Tag: ಮುಳಗುಂದ

  • Gadag | ತಂದೆಯಿಂದಲೇ ಅಪ್ರಾಪ್ತ ಮಗಳ ಮೇಲೆ ನಿರಂತರ ಅತ್ಯಾಚಾರ ಆರೋಪ

    Gadag | ತಂದೆಯಿಂದಲೇ ಅಪ್ರಾಪ್ತ ಮಗಳ ಮೇಲೆ ನಿರಂತರ ಅತ್ಯಾಚಾರ ಆರೋಪ

    ಗದಗ: ತಂದೆಯೇ ಅಪ್ರಾಪ್ತ ಮಗಳ ಮೇಲೆ ನಿರಂತರ ಅತ್ಯಾಚಾರ ನಡೆಸಿರುವ ಪೈಶಾಚಿಕ ಘಟನೆ ಗದಗ (Gadag) ಜಿಲ್ಲೆಯಲ್ಲಿ ನಡೆದಿದೆ.

    16 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಸುಮಾರು 55 ವರ್ಷದ ತಂದೆ ಕಳೆದ ಒಂದು ವರ್ಷದಿಂದ ನಿರಂತರ ಅತ್ಯಾಚಾರ ನಡೆಸಿರುವ ಆರೋಪ ಕೇಳಿ ಬಂದಿದೆ. ಈ ಘಟನೆ ಗದಗ ಜಿಲ್ಲೆಯ ಮುಳಗುಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಆರೋಪಿ ತಂದೆ ರಮೇಶ್ ಮೇಲೆ ಈಗ ಪೋಕ್ಸೊ (POCSO) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಅಪ್ರಾಪ್ತ ಬಾಲಕಿ ಗರ್ಭಿಣಿ ಆಗಿದ್ದು, ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಮುಂಬೈ ದಾಳಿಕೋರ ಅಮೆರಿಕದಿಂದ ಗಡಿಪಾರು – ನಾಳೆ ಬೆಳಗ್ಗೆ ಭಾರತಕ್ಕೆ ರಾಣಾ

    ಕಳೆದ ಒಂದು ವರ್ಷದಿಂದ ಮನೆಯಲ್ಲಿ ಯಾರೂ ಇಲ್ಲದ ವೇಳೆ ಅತ್ಯಾಚಾರ ನಡೆಸುತ್ತಿದ್ದ. ಅತ್ಯಾಚಾರದ ನಂತರ ಯಾರಿಗೂ ಹೇಳದಂತೆ ಬೆದರಿಕೆ ಹಾಕುತ್ತಿದ್ದ. ಅಕಸ್ಮಾತ್ ಯಾರ ಮುಂದಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ ಎಂಬ ಆರೋಪ ಸಂತ್ರಸ್ತೆ ಬಾಲಕಿಯದ್ದಾಗಿದೆ. ಇದನ್ನೂ ಓದಿ: ಇನ್‌ಸ್ಟಾ ಲವ್ | ಎರಡನೇ ಮದುವೆಯಾದ ಪತ್ನಿ – ವಿಡಿಯೋ ನೋಡಿ ಮೊದಲ ಪತಿ ಶಾಕ್

    ಸದ್ಯ ಆರೋಪಿ ತಂದೆ ರಮೇಶ್‌ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಡಿಎನ್‌ಎ ಪರೀಕ್ಷೆ ಒಳಪಡಿಸಿದ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುತ್ತದೆ. ಈ ಕುರಿತು ಗದಗ ಜಿಲ್ಲೆಯ ಮುಳಗುಂದ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಡೀಸೆಲ್‌ ಬೆಲೆ ಹೆಚ್ಚಳ – ಪ್ರತಿ ವಿದ್ಯಾರ್ಥಿಗೆ 500-600 ರೂ. ಹೆಚ್ಚುವರಿ ಹೊರೆ

  • ಬಸ್ ಹರಿದು ಸ್ಕೂಟರ್ ಸವಾರ ಸ್ಥಳದಲ್ಲೇ ಸಾವು

    ಬಸ್ ಹರಿದು ಸ್ಕೂಟರ್ ಸವಾರ ಸ್ಥಳದಲ್ಲೇ ಸಾವು

    ಗದಗ: ಸ್ಕೂಟರ್ ಅತೀ ವೇಗದಿಂದ ನಿಯಂತ್ರಣ ತಪ್ಪಿ ಕೆಳಗೆ ಬಿದ್ದ ಬೈಕ್ ಸವಾರನ ಮೇಲೆ ಸರ್ಕಾರಿ ಬಸ್ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಗರದ ಮುಳಗುಂದ (Mulagund)  ನಾಕಾ ಬಳಿ ಬಸ್ ಡಿಪೋ ಎದುರು ನಡೆದಿದೆ.

