Tag: ಮುಹೂರ್ತ

  • `ದಾಸವರೇಣ್ಯ ಶ್ರೀ ವಿಜಯ ದಾಸರು 2′ ಚಿತ್ರಕ್ಕೆ ಚಾಲನೆ

    `ದಾಸವರೇಣ್ಯ ಶ್ರೀ ವಿಜಯ ದಾಸರು 2′ ಚಿತ್ರಕ್ಕೆ ಚಾಲನೆ

    ಖ್ಯಾತ ಹರಿದಾಸರಾದ ಭೃಗು ಋಷಿಗಳ ಅಂಶ ಸಂಭೂತರಾದ ಶ್ರೀವಿಜಯದಾಸರ  ಆರಾಧನಾ ಪರ್ವಕಾಲದಲ್ಲಿ “ದಾಸವರೇಣ್ಯ ಶ್ರೀ ವಿಜಯದಾಸರು ಭಾಗ ೨” (Dasavarenya Sri Vijaya Dasaru 2) ಚಿತ್ರದ ಮುಹೂರ್ತ ಸಮಾರಂಭ ಬಸವನಗುಡಿಯ ಶ್ರೀಕಾರಂಜಿ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು. ವಿದ್ವಾನ್ ಶ್ರೀಸತ್ಯಧ್ಯಾನಾಚಾರ್ಯ ಕಟ್ಟಿ ಚಿತ್ರದ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು.  ತೇಜಸ್ವಿನಿ ಅನಂತ ಕುಮಾರ್ ಕ್ಯಾಮೆರಾ ಚಾಲನೆ ಮಾಡಿದರು.‌ ಇತ್ತೀಚೆಗಷ್ಟೇ ಟಿಟಿಡಿ ಸದಸ್ಯರಾಗಿ ಆಯ್ಕೆಯಾಗಿರುವ ನರೇಶ್ ಕುಮಾರ್ ಹಾಗೂ ಖ್ಯಾತ ಗಮಕ ಕಲಾವಿದರಾದ ಪ್ರಸನ್ನ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಮುಹೂರ್ತ ಸಮಾರಂಭದ ನಂತರ ಮಾತನಾಡಿದ ಗಣ್ಯರು ಚಿತ್ರ  ಯಶಸ್ವಿಯಾಗಲೆಂದು ಹಾರೈಸಿದರು. ಚಿತ್ರತಂಡದ ಸದಸ್ಯರು ಚಿತ್ರದ ಕುರಿತು ಮಾತನಾಡಿದರು.            ‌‌‌

    ನಾನು ನಮ್ಮ ತಂದೆ ತಾಯಿಯ ಆಶೀರ್ವಾದದಿಂದ ಎಸ್ ಪಿ ಜೆ ಮೂವೀಸ್ ಲಾಂಛನದಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿರುವುದಾಗಿ ತಿಳಿಸಿದ ನಿರ್ಮಾಪಕ ತ್ರಿವಿಕ್ರಮ ಜೋಶಿ (Trivikrama Joshi),  ನಾನೇ ವಿಜಯದಾಸರ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ. ಭಾಗ ಒಂದನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ವಿಜಯದಾಸರ ಆರಾಧನಾ ಸಂದರ್ಭದಲ್ಲೇ ಎರಡನೇ ಭಾಗಕ್ಕೆ ಚಾಲನೆ ದೊರಕ್ಕಿದೆ. ನನ್ನದಲ್ಲದ ಕ್ಷೇತ್ರಕ್ಕೆ ನಿರ್ದೇಶಕ ಮಧುಸೂದನ್ ಹವಾಲ್ದಾರ್ (Madhusudan Havaldar) ನನ್ನನ್ನು ಎಳೆದು ತಂದಿದ್ದಾರೆ. ಹರಿದಾಸರ ಕುರಿತಾಗಿ ಹತ್ತು ಸಿನಿಮಾಗಳನ್ನು ನಿರ್ಮಿಸುವ ಯೋಜನೆಯಿದೆ.‌  ಇದೇ ಸಂದರ್ಭದಲ್ಲಿ ಮತ್ತೊಂದು ವಿಷಯ ತಿಳಿಸುತ್ತಿದ್ದೇನೆ. ನವೆಂಬರ್ 12, ದೇಶ ಕಂಡ ಸಜ್ಜನ ರಾಜಕಾರಣಿ ದಿ.ಅನಂತಕುಮಾರ್ ಅವರು ನಮ್ಮನೆಲ್ಲಾ ಬಿಟ್ಟು‌ ಹೋದ ದಿನ. ಅವರು ನನ್ನ ಗುರುಗಳು. ಇಂದು ಅವರ ಶ್ರೀಮತಿ ಅವರು ಬಂದಿದ್ದಾರೆ. ಅವರ ಜೊತಗೆ ಅನಂತಕುಮಾರ್ ಅವರ ಕುರಿತಾದ ಚಿತ್ರ ಮಾಡುವ ಬಗ್ಗೆ ಚರ್ಚಿಸಿದ್ದೇನೆ. ಸದ್ಯದಲ್ಲೇ ಈ ಚಿತ್ರವನ್ನು ಆರಂಭಿಸುತ್ತೇವೆ. ನನ್ನ ತರಹ ಸಾಕಷ್ಟು ಅನಂತಕುಮಾರ್ ಅಭಿಮಾನಿಗಳು ನನ್ನೊಂದಿಗಿರುತ್ತಾರೆ. ಇಂದು ಪೂಜ್ಯ ಆಚಾರ್ಯರು ಸಹ ಈ ಚಿತ್ರ ಆರಂಭಿಸುವಂತೆ ಹೇಳಿ ಆಶೀರ್ವದಿಸಿದ್ದಾರೆ ಎಂದರು.

    “ದಾಸವರೇಣ್ಯ ಶ್ರೀ ವಿಜಯದಾಸರು ಭಾಗ ೨” ಚಿತ್ರಕ್ಕೆ ಚಾಲನೆ ನೀಡಿದ ಗಣ್ಯರಿಗೆ ಧನ್ಯವಾದ ತಿಳಿಸುತ್ತೇನೆ.‌ ಇಂದಿನಿಂದ ಈ ಚಿತ್ರದ ಚಿತ್ರೀಕರಣ ಆರಂಭವಾಗಿದೆ. ಇನ್ನು ನಾಲ್ಕು ತಿಂಗಳಲ್ಲಿ ಚಿತ್ರ ಸಿದ್ದವಾಗಲಿದೆ. ಹಂಪೆ, ಆನೆಗುಂದಿ, ಹುಲಗಿ, ಶ್ರೀರಂಗಪಟ್ಟಣ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ. ಜೆ.ಎಂ.ಪ್ರಹ್ಲಾದ್ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಒಂಭತ್ತು ಹಾಡುಗಳು ಚಿತ್ರದಲ್ಲಿರುತ್ತದೆ. ತ್ರಿವಿಕ್ರಮ ಜೋಶಿ, ಪ್ರಭಂಜನ ದೇಶಪಾಂಡೆ, ಶರತ್ ಜೋಶಿ, ಶ್ರೀಲತ ಬಾಗೇವಾಡಿ ಮುಂತಾದವರು ಚಿತ್ರದ ತಾರಾಬಳಗದಲ್ಲಿರುತ್ತಾರೆ ಎಂದು ನಿರ್ದೇಶಕ ಮಧುಸೂದನ್ ಹವಾಲ್ದಾರ್ ತಿಳಿಸಿದರು.

    ಚಿತ್ರಕಥೆ ಹಾಗೂ ಸಂಭಾಷಣೆ ಕುರಿತು ಜೆ.ಎಂ.ಪ್ರಹ್ಲಾದ್ ಮಾತನಾಡಿದರು. ಗೋಪಾಲದಾಸರ ಪಾತ್ರದಲ್ಲಿ ಕಾಣಿಕೊಳ್ಳುತ್ತಿರುವುದಾಗಿ ಪ್ರಭಂಜನ ದೇಶಪಾಂಡೆ ಹಾಗು ವಿಜಯದಾಸರ ಪತ್ನಿ ಹರಳಮ್ಮನವರ ಪಾತ್ರ ನಿರ್ವಹಿಸುತ್ತಿರುವುದಾಗಿ ನಟಿ ಶ್ರೀಲತ ಬಾಗೇವಾಡಿ ತಿಳಿಸಿದರು.

  • ‘ಹಲೋ ಸರ್’ ಚಿತ್ರಕ್ಕೆ ಮುಹೂರ್ತ : ಕೆ.ಶಂಕರ್ ನಿರ್ದೇಶನದ ಸಿನಿಮಾ

    ‘ಹಲೋ ಸರ್’ ಚಿತ್ರಕ್ಕೆ ಮುಹೂರ್ತ : ಕೆ.ಶಂಕರ್ ನಿರ್ದೇಶನದ ಸಿನಿಮಾ

    ಹಿಂದೆ ಮುಕ್ತಿ, ಆರ್ಟಿಕಲ್ 370 ಚಿತ್ರ ನಿರ್ದೇಶಿಸಿದ  ಕೆ.ಶಂಕರ್ (Shankar) ಇದೀಗ ಮತ್ತೊಂದು ಚಿತ್ರ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ಆ ಚಿತ್ರದ ಹೆಸರು ‘ಹಲೋ ಸರ್’‌ (Hello Sir). ಗಾಳಿ ಆಂಜನೇಯಸ್ವಾಮಿ ದೇವಸ್ಥಾನದ ಹತ್ತಿರ ಬರುವ ಶ್ರೀ ಬೀರೇಶ್ವರಸ್ವಾಮಿ ದೇವಸ್ಥಾನದಲ್ಲಿ ಈ ಚಿತ್ರದ ಮುಹೂರ್ತ ಸಮಾರಂಭ ನೆರವೇರಿತು. ಮೊದಲ ದೃಶ್ಯಕ್ಕೆ ಭಾ.ಮ. ಗಿರೀಶ್ ಕ್ಯಾಮೆರಾ ಸ್ವಿಚಾನ್ ಮಾಡಿದರೆ, ನಿರ್ಮಾಪಕ ರಮೇಶ್ ಕ್ಲಾಪ್ ಮಾಡಿದರು. ನಾಯಕ, ನಾಯಕಿ ದೇವರನ್ನು ಪ್ರಾರ್ಥಿಸುವ ಪ್ರಥಮ ದೃಶ್ಯವನ್ನು ನಿರ್ದೇಶಕ ಶಂಕರ್ ಚಿತ್ರಿಸಿಕೊಂಡರು.

    ತಮ್ಮ ಹಣ, ಅಂತಸ್ತಿನ ಪ್ರಭಾವ ಬಳಸಿಕೊಂಡು ಕಾನೂನು ಉಲ್ಲಂಘಿಸಿ, ಸಮಾಜದ ವ್ಯವಸ್ಥೆಯನ್ನು ಬುಡಮೇಲು  ಮಾಡುತ್ತಿರುವವರ ವಿರುದ್ದ ಹೋರಾಡುವ ಯುವಕನ ಕಥೆಯಿದು.  ಇಂದಿನಿಂದಲೇ ಚಿತ್ರೀಕರಣ ಆರಂಭಿಸಿ 45 ದಿನಗಳ ಕಾಲ ಮಂಗಳೂರು, ಜೋಗಫಾಲ್ಸ್, ತಲಕಾಡು, ಮಹದೇವಪುರದ ಸುತ್ತಮುತ್ತ 45 ದಿನಗಳ‌ ಕಾಲ ಈ ಚಿತ್ರದ ಚಿತ್ರೀಕರಣ ನಡೆಸುವ ಯೋಜನೆ ಚಿತ್ರತಂಡಕ್ಕಿದೆ.

     

    ಶ್ರೀ ಅಂಕುರ ಕ್ರಿಯೆಷನ್ ಬ್ಯಾನರ್ ಅಡಿ ಎಲ್. ಮಂಜುನಾಥ್ ಮತ್ತು ಗೆಳೆಯರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಕೆ ಶಂಕರ್ ಕಥೆ, ಚಿತ್ರಕಥೆ ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಎಂ.ಎನ್.ಕೃಪಾಕರ್ ಅವರ ಸಂಗೀತ, ಚಂದ್ರು ಸೊಂಡೇಕೊಪ್ಪ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಮನ್ವಿತ್, ಸಮನ್ವಿತಾ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದು ಉಳಿದ ಕಲಾವಿದರ ಆಯ್ಕೆ ನಡೆಯುತ್ತಿದೆ.

  • ‘ಸರ್ವೇ ನಂಬರ್ 45’ ಚಿತ್ರಕ್ಕೆ ಮುಹೂರ್ತ: ಇದು ಗಿಲ್ಲಿ ನಟನ ಸಿನಿಮಾ

    ‘ಸರ್ವೇ ನಂಬರ್ 45’ ಚಿತ್ರಕ್ಕೆ ಮುಹೂರ್ತ: ಇದು ಗಿಲ್ಲಿ ನಟನ ಸಿನಿಮಾ

    ಹೊಸಬರೇ ಸೇರಿಕೊಂಡು ಸಿದ್ದಪಡಿಸುತ್ತಿರುವ ’ಸರ್ವೇ ನಂಬರ್ 45’ (Survey No. 45)  ಚಿತ್ರದ ಮುಹೂರ್ತ (Muhurta) ಸಮಾರಂಭವು ಶ್ರೀ ಬಂಡಿ ಮಹಾಂಕಾಳಿ ಅಮ್ಮನ ಸನ್ನಿದಿಯಲ್ಲಿ ಅದ್ದೂರಿಯಾಗಿ ನಡೆಯಿತು. ಪ್ರಥಮ ದೃಶ್ಯಕ್ಕೆ ಹಿರಿಯ ನಿರ್ದೇಶಕ ಹೆಚ್.ವಾಸು ಕ್ಲಾಪ್ ಮಾಡಿದರೆ, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್‌ಬಣಕಾರ್ ಕ್ಯಾಮೆರಾ ಆನ್ ಮಾಡಿ ತಂಡಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಶರವಣ ಉಪಸ್ಥಿತರಿದ್ದರು. ವರನಂದಿ ಸಿನಿ ಸಂಸ್ಥೆಯು ನಿರ್ಮಾಣದ ಜವಾಬ್ದಾರಿಯನ್ನು ಹೊತ್ತುಕೊಂಡಿದೆ. ಹಿರಿಯ ನಿರ್ದೇಶಕರುಗಳಾದ ಹೆಚ್.ವಾಸು ಮತ್ತು ಕೆ.ರಾಘವ ಅವರಲ್ಲಿ ಕೆಲಸ ಕಲಿತಿರುವ ಪಿರಿಯಾಪಟ್ಟಣದ ಶಿವಕುಮಾರ್.ಎಂ.ಶೆಟ್ಟಿಹಳ್ಳಿ ಈ ಹಿಂದೆ ಮಹದೇಶ್ವರ ಭಕ್ತಿ ಗೀತೆಗಳಿಗೆ ಸಾಹಿತ್ಯ ಬರೆದಿದ್ದಾರೆ.  ಇದರ ಅನುಭವದಿಂದಲೇ ಸಿನಿಮಾಕ್ಕೆ ರಚನೆ,ಚಿತ್ರಕಥೆ, ಮೂರು ಹಾಡುಗಳನ್ನು ಬರೆದು ನಿರ್ದೇಶನ ಮಾಡುತ್ತಿದ್ದಾರೆ.

    ಗ್ರಾಮೀಣ ಭಾಗದಲ್ಲಿ ಅದರಲ್ಲೂ ರೈತ ತನ್ನ ಜಮೀನಿನಲ್ಲಿ ಕೃಷಿ ಮಾಡುವ ಜಾಗಕ್ಕೆ ಸರ್ವೇ ನಂಬರ್ ಎಂದು ಸರ್ಕಾರವು ನೀಡಿರುತ್ತದೆ. ಇದರ ಮಧ್ಯೆ ಆತನಿಗೆ ಒಂದಲ್ಲ ಒಂದು ಕಷ್ಟ ಬರುತ್ತಲೇ ಇರುತ್ತದೆ. ಅದನ್ನು ಚಾಣಾಕ್ಷತನದಿಂದ ಒಳ್ಳೆತನದಲ್ಲಿ ಹೇಗೆ ಬಗೆಹರಿಸಿಕೊಳ್ಳುತ್ತಾನೆ. ಕೆಟ್ಟದ್ದನ್ನು ಮಾಡಲು ಮುಂದಾದರೆ ಅನಾಹುತಗಳು ಕಟ್ಟಿಟ್ಟ ಬುತ್ತಿ. ನಿರ್ದೇಶಕರು ತಾವು ನೋಡಿದಂತ ಒಂದಷ್ಟು ಘಟನೆಗಳು ಜತೆಗೆ ಕಾಲ್ಪನಿಕ ಟಚ್ ಕೊಟ್ಟು ಸನ್ನಿವೇಶಗಳನ್ನು ಸೃಷ್ಟಿಸಿದ್ದಾರೆ. ’ನಾವುಗಳು ಒಳಿತನ್ನು ಬಯಸಿದರೆ ಒಳ್ಳೆಯದೇ ನಡೆಯುತ್ತದೆ. ಕೆಟ್ಟತನವನ್ನು ಆಯ್ಕೆ ಮಾಡಿಕೊಂಡರೆ ಅದೇ ಆಗುತ್ತದೆ’ ಎಂಬ ತೂಕದ ಸಂದೇಶವನ್ನು ಹೇಳಲಾಗುತ್ತಿದೆ.

    ’ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಗಿಲ್ಲಿ ನಟ, ಸಂತೋಷ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಾಲನಟಿಯಾಗಿದ್ದ ರಿಯಾ ಭಾಸ್ಕರ್ ಗೌಡರ ಮಗಳ ಪಾತ್ರದಲ್ಲಿ ನಾಲ್ಕನೇ ಚಿತ್ರಕ್ಕೆ ನಾಯಕಿ. ಇವರೊಂದಿಗೆ ಮುನಿ, ಜಗದೀಶ್ ಕೊಪ್ಪ, ಸಂಜಯ್ ಪಾಟೀಲ್, ಮೈತ್ರಿ, ಟೋನಿತಾ, ರಾಜವ್ ಬಾಲೆ, ಪ್ರಕಾಶ್ ಬಾನಾಳು, ತೇಜು ಮೈಸೂರು, ಸುರೇಶ್ ಕೋಲಾರ, ರಂಗರಾಜು ಹುಲಿದುರ್ಗ ಮುಂತಾದವರು ನಟಿಸುತ್ತಿದ್ದಾರೆ.  ಸಂಭಾಷಣೆ ಚಕ್ರಿ ಕಿರಿಸಾವೆ, ಸಂಗೀತ ವಿಶಾಲ್ ಅಲಾಪ್, ಛಾಯಾಗ್ರಹಣ ದೀಪಕ್ ಕುಮಾರ್.ಜಿ.ಕೆ ಅವರದಾಗಿದೆ. ಮೈಸೂರು, ಹಾಸನ, ಮಂಡ್ಯ ಸುಂದರ ತಾಣಗಳಲ್ಲಿ ಎರಡು ಹಂತಗಳಂತೆ ಸೆಪ್ಟಂಬರ್ ಮೊದಲ ವಾರದಿಂದ ಚಿತ್ರೀಕರಣ ನಡೆಸಲು ತಂಡವು ಯೋಜನೆ ರೂಪಿಸಿಕೊಂಡಿದೆ.

  • ಲವ್ ಈಸ್ ಲೈಫ್:  ಭರತ್ ಕುಮಾರ್ ನಟನೆಯ ಚಿತ್ರಕ್ಕೆ ಮುಹೂರ್ತ

    ಲವ್ ಈಸ್ ಲೈಫ್: ಭರತ್ ಕುಮಾರ್ ನಟನೆಯ ಚಿತ್ರಕ್ಕೆ ಮುಹೂರ್ತ

    ತ್ತೀಚೆಗಷ್ಟೇ ಮೆಜೆಸ್ಟಿಕ್- 2 ಎಂಬ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗಿದ್ದ ಯುವನಟ ಭರತ್‌ಕುಮಾರ್ ಆ ಚಿತ್ರದ ಶೂಟಿಂಗ್ ಮುಗಿಯುವ ಮೊದಲೇ ಇನ್ನೊಂದು ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಆ ಚಿತ್ರದ ಹೆಸರು ಲವ್ ಈಸ್ ಲೈಫ್. ಭರತ್‌ಕುಮಾರ್, ಮಿಷಲ್ ನಾಯಕ-ನಾಯಕಿಯಾಗಿ ನಟಿಸುತ್ತಿರುವ ಈ ಚಿತ್ರದ ಮುಹೂರ್ತ ಸಮಾರಂಭ ಶ್ರೀಬಂಡೆ ಮಹಾಂಕಾಳಮ್ಮ ದೇವಸ್ಥಾನದಲ್ಲಿ ನೆರವೇರಿತು. ಅಂಬಿಗಾ ಕ್ರಿಯೇಶನ್ಸ್ ಮೂಲಕ ಜಿ.ಡಿ. ಸಂತೋಷ್‌ ಕುಮಾರ್ ಹಾಗೂ ಹನುಮಂತ ರಾಜು ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಜಿ.ಶಿವರಾಜ್ ಅವರ ಕಥೆ, ಚಿತ್ರಕಥೆ, ನಿರ್ದೇಶನ ಈ ಚಿತ್ರಕ್ಕಿದೆ.

    ಈ ಸಂದರ್ಭದಲ್ಲಿ  ಚಿತ್ರದ ಕುರಿತಂತೆ ಮಾತನಾಡುತ್ತ ಕಳೆದ 14 ವರ್ಷಗಳಿಂದ ಚಿತ್ರರಂಗದಲ್ಲಿದ್ದೇನೆ. ಸುಂದರನಾಥ ಸುವರ್ಣ, ಅಶೋಕ್ ಕಶ್ಯಪ್ ಅವರ ಜೊತೆ ಅಸಿಸ್ಟೆಂಟ್ ಕ್ಯಾಮೆರಾಮನ್ ಆಗಿದ್ದಲ್ಲದೆ, ಎಲ್ಲಾ  ವಿಭಾಗಗಳಲ್ಲಿ ಕೆಲಸಮಾಡಿ ಅನುಭವ ಪಡೆದಿದ್ದೇನೆ. ಮೂರು ತಿಂಗಳು ಕೂತು ಈ ಚಿತ್ರದ ಸ್ಕ್ರಿಪ್ಟ್ ರೆಡಿ  ಮಾಡಿಕೊಂಡಿದ್ದೇನೆ. ಇದೊಂದು ವಿಭಿನ್ನ ಪ್ರೇಮಕಥೆ. ಈ ಥರನೂ ಲವ್ ಮಾಡಬಹುದಾ ಅಂತನಿಸೋ ಚಿತ್ರ. ವಿದೇಶದಿಂದ ಇಂಡಿಯಾಗೆ ಬರೋ ಹುಡುಗ ಇಲ್ಲಿನ ಸಮಸ್ಯೆಗಳನ್ನು ಯಾವ ರೀತಿ ಬಗೆಹರಿಸುತ್ತಾನೆ ಅನ್ನೋದನ್ನು ಪ್ರೇಮಕಥೆಯೊಂದರ ಹಿನ್ನೆಲೆ ಇಟ್ಟುಕೊಂಡು  ಹೇಳುತ್ತಿದ್ದೇವೆ.  ಶೃಂಗೇರಿಯಲ್ಲಿ ಸೆ.9ರಿಂದ ಚಿತ್ರೀಕರಣ ಆರಂಭಿಸಿ ಒಂದೇ ಹಂತದಲ್ಲಿ ಶೂಟಿಂಗ್ ಮುಗಿಸುವ ಪ್ಲಾನ್ ಇದೆ. ಅಲ್ಲಿ ಸುತ್ತಲೂ ಬೆಟ್ಟ ಇರುವ ಒಂಟಿ ಮನೆಯನ್ನು ಚಿತ್ರೀಕರಣಕ್ಕಾಗಿ ಹುಡುಕಿದ್ದೇವೆ, ವಿಶೇಷವಾಗಿ ಆ ಮನೆಯೂ ಚಿತ್ರದ ಒಂದು ಭಾಗವಾಗಿ  ಮೂಡಿಬರಲಿದೆ.

    ಇಲ್ಲಿ ನಾಯಕನ ಪಾತ್ರಕ್ಕೆ  ಭರತ್ ಅವರೇ ಸೂಕ್ತ ಅನಿಸಿತು. ಆತನಲ್ಲಿರುವ ಪ್ರತಿಭೆಯನ್ನು ಹೊರತೆಗೆಯುವ ಪ್ರಯತ್ನ ಮಾಡುತ್ತೇನೆ. ಇದನ್ನು  ಚಾಲೆಂಜ್ ಆಗಿ ತಗೊಂಡಿದ್ದು, ಪ್ರೂವ್ ಮಾಡಿ ತೋರಿಸುತ್ತೇನೆ ಎಂದು ಹೇಳಿದರು. ನಂತರ ನಿರ್ಮಾಪಕ ಸಂತೋಷ್‌ಕುಮಾರ್ ಮಾತನಾಡುತ್ತ ನನಗೆ ಮೊದಲಿಂದಲೂ ಸಿನಿಮಾ ಬಗ್ಗೆ ಆಸಕ್ತಿ ಜಾಸ್ತಿ. ನಾನೂ ಒಂದು ಸಿನಿಮಾ ನಿರ್ಮಾಣ ಮಾಡಬೇಕು ಅಂದ್ಕೊಂಡಿದ್ದೆ, ಆ ಸಮಯದಲ್ಲಿ  ಈ ಡೈರೆಕ್ಟರ್ ಪರಿಚಯ ಆದರು, ಈ ಥರ ಸಿನಿಮಾ ಮಾಡೋ ಐಡಿಯಾ ಇದೆ ಎಂದರು. ಅವರು ಹೇಳಿದ ಕಥೆ ತುಂಬಾ ಚೆನ್ನಾಗಿತ್ತು, ಅದನ್ನು ನಮ್ಮ ತಾಯಿಗೆ ಹೇಳಿದಾಗ ಅವರೂ ಸಹ ಸಿನಿಮಾ ಮಾಡಲು ಗ್ರೀನ್ ಸಿಗ್ನಲ್  ಕೊಟ್ಟರು. ಹಾಗೇ ನನಗೆ ಒಂದೊಳ್ಳೇ ಟೀಮ್ ಸಿಕ್ಕಿದೆ  ಎಂದು ಹೇಳಿದರು. ನಾಯಕ ಭರತ್ ಕುಮಾರ್ ಮಾತನಾಡುತ್ತ ಇದು ನನ್ನ 2ನೇ ಚಿತ್ರ. ನಾನು ಓದಿದ್ದೆಲ್ಲಾ ವಿದೇಶದಲ್ಲೇ ಆದರೂ ನನ್ನ ತಂದೆ, ತಾಯಿ ಇಲ್ಲಿನವರೇ. ಇಲ್ಲಿನ ಜನರಲ್ಲಿ ಪ್ರೀತಿ ಅಭಿಮಾನ ಜಾಸ್ತಿ ಇರುತ್ತೆ, ಚಿತ್ರದಲ್ಲಿ ನಾನೊಬ್ಬ ಲವರ್‌ಬಾಯ್ ಆಗಿ ಕಾಣಿಸಿಕೊಂಡಿದ್ದೇನೆ. ನನ್ನ ಪರ್ ಫಾರ್ಮನ್ಸ್ ತೋರಿಸಲು ಚಿತ್ರದಲ್ಲಿ ಅವಕಾಶ ಇದೆ. ಸಿನಿಮಾ ನೋಡುವಾಗ ಲವ್ ಸ್ಟೋರಿಯಲ್ಲಿ  ಈ ರೀತಿನೂ ಪ್ರಯೋಗ ಮಾಡಬಹುದಾ ಅನಿಸುತ್ತೆ. ಕಥೆಯಲ್ಲಿ ಪಾತ್ರ ತುಂಬಾ ಹೈಲೈಟ್ ಆಗುತ್ತದೆ, ಅದಕ್ಕೊಂದು ಟ್ವಿಸ್ಟ್ ಇದೆ. ಇದರ ಜೊತೆಗೊಂದು ಕ್ಯೂಟ್ ಲವ್ ಸ್ಟೋರಿನೂ ಇದೆ ಎಂದರು.

     

    ನಾಯಕಿ ಮಿಷಲ್ ಮಾತನಾಡುತ್ತ ಇದು ನನ್ನ ಮೊದಲ ಚಿತ್ರ, ನಾನು ರಿಚ್ ಫ್ಯಾಮಿಲಿ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ.‌ ಶ್ರೀಮಂತ ಕುಟುಂಬದ  ಹುಡುಗಿಯಾದರೂ,  ತುಂಬಾ ಸರಳ, ಸಾಮಾನ್ಯ ಹುಡುಗಿಯಾಗಿರುವೆ. ಶ್ರೀಮಂತಿಕೆಯ ದರ್ಪ ತೋರಲ್ಲ. ಇಂಥ ಪಾತ್ರ ಸಿಕ್ಕಿದ್ದಕ್ಕೆ ತುಂಬಾ ಖುಷಿ ಆಯ್ತು ಎಂದರು. ಸಂಗೀತ ನಿರ್ದೇಶಕ ಎ.ಟಿ. ರವೀಶ್ ಮಾತನಾಡುತ್ತ ಚಿತ್ರದಲ್ಲಿ ಐದು ಹಾಡುಗಳಿದ್ದು, ಕಥೆಯನ್ನು ಬಿಟ್ಟು ಯಾವ ಹಾಡನ್ನೂ ಮಾಡಿಲ್ಲ ಎಂದು ಹೇಳಿದರು. ಚಿತ್ರಕ್ಕೆ ಎಂ.ಬಿ. ಅಳ್ಳೀಕಟ್ಟಿ ಅವರು  ಛಾಯಾಗ್ರಾಹಕರಾಗಿ‌ ಕೆಲಸ ಮಾಡುತ್ತಿದ್ದಾರೆ. ಉಳಿದಂತೆ ನಾಗೇಂದ್ರ ಅರಸ್, ಪೂಜಾಗೌಡ, ಅಮಿತ್ ಪ್ರಮುಳ  ತಾರಾಗಣದಲ್ಲಿದ್ದಾರೆ.

  • ‘ಲಿಪ್ ಲಾಕ್’ ಚಿತ್ರಕ್ಕೆ ಮುಹೂರ್ತ: ಯಂಗ್ ಮ್ಯಾನ್ ನಿರ್ದೇಶಕರ ಚಿತ್ರ

    ‘ಲಿಪ್ ಲಾಕ್’ ಚಿತ್ರಕ್ಕೆ ಮುಹೂರ್ತ: ಯಂಗ್ ಮ್ಯಾನ್ ನಿರ್ದೇಶಕರ ಚಿತ್ರ

    ಒಂದೇ ಟೇಕ್ ನಲ್ಲಿ ಚಿತ್ರೀಕರಣವಾಗಿದ್ದ “ಯಂಗ್ ಮ್ಯಾನ್” ಚಿತ್ರದ ನಿರ್ದೇಶಕ ಮುತ್ತುರಾಜ್ ನಿರ್ದೇಶನದ ಮುಂದಿನ ಚಿತ್ರ “ಲಿಪ್ ಲಾಕ್”. ಇತ್ತೀಚೆಗೆ ಈ ನೂತನ ಚಿತ್ರದ ಮುಹೂರ್ತ ಸಮಾರಂಭ ಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ನಿರ್ಮಾಪಕರ ಸಹೋದರಿ ಸ್ಪೂರ್ತಿ ಕೃಷ್ಣಮೂರ್ತಿ ಆರಂಭ ಫಲಕ ತೋರಿದರು. ನಿರ್ದೇಶಕರ ಪುತ್ರ ಲಿಖಿತ್ ಗೌಡ ಕ್ಯಾಮೆರಾ ಚಾಲನೆ ಮಾಡಿದರು. ಸಾಕಷ್ಟು ಗಣ್ಯರು ಹಾಗೂ ಚಿತ್ರತಂಡದ ಸದಸ್ಯರು ಮುಹೂರ್ತ ಸಮಾರಂಭದಲ್ಲಿ ಉಪಸ್ಥಿತರಿದ್ದರು.

    ಎಲ್ಲರೂ ಅಂದುಕೊಂಡಿರುವ “ಲಿಪ್ ಲಾಕ್” ಬೇರೆ. ಆದರೆ “ಲಿಪ್ ಲಾಕ್” ನಿಜವಾದ ಅರ್ಥ ಬೇರೆ ಎಂದು ತಿಳಿಸುವ ನಿರ್ದೇಶಕ ಮುತ್ತುರಾಜ್, ಇದೊಂದು ಪರಿಶುದ್ಧ ಪ್ರೇಮಕಥೆ. ಯಾವುದೇ ಮುಜುಗರವಿಲ್ಲದೆ ಕುಟುಂಬ ಸಮೇತ ಬಂದು ಎಲ್ಲರೂ ನೋಡಬಹುದಾದ ಕೌಟುಂಬಿಕ ಕಥೆಯೂ ಹೌದು. ಬೆಂಗಳೂರಿನಲ್ಲೇ ಚಿತ್ರೀಕರಣ ನಡೆಯುತ್ತದೆ‌. ಕರಣ್ ಆರ್ಯನ್, ತ್ರಿವಿಕ್ರಮ್ ಹಾಗೂ ಚಿತ್ರದ ನಿರ್ಮಾಪಕರೂ ಆಗಿರುವ ಹೇಮಂತ್ ಕುಮಾರ್ ಈ ಚಿತ್ರದ ನಾಯಕರಾಗಿದ್ದು, ನಾಯಕಿಯರಾಗಿ ದೀಪ, ಜಗದೀಶ್, ಸೃಷ್ಟಿ , ನಿಹಾರಿಕಾ ನಟಿಸುತ್ತಿದ್ದಾರೆ. ಜಗಪ್ಪ, ಆನಂದ್, ಕರಿಬಸವ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಲೋಕಿ ತವಸ್ಯ ಸಂಗೀತ ನಿರ್ದೇಶನ, ವೀನಸ್ ನಾಗರಾಜ್ ಮೂರ್ತಿ ಛಾಯಾಗ್ರಹಣ ಹಾಗೂ ಸತೀಶ್ ಚಂದ್ರಯ್ಯ ಅವರ ಸಂಕಲನ ಈ ಚಿತ್ರಕ್ಕಿದೆ‌ ಎಂದರು.

    ನಿರ್ಮಾಪಕನಾಗಿ ಇದು ಮೊದಲ ಚಿತ್ರ . ಹೇಮಂತ್ ಸಿನಿಮಾಸ್ ಹಾಗೂ ಪರಿ ಮೂವೀ ಮೇಕರ್ಸ್ ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ನಿರ್ಮಾಣದ ಜೊತೆಗೆ ಪ್ರಮುಖಪಾತ್ರದಲ್ಲೂ ನಟಿಸುತ್ತಿದ್ದೇನೆ ಎಂದರು ಹೇಮಂತ್ ಕೃಷ್ಣಮೂರ್ತಿ.

     ನಿರ್ದೇಶಕರು ಮಾಡಿಕೊಂಡಿರುವ ಕಥೆ ಚೆನ್ನಾಗಿದೆ. ನನ್ನದು ಈ ಚಿತ್ರದಲ್ಲಿ ಕೆಳ ಮಧ್ಯಮ ವರ್ಗದ ಹುಡುಗನ ಪಾತ್ರ‌ ಎಂದರು ನಟ ಕರಣ್ ಆರ್ಯನ್.  ನನ್ನ ಪಾತ್ರ ಕೂಡ ವಿಭಿನ್ನವಾಗಿದೆ. “ಬ್ಯಾಡ್ ಮ್ಯಾನರ್ಸ್” ಚಿತ್ರದ ನಂತರ ಈ ಚಿತ್ರದಲ್ಲಿ ನಟಿಸುತ್ತಿದ್ದೇನೆ ಎಂದರು”ಪದ್ಮಾವತಿ ” ಧಾರಾವಾಹಿ ಖ್ಯಾತಿಯ ತ್ರಿವಿಕ್ರಮ್.  ನಟಿಯರಾದ ದೀಪ ಜಗದೀಶ್ , ಸೃಷ್ಟಿ ಹಗೂ ನಿಹಾರಿಕಾ ಕೂಡ ಚಿತ್ರದ ಕುರಿತು ಮಾತನಾಡಿದರು

  • ಸೆಟ್ಟೇರಿತು ‘ತೀರ್ಥರೂಪ ತಂದೆಯವರಿಗೆ’ ಸಿನಿಮಾ: ಅರ್ಚನಾ ನಾಯಕಿ

    ಸೆಟ್ಟೇರಿತು ‘ತೀರ್ಥರೂಪ ತಂದೆಯವರಿಗೆ’ ಸಿನಿಮಾ: ಅರ್ಚನಾ ನಾಯಕಿ

    ಹೊಂದಿಸಿ ಬರೆಯಿರಿ ಸಿನಿಮಾ ಮೂಲಕ ಬದುಕು ಬಂದಂತೆ ಸ್ವೀಕರಿಸಿ ಎಂಬ ಸ್ವೀಟ್ ಸಂದೇಶ ಕೊಟ್ಟು ಫ್ಯಾಮಿಲಿ ಪ್ರೇಕ್ಷಕ ಪ್ರಭುವಿನಿಂದ ಚಪ್ಪಾಳೆ‌ ಪಡೆದಿದ್ದ ರಾಮೇನಹಳ್ಳಿ ಜಗನ್ನಾಥ (Ramenahalli Jagannath) ಈಗ ಮತ್ತೊಂದು ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ವರಮಹಾಲಕ್ಷ್ಮೀ ಹಬ್ಬದ ದಿನವಾದ ಇಂದು ಬೆಂಗಳೂರಿನ ಬಂಡೆ ಮಹಾಕಾಳಿ ದೇಗುಲದಲ್ಲಿ ಚಿತ್ರ ಸೆಟ್ಟೇರಿದೆ. ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ ಅವರ ಪುತ್ರಿ ಸಿನಿಮಾಗೆ ಕ್ಲ್ಯಾಪ್ ಮಾಡಿದರೆ, ನವೀನ್ ಶಂಕರ್ (Naveen Shankar) ಹಾಗೂ ಅರ್ಚನಾ ಜೋಯಿಸ್ (Archana Jois) ಕ್ಯಾಮೆರಾಗೆ ಚಾಲನೆ ನೀಡಿದರು. ಜಗನ್ನಾಥ ಅವರ ಹೊಸ ಪ್ರಯತ್ನಕ್ಕೆ ತೀರ್ಥರೂಪ ತಂದೆಯವರಿಗೆ ಎಂಬ ಆಕರ್ಷಕ ಟೈಟಲ್ ಇಡಲಾಗಿದೆ.

    ತೆಲುಗಿನಲ್ಲಿ ಗುಪ್ಪೆಡಂತ ಮನಸು ಸೀರಿಯಲ್ ಮೂಲಕ ಕಿರುತೆರೆ ಪ್ರೇಕ್ಷಕರ ಪ್ರೀತಿ ಪಡೆದಿರುವ ನಿಹಾರ್ ಮುಖೇಶ್ ತೀರ್ಥರೂಪ ತಂದೆಯವರಿಗೆ ಸಿನಿಮಾ ಮೂಲಕ ನಾಯಕನಾಗಿ ಕನ್ನಡ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ಸದ್ಯ ಮುಖೇಶ್ ಹೀರೋ ಆಗಿ ಬಣ್ಣ ಹಚ್ಚಿರುವ ಗೀತಾ ಶಂಕರಂ‌ ಸಿನಿಮಾ ಬಿಡುಗಡೆ ಹೊಸ್ತಿಲಿನಲ್ಲಿದೆ. ಇದರ ಬೆನ್ನೆಲ್ಲೇ‌ ನಿಹಾರ್ ಮುಖೇಶ್ ತೀರ್ಥರೂಪ ತಂದೆಯವರಿಗೆ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲಿ ಚಿತ್ರ ಮೂಡಿ ಬರುತ್ತಿದೆ. ತೆಲುಗಿನಲ್ಲಿ ಪ್ರಿಯಮೈನ ನಾನ್ನಕು ಎಂಬ ಶೀರ್ಷಿಕೆ ಇಡಲಾಗಿದೆ.

    ಜೈ ಚಾಮುಂಡೇಶ್ವರಿ ಪ್ರೊಡಕ್ಷನ್ಸ್ ನಡಿ ತೀರ್ಥರೂಪ ತಂದೆಯವರಿಗೆ ಸಿನಿಮಾ ನಿರ್ಮಾಣವಾಗುತ್ತಿದ್ದು, ರಾಮೇನಹಳ್ಳಿ ಜಗನ್ನಾಥ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಹೊಂದಿಸಿ ಬರೆಯಿರಿ ಚಿತ್ರ ನಿರ್ಮಾಣ ಮಾಡಿದ್ದ ಸಂಡೇ ಸಿನಿಮಾಸ್ ಈ ಸಿನಿಮಾವನ್ನು ಪ್ರೆಸೆಂಟ್ ಮಾಡುತ್ತಿದೆ. ಬ್ಲಿಂಕ್ ಸಿನಿಮಾ ಖ್ಯಾತಿಯ ರವಿಚಂದ್ರ ಎ.ಜೆ ತೀರ್ಥರೂಪ ತಂದೆಯವರಿಗೆ ಚಿತ್ರಕ್ಕೆ ಎಕ್ಸಿಕ್ಯುಟಿವ್ ಪ್ರೊಡ್ಯೂಸರ್ ಆಗಿ ಸಾಥ್ ಕೊಟ್ಟಿದ್ದಾರೆ. ಕೌಟುಂಬಿಕ ಹಿನ್ನೆಲೆ ಕಥೆಯುಳ್ಳ ಸಿನಿಮಾಗೆ ದೀಪಕ್ ಯರಗೇರಾ ಛಾಯಾಗ್ರಹಣ, ಪ್ರಶಾಂತ್ ರಾಜಪ್ಪ ಸಂಭಾಷಣೆ ಇರಲಿದೆ. ಸದ್ಯ ಮುಹೂರ್ತ ನೆರವೇರಿದ್ದು, ಶೀಘ್ರದಲ್ಲೇ ಚಿತ್ರತಂಡ ಶೂಟಿಂಗ್ ಅಖಾಡಕ್ಕೆ ಎಂಟ್ರಿ‌ ಕೊಡಲಿದೆ.

  • ಪತ್ರಕರ್ತ ಹರೀಶ್ ನಟನೆಯ ‘ಕ್ರೆಡಿಟ್ ಕುಮಾರ’ ಚಿತ್ರಕ್ಕೆ ಸರ್ಜಾ ಚಾಲನೆ

    ಪತ್ರಕರ್ತ ಹರೀಶ್ ನಟನೆಯ ‘ಕ್ರೆಡಿಟ್ ಕುಮಾರ’ ಚಿತ್ರಕ್ಕೆ ಸರ್ಜಾ ಚಾಲನೆ

    ‘ಕ್ರೆಡಿಟ್ ಕುಮಾರ’, ಸ್ಯಾಂಡಲ್ ವುಡ್ ನಲ್ಲಿ ಸೆಟ್ಟೇರಿರುವ ಹೊಸ ಸಿನಿಮಾ. ‘ಬಾಂಡ್ ರವಿ’ ಖ್ಯಾತಿಯ ನಿರ್ದೇಶಕ ಪ್ರಜ್ವಲ್ ಸಾರಥ್ಯದಲ್ಲಿ ಮೂಡಿಬರುತ್ತಿರುವ 2ನೇ ಸಿನಿಮಾ ಇದು. ಈ ಸಿನಿಮಾ ಮೂಲಕ ನಾಯಕನಾಗಿ  ಹರೀಶ್ ಸೀನಪ್ಪ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. 10ವರ್ಷಕ್ಕೂ ಅಧಿಕ ಸಮಯ ಸಿನಿಮಾ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದ ಹರೀಶ್ (Harish Senappa) ಇದೀಗ ಬೆಳ್ಳಿ ಪರದೆ ಮೇಲೆ ಮಿಂಚಲು ಸಜ್ಜಾಗಿದ್ದಾರೆ. ಮೊದಲ ಹೆಜ್ಜೆಯಾಗಿ ‘ಕ್ರೆಡಿಟ್ ಕುಮಾರ’ (Credit Kumar) ಚಿತ್ರಕ್ಕೆ ಮುಹೂರ್ತ ಮಾಡಿಕೊಳ್ಳುವ ಮೂಲಕ ಅಧಿಕೃತ ಚಾಲನೆ ಸಿಕ್ಕಿದೆ. ಕಂಠೀರವ ಸ್ಟುಡಿಯೋದಲ್ಲಿ ನಡೆದ ಅದ್ದೂರಿ ಮುಹೂರ್ತ ಸಮಾರಂಭದಲ್ಲಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja), ನಿರ್ದೇಶಕ ಎಸ್. ಮಹೇಂದರ್,  ನಿರ್ಮಾಪಕ ಉದಯ್ ಮೆಹ್ತಾ, ಬಾಂಡ್ ರವಿ ಸ್ಟಾರ್ ಪ್ರಮೋದ್ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದು ಶುಭಹಾರೈಸಿದರು.

    ಸಿನಿಮಾಗೆ ಕ್ಲ್ಯಾಪ್ ಮಾಡಿ ಮಾತನಾಡಿದ ಧ್ರುವ ಸರ್ಜಾ, ‘ಹರೀಶ್ ಅವರಿಗೆ ಒಳ್ಳೆದಾಗಬೇಕು, ತುಂಬಾ ಕಷ್ಟಪಟ್ಟಿದ್ದಾರೆ’ ಎಂದರು. ಎಸ್, ಮಹೆಂದರ್ ಮಾತನಾಡಿ, ‘ಪಾಸಿಟಿವ್ ವೈಬ್ ಇದೆ. ಟೈಟಲ್ ತುಂಬಾ ಚೆನ್ನಾಗಿದೆ. ನಿರ್ದೇಶಕ ಪ್ರಜ್ವಲ್ ನಮ್ಮ ಹುಡುಗ. ನನ್ನ ಜೊತೆ ಕೆಲಸ ಮಾಡಿದ ಹುಡುಗ. ಸೆನ್ಸಿಬಲ್ ಇದಾರೆ. ಹರೀಶ್ ಕೂಡ ತುಂಬಾ ಸಮಯದಿಂದ ನೋಡಿದ ಹುಡುಗ.  ನಿರ್ಮಾಪಕರಿಗೆ ನಾನು ಭರವಸೆ ನೀಡುತ್ತೇನೆ ಖಂಡಿತವಾಗಿಯೂ ಈ ಸಿನಿಮಾ ಚೆನ್ನಾಗಿ ಆಗುತ್ತೆ’ ಎಂದು ಹೇಳಿದರು. ನಟ ಪ್ರಮೋದ್ ಮಾತನಾಡಿ, ‘ನಿರ್ದೇಶಕ ಪ್ರಜ್ವಲ್ ಉತ್ತಮ ಕೆಲಸಗಾರ ಹಾಗೂ ಹರೀಶ್ ನನ್ನ ಗೆಳೆಯ ಒಳ್ಳೆದಾಗಲಿ’ ಎಂದರು.

    ಕ್ರೆಡಿಟ್ ಕುಮಾರ ಒನ್ ಲೈನ್ ಸ್ಟೋರಿ ಹೇಳುವುದಾದರೆ ಸಾಲ ಮಾಡಿಕೊಂಡು ಒದ್ದಾಡುವ ಒಬ್ಬ ಕ್ಯಾಬ್ ಡ್ರೈವರ್ ನ ಕಥೆಯಾಗಿದೆ. ಕ್ರೆಡಿಟ್ ಕುಮಾರನಾಗಿ ಹರೀಸ್ ಸೀನಪ್ಪ ಕಾಣಿಸಿಕೊಳ್ಳುತ್ತಿದ್ದಾರೆ. ನಾಯಕಿ ಪಾತ್ರದಲ್ಲಿ ಪಾಯಲ್ ಚಂಗಪ್ಪ ಮಿಂಚುತ್ತಿದ್ದಾರೆ. ಕಿರು ಚಿತ್ರಗಳ ಮೂಲಕ ಖ್ಯಾತಿ ಗಳಿಸಿರುವ ಪಾಯಲ್ ಇದೀಗ ಮೊದಲ ಬಾರಿಗೆ ನಾಯಕಿಯಾಗಿ ಮಿಂಚಲು ಸಜ್ಜಾಗಿದ್ದಾರೆ.  ಕ್ರೆಡಿಟ್ ಕುಮಾರ ಸಿನಿಮಾ ಮೂಲಕ ನಿರ್ಮಾಪಕರಾಗಿ ವಾಗೀಶ್ ಮುತ್ತಿಗೆ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡುತ್ತಿದ್ದಾರೆ.

    ನಾಯಕಿ ಪಾಯಲ್ ಮಾತನಾಡಿ, ‘ಭೂಮಿ ಎನ್ನುವ ಪಾತ್ರದಲ್ಲಿ ಮಾಡುತ್ತಿದ್ದೇನೆ.  ಶಾರ್ಟ್ ಸಿನಿಮಾ ಮಾಡಿದ್ದೇನೆ. ತುಂಬಾ ಪ್ರೀತಿ ಕೊಟ್ಟಿದ್ದೀರಾ. ಇವಾಗ ಸಿನಿಮಾ ಮಾಡುತ್ತಿದ್ದೇನೆ. ಎಲ್ಲರ ಪ್ರೀತಿ ಇರಲಿ. ಮಿಡ್ಲ್ ಕ್ಲಾಸ್ ಹುಡುಗಿ  ಬ್ಯೂಟಿಶಿಯನ್ ಪಾತ್ರದಲ್ಲಿ ನಟಿಸುತ್ತಿದ್ದೇನೆ ಎಂದರು. ನಿರ್ದೇಸಾಕ ಪ್ರಜ್ವಲ್ ಮಾತನಾಡಿ, ‘ಬಾಂಡ್ ರವಿ ಅಂತ ಸಿನಿಮಾ ಮಾಡಿದ್ದೆ. ಆ ಸಿನಿಮಾಗೆ ಸಿಕ್ಕ ಪ್ರಶಂಸೆಯಿಂದ ಈಗ ಮತ್ತೊಂದು ಸಿನಿಮಾ ಮಾಡುವಂತೆ ಆಗಿದೆ. ಸಾಲ ಮಾಡಿಕೊಂಡು ಬದುಕುವ ಒಬ್ಬ ಯುವಕನ ಕಥೆ. ಹರೀಶ್ ಅವರಿಗಂತನೇ ಈ ಕಥೆ ಮಾಡಿದ್ದು’ ಎಂದರು.

    ನಾಯಕ ಹರೀಶ್ ಮಾತನಾಡಿ, ‘ಇಡೀ ಸಿನಿಮಾರಂಗ ಸಹಾಯ ಮಾಡಿದೆ. ಇದು ಮೊದಲ ಹೆಜ್ಜೆ. 2009ರಲ್ಲಿ ಮೊದಲು ಕೇಬಲ್ ಚಾನಲ್ ನಲ್ಲಿ ಕೆಲಸ ಮಾಡುವಾಗ ಬಣ್ಣ ಹಚ್ಚಿದ್ದು ಅವತ್ತು ಆರ್ಟಿಸ್ಟ್ ಆಗಬೇಕು ಅಂತ ಅಂದುಕೊಂಡಿದ್ದೆ. ಈಗ ಆ ಕನಸು ನನಸಾಗಿದೆ. ಈ ಅನುಭವ ನನಗೆ ಬೇಕಿತ್ತು, ಈ ಅನುಭವ ಇಲ್ಲ ಅಂದಿದ್ರೆ ನನ್ನ ಜೀವನ ಅಪೂರ್ಣ ಆಗುತ್ತಿತ್ತು’ ಎಂದರು. ಇನ್ನು ಈ ಸಿನಿಮಾಗೆ ಧರ್ಮ ವಿಶ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಮೂರು ಹಾಡುಗಳು ಇರಲಿದ್ದು ವಿ ನಾಗೇಂದ್ರ ಪ್ರಸಾದ್, ಪ್ರಮೋದ್ ಮರುವಂತೆ ಹಾಗೂ ಭರ್ಜರಿ ಚೇತನ್ ಸಾಹಿತ್ಯ ಇರಲಿದೆ ಎಂದು ಧರ್ಮ ವಿಶ್ ಹೇಳಿದರು. ಸದ್ಯ ಮುಹೂರ್ತ ಮಾಡಿಕೊಂಡಿರುವ ಸಿನಿಮಾ ಮುಂದಿನ ದಿನಗಳಲ್ಲಿ ಚಿತ್ರೀಕರಣಕ್ಕೆ ಹೊರಡಲಿದೆ.

  • ಬಬನ್ : ಇದು ಕನ್ನಡದ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರ

    ಬಬನ್ : ಇದು ಕನ್ನಡದ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರ

    ಕೆಜಿಎಫ್, ಕಾಂತಾರ ಚಿತ್ರಗಳ ಯಶಸ್ಸಿನ ನಂತರ ಪ್ಯಾನ್ ಇಂಡಿಯಾ ಸಿನಿಮಾ ನಿರ್ಮಾಣದತ್ತ ಬಹುತೇಕ ನಿರ್ಮಾಪಕರು ಒಲವು ತೋರುತ್ತಿದ್ದಾರೆ. ಅಂಥದ್ದೇ ಹೊಸ ಚಿತ್ರವೊಂದು ಇತ್ತೀಚೆಗೆ ಸೆಟ್ಟೇರಿದೆ. ಅದರ ಶೀರ್ಷಿಕೆ ಬಬನ್ (Baban). ಚಿತ್ರದಲ್ಲಿ ಇದು ನಾಯಕನ ಹೆಸರು.  ನೈಟ್ ಹುಡ್ ಪ್ರೊಡಕ್ಷನ್ಸ್ ಅಡಿ ಈ ಚಿತ್ರವನ್ನು ಮಾಲಾ ರಮೇಶ್ ಅವರು ಬಿಗ್ ಬಜೆಟ್ ನಲ್ಲಿ  ನಿರ್ಮಿಸುತ್ತಿದ್ದಾರೆ.

    ನಾಗರಭಾವಿಯ  ಶ್ರೀ ವೆಂಕಟೇಶ್ವರ ವಿನಾಯಕ ದೇವಸ್ಥಾನದಲ್ಲಿ ಈ ಚಿತ್ರದ ಮುಹೂರ್ತ ಸಮಾರಂಭ ನೆರವೇರಿದ್ದು, ಆಷಾಢ ಕಳೆದ ನಂತರ ಆಗಸ್ಟ್ ನಲ್ಲಿ ಚಿತ್ರದ ಚಿತ್ರೀಕರಣ ಶುರುವಾಗಲಿದೆ. ಕನ್ನಡ, ತೆಲುಗು ತಮಿಳು ಸೇರಿದಂತೆ 5 ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಕುಶಾಲ್ ರಾಘವೇಂದ್ರ (Kushal Raghavendra) ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಜೊತೆಗೆ ಚಿತ್ರದ ನಾಯಕನಾಗೂ ಕಾಣಿಸಿಕೊಳ್ಳುತ್ತಿದ್ದಾರೆ. ಚೆನ್ನೈನ ಇಂಡಿಯನ್ ಸ್ಕೂಲ್ ಆಫ್ ಡ್ರಾಮಾದಲ್ಲಿ ಅಭಿನಯ, ನಿರ್ದೇಶನ ಪಾಠ ಕಲಿತ  ಕುಶಾಲ್,  ಗಂಗೋತ್ರಿ, ಸಾಗುತ ದೂರ ಸೇರಿ ಹಲವಾರು ಕನ್ನಡ, ಹಿಂದಿ  ಸೀರಿಯಲ್ ಗಳಲ್ಲಿ ಹಾಗೂ ಸಿನಿಮಾಗಳಲ್ಲೂ ಸಹ ಬಣ್ಣ ಹಚ್ಚಿದ್ದಾರೆ. ಇವರ ನಿರ್ದೇಶನದ ತಮಿಳು ಚಿತ್ರವಿನ್ನೂ ರಿಲೀಸಾಗಬೇಕಿದೆ. ತಮ್ಮ ಎರಡನೇ ಪ್ರಯತ್ನದಲ್ಲೇ ಪ್ಯಾನ್ ಇಂಡಿಯಾ ಬಬನ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

     

    ಇನ್ನು ಈ ಚಿತ್ರದ ನಾಯಕಿಯಾಗಿ ರಾಧಾ ಭಗವತಿ ಕಾಣಿಸಿಕೊಳ್ಳುತ್ತಿದ್ದು, ಇವರೂ ಸಹ ರಾಮಾಚಾರಿ, ಅಮೃತಧಾರೆ ಸೀರಿಯಲ್ ಅಲ್ಲದೆ    ವಸಂತ ಕಾಲದ ಹೂಗಳು ಚಿತ್ರದಲ್ಲಿ ನಟಿಸಿದ್ದಾರೆ. ಬಹುಭಾಷೆಗಳಲ್ಲಿ ತಯಾರಾಗುತ್ತಿರುವ  ಬಬನ್ ಚಿತ್ರಕ್ಕೆ ವೀರೇಶ್ ಎನ್.ಟಿ.ಎ. ಅವರ ಕ್ಯಾಮೆರಾವರ್ಕ್, ಶಾಜಹಾನ್ ಅವರ ಸಂಗೀತ ಸಂಯೋಜನೆ ಹಾಗೂ ಚಂದನ್ ಅವರ ಸಂಕಲನವಿದೆ.

  • ‘ಎಣ್ಣೆ ಪಾರ್ಟಿ’ಗೆ ಮುಂದಾದ ದ್ವಂದ್ವ ಟೀಮ್

    ‘ಎಣ್ಣೆ ಪಾರ್ಟಿ’ಗೆ ಮುಂದಾದ ದ್ವಂದ್ವ ಟೀಮ್

    ಶಸ್ವಿ ’ದ್ವಂದ್ವ’ ಚಿತ್ರತಂಡದಿಂದ ಈಗ ’ಎಣ್ಣೆ ಪಾರ್ಟಿ’ (Enne Party) ಸಿನಿಮಾವೊಂದು ಸೆಟ್ಟೇರಿದೆ. ಶುಕ್ರವಾರ ಶುಭದಿನದಂದು ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ಮುಹೂರ್ತ ಆಚರಿಸಿಕೊಂಡಿದೆ. ಕಾಮನ್ ಮ್ಯಾನ್ ಪ್ರೊಡಕ್ಷನ್ ಅಡಿಯಲ್ಲಿ ಪ್ರದೀಪ್ ಕುಮಾರ್.ಕೆ ನಿರ್ಮಾಣ ಮಾಡುತ್ತಿದ್ದಾರೆ. ಹಿಂದಿನ ಸಿನಿಮಾದಲ್ಲಿ ಸಹಾಯಕ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದ ಧನಂಜಯ್‌ನಾಗರಾಜು ಕೆಲಸವನ್ನು ಮೆಚ್ಚಿದ ನಿರ್ದೇಶಕ ಭರತ್.ಎಲ್ ಈ ಬಾರಿ ತಮ್ಮೊಂದಿಗೆ ಆಕ್ಷನ್ ಕಟ್ ಹೇಳಲು ಸೇರಿಸಿಕೊಂಡಿದ್ದಾರೆ.

    ಪ್ರೀತಿ ಎನ್ನುವುದು ವಿಶ್ವದಾದ್ಯಂತ ಇರುತ್ತದೆ. ಅದೇ ರೀತಿ ಎಣ್ಣೆ ಸಹ ಯೂನಿವರ್ಸಲ್ ಆಗಿದೆ. ನಾಲ್ಕು ಯುವ ಜೋಡಿಗಳ ಸುತ್ತ ಕಥೆಯು ಸಾಗುತ್ತದೆ. ಶ್ರೀಮಂತರು, ಬಡವರು ಎಣ್ಣೆಯನ್ನು ಕುಡಿತಾರೆ. ಆದರೆ ಒಳಗಡೆ ಹೋದಾಗ ಅವರುಗಳು ಯಾವ ರೀತಿ ವರ್ತಿಸುತ್ತಾರೆ. ಕುಡಿತ ಒಳ್ಳೇದು, ಕೆಟ್ಟದು ಅಂತ ವಿಶ್ಲೇಷಿಸದೆ, ಮಿತಿಯೊಳಗೆ ಸೇವಿಸಿದರೆ ಅನಾಹುತ ಸಂಭವಿಸುದಿಲ್ಲ. ಮೀರಿದರೆ ಏನಾಗುತ್ತದೆ ಎನ್ನುವಂತಹ ಅಂಶಗಳನ್ನು ಹೆಕ್ಕಿಕೊಂಡು ಮನರಂಜನೆ, ಹಾಸ್ಯ, ಥ್ರಿಲ್ಲರ್ ರೂಪದಲ್ಲಿ ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ. ಕುಡಿಯೊದೇ ಜೀವನ ಅಂತ ಕೆಲವರ ನಂಬಿಕೆ. ಅಂತರಾಳದಲ್ಲಿ ಹೊಕ್ಕಾಗ ಕುಡಿತದಲ್ಲಿ ಬದುಕು ಇರುತ್ತದೆ ಎಂಬ ಸಂದೇಶವನ್ನು ಹೇಳಲಾಗುತ್ತಿದೆ. ಶೀರ್ಷಿಕೆ ಇಟ್ಟುಕೊಂಡು ಅದಕ್ಕೆ ಹೊಂದುವಂತಹ ಕಥೆಯನ್ನು ನಿರ್ದೇಶಕರುಗಳು ಸಿದ್ದಪಡಿಸಿಕೊಂಡಿದ್ದಾರಂತೆ.

    ಹೊಸ ಪ್ರತಿಭೆಗಳಾದ ಶೋಬನ್, ಸಂತೋಷ್, ಪ್ರೀತಿ, ಮಂಜುಳಾ, ವರುಣ್, ಮಂಜು ಸುವರ್ಣ, ರಾಮು ಕೊನ್ನಾರ್, ಅಪ್ಪು ರಾಜ್, ರಶ್ಮಿ, ಗ್ರೀಷ್ಮ, ದಿವ್ಯ, ವೈಶಾಖ ಇನ್ನಿತರರು ತಾರಬಳಗದಲ್ಲಿ ಇದ್ದಾರೆ. ನಾಲ್ಕು ಎಣ್ಣೆ ಹಾಡುಗಳಿಗೆ ಆಕಾಶ್ ಪರ್ವ ಸಂಗೀತ, ರಾಜ್‌ಕಾಂತ್.ಕೆ ಛಾಯಾಗ್ರಹಣ ಇರಲಿದೆ. ಬೆಂಗಳೂರು ಸುತ್ತಮುತ್ತ ಎರಡು ಹಂತದಲ್ಲಿ ಚಿತ್ರೀಕರಣ ನಡೆಸಲು ತಂಡವು ಯೋಜನೆ ರೂಪಿಸಿಕೊಂಡಿದೆ.

  • ‘ರಾಖಾ’ ಚಿತ್ರಕ್ಕೆ ಚಾಲನೆ ನೀಡಿದ ಸಚಿವ ತಂಗಡಗಿ

    ‘ರಾಖಾ’ ಚಿತ್ರಕ್ಕೆ ಚಾಲನೆ ನೀಡಿದ ಸಚಿವ ತಂಗಡಗಿ

    ನ್ನಡ ಚಿತ್ರರಂಗದ ಹೆಸರಾಂತ ಸಾಹಿತಿ, ಸಂಭಾಷಣೆಗಾರ ಮಳವಳ್ಳಿ ಸಾಯಿಕೃಷ್ಣ (Malavalli Saikrishna) ಬಹಳ‌ ದಿನಗಳ ನಂತರ ಮತ್ತೆ ನಿರ್ದೇಶನಕ್ಕಿಳಿದಿದ್ದಾರೆ. ಯುವನಟ ಕ್ರಾಂತಿ ಕಥೆ ಬರೆದು, ನಾಯಕನಾಗಿ ಅಭಿನಯಿಸುತ್ತಿರುವ ರಾಖಾ ಚಿತ್ರಕ್ಕೆ ಚಿತ್ರಕಥೆ, ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಶಿವಾ ಮೂವೀಸ್ ಮೂಲಕ ಡಾ.ಕೆ.ಬಿ. ನಾಗೂರ್(ಬಾಬು) ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇತ್ತೀಚೆಗೆ ರಾಖಾ (Rakha) ಚಿತ್ರದ ಮುಹೂರ್ತ ಸಮಾರಂಭ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿತು.

    ರಾಖಾ ಚಿತ್ರದ ಮುಹೂರ್ತ ದೃಶ್ಯಕ್ಕೆ ಸಚಿವರಾದ ಶಿವರಾಜ್ ಎಸ್.ತಂಗಡಗಿ ಕ್ಲಾಪ್ ಮಾಡಿದರೆ, ಶ್ರೀಮತಿ ಸರೋಜನಿ ರೇವಣಸಿದ್ದಪ್ಪ ಕ್ಯಾಮೆರಾ ಚಾಲನೆ ಮಾಡಿದರು. ಫಸ್ಟ್ ಶಾಟ್ ಗೆ ಡಾ.ವಿ. ನಾಗೇಂದ್ರಪ್ರಸಾದ್ ಆಕ್ಷನ್ ಕಟ್ ಹೇಳಿದರು. ನಂತರ ಮಾಧ್ಯಮದ ಜೊತೆ‌ ಮಾತನಾಡಿದ ನಿರ್ಮಾಪಕ ಡಾ.ನಾಗೂರ್, ನಾವು ಬಿಜಾಪುರದವರು. ಶ್ರೀ ಸಿದ್ದೇಶ್ವರ ಸ್ವಾಮಿ ಅನುಯಾಯಿಗಳು. ಕ್ರಾಂತಿ ಅವರ ಶ್ರೀಮಂತ ಚಿತ್ರವನ್ನು  ನೋಡಿದಾಗ  ಅವರ ಅಭಿನಯ ಇಷ್ಟವಾಗಿತ್ತು. ಬಿಜಾಪುರದವರೆಲ್ಲ ಸೇರಿ ಈ  ಚಿತ್ರ ನಿರ್ಮಿಸಲು ಮುಂದಾಗಿದ್ದೇವೆ. ತಂದೆ ಮಕ್ಕಳ ಸಂಬಂಧದ ಸುತ್ತ ನಡೆಯುವ ಕೌಟುಂಬಿಕ ಕಥೆ  ಚಿತ್ರದಕ್ಕಿದೆ. ಈಗ ಫ್ಯಾಮಿಲಿ ರಿಲೇಶನ್ ತುಂಬಾ ಕೆಟ್ಟು ಹೋಗಿದೆ. ಒಂದಷ್ಟು ಜನ ಒಳ್ಳೇದನ್ನು ಕಲಿಯಲೆಂದು ಈ  ಸಿನಿಮಾ ಮಾಡ್ತಿದ್ದೇವೆ ಎಂದರು.

    ನಿರ್ದೇಶಕ ಸಾಯಿಕೃಷ್ಣ ಮಾತನಾಡಿ,  ಈ ಸಿನಿಮಾಗೆ ಡೈಲಾಗ್ ಬರೆಸಲೆಂದು ನನ್ನ ಬಳಿ ಬಂದವರು ನಂತರ ನೀವೇ ಡೈರೆಕ್ಷನ್ ಮಾಡಿ ಅಂದರು, ನಿರ್ಮಾಪಕ ಡಾ.ನಾಗೂರು ಅವರು ಲಾಭ ನಷ್ಟಗಳ ಚಿಂತೆ ಮಾಡದೆ ಸದಭಿರುಚಿಯ ಚಿತ್ರ ನೀಡಬೇಕೆಂಬ  ಉದ್ದೇಶ ಇಟ್ಟುಕೊಂಡು ಈ ಸಿನಿಮಾ ಮಾಡ್ತಿದಾರೆ. ತಂದೆ ಮಕ್ಕಳ ನಡುವೆ ನಡೆಯುವ ಕಥೆಯಿದು. ಅಪ್ಪ ಮಕ್ಕಳನ್ನು ಹೇಗೆಲ್ಲಾ  ಪೋಷಣೆ ಮಾಡ್ತಾರೆ, ಆದರೆ, ಅದೇ ಮಕ್ಕಳು ತಮ್ಮ ಪೋಷಕರನ್ನು ಹೇಗೆ ನೋಡಿಕೊಳ್ತಾರೆ ಅನ್ನೋದು ಚಿತ್ರದ ಕಂಟೆಂಟ್. ಚಿತ್ರದಲ್ಲಿ  4 ಹಾಡು, 4 ಸಾಹಸ ದೃಶ್ಯಗಳಿವೆ. ಬಿಜಾಪುರದಲ್ಲಿ 20 ದಿನಗಳ ಕಾಲ ಚಿತ್ರೀಕರಿಸಿ,  ನಂತರ ಬೆಂಗಳೂರಲ್ಲಿ ಶೂಟಿಂಗ್ ಮುಂದುವರೆಸುತ್ತೇವೆ. ಬೆಂಗಳೂರಿನಲ್ಲಿ ನಡೆಯುವ ಕಥೆ ಇದಾಗಿದ್ದು, ಒಂದು ಪಾತ್ರವಷ್ಟೇ ಬಿಜಾಪುರದಿಂದ ಬರುತ್ತೆ. ಒಟ್ಟು 40 ದಿನಗಳ ಚಿತ್ರೀಕರಣದ ಶೆಡ್ಯೂಲ್ ಹಾಕಿಕೊಂಡಿದ್ದೇವೆ. ಅಲ್ಲದೆ ಹಾಡೊಂದಕ್ಕೆ ಸೆಟ್ ಹಾಕುವ ಪ್ಲಾನ್ ಇದೆ ಎಂದರು.

     

    ನಾಯಕ ಕ್ರಾಂತಿ ಮಾತನಾಡಿ  ಈ ಹಿಂದೆ ಶ್ರೀಮಂತ ಚಿತ್ರದಲ್ಲಿ ಆ್ಯಕ್ಟ್ ಮಾಡಿದ್ದೆ. ರಾಖಾ ಅಂದರೆ ಬ್ರೈಟ್ ನೆಸ್. ಅದು ನಾಯಕನ ಹೆಸರೂ ಹೌದು. ಊರಲ್ಲಿ  ರಾಖಾನ ತಂದೆ ತಾಯಿಗೆ ಸ್ಥಳೀಯ  ಎಂಎಲ್ಎ ಯಿಂದ ಅವಮಾನ ಆಗಿರುತ್ತೆ. ನಾಯಕ ತನ್ನ ಬುದ್ದಿವಂತಿಕೆ ಬಳಸಿ, ರಕ್ತಪಾತವಿಲ್ಲದೆ ಹೇಗೆ ಸೇಡು ತೀರಿಸಿಕೊಳ್ಳುತ್ತಾನೆ ಎಂದು ಚಿತ್ರದಲ್ಲಿ ಹೇಳಲಾಗುತ್ತಿದೆ. ಹಿರಿಯನಟ ಮಂಜುನಾಥ ಹೆಗ್ಡೆ ಹಾಗೂ ಹರಿಣಿ ಅವರು  ತಂದೆ, ತಾಯಿಯ ಪಾತ್ರ ಮಾಡುತ್ತಿದ್ದಾರೆ ಎಂದರು. ನಟಿ ಅಮೃತಾ ನಾಯಕಿಯ ಪಾತ್ರ ನಿರ್ವಹಿಸುತ್ತಿದ್ದು, ತನ್ನ ಪಾತ್ರದ ಕುರಿತಂತೆ ವಿವರಿಸುತ್ತ ನಾನು ಯಾರಿಗೂ ಕೇರ್ ಮಾಡದ ಹುಡುಗಿಯಾಗಿ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ, ನಾಯಕಿಯಾಗಿ ಇದು ಮೂರನೇ ಚಿತ್ರ ಎಂದರು. ನಂತರ ಛಾಯಾಗ್ರಾಹಕ ಆರ್.ಡಿ.  ನಾಗಾರ್ಜುನ,  ಕಾಮಿಡಿ ಪಾತ್ರ ಮಾಡುತ್ತಿರುವ ರಾಜು ತಾಳೀಕೋಟೆ, ಸಚ್ಚಿದಾನಂದ ಪೂಜಾರಿ ಮಾತನಾಡಿದರು. ಎಂ.ಎಸ್.ತ್ಯಾಗರಾಜ್ ಅವರ ಸಂಗೀತ, ಮಾಸ್ ಮಾದ, ಟೈಗರ್ ಶಿವು ಅವರ ಸಾಹಸ ಈ ಚಿತ್ರಕ್ಕಿದೆ.