Tag: ಮುರಳೀಧರ್ ರಾವ್

  • ನಿಷ್ಠೆಯಿಂದ ಯೋಧನಾಗಿ ಬಿಜೆಪಿಗೆ ದುಡಿಯುತ್ತೇನೆ- ಅಣ್ಣಾಮಲೈ

    ನಿಷ್ಠೆಯಿಂದ ಯೋಧನಾಗಿ ಬಿಜೆಪಿಗೆ ದುಡಿಯುತ್ತೇನೆ- ಅಣ್ಣಾಮಲೈ

    – ಸಾಮಾನ್ಯ ಕಾರ್ಯಕರ್ತನಂತೆ ಬಿಜೆಪಿಗೆ ಸೇರ್ಪಡೆಯಾಗಿದ್ದೇನೆ
    – ತಮಿಳುನಾಡಿನಲ್ಲಿ ಕುಟುಂಬ ರಾಜಕಾರಣ ಕೊನೆಯಾಗಬೇಕು

    ನವದೆಹಲಿ: ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರು ಇಂದು ಅಧಿಕೃತವಾಗಿ ಭಾರತೀಯ ಜನತಾ ಪಕ್ಷ ಸೇರ್ಪಡೆಯಾಗಿದ್ದಾರೆ. ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಮುರುಳೀಧರ್ ರಾವ್ ಹಾಗೂ ತಮಿಳುನಾಡು ಬಿಜೆಪಿ ಅಧ್ಯಕ್ಷ ಮುರುಗನ್ ಅವರ ನೇತೃತ್ವದಲ್ಲಿ ಅಣ್ಣಾಮಲೈ ಅವರು ಬಿಜೆಪಿ ಸೇರ್ಪಡೆಯಾಗಿದ್ದು, ಪಕ್ಷದ ಸದಸ್ಯತ್ವ ನೀಡುವ ಮೂಲಕ ಪಕ್ಷಕ್ಕೆ ಸ್ವಾಗತಕೋರಿದರು.

    ಈ ವೇಳೆ ಮಾತನಾಡಿದ ಅಣ್ಣಾಮಲೈ ಅವರು, ನಾನು ಸಾಮಾನ್ಯ ಕಾರ್ಯಕರ್ತನಂತೆ ಬಿಜೆಪಿಗೆ ಸೇರ್ಪಡೆಯಾಗಿದ್ದೇನೆ. ನನಗಿಂತ ಮುನ್ನ ಸಾವಿರಾರು ಕಾರ್ಯಕರ್ತರು ಪಕ್ಷಕ್ಕಾಗಿ ಕೆಲಸ ಮಾಡಿದ್ದು, ನಾನು ಪಕ್ಷದಲ್ಲಿ ಏನನ್ನು ನಿರೀಕ್ಷೆ ಮಾಡದೆ ಸೇರ್ಪಡೆಯಾಗಿದ್ದೇನೆ ಎಂದು ಸ್ಪಷ್ಟಪಡಿಸಿದರು.

    ರಾಷ್ಟ್ರೀಯ ಕಾರ್ಯದರ್ಶಿ ಮುರಳೀಧರ್ ಅವರಿಗೆ, ರಾಜ್ಯಾಧ್ಯಕ್ಷರಾದ ಮುರುಗನ್ ಅವರಿಗೆ ಧನ್ಯವಾದ ಹೇಳುತ್ತೇನೆ. ನಾನು ಐತಿಹಾಸಿಕ ಹಿನ್ನೆಲೆಯುಳ್ಳ ನೆಲದಿಂದ ಬಂದಿದ್ದೇನೆ. ನನ್ನ ನೆಲದ ತಿರುವಳ್ಳವರ್ ಬರೆದ ತಿರುಕ್ಕುರಳ್ ಕೃತಿ ರಾಜ ಹಾಗೂ ಆಡಳಿತಗಾರನಿಗೆ ಇರಬೇಕಾದ ಮೌಲ್ಯಗಳ ಬಗ್ಗೆ ಮಾತನಾಡುತ್ತದೆ. ನನ್ನ ನೆಲ ಜ್ಞಾನ, ಸ್ಫೂರ್ತಿ, ಧೈರ್ಯ ಹಾಗೂ ಭಯವಿಲ್ಲದೇ ಕಾರ್ಯನಿರ್ವಹಿಸುವ ಬಗ್ಗೆ ಹೇಳುತ್ತದೆ. ಈ ಎಲ್ಲಾ ಗುಣಗಳನ್ನು ಪ್ರಧಾನಿ ಮೋದಿ ಹಾಗೂ ಬಿಜೆಪಿ ನಾಯಕರಲ್ಲಿ ನೋಡಿದ್ದೇನೆ. ತಮಿಳುನಾಡಿನ ರಾಜಕೀಯದಲ್ಲಿ ಬದಲಾವಣೆ ಬೇಕು. ಹೀಗಾಗಿ ನಾನು ಬಿಜೆಪಿ ಸೇರಿದ್ದೇನೆ ಎಂದು ತಿಳಿಸಿದರು.

    ಸಮಾಜಸೇವೆ ಮಾಡುವುದಕ್ಕೆ ಬಿಜೆಪಿಗೆ ಸೇರಿದ್ದೇನೆ. ಪೊಲೀಸ್ ಕರ್ತವ್ಯದಲ್ಲಿದ್ದಾಗ ಪೊಲೀಸ್ ಧರ್ಮ ನನ್ನದಾಗಿತ್ತು. ಎಲ್ಲಾ ಧರ್ಮದವರೂ ನನಗೆ ಸ್ನೇಹಿತರು ಇದ್ದಾರೆ. ಬಿಜೆಪಿ ಸೇರಿದ ಮೇಲೆ ಬಿಜೆಪಿ ಸಿದ್ಧಾಂತಕ್ಕೆ ಬದ್ಧನಾಗಿದ್ದು, ನಿಷ್ಠೆಯಿಂದ ಯೋಧನಾಗಿ ಬಿಜೆಪಿಗೆ ದುಡಿಯುತ್ತೇನೆ ಎಂದು ಸ್ಪಷ್ಟಪಡಿಸಿದರು.

