Tag: ಮುಳುಬಾಗಿಲು

  • ಮಹಿಳಾ ತಹಶೀಲ್ದಾರ್‌ಗೆ ಎಷ್ಟು ಮದುವೆ ಆಗಿದೆ?- RTI ಮಾಹಿತಿ ಕೇಳಿದ ಕಾರ್ಯಕರ್ತ ಅರೆಸ್ಟ್

    ಮಹಿಳಾ ತಹಶೀಲ್ದಾರ್‌ಗೆ ಎಷ್ಟು ಮದುವೆ ಆಗಿದೆ?- RTI ಮಾಹಿತಿ ಕೇಳಿದ ಕಾರ್ಯಕರ್ತ ಅರೆಸ್ಟ್

    ಕೋಲಾರ: ಮಹಿಳಾ ಅಧಿಕಾರಿಯ ವೈಯಕ್ತಿಕ ವಿಚಾರಗಳ ಮಾಹಿತಿ ಕೇಳಿ ಆರ್‌ಟಿಐ (RTI) ಕಾರ್ಯಕರ್ತನೊಬ್ಬ ಪೇಚೆಗೆ ಸಿಲುಕಿದ ಘಟನೆ ಕೋಲಾರದಲ್ಲಿ (Kolar) ನಡೆದಿದೆ.

    ಕೋಲಾರ ಜಿಲ್ಲೆಯ ಮುಳಬಾಗಿಲು (Mulabagilu) ತಾಲೂಕಿನ ಮಂಡಿಕಲ್ ನಾಗರಾಜ್ ಬಂಧಿತ ಆರ್‌ಟಿಐ ಕಾರ್ಯಕರ್ತ. ಈತ ಮುಳಬಾಗಿಲು ತಹಶೀಲ್ದಾರ್ ಶೋಭಿತಾ ಅವರ ವೈಯಕ್ತಿಕ ವಿಚಾರಗಳ ಕುರಿತು ಆರ್‌ಟಿಐ ಅಡಿ ಮಾಹಿತಿ ಕೇಳಿದ್ದ. ಶೋಭಿತಾಗೆ ಇದುವರೆಗೂ ಎಷ್ಟು ಮದುವೆಯಾಗಿದೆ? (Marriage) ಯಾರೊಂದಿಗೆ ವಿಚ್ಛೇದನ ಆಗಿದೆ? ಸದ್ಯ ಯಾರ ಜೊತೆ ಸಂಸಾರ ಮಾಡುತ್ತಿದ್ದಾರೆ ಎಂಬೆಲ್ಲಾ ಮಾಹಿತಿ ಕೇಳಿದ್ದಾನೆ.

    ಅಷ್ಟೇ ಅಲ್ಲದೇ ಶೋಭಿತಾ ಅವರಿಗೆ ಎಲ್ಲಿ ಮದುವೆಯಾಗಿದೆ. ಲಗ್ನ ಪತ್ರಿಕೆ, ಕಲ್ಯಾಣ ಮಂಟಪದ ವಿವರ ಕೊಡಿ. ಪತಿಯ ಜೊತೆ ವಿಚ್ಛೇದನ ಆಗಿದಿಯಾ ಇಲ್ಲವಾ? ಆಗಿದ್ದರೇ ಕಾರಣ ಕೊಡಿ ಹಾಗೂ ಅವರೆಲ್ಲಾ ಯಾವ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಎಲ್ಲಾ ಮಾಹಿತಿಯನ್ನು ತುರ್ತಾಗಿ ನೀಡುವಂತೆ ಆರ್‌ಟಿಐಗೆ ಸಲ್ಲಿಸಿದ್ದಾನೆ. ಇದನ್ನೂ ಓದಿ: ಸುವರ್ಣಸೌಧದಲ್ಲಿ ಈ ವರ್ಷ ಚೆನ್ನಮ್ಮ, ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ- ಬೊಮ್ಮಾಯಿ

