Tag: ಮೂಲಂಗಿ

  • ಮೂಲಂಗಿ ಮಾರಿ ಜೀವನ ನಡೆಸುತಿದ್ದ ಪತ್ನಿಯನ್ನ ಕುಡಿದ ಅಮಲಿನಲ್ಲಿ ಕೊಲೆ ಮಾಡಿದ ಪತಿ

    ಮೂಲಂಗಿ ಮಾರಿ ಜೀವನ ನಡೆಸುತಿದ್ದ ಪತ್ನಿಯನ್ನ ಕುಡಿದ ಅಮಲಿನಲ್ಲಿ ಕೊಲೆ ಮಾಡಿದ ಪತಿ

    ಧಾರವಾಡ: ಮೂಲಂಗಿ ಮಾರಾಟ ಮಾಡಿ ಜೀವನ ನಡೆಸುತ್ತಿದ್ದ ಪತ್ನಿಯನ್ನು ಪತಿಯೇ ಕಲ್ಲಿನಿಂದ ಹೊಡೆದು ಕೊಲೆ ಮಾಡಿದ ಘಟನೆ ಧಾರವಾಡದಲ್ಲಿ(Dharwad) ನಡೆದಿದೆ.

    ನಗರದ ಕೋಳಿಕೇರಿ ತೋಟದಲ್ಲಿ ಈ ಕೊಲೆ ನಡೆದಿದ್ದು, ಮಂಜವ್ವ ಪಠಾದ್ (42) ಅವಳನ್ನು ಆಕೆಯ ಪತಿ ಗದಿಗೆಪ್ಪ ಕೊಲೆ ಮಾಡಿದ್ದಾನೆ. ಗದಿಗೆಪ್ಪ ಕುಡಿತದ ಚಟಕ್ಕೆ ಬಿದ್ದಿದ್ದ. ಈ ಹಿನ್ನೆಲೆ ಪತಿ(Husband) ಹಾಗೂ ಪತ್ನಿಯ(Wife) ನಡುವೆ ಆಗಾಗ ಜಗಳ ಆಗುತಿತ್ತು. ಕಳೆದ ರಾತ್ರಿ ಕೂಡಾ ಪತಿ, ಪತ್ನಿ ನಡುವೆ ಜಗಳ ಆಗಿತ್ತು. ಆದರೆ ಇಂದು ಮಂಜವ್ವ ಹೊಲದಲ್ಲಿ ಮೂಲಂಗಿ ತೊಳೆಯುವಾಗ ಗದಿಗೆಪ್ಪ ಕಲ್ಲಿನಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಇದನ್ನೂ ಓದಿ: ಎಷ್ಟೇ ದೊಡ್ಡ ಹುಲಿ ಆದ್ರೂ, ಕಾನೂನಿಗೆ ಒಂದೇ – ಬಿಎಸ್‌ವೈಗೆ ಟಾಂಗ್ ನೀಡಿದ ಯತ್ನಾಳ್

    crime

    ಮಂಜವ್ವ ಪತಿ ಗದಿಗೆಪ್ಪ ಈ ಹಿಂದೆ ಕೂಡಾ ಧಾರವಾಡ ತಾಲೂಕಿನ ಯಾದವಾಡ ಗ್ರಾಮದಲ್ಲಿ ಹೊಲದ ವಿಚಾರವಾಗಿ ಒಂದು ಕೊಲೆ ಮಾಡಿ ಜೈಲು ಸೇರಿದ್ದ. ಕಳೆದ ನಾಲ್ಕು ವರ್ಷಗಳ ಹಿಂದೆಯಷ್ಟೇ ಈತ ಸೆರೆವಾಸ ಮುಗಿಸಿ ಜೈಲಿನಿಂದ ಹೊರ ಬಂದಿದ್ದ. ಅಲ್ಲದೇ ಮಂಜವ್ವಳ ಸಹೋದರಿ ಕೂಡಾ ಕೆಲ ವರ್ಷಗಳ ಹಿಂದೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಳು. ಸದ್ಯ ಶಹರ ಪೊಲೀಸ್ ಠಾಣೆ ಪೊಲೀಸರು ಮಂಜವ್ವಳ ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ. ಇದನ್ನೂ ಓದಿ:  ಮುರುಘಾ ಮಠದಿಂದ ಇಬ್ಬರು ಬಾಲಕರು ನಾಪತ್ತೆ