    ಇದಕ್ಕೂ ಮುನ್ನ ಮಾತನಾಡಿದ ಮುರುಳೀಧರ್ ರಾವ್, ಅಣ್ಣಾಮಲೈ ಅವರು ಬಿಜೆಪಿಗೆ ಸೇರ್ಪಡೆಯಾಗುವುದಕ್ಕೆ ಯಾವುದೇ ಹುದ್ದೆಗೆ ಬೇಡಿಕೆ ಇಟ್ಟಿಲ್ಲ. ಅಣ್ಣಾಮಲೈ ಸೇರ್ಪಡೆಯಿಂದ ಬಿಜೆಪಿಗೆ ತಮಿಳುನಾಡುನಲ್ಲಿ ಶಕ್ತಿ ಬಂದಿದೆ. ಬಿಜೆಪಿಗೆ ಸಾಕಷ್ಟು ಜನರು ಬರುತ್ತಿದ್ದಾರೆ. ಪಕ್ಷ ಇಡೀ ದೇಶದಲ್ಲಿ ಹೆಚ್ಚು ಮನ್ನಣೆ ಗಳಿಸಿದೆ. ದಕ್ಷಿಣ ಭಾರತದಲ್ಲೂ ಬಿಜೆಪಿಗೆ ಜನಮನ್ನಣೆ ಸಿಗುತ್ತಿದ್ದು, ಹಲವು ವಲಯದ ಪ್ರಮುಖ ನಾಯಕರು ಬಿಜೆಪಿ ಸೆರ್ಪಡೆಗೊಳ್ಳುತ್ತಿದ್ದಾರೆ. ಅಣ್ಣಾಮಲೈ ಅವರು ಐಪಿಎಸ್ ಆಗಿ ಕರ್ನಾಟದಲ್ಲಿ ಸೇವೆ ಸಲ್ಲಿಸಿದ್ದು, 9 ವರ್ಷದ ಸೇವೆ ಬಳಿಕ ರಾಜೀನಾಮೆ ನೀಡಿದ್ದಾರೆ. ಜನ ಸೇವೆ ಮುಖ್ಯ ಅಂತಾ ಈಗ ರಾಜಕೀಯ ಸೇರ್ಪಡೆಗೊಳ್ಳುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕಾರ್ಯ ಮೆಚ್ಚಿ ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ ಎಂದು ತಿಳಿಸಿದರು.

  • ಮಹೇಶ್ ಜೊತೆಗಿನ ಭೇಟಿಗೆ ವಿಶೇಷ ಅರ್ಥ ಬೇಡ- ಬಿಎಸ್‍ವೈ

    ಮಹೇಶ್ ಜೊತೆಗಿನ ಭೇಟಿಗೆ ವಿಶೇಷ ಅರ್ಥ ಬೇಡ- ಬಿಎಸ್‍ವೈ

    ಬೆಂಗಳೂರು: ಸಚಿವ ಸಾ.ರಾ ಮಹೇಶ್ ಹಾಗೂ ಬಿಜೆಪಿ ಮುಖಂಡರ ಭೇಟಿಗೆ ಹೊಸ ಅರ್ಥ ಬೇಡ. ಅವರ ಜೊತೆ ಸರ್ಕಾರ ನಡೆಸೋಕೆ ಆಗುತ್ತೇನ್ರಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಗರಂ ಆಗಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್‍ವೈ, ಸಾ.ರಾ ಮಹೇಶ್ ಹಾಗೂ ಬಿಜೆಪಿ ಮುಖಂಡ ಭೇಟಿಗೆ ಹೊಸ ಅರ್ಥ ನೀಡುವುದು ಬೇಡ. ಜೆಡಿಎಸ್ ಜೊತೆ ಸರ್ಕಾರ ನಡೆಸೋಕೆ ಆಗುತ್ತೇನ್ರಿ ಎಂದು ಮಾಧ್ಯಮದವರನ್ನೇ ಪ್ರಶ್ನಿಸಿದ್ದಾರೆ. ಅಲ್ಲದೆ ಈ ಹಿಂದೆ ನೂರು ಬಾರಿ ನಾವು ಜೆಡಿಎಸ್ ಜೊತೆ ಸರ್ಕಾರ ಮಾಡಿ ಸೋತು ಹೋಗಿದ್ದೇವೆ ಎಂದು ಹೇಳಿದ್ದೇವೆ. ಇನ್ನು ಸಾಧ್ಯವಿಲ್ಲ. ಅವರಿಬ್ಬರ ಭೇಟಿ ಆಕಸ್ಮಿಕ ಅಷ್ಟೇ. ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಕಿಡಿಕಾರಿದ್ದಾರೆ.

    ಸುಪ್ರೀಂ ಕೋರ್ಟ್ ತೀರ್ಪಿನ ಮೇಲೆ ನಮ್ಮ ಗಮನ ಇದೆ. ಸೋಮವಾರದಿಂದ ಸದನದಲ್ಲಿ ಏನು ಮಾಡಬೇಕು ಎನ್ನುವುದನ್ನು ನಾವು ತೀರ್ಮಾನಿಸುತ್ತೇವೆ ಎಂದು ತಿಳಿಸಿದ್ದಾರೆ.

    ಭೇಟಿ ಕುರಿತು ಜೆಡಿಎಸ್ ಕೂಡ ಸ್ಪಷ್ಟನೆ ನೀಡಿದ್ದು, ಕುಮಾರಕೃಪ ಗೆಸ್ಟ್ ಹೌಸ್‍ಗೆ ಶಾಸಕರು, ಮಂತ್ರಿಗಳು ವಿಶ್ರಾಂತಿ ಪಡೆಯಲು ಹೋಗುವುದು ಸಹಜ. ಇದೇ ಸಂದರ್ಭದಲ್ಲಿ ಸಾ.ರಾ ಮಹೇಶ್ ಅವರು ಆಕಸ್ಮಿಕವಾಗಿ ಕೆ.ಎಸ್ ಈಶ್ವರಪ್ಪ, ಮುರಳೀಧರ್ ರಾವ್ ಅವರನ್ನು ದಾರಿ ಮಧ್ಯೆ ಭೇಟಿಯಾಗಿದ್ದಾರೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಸದೃಢವಾಗಿದ್ದು, ಸಮರ್ಥ ಆಡಳಿತ ಮುಂದುವರಿಸಲಿದೆ ಎಂದು ಟ್ವೀಟ್ ಮಾಡಿದೆ.

  • ಬಿಜೆಪಿಗೆ ಬೆಂಬಲ ಕೊಡುತ್ತಾ ಜೆಡಿಎಸ್?: ಸಾರಾ ಮಹೇಶ್, ಕಮಲ ಮುಖಂಡರ ಭೇಟಿ!

    ಬಿಜೆಪಿಗೆ ಬೆಂಬಲ ಕೊಡುತ್ತಾ ಜೆಡಿಎಸ್?: ಸಾರಾ ಮಹೇಶ್, ಕಮಲ ಮುಖಂಡರ ಭೇಟಿ!

