Tag: ಮುರಾದ್ ಖೇತನಿ

  • ಪ್ಯಾಂಟ್ ಜೇಬಲ್ಲಿ ಗ್ಲಾಸ್ ಇಟ್ಕೊಂಡೇ ಪಾರ್ಟಿಗೆ ಬಂದ ನಟ ಸಲ್ಮಾನ್ ಖಾನ್

    ಪ್ಯಾಂಟ್ ಜೇಬಲ್ಲಿ ಗ್ಲಾಸ್ ಇಟ್ಕೊಂಡೇ ಪಾರ್ಟಿಗೆ ಬಂದ ನಟ ಸಲ್ಮಾನ್ ಖಾನ್

    ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಾರ್ಟಿ ಮೂಡ್ ನಲ್ಲಿರುವ ಸಲ್ಮಾನ್ ಖಾನ್ ತಮ್ಮ ಐಷಾರಾಮಿ ಕಾರು ಹತ್ತಿಕೊಂಡು ನಿರ್ಮಾಪಕ ಮುರಾದ್ ಖೇತನಿ ಅವರ ಹುಟ್ಟು ಹಬ್ಬದ ಪಾರ್ಟಿಗೆ ಆಗಮಿಸುತ್ತಾರೆ. ಕಾರಿನಿಂದ ಕೆಳಗೆ ಇಳಿಯುತ್ತಿದ್ದಂತೆಯೇ ಅವರನ್ನು ಕ್ಯಾಮೆರಾಗಳು ಮುತ್ತಿಕೊಳ್ಳುತ್ತವೆ. ತಕ್ಷಣವೇ ತಮ್ಮ ಕೈಯಲ್ಲಿ ಗ್ಲಾಸ್ ಇದೆ ಎಂದು ನೆನಪಾಗಿದೆ ಅನ್ನು ಪ್ಯಾಂಟ್ ಜೇಬಿಗೆ ಇಳಿಸುತ್ತಾರೆ.

    ಕಾರಿನಲ್ಲಿ ಬರುವಾಗಲೇ ಗ್ಲಾಸ್ ಹಿಡಿದುಕೊಂಡು ಬಂದಿದ್ದ ಸಲ್ಮಾನ್, ಗ್ಲಾಸ್ ಅರ್ಧ ತುಂಬಿದ್ದರೂ ಕ್ಯಾಮೆರಾಗಳು ಕಾಣುತ್ತಿದ್ದಂತೆಯೇ ಅದನ್ನು ಜೇಬಿನಲ್ಲಿ ಇಟ್ಟುಕೊಂಡು ಏನೂ ನಡೆದೇ ಇಲ್ಲ ಎನ್ನುವಂತೆ ಕೂಲ್ ಆಗಿ ನಡೆದುಕೊಂಡು ಹೋಗುತ್ತಾರೆ. ಈ ವಿಡಿಯೋವನ್ನು ಹಲವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಆ ಗ್ಲಾಸ್ ನಲ್ಲಿ ಇರುವುದು ಏನು ಎನ್ನುವ ಕಾಮೆಂಟ್ ಅನ್ನು ಮಾಡುತ್ತಿದ್ದಾರೆ. ದೊಡ್ಡ ನಟ ಗ್ಲಾಸ್ ಹಿಡಿದುಕೊಂಡು ಪಾರ್ಟಿಗೆ ಬಂದಿದ್ದು ಯಾಕೆ? ಎಂದು ಹಲವರು ಪ್ರಶ್ನಿಸಿದ್ದಾರೆ.

    ಸಲ್ಮಾನ್ ಜೇಬಿನಲ್ಲಿ ಇಟ್ಟುಕೊಂಡಿದ್ದ ಗ್ಲಾಸ್ ನಲ್ಲಿ ಮದ್ಯ ಇತ್ತಾ? ಅಥವಾ ಅವರು ನೀರು ಕುಡಿಯುತ್ತಿದ್ದರಾ ಎನ್ನುವುದು ಅವರಿಗಷ್ಟೇ ಗೊತ್ತು. ಆದರೆ, ಕೆಲವರಂತೂ ವಿಪರೀತ ಕಲ್ಪನೆ ಮಾಡಿಕೊಂಡು ಆ ವಿಡಿಯೋಗೆ ಕಾಮೆಂಟ್ ಬರೆಯುತ್ತಿದ್ದಾರೆ. ಮನೆಯಿಂದಲೇ ಬರುವಾಗಲೇ ಕಾರಿನಲ್ಲಿ ಸಲ್ಮಾನ್ ಕುಡಿಯುತ್ತಾ ಬಂದಿದ್ದಾರೆ ಎಂದು ಕೆಲವರು ಬರೆದಿದ್ದರೆ, ಫೆವರೆಟ್ ಗ್ಲಾಸ್ ನಲ್ಲಿ ಕುಡಿಯಬೇಕು ಎನ್ನುವ ಕಾರಣಕ್ಕಾಗಿ ತಮ್ಮದೇ ಗ್ಲಾಸ್ ತಗೆದುಕೊಂಡು ಹೋಗುತ್ತಾರಾ ಎಂದು ಕೆಲವರು ಬರೆದಿದ್ದಾರೆ. ಒಟ್ಟಿನಲ್ಲಿ ಪ್ಯಾಂಟ್ ನಲ್ಲಿ ಗ್ಲಾಸ್ ಇಟ್ಟುಕೊಳ್ಳುವುದು ಭಾರೀ ಚರ್ಚೆಗೆ ಅಂತೂ ಕಾರಣವಾಗಿದೆ.

    Live Tv
    [brid partner=56869869 player=32851 video=960834 autoplay=true]