Tag: ಮುಸ್ಲಿಂ ಧರ್ಮ

  • ಅಪ್ರಾಪ್ತ ಬಾಲಕಿಯ ರೇಪ್ – ಮುಸ್ಲಿಂ ಧರ್ಮಕ್ಕೆ ಮತಾಂತರವಾದ್ರೆ ಮದುವೆ ಆಗ್ತೇನೆ ಎಂದ ಕೀಚಕ

    ಅಪ್ರಾಪ್ತ ಬಾಲಕಿಯ ರೇಪ್ – ಮುಸ್ಲಿಂ ಧರ್ಮಕ್ಕೆ ಮತಾಂತರವಾದ್ರೆ ಮದುವೆ ಆಗ್ತೇನೆ ಎಂದ ಕೀಚಕ

    ಮಂಡ್ಯ: ಮುಸ್ಲಿಂ ವಿವಾಹಿತನೋರ್ವ ಹಿಂದೂ ಧರ್ಮದ ಬಾಲಕಿಯ ಅಶ್ಲೀಲ ವೀಡಿಯೋ ಚಿತ್ರಿಸಿ, ಬಳಿಕ ಬ್ಲ್ಯಾಕ್‌ಮೇಲ್ ಮಾಡಿ ಅತ್ಯಾಚಾರ ವೆಸಗಿದ್ದಾನೆ. ಅಲ್ಲದೇ ತನ್ನ ಧರ್ಮಕ್ಕೆ ಮತಾಂತರವಾದರೆ ಮದುವೆಯಾಗುವ ಆಸೆಯನ್ನು ತೋರಿಸಿದ್ದಾನೆ.

    ಸಕ್ಕರೆ ನಾಡು ಮಂಡ್ಯದಲ್ಲಿ (Mandya) ಇತ್ತೀಚಿಗೆ ಬಾಲಕಿಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದೆ. ಒಂದೂವರೆ ತಿಂಗಳ ಹಿಂದೆಯಷ್ಟೇ ಮಳವಳ್ಳಿಯಲ್ಲಿ (Malavalli) ಟ್ಯೂಷನ್ ಮಾಸ್ಟರ್ 10 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆಗೈದಿದ್ದ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಆ ಕೃತ್ಯದಿಂದ ಮನೆ ಪಾಠಕ್ಕೆ ಹೆಣ್ಣು ಮಕ್ಕಳನ್ನು ಕಳುಹಿಸುವುದು ಹೇಗಪ್ಪ ಎಂಬ ಭಯ ಪೋಷಕರಲ್ಲಿ ಮೂಡಿಸಿದೆ. ಈ ಘಟನೆ ಜನರ ಮನಸ್ಸಿನಲ್ಲಿ ಮಾಸುವ ಮುನ್ನವೇ ಮುಸ್ಲಿಂ ವಿವಾಹಿತನೊಬ್ಬ ಹಿಂದೂ ಧರ್ಮದ 13 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಲ್ಲದೆ, ತನ್ನ ಧರ್ಮಕ್ಕೆ ಮತಾಂತರವಾದರೆ ಮದುವೆಯಾಗುವುದಾಗಿ ಆಸೆ ತೋರಿಸಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಅಸ್ಸಾಂ, ಮೇಘಾಲಯ ಗಡಿಯಲ್ಲಿ ಮರ ಕಳ್ಳಸಾಗಣೆ – ಘರ್ಷಣೆಯಲ್ಲಿ ಅರಣ್ಯ ಸಿಬ್ಬಂದಿ ಸೇರಿ 6 ಸಾವು

    ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ (Nagamangala) ಈ ಘಟನೆ ನಡೆದಿದ್ದು, ಆರೋಪಿಯನ್ನು 25 ವರ್ಷದ ಯೂನಸ್ ಫಾಷ ಎಂದು ಗುರುತಿಸಲಾಗಿದೆ. ಎದುರು ಮನೆಯಲ್ಲೇ ವಾಸವಿದ್ದ ಬಾಲಕಿಯ ಸ್ನೇಹ ಸಂಪಾದಿಸಿದ್ದ ಯೂನಸ್ ಪಾಷ, ಹೆತ್ತವರಿಗೆ ತಿಳಿಯದಂತೆ ಮೊಬೈಲ್ ಕೊಡಿಸಿದ್ದ. ಬಳಿಕ ವೀಡಿಯೋ ಕಾಲ್‍ನಲ್ಲಿ ಬಾಲಕಿಯನ್ನು ಪುಸಲಾಯಿಸಿ ಬೆತ್ತಲೆ ವೀಡಿಯೋ ರೆಕಾರ್ಡ್ ಮಾಡಿಕೊಂಡಿದ್ದ. ಆ ವೀಡಿಯೋವನ್ನು ಸೋಷಿಯಲ್ ಮೀಡಿಯಾಗೆ ಅಪ್‍ಲೋಡ್ ಮಾಡುವ ಬೆದರಿಕೆಯೊಡ್ಡಿದ್ದಲ್ಲದೇ, ಮುಸ್ಲಿಂ ಧರ್ಮಕ್ಕೆ ಮತಾಂತರವಾದರೆ ಮದುವೆಯಾಗುವ ಆಸೆಯನ್ನು ತೋರಿಸಿ ನವೆಂಬರ್ 11ರಂದು ಅತ್ಯಾಚಾರ ಮಾಡಿದ್ದಾನೆ.

    ಬಾಲಕಿಯ ತಂದೆ ನವೆಂಬರ್ 8 ರಂದು ಶಿರಡಿಗೆ ಹೋಗಿದ್ದರು. ಈ ವೇಳೆ ತಾಯಿಯೊಂದಿಗೆ ಅಜ್ಜಿ ಮನೆಗೆ ಹೋಗಿದ್ದ ಬಾಲಕಿಗೆ ನಿದ್ರೆ ಮಾತ್ರೆಯನ್ನು ಪುಡಿ ಮಾಡಿ ನೀಡಿದ್ದ ಕಾಮುಕ ಯೂನಸ್, ನವೆಂಬರ್ 11ರ ರಾತ್ರಿ ಸಾಂಬಾರಿಗೆ ಹಾಕಿಸಿದ್ದ. ಬಳಿಕ ಮನೆಯೊಳಗೆ ಬಂದು ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಆದಾದ ಬಳಿಕ ಬಾಲಕಿಯ ನಡುವಳಿಕೆಯಲ್ಲಾದ ಬದಲಾವಣೆ ಗಮನಿಸಿದ ಪೋಷಕರು ವಿಚಾರಿಸಿದಾಗ ಅತ್ಯಾಚಾರ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಈ ಬಗ್ಗೆ 19ರಂದು ಬಾಲಕಿಯ ತಂದೆ ದೂರು ನೀಡಿದ್ದು, ಸದ್ಯ ಪೊಲೀಸರು ಯೂನಸ್ ಪಾಷನನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ದೊಡ್ಡ ಅನಾಹುತ ತಪ್ಪಿಸಿದ್ದಕ್ಕೆ ದೇವರಿಗೆ ಧನ್ಯವಾದ: ADGP ಅಲೋಕ್ ಕುಮಾರ್

    ಒಟ್ಟಾರೆ ಮಂಡ್ಯದಲ್ಲಿ ದಿನೇ ದಿನೇ ಅಪ್ರಾಪ್ತರ ಮೇಲಿನ ಕ್ರೌರ್ಯಗಳು ಹೆಚ್ಚಾಗುತ್ತಿದ್ದು, ಮುಗ್ದ ಬಾಲಕಿಯನ್ನು ಪುಸಲಾಯಿಸಿ ಬೆತ್ತಲೆ ವೀಡಿಯೋ ಮಾಡಿದ್ದಲ್ಲದೇ ಹೆದರಿಸಿ ಅತ್ಯಾಚಾರ ವೆಸಗಿರುವ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪೋಷಕರಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿದೆ. ಅಲ್ಲದೇ ಲವ್ ಜಿಹಾದ್ ಆರೋಪವೂ ಕೇಳಿಬಂದಿದ್ದು, ಪೊಲೀಸರು ಸೂಕ್ತ ತನಿಖೆ ನಡೆಸಿ ಕಾಮುಕನಿಗೆ ಶಿಕ್ಷೆ ಕೊಡಿಸಬೇಕೆಂಬ ಕೂಗು ಹೆಚ್ಚಾಗಿದೆ.