    ಬೆಂಗಳೂರು: ಬಿಜೆಪಿಗೆ ಬೆಂಬಲ ಕೊಡಲು ಜೆಡಿಎಸ್ ಮುಂದೆ ಬಂದಿತೇ ಎಂಬ ಪ್ರಶ್ನೆ ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡುತ್ತಿದೆ.

    ನಗರದ ಕೆ.ಕೆ.ಗೆಸ್ಟ್ ಹೌಸ್‍ನಿಂದ ಬಿಜೆಪಿ ಮುಖಂಡರಾದ ಕೆ.ಎಸ್.ಈಶ್ವರಪ್ಪ ಹಾಗೂ ಮುರಳೀಧರ್ ರಾವ್ ಅವರು ಹೊರ ಬಂದರು. ಅವರ ಬೆನ್ನಲ್ಲೇ ಜೆಡಿಎಸ್‍ನ ಸಚಿವ ಸಾರಾ ಮಹೇಶ್ ಅವರು ಹೊರ ಬಂದಿದ್ದು ಭಾರೀ ಕುತೂಹಲ ಮೂಡಿಸಿದೆ.

    ಸಾ.ರಾ.ಮಹೇಶ್ ಅವರ ಜೊತೆ ಮಾತನಾಡಲು ಬಂದಿದ್ರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಕೆ.ಎಸ್.ಈಶ್ವರಪ್ಪನವರು, ನಾನು ಹಾಗೂ ಮುರಳೀಧರ್ ರಾವ್ ಮಾತನಾಡಲು ಬಂದಿದ್ದೇವು. ನನಗೂ ಸಾ.ರಾ.ಮಹೇಶ್ ಅವರಿಗೂ ಏನ್ ಸಂಬಂಧ ಎಂದು ಹೇಳಿದರು.

    ಕೆ.ಎಸ್.ಈಶ್ವರಪ್ಪ ಅವರು ಕೆ.ಕೆ.ಗೆಸ್ಟ್ ಹೌಸ್‍ನಿಂದ ಹೊರಟ ಕೆಲವೇ ನಿಮಿಷಗಳಲ್ಲಿ ಸಚಿವ ಸಾರಾ ಮಹೇಶ್ ಅವರು ಹೊರ ಬಂದರು. ಈ ವೇಳೆ ಮಾತನಾಡಿದ ಸಚಿವರು, ಈಶ್ವರಪ್ಪನವರು ಕ್ಷೇತ್ರದ ಬಗ್ಗೆ ವಿಚಾರಿಸಲು ಬಂದಿದ್ದರು. ನಾನು ಸಚಿವ, ಹೀಗಾಗಿ ಭೇಟಿಯಾಗಲು ಬಂದಿದ್ದೆ. ಅದರಲ್ಲಿ ಏನು ತಪ್ಪು ಎಂದು ಮರು ಪ್ರಶ್ನೆ ಮಾಡಿದರು.

    ಸಚಿವ ಸಾ.ರಾ.ಮಹೇಶ್ ಅವರು 9 ಗಂಟೆ ಸುಮಾರಿಗೆ ಬಂದಿದ್ದರು. ಮೀಟಿಂಗ್ ಇದೆ ಅಂತ ರೂಂ ಕೇಳಿದ್ದರು. ಆಮೇಲೆ ಕೆ.ಎಸ್.ಈಶ್ವರಪ್ಪ, ಮುರುಳಿಧರ್ ರಾವ್ ಬಂದರು. ನಂತರ ಮೀಟಿಂಗ್ ಮುಗಿಸಿ ಹೊರಟರು ಎಂದು ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭ್ಯವಾಗಿದೆ.

    ಈ ಕುರಿತು ಸ್ಪಷ್ಟನೆ ನೀಡಿರುವ ಜೆಡಿಎಸ್, ಕುಮಾರಕೃಪ ಗೆಸ್ಟ್ ಹೌಸ್‍ಗೆ ಶಾಸಕರು, ಮಂತ್ರಿಗಳು ವಿಶ್ರಾಂತಿ ಪಡೆಯಲು ಹೋಗುವುದು ಸಹಜ. ಇದೇ ಸಂದರ್ಭದಲ್ಲಿ ಸಾ.ರಾ.ಮಹೇಶ್ ಅವರು ಆಕಸ್ಮಿಕವಾಗಿ ಕೆ.ಎಸ್.ಈಶ್ವರಪ್ಪ, ಮುರಳೀಧರ ರಾವ್ ಅವರನ್ನು ದಾರಿ ಮಧ್ಯೆ ಭೇಟಿಯಾಗಿದ್ದಾರೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಸದೃಢವಾಗಿದ್ದು, ಸಮರ್ಥ ಆಡಳಿತ ಮುಂದುವರಿಸಲಿದೆ ಎಂದು ಟ್ವಿಟ್ ಮಾಡಿದೆ.

