Tag: ಮುಸ್ಲಿಂ ವ್ಯಾಪಾರಿ

  • ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರದ ಬ್ಯಾನರ್ ಹಾಕಿದ ಹಿಂದೂ ಸಂಘಟನೆ

    ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರದ ಬ್ಯಾನರ್ ಹಾಕಿದ ಹಿಂದೂ ಸಂಘಟನೆ

    ಮಂಗಳೂರು: ಕರಾವಳಿಯಲ್ಲಿ ಇದೀಗ ಎಲ್ಲೆಡೆ ಜಾತ್ರೆಯ ಸಂಭ್ರಮ. ದೇವಸ್ಥಾನ, ದೈವಸ್ಥಾನಗಳ ವಾರ್ಷಿಕ ಜಾತ್ರೋತ್ಸವದ ಸಡಗರ. ಈ ನಡುವೆ ಪ್ರತೀ ಜಾತ್ರೆಯಲ್ಲೂ ಮುಸ್ಲಿಂ ವ್ಯಾಪಾರಿಗಳಿಗೆ (Muslim Traders) ಬಹಿಷ್ಕಾರ (Boycott) ಹಾಕಲಾಗುತ್ತಿದೆ.

    ಹಿಂದೂಗಳ ಪುಣ್ಯಕ್ಷೇತ್ರಗಳಲ್ಲಿ ಅನ್ಯ ಧರ್ಮೀಯರು ವ್ಯಾಪಾರ ಮಾಡಬಾರದೆಂದು ವಿಶ್ವ ಹಿಂದೂ ಪರಿಷತ್, ಭಜರಂಗದಳ ಎಲ್ಲೆಡೆ ಬ್ಯಾನರ್‌ಗಳನ್ನು ಹಾಕಿ ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ ಹಾಕುತ್ತಿದ್ದಾರೆ. ಈ ವರ್ಷವೂ ಹಲವೆಡೆ ಈ ಅಭಿಯಾನ ನಡೆದಿದ್ದು, ಜ.19ರಂದು ಮಂಗಳೂರು ನಗರದ ಕದ್ರಿ ಶ್ರೀಮಂಜುನಾಥ ದೇವಸ್ಥಾನದ ಜಾತ್ರೆಯಲ್ಲೂ ಬ್ಯಾನರ್ (Banner) ಕಾಣಿಸಿಕೊಂಡಿದೆ. ಇದನ್ನೂ ಓದಿ: ಹಿಂದಿನ ಸರ್ಕಾರದಿಂದ ನಿರ್ಲಕ್ಷ್ಯ, ನಾವು ಬಂಜಾರ ಸಮುದಾಯದವರಿಗೆ ಹಕ್ಕು ಕೊಟ್ಟಿದ್ದೇವೆ: ಮೋದಿ

    ಜ.21 ರವರೆಗೆ ನಡೆಯಲಿರುವ ಕದ್ರಿ ದೇವಸ್ಥಾನದ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳು ವ್ಯಾಪಾರ ಮಾಡದಂತೆ ವಿಎಚ್‍ಪಿ-ಭಜರಂಗದಳ ಬ್ಯಾನರ್ ಹಾಕಿದೆ. ಅದರಲ್ಲಿ ಕುಕ್ಕರ್ ಬಾಂಬ್ ಸ್ಫೋಟವನ್ನೂ ಉಲ್ಲೇಖ ಮಾಡಲಾಗಿದೆ. ಕುಕ್ಕರ್ ಬಾಂಬ್ ಸ್ಫೋಟದ ಆರೋಪಿ ಮೊದಲು ಟಾರ್ಗೆಟ್ ಮಾಡಿದ್ದೇ ಕದ್ರಿ ಮಂಜುನಾಥ ದೇವಸ್ಥಾನವನ್ನು. ಅಂತಹ ಮನಸ್ಥಿತಿ ಉಳ್ಳವರಿಗೆ ಹಾಗೂ ವಿಗ್ರಹಾರಾಧನೆ ಹರಾಂ ಎಂದು ನಂಬಿರುವ ಯಾರಿಗೂ ಈ ಜಾತ್ರೆಯಲ್ಲಿ ವ್ಯಾಪಾರಕ್ಕೆ ಅವಕಾಶವಿಲ್ಲ. ಸನಾತನ ಧರ್ಮದ ಆಚರಣೆ ಹಾಗೂ ನಂಬಿಕೆಯಲ್ಲಿ ವಿಶ್ವಾಸವುಳ್ಳ ಹಿಂದೂ ವ್ಯಾಪಾರಿಗಳಿಗೆ ಮಾತ್ರ ಅವಕಾಶ ಎಂದು ಬ್ಯಾನರ್ ಹಾಕಲಾಗಿದೆ. ಈ ಬ್ಯಾನರ್ ಹಾಕಿರೋದನ್ನು ಹಿಂದೂ ಸಂಘಟನೆಗಳು ಸಮರ್ಥಿಸಿಕೊಂಡಿದೆ. ಇದನ್ನೂ ಓದಿ: ಮುಂದಿನ 10 ವರ್ಷ ನೀರಾವರಿ ದಶಕ – ಬೊಮ್ಮಾಯಿ ಘೋಷಣೆ