    Live Tv
    [brid partner=56869869 player=32851 video=960834 autoplay=true]

  • ಮೂಲಂಗಿಯಲ್ಲಿದೆ ಆರೋಗ್ಯಕರ ಗುಣಗಳು

    ಮೂಲಂಗಿಯಲ್ಲಿದೆ ಆರೋಗ್ಯಕರ ಗುಣಗಳು

    ಮೂಲಂಗಿ ನೋಡಿದರೆ ಮೂಗು ಮುರಿಯುವವರೇ ಹೆಚ್ಚಾಗಿದ್ದಾರೆ. ಮೂಲಂಗಿ ವಾಸನೇ ಹೆಚ್ಚಿನವರಿಗೆ ಇಷ್ಟವಾಗುವುದಿಲ್ಲ. ಆದರೆ ಮೂಲಂಗಿ ಸೇವನೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎನ್ನುವ ವಿಚಾರ ಎಷ್ಟೋ ಜನರಿಗೆ ತಿಳಿದಿರುವುದಿಲ್ಲ. ನಾರಿನಂಶ ಮತ್ತು ವಿಟಮಿನ್ ಅಧಿಕವಿದ್ದು, ಮಲಬದ್ಧತೆ ಮತ್ತು ಮಲವ್ಯಾಧಿಯಂತಹ ಕಾಯಿಲೆಗಳನ್ನು ಗುಣಪಡಿಸಲು ಮೂಲಂಗಿ ಸಹಕಾರಿಯಾಗಿದೆ. ಇದನ್ನೂ ಓದಿ: ಅನ್ನದಿಂದ ಆರೋಗ್ಯಕ್ಕೆ ಸಿಗುವ ಪ್ರಯೋಜನಗಳೇನು ಗೊತ್ತಾ?

    * ಹಸಿ ಮೂಲಂಗಿಯನ್ನು ತುರಿದು ಉಪ್ಪು ಮತ್ತು ನಿಂಬೆರಸ ಸೇರಿಸಿ ತಿಂದರೆ ನೆಗಡಿ ನಿವಾರಣೆಯಾಗುತ್ತದೆ.


    * ರಕ್ತವನ್ನು ಶುದ್ಧೀಕರಿಸುತ್ತದೆ ಮತ್ತು ದೇಹದಲ್ಲಿ ರಕ್ತ ಸಂಚಾರ ಸರಿಯಾಗಿ ನಡೆಯುವಂತೆ ಮಾಡುತ್ತದೆ. ಇದನ್ನೂ ಓದಿ: ಭಾರತದಲ್ಲಿ ಬಿಟ್ ಕಾಯಿನ್ ಚಲಾವಣೆ ಕಾನೂನುಬದ್ಧ – ಮೋದಿ ಟ್ವಿಟ್ಟರ್‌ ಖಾತೆ ಹ್ಯಾಕ್‌

    * ಮೂಲಂಗಿ ಸೊಪ್ಪಿನ ರಸವನ್ನು ಸೇವಿಸಿದರೆ ಮೂತ್ರ ಕಟ್ಟಿಕೊಳ್ಳುವ ಸಮಸ್ಯೆ ಇದ್ದರೆ ನಿವಾರಣೆಯಾಗುತ್ತದೆ.


    *ಹಸಿ ಮೂಲಂಗಿ ಹಾಕಿ ಸಲಾಡ್ ಮಾಡಿ ತಿಂದರೆ ಮೂಲವ್ಯಾಧಿ ಸಮಸ್ಯೆ ಕಡಿಮೆಯಾಗುವುದು. ಇದನ್ನೂ ಓದಿ: ನಾವು ಮಠಕ್ಕೆ ಬಂದು ಮೊಟ್ಟೆ ತಿಂತೀವಿ: ಮಠಾಧೀಶರಿಗೆ ವಿದ್ಯಾರ್ಥಿನಿ ಸವಾಲು

    * ಮೂಲಂಗಿ ಎಲೆಗಳಲ್ಲಿ ಸಾಕಷ್ಟು ಪ್ರಮಾಣದ ಫೈಬರ್ ಕಂಡುಬರುತ್ತದೆ. ಮೂಲಂಗಿ ಎಲೆಗಳಿಂದ ತಯಾರಿಸಿದ ಜ್ಯೂಸ್ ಸೇವಿಸಿದರೆ ಜೀರ್ಣಕ್ರಿಯೆಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳ ಬಹುದಾಗಿದೆ.