  • ಹೀರೋ ಯಾರೆಂದು ಗೊತ್ತಿಲ್ಲದ ಸಿನಿಮಾದಲ್ಲಿ ಬಿಎಸ್‍ವೈ ವಿಲನ್: ಮುರಳೀಧರ್ ರಾವ್

    ಹೀರೋ ಯಾರೆಂದು ಗೊತ್ತಿಲ್ಲದ ಸಿನಿಮಾದಲ್ಲಿ ಬಿಎಸ್‍ವೈ ವಿಲನ್: ಮುರಳೀಧರ್ ರಾವ್

    ಹುಬ್ಬಳ್ಳಿ: ರಾಜ್ಯದಲ್ಲಿ ಮೈತ್ರಿ ಸರ್ಕಾರ ಜನರಿಗೆ ಸಿನಿಮಾ ತೋರಿಸುತ್ತಿದ್ದು, ಆ ಸಿನಿಮಾದಲ್ಲಿ ಯಾರು ಹೀರೋ ಎಂಬುದು ಅವರಿಗೆ ಗೊತ್ತಿಲ್ಲ. ಆದರೆ ಸಿನಿಮಾದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿಎಸ್ ಯಡಿಯೂರಪ್ಪ ಅವರನ್ನು ವಿಲನ್ ಆಗಿ ಬಿಂಬಿಸುತ್ತಿದ್ದಾರೆ ಎಂದು ಬಿಜೆಪಿ ವರಿಷ್ಠ ಮುರಳೀಧರ್ ರಾವ್ ಸಮ್ಮಿಶ್ರ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಹುಬ್ಬಳ್ಳಿಯಲ್ಲಿ ನಡೆದ ಪಕ್ಷದ ಸಮಾವೇಶ ಉದ್ದೇಶಿಸಿದ ಮಾತನಾಡಿದ ಅವರು, ರಾಜ್ಯದಲ್ಲಿ ಮಾಡಿಕೊಂಡಿರುವ ಬಂಧನ್ ಹೆಚ್ಚು ಕಾಲ ಉಳಿಯುವುದಿಲ್ಲ. ಇನ್ನು ದೇಶದಲ್ಲಿ ನಿರ್ಮಾಣ ಆಗಿರುವ ಘಟಬಂಧನ್ ಉಳಿಯುತ್ತಾ? 2014ರ ಪಕ್ಷ ಗೆದ್ದಿರುವ ಒಂದು ಸ್ಥಾನವೂ ಕಡಿಮೆ ಆಗದೆ, ಅದಕ್ಕಿಂತ ಹೆಚ್ಚು ಸ್ಥಾನಗಳನ್ನು ನಾವು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಪ್ರಧಾನಿ ನರೇಂದ್ರ ಮೋದಿ ಅವರು ದೇಶಕ್ಕೆ ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದಾರೆ. ಅಲ್ಲದೇ ದೇಶದ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಜಾರಿ ಮಾಡಿದ್ದಾರೆ. ಆದರೆ ರಾಹುಲ್ ಇದಕ್ಕೆಲ್ಲಾ ಅಡ್ಡಗಾಲು ಹಾಕುತ್ತಿದ್ದಾರೆ. ದೇಶದ ಅಲ್ಪ ಸಂಖ್ಯಾತರ ಅಭಿವೃದ್ಧಿ ಆಗುವುದು ಕಾಂಗ್ರೆಸ್‍ಗೆ ಬೇಡವಾಗಿದ್ದು, ಮತಗಳು ಮಾತ್ರ ಬೇಕು. ರಾಜ್ಯದಲ್ಲಿ ಜನರ ಆಶೀರ್ವಾದ ಇಲ್ಲದೇ ಇದ್ದರೂ ಕೂಡ ಅಧಿಕಾರಕ್ಕಾಗಿ ಮೈತ್ರಿ ನಡೆಸಿದ್ದಾರೆ. ಆದರೆ ಬಿಜೆಪಿ ದೂರ ಇಡಲು ಮೈತ್ರಿ ಮಾಡಿಕೊಂಡಿದ್ದಾಗಿ ಸುಳ್ಳು ಹೇಳುತ್ತಾರೆ ಟೀಕೆ ಮಾಡಿದರು.

    ಇದೇ ವೇಳೆ ರಾಜ್ಯ ಸರ್ಕಾರ ಜನರಿಗೆ ದಿನಕ್ಕೊಂದು ಜಗಳ ನಡೆಸುವ ಮೂಲಕ ದಿನಕ್ಕೊಂದು ಸಿನಿಮಾ ತೋರಿಸುತ್ತಿದೆ. ಆದರೆ ಇದಕ್ಕೆಲ್ಲಾ ಕಾರಣ ಬಿಎಸ್‍ವೈ ಕಾರಣ ಎಂದೇ ಹೇಳುತ್ತಿದ್ದಾರೆ. ಹೋಟೆಲ್ ನಲ್ಲಿ ಶಾಸಕರು ಬಡಿದಾಡಿಕೊಂಡರು ಕೂಡ ಅವರೇ ಕಾರಣ ಎನ್ನುತ್ತಾರೆ. ಭ್ರಷ್ಟಚಾರದಲ್ಲಿ ತೊಡಗಿರುವ ಸರ್ಕಾರ ಬಿಎಸ್‍ವೈ ಅವರ ಮೇಲೆ ಏಕೆ ಆರೋಪ ಮಾಡುತ್ತಾರೆ ಎಂದು ಆರ್ಥ ಆಗುತ್ತಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದರು. ಅಲ್ಲದೇ ದೇಶದಲ್ಲಿ ಮೋದಿ ಅವರ ಕಾರ್ಯಗಳು ಜನರಿಗೆ ಇಷ್ಟವಾಗಿದ್ದು, ಇದಕ್ಕೆ ಇಲ್ಲಿ ಹಾಜರಾಗಿರುವ ಲಕ್ಷ ಲಕ್ಷ ಜನರೇ ಕಾರಣ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಜನಾರ್ದನ ರೆಡ್ಡಿ ವೇದಿಕೆ ಏರಿದ್ರೆ ನಂಗೆ ವಾಟ್ಸಪ್ ಮಾಡಿ: ಮುರಳೀಧರ್ ರಾವ್

    ಜನಾರ್ದನ ರೆಡ್ಡಿ ವೇದಿಕೆ ಏರಿದ್ರೆ ನಂಗೆ ವಾಟ್ಸಪ್ ಮಾಡಿ: ಮುರಳೀಧರ್ ರಾವ್

    ಮಡಿಕೇರಿ: ಜನಾರ್ದನ ರೆಡ್ಡಿ ಬಿಜೆಪಿ ಲೀಡರ್ ಅಲ್ಲ. ಒಂದು ವೇಳೆ ಅವರು ವೇದಿಕೆ ಏರಿದರೆ ನನಗೆ ವಾಟ್ಸಪ್ ಮಾಡಿ ಎಂದು ಬಿಜೆಪಿ ಉಸ್ತುವಾರಿ ಮುರುಳೀಧರ್ ರಾವ್ ಹೇಳಿದ್ದಾರೆ.

    ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಜನಾರ್ದನರೆಡ್ಡಿ ಬಿಜೆಪಿಯ ತಾರಾ ಪ್ರಚಾರಕರಲ್ಲ. ರೆಡ್ಡಿ ಕೋರ್ಟ್ ನಿಂದ ನಿರಾಪರಾಧಿ ಆಗೋವರೆಗೂ ಬಿಜೆಪಿಗೆ ಎಂಟ್ರಿಯಿಲ್ಲ. ಜನಾರ್ದನ ರೆಡ್ಡಿ ಬಿಜೆಪಿ ಪರ ಪ್ರಚಾರಕ್ಕೂ, ನಮಗೂ ಸಂಬಂಧವಿಲ್ಲ ಎಂದು ಅವರು ತಿಳಿಸಿದರು.

    ಶಾಸಕ ಸೋಮಶೇಖರ್ ರೆಡ್ಡಿ 20 ವರ್ಷಗಳಿಂದ ಪಕ್ಷದಲ್ಲಿದ್ದಾರೆ, ಶ್ರೀರಾಮುಲು, ಸೋಮಶೇಖರ್ ರೆಡ್ಡಿಯವರನ್ನ ಸಿದ್ದರಾಮಯ್ಯ ಅವಮಾನಿಸೋದು ಯಾಕೆ? ಜನಾರ್ದನ ರೆಡ್ಡಿಯಿಂದಾಗಿಯೇ ಇವರು ಯಾರು ನಾಯಕರಾದವರಲ್ಲ, ಬಿಜೆಪಿಯ ಯಾವುದೇ ವೇದಿಕೆಯನ್ನ ಜನಾರ್ದನ ರೆಡ್ಡಿ ಏರಲ್ಲ, ಒಂದು ವೇಳೆ ಅವರು ವೇದಿಕೆ ಏರಿದರೆ ನನಗೆ ವಾಟ್ಸಪ್ ಮಾಡಿ. ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮುರುಳೀಧರ್ ರಾವ್ ಹೇಳಿದರು.

    ಸಿದ್ದರಾಮಯ್ಯ ಟಿಪ್ಪು ಜಯಂತಿ ಆಚರಣೆ ಬಗ್ಗೆ ಹೆಚ್ಚಿನ ಆಸಕ್ತಿ ತೋರಿದರು. ಟಿಪ್ಪು ಯಾರು ಎನ್ನುವುದು ಕೊಡಗಿನವರಿಗೆ ಗೊತ್ತಿದೆ. ಅದರೂ ಟಿಪ್ಪು ಜಯಂತಿ ತಂದು ಅನೇಕ ಘಟನೆಗಳಿಗೆ ಕಾರಣವಾಗಿದ್ದಾರೆ ಎಂದು ದೂರಿದರು.

    ಮೋದಿ, ಅಮಿತ್ ಶಾ ಹೊರಗಿನನವರು ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಹಾಗಾದರೆ ರಾಹುಲ್ ಗಾಂಧಿ ಎಲ್ಲಿಂದ ಬಂದಿದ್ದಾರೆ? ದೇವಾಲಯ, ಮಠಗಳ ಸಂರಕ್ಷಣೆ, ಮಲೆನಾಡು-ಕರಾವಳಿ ಭಾಗದ ರಕ್ಷಣೆ ನಮ್ಮ ಪ್ರಮುಖ ಅಜೆಂಡಾ. ಎರಡು ದಿನಗಳಲ್ಲಿ ನಮ್ಮ ಪ್ರಣಾಳಿಕೆ ಬಿಡುಗಡೆ ಮಾಡುತ್ತೇವೆ. ಈ ಬಾರಿ ನಾವು 150ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ಬಿಎಸ್‍ವೈ ಮತ್ತು ಸಿದ್ದರಾಮಯ್ಯಗೆ ಇರೋ ವ್ಯತ್ಯಾಸ ಇದೇ: ಸಿಎಂ ಕಾಲೆಳೆದ ಮುರುಳೀಧರ್ ರಾವ್

    ಬಿಎಸ್‍ವೈ ಮತ್ತು ಸಿದ್ದರಾಮಯ್ಯಗೆ ಇರೋ ವ್ಯತ್ಯಾಸ ಇದೇ: ಸಿಎಂ ಕಾಲೆಳೆದ ಮುರುಳೀಧರ್ ರಾವ್

    ಬೆಂಗಳೂರು: ವರುಣಾ ಕ್ಷೇತ್ರದಲ್ಲಿ ಪುತ್ರ ವಿಜಯೇಂದ್ರ ಸ್ಪರ್ಧಿಸುವುದಿಲ್ಲ ಎನ್ನುವ ಬಿಎಸ್‍ವೈ ಹೇಳಿಕೆಯನ್ನು ಬಳಸಿ ಕರ್ನಾಟಕ ಬಿಜೆಪಿ ಉಸ್ತುವಾರಿ ಮುರಳೀಧರ್ ರಾವ್ ಸಿಎಂ ಸಿದ್ದರಾಮಯ್ಯನವರನ್ನು ಕಾಲೆಳೆದಿದ್ದಾರೆ.

    ಒಬ್ಬ ನಾಯಕ ತಮ್ಮ ಪುತ್ರ ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಎಂದು ಹೇಳುತ್ತಾರೆ. ಆದರೆ ಇನ್ನೊಬ್ಬರು ಎರಡು ಕ್ಷೇತ್ರಗಳಲ್ಲಿ ಗೆಲ್ಲಲು ಕಸರತ್ತು ನಡೆಸಿದ್ದಾರೆ. ಅದರಲ್ಲಿ ಒಂದು ಕ್ಷೇತ್ರದಲ್ಲಿ ತಮ್ಮ ಪುತ್ರನನ್ನು ಗೆಲ್ಲಿಸಿಕೊಂಡು ಬರುವ ಪ್ರಯತ್ನ ನಡೆಸಿದ್ದಾರೆ. ಬಿಎಸ್‍ವೈ ಬಿಜೆಪಿ ಮತ್ತು ಸಿದ್ದರಾಮಯ್ಯ ಕಾಂಗ್ರೆಸ್ ನಡುವೆ ಇರೋ ವ್ಯತ್ಯಾಸ ಇದೇ ಎಂದು ಮುರಳೀಧರ್ ರಾವ್ ಟ್ವೀಟ್ ಮಾಡಿ ಟಾಂಗ್ ನೀಡಿದ್ದಾರೆ.

    ಕರ್ನಾಟಕ ಕಾಂಗ್ರೆಸ್ ನಲ್ಲಿ ತಂದೆಗೆ ಎರಡು ಕ್ಷೇತ್ರದ ಟಿಕೆಟ್, ಮಗನಿಗೆ ಒಂದು ಟಿಕೆಟ್ ಪಡೆದ ಇತಿಹಾಸವಿಲ್ಲ. ಆದರೆ ಈ ಬಾರಿ ಸಿಎಂ ಸಿದ್ದರಾಮಯ್ಯ ಚಾಮುಂಡೇಶ್ವರಿ, ಬಾದಾಮಿ ಟಿಕೆಟ್ ಪಡೆಯುವಲ್ಲಿ ಮತ್ತು ಮಗ ಯತೀಂದ್ರ ಅವರಿಗೆ ವರುಣಾದ ಟಿಕೆಟ್ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

     

  • ಕನ್ನಡ ಅಥವಾ ಇಂಗ್ಲೀಷ್‍ನಲ್ಲಿ ಮಾತಾಡಿ, ಹಿಂದಿ ಅರ್ಥವಾಗಲ್ಲ ಸರ್-  ಮುರಳೀಧರ್ ರಾವ್ ಗೆ  ಸಿಎಂ ಟಾಂಗ್