    ಈ ದೇವಸ್ಥಾನದ ಜಾತ್ರಾ ಸಂದರ್ಭದಲ್ಲಿ ಹಲವು ವರ್ಷಗಳಿಂದಲೂ ಮುಸ್ಲಿಂ ವ್ಯಾಪಾರಿಗಳು ವ್ಯಾಪಾರ ಮಾಡುತ್ತಿದ್ದರು. ಆದ್ರೆ ಈ ಬಾರಿ ಎಲ್ಲೆಡೆ ಬಹಿಷ್ಕಾರಗಳು ಆರಂಭಗೊಂಡಿದ್ದರಿಂದ ಮುಸ್ಲಿಂ ವ್ಯಾಪಾರಿಗಳು ವ್ಯಾಪಾರಕ್ಕೆ ಬಂದಿಲ್ಲ. ಒಂದೆರಡು ಮಂದಿ ಮುಸ್ಲಿಂ ವ್ಯಾಪಾರಿಗಳು ಜಾತ್ರೆಯಲ್ಲಿ ವ್ಯಾಪಾರ ನಡೆಸಲು ಬಂದಿದ್ದು, ಅವರನ್ನು ಹಿಂದೂ ಸಂಘಟನೆಗಳು ಮನವೊಲಿಸಿ ವಾಪಸ್ ಕಳುಹಿಸಿದ್ದಾರೆ. ಈ ಕ್ಷೇತ್ರ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ದೇವಸ್ಥಾನವಾಗಿರೋದ್ರಿಂದ ಕ್ಷೇತ್ರದ ಆಡಳಿತ ಮಂಡಳಿಯೂ ಈ ಬ್ಯಾನರ್ ಅಳವಡಿಕೆಗೆ ಸಮ್ಮತಿ ಸೂಚಿಸಿಲ್ಲ. ಹೀಗಾಗಿ ಶಾಂತಿ ಸುವ್ಯವಸ್ಥೆ ಕಾಪಾಡೋ ನಿಟ್ಟಿನಲ್ಲಿ ಪೊಲೀಸರು ಬ್ಯಾನರ್‌ಅನ್ನು ತೆರವುಗೊಳಿಸಿದ್ದಾರೆ.

