Tag: ಮುಹಮ್ಮದ್ ಯೂನಸ್

  • ಬಾಂಗ್ಲಾದೇಶವನ್ನ ಅಮೆರಿಕಕ್ಕೆ ಮಾರಾಟ ಮಾಡಿದ್ದಾರೆ – ಯೂನಸ್ ವಿರುದ್ಧ ಶೇಖ್ ಹಸೀನಾ ಬಾಂಬ್‌

    ಬಾಂಗ್ಲಾದೇಶವನ್ನ ಅಮೆರಿಕಕ್ಕೆ ಮಾರಾಟ ಮಾಡಿದ್ದಾರೆ – ಯೂನಸ್ ವಿರುದ್ಧ ಶೇಖ್ ಹಸೀನಾ ಬಾಂಬ್‌

    ಢಾಕಾ: ಸರ್ಕಾರದ ಮುಖ್ಯಸ್ಥ ಮುಹಮ್ಮದ್ ಯೂನಸ್ (Muhammad Yunus) ಬಾಂಗ್ಲಾದೇಶವನ್ನ ಅಮೆರಿಕಕ್ಕೆ ಮಾರಾಟ ಮಾಡಿದ್ದಾರೆ ಅಂತ ಬಾಂಗ್ಲಾದ ಮಾಜಿ ಪ್ರಧಾನಿ ಶೇಖ್‌ ಹಸೀನಾ (Sheikh Hasina) ಗಂಭೀರ ಆರೋಪ ಮಾಡಿದ್ದಾರೆ.

    ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅವಾಮಿ ಲೀಗ್ ಪಕ್ಷದ ಮೇಲಿನ ನಿಷೇಧವನ್ನ ತೀವ್ರವಾಗಿ ಖಂಡಿಸಿದ್ದಾರೆ. ಅಲ್ಲದೇ ಇದು ಸಂವಿಧಾನ ಬಾಹಿರ ಎಂದು ಹೇಳಿದ್ದಾರೆ.

    ಮುಂದುವರಿದು… ಸರ್ಕಾರದ ಮುಖ್ಯಸ್ಥ ಯೂನಸ್‌ ಉಗ್ರಗಾಮಿ ಗುಂಪುಗಳ ಸಹಾಯದಿಂದ ಬಾಂಗ್ಲಾದೇಶ ಸರ್ಕಾರವನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ನಮ್ಮ ಸರ್ಕಾರ ಅಂದು ಭಯೋತ್ಪಾದಕರ ನಿಯಂತ್ರಣಕ್ಕೆ ಹೋರಾಡಿತ್ತು. ಆದರಿಂದು ಭಯೋತ್ಪಾದಕರಿಗೆ ಸರ್ಕಾರದ ನಿಯಂತ್ರಣವನ್ನ ಯೂನಸ್‌ ಆಡಳಿತ ನೀಡಿದೆ. ಈ ಹಿಂದೆ ನನ್ನ ತಂದೆ ಸೇಂಟ್ ಮಾರ್ಟಿನ್ ದ್ವೀಪಕ್ಕಾಗಿ ಅಮೆರಿಕದ ಡಿಮ್ಯಾಂಡ್‌ಗಳನ್ನ ಒಪ್ಪಿರಲಿಲ್ಲ. ಅದಕ್ಕಾಗಿ ತಮ್ಮ ಪ್ರಾಣವನ್ನೇ ಬಿಟ್ಟರು ಹೊರತು ಅಧಿಕಾರಕ್ಕಾಗಿ ದೇಶವನ್ನು ಮಾರುವ ಬಗ್ಗೆ ಯೋಚಿಸಿರಲಿಲ್ಲ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.

    ಇದೇ ವೇಳೆ ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕಾಗಿ ಇಡೀ ದೇಶ ತಮ್ಮ ತಂದೆಯವರೊಂದಿಗೆ ಶಸ್ತ್ರಾಸ್ತ್ರ ಹಿಡಿದು ಹೋರಾಟ ನಡೆಸಿದ ಕ್ಷಣಗಳನ್ನು ಹಸೀನಾ ನೆನಪಿಸಿಕೊಂಡರು. ಆ ದೇಶದ ಒಂದಿಂಚು ಮಣ್ಣನ್ನೂ ಬಿಟ್ಟುಕೊಡುವ ಉದ್ದೇಶ ಯಾರೊಬ್ಬರಿಗೂ ಇರಲಿಲ್ಲ. ಆದರೆ ಇಂದಿನ ಸ್ಥಿತಿ ನಿಜಕ್ಕೂ ದುರದೃಷ್ಟಕರ, ದೇಶವನ್ನೇ ಮಾರಾಟ ಮಾಡುವ ವ್ಯಕ್ತಿ ಅಧಿಕಾರಕ್ಕೆ ಬಂದಿದ್ದಾರೆ ಎಂದು ಬೇಸರ ಹೊರಹಾಕಿದ್ದಾರೆ.