    Live Tv
    [brid partner=56869869 player=32851 video=960834 autoplay=true]

  • ವಿಗ್ರಹ ಮಾಡೋದು ಹರಾಮ್, ಆದ್ರೇ ಜೀವನೋಪಾಯಕ್ಕೆ ಅದು ಅನಿವಾರ್ಯ: ಉಮರ್ ಷರೀಫ್

    ವಿಗ್ರಹ ಮಾಡೋದು ಹರಾಮ್, ಆದ್ರೇ ಜೀವನೋಪಾಯಕ್ಕೆ ಅದು ಅನಿವಾರ್ಯ: ಉಮರ್ ಷರೀಫ್

    ಬೆಂಗಳೂರು: ವಿಗ್ರಹ ಮಾಡೋದು ಹರಾಮ್ ಆದರೆ ಜೀವನೋಪಾಯಕ್ಕೆ ಅದು ಅನಿವಾರ್ಯವಾಗಿದೆ ಎಂದು ಮುಸ್ಲಿಂ ಮುಖಂಡ ಉಮರ್ ಷರೀಫ್ ಹೇಳಿದರು.

    ಮುಸ್ಲಿಮರು ತಯಾರಿಸುವ ವಿಗ್ರಹವನ್ನು ಹಿಂದೂಗಳು ಪ್ರತಿಷ್ಠಾಪನೆ ಮಾಡಬಾರದು ಎಂಬ ಅಭಿಯಾನಕ್ಕೆ ಪ್ರತಿಕ್ರಿಯಿಸಿದ ಅವರು, ನಾವು ವಿಗ್ರಹ ಆರಾಧನೆ ಒಪ್ಪಲ್ಲ. ವಿಗ್ರಹ ತಯಾರಿಸುವುದು ಕೂಡ ನಮ್ಮ ಧರ್ಮದ ಪ್ರಕಾರ ಹರಾಮ್. ಆದರೆ ಹೊಟ್ಟೆಪಾಡಿನ ವಿಚಾರಕ್ಕೆ ಬಂದರೆ ಸಂವಿಧಾನ ಪ್ರತಿಯೊಬ್ಬನಿಗೂ ದುಡಿದು ತಿನ್ನುವ ಹಕ್ಕು ನೀಡಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಹಲಾಲ್‌ ಆಯ್ತು ಈಗ ಮುಸ್ಲಿಮರು ಕೆತ್ತನೆ ಮಾಡಿದ ವಿಗ್ರಹ ಪ್ರತಿಷ್ಠಾಪಿಸದಂತೆ ಅಭಿಯಾನ

    ಪ್ರತಿಯೊಂದು ವಿಚಾರಕ್ಕೂ ಧರ್ಮ ತರೋದು ಸರಿಯಲ್ಲ. ಇದು ಒಳ್ಳೆಯ ಬೆಳವಣಿಗೆಯಲ್ಲ. ಜೀವನಕ್ಕೆ ಮತ್ತೆ ಮುಸ್ಲಿಮರು ಏನು ಮಾಡಬೇಕು? ಈ ಅಭಿಯಾನ ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