    ಇಂದು ಬೆಳಗ್ಗೆ ಬ್ಯಾನರ್ ಹಾಕಿದ್ದ ಬಗ್ಗೆ ಪೊಲೀಸರ ಗಮನಕ್ಕೆ ಬಂದಿದ್ದು, ತಕ್ಷಣ ತೆರವುಗೊಳಿಸಿದ್ದಾರೆ. ಎರಡು ದಿನಗಳ ಕಾಲ ಜಾತ್ರೆ ಇರೋದ್ರಿಂದ ಆ ವೇಳೆ ಮುಸ್ಲಿಂ ವ್ಯಾಪಾರಿಗಳು ಬಂದ್ರೂ ಅವರನ್ನು ಮನವೊಲಿಸಿ ವಾಪಸ್ ಕಳುಹಿಸಲು ಹಿಂದೂ ಸಂಘಟನೆಯ ಕಾರ್ಯಕರ್ತರು ಮುಂದಾಗಿದ್ದಾರೆ. ಒಟ್ಟಿನಲ್ಲಿ ಕರಾವಳಿಯಲ್ಲಿನ ಜಾತ್ರೆಗಳಲ್ಲಿ ಸಾಮರಸ್ಯದೊಂದಿಗೆ ಎಲ್ಲರೂ ವ್ಯಾಪಾರ ನಡೆಸುತ್ತಿದ್ದು ಮುಂದಿನ ದಿನದಲ್ಲಿ ಹಿಂದೂ ಧಾರ್ಮಿಕ ಕ್ಷೇತ್ರಗಳಲ್ಲಿ ಮುಸ್ಲಿಂ ವರ್ತಕರ ವ್ಯಾಪಾರ ಸಂಪೂರ್ಣ ನಿಲ್ಲುವ ಸಾಧ್ಯತೆ ಇದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಹಿಂದೂಯೇತರ ಅಂಗಡಿಯಲ್ಲಿದ್ದ ಕಲ್ಲಂಗಡಿ, ತೆಂಗಿನಕಾಯಿ ಒಡೆದುಹಾಕಿದ ಶ್ರೀರಾಮಸೇನೆ ಕಾರ್ಯಕರ್ತರು

    ಹಿಂದೂಯೇತರ ಅಂಗಡಿಯಲ್ಲಿದ್ದ ಕಲ್ಲಂಗಡಿ, ತೆಂಗಿನಕಾಯಿ ಒಡೆದುಹಾಕಿದ ಶ್ರೀರಾಮಸೇನೆ ಕಾರ್ಯಕರ್ತರು

    ಧಾರವಾಡ: ದೇವಸ್ಥಾನದ ಬಳಿ ಹಿಂದೂಯೇತರ ಅಂಗಡಿಗಳನ್ನು ಬಂದ್ ಮಾಡಿಸಬೇಕೆಂಬ ಚರ್ಚೆ ಕಳೆದ ಒಂದು ತಿಂಗಳಿನಿಂದ ನಡೆಯುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ದೇವಸ್ಥಾನವೊಂದರ ಬಳಿ ಹಿಂದೂಯೇತರರು ಮಾರಾಟಮಾಡುತ್ತಿದ್ದ ಕಲ್ಲಂಗಡಿ ಹಾಗೂ ತೆಂಗಿನಕಾಯಿಯನ್ನು ಶ್ರೀರಾಮಸೇನೆ ಕಾರ್ಯಕರ್ತರು ಒಡೆದು ಹಾಕಿರುವ ಘಟನೆ ಧಾರವಾಡದಲ್ಲಿ ನಡೆದಿದೆ.

    ಧಾರವಾಡ ಹೊರವಲಯದ ನುಗ್ಗಿಕೇರೆ ಆಂಜನೇಯನ ದೇವಸ್ಥಾನಕ್ಕೆ ಶನಿವಾರ ಸಾವಿರಾರು ಭಕ್ತರು ಬಂದು ದರ್ಶನ ಪಡೆಯುತ್ತಾರೆ. ದೇವಸ್ಥಾನದ ಬಳಿ 4 ಹಿಂದೂಯೇತರ ಅಂಗಡಿಗಳಿದ್ದು, ಕಳೆದ 15 ದಿನಗಳ ಹಿಂದೆ ಶ್ರೀರಾಮ ಸೇನೆಯ ಕಾರ್ಯಕರ್ತರು ದೇವಸ್ಥಾನದ ಬಳಿ ಬಂದು ಪ್ರತಿಭಟನೆ ಮಾಡಿದ್ದರು. ಈ ವೇಳೆ ಹಿಂದೂಯೇತರ ಅಂಗಡಿಗಳನ್ನು ಬಂದ್ ಮಾಡಿಸಬೇಕು ಎಂದು ಮನವಿ ಮಾಡಿದ್ದರು. ಶನಿವಾರ ಹಿಂದೂಯೇತರ ಅಂಗಡಿಗಳು ಮುಚ್ಚದೇ ಇದ್ದಿದ್ದರಿಂದ ಶ್ರೀರಾಮ ಸೇನೆ ಕಾರ್ಯಕರ್ತರು ಸ್ಥಳಕ್ಕೆ ಬಂದು ಅಂಗಡಿಗಳಲ್ಲಿದ್ದ ಕಲ್ಲಂಗಡಿ ಹಣ್ಣು ಹಾಗೂ ತೆಂಗಿನಕಾಯಿಗಳನ್ನು ಒಡೆದು ಹಾಕಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಮುಕ್ತ ಭಾರತ ಮಾಡೋಕೆ ಯಾರಪ್ಪನ ಕೈಯಲ್ಲೂ ಆಗಲ್ಲ: ನಲಪಾಡ್

