Tag: ಮೂನ್‌ಲೈಟಿಂಗ್

  • ನಮ್ಮಲ್ಲಿ ಮೂನ್‌ಲೈಟಿಂಗ್‌ಗೆ ಜಾಗ ಇಲ್ಲ – ಉದ್ಯೋಗಿಗಳನ್ನು ವಜಾಗೊಳಿಸಿದ ಇನ್ಫೋಸಿಸ್‌

    ನಮ್ಮಲ್ಲಿ ಮೂನ್‌ಲೈಟಿಂಗ್‌ಗೆ ಜಾಗ ಇಲ್ಲ – ಉದ್ಯೋಗಿಗಳನ್ನು ವಜಾಗೊಳಿಸಿದ ಇನ್ಫೋಸಿಸ್‌

    ಬೆಂಗಳೂರು: ವಿಪ್ರೋ ಬಳಿಕ ಇನ್ಫೋಸಿಸ್‌(Infosys) ಮೂನ್‌ಲೈಟಿಂಗ್ (ಖಾಲಿ ಸಮಯದಲ್ಲಿ ಮತ್ತೊಂದು ಕಂಪನಿಗೆ ಕೆಲಸ ಮಾಡುವುದು) ಆರೋಪದ ಹಿನ್ನೆಲೆಯಲ್ಲಿ ತನ್ನ ಉದ್ಯೋಗಿಗಳನ್ನು ವಜಾಗೊಳಿಸಿದೆ.

    ಕಳೆದ 12 ತಿಂಗಳ ಕಾಲ ಎರಡು ಸಂಸ್ಥೆಯಲ್ಲಿ ಕೆಲಸ ಮಾಡಿದ್ದ ಉದ್ಯೋಗಿಗಳನ್ನು ವಜಾ ಮಾಡಲಾಗಿದೆ ಎಂದು ತಿಳಿಸಿರುವ ಇನ್ಫೋಸಿಸ್‌ ಎಷ್ಟು ಸಂಖ್ಯೆಯಲ್ಲಿ ವಜಾ ಮಾಡಲಾಗಿದೆ ಎಂಬ ವಿವರವನ್ನು ತಿಳಿಸಿಲ್ಲ.

    ಯಾವುದೇ ಕಾರಣಕ್ಕೂ ನಾವು ಮೂನ್‌ಲೈಟಿಂಗ್‌(Moonlighting) ಬೆಂಬಲಿಸುವುದಿಲ್ಲ. ಎರಡು ಕಡೆ ಉದ್ಯೋಗ ಮಾಡುತ್ತಿರುವುದು ಕಂಡು ಬಂದಲ್ಲಿ ಕೆಲಸದಿಂದಲೇ ವಜಾಗೊಳಿಸಲಾಗುತ್ತದೆ ಎಂದು ಇನ್ಫೋಸಿಸ್‌ ಈ ಹಿಂದೆ ತನ್ನ ಉದ್ಯೋಗಿಗಳಿಗೆ ಎಚ್ಚರಿಕೆ ನೀಡಿತ್ತು. ಇದನ್ನೂ ಓದಿ: ನವೆಂಬರ್‌ನಲ್ಲಿ ಕರ್ನಾಟಕಕ್ಕೂ ಬರಲಿದೆ ವಂದೇ ಭಾರತ್ ಸೆಮಿ ಹೈಸ್ಪೀಡ್ ರೈಲು

    ಎರಡನೇ ತ್ರೈಮಾಸಿಕ ವರದಿ ಪ್ರಕಟಿಸಿದ ಎಲ್ಲಾ ಪ್ರಮುಖ ಐಟಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮೂನ್‌ಲೈಟಿಂಗ್ ವಿರುದ್ಧ ಎಚ್ಚರಿಕೆ ನೀಡಿದ್ದವು. ತನ್ನ ಸಂಸ್ಥೆಯ ಮೂಲ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಇನ್ಫೋಸಿಸ್‌ ಹೇಳಿತ್ತು.

    ಈ ಹಿಂದೆ ವಿಪ್ರೋ ಕೂಡ ಮೂನ್`ಲೈಟಿಂಗ್ ತನ್ನ ಸಿಬ್ಬಂದಿಗಳಿಗೆ ಗೇಟ್ ಪಾಸ್ ನೀಡಿತ್ತು. ಇದೀಗ ಇನ್ಫೋಸಿಸ್ ಈ ಹಾದಿಯಲ್ಲಿ ಸಾಗಿದ್ದು ತನ್ನ ಸಿಬ್ಬಂದಿಗಳನ್ನು ವಜಾಗೊಳಿಸಿದೆ.

    Live Tv
    [brid partner=56869869 player=32851 video=960834 autoplay=true]