    ಕನ್ನಡ ಅಥವಾ ಇಂಗ್ಲೀಷ್‍ನಲ್ಲಿ ಮಾತಾಡಿ, ಹಿಂದಿ ಅರ್ಥವಾಗಲ್ಲ ಸರ್- ಮುರಳೀಧರ್ ರಾವ್ ಗೆ ಸಿಎಂ ಟಾಂಗ್

    ಬೆಂಗಳೂರು: ಕನ್ನಡದ ಅಸ್ಮಿತೆಯನ್ನೇ ಪ್ರಮುಖ ಚುನಾವಣಾ ವಿಷ್ಯವಾಗಿಸಿರೋ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ಉಸ್ತುವಾರಿ ಮುರಳೀಧರ್ ರಾವ್‍ಗೆ ಸಖತ್ ಟಾಂಗ್ ಕೊಟ್ಟು ಟ್ವಿಟ್ಟರ್‍ನಲ್ಲಿ ಟ್ರೆಂಡ್ ಸೃಷ್ಟಿಸಿದ್ರು.

    ಸಿದ್ದರಾಮಯ್ಯ ಚಾಮುಂಡೇಶ್ವರಿ ಜೊತೆಗೆ ಬಾದಾಮಿಯಲ್ಲೂ ಸ್ಪರ್ಧೆ ಮಾಡ್ತಿರೋ ಬಗ್ಗೆ ವ್ಯಂಗ್ಯವಾಡಿ ರಾವ್, ಹಿಂದಿಯಲ್ಲಿ ಟ್ವೀಟಿಸಿದ್ರು. ತಮ್ಮ ಮೇಲೆಯೇ ಹಿಂದಿ ಹೇರಿಕೆಗೆ ತಿರುಗೇಟು ಕೊಟ್ಟ ಮುಖ್ಯಮಂತ್ರಿ, ಕನ್ನಡ ಅಥವಾ ಇಂಗ್ಲೀಷ್‍ನಲ್ಲಿ ಟ್ವೀಟ್ ಮಾಡಿ ಸರ್, ಹಿಂದಿ ಅರ್ಥವಾಗಲ್ಲ ಅಂತ ಮರು ಟ್ವೀಟಿಸಿದ್ರು.

    ಈ ಟ್ವೀಟ್ ಬೆನ್ನಲ್ಲೇ ಮೈಕ್ರೋಬ್ಲಾಗ್‍ನಲ್ಲಿ ರಾವ್ ವಿರುದ್ಧ ಟೀಕೆಗಳು ಕೇಳಿ ಬಂದವು. ಇದರಿಂದ ಅನಿವಾರ್ಯವಾಗಿ ರಾವ್, ಏನ್ ಸಿದ್ದರಾಮಯನವ್ರೇ ಹೆದರಿಬಿಟ್ರಾ..? ಭಾರೀ ಮಸಲತ್ತು ಮಾಡಿ ಚಾಮುಂಡೇಶ್ವರಿ ಆರಿಸಿಕೊಂಡ್ರಿ. ಈಗ ಭಯದಿಂದ ಎರಡು ದೋಣಿಯಲ್ಲಿ ಕಾಲಿಡಲು ಹೊರಟಿದ್ದೀರಿ, ಚಿಂತೆ ಬೇಡ. ನೀವೆಲ್ಲಿ ಸ್ಪರ್ಧಿಸಿದ್ರೂ ಪೂರ್ತಿ ಕರ್ನಾಟಕವನ್ನೇ ಕಾಂಗ್ರೆಸ್ ಮುಕ್ತ ಮಾಡ್ತೀವಿ ಅಂತ ತಮ್ಮ ಹಿಂದಿ ಟ್ವೀಟನ್ನು ಕನ್ನಡಕ್ಕೆ ಅನುವಾದಿಸಿದ್ರು.

    ಇದಕ್ಕೆ ಇಂಗ್ಲೀಷ್‍ನಲ್ಲಿ ಉತ್ತರ ಕೊಟ್ಟ ಸಿದ್ದರಾಮಯ್ಯ, ಎರಡೂ ಕ್ಷೇತ್ರಗಳಲ್ಲಿ ಜನ ನನ್ನ ಹಣೆಬರಹ ನಿರ್ಧಾರ ಮಾಡ್ತಾರೆ. ಅದರ ಚಿಂತೆ ನಿಮಗೆ ಬೇಡ. ಆದ್ರೆ ನಿಮ್ಗೆ ಕನ್ನಡದಲ್ಲಿ ಟ್ವೀಟ್ ಮಾಡೋದನ್ನು ಕಲ್ಸಿದ್ನಲ್ಲ ಅದಕ್ಕೆ ಖುಷಿ ಆಗ್ತಿದೆ ಅಂತ ತಿರುಗೇಟು ನೀಡಿದ್ರು.

    ಇತ್ತ ಕೃಷ್ಣಬೈರೇಗೌಡ ಉರ್ದು ಭಾಷೆಯಲ್ಲಿ ನೀಡಿದ್ದ ಜಾಹೀರಾತು ಉಲ್ಲೇಖಿಸಿದ ಬಿಜೆಪಿ, ನೀವು ನಿಮ್ಮವರು ಹಿಂದಿ ಭಾಷೆಯಲ್ಲಿ ಜಾಹೀರಾತು ಕೊಟ್ಟಾಗ ನಮಗೂ ಅರ್ಥ ಆಗ್ಲಿಲ್ಲ ಸರ್ ಅಂತ ವ್ಯಂಗ್ಯವಾಡಿದೆ.

  • ರಾಹುಲ್ ಗಾಂಧಿ ಕರ್ನಾಟಕ ಗೆಲ್ಲೋದು ಬಿಗ್ ಜೋಕ್- ಮುರಳೀಧರ್ ರಾವ್

    ರಾಹುಲ್ ಗಾಂಧಿ ಕರ್ನಾಟಕ ಗೆಲ್ಲೋದು ಬಿಗ್ ಜೋಕ್- ಮುರಳೀಧರ್ ರಾವ್

    ಉಡುಪಿ: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಹುಲ್ ಗಾಂಧಿ ಜೊತೆ ಸೇರಿ ಕರ್ನಾಟಕ ಗೆಲ್ತಾರಂತೆ. ರಾಹುಲ್ ಯುಗದಲ್ಲಿ ಅಮೇಥಿ ಗೆಲ್ಲೋದೂ ಕಷ್ಟ ಇದೆ. ಅಮೇಥಿಯಲ್ಲೇ ಜೀರೋ ಆದವರು ಈಗ ಕರ್ನಾಟಕ ಗೆಲ್ತಾರಂತೆ. ಇದೊಂದು ಬಿಗ್ ಜೋಕ್ ಅಂತ ಬಿಜೆಪಿ ವರಿಷ್ಠ ಮುರಳೀಧರ್ ರಾವ್ ವ್ಯಂಗ್ಯವಾಡಿದ್ದಾರೆ.