  • ಶ್ರೀ ರಾಮ ಕೋಟಿ ಬರೆದು ಅಯೋಧ್ಯೆಗೆ ಕಳುಹಿಸಲು ಮುಂದಾದ ಮುಸ್ಲಿಂ ನಿವೃತ್ತ ಶಿಕ್ಷಕ

    ಶ್ರೀ ರಾಮ ಕೋಟಿ ಬರೆದು ಅಯೋಧ್ಯೆಗೆ ಕಳುಹಿಸಲು ಮುಂದಾದ ಮುಸ್ಲಿಂ ನಿವೃತ್ತ ಶಿಕ್ಷಕ

    ಕೋಲಾರ: ಆತನದ್ದು ಧರ್ಮಕ್ಕೂ ಮಿಗಿಲಾದ ಭಕ್ತಿ, ಆತನ ಧಾರ್ಮಿಕ ಚಿಂತನೆ ಅದೆಷ್ಟೋ ಜನರಿಗೆ ಸ್ಫೂರ್ತಿ. ಮುಸ್ಲಿಂ ರಾಮ ಭಕ್ತನೊರ್ವ ಶ್ರೀರಾಮ ಕೋಟಿ ಬರೆಯುತ್ತಾ, ಶ್ರೀರಾಮನ ಜಪದಿಂದಲೇ ತಮ್ಮ ಜೀವನದ ಅಂತ್ಯಕ್ಕೆ ಬಂದು ಸೇರಿದ್ದಾರೆ.

    ಶ್ರೀರಾಮಕೋಟಿ ಬರೆಯುತ್ತಿರುವ ಶ್ರೀರಾಮನ ವೃದ್ಧ ಭಕ್ತ, ಶ್ರೀರಾಮಕೋಟಿ ಬರೆದು ಭದ್ರಾಚಲಂ, ಉತ್ತರ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಅಯೋಧ್ಯೆಯ ರಾಮ ದೇಗುಲಕ್ಕೆ ಅರ್ಪಿಸುವ ಕನಸು ಹೊತ್ತಿರುವ 96 ವರ್ಷದ ಮುಸ್ಲಿಂ ಧರ್ಮದ ಪಾಚಾಸಾಭ್.

    ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಮಾಗೊಂದಿ ಗ್ರಾಮದಲ್ಲಿ 1923 ರಲ್ಲಿ ಬಡ ಮುಸ್ಲಿಂ ಕುಟುಂಬದಲ್ಲಿ ಜನಿಸಿದ್ದರು. ಅವತ್ತಿಗೆ ಕನ್ನಡದಲ್ಲಿ 8ನೇ ತರಗತಿವರೆಗೆ ಹಾಗೂ 4ನೇ ತರಗತಿಯನ್ನು ಇಂಗ್ಲೀಷ್ ಭಾಷೆಯಲ್ಲಿ ವ್ಯಾಸಂಗ ಮಾಡಿದ್ದಾರೆ. ಹಿಂದೂಗಳ ಆರಾದ್ಯ ದೈವ ಕಲಿಯುಗದ ಮಹಾ ಪುರುಷ ಶ್ರೀರಾಮನ ಜಪ ಮಾಡುತ್ತಾ, ರಾಮನಿಗೆ ತಮ್ಮ ಭಕ್ತಿಯನ್ನ ಸಮರ್ಪಣೆ ಮಾಡುತ್ತಿದ್ದಾರೆ. ನಿವೃತ್ತಿಯಾದ ಬಳಿಕ ಪಿಂಚಣಿಯಲ್ಲಿ ಶ್ರೀರಾಮಕೋಟಿ ಬರೆದುಕೊಂಡು ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ.

    ಶಿಕ್ಷಕರಾಗಿದ್ದಾಗ 22 ವರ್ಷಗಳ ಹಿಂದೆ ಸ್ನೇಹಿತನೊಂದಿಗೆ ಭದ್ರಚಲಂ ದೇವಾಲಯಕ್ಕೆ ಹೋಗಿದ್ದಾಗ ಅಲ್ಲಿ ಒಬ್ಬ ಸಾಧು ಶ್ರೀರಾಮ ಕೋಟಿ ಬರೆಯುತ್ತಿದ್ದನ್ನು ಕಂಡು ವಿಚಾರಿಸಿದ ಇವರು ಹಾಗೆ ಬರೆದಲ್ಲಿ ನಿನಗೆ ಒಳ್ಳೆಯದಾಗುತ್ತದೆ ಎಂದಿದ್ದಾರೆ. ಅಂದಿನಿಂದ ನಾನು ಸಹ ಶ್ರೀರಾಮ ಕೋಟಿ ಬರೆಯುವುದನ್ನು ಪ್ರಾರಂಭಿಸಿ, ಪುಸ್ತಕದಲ್ಲಿ ಬರೆಯುವುದರ ಜೊತೆಗೆ ಎಕ್ಕದ ಎಲೆ, ಆಲದ ಎಲೆ, ಕಂಚಿನ ಎಲೆಯ ಮೇಲೂ ಶ್ರೀರಾಮ ಕೋಟಿ ಬರೆಯುತ್ತಿದ್ದಾರೆ. ಈಗ ಒಟ್ಟು 1 ಕೋಟಿ ಬರೆದಿದ್ದಾರೆ, ಅಕ್ಟೋಬರ್ 15ಕ್ಕೆ 1 ಕೋಟೆ ರಾಮಕೋಟೆಯನ್ನು ಬರೆದು ಮುಗಿಸಿದ್ದಾರೆ. ಇನ್ನು ರಾಮಕೋಟೆಯನ್ನು ಭದ್ರಚಲಂಗೆ ಅಥವಾ ಉತ್ತರ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಅಯೋಧ್ಯೆಗೆ ಯಾರಾದರೂ ಜನಪ್ರತಿನಿಧಿಗಳ ಕೈಯಲ್ಲಿ ಅರ್ಪಿಸುವ ಕನಸು ಇವರದ್ದು.