    * ತೂಕ ಇಳಿಸಿಕೊಳ್ಳಲು ಬಯಸಿದರೆ, ಮೂಲಂಗಿ ಎಲೆ ಎಲ್ಲರಿಗೂ ಉತ್ತಮ ಆಯ್ಕೆಯಾಗಿದೆ. ಹೌದು, ಮೂಲಂಗಿ ಎಲೆಗಳಿಂದ ತಯಾರಿಸಿದ ಜ್ಯೂಸ್ ಸೇವಿಸುವ ಮೂಲಕ ನೀವು ಸುಲಭವಾಗಿ ತೂಕವನ್ನು ಕಡಿಮೆ ಮಾಡಬಹುದು

    ಮೂಲಂಗಿ ಜ್ಯೂಸ್ ಮಾಡುವುದು ಹೇಗೆ?: ಮೂಲಂಗಿ ಎಲೆಗಳನ್ನು ನೀರಿನಿಂದ ಚೆನ್ನಾಗಿ ತೊಳೆಯಿರಿ. ಬಳಿಕ ಸಣ್ಣ ತುಂಡುಗಳಾಗಿ ಕತ್ತರಿಸಿ, ಎಲೆಗಳನ್ನು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಇದಕ್ಕೆ ರುಚಿಗೆ ತಕ್ಕಂತೆ ಉಪ್ಪು, ಚಿಟಿಕೆ ಕರಿಮೆಣಸಿನ ಪುಡಿ ಮತ್ತು ನಿಂಬೆ ರಸವನ್ನು ಸೇರಿಸಿದರೆ ಮೂಲಂಗಿ ಎಲೆಗಳ ಜ್ಯೂಸ್ ಸವಿಯಲು ಸಿದ್ಧವಾಗುತ್ತದೆ.

  • ಮನೆ ಮದ್ದು ಮೂಲಂಗಿ ಸೇವನೆಯ ಲಾಭಗಳು

    ಮನೆ ಮದ್ದು ಮೂಲಂಗಿ ಸೇವನೆಯ ಲಾಭಗಳು

    ಡುಗೆಗೆ ಬಳಸುವ ತರಕಾರಿಯಲ್ಲಿ ಕೆಲವೊಂದು ಮಾತ್ರ ಆಯ್ಕೆ ಮಾಡಿಕೊಂಡು ತಿನ್ನುವುದು ಹೆಚ್ಚು. ಆದರೆ ನಾವು ಬೇಡ ಎಂದು ದೂರ ತಳ್ಳುವ ಮೂಲಂಗಿಯಿಂದ ನಮ್ಮ ಆರೋಗ್ಯಕ್ಕೆ ಹಲವು ಉತ್ತಮ ಪೋಷಕಾಂಶಗಳು ಸಿಗುತ್ತವೆ. ಮೂಲಂಗಿಯನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳುವುದರಿಂದ ಆರೋಗ್ಯಕ್ಕೆ ಸಿಗುವ ಅಂಶಗಳನ್ನು ಕೇಳಿದರೆ ಖಂಡಿತವಾಗಿಯೂ ಮೂಲಂಗಿಯನ್ನು ತಿನ್ನಲು ಪ್ರಾರಂಭಿಸುತ್ತಿರಿ.