    ಜನ ಸುರಕ್ಷಾ ಯಾತ್ರೆ ಸಂದರ್ಭದಲ್ಲಿ ಉಡುಪಿಯ ಕಿನ್ನಿಮೂಲ್ಕಿಯಲ್ಲಿ ಮಾತನಾಡಿದ ಅವರು, ರಾಹುಲ್ ಪಕ್ಷದ ಅಧ್ಯಕ್ಷರಾಗಿದ್ದಾರೆ. ಕಾಂಗ್ರೆಸ್ ಶೀಘ್ರ ಪಾತಾಳಕ್ಕೆ ಹೋಗ್ತದೆ. ಕಾಂಗ್ರೆಸ್ ಪಿಎಫ್ ಐ, ಎಸ್‍ಡಿಪಿಐ ಜೊತೆ ಕೈ ಜೋಡಿಸಿದ್ರೂ ಚುನಾವಣೆ ಗೆಲ್ಲೋಕಾಗಲ್ಲ ಅಂದ್ರು. ಇದನ್ನೂ ಓದಿ: ಸಿಎಂ ಚುನಾವಣೆ ಸಂದರ್ಭ ಕೃಷ್ಣಮಠಕ್ಕೆ ಬಂದ್ರೆ ಬಡಿಗೆ ತಗೊಳ್ಳಿ: ಶೋಭಾ ಕರಂದ್ಲಾಜೆ

    ಸಿಎಂ ಅವರ ನಂ.1 ಜಾಹೀರಾತು ನೋಡಿದ್ರೆ ನಗು ಬರುತ್ತದೆ. ನನಗೆ ತೆಲುಗು ಸಿನಿಮಾ ನೆನಪಾಗುತ್ತದೆ. ಖೈದಿ ನಂ.1, ರೌಡಿ ನಂ.1, ಕೇಡಿ ನಂ.1, ಗೂಂಡಾ ನಂ.1 ನೋಡಿದ ಹಾಗಾಗುತ್ತದೆ. ಇದು ಮಾಫಿಯಾ ಸರ್ಕಾರ. ಇವರಿಂದ ಅಭಿವೃದ್ದಿ ಅಸಾಧ್ಯ. ಕಾಂಗ್ರೆಸ್ ಲೆಕ್ಕಾಚಾರ ಮುಗಿದಿದೆ. ಇದು ಭೃಷ್ಟಾಚಾರಿಗಳ ಪಾರ್ಟಿ. ಸಿದ್ದರಾಮಯ್ಯ ಜೈಲಿಗೆ ಹೋಗುವ ದಿನವೂ ದೂರವಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಉಪೇಂದ್ರ ಮಾತ್ರವಲ್ಲ, ಸೋನಿಯಾ ಗಾಂಧಿ ಬಿಜೆಪಿಗೆ ಬಂದ್ರೂ ಸ್ವಾಗತ- ಈಶ್ವರಪ್ಪ

    40 ಲಕ್ಷದ ವಾಚ್ ಕಟ್ಟಿ ನಾಚಿಕೆ ಬಿಟ್ಟು ವೇದಿಕೆಯಲ್ಲಿ ಕೂರ್ತಾರೆ. ನಾನು ಭೃಷ್ಟ ಅಲ್ಲ ಅಂತಾರೆ. ಸಿದ್ದರಾಮಯ್ಯ ಡಾನ್ ಮಾತ್ರವಲ್ಲ ಭ್ರಷ್ಟಾಚಾರಿನೂ ಹೌದು ಎಂದು ಟೀಕಿಸಿದ ಅವರು, ಕಾಂಗ್ರೆಸ್ ಫೇಲ್, ಸಿದ್ದರಾಮಯ್ಯ ಫೇಲ್ ಎಂದು ಹೇಳಿದರು. ಇದನ್ನೂ ಓದಿ: ಸಿದ್ದರಾಮಯ್ಯ ತಾಯಿ ಸೋನಿಯಾಗಾಂಧಿ, ಸಿಎಂ ದೇಹದಲ್ಲಿ ಹರಿಯುತ್ತಿರೋದು ಟಿಪ್ಪು ರಕ್ತ: ಈಶ್ವರಪ್ಪ

    ಸಿಎಂ ಗೆ ಪಿಎಫ್‍ಐ ಜೊತೆ ಪಾರ್ಟ್‍ನರ್ ಶಿಪ್ ಇದೆ. ಜನಸಂಘ ಅಂದ್ರೆ ಜೋಕ್ ಅಂದವರು ಈಗ ದೇಶದಲ್ಲಿ ಬಿಜೆಪಿ ಬೆಳವಣಿಗೆ ನೋಡಿ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ 21 ರಾಜ್ಯಗಳಲ್ಲಿ ಬಿಜೆಪಿ ಇದೆ. ಮುಂದೆ ಕರ್ನಾಟಕದಲ್ಲೂ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಬಿಜೆಪಿ ಜನ ಸುರಕ್ಷಾ ಯಾತ್ರೆಯಲ್ಲಿ ಸಿಲುಕಿದ ಗರ್ಭಿಣಿ – ಪೊಲೀಸರ ವಿರುದ್ಧ ಜನಾಕ್ರೋಶ

  • ಗುಜರಾತ್ ಚುನಾವಣೆ ಗೆಲುವಿನ ಬೆನ್ನಲ್ಲೇ ರಾಜ್ಯದಲ್ಲಿ ಬಿಜೆಪಿ ಆಪರೇಷನ್!

    ಗುಜರಾತ್ ಚುನಾವಣೆ ಗೆಲುವಿನ ಬೆನ್ನಲ್ಲೇ ರಾಜ್ಯದಲ್ಲಿ ಬಿಜೆಪಿ ಆಪರೇಷನ್!

    ಬೆಂಗಳೂರು: ಗುಜರಾತ್ ಚುನಾವಣೆ ಗೆದ್ದ ಬೆನ್ನಲ್ಲೇ ಬಿಜೆಪಿ ಹೈಕಮಾಂಡ್ ಕರ್ನಾಟಕದಲ್ಲಿ ಮಿಷನ್ 150 ಸಾಧಿಸಲು ಹೊಸ ಕಾರ್ಯತಂತ್ರ ರೂಪಿಸಿದೆ.

    ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಪಡೆಯಲು ಹೊಸ ಕಾರ್ಯತಂತ್ರ ರಚನೆ ಮಾಡಿದ್ದಾರೆ ಎನ್ನಲಾಗಿದ್ದು, ಹೊಸ ಕಾರ್ಯತಂತ್ರದ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ವಹಿಸಿರುವ ಮುರಳೀಧರ್ ರಾವ್ ಬದಲಾವಣೆ ಮಾಡುವ ಸಾಧ್ಯತೆ ಇದೆ.

    ಮುರಳೀಧರ್ ರಾವ್ ಅವರನ್ನು ಬದಲಾವಣೆ ಮಾಡಿ ಗುಜರಾತ್ ರಾಜ್ಯದ ಬಿಜೆಪಿ ಉಸ್ತುವಾರಿ ಕಾರ್ಯ ನಿರ್ವಹಿಸುತ್ತಿದ್ದ ಭೂಪೇಂದ್ರ ಯಾದವ್ ಅವರನ್ನು ನೇಮಿಸಲು ಅಮಿತ್‍ಶಾ ಮುಂದಾಗಿದ್ದಾರೆ ಎನ್ನಲಾಗಿದೆ.

    ಈ ಹಿಂದೆ ಬಿಹಾರ ಚುನಾವಣೆಯಲ್ಲಿ ಬಿಜೆಪಿ ಉಸ್ತುವಾರಿಯಾಗಿ ಕಾರ್ಯನಿರ್ವಹಿಸಿದ್ದ ಇವರು ಚುನಾವಣೆ ಚಾಣಕ್ಯ ಎಂದೇ ಬಿಜೆಪಿ ವಲಯದಲ್ಲಿ ಹೆಸರು ಪಡೆದಿದ್ದಾರೆ. ಪ್ರಸ್ತುತ ರಾಜ್ಯ ಸಭಾ ಸದಸ್ಯರಾಗಿರುವ ಭೂಪೇಂದ್ರ ಯಾದವ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

  • ಮೋದಿ ಮೇಲೆ ನಂಬಿಕೆ ಇಟ್ಟಿದ್ದಾರೆ, ಕಾಂಗ್ರೆಸ್ ಮುಕ್ತ ಭಾರತ ಮುಂದುವರೆಯಲಿದೆ: ಮುರಳೀಧರ್ ರಾವ್

    ಮೋದಿ ಮೇಲೆ ನಂಬಿಕೆ ಇಟ್ಟಿದ್ದಾರೆ, ಕಾಂಗ್ರೆಸ್ ಮುಕ್ತ ಭಾರತ ಮುಂದುವರೆಯಲಿದೆ: ಮುರಳೀಧರ್ ರಾವ್

    ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೇಲೆ ಜನರು ಇನ್ನೂ ನಂಬಿಕೆ ಇಟ್ಟಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ಮುಕ್ತ ಭಾರತ ಮುಂದುವರಿಯಲಿದೆ ಎಂದು ರಾಜ್ಯ ಉಸ್ತುವಾರಿ ಮುರಳೀಧರ್ ರಾವ್ ಹೇಳಿದ್ದಾರೆ.

    ಪಬ್ಲಿಕ್ ಟಿವಿಗೆ ಮುರಳೀಧರ್ ರಾವ್ ಪ್ರತಿಕ್ರಿಯೆ ನೀಡಿ, ಗುಜರಾತ್ ಹಾಗೂ ಹಿಮಾಚಲ ಪ್ರದೇಶದಲ್ಲಿ ನೀರಿಕ್ಷಿತ ಮಟ್ಟ ತಲುಪುತ್ತಿದ್ದೇವೆ. ಎರಡು ರಾಜ್ಯದಲ್ಲೂ ಬಿಜೆಪಿ ಗೆಲುವು ಸಾಧಿಸಲಿದೆ. 22 ವರ್ಷಗಳ ಆಡಳಿತ ಜೊತೆಗೆ ಮತ್ತೆ ಗುಜರಾತ್ ನಲ್ಲಿ ಬಿಜೆಪಿ ಅಧಿಕಾರ ಬರುತ್ತೆ ಎಂದು ಸಂತಸದಿಂದ ಹೇಳಿದರು.

    ಪ್ರಧಾನಿ ಮೋದಿ ಮೇಲೆ ಜನರು ಇನ್ನೂ ನಂಬಿಕೆ ಇಟ್ಟಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ಮುಕ್ತ ಭಾರತ ಮುಂದುವರಿಯಲಿದೆ. ಮೋದಿ ಪ್ರತಿಬಾರಿ ಎಲ್ಲಾ ಕಡೆ ಪ್ರಚಾರ ಮಾಡುವಂತೆ ಮಾಡಿದ್ದಾರೆ. ಮೋದಿ ಗುಜರಾತಿನ ಮುಖ್ಯಮಂತ್ರಿಯಾಗಿದ್ದವರು. ಅಷ್ಟೇ ಅಲ್ಲದೇ ಅಮಿತ್ ಷಾ ರಾಜ್ಯ ಸಭಾ ಸದಸ್ಯರಾಗಿದ್ದರು. ಆದ್ದರಿಂದ ಅವರು ಪ್ರಚಾರ ಮಾಡುವುದರಲ್ಲಿ ತಪ್ಪಿಲ್ಲ ಎಂದರು.

    ನಮ್ಮ ನಿರೀಕ್ಷೆ 150 ಸೀಟುಗಳಾಗಿತ್ತು. ಆದರೆ ನಮ್ಮ ನಿರೀಕ್ಷೆಗಿಂತ ಕಡಿಮೆ ಬರುವ ಸಾಧ್ಯತೆ ಇದೆ. ಮೊದಲು ಪೂರ್ಣ ಫಲಿತಾಂಶ ಬಂದ ಮೇಲೆ ಸ್ಥಾನ ಕಡಿಮೆ ಆಗಲು ಏನು ಕಾರಣ ಎಂಬುದರ ಬಗ್ಗೆ ಚರ್ಚೆ ಮಾಡುತ್ತೇವೆ. ಈ ಫಲಿತಾಂಶ ಕರ್ನಾಟಕದ ಮೇಲೆ ಪರಿಣಾಮ ಬೀರಲಿದೆ. ಕರ್ನಾಟಕದಲ್ಲೂ ಕಾಂಗ್ರೆಸ್ ಮುಕ್ತವಾಗಲಿದೆ ಎಂದು ತಿಳಿಸಿದ್ದಾರೆ.