    ಮಾಹಿತಿ ಹಕ್ಕು ಅಧಿನಿಯಮದಡಿ ಅರ್ಜಿ ಸಲ್ಲಿಸಿ ಆರ್‌ಟಿಐ ಕಾರ್ಯಕರ್ತ ನಾಗರಾಜ್‍ನನ್ನು ಇದೀಗ ಮುಳಬಾಗಿಲು ನಗರ ಪೊಲೀಸರು ಬಂಧಿಸಿದ್ದಾರೆ. ಘಟನೆಗೆ ಸಂಬಂಧಿಸಿ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು. ಇದನ್ನೂ ಓದಿ: ರಾಹುಲ್‌, ಸೋನಿಯಾ ಗಾಂಧಿ ಅವರ ತ್ಯಾಗ ಬಹಳಷ್ಟಿದೆ: ಮಲ್ಲಿಕಾರ್ಜುನ ಖರ್ಗೆ

    Live Tv
    [brid partner=56869869 player=32851 video=960834 autoplay=true]

  • ಮುಳುಬಾಗಿಲಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಯೇ ಇಲ್ಲ!

    ಮುಳುಬಾಗಿಲಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಯೇ ಇಲ್ಲ!

    ಕೋಲಾರ: ಮುಳುಬಾಗಿಲು ಮೀಸಲು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಜಿ.ಮಂಜುನಾಥ್ (ಕೊತ್ತೂರು ಮಂಜುನಾಥ್) ಅವರ ನಾಮಪತ್ರ ತಿರಸ್ಕೃತಗೊಂಡಿದೆ.

    ನಕಲಿ ಜಾತಿ ಪ್ರಮಾಣ ಪತ್ರ ನಿಡಿದ್ದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಮಂಜುನಾಥ್ ಅವರ ನಾಮಪತ್ರವನ್ನು ಅಸಿಂಧುಗೊಳಿಸಿದೆ. ಕೋಲಾರ ಸಂಸದ ಮುನಿಯಪ್ಪ ಪುತ್ರಿ ನಂದಿನಿ ಕೂಡ ಮುಳುಬಾಗಿಲು ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದರು. ಮಂಜುನಾಥ್ ನಾಮಪತ್ರ ತಿರಸ್ಕೃತಗೊಂಡ ಬೆನ್ನಲ್ಲೆ ನಂದಿನಿ ನಾಮಪತ್ರವನ್ನು ವಾಪಸ್ ಪಡೆದ ಕಾರಣ ಈಗ ಮುಳುಬಾಗಿಲು ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯೇ ಇಲ್ಲದಂತಾಗಿದೆ.

    ಮುಳಬಾಗಿಲು ಕ್ಷೇತ್ರದ ಶಾಸಕ ಜಿ.ಮಂಜುನಾಥ್ ಜಾತಿ ಪ್ರಮಾಣಪತ್ರ ನಕಲೆಂದು ಆರೋಪಿಸಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠವು ಜಾತಿ ಪ್ರಮಾಣಪತ್ರವನ್ನು ಅಸಿಂಧು ಎಂದು ಬುಧವಾರ ತೀರ್ಪು ನೀಡಿತ್ತು.

    ನಂದಿನಿಯವರು ನಾಮಪತ್ರವನ್ನು ವಾಪಸ್ ಪಡೆದಿದ್ದು ಯಾಕೆ ಎನ್ನುವ ಕಾರಣ ತಿಳಿದು ಬಂದಿಲ್ಲ.