    ಗದಗ (Gadag) ತಾಲೂಕಿನ ಬೆನಕನಕೊಪ್ಪ ಗ್ರಾಮದ ನಿವಾಸಿ ಈರಪ್ಪ ಕಣಗಿನಹಾಳ (50) ಮೃತ ಸವಾರ. ಇದನ್ನೂ ಓದಿ: ಫೆಸ್ಟಿಸೈಡ್ ಶಾಪ್ ಮಾಲೀಕನ ಯಡವಟ್ಟಿಗೆ ಹೂದೋಟವೇ ಸುಟ್ಟು ಕರಕಲು – ರೈತನಿಗೆ ಭಾರೀ ನಷ್ಟ

    ಈರಪ್ಪ ಅವರು ಗದಗ ಮಾರ್ಕೆಟ್ ಕಡೆಯಿಂದ ಮುಳಗುಂದ ನಾಕಾ ಕಡೆಗೆ ಸ್ಕೂಟರ್‌ನಲ್ಲಿ ಬರುತ್ತಿದ್ದರು. ಏಕಾಏಕಿ ಸ್ಕೂಟರ್ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದು, ಹಿಂದಿನಿAದ ಬಂದ ಬಸ್ ಅವರ ತಲೆ ಮೇಲೆ ಹರಿದಿದೆ. ಇದನ್ನೂ ಓದಿ: ಫ್ಯಾಮಿಲಿ ಜೊತೆ ಹೋಳಿ ಹಬ್ಬ ಆಚರಿಸಿದ ಕತ್ರಿನಾ ಕೈಫ್

    ಬಸ್ ಗದಗದಿಂದ ಹಾನಗಲ್ ಕಡೆ ಹೊರಟಿದ್ದು, ಬಸ್ ಹರಿದ ಪರಿಣಾಮ ತಲೆ ಭಾಗ ಗುರುತು ಸಿಗದಂತೆ ಛಿದ್ರ ಛಿದ್ರವಾಗಿದೆ. ಈ ಭಯಾನಕ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ರನ್ಯಾಗೇ ಜೈಲೇ ಗತಿ -ಜಾಮೀನು ಅರ್ಜಿ ವಜಾ

    ಗದಗ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗದಗ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿ, ಹಣ ಇರುವ ಬ್ಯಾಗ್ ಹಿಂತಿರುಗಿಸಿ ಮಾನವೀಯತೆ ಮೆರೆದ ನಿರ್ವಾಹಕಿ

    ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿ, ಹಣ ಇರುವ ಬ್ಯಾಗ್ ಹಿಂತಿರುಗಿಸಿ ಮಾನವೀಯತೆ ಮೆರೆದ ನಿರ್ವಾಹಕಿ

    ಗದಗ: ನಿರ್ವಾಹಕಿಯೊಬ್ಬರು ಲಕ್ಷಾಂತರ ರೂಪಾಯಿ ಮೌಲ್ಯದ ಬೆಳ್ಳಿ, ಬಂಗಾರ, ಹಣ, ಇರುವ ಬ್ಯಾಗ್ ಮರಳಿ ನೀಡಿ ಮಾನವೀಯತೆ ಮೆರೆದ ಘಟನೆ ಗದಗ (Gadaga) ಜಿಲ್ಲೆಯ ನಗರದ ಹೊಸ ಬಸ್ ನಿಲ್ದಾಣದಲ್ಲಿ ನಡೆದಿದೆ.

    ಗದಗ ತಾಲೂಕಿನ ಮುಳಗುಂದ (Mulgund) ಮೂಲದ ಶಕಿಲಾಬಾನು ಎಂಬ ಮಹಿಳೆ, ಬಸ್ ನಲ್ಲಿ ತನ್ನ ಬ್ಯಾಗ್ ಮರೆತು ಹೋಗಿದ್ದಳು. ಹಾವೇರಿ (Haveri) ಜಿಲ್ಲೆ ಬ್ಯಾಡಗಿ ಡಿಪೋ ನಿರ್ವಾಹಕಿ ಅನಸೂಯಾ ಎಸ್.ಎಮ್ ಎಂಬುವರು ಬ್ಯಾಗ್ ಮರಳಿ ನೀಡಿ ಮಾನವೀಯತೆ ಮೆರೆದಿದ್ದಾರೆ. ಈ ಬಸ್ ಬ್ಯಾಡಗಿನಿಂದ ಗದಗ ಮಾರ್ಗವಾಗಿ ಬಾದಾಮಿಗೆ ಹೊರಟಿತ್ತು. ಮಹಿಳೆ ಮುಳಗುಂದದಲ್ಲಿ ಹತ್ತಿ ಗದಗ ಹೊಸ ಬಸ್ ನಿಲ್ದಾಣದಲ್ಲಿ ಇಳಿದುಕೊಂಡಿದ್ದಾಳೆ. ಇದನ್ನೂ ಓದಿ: ಗಂಡನಿಗೆ ಪ್ರತಿನಿತ್ಯ ಊಟದಲ್ಲಿ ವಿಷ ಬೆರೆಸಿ ಕೊಡ್ತಿದ್ದ ಖತರ್ನಾಕ್ ಸುಂದರಿ – ಸ್ಲೋ ಪಾಯ್ಸನ್ ಯಾವುದು?

    ಈ ಬ್ಯಾಗ್‌ನಲ್ಲಿ ಸುಮಾರು 30 ಗ್ರಾಂ ಬಂಗಾರದ ಆಭರಣಗಳು, 100 ಗ್ರಾಂ ಬೆಳ್ಳಿ ಆಭರಣಗಳು ಹಾಗೂ 2,160 ರೂ. ಹಣ ಹಾಗೂ ಬ್ಲೂಟುತ್ ಸೇರಿದಂತೆ ಇತರೆ ವಸ್ತುಗಳು ಇದ್ದವು. ಇದನ್ನು ನೋಡಿದ ನಿರ್ವಾಹಕಿ ಅನಸೂಯಾ ನಯಾಪೈಸೆ ಮುಟ್ಟದೇ, ಗದಗ ಬಸ್ ನಿಲ್ದಾಣದ ಅಧಿಕಾರಿ ಶಿವಾನಂದ ಸಂಗಣ್ಣವರ್ ಹಾಗೂ ಇತರೆ ಅಧಿಕಾರಿ ಸಮ್ಮುಖದಲ್ಲಿ ಬಂಗಾರದ ಬ್ಯಾಗ್ ತಲುಪಿಸಿದ್ದಾರೆ. ನಂತರ ಬ್ಯಾಗ್‌ನಲ್ಲಿರುವ ಪಾನ್ ಕಾರ್ಡ್ ಗುರುತಿನ ಚೀಟಿ ಮೂಲಕ ಬ್ಯಾಗ್ ಕಳೆದುಕೊಂಡ ಮಹಿಳೆ ವಿಳಾಸ ಪತ್ತೆಹಚ್ಚಿದ್ದಾರೆ. ಇದನ್ನೂ ಓದಿ:  `ಕರಿಮಣಿ ಮಾಲೀಕ ನೀನಲ್ಲ’ ಅಂತ ಆಸ್ತಿಗಾಗಿ ಗಂಡನ ಕೊಲೆ – ಇಬ್ಬರು ಪ್ರಿಯಕರರು ಸೇರಿ ಪತ್ನಿಯೂ ಅಂದರ್

    ಬೆಟಗೇರಿ ಬಡಾವಣೆ ಪೊಲೀಸರು, ಗದಗ ಬಸ್ ನಿಲ್ದಾಣ ಅಧಿಕಾರಿಗಳ ಸಮ್ಮುಖದಲ್ಲಿ ಫಲಾನುಭವಿಗೆ ಬ್ಯಾಗ್ ಮರಳಿಸಿದರು. ಮರಳಿ ಸಿಕ್ಕ ಬಂಗಾರ, ಬೆಳ್ಳಿ, ಹಣ ಇರುವ ಬ್ಯಾಗ್ ಕಂಡು ಫಲಾನುಭವಿಗಳು ಸಂತೋಷ ಪಟ್ಟರು. ನಿರ್ವಾಹಕಿ ಅನಸೂಯಾ ಹಾಗೂ ಚಾಲಕ ಸೊಲಂಕಿ ಅವರ ಮಾನವೀಯತೆಯ ಶ್ಲಾಘನೀಯ ಕಾರ್ಯಕ್ಕೆ ಈಗ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಗದಗ ಹಾಗೂ ಹಾವೇರಿ ಜಿಲ್ಲೆಯ ಸಾರಿಗೆ ಅಧಿಕಾರಿಗಳು ನಿರ್ವಾಹಕ, ನಿರ್ವಾಹಕಿಗೆ ಬೆನ್ನು ತಟ್ಟಿ ಪ್ರೋತ್ಸಾಹಿದ್ದಾರೆ. ಇದನ್ನೂ ಓದಿ: ಹೊನ್ನಾವಡದ 11 ಎಕರೆ ಮಾತ್ರ ವಕ್ಫ್ ಜಾಗ, ಗೆಜೆಟ್ ನೋಟಿಫಿಕೇಷನ್‌ನಲ್ಲಿ ತಪ್ಪಾಗಿ ನಮೂದಾಗಿದೆ: ಎಂ.ಬಿ ಪಾಟೀಲ್‌

  • ಕಾಲು ಜಾರಿ ರೈಲಿನಡಿ ಸಿಲುಕಿ ಮೃತಪಟ್ಟಿದ್ದ ಯೋಧನ ಅಂತ್ಯಕ್ರಿಯೆ

    ಕಾಲು ಜಾರಿ ರೈಲಿನಡಿ ಸಿಲುಕಿ ಮೃತಪಟ್ಟಿದ್ದ ಯೋಧನ ಅಂತ್ಯಕ್ರಿಯೆ

    ಗದಗ: ಕರ್ತವ್ಯಕ್ಕೆ ತೆರಳುವ ವೇಳೆ ರೈಲಿನಡಿ ಸಿಲುಕಿ ಸಾವನ್ನಪ್ಪಿ ಯೋಧರೊಬ್ಬರ ಅಂತ್ಯಕ್ರಿಯೆ ಇಂದು ಗದಗ ತಾಲೂಕಿನ ಮುಳಗುಂದ ಪಟ್ಟಣದಲ್ಲಿ ನೆರವೇರಿತು.

    ಮುಳಗುಂದ ಪಟ್ಟಣದಲ್ಲಿ ನಿವಾಸಿ ಬಸವರಾಜ್ ಹಿರೇಮಠ ಮೃತ ಯೋಧ. ಬಸವರಾಜ್ ಅವರು ರಜೆಗೆಂದು 15 ದಿನಗಳ ಕಾಲ ಊರಿಗೆ ಬಂದಿದ್ದರು. ಎರಡು ದಿನಗಳ ಹಿಂದೆಯಷ್ಟೇ ಮರಳಿ ಕರ್ತವ್ಯಕ್ಕೆ ಹಾಜರಾಗಲು ಮಹಾರಾಷ್ಟ್ರದ ಪುಣೆಗೆ ತೆರಳಿದ್ದರು. ಈ ವೇಳೆ ಪುಣೆಯಲ್ಲಿ ರೈಲು ಇಳಿಯುವ ವೇಳೆ ಕಾಲು ಜಾರಿ ರೈಲಿನಲ್ಲಿ ಸಿಲುಕಿ ಸಾವನ್ನಪ್ಪಿದ್ದರು.

    ಮೃತ ಯೋಧ ಬಸವರಾಜ್ ಅವರು 2005ರಲ್ಲಿ ಭಾರತೀಯ ಸೇನೆಗೆ ಸೇರಿದ್ದರು. ಸದ್ಯ ಅವರು ಪುಣೆ ಸೇನಾ ಸಿಗ್ನಲ್‍ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ರಜೆ ಮುಗಿಸಿ ಮತ್ತೆ ಕರ್ತವ್ಯಕ್ಕೆ ಹಾಜರಾಗಲು ತೆರಳುತ್ತಿರುವಾಗ ದುರ್ಘಟನೆ ನಡೆದಿದೆ. ಮೃತ ಬಸವರಾಜ್ ನಿವೃತ್ತಿಯಾಗಲು ಕೇವಲ 9 ತಿಂಗಳು ಮಾತ್ರ ಬಾಕಿ ಉಳಿದಿತ್ತು. ಪ್ರತಿಬಾರಿ ಕರ್ತವ್ಯಕ್ಕೆ ತೆರಳುವ ವೇಳೆ ಮನೆಯವರಿಗೆಲ್ಲರಿಗೂ ಹೋಗಿ ಬರುತ್ತೇನೆ ಅಂತ ಹೇಳಿ ಹೋಗುತ್ತಿದ್ದರು. ಆದರೆ ಈ ಬಾರಿ ಹೋಗುತ್ತೇನೆ ಅಂತ ಹೇಳಿ ಹೋದವರು ಮತ್ತೆ ಬರುವಾಗ ಶವವಾಗಿ ಬಂದಿದ್ದಾರೆ ಎಂದು ಬಸವರಾಜ್ ಅವರ ತಾಯಿ ಅನ್ನಪೂರ್ಣ ಕಣ್ಣೀರಿಟ್ಟಿದ್ದಾರೆ.

    ಮುಳಗುಂದ ಪಟ್ಟಣಕ್ಕೆ ಯೋಧ ಬಸವರಾಜ್ ಅವರ ಪಾರ್ಥಿವ ಶರೀರ ಆಗಮಿಸುತ್ತಿದ್ದಂತೆ ಇಡೀ ಊರಿನ ಜನರ ಶೋಕ ಸಾಗರದಲ್ಲಿ ಮುಳುಗಿತ್ತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಾರ್ಥಿವ ಶರೀರವನ್ನು ಮೆರವಣಿಗೆ ಮಾಡಿ, ನಂತರ ಶಾಲಾ ಮೈದಾನದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕಿಡಲಾಗಿತ್ತು.

    ಬಸವರಾಜ್ ಅವರು ಪತ್ನಿ ಸಾವಿತ್ರಿ ಅವರನ್ನು ರಾಜ್ಯದ ಉನ್ನತ ಹುದ್ದೆಗೆ ಸೇರಿಸಬೇಕು. ಅವರು ನಾಡಿನ ಸೇವೆಯನ್ನು ಮಾಡಬೇಕು ಎಂದು ಅವರನ್ನು ಸ್ಪರ್ಧಾತ್ಮ ಪರೀಕ್ಷೆಗೆ ಸಿದ್ಧಪಡಿಸಿದ್ದರು. ಆದರೆ ಈಗ ಎಲ್ಲವೂ ನಿಮ್ಮ ಜೊತೆ ಹೋಯುತಲ್ಲ ಅಂತ ಪತ್ನಿ ಕಣ್ಣೀರಾದರು. ಬಸವರಾಜ್ ಅವರು ದೇಶಸೇವೆ ನಿವೃತ್ತಿ ಬಳಿಕ ಕೃಷಿಕನಾಗಿ ಭೂತಾಯಿ ಸೇವೆ ಮಾಡುವುದಾಗಿ ಹೇಳಿದ್ದರು. ಕುಟುಂಬದ ಬಗ್ಗೆ ಹತ್ತು ಹಲವು ಕನಸುಗಳನ್ನು ಕಂಡಿದ್ದ ಎಂದು ತಂದೆ ಶಂಕ್ರಯ್ಯ ಹೇಳಿದ್ದಾರೆ.

    ಯೋಧ ಬಸವರಾಜ್ ಅವರ ಅಂತಿಮ ದರ್ಶನಕ್ಕೆ ಶಾಸಕ ಎಚ್.ಕೆ.ಪಾಟೀಲ್, ಎಸಿ ರಾಯಪ್ಪ, ತಹಶೀಲ್ದಾರ್ ಶ್ರೀನಿವಾಸಮೂರ್ತಿ ಹಾಗೂ ಪೊಲೀಸ್ ಅಧಿಕಾರಿಗಳು ಗೌರವ ವಂದನೆ ಸಲ್ಲಿಸಿದರು. ಬಳಿಕ ಸರ್ಕಾರಿ ಸಕಲ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಿತು.