಹಿಡಿದು ನಿವಾಸಿಗಳು ಮತದಾನ ಬಹಿಷ್ಕಾರ ಅಭಿಯಾನವನ್ನು ಕೈಗೊಂಡಿದ್ದಾರೆ.