Tag: ಮುಲಾಮು

  • ಹೊಂಡಗುಂಡಿ ರಸ್ತೆಯಲ್ಲಿ ಡರ್ಟ್ ರೇಸ್ ಪ್ರೊಟೆಸ್ಟ್ – ಗೆದ್ದವರಿಗೆ ಟ್ರೋಫಿ ಜೊತೆ ಮುಲಾಮು

    ಹೊಂಡಗುಂಡಿ ರಸ್ತೆಯಲ್ಲಿ ಡರ್ಟ್ ರೇಸ್ ಪ್ರೊಟೆಸ್ಟ್ – ಗೆದ್ದವರಿಗೆ ಟ್ರೋಫಿ ಜೊತೆ ಮುಲಾಮು

    ಉಡುಪಿ: ಕಾರ್ಕಳ ನಗರದ ಸಾಲು, ಸಾಲು ಹೊಂಡದ ರಸ್ತೆಯಲ್ಲಿ ಬೈಕ್ ರೇಸ್ ಮಾಡುವ ಮೂಲಕ ಕಾಂಗ್ರೆಸ್ ವಿಭಿನ್ನವಾಗಿ ಪ್ರತಿಭಟಿಸಿದೆ. ಗೆದ್ದವರಿಗೆ ಟ್ರೋಫಿ ಮತ್ತು ಬೆನ್ನು ನೋವಿಗೆ ಮುಲಾಮು ನೀಡಿ ರಾಜ್ಯ ಸರ್ಕಾರವನ್ನು ಮತ್ತು ಸ್ಥಳೀಯ ಶಾಸಕ, ಇಂಧನ ಮತ್ತು ಕನ್ನಡ ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಅವರನ್ನು ಕಾಂಗ್ರೆಸ್ ಲೇವಡಿ ಮಾಡಿದೆ.

    ಕಾರ್ಕಳ ನಗರ ಭಾಗದಲ್ಲಿ ಸುಮಾರು 3 ಕಿಲೋಮೀಟರ್ ರಸ್ತೆ ನೂರಾರು ಹೊಂಡ ಗುಂಡಿಗಳಿಂದ ಕೂಡಿದೆ. ಈ ಬಗ್ಗೆ ಸಾಕಷ್ಟು ಬಾರಿ ರಾಜ್ಯ ಸರ್ಕಾರವನ್ನು, ವಿವಿಧ ಇಲಾಖೆಗಳ ಗಮನ ಸೆಳೆದರೂ ಗುಂಡಿಗಳನ್ನು ಮುಚ್ಚಿಸುವ ಕೆಲಸ ಆಗಿಲ್ಲ. ವಿಭಿನ್ನ ರೀತಿಯಲ್ಲಿ ಹಿಂದೆ ಮೂರ್ನಾಲ್ಕು ಬಾರಿ ಪ್ರತಿಭಟನೆ ನಡೆಸಿದರೂ ಅಧಿಕಾರಿಗಳು ಈ ಬಗ್ಗೆ ಎಚ್ಚೆತ್ತುಕೊಂಡಿಲ್ಲ. ಇದನ್ನೂ ಓದಿ: ಮದುವೆ ದಿಬ್ಬಣದ ಬಸ್ ಪಲ್ಟಿ – 2 ಸಾವು, 16 ಮಂದಿಗೆ ಗಾಯ

