Tag: ಮೂರುಸಾವಿರ ಮಠ

  • ಮೂರುಸಾವಿರ ಮಠ ಸೀಲ್ ಡೌನ್- ಭಕ್ತರ ಪ್ರವೇಶಕ್ಕೆ ನಿರ್ಬಂಧ

    ಮೂರುಸಾವಿರ ಮಠ ಸೀಲ್ ಡೌನ್- ಭಕ್ತರ ಪ್ರವೇಶಕ್ಕೆ ನಿರ್ಬಂಧ

    ಹುಬ್ಬಳ್ಳಿ: ಕೊರೊನಾ ವೈರಸ್ ಪ್ರಕರಣಗಳು ದಿನದಿಂದ ದಿನಕ್ಕೆ ವೃದ್ಧಿಸುತ್ತಿದ್ದು, ವಾಣಿಜ್ಯನಗರಿ ಹುಬ್ಬಳ್ಳಿಯ ಪ್ರತಿಷ್ಠಿತ ಮೂರುಸಾವಿರ ಮಠದ ಪಕ್ಕದಲ್ಲಿಯೇ ವ್ಯಕ್ತಿಯೊಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಮಠದ ಆವರಣವನ್ನು ಸೀಲ್ ಡೌನ್ ಮಾಡಲಾಗಿದೆ.

    ಪ್ರತಿದಿನವೂ ನೂರಾರು ಭಕ್ತರು ಗದ್ದುಗೆ ದರ್ಶನಕ್ಕೆ ಆಗಮಿಸುತ್ತಿದ್ದರು. ಆದರೇ ಕೊರೊನಾ ವೈರಸ್ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಮಠದ ಭಕ್ತರಿಗೆ ದರ್ಶನ ಭಾಗ್ಯ ಇಲ್ಲವಾಗಿದೆ.

    ಮೂರು ಸಾವಿರ ಮಠದ ಪಕ್ಕದಲ್ಲೆ ರೋಗಿ- 9418 ಸೊಂಕಿತನಿಂದ ಮಠದ ಸುತ್ತಲಿನ 100 ಮೀಟರ್ ಪ್ರದೇಶ ಸೀಲ್ ಡೌನ್ ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಅಲ್ಲದೇ ಮಠದ ಆವರಣದಲ್ಲಿ ಪೊಲೀಸ್ ಭದ್ರತೆ ನಿಯೋಜನೆ ಮಾಡಿದ್ದು, ಸಾರ್ವಜನಿಕರು ಅನಾವಶ್ಯಕ ಓಡಾಡದಂತೆ ಸೂಚನೆ ನೀಡಲಾಗಿದೆ.

  • ನನ್ನ ಮೇಲಿನ ಆರೋಪ ಸಾಬೀತು ಮಾಡ್ಲಿ, ಮಠದ ಗದ್ದುಗೆ ಎದುರೇ ಪ್ರಾಣ ಬಿಡ್ತೇನೆ: ದಿಂಗಾಲೇಶ್ವರ ಶ್ರೀ

    ನನ್ನ ಮೇಲಿನ ಆರೋಪ ಸಾಬೀತು ಮಾಡ್ಲಿ, ಮಠದ ಗದ್ದುಗೆ ಎದುರೇ ಪ್ರಾಣ ಬಿಡ್ತೇನೆ: ದಿಂಗಾಲೇಶ್ವರ ಶ್ರೀ

    ಧಾರವಾಡ: ದುಷ್ಕರ್ಮಿಗಳು ನಾನು ಗುಂಡಾ, ಅಯೋಗ್ಯ ಎಂದು ಸುದ್ದಿ ಹಬ್ಬಿಸುತ್ತಿದ್ದಾರೆ. ನಾನು ಗುಂಡಾ, ಅಯೋಗ್ಯ ಆಗಿದ್ದರೆ ಅದನ್ನ ತುಂಬಿದ ಸಭೆಯಲ್ಲಿ ಸಾಬೀತು ಪಡಿಸಲಿ. ಆರೋಪವನ್ನ ಸಾಬೀತು ಮಾಡಿದರೇ ಮೂರುಸಾವಿರ ಮಠದ ಕರ್ತೃ ಗದ್ದುಗೆ ಎದುರೇ ಪ್ರಾಣ ಬಿಡುತ್ತೇನೆ ಎಂದು ಬಾಲೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ಸವಾಲ್ ಹಾಕಿದ್ದಾರೆ.

