Tag: ಮೂರ್ತಿ

  • ಅಯೋಧ್ಯೆಯಲ್ಲಿ ‘ರಾಮಲಲ್ಲಾ’ ಮೂರ್ತಿಯನ್ನು ಹೊರಲಿದ್ದಾರೆ ಪ್ರಧಾನಿ ಮೋದಿ

    ಅಯೋಧ್ಯೆಯಲ್ಲಿ ‘ರಾಮಲಲ್ಲಾ’ ಮೂರ್ತಿಯನ್ನು ಹೊರಲಿದ್ದಾರೆ ಪ್ರಧಾನಿ ಮೋದಿ

    ನವದೆಹಲಿ: ಅಯೋಧ್ಯೆಯ (Ayodhya) ರಾಮಮಂದಿರದ (Ram Mandir) ಲೋಕಾರ್ಪಣೆಗೆ ಸಂಬಂಧಿಸಿದಂತೆ ಹೊಸ ಹೊಸ ವಿಚಾರಗಳು ಅನಾವರಣಗೊಳ್ಳುತ್ತಿವೆ. ರಾಮಮಂದಿರ ನಿರ್ಮಾಣದ ಭೂಮಿ ಪೂಜೆಯಿಂದ ಹಿಡಿದು ಪ್ರತಿಯೊಂದರ ಹಂತದಲ್ಲಿಯೂ ಪ್ರಧಾನಿ ನರೇಂದ್ರ ಮೋದಿ (Narendra Modi) ಪ್ರಮುಖ ಪಾತ್ರ ವಹಿಸಲಿದ್ದಾರೆ.

    ರಾಮ ಮಂದಿರ ಲೋಕಾರ್ಪಣೆ 2024ರ ಜನವರಿ 22 ರಂದು ನೆರವೇರಲಿದೆ. ಈ ವೇಳೆ ಸಹಜವಾಗಿಯೇ ಪ್ರಧಾನಿ ಮೋದಿ ಮುಖ್ಯಭೂಮಿಕೆ ನಿರ್ವಹಿಸಲಿದ್ದಾರೆ. ಈ ವಿಶೇಷ ದಿನಕ್ಕಾಗಿ ಬಹಳಷ್ಟು ತಯಾರಿಗಳನ್ನು ಈಗಾಗಲೇ ನಡೆಸಲಾಗಿದೆ.

    ರಾಮಮಂದಿರ ಲೋಕಾರ್ಪಣೆಯಂದು ಏನಿರಲಿದೆ?
    ಮಂದಿರಕ್ಕೆ ಮೋದಿ ರಾಮಲಲ್ಲಾ ಮೂರ್ತಿ (Ram Lalla Idol) ಕೊಂಡೊಯ್ಯಲಿದ್ದಾರೆ. ತಾತ್ಕಾಲಿಕ ಮಂದಿರದಿಂದ ರಾಮಮಂದಿರಕ್ಕೆ ಮೆರವಣಿಗೆ ತೆರಳಲಿದೆ. ಪ್ರೋಟೊಕಾಲ್ ನಡುವೆಯೂ 500 ಮೀಟರ್ ಮೋದಿ ಹೆಜ್ಜೆ ಹಾಕಲಿದ್ದಾರೆ. ಗರ್ಭಗುಡಿಯವರೆಗೆ ಮೋದಿ ರಾಮಲಲ್ಲಾ ಮೂರ್ತಿಯನ್ನು ಹೊರಲಿದ್ದಾರೆ. ಇದನ್ನೂ ಓದಿ: ‘5 ವರ್ಷ ನಾನೇ ಸಿಎಂ’ ಹೇಳಿಕೆಯಿಂದ ಯೂಟರ್ನ್ ಹೊಡೆದ ಸಿದ್ದರಾಮಯ್ಯ

    ಪ್ರಧಾನಿಗೆ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸಾಥ್ ನೀಡಲಿದ್ದಾರೆ. ಪ್ರಧಾನಿ ಸಮ್ಮುಖದಲ್ಲಿಯೇ ಪ್ರಾಣಪ್ರತಿಷ್ಠಾಪನೆ ಯಜ್ಞ ನಡೆಯಲಿದೆ. ಜನವರಿ 22ರ ಬೆಳಗ್ಗೆ 11:30 ರಿಂದ ಮಧ್ಯಾಹ್ನ 12:30 ರವರೆಗೆ ಹೋಮ ನಡೆಯಲಿದೆ. ಇದನ್ನೂ ಓದಿ: ವಿವಾಹಿತೆಯರಿಗೆ ವರ್ಷಕ್ಕೆ 12,000 ರೂ. ನೀಡುತ್ತೇವೆ: ‘ಮೋದಿ ಕಿ ಗ್ಯಾರಂಟಿ’ ಘೋಷಿಸಿದ ಅಮಿತ್‌ ಶಾ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದೇವಾಲಯಕ್ಕೆ ವಿಗ್ರಹ ಸ್ಥಳಾಂತರಿಸಲು ಕೈಜೋಡಿಸಿದ ಮುಸ್ಲಿಮರು- ಜಮ್ಮು ಕಾಶ್ಮೀರದಲ್ಲಿ ಕೋಮು ಸೌಹಾರ್ದತೆ ಮೆರೆದ ಜನರು

    ದೇವಾಲಯಕ್ಕೆ ವಿಗ್ರಹ ಸ್ಥಳಾಂತರಿಸಲು ಕೈಜೋಡಿಸಿದ ಮುಸ್ಲಿಮರು- ಜಮ್ಮು ಕಾಶ್ಮೀರದಲ್ಲಿ ಕೋಮು ಸೌಹಾರ್ದತೆ ಮೆರೆದ ಜನರು

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ದೋಡಾದ ಕುರ್ಸಾರಿ ಪಂಚಾಯತ್‍ ವ್ಯಾಪ್ತಿಯಲ್ಲಿರುವ ಪುರಾತನ ದೇವಾಲಯಕ್ಕೆ ದೈತ್ಯ ವಿಗ್ರಹಗಳನ್ನು ಸ್ಥಳಾಂತರಿಸಲು ಹಿಂದೂಗಳಿಗೆ ಅಲ್ಲಿನ ಮುಸ್ಲಿಂ ನಿವಾಸಿಗಳು ಕೈಜೋಡಿಸಿ ಕೋಮು ಸೌಹಾರ್ದತೆಯನ್ನು ಮೆರೆದರು.