    ಏನಿದು ಪ್ರಕರಣ?
    ಮುಳಬಾಗಿಲು ಕ್ಷೇತ್ರವು ಪರಿಶಿಷ್ಟ ಜಾತಿಗೆ ಮೀಸಲಾಗಿದ್ದು ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿನ ಬುಡ್ಗ ಜಂಗಮ ಜಾತಿಗೆ ಸೇರಿದ್ದೇನೆ ಎಂದು 2013ರ ಚುನಾವಣೆ ಸಂದರ್ಭದಲ್ಲಿ ಮಂಜುನಾಥ್ ಜಾತಿ ಪ್ರಮಾಣ ಪತ್ರ ಸಲ್ಲಿಸಿದ್ದರು. ಬುಡ್ಗ ಜಂಗಮ ಅಂತಾ ಜಾತಿಯೇ ಇಲ್ಲ ಮಂಜುನಾಥ್ ಅವರಿಗೆ ಹೇಗೆ ಜಾತಿ ಪ್ರಮಾಣ ಪತ್ರ ನೀಡಲು ಸಾಧ್ಯ ಎಂದು ಮುಳುಬಾಗಿಲಿನ ಜೆಡಿಎಸ್ ಮುಖಂಡ ಮತ್ತು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮುನಿ ಆಂಜಿನಪ್ಪ ಮತ್ತು ಮುಖಂಡರಾದ ಪಂಡಿತ್ ಮುನಿವೆಂಕಟಪ್ಪ 2013ರಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದರು.

  • ಕೋಲಾರದಲ್ಲಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆ- ಕೋಟ್ಯಾಂತರ ರೂ. ಮೌಲ್ಯದ ಬೆಳೆ ನಾಶ

    ಕೋಲಾರದಲ್ಲಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆ- ಕೋಟ್ಯಾಂತರ ರೂ. ಮೌಲ್ಯದ ಬೆಳೆ ನಾಶ

    ಕೋಲಾರ: ಬರದ ಜಿಲ್ಲೆ ಕೋಲಾರದಲ್ಲಿ ಕಳೆದೆರಡು ದಿನಗಳಿಂದ ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ, ರೈತರ ಬದುಕೇ ಮೂರಾಬಟ್ಟೆಯಾಗಿದೆ. ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಬೆಳೆ, ಬಿರುಗಾಳಿ ಸಹಿತ ಮಳೆಗೆ ಕೊಚ್ಚಿಹೋಗಿದೆ.

    ಜಿಲ್ಲೆಯ ನಂಬಿಗಾನಹಳ್ಳಿ, ಆನೇಪುರ, ಶಕ್ಲಿಪುರ, ಚಿಕ್ಕಸಬ್ಬೇನಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿನ ನೂರಾರು ಎಕರೆಯಲ್ಲಿ ಬೆಳೆದಿದ್ದ ಟೊಮ್ಯಾಟೋ, ಕ್ಯಾಪ್ಸಿಕಂ, ಬೀನ್ಸ್, ಮಾವಿನಕಾಯಿ, ಬಾಳೆ ತೋಟ, ಹಿಪ್ಪುನೇರಳೆ ಬೆಳೆ ನೆಲಸಮವಾಗಿದೆ.

    ನಂಬಿಗಾನಹಳ್ಳಿ ಕಾಲೋನಿಯಲ್ಲಿ ಐದಾರು ಮನೆಗಳ ಹೆಂಚುಗಳು ಹಾಗೂ ಸಿಮೆಂಟ್ ಶೀಟ್‍ಗಳು ಹಾರಿಹೋಗಿವೆ. ಇನ್ನೂ ಕೆಲವು ಕಡೆ ಲೈಟ್ ಕಂಬಗಳು, ನೂರಾರು ಮರಗಳು ನೆಲ್ಲಕ್ಕುರುಳಿವೆ. ಇತ್ತ ಜಿಲ್ಲೆಯ ಮುಳಬಾಗಿಲು ತಾಲೂಕಿನ ಅಪ್ಪೇನಹಳ್ಳಿಯಲ್ಲಿ ಮನೆ ಗೋಡೆ ಕುಸಿದು ಒರ್ವ ಸಾವನ್ನಪ್ಪಿ, ಮತ್ತೊರ್ವನಿಗೆ ಗಂಭೀರ ಗಾಯವಾಗಿದೆ.