    ಘಟನೆಯಿಂದ ನಷ್ಟ ಅನುಭವಿಸಿದ ಹಿಂದೂಯೇತರ ವ್ಯಾಪಾರಿ ನಬಿಸಾಬ್, ನೋಡ ನೋಡುತ್ತಿದ್ದಂತೆಯೇ ಎಲ್ಲಾ ಒಡೆಯುತ್ತ ಬಂದರು. ಅವರು 8-10 ಜನ ಇದ್ದರು. ನಾನೊಬ್ಬನೇ ಇದ್ದಿದ್ದರಿಂದ ಏನೂ ಮಾಡಲಾಗಲಿಲ್ಲ. 6 ಕ್ವಿಂಟಾಲ್ ಕಲ್ಲಂಗಡಿ ಹಣ್ಣು ತೆಗೆದುಕೊಂಡು ಬಂದಿದ್ದೆ. ಅದರಲ್ಲಿ 1 ಕ್ವಿಂಟಾಲ್ ಮಾತ್ರ ಮಾರಾಟವಾಗಿತ್ತು ಎಂದು ಮರುಗಿದರು.

    ನಾನು ಕಳೆದ 15 ವರ್ಷಗಳಿಂದ ವ್ಯಾಪಾರ ಮಾಡುತ್ತಿದ್ದೇನೆ. ಕಳೆದ ವಾರ ಇಲ್ಲಿ ಮುಸ್ಲಿಮರಿಗೆ ಅಂಗಡಿ ಹಾಕಬೇಡಿ ಎಂದಿದ್ದರು. ಮುಂದಿನ ವಾರವೇ ದೇವಸ್ಥಾನದ ಜಾತ್ರೆ ಇತ್ತು. ಜಾತ್ರೆಯ ಬಳಿಕ ಹಿಂದೂಯೇತರ ಅಂಗಡಿಗಳನ್ನು ಇಲ್ಲಿ ಇಡಬೇಕಾ, ಬೆಡವಾ ಎಂದು ನಿರ್ಧಾರ ಆಗಬೇಕಿತ್ತು. ಅಷ್ಟರಲ್ಲಿ ಈ ಗಲಾಟೆ ನಡೆಸಲಾಗಿದೆ. ಮತ್ತೊಂದು ಕಡೆ ದೇವಸ್ಥಾನದ ಆಡಳಿತ ಮಂಡಳಿ ಎಲ್ಲ ಪರ್ಯಾಯಸ್ಥರ ಸಭೆ ಮಾಡಿ, ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ ಎಂದು ತಿಳಿಸಿದರು.

    ಘಟನೆ ಬಗ್ಗೆ ಪ್ರತಿಕ್ರಿಯಿಸಿದ ದೇವಸ್ಥಾನದ ಪರ್ಯಾಯಸ್ಥರು, ಶನಿವಾರ ಯಾವಾಗಲೂ ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಾರೆ. ಹೀಗಾಗಿ ಆ ಕಡೆ ಗಲಾಟೆ ನಡೆದಿರುವ ಬಗ್ಗೆ ಲಕ್ಷ್ಯ ಕೊಡಲು ಸಾಧ್ಯವಾಗಲಿಲ್ಲ. ಈ ಬಗ್ಗೆ ಸಭೆ ಮಾಡಿ ಏನಾಗಿದೆ ಎಂದು ಮಾಹಿತಿ ಕೊಡುತ್ತೇನೆ ಎಂದರು. ಇದನ್ನೂ ಓದಿ: ಲವ್ ಜಿಹಾದ್‍ಗೆ ಮುಂದಾದವರ ಮನೆ ಹೊಕ್ಕು ಹೊಡೆಯಬೇಕು: EX MLC ನಾರಾಯಣಸಾ ಭಾಂಡಗೆ