    ಸರ್ವಧರ್ಮ ಸಮನ್ವಯ ಸಾರುವುದೇ ನನ್ನ ಗುರಿಯಾಗಿದೆ ಈ ಗ್ರಾಮದಲ್ಲಿ ಒಂದು ರಾಮಾಂಜನೇಯ ದೇವಾಲಯ ನಿರ್ಮಾಣ ಮಾಡುವ ಕನಸು ಇದೆ. ಪಾಚಾಸಾಭ್ ಗಾಂಧೀಜಿ, ನೆಹರು, ಇಂದಿರಾಗಾಂದಿ, ಕೆ.ಸಿ.ರೆಡ್ಡಿ, ಎಂ.ವಿ.ಕೃಷ್ಣಪ್ಪ, ರವರೊಂದಿಗೆ ಒಡನಾಡಿಗಳಾಗಿದ್ದವರು. ಕೆ.ಸಿ.ರೆಡ್ಡಿ ಅವಧಿಯಲ್ಲಿ ಎಲ್ಲೆಡೆ ಮತ ಹಾಕುವುದು ಹೇಗೆ ಎಂಬುದನ್ನು ಕಲಿಸಿಕೊಟ್ಟವರಾಗಿದ್ದು, ಗೋವಾ ಲೋಕಾಸೇವಾದಿಂದ ನಡೆದ ಗೋವಾ ಸತ್ಯಾಗ್ರಹದಲ್ಲಿ ಕೃಷ್ಣಯ್ಯಶೆಟ್ಟಿರವರ ನೇತೃತ್ವದಲ್ಲಿ ಸ್ವಾತಂತ್ರಕ್ಕೆ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದು, ಅದರ ಸವಿ-ನೆನಪುಗಳನ್ನು ಇಂದಿಗೂ ಹಂಚಿಕೊಳ್ಳುತ್ತಾರೆ. ಜೀವನದಲ್ಲಿ ನೆಮ್ಮದಿ ಸಿಕ್ಕಿದೆ, ಆರೋಗ್ಯವಾಗಿದ್ದೇನೆ, ಸಕ್ಕರೆ, ಬಿಪಿ, ಆಗಲಿ ಯಾವುದೇ ಕಾಯಿಲೆ ಇಲ್ಲ, ಬೇರೆ ಅವ್ಯಾಸಗಳು ಇಲ್ಲ, ಮನಸ್ಸಿಗೆ ನೆಮ್ಮದಿ ಸಿಕ್ಕಿದೆ.

    ಈ ರಾಮ ಕೋಟಿ ಬರೆಯುವದರಿಂದ ನಾನು ಹೇಳಿದ ಮಾತು ನಡೆಯುತ್ತದೆ ಎನ್ನುತ್ತಾರೆ. ಸರ್ವರಿಗೂ ಒಳ್ಳೆಯದನ್ನು ಮಾಡುವ ಆಸೆ ಇರುವ ಪಾಚಾ ಸಾಭ್ ಬಗ್ಗೆ ಸ್ಥಳೀಯರು ಮೆಚ್ಚುಗೆ ಮಾತುಗಳನ್ನಾಡುತ್ತಾರೆ. ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿ ಶ್ರೀರಾಮನ ಮೇಲಿರುವ ಆಸೆ, ಭಕ್ತಿಯನ್ನ ಪ್ರತಿಯೊಬ್ಬರು ಮೆಚ್ಚುವಂತಂಹದ್ದಾಗಿದೆ. ಈತನ ಸಿದ್ಧಾಂತ, ಕೋಮು ಸೌಹಾರ್ಧತೆ ಅದೆಷ್ಟೋ ಜನರಿಗೆ ಸ್ಫೂರ್ತಿಯಾಗಿದೆ.

  • ಬೌದ್ಧ ಧರ್ಮ ಸ್ವೀಕರಿಸಿದ ಹೈದರಾಬಾದ್ ಮೂಲದ ಮುಸ್ಲಿಂ ವ್ಯಕ್ತಿ

    ಬೌದ್ಧ ಧರ್ಮ ಸ್ವೀಕರಿಸಿದ ಹೈದರಾಬಾದ್ ಮೂಲದ ಮುಸ್ಲಿಂ ವ್ಯಕ್ತಿ

    ಚಾಮರಾಜನಗರ: ಮುಸ್ಲಿಂ ವ್ಯಕ್ತಿಯೊಬ್ಬರು ಇಂದು ಚಾಮರಾಜನಗರದ ಸಾರನಾಥ ಬೌದ್ಧ ವಿಹಾರದಲ್ಲಿ ಬೌದ್ಧ ಧರ್ಮ ಸ್ವೀಕರಿಸಿ, ಭಿಕ್ಕು ದೀಕ್ಷೆ ಪಡೆದರು.

    ತೆಲಂಗಾಣದ ಹೈದರಾಬಾದ್ ನಿವಾಸಿ ಶಹವನಾಜ್ ಆಲಿ (40) ಬುದ್ಧನ ಪಂಚಶೀಲತತ್ವಗಳಿಗೆ ಆಕರ್ಷಿತರಾಗಿ ಬಂತೇ ಭೋಧಿದತ್ತ ಅವರ ಸಮ್ಮುಖದಲ್ಲಿ ಬೌದ್ಧ ಭಿಕ್ಕು ದೀಕ್ಷೆ ಪಡೆದರು. ಧಮ್ಮ ಕ್ರಾಂತಿ ಬಂತೇಜಿಯಾಗಿ ಮರು ನಾಮಕರಣಗೊಂಡರು. ಧಮ್ಮ ಕ್ರಾಂತಿ ಬಂತೇಜಿ ಅವರು ಆಟೋಮೊಬೈಲ್ಸ್ ನಲ್ಲಿ ಡಿಪ್ಲೊಮಾ ಪದವಿ ಪಡೆದಿದ್ದಾರೆ.

    ಈ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಕಳೆದ 10 ವರ್ಷದಿಂದ ಬೌದ್ಧ ಧರ್ಮವನ್ನು ಅಧ್ಯಯನ ಮಾಡಿದೆ. 5 ವರ್ಷದ ಹಿಂದೆ ನಾಗಪುರದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಧಮ್ಮ ದೀಕ್ಷೆ ಸ್ಥಳಕ್ಕೆ ಭೇಟಿ ನೀಡಿ ನಾನು ಗಡ್ಡವನ್ನು ತೆಗೆದೆ. ಅಂದಿನಿಂದಲೇ ಧ್ಯಾನವನ್ನು ಅಭ್ಯಸಿಸುತ್ತಿದ್ದೇನೆ. ಬೌದ್ಧ ಧರ್ಮ ಸ್ವೀಕಾರಕ್ಕೆ ಯಾರದೇ ವಿರೋಧವಿದ್ದರೂ ನನಗೆ ಭಯವಿಲ್ಲ. ಸಂವಿಧಾನಕ್ಕಾಗಿ, ಸಮಾಜಕ್ಕಾಗಿ ಜೀವನದಲ್ಲಿ ಶಾಂತಿ ಬಯಸಿ ಭಿಕ್ಕುವಾಗಿದ್ದೇನೆ ಎಂದು ತಿಳಿಸಿದರು.