    ಧಾರವಾಡ ಲಿಂಗಾಯತ ಭವನದಲ್ಲಿ ನಡೆದ ಭಕ್ತರ ಮತ್ತು ಸಮಾಜದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ನಾನು ಮೂರುಸಾವಿರ ಮಠದ ಗದ್ದುಗೆಗಾಗಿ ಸಭೆಗಳನ್ನು ಮಾಡುತ್ತಿಲ್ಲ. ಮಠಕ್ಕೆ ಸುತ್ತಿದ ವಿವಾದ ಬಗೆಹರಿಸಲು ಭಕ್ತರು ಸಭೆ ಮಾಡುತ್ತಿದ್ದೇನೆ ಎಂದರು. ನಾನು ಮೂರುಸಾವಿರ ಮಠದ ಜಗದ್ಗುರುಗಳನ್ನು ಭೇಟಿ ಮಾಡುತ್ತೇನೆ. ನಾವು ಮಠಕ್ಕೆ ಸ್ವಾಮೀಜಿಯಾಗಲು ಖಾವಿಧಾರಿಯಾಗಿಲ್ಲ, ಸಮಾಜಕ್ಕಾಗಿ ನಾವು ಖಾವಿಧಾರಿಯಾಗಿದ್ದೇವೆ. ಸ್ವಾಮೀತ್ವಕ್ಕೆ ಮಠವೇ ಬೇಕಾಗಿಲ್ಲ. ಆದರೆ ಈಗ ನನ್ನ ಗೌರವದ ಪ್ರಶ್ನೆ ಬಂದಿದೆ ಹೀಗಾಗಿ ನಾನು ಮುಂದೆ ಬಂದಿದ್ದೇನೆ ಎಂದು ಸಭೆಯಲ್ಲಿ ತಿಳಿಸಿದರು.

    ಸಭೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನನಗೂ ಮತ್ತು ಮೂರುಸಾವಿರ ಮಠ ಜಗದ್ಗುಗಳ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಅವರು ಗುರು ನಾನು ಶಿಷ್ಯ. ಆದರೆ ಕೆಲವರು ನಮ್ಮಿಬ್ಬರ ಮಧ್ಯೆ ಭಿನ್ನಾಭಿಪ್ರಾಯ ತಂದಿಟ್ಟಿದ್ದಾರೆ. ಕೆಲವರ ರಾಜಕೀಯದಿಂದ ಹೀಗಾಗಿದೆ. ಅವರನ್ನು ಮಠದಿಂದ ದೂರ ಮಾಡಲು ಈಗ ಹೋರಾಟ ನಡೆದಿದೆ ಎಂದು ಕಿಡಿಕಾರಿದರು.

    ನನ್ನ ಉತ್ತರಾಧಿಕಾರಿ ಪತ್ರ ಆದ ನಂತರದಲ್ಲಿ ಉಳಿದ ಚಟುವಟಿಕೆಗಳು ನಡೆದಿವೆ. ದಿಂಗಾಲೇಶ್ವರ ಸ್ವಾಮೀಜಿ ಬರಬೇಕು ಎಂದು ಭಕ್ತರು ಬಯಸಿದ್ದಾರೆ. ಆದರೆ ಕೆಲವರು ದಿಂಗಾಲೇಶ್ವರ ಸ್ವಾಮೀಜಿ ಬರಬಾರದು ಎಂದು ಕೆಟ್ಟ ಪ್ರಯತ್ನ ಮಾಡಿದ್ದಾರೆ. ನಾನು ಮಠಕ್ಕೆ ಅನ್ಯಾಯ ಮಾಡಿದ್ದರೆ, ದ್ರೋಹ ಮಾಡಿದ್ದರೆ ಸಾಬೀತು ಮಾಡಿ ತೋರಿಸಲಿ ಎಂದು ಸವಾಲ್ ಹಾಕಿದರ. ಹಾಗೆಯೇ ಮಠದಲ್ಲಿ ರಾಜಕೀಯ ಮಾಡುವವರನ್ನ ದೂರ ಮಾಡುತ್ತೇನೆ ಎಂದು ಸ್ವಾಮೀಜಿ ಹರಿಹಾಯ್ದರು.