    * ಪ್ರತಿದಿನ ಬೆಳಗ್ಗೆ ಮೂಲಂಗಿಯನ್ನು ತಿನ್ನುವುದರಿಂದ ಕಾಮಾಲೆ ಅಲ್ಲದೆ ಮಧುಮೇಹ ರೋಗವನ್ನು ಸಹ ದೂರ ಮಾಡಬಹುದು
    * ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರು ಮೂಲಂಗಿಯನ್ನು ಸೇವನೆ ಮಾಡುವುದರಿಂದ ರಕ್ತದೊತ್ತಡವನ್ನು ನಿಯಂತ್ರಿಸಬಹುದಾಗಿದೆ.
    * ಮೂಲಂಗಿ ರಸದೊಂದಿಗೆ ಶುಂಠಿ ರಸವನ್ನು ಬೆರಸಿ ಕುಡಿಯುವುದರಿಂದ ಹಸಿವು ಹೆಚ್ಚುವುದಲ್ಲದೆ, ಹೊಟ್ಟೆಗೆ ಸಂಬಂಧಿಸಿದ ಎಲ್ಲಾ ಕಾಯಿಲೆಗಳನ್ನು ದೂರ ಮಾಡುತ್ತದೆ.

    * ಒಂದು ಚಮಚ ಜೇನು ತುಪ್ಪಕ್ಕೆ, ಒಂದು ಚಮಚ ಮೂಲಂಗಿ ರಸ ಸೇರಿಸಿ ಸೇವಿಸಿದರೆ ಒಣ ಕೆಮ್ಮು ನಿವಾರಣೆಯಾಗುತ್ತದೆ.
    * ಮೂಲಂಗಿ ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ.
    * ಜಾಂಡೀಸ್ ಅಥವಾ ಕಾಮಾಲೆ ರೋಗಕ್ಕೆ ಮೂಲಂಗಿ ರಾಮಬಾಣದಂತೆ ಕೆಲಸ ಮಾಡುತ್ತದೆ.
    * ಮೂಲಂಗಿ ಮತ್ತು ಉಪ್ಪು ಸೇರಿಸಿ ನುಣ್ಣಗೆ ಅರಿದು ಚೇಳು ಕಚ್ಚಿದ ಸ್ಥಳಕ್ಕೆ ಹಚ್ಚಿದರೆ ಚೇಳಿನ ವಿಷ ಏರುವುದಿಲ್ಲ

    ಮೂಲಂಗಿಯಿಂದ ಆರೋಗ್ಯಕ್ಕೆ ಬೇಕಾಗುವ ಉತ್ತಮ ಪ್ರಮಾಣದ ಫೈಬರ್ ಸಿಗುತ್ತದೆ. ಮೂಲಂಗಿಯನ್ನು ಬೇಡ ಎಂದು ದೂರ ತಳ್ಳುವ ಬದಲಾಗಿ ಇನ್ನಾದರೂ ಪ್ರತಿನಿತ್ಯದ ಆಹಾರದಲ್ಲಿ ಕೊಂಚ ಪ್ರಮಾಣದಲ್ಲಾದರೂ ಸೇರಿಸಿಕೊಳ್ಳಿ.

  • ಬಾಹ್ಯಾಕಾಶದಲ್ಲಿ ಮೂಲಂಗಿ ಬೆಳೆದ ನಾಸಾ

    ಬಾಹ್ಯಾಕಾಶದಲ್ಲಿ ಮೂಲಂಗಿ ಬೆಳೆದ ನಾಸಾ

    ವಾಷಿಂಗ್ಟನ್: ಬಾಹ್ಯಾಕಾಶದಲ್ಲಿ ಅತೀ ಕಡಿಮೆ ಗುರುತ್ವಾಕಷಣೆ ಅಡಿಯಲ್ಲಿ ನಾಸಾ ಮೂಲಂಗಿಯನ್ನು ಬೆಳೆದಿದೆ.

    ನಾಸಾದ ವಿಜ್ಞಾನಿಗಳು ಮೈಕ್ರೋಗ್ರಾವಿಟಿಯಡಿ ತರಕಾರಿಯನ್ನು ಬೆಳೆಯುವ ಪ್ರಯತ್ನಕ್ಕೆ ಮುಂದಾಗಿ ಯಶಸ್ವಿಯಾಗಿದ್ದಾರೆ. ಕಡಿಮೆ ಗುರುತ್ವಾಕರ್ಷಣೆಯ ವಾತಾವರಣದಲ್ಲಿ ನಾಸಾ ಮೂಲಂಗಿಯನ್ನು ಬೆಳೆದಿದೆ.

    ಚಂದ್ರ ಹಾಗೂ ಮಂಗಳನ ಅಂಗಳಕ್ಕೆ ಗಗನಯಾತ್ರಿಗಳನ್ನು ಕಳುಹಿಸಲು ಸಿದ್ಧತೆ ನಡೆಸುತ್ತಿರುವ ನಾಸಾ ಈಗ ಕೆಲವು ಪ್ರಯೋಗಗಳನ್ನು ಮಾಡುತ್ತಿದೆ.

    ಭೂಮಿಯಿಂದ ಲಕ್ಷಾಂತರ ಮೈಲಿ ದೂರ ಅನ್ಯಗ್ರಹಗಳಿಗೆ ಹೊಗುವ ಗಗನಯಾನಿಗಳಿಗೆ ನಿಯಮಿತವಾಗಿ ತಾಜಾ ಆಹಾರ ಮೂಲ ಬೇಕಾಗಬಹುದು ಎಂಬ ಉದ್ದೇಶದಿಂದ ಈ ಪ್ರಯೋಗವನ್ನು ಮಾಡಿದೆ.


    ಮೂಲಂಗಿ ಬೆಳದಿದ್ದು ಹೇಗೆ:
    ಗುರುತ್ವಾಕರ್ಷಣೆ ಕಡಿಮೆ ಇರುವ ಹಿನ್ನೆಲೆ ಆ ಸ್ಥಳದಲ್ಲಿ ಗಿಡದ ಬುಡಗಳು ಮಣ್ಣನ್ನು ಹಿಡಿದಿಟ್ಟುಕೊಳ್ಳಲು ಆಗುವುದಿಲ್ಲ. ಹೀಗಾಗಿ ದಿಂಬುಗಳಲ್ಲಿ ಬೀಜಗಳನ್ನು ಹಾಕಿ ಬೆಳೆಯಲಾಗಿದೆ. ಗಿಡದ ಬುಡಕ್ಕೆ ನೀರು ಹಾಗೂ ಗೊಬ್ಬರ ಪೂರೈಕೆ ಮಾಡಲು ದಿಂಬನ್ನು ಬಳಸಲಾಗಿದೆ.

    ಮೂಲಂಗಿಯೇ ಯಾಕೆ?
    ಮೂಲಂಗಿ ಅತೀ ಕಡಿಮೆ ಅವಧಿಯಲ್ಲಿ ಫಲ ಕೊಡುತ್ತದೆ. ಅಲ್ಲದೆ ಬಾಹ್ಯಾಕಾಶದಲ್ಲಿ ಅಧ್ಯಯನ ಮಾಡುವ ಸಸ್ಯ ಥಳಿಗೆ ಮೂಲಂಗಿ ಹೋಲುತ್ತದೆ. ಹೆಚ್ಚು ಪೌಷ್ಟಿಕಾಂಶವನ್ನು ಹೊಂದಿದೆ. ಹೀಗಾಗಿ ಮೂಲಂಗಿ ಬೆಳೆ ಆಯ್ಕೆ ಮಾಡಿಕೊಳ್ಳಲಾಗಿದೆ. ಜೊತೆಗೆ ಮೂಲಂಗಿ ಹಸಿಯಾಗಿ ತಿನ್ನಲು ಯೋಗ್ಯವಾಗಿದೆ.

    ಬಾಹ್ಯಾಕಾಶದಲ್ಲಿ ಬೆಳೆದಿರುವ ಕಡುಗೆಂಪು ಬಣ್ಣದ ಮೂಲಂಗಿ ಕಟಾವಿಗೆ ಸಿದ್ಧವಾಗಿದೆ. ಇದರ ಸ್ಯಾಂಪಲ್‍ಗಳನ್ನು ಅಧ್ಯಯನಕ್ಕಾಗಿ ಭೂಮಿಗೆ ಕಳಿಸಲಾಗುತ್ತದೆ ಎಂದು ತಿಳಿದು ಬಂದಿದೆ.