    ಕಳೆದ ತಿಂಗಳು ಈ ವಿಚಾರವಾಗಿ ಮನವಿ ಬಂದಿತ್ತು. ನಾನು ಬಂದು ಇನ್ನೂ ಒಂದು ತಿಂಗಳಾಗಲಿಲ್ಲ. ಮನವಿ ಹಾಗೂ ಗಲಾಟೆ ಬಗ್ಗೆ ಸಭೆ ಕರೆದು ನೋಡುತ್ತೇವೆ. ಅಂಗಡಿಗಳಿಗೆ ಅನುಮತಿ ಕೊಡುವುದು ನಾವೆ. ನಾವು ಅವರಿಂದ ಬಾಡಿಗೆ ತೆಗೆದುಕೊಳ್ಳುವುದಿಲ್ಲ. ಬಡವರು ಎಂದು ಅಂಗಡಿ ನಡೆಸಲು ಕೊಟ್ಟಿದ್ದೇವೆ. ಇಲ್ಲಿರುವ ಶೇ.99 ರಷ್ಟು ವ್ಯಾಪಾರಿಗಳು ಹಿಂದೂಗಳು. ಎಲ್ಲರಿಗೂ ಹೊಟ್ಟೆ ಪಾಡಿದೆ. ನಾವು ಎಲ್ಲರಿಗೂ ಸಹಾಯ ಮಾಡುತ್ತೇವೆ ಎಂದರು.

  • ಮಂಗಳೂರು, ಉಡುಪಿ ಬಳಿಕ ಬೆಂಗಳೂರಿಗೂ ವ್ಯಾಪಿಸಿದ ಧರ್ಮ ಸಂಘರ್ಷ

    ಮಂಗಳೂರು, ಉಡುಪಿ ಬಳಿಕ ಬೆಂಗಳೂರಿಗೂ ವ್ಯಾಪಿಸಿದ ಧರ್ಮ ಸಂಘರ್ಷ

    ಬೆಂಗಳೂರು: ಮಂಗಳೂರು, ಉಡುಪಿ ಬಳಿಕ ಬೆಂಗಳೂರಿಗೂ ಧರ್ಮ ಸಂಘರ್ಷ ವ್ಯಾಪಿಸಿದೆ. ನಗರದ ಬನಶಂಕರಿ ದೇಗುಲ ಸೇರಿದಂತೆ ಬೆಂಗಳೂರಿನ ಮುಜರಾಯಿ ದೇಗುಲದಲ್ಲಿಯೂ ಜಾತ್ರಮಹೋತ್ಸವ ಸೇರಿದಂತೆ ದೇಗುಲದ ಅವರಣದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧಕ್ಕೆ ಆಗ್ರಹ ಕೇಳಿಬಂದಿದೆ.

    ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಧಾರ್ಮಿಕ ದತ್ತಿ ಇಲಾಖೆಯ ಬೆಂಗಳೂರು ನಗರ ಸದಸ್ಯ ವೆಂಕಟೇಶ್ ಮೂರ್ತಿ, ಬನಶಂಕರಿ ದೇಗುಲ ಸೇರಿದಂತೆ ಬೆಂಗಳೂರಿನ ಮುಜರಾಯಿ ದೇಗುಲದಲ್ಲಿಯೂ ಜಾತ್ರಮಹೋತ್ಸವ ಸೇರಿದಂತೆ ದೇಗುಲದ ಅವರಣದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ಕೊಡದಂತೆ ಪತ್ರ ಬರೆಯುತ್ತೇನೆ. ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. 2002ರ ಇಲಾಖೆಯ ಕಾಯ್ದೆಯ ಜಾರಿಗೆ ಕ್ರಮ ಕೈಗೊಳ್ಳಬೇಕು. ಇತ್ತೀಚೆಗೆ ರಾಮೇಶ್ವರ ದೇಗುಲದ ಬ್ರಹ್ಮರಥೋತ್ಸವ ಆಹ್ವಾನ ಪತ್ರಿಕೆಯ ಮುಖಪುಟದಲ್ಲಿ ದೇಗುಲದ ಹೆಸರು ಹಾಕದೇ ಸ್ಥಳೀಯ ಮುಸ್ಲಿಂ ಶಾಸಕ ಜಮೀರ್ ಅಹ್ಮದ್ ಹೆಸರನ್ನೇ ದೊಡ್ಡದಾಗಿ ಅಚ್ಚು ಹಾಕಿದ್ದಾರೆ. ಇದು ಸರಿಯಲ್ಲ. ಮಸೀದಿ ಚರ್ಚ್‍ಗಳಲ್ಲಿ ಹಿಂದೂಗಳಿಗೆ ವ್ಯಾಪಾರಕ್ಕೆ ಅನುವು ಮಾಡಿಕೊಡಲ್ಲ. ಹೀಗಾಗಿ ಬನಶಂಕರಿ ದೇಗುಲದಲ್ಲಿ ಸೇರಿದಂತೆ ಬೆಂಗಳೂರು ನಗರದ ಪ್ರಮುಖ ದೇಗುಲದಲ್ಲಿ ಅನ್ಯ ಧರ್ಮಿಯ ವ್ಯಾಪಾರಿಗಳಿಗೆ ಅವಕಾಶ ಕೊಡದಂತೆ ಪತ್ರ ಬರೆಯುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಹಿಂದೂ ಜಾತ್ರೆಗಳಲ್ಲಿ ಮುಸ್ಲಿಮ್‌ ವ್ಯಾಪಾರಿಗಳಿಗೆ ನಿಷೇಧ: ನಿಯಮ ಏನಿದೆ?