    ಅಂದು ನಮ್ಮ ಸರ್ಕಾರ ಬಾಂಗ್ಲಾದೇಶದ ಜನರ ರಕ್ಷಣೆಗೆ ನಿಂತಿತ್ತು. ಒಂದೇ ಒಂದು ಉಗ್ರರ ದಾಳಿಯ ನಂತರ ಕಠಿಣ ಕ್ರಮ ತೆಗೆದುಕೊಂಡಿದ್ದೆವು. ಹಲವರನ್ನು ಬಂಧಿಸಿ ಜೈಲಿಗಟ್ಟಿದ್ದೆವು. ಆದರಿಂದು ದೇಶದ ಜೈಲುಗಳು ಖಾಲಿಯಾಗಿವೆ. ಬಂಧನದಲ್ಲಿದ್ದ ಉಗ್ರರನ್ನ ಬಿಡುಗಡೆ ಮಾಡಲಾಗಿದೆ. ಹಾಗಾಗಿ ಬಾಂಗ್ಲಾ ಸರ್ಕಾರದಲ್ಲಿ ಈಗ ಉಗ್ರರ ಆಳ್ವಿಕೆ ಶುರುವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

  • ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದಾಳಿ ರಾಜಕೀಯ ಪ್ರೇರಿತ: ಭಾರತದ ವಿರುದ್ಧವೇ ಪ್ರಶ್ನೆ ಎತ್ತಿದ ಯೂನಸ್

    ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದಾಳಿ ರಾಜಕೀಯ ಪ್ರೇರಿತ: ಭಾರತದ ವಿರುದ್ಧವೇ ಪ್ರಶ್ನೆ ಎತ್ತಿದ ಯೂನಸ್

    ಢಾಕಾ: ದೇಶದಲ್ಲಿ ಹಿಂದೂಗಳ ಮೇಲಿನ ದಾಳಿಯನ್ನು ಅತಿ ರಂಜನೆಗೊಳಿಸಲಾಗಿದೆ. ಬಾಂಗ್ಲಾದಲ್ಲಿ (Bangladesh) ಹಿಂದೂಗಳ ಮೇಲಿನ ಹಿಂಸಾತ್ಮಕ ದಾಳಿ ಕೋಮುವಾದಕ್ಕಿಂತಲೂ ಹೆಚ್ಚು ರಾಜಕೀಯ ಪ್ರೇರಿತವಾಗಿದೆ ಎಂದು ಬಾಂಗ್ಲಾ ಸರ್ಕಾರದ ಸಲಹೆಗಾರ ಮುಹಮ್ಮದ್ ಯೂನಸ್ (Muhammad Yunus) ಹೇಳಿಕೆ ನೀಡಿದ್ದಾರೆ.

    ಬಾಂಗ್ಲಾದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆದ ದಾಳಿಯ ಘಟನೆಗಳನ್ನು ಭಾರತ (India) ಬಿಂಬಿಸಿದ ರೀತಿಯನ್ನು ಯೂನಸ್ ಪ್ರಶ್ನಿಸಿದ್ದಾರೆ. ಈ ಬಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಹಿಂದೂಗಳ ಮೇಲಿನ ದಾಳಿ ಒಂದು ರಾಜಕೀಯ ಪ್ರೇರಿತವಾಗಿದೆ. ಇಲ್ಲಿನ ಹಿಂದೂಗಳು ಶೇಖ್ ಹಸೀನಾ ನೇತೃತ್ವದ ಅವಾಮಿ ಲೀಗ್ ಸರ್ಕಾರವನ್ನು ಬೆಂಬಲಿಸಿದ್ದಾರೆ. ಆದ್ದರಿಂದ ಈ ದೌರ್ಜನ್ಯ ಸಂಭವಿಸುತ್ತಿದೆ ಎಂದರು. ಇದನ್ನೂ ಓದಿ: ದರ್ಶನ್‌ ನೋಡಲು ಬಳ್ಳಾರಿ ಜೈಲಿಗೆ ಬಂದ ವಿಜಯಲಕ್ಷ್ಮಿ

    ಭಾರತದ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು, ನಾನು ಇದನ್ನು ಮೋದಿಯವರಿಗೂ (Narendra Modi) ಹೇಳಿದ್ದೇನೆ. ಈ ಸಮಸ್ಯೆ ಹಲವಾರು ಆಯಾಮಗಳನ್ನು ಹೊಂದಿದೆ. ಹಸೀನಾ ಮತ್ತು ಅವಾಮಿ ಲೀಗ್‌ನ ದುಷ್ಕ್ರತ್ಯಗಳ ನಂತರ ದೇಶವು ಕ್ರಾಂತಿಯನ್ನು ಎದುರಿಸಿತು. ಈ ವೇಳೆ ಅವರೊಂದಿಗೆ ಇದ್ದವರು ಕೂಡ ದಾಳಿಗಳನ್ನು ಎದುರಿಸಿದರು ಎಂದು ಹೇಳಿದರು. ಇದನ್ನೂ ಓದಿ: ಉತ್ತಮ ಶಿಕ್ಷಕ ಪ್ರಶಸ್ತಿಗೆ ತಡೆ ಪ್ರಕರಣ; ಎಸ್‌ಡಿಪಿಐ ಕೇಳಿ ಈ ಸರ್ಕಾರ ನಡೀತಿದ್ಯಾ? – ಛಲವಾದಿ ಕಿಡಿ

    ಆಗಸ್ಟ್ 5ರ ನಂತರ ಮಾಜಿ ಪ್ರಧಾನಿ ಹಸೀನಾ ಅವರನ್ನು ಪದಚ್ಯುತಿಗೊಳಿಸಲಾಯಿತು. ನಂತರ ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ಹಿಂಸಾಚಾರ ಪ್ರಾರಂಭಗೊಂಡಿದೆ. ದೇವಾಲಯಗಳು ಹಾಗೂ ಅಂಗಡಿಗಳನ್ನು ಧ್ವಂಸಗೊಳಿಸಲಾಯಿತು. ಇದನ್ನೂ ಓದಿ: ಎತ್ತಿನಹೊಳೆ ಯೋಜನೆಯಲ್ಲಿ ಭ್ರಷ್ಟಾಚಾರ- ಸಮಗ್ರ ಅಧ್ಯಯನ ವರದಿ ಪಡೆದು ಮುಂದುವರೆಯಿರಿ: ಸಿಎಂಗೆ ಸಿ.ಟಿ.ರವಿ ಆಗ್ರಹ

    ಈಗ ಅವಾಮಿ ಲೀಗ್‌ನ ಕಾರ್ಯಕರ್ತರನ್ನು ಹೊಡೆಯುವಾಗ ಬಾಂಗ್ಲಾದಲ್ಲಿ ಹಿಂದೂಗಳು ಎಂದರೆ ಅವಾಮಿ ಲೀಗ್‌ನ ಬೆಂಬಲಿಗರು ಎಂಬ ಗ್ರಹಿಕೆಯಿಂದ ಈ ದೌರ್ಜನ್ಯ ನಡೆಯುತ್ತಿದೆ. ನಡೆಯುವುದು ಸರಿ ಎಂದು ನಾನು ಹೇಳುತ್ತಿಲ್ಲ. ಆದರೆ ಅದನ್ನೇ ನೆಪವಾಗಿ ಇಟ್ಟುಕೊಂಡು ಆಸ್ತಿಯನ್ನು ವಶಪಡಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ ಈ ಎರಡು ಲೀಗ್‌ಗಳ ನಡುವೆ ವ್ಯತ್ಯಾಸವೇನಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಶಿಕ್ಷಕರ ಸಮಸ್ಯೆಗೆ ಶೀಘ್ರವೇ ಪರಿಹಾರ: ಸಿದ್ದರಾಮಯ್ಯ

    ಇದು ರಾಜಕೀಯವೇ ಹೊರತು ಕೋಮುವಾದವಲ್ಲ. ಭಾರತ ಇದನ್ನು ದೊಡ್ಡ ರೀತಿಯಲ್ಲಿ ಪ್ರಚಾರ ಮಾಡುತ್ತಿದೆ. ನಾವು ಏನೂ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಲಿಲ್ಲ. ನಾವು ಎಲ್ಲವನ್ನೂ ಮಾಡುತ್ತಿದ್ದೇವೆ ಎಂದರು. ಇದನ್ನೂ ಓದಿ: Canada | ಅಲ್ಪ ಮತಕ್ಕೆ ಕುಸಿದ ಜಸ್ಟಿನ್‌ ಟ್ರುಡೊ ಸರ್ಕಾರ