Tag: ಮೂಗುತಿ

  • ಪ್ರೇಮ್ ಕಹಾನಿ: ಹರಿಪ್ರಿಯಾಗೆ ಮೂಗು ಚುಚ್ಚಿಸಿದ್ದೇ ನಟ ವಸಿಷ್ಠ ಸಿಂಹ

    ಪ್ರೇಮ್ ಕಹಾನಿ: ಹರಿಪ್ರಿಯಾಗೆ ಮೂಗು ಚುಚ್ಚಿಸಿದ್ದೇ ನಟ ವಸಿಷ್ಠ ಸಿಂಹ

    ಮೊನ್ನೆಯಷ್ಟೇ ನಟಿ ಹರಿಪ್ರಿಯಾಗೆ ಮೂಗು ಚುಚ್ಚಿಸಿಕೊಂಡಿದ್ದರು. ಆ ಎಕ್ಸಿಪೀರಿಯನ್ಸ್ ಕೂಡ ಹಂಚಿಕೊಂಡಿದ್ದರು. ಸಡನ್ನಾಗಿ ಹರಿಪ್ರಿಯಾ ಮೂಗು ಚುಚ್ಚಿಕೊಳ್ಳಲು ಕಾರಣವೇನು ಎನ್ನುವ ಪ್ರಶ್ನೆ ಕೂಡ ಮೂಡಿತ್ತು. ಇದೀಗ ಅದಕ್ಕೆ ಉತ್ತರ ಸಿಕ್ಕಿದೆ. ಸದ್ಯದಲ್ಲೇ ಹರಿಪ್ರಿಯಾ ಮದುವೆ ಆಗುತ್ತಿದ್ದು, ಮದುವೆಯ ಮುನ್ನ ಹೊಸ ಜೀವನಕ್ಕೆ ಕಾಲಿಡುತ್ತಿರುವ ಹುಡುಗನೇ ಹರಿಪ್ರಿಯಾಗೆ ಮೂಗು ಚುಚ್ಚಿಸಿದ್ದಾರೆ. ಆ ಹುಡುಗ ಬೇರೆ ಯಾರೂ ಅಲ್ಲ, ನಟ ವಸಿಷ್ಠ ಸಿಂಹ ಎನ್ನುವುದು ವಿಶೇಷ.

    ಮೂಗು ಚುಚ್ಚಿಸಿಕೊಂಡ ವಿಡಿಯೋದಲ್ಲಿ ವಸಿಷ್ಠ ಸಿಂಹ ಕೂಡ ಇದ್ದು, ಅವರೇ ಮುಂದೆ ನಿಂತು ತನ್ನ ಹುಡುಗಿಗೆ ಮೂಗು ಚುಚ್ಚಿಸಿದ್ದಾರೆ. ವಿಡಿಯೋ ಹಂಚಿಕೊಂಡ ಸಂದರ್ಭದಲ್ಲಿ ಆ ಹುಡುಗ ಯಾರು ಎಂದು ಗೊತ್ತಾಗಿರಲಿಲ್ಲ. ಇಬ್ಬರ ಮದುವೆ ವಿಚಾರ ಹೊರಬೀಳುತ್ತಿದ್ದಂತೆಯೇ ವಿಡಿಯೋದಲ್ಲಿ ವಸಿಷ್ಠ ಇರುವುದನ್ನು ಪತ್ತೆ ಮಾಡಲಾಗಿದೆ. ಆ ವಿಡಿಯೋ ಮತ್ತೆ ಈಗ ವೈರಲ್ ಕೂಡ ಆಗಿದೆ. ಇದನ್ನೂ ಓದಿ: ಭಾರತೀಯ ಸೈನ್ಯಕ್ಕೆ ಅಪಮಾನ: ನಟಿ ರಿಚಾ ಚಡ್ಡಾ ಕ್ಷಮೆಯಾಚನೆ

    ಹರಿಪ್ರಿಯಾ ಸ್ಯಾಂಡಲ್ ವುಡ್‌ನ ಖ್ಯಾತ ನಟ ವಸಿಷ್ಠ ಸಿಂಹ (Vasishta Simha) ಜೊತೆ ಹಸೆಮಣೆ ಏರಲು ಸಜ್ಜಾಗಿದ್ದಾರೆ. ವಸಿಷ್ಠ ಮತ್ತು ಹರಿಪ್ರಿಯಾ ಅವರದ್ದು ಲವ್ ಮ್ಯಾರೇಜ್. ಇಬ್ಬರೂ ತುಂಬಾ ಆಪ್ತರಾಗಿದ್ದಾರೆ. ಆಗಾಗ್ಗೆ ಡಾನ್ಸ್ ವಿಡಿಯೋಗಳನ್ನು ಶೇರ್ ಮಾಡುತ್ತಿದ್ದರು. ಆದರೆ ಎಲ್ಲಿಯೂ ಪ್ರೀತಿಯ ವಿಚಾರ ಬಿಟ್ಟುಕೊಟ್ಟಿರಲಿಲ್ಲ. ಮೊನ್ನೆಯಷ್ಟೇ ದುಬೈನಲ್ಲಿ ಶಾಪಿಂಗ್‌ ಮಾಡಿದ್ದಾರೆ. ಆದರೀಗ ಇಬ್ಬರ ಪ್ರೀತಿ ವಿಚಾರ ಬಹಿರಂಗವಾಗಿದೆ.

    ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಇನ್ನೊಂದು ತಿಂಗಳಲ್ಲೇ ನಿಶ್ಚಿತಾರ್ಥ ಮಾಡಿಕೊಳ್ಳಲು ಎಲ್ಲಾ ತಯಾರಿ ಕೂಡ ಮಾಡಿದ್ದಾರಂತೆ. ಅಲ್ಲದೇ ನಿಶ್ಚಿತಾರ್ಥದ ಬಳಿಕ ಅಂದರೆ ಎರಡು ತಿಂಗಳಲ್ಲಿ ಇಬ್ಬರೂ ಹಸೆಮಣೆ ಏರಲಿದ್ದಾರೆ ಎನ್ನುವ ಮಾತು ಕೇಳಿಬಂದಿದೆ. ಆದರೆ ಜೋಡಿ ಹಕ್ಕಿಗಳಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ.

    Live Tv
    [brid partner=56869869 player=32851 video=960834 autoplay=true]

  • ಮಾಸ್ಕ್ ಮೇಲೆಯೇ ಮೂಗುತಿ ಪಿನ್ ಮಾಡಿ ನೆಟ್ಟಿಗರ ಮನಗೆದ್ದ ಮಹಿಳೆ

    ಮಾಸ್ಕ್ ಮೇಲೆಯೇ ಮೂಗುತಿ ಪಿನ್ ಮಾಡಿ ನೆಟ್ಟಿಗರ ಮನಗೆದ್ದ ಮಹಿಳೆ

    ನವದೆಹಲಿ: ಚೀನಿ ವೈರಸ್ ಭಾರತವನ್ನು ವಕ್ಕರಿಸಿದ ಬಳಿಕ ಮಾಸ್ಕ್ ಹಾಗೂ ಸ್ಯಾನಿಟೈಸರ್ ಕಡ್ಡಾಯವಾಗಿ ಬಳಸುವಂತಾಗಿದೆ. ಈ ಹಿನ್ನೆಲೆಯಲ್ಲಿ ಮಹಿಳೆಯರ ಮೇಕಪ್ ಗೆ ಕೊರೊನಾ ಅಡ್ಡಿಯಾಗಿದೆ ಅಂತಾನೇ ಹೇಳಬಹುದು. ಈ ಮಧ್ಯೆ ಮಹಿಳೆಯೊಬ್ಬರು ಹುಡುಕಿಕೊಂಡ ಐಡಿಯಾಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.

    ಹೌದು. ಸದ್ಯ ಮಾಸ್ಕ್ ಮನುಷ್ಯನ ಅವಿಭಾಜ್ಯ ಅಂಗವಾಗಿದೆ. ಮುಖದ ಅರ್ಧ ಭಾಗವನ್ನು ಮುಚ್ಚಿಕೊಳ್ಳುವುದು ತಮಾಷೆಯಲ್ಲ. ಅದರಲ್ಲೂ ಇತ್ತೀಚೆಗೆ ಮದುವೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದಾದರೆ ಮಾಸ್ಕ್ ಧರಿಸಲೇ ಬೇಕಾಗಿದೆ. ಅಂತೆಯೇ ಮದುವೆಗೆ ಬಂದ ಮಹಿಳೆಯೊಬ್ಬಳು ಧರಿಸಿರುವ ಮಾಸ್ಕ್ ಎಲ್ಲರ ಗಮನ ಸೆಳೆದಿದೆ. ಅಲ್ಲದೆ ಈ ಮಹಿಳೆಯ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಕೂಡ ಆಗಿದೆ.

    ಫೋಟೋದಲ್ಲಿ ಮಹಿಳೆ ದೊಡ್ಡದಾದ ಮೂಗುತಿಯನ್ನು ಎನ್-95 ಮಾಸ್ಕ್ ಮೇಲೆ ಪಿನ್ ಮಾಡಿದ್ದಾಳೆ. ಉಳಿದಂತೆ ಆಭರಣಗಳನ್ನು ಧರಿಸಿರುವುದನ್ನು ನಾವು ಫೋಟೋದಲ್ಲಿ ಕಾಣಬಹುದಾಗಿದೆ. ಈ ಫೋಟೋವನ್ನು ಐಪಿಎಸ್ ಅಧಿಕಾರಿ ದೀಪಂಶು ಕಬ್ರಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

    ಫೊಟೋದಲ್ಲಿದ್ದ ಮಹಿಳೆಯನ್ನು ಕವಿತಾ ಜೋಶಿ ಎಂದು ಗುರುತಿಸಲಾಗಿದೆ. ಈಕೆ ಉತ್ತರಾಖಂಡ್‍ನ ನೈನಿತಲ್ ಜಿಲ್ಲೆಯ ಘೋಡಖಲ್ ನಿವಾಸಿ. ಈಕೆ ಸೊಸೆಯ ಮದುವೆ ಕಾರ್ಯಕ್ರಮದಲ್ಲಿ ವಿಶೇಷ ರೀತಿಯಲ್ಲಿ ಪಾಲ್ಗೊಂಡಿದ್ದು, ನೆರರೆದಿದ್ದವರನ್ನು ಹುಬ್ಬೇರಿಸುವಂತೆ ಮಾಡಿದ್ದಾರೆ.

    ಈ ಸಂಬಂಧ ಮಾತನಾಡಿರುವ ಕವಿತಾ, ಸೊಸೆಯ ಮದುವೆಯಾಗಿದ್ದು, ನಾನು ಆಕೆಯ ದೊಡ್ಡ ಅತ್ತೆಯಾಗಿದ್ದು, ತುಂಬಾ ಹತ್ತಿರದ ಸಂಬಂಧಿಯಾಗಿದ್ದೇನೆ. ಹೀಗಾಗಿ ನಾನು ಮದುವೆಯಲ್ಲಿ ಪಾಲ್ಗೊಳ್ಳಲೇ ಬೇಕಾದ ಅನಿವಾರ್ಯತೆ ಇತ್ತು. ಇತ್ತ ಕೊರೊನಾ ವೈರಸ್ ಕೂಡ ಅಟ್ಟಹಾಸ ಮೆರೆಯುತ್ತಿದ್ದರಿಂದ ನಾನು ಕೊರೊನಾ ನಿಯಮ ಕೂಡ ಪಾಲಿಸಲೇಬೇಕಾಗಿತ್ತು. ಮದುವೆಗೆ ಚೆನ್ನಾಗಿ ರೆಡಿ ಆಗಬೇಕಿತ್ತು. ಮೂಗುತಿ ವಿವಾಹಿತ ಮಹಿಳೆಯರಿಗೆ ಶುಭವೆಂದು ಪರಿಗಣಿಸಲಾಗಿದೆ. ಹೀಗಾಗಿ ಮಾಸ್ಕ್ ಒಳಗೆ ಧರಿಸಲು ನನಗೆ ಇಷ್ಟವಿರಲಿಲ್ಲ. ಈ ಹಿನ್ನೆಲೆಯಲ್ಲಿ ಮಾಸ್ಕ್ ಮೇಲೆಯೇ ಮೂಗುತಿಯನ್ನು ಪಿನ್ ಮಾಡಿಕೊಂಡೆ ಎಂದು ತಿಳಿಸಿದ್ದಾರೆ.

    ಮಹಿಳೆಯ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಹಲವಾರು ಪರ-ವಿರೋಧ ಕಾಮೆಂಟ್ ಗಳು ಹರಿದುಬಂದವು.