    ಮುಂದಿನ ತಿಂಗಳು ನಡೆಯಲಿರುವ ಬೆಂಗಳೂರು ಕರಗ ಮಹೋತ್ಸದಲ್ಲಿಯೂ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ಕೊಡಬೇಕಾ ಬೇಡ್ವ ಎನ್ನುವುದರ ಬಗ್ಗೆ ಹಿಂದೂ ಸಂಘಟನೆಗಳಿಂದ ಇಂದು ಸಭೆ ನಡೆಯಲಿದೆ. ಧರ್ಮರಾಯ ದೇಗುಲದ ಆಡಳಿತ ಮಂಡಳಿಯ ಜೊತೆ ಕೆಲ ಹಿಂದೂ ಮುಖಂಡರ ಸಭೆ ಕರೆದಿದ್ದು, ಸಭೆಯ ಬಳಿಕ ಅಂತಿಮ ನಿರ್ಧಾರ ಪ್ರಕಟ ಸಾಧ್ಯತೆ ಇದೆ. ಇದನ್ನೂ ಓದಿ: ಮಂಗಳೂರಿನ ದೇವಸ್ಥಾನಗಳ ಜಾತ್ರೋತ್ಸವದಲ್ಲಿ ಮುಸ್ಲಿಮರಿಗೆ ಆರ್ಥಿಕ ಬಹಿಷ್ಕಾರ

    ನಿಯಮ ಏನಿದೆ?
    ಮುಸ್ಲಿಮರಿಗೆ ಅಂಗಡಿ ಹಾಕಲು ಅವಕಾಶ ನಿರಾಕರಿಸುತ್ತಿರುವ ದೇಗುಲದ ಆಡಳಿತ ಮಂಡಳಿಗಳು, 2002ರಲ್ಲಿ ರೂಪಿಸಲಾದ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಯ ನಿಯಮವನ್ನೇ ಅಸ್ತ್ರವನ್ನಾಗಿ ಮಾಡಿಕೊಂಡಿವೆ. ಧಾರ್ಮಿಕ ದತ್ತಿ ಇಲಾಖೆಯ ನಿಯಮಾವಳಿ ಪುಸ್ತಕದ ಪುಟ ಸಂಖ್ಯೆ 446ರಲ್ಲಿರುವ 12 ನಿಯಮದಲ್ಲಿ, ಸಂಸ್ಥೆಯ ಸಮೀಪದ ಜಮೀನು ಕಟ್ಟಡ ಮತ್ತು ನಿವೇಶನಗಳೂ ಸೇರಿದಂತೆ ಯಾವುದೇ ಸವತ್ತನ್ನು ಹಿಂದೂಗಳಲ್ಲದವರಿಗೆ ಗುತ್ತಿಗೆ ನೀಡತಕ್ಕದಲ್ಲ ಎಂದು ಉಲ್ಲೇಖಿಸಲಾಗಿದೆ.