    ಹಳೆಯ ವಿಗ್ರಹಗಳು ಸ್ವಲ್ಪ ವಿರೂಪಗೊಂಡಿದ್ದರಿಂದ 500 ಕೆ.ಜಿ ಮತ್ತು 700 ಕೆ.ಜಿ ತೂಕದ ಗ್ರಾನೈಟ್‍ನಿಂದ ಮಾಡಲಾದ 6 ವಿಗ್ರಹಗಳನ್ನು ರಾಜಸ್ಥಾನದಿಂದ ತರಿಸಲಾಗಿದೆ. ಇದನ್ನು ಭದೇರ್ವಾ-ದೋಡಾ ಹೆದ್ದಾರಿಯಿಂದ 3 ಕಿ.ಮೀ ದೂರದಲ್ಲಿರುವ ಬೆಟ್ಟದ ತುದಿಯಲ್ಲಿರುವ ಕುರ್ಸಾರಿಯ ಶಿವ ದೇವಾಲಯದಲ್ಲಿ ಸ್ಥಾಪಿಸಲಾಯಿತು.

    ಆದರೆ ಇದನ್ನು ತರುವಾಗ ಸರಿಯಾದ ರಸ್ತೆ ಇಲ್ಲದ್ದರಿಂದ ತುಂಬಾ ಕಷ್ಟ ಪಡಬೇಕಾಯಿತು. ದೇವಾಲಯವು ಗುಡ್ಡದ ತುದಿಯಲ್ಲಿದ್ದರಿಂದ ವಿಗ್ರಹ ಸಾಗಿಸಲು ಹಿಂದೂಗಳು ಕಷ್ಟಪಡುತ್ತಿದ್ದುದನ್ನು ನೋಡಿದ ಕುರ್ಸರಿ ಪಂಚಾಯತ್ ಅಧ್ಯಕ್ಷ ಸಾಜಿದ್ ಮಿರ್ ಅವರು ತುರ್ತು ರಸ್ತೆ ನಿರ್ಮಾಣಕ್ಕೆ 4.6 ಲಕ್ಷ ರೂ.ವನ್ನು ಮಂಜೂರು ಮಾಡಿದ್ದಾರೆ. ಅಷ್ಟೇ ಅಲ್ಲದೇ ತಮ್ಮ ಸಮುದಾಯದ 150 ಗ್ರಾಮಸ್ಥರನ್ನು ಸೇರಿಸಿ ವಿಗ್ರಹವನ್ನು ದೇವಾಲಯಕ್ಕೆ ತಲುಪಿಸಲು ಸಹಾಯ ಮಾಡಿದರು. ಇದನ್ನೂ ಓದಿ: ರಾಜ್ಯದ ಮುಖ್ಯಮಂತ್ರಿ ಸುಳ್ಳು ಹೇಳಲ್ಲ ಎಂದು ಅಂದುಕೊಂಡಿದ್ದೇವೆ: ಯು.ಟಿ ಖಾದರ್

    ಕೇವಲ 4 ದಿನಗಳಲ್ಲಿ ಎರಡೂ ಸಮುದಾಯಗಳ ಸ್ವಯಂಸೇವಕರು ಸೇರಿ ಹಗ್ಗ ಮತ್ತು ಯಂತ್ರಗಳ ಸಹಾಯದಿಂದ ರಾಜಸ್ಥಾನದಿಂದ ತಂದ ವಿಗ್ರಹಗಳನ್ನು ದೇವಸ್ಥಾನಕ್ಕೆ ತಲುಪಿಸಿದರು. ಭದೇರ್ವಾದಲ್ಲಿ ನೆಲೆಗೊಂಡಿರುವ ಸೇನೆಯ ರಾಷ್ಟ್ರೀಯ ರೈಫಲ್ಸ್ ಘಟಕವು ಗ್ರಾಮಸ್ಥರಿಗೆ ಸಹಾಯ ಮಾಡಲು ಯಂತ್ರೋಪಕರಣಗಳನ್ನು ಕಳುಹಿಸಿತ್ತು. ಇದನ್ನೂ ಓದಿ: ರಾಜ್ಯಕ್ಕೆ ಭೇಟಿ ನೀಡಿದ್ದ ಅಮಿತ್‌ ಶಾ ಬಳಿ ನೆರೆ ಪರಿಹಾರ ಕೇಳಲಿಲ್ಲವೇಕೆ – BJP ಸರ್ಕಾರಕ್ಕೆ ಕಾಂಗ್ರೆಸ್‌ ಪ್ರಶ್ನೆ

    Live Tv
    [brid partner=56869869 player=32851 video=960834 autoplay=true]

  • ಪೂಜೆ ಮಾಡಿ ತೀರ್ಥ ಸೇವಿಸುವಾಗ ಲೋಹದ ಶ್ರೀಕೃಷ್ಣನ ಮೂರ್ತಿ ನುಂಗಿದ ವ್ಯಕ್ತಿ!

    ಪೂಜೆ ಮಾಡಿ ತೀರ್ಥ ಸೇವಿಸುವಾಗ ಲೋಹದ ಶ್ರೀಕೃಷ್ಣನ ಮೂರ್ತಿ ನುಂಗಿದ ವ್ಯಕ್ತಿ!

    ಬೆಳಗಾವಿ: ಪೂಜೆ ಮಾಡಿ ತೀರ್ಥ ಸೇವಿಸುವಾಗ ವ್ಯಕ್ತಿಯೊಬ್ಬ ಲೋಹದ ಕೃಷ್ಣನ ಮೂರ್ತಿ ನುಂಗಿದ್ದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಶಸ್ತ್ರಚಿಕಿತ್ಸೆ ಮೂಲಕ ವೈದ್ಯರು ಶ್ರೀಕೃಷ್ಣನ ಮೂರ್ತಿಯನ್ನು ಹೊರತೆಗೆದಿದ್ದಾರೆ.

    ಬೆಳಗಾವಿಯ 45 ವರ್ಷದ ವ್ಯಕ್ತಿ ಮನೆಯಲ್ಲಿ ನಿತ್ಯ ಪೂಜೆ ಮಾಡುತ್ತಿದ್ದ. ಪೂಜೆ ಮಾಡಿದ ನಂತರ ಮಾಮೂಲಿಯಂತೆ ತೀರ್ಥ ಸೇವಿಸಿದ್ದಾನೆ. ಈ ವೇಳೆ ಲೋಹದ ಕೃಷ್ಣನ ಮೂರ್ತಿಯನ್ನು ನುಂಗಿದ್ದಾನೆ. ಇದನ್ನೂ ಓದಿ: ಸರಗಳ್ಳತನಕ್ಕೆ ಯತ್ನಿಸಿ ಎಸ್ಕೇಪ್‌ ಆಗುವಾಗ ಬೈಕ್‌ ಅಪಘಾತ – ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದ ಕಳ್ಳರು

    ಇದಾದ ಬಳಿಕ ವ್ಯಕ್ತಿಯಲ್ಲಿ ಗಂಟಲು ನೋವು ಕಾಣಿಸಿಕೊಂಡಿದೆ. ನಂತರ ಗಂಟಲಿನಲ್ಲಿ ಊತ ಉಂಟಾಗಿ ಆತಂಕಗೊಂಡು ಸ್ಥಳೀಯ ವೈದ್ಯರನ್ನು ಸಂಪರ್ಕಿಸಿದ್ದಾನೆ. ವೈದ್ಯರ ಸೂಚನೆ ಮೇರೆಗೆ ಎಕ್ಸರೇ ಮಾಡಿಸಿದ್ದಾನೆ. ಶ್ರೀಕೃಷ್ಣನ ಮೂರ್ತಿ ಗಂಟಲಿನಲ್ಲಿರುವುದು ಎಕ್ಸರೇ ವರದಿಯಿಂದ ತಿಳಿದುಬಂದಿದೆ.

    ವ್ಯಕ್ತಿ ಹೆಚ್ಚಿನ ಚಿಕಿತ್ಸೆಗಾಗಿ ಕೆಎಲ್ಇ ಆಸ್ಪತ್ರೆಗೆ ದಾಖಲಾಗಿದ್ದ. ಶಸ್ತ್ರಚಿಕಿತ್ಸೆ ಮೂಲಕ ಗಂಟಲಿನಿಂದ ಶ್ರೀಕೃಷ್ಣ‌‌‌ನ ಮೂರ್ತಿಯನ್ನು ವೈದ್ಯರು ಹೊರತೆಗೆದಿದ್ದಾರೆ. ಇಎನ್‌ಟಿ ವಿಭಾಗದ ವೈದ್ಯೆ ಡಾ.ಪ್ರೀತಿ ಹಜಾರೆ, ಡಾ.ವಿನಿತಾ ಮೆಡಗುಡ್ಡಮಠ ನೇತೃತ್ವದಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಇದನ್ನೂ ಓದಿ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಾಲಿವುಡ್ ನಿರ್ದೇಶಕ ಭೇಟಿ

    Live Tv

  • ಕೈಲಾಸದಲ್ಲಿ ನಿತ್ಯಾನಂದನ ಮೂರ್ತಿಗೆ ಮಂಗಳಾರತಿ – ಎಲ್ಲಿದ್ದಾರೆ ನಿತ್ಯಾನಂದ?

    ಕೈಲಾಸದಲ್ಲಿ ನಿತ್ಯಾನಂದನ ಮೂರ್ತಿಗೆ ಮಂಗಳಾರತಿ – ಎಲ್ಲಿದ್ದಾರೆ ನಿತ್ಯಾನಂದ?

    ಚೆನ್ನೈ: ಇತ್ತೀಚೆಗೆ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ ಎಂದು ಸುದ್ದಿಯಾಗಿದ್ದ ನಿತ್ಯಾನಂದ ಕೆಲವು ದಿನಗಳ ಬಳಿಕ ಫೇಸ್‌ಬುಕ್ ಮೂಲಕ ನಾನು ಆರೋಗ್ಯವಾಗಿದ್ದೇನೆ ಎಂದು ತಿಳಿಸಿದ್ದರು. ಇದೀಗ ನಿತ್ಯಾನಂದ ಅವರ ಮೂರ್ತಿಗೆ ಪೂಜೆ ಸಲ್ಲಿಸುತ್ತಿರುವ ವೀಡಿಯೋವೊಂದು ವೈರಲ್ ಆಗುತ್ತಿದ್ದು, ಮತ್ತೆ ಚರ್ಚೆಗೆ ಕಾರಣವಾಗಿದ್ದಾರೆ.

    ಕೈಲಾಸದಲ್ಲಿ ತಲೆಮರೆಸಿಕೊಂಡಿರುವ ನಿತ್ಯಾನಂದ ಅವರ ಪ್ರತಿಮೆಯನ್ನು ಸ್ಥಾಪಿಸಿ, ಪೂಜೆ, ಅಭಿಷೇಕ, ಅರ್ಚನೆಗಳನ್ನು ಮಾಡಲಾಗುತ್ತಿದೆ. ಚೈತ್ರ ನಕ್ಷತ್ರ ಹಬ್ಬದ ಹಿನ್ನೆಲೆ ಮೂರ್ತಿಗೆ ಪೂಜೆ ಸಲ್ಲಿಸಲಾಗಿದ್ದು, ಅದರ ವೀಡಿಯೋ ಈಗ ವೈರಲ್ ಆಗುತ್ತಿದೆ. ಇದನ್ನೂ ಓದಿ: ಖಾಸಗಿ ಶಾಲೆಗಳಿಗೆ ನಮ್ಮ ಶಾಲೆಗಳು ಪೈಪೋಟಿ ಕೊಡುವಂತೆ ಕೆಲಸ ಮಾಡುತ್ತೇವೆ: ಶ್ರೀರಾಮುಲು

    ಕೆಲವು ದಿನಗಳ ಹಿಂದೆ ನಿತ್ಯಾನಂದ ಅವರಿಗೆ ಅನಾರೋಗ್ಯವಿದ್ದ ಹಿನ್ನೆಲೆ ಅವರ ಮರಣ ಸಂಭವಿಸಿದೆ ಎಂಬ ಸುದ್ದಿ ಎಲ್ಲೆಡೆ ಹಬ್ಬಿತ್ತು. ಇದರ ಬೆನ್ನಲ್ಲೇ ಕೈಲಾಸದಿಂದ ಸಂದೇಶವೊಂದು ಬಂದಿದ್ದು, ನಿತ್ಯಾನಂದ ಸ್ವಾಮೀಜಿ ಆರೋಗ್ಯವಾಗಿದ್ದಾರೆ, ಶೀಘ್ರವೇ ಭಕ್ತರಿಗೆ ದರ್ಶನ ನೀಡಲಿದ್ದಾರೆ ಎಂದು ಹೇಳಲಾಗಿತ್ತು. ಇದನ್ನೂ ಓದಿ: ನಂದಿಬೆಟ್ಟಕ್ಕೆ ಹರಿದು ಬಂದ ಜನಸಾಗರ – ಗಂಟೆಗಟ್ಟಲೇ ಸರದಿ ಸಾಲಿನಲ್ಲಿ ನಿಂತು ಹೈರಾಣಾದ ಪ್ರವಾಸಿಗರು

    ಇದೀಗ ನಿತ್ಯಾನಂದ ಅವರ ಮೂರ್ತಿಗೆ ಪೂಜೆ ಸಲ್ಲಿಸುತ್ತಿರುವ ವೀಡಿಯೋ ವೈರಲ್ ಆಗುತ್ತಿದ್ದಂತೆ ಜನರಲ್ಲಿ ಮತ್ತೆ ಪ್ರಶ್ನೆ ಎದ್ದಿದೆ. ಅನಾರೋಗ್ಯ ಎಂದಿದ್ದ ಬಳಿಕ ಯಾವುದೇ ಸುಳಿವು ನೀಡದ ನಿತ್ಯಾನಂದ ಸ್ವತಃ ಉತ್ತರಿಸುವವರೆಗೂ ಗೊಂದಲ ಮುಂದುವರಿದಿದೆ. 

  • ತಮ್ಮದೇ ಮೂರ್ತಿ ಅನಾವರಣಕ್ಕೆ ಒಪ್ಪದ ಸುದೀಪ್

    ತಮ್ಮದೇ ಮೂರ್ತಿ ಅನಾವರಣಕ್ಕೆ ಒಪ್ಪದ ಸುದೀಪ್

    ಕಿಚ್ಚ ಸುದೀಪ್ ಇಂದು ರಾಯಚೂರಿನ ಸಿರಿವಾರ ತಾಲೂಕಿನ ಕುರಕುಂದದಲ್ಲಿ ಮಹರ್ಷಿ ವಾಲ್ಮೀಕಿ ಮತ್ತು ವೀರ ಮದಕರಿ ನಾಯಕ ಪ್ರತಿಮೆಗಳ ಅನಾವಣರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇದೇ ಸಂದರ್ಭದಲ್ಲಿ ಕಿಚ್ಚ ಸುದೀಪ್ ಅವರ ಮೂರ್ತಿಯನ್ನು ಅನಾವರಣ ಮಾಡಬೇಕು ಎನ್ನುವುದು ಅಭಿಮಾನಿಗಳ ಆಗ್ರಹವಾಗಿತ್ತು.  ಆದರೆ, ಅದು ಈಡೇರಲಿಲ್ಲ.  ಇದನ್ನೂ ಓದಿ : ‘ಗುರು’ ಹೆಸರು ‘ಯುವ’ ರಾಜಕುಮಾರ್ ಬದಲಾಗಿದ್ದು ಹೇಗೆ? : ನಾಮಬಲ ನಂಬಿಕೆಯ ಡಾ.ರಾಜ್ ಕುಟುಂಬ

    ಮಹರ್ಷಿ ವಾಲ್ಮೀಕಿ ಮತ್ತು ವೀರ ಮದಕರಿ ನಾಯಕರ ಪ್ರತಿಮೆಯನ್ನು ಅನಾವರಣ ಮಾಡಿದ ಸುದೀಪ್, ತಮ್ಮ ಮೂರ್ತಿಯನ್ನು ಅನಾವರಣ ಮಾಡುವುದಕ್ಕೆ ಒಪ್ಪಲಿಲ್ಲ. ಹಾಗಂತ ಅಭಿಮಾನಿಗಳಿಗೆ ಅವಮಾನ ಮಾಡಲಿಲ್ಲ. ಪ್ರೀತಿಯನ್ನು ಮೂರ್ತಿಯನ್ನು ಪ್ರತಿಷ್ಠಾಪಿಸಲು ಹೊರಟವರಿಗೆ ಧನ್ಯವಾದಗಳನ್ನು ತಿಳಿಸಿದರು. ಈ ಪ್ರೀತಿಗೆ ನಾನು ಋಣಿಯಾಗಿದ್ದೇನೆ ಎಂದು ಅಭಿಮಾನದಿಂದಲೇ ಮಾತನಾಡಿದರು. ಇದನ್ನೂ ಓದಿ : ಹೊಂಬಾಳೆ ಫಿಲ್ಮ್ಸ್‌ನಿಂದ ಯುವರಾಜ್ ಕುಮಾರ್ ಲಾಂಚ್: ನಿನ್ನೆಯೇ ಬ್ರೇಕ್ ಮಾಡಿತ್ತು ಪಬ್ಲಿಕ್ ಟಿವಿ

    ಜಗತ್ತಿನಲ್ಲಿ ತುಂಬಾ ಜನ ಸಾಧನೆ ಮಾಡಿದವರು ಇದ್ದಾರೆ. ನಾನೇನೂ ಸಾಧನೆ ಮಾಡಿಲ್ಲ. ಮಾಡಬೇಕಾದ ಕೆಲಸ ತುಂಬಾ ಇದೆ. ನಾನು ಸಾಧನೆ ಮಾಡಿದ್ದೇನೆ ಎಂದು ಅನಿಸಿದ ದಿನ ನಾನೇ ಬಂದು ಮೂರ್ತಿ ಅನಾವರಣ ಮಾಡುತ್ತೇನೆ. ಈ ಮೊದಲೇ ಮೂರ್ತಿಯ ವಿಷಯ ಗೊತ್ತಿದ್ದರೆ ನಾನೇ ಬೇಡ ಎನ್ನುತ್ತಿದ್ದೆ. ಪ್ರೀತಿ ತೋರಿಸಿದ ಎಲ್ಲ ಅಭಿಮಾನಿಗಳಿಗೆ ನಾನು ಋಣಿಯಾಗಿದ್ದೇನೆ ಎಂದರು ಸುದೀಪ್. ಇದನ್ನೂ ಓದಿ : ದಕ್ಷಿಣದ ಸಿನಿಮಾ ನೋಡಲ್ಲ: ವಿವಾದಕ್ಕೆ ಕಾರಣವಾದ ಬಾಲಿವುಡ್ ಖ್ಯಾತ ನಟ ನವಾಜುದ್ಧೀನ್ ಸಿದ್ದಿಕಿ

    ಈ ಹಿಂದೆಯೂ ಸುದೀಪ್ ಇಂತಹ ಕೆಲಸಗಳನ್ನು ನಿರಾಕರಿಸುತ್ತಲೇ ಬಂದಿದ್ದಾರೆ. ತಮ್ಮ ಹುಟ್ಟು ಹಬ್ಬದ ಸಂದರ್ಭದಲ್ಲಿ ತರುವ ಕೇಕ್, ಹಾರ, ಕಟೌಟ್ ಗಳಿಗೆ ಹಾಲಿನ ಅಭಿಷೇಕ ಮಾಡುವುದನ್ನು ವಿರೋಧಿಸುತ್ತಲೇ ಬಂದಿರುವ ಅವರು, ಆ ಹಣವನ್ನು ನಿರ್ಗತಿಕರಿಗೆ, ಬಡವರಿಗೆ, ಹಸಿದವರಿಗೆ ನೀಡಿ ಎಂದು ಕರೆಕೊಟ್ಟಿದ್ದರು. ಅಭಿಮಾನಿಗಳು ಕೂಡ ಅದನ್ನು ಪಾಲಿಸುತ್ತಾ ಬಂದಿದ್ದಾರೆ.

  • ಶಾಸ್ತ್ರದ ಪ್ರಕಾರ ವಿಶ್ವಕರ್ಮ ಜನಾಂಗದವರೇ ದೇವರ ಪ್ರತಿಮೆ ಕೆತ್ತಬೇಕು: ಡಾ. ಜ್ಞಾನನಂದ

    ಶಾಸ್ತ್ರದ ಪ್ರಕಾರ ವಿಶ್ವಕರ್ಮ ಜನಾಂಗದವರೇ ದೇವರ ಪ್ರತಿಮೆ ಕೆತ್ತಬೇಕು: ಡಾ. ಜ್ಞಾನನಂದ

    ಬೆಂಗಳೂರು: ಶಾಸ್ತ್ರದ ಪ್ರಕಾರ ವಿಶ್ವಕರ್ಮ ಜನಾಂಗದವರೇ ದೇವರ ಪ್ರತಿಮೆ ಕೆತ್ತಬೇಕು ಎಂದು ಸಾಂಪ್ರದಾಯಿಕ ಶಿಲ್ಪ ಕಲಾ ಕೇಂದ್ರ ಪ್ರಾಧ್ಯಾಪಕ ಡಾ. ಜ್ಞಾನನಂದ ಹೇಳಿದ್ದಾರೆ.

    ರಾಜ್ಯದಲ್ಲಿ ಧರ್ಮ ದಂಗಲ್ ಜೋರಾಗಿ ಸದ್ದು ಮಾಡುತ್ತಿದೆ. ಮುಸ್ಲಿಮರು ತಯಾರಿಸಿದ ವಿಗ್ರಹವನ್ನು ಹಿಂದೂಗಳು ತೆಗೆದುಕೊಳ್ಳಬಾರದು ಅಂತಾ ಮೇಲುಕೋಟೆಯ ಸ್ಥಾನಿಕರ ಹೇಳಿಕೆ ದೊಡ್ಡ ಮಟ್ಟದ ಸಂಚಲನ ಮೂಡಿಸಿದೆ. ಇದಕ್ಕೆ ಪರ ವಿರೋಧ ಚರ್ಚೆಗಳು ಜೋರಾಗಿದೆ. ಇದನ್ನೂ ಓದಿ: ಮುಸ್ಲಿಮರಿಂದ ಕೆತ್ತಿದ ಮೂರ್ತಿ ಪೂಜೆಗೆ ಯೋಗ್ಯವಲ್ಲ: ಆಂದೋಲಾ ಶ್ರೀ

    ಈ ಮಧ್ಯೆ ಬೆಂಗಳೂರಿನ ಮಲತ್ತಹಳ್ಳಿಯಲ್ಲಿರುವ ಸಾಂಪ್ರಾದಾಯಿಕ ಶಿಲ್ಪ ಗುರುಕುಲದ ಪ್ರಾಧ್ಯಪಕ ಡಾ ಜ್ಞಾನನಂದ ಶಾಸ್ತ್ರ ದ ಪ್ರಕಾರ ವಿಶ್ವ ಕರ್ಮರೇ ವಿಗ್ರಹ ಕೆತ್ತನೆ ಮಾಡಬೇಕು ಅಂತಾ ಹೇಳುತ್ತೆ. ಆದರೆ ಈಗ ಎಲ್ಲವೂ ಬದಲಾಗಿದೆ. ವಿಗ್ರಹ ಕೆತ್ತನೆ ವ್ಯವಹಾರಿಕ ಮಾತ್ರವಲ್ಲ. ಅದೊಂದು ಅನುಷ್ಠಾನದ ರೀತಿ ಮಾಡಬೇಕು ಎಂದು ವಿವರಿಸಿದರು.  

    48 ದಿನಗಳ ಕಾಲ ನಿರಂತರ ಆಯಾಯ ದೇವರ ಶ್ಲೋಕ ಪಠಣೆ, ಸಂಧ್ಯಾವಂದನೆಯನ್ನು ಮಾಡಬೇಕು ಅಂತಾ ಹೇಳಿದ್ರು. ಆದ್ರೇ ಆದುನಿಕ ಕಾಲದಲ್ಲಿ ಇದೆಲ್ಲವೂ ಮಾಯವಾಗಿದೆ ಅಂತಾ ಅವರು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಅಲ್ಲಲ್ಲಿ ಸಣ್ಣಪುಟ್ಟ ಘಟನೆಗಳು ನಡೆಯುತ್ತಿವೆ, ಇದಕ್ಕೆ ಸರ್ಕಾರ ಹೊಣೆ ಅಲ್ಲ: ಮುನಿರತ್ನ

  • ರಾತ್ರೋರಾತ್ರಿ ಬಸವಣ್ಣನ ಮೂರ್ತಿ ಪ್ರತಿಷ್ಠಾಪನೆ – ಪಾಲಿಕೆಯಿಂದ ತೆರವು

    ರಾತ್ರೋರಾತ್ರಿ ಬಸವಣ್ಣನ ಮೂರ್ತಿ ಪ್ರತಿಷ್ಠಾಪನೆ – ಪಾಲಿಕೆಯಿಂದ ತೆರವು

    ಧಾರವಾಡ: ಧಾರವಾಡ ಕರ್ನಾಟಕ ವಿವಿ ಬಳಿಯ ಶ್ರೀನಗರ ವೃತ್ತದಲ್ಲಿ ರಾತ್ರೋರಾತ್ರಿ ಬಸವಣ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿತ್ತು. ಆದರೆ ಮಧ್ಯಾಹ್ನ ಸ್ಥಳಕ್ಕೆ ಬಂದ ಪಾಲಿಕೆ ಅಧಿಕಾರಿಗಳು, ಪೊಲೀಸರ ಸಮ್ಮುಖದಲ್ಲಿ ಬಸವಣ್ಣನ ಮೂರ್ತಿ ತೆರವು ಗೊಳಿಸಿದರು.

    ಕಳೆದ ಎರಡು ದಿನಗಳ ಹಿಂದೆ ಪಾಲಿಕೆಯಿಂದ ಇದೇ ವೃತ್ತ ತೆರೆಯಲು ಪ್ರಯತ್ನ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕಳೆದ ರಾತ್ರಿ ಕೆಲವರು ಬಸವಣ್ಣನ ಮೂರ್ತಿ ತಂದು ಇಟ್ಟಿದ್ದರು. ಇದನ್ನೂ ಓದಿ: ಅಪ್ಪು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕೃಷಿ ಚಟುವಟಿಕೆ ಆರಂಭಿಸಿದ ರೈತ

    ಈ ವಿಚಾರವಾಗಿ ಸ್ಥಳೀಯ ಶಾಸಕ ಅರವಿಂದ ಬೆಲ್ಲದ್ ಮಾತನಾಡಿದ್ದು, ಬಸವಣ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡಿದ ವಿಚಾರ ಸ್ಥಳೀಯರು ತಿಳಿಸಿದ್ದಾರೆ. ಆದರೆ ಪಾಲಿಕೆಯಿಂದ ತೆರವು ಮಾಡಿದ ವಿಚಾರ ತಿಳಿದಿರಲಿಲ್ಲ. ಹೀಗಾಗಿ ಅದರ ಮಾಹಿತಿ ಪಡೆಯುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ತಮಿಳುನಾಡು ಬಿಜೆಪಿ ನಾಯಕ ಕೆ ಅಣ್ಣಾಮಲೈಗೆ ವೈ ಶ್ರೇಣಿ ಭದ್ರತೆ

     

  • ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಮರುಪ್ರತಿಷ್ಠಾಪನೆ

    ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಮರುಪ್ರತಿಷ್ಠಾಪನೆ

    ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಮರುಪ್ರತಿಷ್ಠಾಪನೆಗೊಳಿಸಲಾಗಿದೆ.

    ಶುಕ್ರವಾರ ತಡರಾತ್ರಿ ಬೆಳಗಾವಿ ಅನಗೋಳದ ಕನಕದಾಸ ಕಾಲೋನಿಯಲ್ಲಿ ಕಿಡಿಗೇಡಿಗಳು ಸಂಗೊಳ್ಳಿ ರಾಯಣ್ಣ ಪುತ್ಥಳಿಗೆ ಹಾನಿಪಡಿಸಿ ಖಡ್ಗ, ಗುರಾಣಿ ಬೇರೆ ಬೇರೆ ಕಡೆ ಇಟ್ಟು ವಿಕೃತಿಗೊಳಿಸಿ ದುಷ್ಕೃತ್ಯವೆಸಗಿದ್ದರು. ಇದನ್ನೂ ಓದಿ: ಬೆಳಗಾವಿಯಲ್ಲಿ MES ಪುಂಡರ ಅಟ್ಟಹಾಸ – ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಹಾನಿ, ಬಸ್ ಮೇಲೆ ಕಲ್ಲು ತೂರಾಟ

    ಸಂಗೊಳ್ಳಿ ರಾಯಣ್ಣ ಮೂರ್ತಿ ಭಗ್ನಗೊಳಿಸಿದ ಜಾಗದಲ್ಲಿಯೇ ಆರು ಅಡಿ ಎತ್ತರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಹೊಸ ಮೂರ್ತಿಯನ್ನು ಪ್ರತಿಷ್ಠಾಪನೆಗೊಳಿಸಲಾಗಿದೆ. ಇದನ್ನೂ ಓದಿ: ಬೆಳಗಾವಿಯಲ್ಲಿ MES ಪುಂಡರ ದಾಂಧಲೆ – ರಾತ್ರಿ ಏನೇನು ಮಾಡಿದ್ದಾರೆ?

    ಬೆಳಗಾವಿ ಪೊಲೀಸರು ಕೊಟ್ಟ ಭರವಸೆಯಂತೆ ಹೊಸ ಮೂರ್ತಿ ತಂದುಕೊಟ್ಟಿದ್ದು, ರಾಯಣ್ಣನ ಪ್ರತಿಮೆಗೆ ಕನ್ನಡಪರ ಸಂಘಟನೆಗಳು, ಸ್ಥಳೀಯ ನಿವಾಸಿಗಳಿ ಕ್ಷೀರಾಭಿಷೇಕ ಮಾಡಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ.

  • ಪುನೀತ್ ಸಮಾಧಿ ಬಳಿ 3 ಅಡಿ ಪುತ್ಥಳಿ ನಿರ್ಮಾಣ – ಪಾರಿವಾಳ ಸಮೇತ ಅಂತಿಮ ಸ್ಪರ್ಶ

    ಪುನೀತ್ ಸಮಾಧಿ ಬಳಿ 3 ಅಡಿ ಪುತ್ಥಳಿ ನಿರ್ಮಾಣ – ಪಾರಿವಾಳ ಸಮೇತ ಅಂತಿಮ ಸ್ಪರ್ಶ

    – ರಾಜಕುಮಾರನ ಸ್ಮರಣಿಕೆಗಳಿಗೆ ಸಿಕ್ಕಾಪಟ್ಟೆ ಬೇಡಿಕೆ

    ಬೆಂಗಳೂರು: ದಿವಂಗತ ನಟ ಪುನೀತ್ ರಾಜ್ ಕುಮಾರ್ ಹಠಾತ್ ನಿಧನದ ನೋವು ಇನ್ನೂ ಮಾಸಿಲ್ಲ. ಇದೀಗ ಕಂಠೀರವ ಸ್ಟುಡಿಯೋದ ಪುನೀತ್ ಸಮಾಧಿ ಬಳಿ ಇಡಲು ಅಪ್ಪು 3 ಅಡಿ ಎತ್ತರದ ಪುತ್ಥಳಿ ನಿರ್ಮಾಣವಾಗ್ತಿದೆ.

    ಡಾ.ರಾಜ್ ಪುತ್ಥಳ ತಯಾರಿಸಿದ್ದ ಶಿಲ್ಪಿ ಶಿವದತ್ತ ಅವರೇ ಪುನೀತ್ ಪುತ್ಥಳಿ ತಯಾರು ಮಾಡ್ತಿದ್ದಾರೆ. ‘ನಾನೇ ರಾಜಕುಮಾರ’ ಹಾಡಿನಲ್ಲಿ ಬಂದು ಕೂರುವ ಪಾರಿವಾಳ ಸಮೇತ ಈ ಪುತ್ಥಳಿ ತಯಾರಾಗ್ತಿರೋದು ವಿಶೇಷವಾಗಿದೆ. ಮನೆಯಲ್ಲಿಡಲು ಅಭಿಮಾನಿಗಳಿಂದ ಅಪ್ಪು ಪುಟ್ಟ ಶಿಲ್ಪ ಸ್ಮರಣಿಕೆಗಳಿಗೂ ಬೇಡಿಕೆ ಹೆಚ್ಚಾಗಿದೆ. ಈಗಾಗಲೇ 400 ಶಿಲ್ಪ ಸ್ಮರಣಿಕೆಗೆ ಬೇಡಿಕೆ ಬಂದಿದ್ದು, ಅದರ ತಯಾರಿಕಾ ಕೆಲಸವೂ ನಡೆಯುತ್ತಿದೆ ಅಂತ ಶಿವದತ್ತ ಹೇಳಿದ್ದಾರೆ. ಇದನ್ನೂ ಓದಿ: ಅಪ್ಪು ಅತ್ತೆ ನಾಗಮ್ಮಗೆ ಸುದ್ದಿ ಇನ್ನೂ ಗೊತ್ತೇ ಇಲ್ಲ- ಗಾಜನೂರಿನ ಪ್ರತಿ ಮನೆಯಲ್ಲೂ ನೀರವ ಮೌನ!

    ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ನಿಧನದ ಬಳಿಕ ಅನೇಕ ಮಾನವೀಯ ಕಾರ್ಯಗಳು ನಡೆಯುತ್ತಾ ಬರುತ್ತಿದೆ. ಹಲವರು ನೇತ್ರದಾನ, ದೇಹದಾನಕ್ಕೆ ಸಹಿ ಮಾಡಿದ್ದರೆ, ಇನ್ನೂ ಕೆಲವರು ಅವರ ಫೋಟೋಗಳನ್ನು ದೇವರ ಕೋಣೆಯಲ್ಲಿಟ್ಟು ಪೂಜೆ ಮಾಡುತ್ತಿದ್ದಾರೆ. ಅಪ್ಪು ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ಅವರ ಕುಟುಂಬಸ್ಥರಿಗೂ ತಿಳಿದಿರಲಿಲ್ಲ. ಇದೀಗ ಅವರ ಈ ಕೆಲಸಗಳನ್ನು ಕುಟುಂಬಸ್ಥರು ಹಾಗೂ ಅಭಿಮಾನಿಗಳು ಮುಂದುವರಿಸುತ್ತಿದ್ದಾರೆ.

  • USನಿಂದ 157 ಪುರಾತನ ಕಲಾಕೃತಿಗಳನ್ನು ವಾಪಸ್ ಭಾರತಕ್ಕೆ ತಂದ ಪ್ರಧಾನಿ ಮೋದಿ

    USನಿಂದ 157 ಪುರಾತನ ಕಲಾಕೃತಿಗಳನ್ನು ವಾಪಸ್ ಭಾರತಕ್ಕೆ ತಂದ ಪ್ರಧಾನಿ ಮೋದಿ

    ನವದೆಹಲಿ: ಹಿಂದೆ ಕಳವಾಗಿದ್ದ ವಿಗ್ರಹಗಳೆಲ್ಲವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಯುಎಸ್‍ನಿಂದ 157 ಪುರಾತನ ಕಲಾಕೃತಿಗಳನ್ನು ಭಾರತಕ್ಕೆ ತಂದಿದ್ದಾರೆ.

    ನಮ್ಮ ದೇಶಕ್ಕೆ ಸಂಬಂಧಪಟ್ಟ ಸುಮಾರು 157 ಪುರಾತನ ಕಲಾಕೃತಿಗಳು, ದೇವರ ವಿಗ್ರಹಗಳನ್ನು ವಾಪಸ್ ತರುತ್ತಿದ್ದಾರೆ ಎಂದು ಹೇಳಲಾಗಿದೆ. ಈ ಕಲಾಕೃತಿಗಳೆಲ್ಲ ಹಿಂದೆ ಕಳವಾಗಿ, ಯುಎಸ್‍ಗೆ ಸಾಗಿಸಲ್ಪಟ್ಟಿದ್ದವು. ಅದನ್ನೀಗ ಪ್ರಧಾನಿ ಮೋದಿಯವರಿಗೆ ಅಮೆರಿಕ ಹಸ್ತಾಂತರ ಮಾಡಿದೆ. ಈ ಬಗ್ಗೆ ಪ್ರಧಾನಿ ಮೋದಿ (Narendra Modi)ಯವರೂ ಕೂಡ ತುಂಬ ಖುಷಿ ವ್ಯಕ್ತಪಡಿಸಿದ್ದಾರೆ.

    ಇದೀಗ ಪ್ರಧಾನಿ ಮೋದಿಯವರು ಭಾರತಕ್ಕೆ ತರಲಿರುವ ಪುರಾತನ ವಸ್ತುಗಳಲ್ಲಿ 12ನೇ ಶತಮಾನದ ಕಂಚಿನ ನಟರಾಜ ವಿಗ್ರಹ, 10ನೇ ಶತಮಾನದ ರೇವಂತ ದೇವರ ಮೂರ್ತಿಗಳು ಇವೆ. ಹೀಗೆ ವಾಪಸ್ ತರಲಾದ 45 ಕಲಾಕೃತಿಗಳು ಸಾಮಾನ್ಯ ಯುಗಕ್ಕಿಂತಲೂ ಮುಂಚಿನವು. 71 ಸಾಂಸ್ಕೃತಿಕ ಕಲಾಕೃತಿಗಳಾಗಿದ್ದು, 60 ಹಿಂದೂ ಧರ್ಮ ಬಿಂಬಕ ಕಲಾಕೃತಿಗಳಾಗಿವೆ. ಇನ್ನು 16 ಕಲಾಕೃತಿಗಳು ಬೌದ್ಧಧರ್ಮಕ್ಕೆ ಸೇರಿದ್ದಾಗಿದ್ದು, 9 ಜೈನಧರ್ಮದ್ದಾಗಿವೆ. ಇದನ್ನೂ ಓದಿ:  ಹೂವಿನ ಬೆಲೆ ಕುಸಿತ, ಗುಲಾಬಿ ತೋಟಕ್ಕೆ ಬೆಂಕಿ ಇಟ್ಟ ರೈತ

    ಕಂಚಿನಿಂದ ಮಾಡಲಾದ ಲಕ್ಷ್ಮೀ ನಾರಾಯಣ ಅಲಂಕೃತ ಮೂರ್ತಿಗಳು, ಬುದ್ಧ, ವಿಷ್ಣು, ಶಿವ-ಪಾರ್ವತಿ ಮತ್ತು 24 ಜೈನ ತೀರ್ಥಂಕರ ಮೂರ್ತಿಗಳ ವಿಗ್ರಹ ಇದೆ. ದೇವರ ವಿಗ್ರಹಗಳ ಹೊರತಾಗಿಯೂ ಕೆಲವು ಸಾಂಸ್ಕೃತಿ ಪ್ರತಿಬಿಂಬಕ ಕಲಾಕೃತಿಗಳಿವೆ. ಮೂರು ತಲೆಯ ಬ್ರಹ್ಮ, ರಥ ಚಾಲನೆ ಮಾಡುತ್ತಿರುವ ಸೂರ್ಯ, ವಿಷ್ಣು, ದಕ್ಷಿಣಾಮೂರ್ತಿಯಾಗಿರುವ ಶಿವ, ನೃತ್ಯ ಮಾಡುತ್ತಿರುವ ಗಣೇಶನ ವಿಗ್ರಹಗಳು, ತಾರ, ಜೈನ ತೀರ್ಥಂಕರ , ಪದ್ಮಾಸನ ತೀರ್ಥಂಕರ ಮತ್ತು ಜೈನ ಚೌಬಿಸಿ ಮೂರ್ತಿಗಳೂ ಇವೆ. ಇದನ್ನೂ ಓದಿ:  ಹುಟ್ಟುಹಬ್ಬದ ಪಾರ್ಟಿಗೆ ಆಗಮಿಸಿದ ಟೆಕ್ಕಿ ಸಾವು

    ಪ್ರಧಾನಿ ನರೇಂದ್ರ ಮೋದಿಯವರು ಮೂರು ದಿನಗಳ ಯುಎಸ್ ಪ್ರವಾಸ ಮುಗಿಸಿ, ಅಲ್ಲಿಂದ ಹೊರಟಿದ್ದಾರೆ. ನಿನ್ನೆ ವಿಶ್ವಸಂಸ್ಥೆಯ 76ನೇ ಸಾಮಾನ್ಯ ಸಭೆಯಲ್ಲಿ ಭಾಷಣ ಮಾಡಿದ್ದರು. ಸೆಪ್ಟೆಂಬರ್ 24ರಂದು ಕ್ವಾಡ್ ಶೃಂಗಸಭೆ (Quad Summit)ಯಲ್ಲಿ ಮಾತನಾಡಿದ್ದರು. ನಿನ್ನೆ (ಸೆಪ್ಟೆಂಬರ್ 25) ಅವರ ಅಮೆರಿಕ ಪ್ರವಾಸ ಮುಕ್ತಾಯಗೊಂಡಿದ್ದು, ಈಗಾಗಲೇ ಅಲ್ಲಿಂದ ಹೊರಟಿದ್ದಾರೆ. ಆದರೆ ಹೀಗೆ ಭಾರತಕ್ಕೆ ಬರುವಾಗ, ನಮ್ಮ ದೇಶಕ್ಕೆ ಸಂಬಂಧಪಟ್ಟ ಸುಮಾರು 157 ಪುರಾತನ ಕಲಾಕೃತಿಗಳು, ದೇವರ ವಿಗ್ರಹಗಳನ್ನು ವಾಪಸ್ ತರುತ್ತಿದ್ದಾರೆ ಎಂದು ಹೇಳಲಾಗಿದೆ.