    ಇಂದು ಕಾರ್ಕಳ ತಾಲೂಕು ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್ ನೇತೃತ್ವದಲ್ಲಿ ವಿಭಿನ್ನವಾಗಿ ಪ್ರತಿಭಟನೆ ನಡೆಯಿತು. ಹೊಂಡಗುಂಡಿ ರಸ್ತೆಯಲ್ಲಿ ಬೈಕ್ ರೇಸ್ ಆಯೋಜನೆ ಮಾಡುವ ಮೂಲಕ ರಾಜ್ಯ ಸರ್ಕಾರವನ್ನು ಮತ್ತೆ ಸೆಳೆಯುವ ಪ್ರಯತ್ನ ಮಾಡಲಾಗಿದೆ. ಬೈಕ್ ರೇಸ್ ನಲ್ಲಿ ಗೆದ್ದವರಿಗೆ ಬೆನ್ನು ನೋವು ನಿವಾರಣೆಗೆ ಬಳಸುವ ಮುಲಾಮುಗಳನ್ನು ಹಂಚಲಾಯಿತು. ಸುನೀಲ್ ಕುಮಾರ್, ಪುರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯ್ತು. ಮಳೆ ನಿಂತಿದೆ ಕೂಡಲೇ ರಸ್ತೆ ದುರಸ್ತಿ ಕಾರ್ಯ ನಡೆಸದಿದ್ದರೆ, ರಸ್ತೆ ತಡೆ ಮಾಡುವುದಾಗಿ ಕಾಂಗ್ರೆಸ್ ನಾಯಕರು ಎಚ್ಚರಿಕೆ ನೀಡಿದರು.

    ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಕಾಂಗ್ರೆಸ್ ನಾಯಕ ಶುಭದ್ ರಾವ್, ಅಭಿವೃದ್ಧಿಯ ಮಂತ್ರವನ್ನು ಯಾವಾಗಲೂ ಜಪಿಸುವ ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರು ಕಾರ್ಕಳದ ರಸ್ತೆಗಳ ಬಗ್ಗೆ ಯಾಕೆ ಮೌನವಹಿಸಿದ್ದಾರೆ. ಹೊಂಡ ಬಿದ್ದ ರಸ್ತೆಯಲ್ಲಿ ಜನರ ಓಡಾಟ ಎಷ್ಟು ಕಷ್ಟ ಇದೆ ಎಂಬುದು ನಿಮಗೆ ಗೊತ್ತಿದೆಯೇ? ಈಗಾಗಲೇ ಮಳೆ ಕಡಿಮೆಯಾಗಿದೆ ರಸ್ತೆಯ ದುರಸ್ತಿ ಮಾಡಿ ಒಳಚರಂಡಿ ವ್ಯವಸ್ಥೆಯನ್ನು ಸರಿ ಮಾಡಿ ಇಲ್ಲದಿದ್ದರೆ ನಿರಂತರ ಪ್ರತಿಭಟನೆ ಮಾಡುವುದಾಗಿ ಕಿಡಿಕಾರಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನಕ್ಕೆ ಇಂಡಿಯಾದವ್ರು ಹೆಂಗೆ ಮಂಜಾ ಕೊಡ್ತಾರೆ ನೋಡಿ: ಜಮೀರ್

  • ಕೊರೊನಾ ನಿಯಂತ್ರಣಕ್ಕೆ ಮುಲಾಮು – ಕನ್ನಡಿಗನಿಂದ ಸಂಶೋಧನೆ

    ಕೊರೊನಾ ನಿಯಂತ್ರಣಕ್ಕೆ ಮುಲಾಮು – ಕನ್ನಡಿಗನಿಂದ ಸಂಶೋಧನೆ

    ಮುಲಾಮು ದರ ಎಷ್ಟು?

    ಬೆಂಗಳೂರು: ಕೊರೊನಾ ವೈರಸ್ ನಿಂದ ರಕ್ಷಿಸಿಕೊಳ್ಳಲು ಹೊಸ ಮುಲಾಮು ಸಿದ್ಧವಾಗಿದ್ದು, ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಹೆಮ್ಮೆಯ ವಿಷಯ ಅಂದ್ರೆ ಈ ಮುಲಾಮುನ್ನು ಕನ್ನಡಿಗರೊಬ್ಬರು ಸಂಶೋಧನೆ ಮಾಡಿದ್ದಾರೆ.