    ಇದೀಗ ಇದೇ ನಿಯಮವನ್ನು ನಾವು ಜಾರಿ ಮಾಡಿದ್ದೇವೆ ಎಂದು ಕಾಪು ಮಾರಿಗುಡಿ ಆಡಳಿತ ಮಂಡಳಿ ಹೇಳುತ್ತಿದೆ. ಹಿಂದೂ ಸಂಘಟನೆಗಳಿಗೂ ಈ ನಿಯಮವನ್ನು ಮುಂದಿಟ್ಟುಕೊಂಡು ದೇವಾಲಯದ ಆಡಳಿತ ಮಂಡಳಿ ಜೊತೆ ಮಾತುಕತೆ ನಡೆಸಿ ಹಿಂದೂಯೇತರ ವ್ಯಕ್ತಿಗಳಿಗೆ ಅನುಮತಿ ನೀಡದಂತೆ ಮನವಿ ಮಾಡುತ್ತಿದೆ.

    ಈ ನಿಯಮ ಜಾರಿಯಾಗಿದ್ದು 2002ರಲ್ಲಿ. ಈ ವೇಳೆ ರಾಜ್ಯದಲ್ಲಿ ಅಸ್ತಿತ್ವದಲ್ಲಿ ಇದ್ದಿದ್ದು ಎಸ್‍ಎಂ ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರ. ಇಂದು ಅದೇ ಕಾಂಗ್ರೆಸ್ಸಿಗರು ಇದು ಸರಿಯಲ್ಲ ಎನ್ನುತ್ತಿದ್ದಾರೆ. ಇದನ್ನೂ ಓದಿ: ಬಿಜೆಪಿ ಸರ್ಕಾರ ಮೌನವಾಗಿದೆ, ಒಳಗೊಳಗೆ ಖುಷಿ ಪಡುತ್ತಿದೆಯಾ?: ಯು.ಟಿ ಖಾದರ್

    ಹಿಜಬ್ ವಿವಾದ ಸೃಷ್ಟಿಯಾಗುವರೆಗೂ ಈ ನಿಯಮ ಇದೆ ಎನ್ನುವದು ಬಹುತೇಕ ಮಂದಿಗೆ ತಿಳಿದಿರಲಿಲ್ಲ. ಅಷ್ಟೇ ಅಲ್ಲದೇ ಕರಾವಳಿ ಭಾಗದಲ್ಲಿ ಹಿಂದೂ ದೇವಾಲಯಗಳಲ್ಲಿ ಇಲ್ಲಿಯವರೆಗೂ ಮುಸ್ಲಿಮ್ ವ್ಯಾಪಾರಿಗಳು ಅಂಗಡಿಗಳನ್ನು ತೆರೆಯುತ್ತಿದ್ದರು. ಆದರೆ ಹಿಜಬ್ ವಿವಾದ, ಕರ್ನಾಟಕ ಬಂದ್ ಬಳಿ ಈ ನಿಯಮ ಮುನ್ನೆಲೆಗೆ ಬಂದಿದೆ.

  • ಗೋಮಾಂಸ ಮಾರುತ್ತಿದ್ದ ಮುಸ್ಲಿಂ ವ್ಯಾಪಾರಿಗೆ ಥಳಿಸಿ, ಹಂದಿ ಮಾಂಸ ತಿನ್ನುವಂತೆ ಒತ್ತಾಯಿಸಿದ ದುಷ್ಕರ್ಮಿಗಳು!

    ಗೋಮಾಂಸ ಮಾರುತ್ತಿದ್ದ ಮುಸ್ಲಿಂ ವ್ಯಾಪಾರಿಗೆ ಥಳಿಸಿ, ಹಂದಿ ಮಾಂಸ ತಿನ್ನುವಂತೆ ಒತ್ತಾಯಿಸಿದ ದುಷ್ಕರ್ಮಿಗಳು!

