Tag: ಮುರಳಿ ಶರ್ಮಾ

  • ಸುದೀಪ್, ಉಪ್ಪಿ ಕಾಂಬಿನೇಷನ್ ‘ಕಬ್ಜ’ ಚಿತ್ರಕ್ಕೆ ಇಬ್ಬರು ದಕ್ಷಿಣ ತಾರೆಯರ ಎಂಟ್ರಿ

    ಸುದೀಪ್, ಉಪ್ಪಿ ಕಾಂಬಿನೇಷನ್ ‘ಕಬ್ಜ’ ಚಿತ್ರಕ್ಕೆ ಇಬ್ಬರು ದಕ್ಷಿಣ ತಾರೆಯರ ಎಂಟ್ರಿ

    ಆರ್.ಚಂದ್ರು ನಿರ್ದೇಶನದ ‘ಕಬ್ಜ’ ಸಿನಿಮಾ ಭಾರತೀಯ ಚಿತ್ರ ರಂಗದಲ್ಲೇ ಹೊಸ ಮನ್ವಂತರಕ್ಕೆ ಕಾರಣವಾಗುತ್ತಿದೆ. ಭಾರೀ ಬಜೆಟ್ ಮತ್ತು ಸಿನಿಮಾ ತಾರೆಯರಿಂದಾಗಿಯೇ ಚಿತ್ರ ನಿರೀಕ್ಷೆ ಮೂಡಿಸಿದೆ. ಉಪೇಂದ್ರ ಅವರಿಂದ ಶುರುವಾಗಿ ಕಲಾವಿದರ ಆಯ್ಕೆ, ಒಂದೊಂದೇ ತಿರುವು ಪಡೆದುಕೊಳ್ಳುತ್ತಿದೆ.

    ಉಪೇಂದ್ರ ನಂತರ ಮತ್ತೊಬ್ಬ ಸ್ಟಾರ್ ಈ ಸಿನಿಮಾಗೆ ಎಂಟ್ರಿ ಕೊಟ್ಟರು. ಅವರೇ ಕಿಚ್ಚ ಸುದೀಪ್. ಕಿಚ್ಚ ಮತ್ತು ಉಪ್ಪಿ ಕಾಂಬಿನೇಷನ್ ನ ಚಿತ್ರಗಳು ಈಗಾಗಲೇ ಗೆದ್ದಿರುವುದರಿಂದ ಮತ್ತಷ್ಟು ಕುತೂಹಲಕ್ಕೆ ಕಬ್ಜ ಕಾರಣವಾಯಿತು. ಈ ಸಿನಿಮಾದಲ್ಲಿ ಇಬ್ಬರು ನಾಯಕಿಯರಿದ್ದು, ಮೊನ್ನೆಯಷ್ಟೇ ಒಬ್ಬ ನಾಯಕಿಯನ್ನು ಚಂದ್ರು ಪರಿಚಯಿಸಿದರು. ಇದನ್ನೂ ಓದಿ : ಸರ್ರಂತ ಸುಡುವ ಜ್ವಾಲಾಗ್ನಿ ಆಗಿ ಬಂದ ಈ ತೂಫಾನ್: ಕೆಜಿಎಫ್ 2 ಫಸ್ಟ್ ಲಿರಿಕಲ್ ಹಾಡು ರಿಲೀಸ್

    ಹೌದು, ಉಪ್ಪಿ ಮತ್ತು ಸುದೀಪ್ ನಂತರ  ನಾಯಕಿಯಾಗಿ ದಕ್ಷಿಣದ ಸ್ಟಾರ್ ನಟಿ ಶ್ರೀಯಾ ಶರಣ್ ತಾರಾಗಣದಲ್ಲಿ ಕಾಣಿಸಿಕೊಂಡ ಪ್ರಮುಖ ಕಲಾವಿದೆ. ಈ ಸಿನಿಮಾದಲ್ಲಿ ಶ್ರೀಯಾ ನಾಯಕಿಯಾಗಿ ನಟಿಸುತ್ತಿದ್ದು, ಹೊಸ ಬಗೆಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈಗಾಗಲೇ ಶ್ರೀಯಾ  ದೃಶ್ಯಗಳನ್ನು ನಿರ್ದೇಶಕರು ಸೆರೆ ಹಿಡಿಯುತ್ತಾರೆ. ಇದನ್ನೂ ಓದಿ : ‘ದಿ ಕಾಶ್ಮೀರ್ ಫೈಲ್ಸ್’ ರಿಯಲ್ ಸ್ಟೋರಿ : ಅಕ್ಕಿ ಡ್ರಮ್ ನಲ್ಲಿ ಕೊಲ್ಲಲ್ಪಟ್ಟ ನಿಜವಾದ ಕಾಶ್ಮೀರಿ ಪಂಡಿತ ಇವರು

    ಮೊನ್ನೆಯಷ್ಟೇ ಶ್ರೀಯಾ ಅವರನ್ನು ಪರಿಚಯಿಸಿದ್ದ ನಿರ್ದೇಶಕ ಚಂದ್ರು, ಇದೀಗ ದಕ್ಷಿಣ ಸಿನಿಮಾ ರಂಗದಿಂದ ಮತ್ತಿಬ್ಬರು ಹೆಸರಾಂತ ಕಲಾವಿದರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇವತ್ತೇ ಈ ಕುರಿತು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು, ಮುರಳಿ ಶರ್ಮಾ ಮತ್ತು ಪೊಸನಿ ಕೃಷ್ಣ ಮುರಳಿ ಕಬ್ಜ ಸಿನಿಮಾದ ಮಹತ್ವದ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

  • ಬಹುಭಾಷಾ ನಟ ಮುರಳಿ ಶರ್ಮಾಗೆ ಮಾತೃ ವಿಯೋಗ

    ಬಹುಭಾಷಾ ನಟ ಮುರಳಿ ಶರ್ಮಾಗೆ ಮಾತೃ ವಿಯೋಗ

    ಮುಂಬೈ: ತೆಲುಗು, ತಮಿಳು, ಹಿಂದಿ ಮತ್ತು ಮರಾಠಿ ಭಾಷೆಗಳಲ್ಲಿ ನಟಿಸಿ ಖ್ಯಾತಿ ಪಡೆದಿರುವ ನಟ ಮುರಳಿ ಶರ್ಮಾ ಅವರ ತಾಯಿ ಸೋಮವಾರ ನಿಧನರಾಗಿದ್ದಾರೆ.

    ಪದ್ಮಾ ಶರ್ಮಾ (76) ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಮುರಳಿ ಶರ್ಮಾ ತಾಯಿ ಮುಂಬೈನಲ್ಲಿ ನೆಲೆಸಿದ್ದು, ಅವರ ಸ್ವ-ಗೃಹದಲ್ಲೇ ಕೊನೆಯುಸಿರೆಳೆದರು. ಕಳೆದ ವರ್ಷ ಮುರಳಿ ಅವರ ತಂದೆ ವೃಜ್‍ಭೂಷಣ್ ಶರ್ಮಾ ನಿಧನರಾಗಿದ್ದರು. ಈಗ ತಾಯಿಯೂ ಕೂಡ ವಿಧಿವಶರಾಗಿದ್ದಾರೆ.

    ಟಾಲಿವುಡ್ ಮತ್ತು ಬಾಲಿವುಡ್‍ನಲ್ಲಿ ತಮ್ಮ ವಿಭಿನ್ನ ಅಭಿನಯದ ಮೂಲಕವೇ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಮುರಳಿ ಶರ್ಮಾ ಅವರು ನಟ, ಪೋಷಕ ನಟ ಮತ್ತು ಖಳನಟನಾಗಿಯೂ ಅಭಿನಯಿಸಿದ್ದಾರೆ. ಇತ್ತೀಚೆಗೆ ಬಿಡುಗಡೆಯಾಗಿ ಯಶಸ್ವಿಯಾಗಿದ್ದ ‘ಅಲಾ ವೈಕುಂಟಪುರಂಲೋ’ ಸಿನಿಮಾದಲ್ಲೂ ನಟಿಸಿದ್ದಾರೆ.

    ಮುರಳಿ ಶರ್ಮಾ ‘ದಿಲ್ ವಿಲ್ ಪ್ಯಾರ್ ವ್ಯಾರ್’ ಸಿನಿಮಾದ ಮೂಲಕ ಬಾಲಿವುಡ್‍ಗೆ ಎಂಟ್ರಿ ಕೊಟ್ಟಿದ್ದರು. ನಂತರ ಮೇನ್ ಹೂ ನಾ, ಎಬಿಸಿಡಿ 2, ಬದ್ಲಾಪುರ್, ಧಮಾಲ್, ಬೇಬಿ, ಗೋಲ್‍ಮಾಲ್ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.