  • ಮತ್ತೆ ಚರ್ಚೆಗೆ ಗ್ರಾಸವಾದ ಮೂರುಸಾವಿರ ಮಠದ ಉತ್ತರಾಧಿಕಾರಿ ನೇಮಕ

    ಮತ್ತೆ ಚರ್ಚೆಗೆ ಗ್ರಾಸವಾದ ಮೂರುಸಾವಿರ ಮಠದ ಉತ್ತರಾಧಿಕಾರಿ ನೇಮಕ

    ಹುಬ್ಬಳ್ಳಿ: ಉತ್ತರ ಕರ್ನಾಟಕದ ಪ್ರಸಿದ್ಧ ಮೂರುಸಾವಿರ ಮಠ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಮಠದ ಉತ್ತರಾಧಿಕಾರಿ ವಿಷಯ ಮತ್ತೀಗ ಮುನ್ನೆಲೆಗೆ ಬಂದಿದೆ. ರಾಜಕಾರಣಿಗಳು ತಮ್ಮ ಗೊಂದಲವನ್ನ ಮುಂದುವರಿಸುತ್ತಿದ್ದು ಉತ್ತರಾಧಿಕಾರಿ ವಿಷಯಕ್ಕೆ ಉತ್ತರವೇ ಸಿಗದಾಗಿದೆ.

    ಸದ್ಯ ಹುಬ್ಬಳ್ಳಿಯ ಮೂರುಸಾವಿರ ಮಠದಲ್ಲಿ ಶ್ರೀ ಗುರುಸಿದ್ಧ ರಾಜಯೋಗಿಂದ್ರ ಮಹಾಸ್ವಾಮಿಗಳಿದ್ದಾರೆ. ಇವರೇ ಮನಸ್ಸು ಮಾಡಿ ಬಾಲೆಹೊಸೂರಿನ ಶ್ರೀ ದಿಂಗಾಲೇಶ್ವರ ಸ್ವಾಮೀಜಿಗಳನ್ನ ಉತ್ತರಾಧಿಕಾರಿ ಎಂದು ನೇಮಕ ಮಾಡಿಕೊಂಡಿದ್ದರು. ಈ ಮೊದಲು 2014ರಲ್ಲಿ ಇದಕ್ಕೆ ಕೆಲವರು ವಿರೋಧ ಮಾಡಿ ಗೊಂದಲ ಸೃಷ್ಟಿ ಮಾಡಿದ್ದರು. ಅಂದಿನಿಂದಲೇ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದೆ.

    ಇತ್ತೀಚೆಗೆ ಕೆಲವು ಸ್ವಾಮೀಜಿಗಳು ಸಿಎಂ ಅವರನ್ನು ಭೇಟಿ ಮಾಡಿ ಉತ್ತರಾಧಿಕಾರಿಯಾಗಿ ದಿಂಗಾಲೇಶ್ವರ ಸ್ವಾಮೀಜಿಯವರನ್ನ ನೇಮಕ ಮಾಡುವಂತೆ ಚರ್ಚೆ ಮಾಡಿದ್ದಾರೆ. ಆದರೆ ಸದ್ಯಕ್ಕೆ ಉತ್ತರಾಧಿಕಾರಿ ನೇಮಕ ವಿಚಾರ ಉನ್ನತ ಸಮಿತಿ ಮುಂದೆ ಬಂದಿಲ್ಲವೆಂದು ಮಠದ ಉನ್ನತ ಸಮಿತಿಯ ಸದಸ್ಯ ಬಸವರಾಜ ಹೊರಟ್ಟಿ ಹೇಳಿಕೆ ನೀಡಿರುವುದು ಮತ್ತೆ ಉತ್ತರಾಧಿಕಾರಿ ವಿಷಯ ಮುನ್ನೆಲೆಗೆ ಬಂದಿದೆ.

    ಮಠದ ಉತ್ತರಾಧಿಕಾರಿ ವಿಷಯವೇ ಇಂದು ಅಪ್ರಸ್ತುತ. ಈ ವಿಷಯದಲ್ಲಿ ನನ್ನ ಹೆಸರನ್ನು ಸುಖಾಸುಮ್ಮನೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈಗಿರುವ ಸ್ವಾಮೀಜಿಗಳು ಉತ್ತಮವಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಅವರಿಗೆ ಸಹಕಾರ ಕೊಡುತ್ತ ನಾವು ಭಕ್ತರಾಗಿ ಮುಂದುವರಿಯುತ್ತೇವೆ. ಅಲ್ಲದೇ ಉತ್ತರಾಧಿಕಾರಿ ಬದಲಾವಣೆ ವಿಚಾರದಲ್ಲಿ ನನ್ನ ಹೆಸರು ತರುತ್ತಿರುವುದು ಸರಿಯಲ್ಲವೆಂದು ಸಚಿವ ಜಗದೀಶ ಶೆಟ್ಟರ್ ಹೇಳಿದ್ದಾರೆ.