    ಬಿಸ್‍ಪುರ: ಗೋಮಾಂಸ ಮಾರಾಟ ಮಾಡಿದ್ದಕ್ಕೆ ಮುಸ್ಲಿಂ ವ್ಯಾಪಾರಿಯೊಬ್ಬರನ್ನು ದುಷ್ಕರ್ಮಿಗಳು ಥಳಿಸಿ, ಹಂದಿ ಮಾಂಸ ತಿನ್ನುವಂತೆ ಹಿಂಸೆ ನೀಡಿರುವ ಅಮಾನವೀಯ ಘಟನೆ ಅಸ್ಸಾಂನ ಬಿಸ್ವಾನಾಥ್ ಜಿಲ್ಲೆಯಲ್ಲಿ ನಡೆದಿದೆ.

    ವ್ಯಾಪಾರಿ ಶೌಕತ್ ಆಲಿ(68) ಹಲ್ಲೆಗೊಳಗಾದ ವ್ಯಾಪಾರಿ. ಗೊಮಾಂಸ ಮಾರುತ್ತಿದ್ದಕ್ಕೆ ದುಷ್ಕರ್ಮಿಗಳ ಗುಂಪೊಂದು ವ್ಯಾಪಾರಿ ಮೇಲೆ ಭಾನುವಾರದಂದು ಹಲ್ಲೆ ನಡೆಸಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ನಡುರಸ್ತೆಯಲ್ಲಿಯೇ ಮೊಣಕಾಲಿನಲ್ಲಿ ಕೂರಿಸಿ ವ್ಯಾಪಾರಿಗೆ ದುಷ್ಕರ್ಮಿಗಳು ಥಳಿಸಿದ್ದಾರೆ. ಅಲ್ಲದೆ ಶಿಕ್ಷೆ ರೂಪದಲ್ಲಿ ಹಂದಿ ಮಾಂಸ ತಿನ್ನುವಂತೆ ತಾಕೀತು ಮಾಡಿದ್ದಾರೆ. ಈ ವೇಳೆ ಆತ ಬೇಡಿಕೊಂಡರೂ ಬಿಡದೇ ಮನಸೋಯಿಚ್ಚೆ ಥಳಿಸಿದ್ದಾರೆ. ಅಲ್ಲದೆ ಈ ದೃಶ್ಯವನ್ನು ವಿಡಿಯೋ ಚಿತ್ರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು, ವಿಡಿಯೋ ವೈರಲ್ ಆಗಿದೆ.

    ಸದ್ಯ ಹಲ್ಲೆಗೊಳಗಾದ ಶೌಕತ್ ಆಲಿ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶೌಕತ್ ಆಲಿ ಹಾಗೂ ಅವರ ಸಹೋದರ ಇಬ್ಬರೂ ನೀಡಿದ ದೂರಿನ ಆಧಾರದ ಮೇಲೆ ಎರಡು ಪ್ರತ್ಯೇಕ ಎಫ್‍ಐಆರ್ ದಾಖಲಿಸಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದು ವಿಡಿಯೋವನ್ನು ಇಟ್ಟುಕೊಂಡು ಆರೋಪಿಗಳಿಗೆ ಬಲೆ ಬೀಸಿದ್ದಾರೆ.

    ಮೂಲತಃ ಶೌಕತ್ ಅಲಿ ಬಾಂಗ್ಲಾದೇಶದವರು. ಬಿಸ್ವಾನಾಥ್‍ನಲ್ಲಿ ಲೈಸನ್ಸ್ ಪಡೆದುಕೊಂಡೆ ಗೋಮಾಂಸ ಮಾರಾಟ ಮಾಡುತ್ತಿದ್ದರು. ಆದ್ರೆ ಸುಳ್ಳು ಆರೋಪ ಮಾಡಿ ದುಷ್ಕರ್ಮಿಗಳು ವ್ಯಾಪಾರಿ ಮೇಲೆ ಹಲ್ಲೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ನೀನು ಬಾಂಗ್ಲಾದೇಶದವನು ಅಲ್ವಾ? ನಿನ್ನ ಎನ್‍ಆರ್ ಸಿ(ನಾಗರಿಕರ ರಾಷ್ಟ್ರೀಯ ನೊಂದಣಿ)ಯಲ್ಲಿ ಏನು ಹೆಸರಿದೆ ಎಂದು ದುಷ್ಕರ್ಮಿಗಳು ಪ್ರಶ್ನೆ ಮಾಡಿ ಗದರಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.