    ಚಿಕ್ಕಮಗಳೂರಿನ ಅಜ್ಜಂಪುರ ಮೂಲದ ನೂತನ್ ಹೆಚ್.ಎಸ್ ಅವರು ಕೊರೊನಾಗೆ ಮುಲಾಮು ಸಂಶೋಧನೆ ಮಾಡಿದ್ದಾರೆ. ಕೋವಿರಕ್ಷಾ ಹೆಸರಿನ ಮುಲಾಮೂನ್ನು ಹಚ್ಚಿಕೊಂಡವರು ಮೂರು ತಾಸು ಕೊರೊನಾ ವೈರಾಣುವಿನಿಂದ ಸುರಕ್ಷಿತವಾಗಿರಬಹುದು ಎಂದು ಸಂಶೋಧನೆಯಲ್ಲಿ ಗೊತ್ತಾಗಿದೆ. ಇದನ್ನೂ ಓದಿ: ಹೊಸ ಅಪಾಯ- ನೀರಿನಲ್ಲಿಯೂ ಪತ್ತೆಯಾದ ಕೊರೊನಾ ವೈರಸ್

    ಬೆಂಗಳೂರು ಮೂಲದ ನ್ಯಾನೋ ತಂತ್ರಜ್ಞಾನದ ಸ್ಟಾಟ್ 9 ಆಪ್ ನೂತನ್ ಲ್ಯಾಬ್ಸ್, ಭಾರತೀಯ ವಿಜ್ಞಾನ ಸಂಸ್ಥೆ ಸಹಯೋಗದೊಂದಿಗೆ ಈ ಮುಲಾಮನ್ನು ಸಂಶೋಧನೆ ಮಾಡಲಾಗಿದೆ. ರಾಜ್ಯ ಆಯುಷ್ ಇಲಾಖೆಯಿಂದ ಮುಲಾಮು ಬಳಕೆಗೆ ಅನುಮೋದನೆ ಸಿಕ್ಕಿದ್ದು, ಬೆಳ್ಳಿ ಬಳಸಿಕೊಂಡು, ನ್ಯಾನೋ ಟೆಕ್ನಾಲಜಿ ಮೂಲಕ ಕೋವಿರಕ್ಷಾ ಮುಲಾಮನ್ನು ತಯಾರು ಮಾಡಲಾಗಿದೆ.

    ಕಳೆದ ಮೂರು ತಿಂಗಳಲ್ಲಿ 10 ಸಾವಿರಕ್ಕೂ ಹೆಚ್ಚು ಮಂದಿಯ ಮೇಲೆ ಪ್ರಯೋಗಮಾಡಿ ಯಶಸ್ವಿಯಾಗಿದೆ. ಒಂದು ವಯಲ್ ನ್ನು 200ಕ್ಕೂ ಹೆಚ್ಚು ಬಾರಿ ಬಳಸಬಹುದು. ಮುಖ್ಯವಾಗಿ ಮನೆಯಿಂದ ಹೊರ ಬರುವಾಗ, ಗಂಟಲು, ಮೂಗು, ಕೈ, ಮಾಸ್ಕ್ ಗೆ ಕೋವಿರಕ್ಷಾ ಹಚ್ಚಿಕೊಂಡರೆ, ಮೂರು ಗಂಟೆಗಳ ಕಾಲ ವೈರಾಣುವಿನಿಂದ ರಕ್ಷಣೆ ಪಡೆಯಬಹುದಾಗಿದೆ. ಇದರ ಬೆಲೆ ೩೦೦ ರೂಪಾಯಿಯಾಗಿದ್ದು, ೧೦ ಎಂಎಲ್ ಇರುತ್ತದೆ. ಲಿಕ್ವಿಡ್ ತರಹದ ಮುಲಾಮು ಇದಾಗಿದ್ದು, ಇದರ ರಿಕವರಿ ರೇಟ್ ಕೂಡ ಸ್ಪೀಡಾಗಿದೆ. ಪಾಸಿಟಿವ್ ಬಂದವರು ಇದನ್ನು ಬಳಕೆ ಮಾಡಿದ್ರೆ ೧೪ ದಿನದೊಳಗಡೆಯೇ ನೆಗಟಿವ್ ಬರುತ್ತದೆ ಎಂದು ಪ್ರಾಯೋಗಿಕ ಪರೀಕ್ಷೆಯಲ್ಲಿ ಪ್ರೂವ್ ಆಗಿದೆ.