    ಮೂರುಸಾವಿರ ಮಠದ ಹಾಲಿ ಶ್ರೀಗಳ ಅಭಿಲಾಷೆಯನ್ನ ಈಡೇರಿಸಲು ಈಗಲೂ ಹಿಂದೇಟು ಹಾಕಲಾಗುತ್ತಿದೆ. ಶ್ರೀ ದಿಂಗಾಲೇಶ್ವರ ಶ್ರೀಗಳನ್ನ ಕೆಲವರು ಮೊದಲಿಂದಲೂ ವಿರೋಧ ಮಾಡುತ್ತ ಬರುತ್ತಿರುವುದೇ ಇದಕ್ಕೆ ಕಾರಣವಾಗಿದೆ. ಪುರಾತನ ಇತಿಹಾಸ ಹೊಂದಿರುವ ಶ್ರೀ ಮಠಕ್ಕೆ ಬಾಲೆಹೊಸೂರಿನ ಶ್ರೀಗಳು ಬರುವುದನ್ನೇ ಕಾಯುತ್ತಿರುವ ಹಾಲಿ ಶ್ರೀಗಳ ಬಯಕೆ ಯಾವಾಗ ಈಡೇರತ್ತೋ ಕಾದು ನೋಡಬೇಕಿದೆ.

  • ರಾಜಕಾರಣಿಗಳಿಗೆ ಮೂರುಸಾವಿರ ಮಠದ ಸ್ವಾಮೀಜಿ ಕಿವಿಮಾತು!

    ರಾಜಕಾರಣಿಗಳಿಗೆ ಮೂರುಸಾವಿರ ಮಠದ ಸ್ವಾಮೀಜಿ ಕಿವಿಮಾತು!

    ರಾಯಚೂರು: ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ಸರಿಯಲ್ಲ, ರಾಜಕಾರಣಿಗಳು ಪ್ರಾಮಾಣಿಕತೆ ಸಂವಿಧಾನಿಕ ಬದ್ಧತೆ ಪ್ರದರ್ಶಿಸಬೇಕು ಅಂತ ಹುಬ್ಬಳ್ಳಿ ಮೂರುಸಾವಿರ ಮಠದ ಶ್ರೀಗುರುಸಿದ್ದೇಶ್ವರ ರಾಜಯೋಗಿಂದ್ರ ಸ್ವಾಮೀಜಿ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಡಿನಲ್ಲಿ ಒಂದು ಕಡೆ ಬರ ಹಾಗು ಇನ್ನೊಂದು ಕಡೆ ಪ್ರವಾಹವಾಗಿದೆ. ಎರಡು ಸಹ ರೈತರಿಗೆ ಬರದ ಅನುಭವ ನೀಡುತ್ತಿವೆ.ದೇವರು ಪ್ರಕೃತಿ ವಿಕೋಪ ನೀಗಿಸುವಂತೆ ಪ್ರಾರ್ಥಿಸುತ್ತೇವೆ. ನಾಡಿನಲ್ಲಿ ಪ್ರಕೃತಿ ವಿಕೋಪವಿರುವಾಗ ರಾಜಕೀಯ ಕಚ್ಚಾಟ ನಡೆಯುತ್ತಿರುವುದು ಸರಿಯಲ್ಲ. ರಾಜಕೀಯ ಮೇಲಾಟ ಬಿಟ್ಟು ಜನರ ನೆರವಿಗೆ ಬರಬೇಕು.ಈಗ ನಡೆಯುತ್ತಿರುವ ರಾಜಕೀಯ ಪಕ್ಷಗಳ ವರ್ತನೆ ಸರಿಯಲ್ಲ ಅಂದ್ರು.

    ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ಸ್ಥಾಪನೆಗೆ ಜನರು ಉತ್ತರ ನೀಡಿದ್ದಾರೆ. ಈ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ ಅಂತ ಅವರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv