Tag: ಮುಲಾಯಂ ಸಿಂಗ್

  • ಮಾವ ಮುಲಾಯಂ ಸಿಂಗ್ ನಿಧನ ನಂತ್ರ ಮೈನ್‍ಪುರಿಯಿಂದ ಡಿಂಪಲ್ ಯಾದವ್ ಕಣಕ್ಕೆ

    ಮಾವ ಮುಲಾಯಂ ಸಿಂಗ್ ನಿಧನ ನಂತ್ರ ಮೈನ್‍ಪುರಿಯಿಂದ ಡಿಂಪಲ್ ಯಾದವ್ ಕಣಕ್ಕೆ

    ಲಕ್ನೋ: ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ (Akhilesh Yadav) ಅವರ ಪತ್ನಿ ಡಿಂಪಲ್ ಯಾದವ್ (Dimple Yadav) ತಮ್ಮ ಮಾವ ಮುಲಾಯಂ ಸಿಂಗ್ ಯಾದವ್ (Mulayam Singh Yadav) ಅವರ ನಿಧನದ ನಂತರ ತೆರವಾದ ಮೈನ್‍ಪುರಿ (Mainpuri) ಲೋಕಸಭಾ (Lok Sabha) ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.

    ಡಿಸೆಂಬರ್ 5 ರಂದು ಹಲವು ರಾಜ್ಯಗಳಲ್ಲಿ ಐದು ವಿಧಾನಸಭಾ ಕ್ಷೇತ್ರಗಳ ಚುನಾವಣೆ ಜೊತೆಗ ಸಂಸದೀಯ ಸ್ಥಾನಕ್ಕೆ ಸ್ಪರ್ಧೆ ನಡೆಯಲಿದೆ. ಡಿಸೆಂಬರ್ 8 ರಂದು ಗುಜರಾತ್ ಮತ್ತು ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆಯ ಫಲಿತಾಂಶದ ಜೊತೆಗೆ ಈ ಚುನಾವಣೆಯ ಮತ ಎಣಿಕೆ ನಡೆಯಲಿದೆ. ಇದನ್ನೂ ಓದಿ: ಮಾಲ್ಡೀವ್ಸ್‌ನಲ್ಲಿ ಭೀಕರ ಅಗ್ನಿ ದುರಂತ – 9 ಮಂದಿ ಭಾರತೀಯರು ಸಾವು

    ಎರಡು ಬಾರಿ ಲೋಕಸಭಾ ಸದಸ್ಯರಾಗಿ ಕನೌಜ್‍ನಿಂದ ಡಿಂಪಲ್ ಯಾದವ್ ಸ್ಪರ್ಧಿಸಿದ್ದರು. ಆದರೆ 2019ರಲ್ಲಿ ಸೋತಿದ್ದರು. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮುಲಾಯಂ ಸಿಂಗ್ ಯಾದವ್ ಅವರು ಕಳೆದ ತಿಂಗಳು ನಿಧನರಾದರು. ಆದರೆ 2019ರಲ್ಲಿ ಮಣಿಪುರಿ ಕ್ಷೇತ್ರವನ್ನು ಕೇವಲ 94,000 ಮತಗಳ ಅಂತರದಿಂದ ಮುಲಾಯಂ ಸಿಂಗ್ ಯಾದವ್ ಅವರು ಗೆದ್ದಿದ್ದರು.

    ಮೈನ್‍ಪುರಿ ಯಾವಾಗಲೂ ಸಮಾಜವಾದಿ ಪಕ್ಷದ ಭದ್ರಕೋಟೆಯಾಗಿದ್ದು, ಇಲ್ಲಿಂದ 1996ರಲ್ಲಿ ಮುಲಾಯಂ ಸಿಂಗ್ ಅವರು ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾದರು. ಅವರು 2004, 2009 ಮತ್ತು 2019 ಮೂರು ಬಾರಿ ಸ್ಪರ್ಧಿಸಿ ಯಶಸ್ವಿಯಾಗಿ ಜಯ ಸಾಧಿಸಿದ್ದರು. 2014ರ ಉಪಚುನಾವಣೆಯಲ್ಲಿ ತೇಜ್ ಪ್ರತಾಪ್ ಯಾದವ್ ಈ ಕ್ಷೇತ್ರದಿಂದ ಗೆದಿದ್ದರು. ಇದನ್ನೂ ಓದಿ: ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆ- ವಿವಾದಿತ ವಸ್ತುವಿನ ರಕ್ಷಣೆ ವಿಸ್ತರಣೆಗೆ ಮನವಿ

    Live Tv
    [brid partner=56869869 player=32851 video=960834 autoplay=true]

  • ಮುಲಾಯಂ ಸಿಂಗ್ ಯಾದವ್ ನಿಧನ ನೋವು ತಂದಿದೆ: ಸಿಎಂ ಇಬ್ರಾಹಿಂ

    ಮುಲಾಯಂ ಸಿಂಗ್ ಯಾದವ್ ನಿಧನ ನೋವು ತಂದಿದೆ: ಸಿಎಂ ಇಬ್ರಾಹಿಂ

    ಬೆಂಗಳೂರು: ಮುಲಾಯಂ ಸಿಂಗ್ ಯಾದವ್ (Mulayam Singh Yadav) ನಿಧನ ನೋವು ತಂದಿದೆ. ಅವರ ಆದರ್ಶಗಳನ್ನು ಜೀವಂತ ಇಡೋ ದೊಡ್ಡ ಸಮುದಾಯವನ್ನೇ ದೇಶದಲ್ಲಿ ಸೃಷ್ಟಿಸಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ (C M Ibrahim) ಹೇಳಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಕೂಡಾ ಅವರ ಅಂತಿಮ ಸಂಸ್ಕಾರದಲ್ಲಿ ಭಾಗವಹಿಸುತ್ತೇನೆ. ಇಂದು ಸಂಜೆ ಲಕ್ನೋಗೆ ಹೋಗಿ ನಾಳೆ ಅಂತಿಮ ದರ್ಶನದಲ್ಲಿ ಭಾಗವಹಿಸುತ್ತೇನೆ. ರೇವಣ್ಣ (HD Revanna) ಕೂಡಾ ಬರ್ತೀನಿ ಅಂದಿದ್ದಾರೆ. ಆರು ತಿಂಗಳಿಂದಲೂ ಮುಲಾಯಂ ಸಿಂಗ್ ಯಾದವ್ ಆರೋಗ್ಯ ಕೈಕೊಟ್ಟಿತ್ತು ಎಂದು ತಿಳಿಸಿದರು.

    ಹಿಂದಿ ಬಳಕೆಗೆ ಒತ್ತು ಕೊಡುವಂತೆ ಕೋರಿ ರಾಷ್ಟ್ರಪತಿಗಳಿಗೆ ಅಮಿತ್ ಶಾ ಪತ್ರ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅಸ್ಸಾಂ, ಗುಜರಾತ್, ಒರಿಸ್ಸಾ, ಪಶ್ಚಿಮ ಬಂಗಾಳ, ರಾಜಸ್ಥಾನ ಹೀಗೆ ಹಲವು ಕಡೆ ಹಿಂದಿಯೇ ಇಲ್ಲ. ಬಿಜೆಪಿ ದೇಶ ವಿಭಜನಗೆ ಇಂಬು ಕೊಡುತ್ತಿದೆ. ನಮ್ಮ ಭಾಷೆ ನಮಗೆ ಚಂದ. ಇದಕ್ಕೆಲ್ಲ ಕೈಹಾಕಿ ವಾತಾವರಣ ಕದಡಬೇಡಿ ಎಂದರು. ಇದನ್ನೂ ಓದಿ: ಯುಪಿ ಮಾಜಿ ಸಿಎಂ ಮುಲಾಯಂ ಸಿಂಗ್‌ ಯಾದವ್‌ ನಿಧನ

    ಮುಸ್ಲಿಮರ 2ಬಿ ಮೀಸಲಾತಿ ರದ್ದು ಅಥವಾ ಕಡಿತಕ್ಕೆ ಬಿಜೆಪಿ (BJP) ಯಲ್ಲಿ ಚಿಂತನೆ ವಿಚಾರದ ಕುರಿತು ಮಾತನಾಡುತ್ತಾ ಖಂಡಿಸಿದ ಸಿಎಂ ಇಬ್ರಾಹಿಂ, ಮುಸ್ಲಿಮರಿಗೆ 2ಬಿ ಮೀಸಲಾತಿ ಶಾಸನಬದ್ಧವಾಗಿ ಸಿಕ್ಕಿದೆ. ಅರವಿಂದ ಬೆಲ್ಲದ್ ಅವರಪ್ಪ ಇದ್ದಾಗ ಕೊಟ್ಟಿದ್ದಲ್ಲ. ಬೆಲ್ಲದ್, ತುಪ್ಪದ್ ಅಂತ ಸುಡುಗಾಡು ಹೆಸರುಗಳಿವೆಯಲ್ಲ. ಇವರೆಲ್ಲ ಇದಕ್ಕೆ ದಯವಿಟ್ಟು ಕೈಹಾಕಲು ಹೋಗಬೇಡಿ ಎಂದು ಹೇಳಿದರು.

    Live Tv
    [brid partner=56869869 player=32851 video=960834 autoplay=true]