Tag: ಮುರಳಿ

  • ‘ನಮೋ ಭೂತಾತ್ಮ 2’ ಚಿತ್ರದಲ್ಲೂ ಉರ್ದು ಮಿಶ್ರಿತ ಸಾಂಗ್

    ‘ನಮೋ ಭೂತಾತ್ಮ 2’ ಚಿತ್ರದಲ್ಲೂ ಉರ್ದು ಮಿಶ್ರಿತ ಸಾಂಗ್

    ಕೋಮಲ್ (Komal) ನಟನೆಯ ‘ಗೋವಿಂದಾಯ ನಮಃ’ ಸಿನಿಮಾ ಪ್ಯಾರ್ಗೆ ಆಗ್ಬುಟೈತಿ ಹಾಡಿನ (Song) ಮೂಲಕ ಸಖತ್ ಫೇಮಸ್ ಆಗಿತ್ತು. ಈ ಒಂದು ಹಾಡು ಇಡೀ ಸಿನಿಮಾವನ್ನು ಗೆಲುವಿನ ಅಂಚಿಗೆ ತೆಗೆದುಕೊಂಡು ಹೋಗಿತ್ತು. ಇದೀಗ ಕೋಮಲ್ ಮತ್ತೆ ಅಂಥದ್ದೊಂದು ಪ್ರಯೋಗ ಮಾಡಿದ್ದಾರೆ. ಅವರ ‘ನಮೋ ಭೂತಾತ್ಮ 2’ (Namo Bhutatma 2) ಸಿನಿಮಾದಲ್ಲೂ ಉರ್ದು ಮಿಶ್ರಿತ ಹಾಡೊಂದನ್ನು ಸೇರಿಸಿದ್ದಾರೆ. ಈ ಹಾಡು ಈಗಾಗಲೇ ರಿಲೀಸ್ ಆಗಿದ್ದು ಕೇಳುಗರ ಗಮನ ಸೆಳೆದಿದೆ.

      

    ಅಯ್ಯೋ ಅಯ್ಯೋ ಹೆಸರಿನಲ್ಲಿ ಈ ಹಾಡು ಮೂಡಿ ಬಂದಿದ್ದು, ಕವಿರಾಜ್ ಸಾಹಿತ್ಯ ಬರೆದಿದ್ದಾರೆ. ವಿಜಯ್ ಪ್ರಕಾಶ್ (Vijay Prakash) ಕಂಠಸಿರಿಯಲ್ಲಿ ಮೂಡಿ ಬಂದ ಗೀತೆಗೆ ಅರುಣ್ ಆಂಡ್ಯೂ ಮ್ಯೂಸಿಕ್ ಮಾಡಿದ್ದಾರೆ. ಸ್ವತಃ ಮುರಳಿ (Murali) ಮಾಸ್ಟರ್ ನೃತ್ಯ ಸಂಯೋಜನೆಯ ಜೊತೆಗೆ ಅವರು ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದು ವಿಶೇಷ. ಇದನ್ನೂ ಓದಿ:ಗಂಡು ಮಗುವಿಗೆ ಜನ್ಮ ನೀಡಿದ ರಾಧಿಕಾ ರಾವ್

    ಮೊನ್ನೆಯಷ್ಟೇ ಈ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ಸಿನಿಮಾ ಕುರಿತು ಅಂದು ಮಾತನಾಡಿದ್ದ ಕೋಮಲ್, ‘ನಾನು ನಿರ್ಮಿಸಿ, ನಟಿಸಿದ್ದ, ಮುರಳಿ ಮಾಸ್ಟರ್ ನಿರ್ದೇಶಿಸಿದ್ದ ನಮೋ ಭೂತಾತ್ಮ ಚಿತ್ರದ ಮೊದಲ ಭಾಗ ಬಿಡುಗಡೆಯಾಗಿ ಹತ್ತು ವರ್ಷಗಳಾಗಿದೆ. ಆ ಚಿತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ನಂತರ ಮುರಳಿ ಮಾಸ್ಟರ್ ಹಾಗೂ ನಾನು ಇನ್ನೆರಡು ಚಿತ್ರಗಳ ಬಗ್ಗೆ ಚರ್ಚೆ ಮಾಡಿದ್ದೆವು. ಆದರೆ ಎಷ್ಟೋ ವರ್ಷಗಳ ಬಳಿಕ ಈ ನಮೋ  ಭೂತಾತ್ಮ 2 ಚಿತ್ರ ನಮ್ಮಿಬ್ಬರ ಕಾಂಬಿನೇಶನ್ ನಲ್ಲಿ ಬರುತ್ತಿದೆ‌. ಮೊದಲಭಾಗಕ್ಕೆ ಭಯ ಹುಟ್ಟಿಸುವ ಸನ್ನಿವೇಶಗಳು ಹೆಚ್ಚಾಗಿದ್ದವು. ಆದರೆ ಈ ಚಿತ್ರದಲ್ಲಿ ಕಾಮಿಡಿ ಕೂಡ ಅರ್ಧ ಭಾಗದಷ್ಟಿರುತ್ತದೆ. ಟೀಸರ್ ಬಿಡುಗಡೆ ಮಾಡಿಕೊಟ್ಟ ಧ್ರುವ ಸರ್ಜಾ ಅವರಿಗೆ ಧನ್ಯವಾದ’ ಎಂದಿದ್ದರು.

     

    2014ರಲ್ಲಿ ನನಗೆ ಕೋಮಲ್ ಅವರು ನಮೋ ಭೂತಾತ್ಮ ಚಿತ್ರ ನಿರ್ದೇಶಿಸಲು ಅವಕಾಶ ನೀಡಿದ್ದರು. ಆನಂತರ ಈಗ ನಮೋ ಭೂತಾತ್ಮ 2 ಚಿತ್ರದಲ್ಲಿ ಅವರ ಜೊತೆ ಮಾಡಿದ್ದೇನೆ. ನನ್ನ ಅಕ್ಕನ ಮಗ ಸಂತೋಷ್ ಶೇಖರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಕೊರೋನ ಸಮಯದಲ್ಲೇ ಈ ಚಿತ್ರದ ಕಥೆ ಸಿದ್ದ ಮಾಡಿಕೊಂಡಿದ್ದೆ. ಆನಂತರ ಕೋಮಲ್ ಅವರಿಗೆ ನಾನು ಹಾಗೂ ಸಂತೋಷ್ ಹೋಗಿ ಈ ಚಿತ್ರದ ಕಥೆ ಹೇಳಿದ್ದೆವು. ಕೋಮಲ್ ಅವರು ನಟಿಸಲು ಒಪ್ಪಿದರು. ಚಿತ್ರಕ್ಕೆ ನಮೋ ಭೂತಾತ್ಮ 2 ಎಂದು ಹೆಸರಿಟ್ಟೆವು. ನನ್ನ ತಂಡದ ಸದಸ್ಯರ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ. ಇಂದು ಟೀಸರ್ ಬಿಡುಗಡೆಯಾಗಿದೆ. ಸದ್ಯದಲ್ಲೇ ಚಿತ್ರ ತೆರೆಗೆ. ಟೀಸರ್ ಬಿಡುಗಡೆ ಮಾಡಿಕೊಟ್ಟ ಧ್ರುವ ಸರ್ಜಾ ಅವರಿಗೆ ವಿಶೇಷ ಧನ್ಯವಾದ ಎಂದರು ನಿರ್ದೇಶಕ ಮುರಳಿ. ನಾಯಕಿ ಲೇಖಾ ಚಂದ್ರ, ಚಿತ್ರದಲ್ಲಿ ನಟಿಸಿರುವ ಜಿ.ಜಿ, ಮೋನಿಕಾ, ವರುಣ್ ರಾಜ್ ಹಾಗೂ ಚಿತ್ರದ ನಿರ್ಮಾಪಕ ಸಂತೋಷ್ ಶೇಖರ್ ಚಿತ್ರದ ಕುರಿತು ಮಾತನಾಡಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 50 ದಿನ ಪ್ರೀತಿಸಿದ್ದ ಅಕ್ಷತಾ-ರಾಕಿ ಬ್ರೇಕಪ್ ಆಗಿದ್ದೇಕೆ? ಮುರಳಿ ಉತ್ತರ ಹೀಗಿತ್ತು

    50 ದಿನ ಪ್ರೀತಿಸಿದ್ದ ಅಕ್ಷತಾ-ರಾಕಿ ಬ್ರೇಕಪ್ ಆಗಿದ್ದೇಕೆ? ಮುರಳಿ ಉತ್ತರ ಹೀಗಿತ್ತು

    ಬೆಂಗಳೂರು: 15 ವಿವಿಧ ಮನಸ್ಸುಗಳನ್ನು ಒಂದೇ ಮನೆಯಲ್ಲಿರಿಸುವುದು. ಬಾಹ್ಯ ಜಗತ್ತಿನೊಂದಿಗೆ ಸಂಪರ್ಕವಿಲ್ಲದೆ ಅಲ್ಲಿರುವ ವಿಭಿನ್ನ ಜನರೊಂದಿಗೆ ಜೀವನ ನಡೆಸುವ ರಿಯಾಲಿಟಿ ಶೋ ಬಿಗ್‍ಬಾಸ್. ಈ ಕಾರ್ಯಕ್ರಮ ಹಿಂದಿ, ತಮಿಳು, ತೆಲುಗು ಮತ್ತು ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಮೂಡಿಬರುತ್ತಿದ್ದು, ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಕನ್ನಡದ ಬಿಗ್‍ಬಾಸ್ ಸಹ 6ನೇ ಆವೃತ್ತಿಯ ಅಂತಿಮ ಘಟ್ಟಕ್ಕೆ ತಲುಪಿದೆ. ಶೋ ಆರಂಭವಾದಗಿನಿಂದಲೂ ಮನೆಯಲ್ಲಿರುವ ಅಕ್ಷತಾ ಪಾಂಡವಪುರ ಮತ್ತು ಎಂ.ಜೆ.ರಾಕೇಶ್ ಇಬ್ಬರ ಪ್ರೇಮ ಕಹಾನಿ ಬಹು ಜನರನ್ನು ಆಕರ್ಷಿಸಿತ್ತು.

    ಆರಂಭದ 50 ದಿನಗಳಲ್ಲಿ ಇಬ್ಬರ ಮಧ್ಯೆ ಪ್ರೀತಿ ಇತ್ತು ಎಂಬುದನ್ನು 11ನೇ ವಾರ ಮನೆಯಿಂದ ಹೊರ ಬಂದಿರುವ ಮುರಳಿ ಸಹ ಒಪ್ಪಿಕೊಳ್ಳುತ್ತಾರೆ. ಪಬ್ಲಿಕ್ ಟಿವಿಗೆ ನೀಡಿದ ಸಂದರ್ಶನದಲ್ಲಿ ಕೆಲವು ವಿಚಾರಗಳನ್ನು ಹೊರಹಾಕಿರುವ ಮುರಳಿ, ಕೆಲ ಸ್ಪರ್ಧಿಗಳ ವರ್ತನೆ ಮತ್ತು ನಡವಳಿಕೆ ಬಗ್ಗೆ ಅಸಮಾಧಾನವನ್ನು ಹೊರಹಾಕಿದ್ದಾರೆ. ಅಕ್ಷತಾ ಬಗ್ಗೆ ಮಾತನಾಡುತ್ತಾ ಆಕೆ ಹುಡುಗಿ ಅಲ್ಲ ಹೆಂಗಸು ಎಂದು ಮಾತು ಆರಂಭಿಸಿದ ಮುರಳಿ, ಆಕೆ ಮಾಡ್ತೀರೋದು ಸರಿ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದರು. ಇದನ್ನೂ ಓದಿ:  ಅಮ್ಮ ರಾಕಿಯನ್ನ ಮಾತಾಡ್ಸು-ತಾಯಿ ಬಳಿ ಅಕ್ಷತಾ ಮನವಿ

    ಬ್ರೇಕಪ್ ಆಗಿದ್ದೇಕೆ?
    ಮೊದಲ 50 ದಿನ ಇಬ್ಬರು ಜೊತೆಯಾಗಿ ಹೆಚ್ಚು ಸಮಯ ಕಳೆಯುತ್ತಿದ್ದರು. ಒಂದು ವಾರ ರಾಕೇಶ್ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾಗ ಬಿಗ್‍ಬಾಸ್ ಅಧಿಕಾರ ನೀಡಿತ್ತು. ನಾಮಿನೇಟ್ ಆಗಿರುವ ಸ್ಪರ್ಧಿಗಳಲ್ಲಿ ಒಬ್ಬರನ್ನು ಸೇವ್ ಮಾಡಬಹುದು ಎಂದು ಹೇಳಿತ್ತು. ಆ ವಾರ ನಾಮಿನೇಟ್ ಆದವರಲ್ಲಿ ಅಕ್ಷತಾ ಮತ್ತು ಮುರಳಿ ಸಹ ಇದ್ದರು. ಎಲ್ಲರೂ ಅಕ್ಷತಾಳನ್ನು ರಾಕೇಶ್ ಸೇವ್ ಮಾಡುತ್ತಾನೆ ಅಂದುಕೊಂಡಿದ್ದರು. ಆದ್ರೆ ಈ ಮನೆಗೆ ಮುರಳಿ ಅವರು ಅವಶ್ಯವಾಗಿದ್ದರು. ಹಾಗಾಗಿ ಮುರಳಿ ಅವರನ್ನು ಸೇವ್ ಮಾಡ್ತೀನಿ ಅಂತಾ ಹೇಳಿದ್ದರಿಂದ ಸಹಜವಾಗಿಯೇ ಅಕ್ಷತಾಗೆ ಬೇಸರವಾಯ್ತು ಅಂತಾ ಮುರಳಿ ಹೇಳಿದರು. ಇದನ್ನೂ ಓದಿ: ಬಿಗ್‍ಬಾಸ್ ಸ್ಪರ್ಧಿಗಳ ರಹಸ್ಯ ಬಿಚ್ಚಿಟ್ಟ ಮುರಳಿ

    ಇದಕ್ಕೂ ಮೊದಲು ಜೋಡಿ ನಾಮಿನೇಷನ್ ವೇಳೆ ಅಕ್ಷತಾ ತಾನು ನಾಮಿನೇಟ್ ಆಗುವ ಮೂಲಕ ರಾಕಿಯನ್ನು ಸೇವ್ ಮಾಡಿದ್ದಳು. ಒಂದು ರೀತಿ ಇಬ್ಬರ ಬ್ರೇಕಪ್ ಗೆ ನಾನೇ ಕಾರಣ ಅಂತ ಹೇಳಿ ಮುರಳಿ ನಕ್ಕರು. ಇದನ್ನೂ ಓದಿ:  ರಾಕೇಶ್ ಕೊಟ್ಟ ಗಿಫ್ಟನ್ನು ಲೈಟ್ ಆಫ್ ಆದ್ಮೇಲೆ ಪಡೆದ ಅಕ್ಷತಾ

    ದಿನವಿಡೀ ರಾಕೇಶ್ ಮತ್ತು ಅಕ್ಷತಾ ಜಗಳ ಆಡುತ್ತಾರೆ. ಬಿಗ್‍ಬಾಸ್ ಮನೆಯ ಲೈಟ್ ಆಫ್ ಆದಾಗ ಮಾತನಾಡಲು ಶುರು ಮಾಡುತ್ತಾರೆ. ಕೆಲವರು ತಮ್ಮ ಮುಖಕ್ಕೆ ತಾವೇ ಬಣ್ಣ ಬಳಿದುಕೊಂಡು ಆಟ ಆಡುತ್ತಿದ್ದಾರೆ. ಆದ್ರೆ ಮನೆಯಿಂದ ಹೊರ ಬಂದ ಮೇಲೆ ಜಗತ್ತು ಅದೇ ಬಣ್ಣವನ್ನು ನಂಬುತ್ತೆ. ಅಷ್ಟು ಬೇಗ ತಾವಾಗಿಯೇ ಹಾಕಿಕೊಂಡ ಬಣ್ಣವನ್ನು ತಾವೇ ಬೇಡ ಅಂದರೂ ಕಳಚಲ್ಲ. ರಿಯಲ್ ಮತ್ತು ರಿಯಾಲಿಟಿಗೂ ತುಂಬಾನೇ ವ್ಯತ್ಯಾಸವಿದೆ ಎಂಬುದನ್ನು ಅಲ್ಲಿರುವವರು ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಮುರಳಿ ಹೇಳಿದ್ದಾರೆ. ಇದನ್ನೂ ಓದಿ: ರಾಕೇಶ್ ಮೇಲೆ ಗುಡುಗಿದ ಅಕ್ಷತಾ – ಮೋಸ ಹೋದೆ ಎಂದು ಬಾತ್‍ರೂಮಿನಲ್ಲಿ ಚೀರಾಟ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಿಗ್‍ಬಾಸ್ ಸ್ಪರ್ಧಿಗಳ ರಹಸ್ಯ ಬಿಚ್ಚಿಟ್ಟ ಮುರಳಿ

    ಬಿಗ್‍ಬಾಸ್ ಸ್ಪರ್ಧಿಗಳ ರಹಸ್ಯ ಬಿಚ್ಚಿಟ್ಟ ಮುರಳಿ

    ಬೆಂಗಳೂರು: ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್‍ಬಾಸ್. ಈ ವಾರ ಮನೆಯಿಂದ ಹೊರ ಬಂದಿರುವ ಅಡುಗೆ ಮನೆ ಖ್ಯಾತಿಯ ಮುರಳಿ ಪಬ್ಲಿಕ್ ಟಿವಿಗೆ ನೀಡಿದ ಸಂದರ್ಶನದಲ್ಲಿ ಹಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

    ತಮ್ಮ ಅನುಭವ ಹಂಚಿಕೊಂಡ ಮುರಳಿ, ಇನ್ನೆರೆಡು ವಾರ ಬಿಗ್ ಬಾಸ್ ಮನೆಯಲ್ಲಿರಬೇಕಿತ್ತು. ಜನರು ನನ್ನನ್ನು ಹೊರಗೆ ಕರೆದ್ರು ಹಾಗಾಗಿ ಹೊರ ಬಂದಿದ್ದೇನೆ. ಬಿಗ್‍ಬಾಸ್‍ನಿಂದ ಹೊರ ಬಂದರೂ ಅಲ್ಲಿಯ ಗುಂಗು ಇನ್ನು ಕಡಿಮೆಯಾಗಿಲ್ಲ. ಪತ್ನಿ ಪದೇ ಪದೇ ಇದು ನಮ್ಮನೆ ಅಂತ ಹೇಳುತ್ತಿರುತ್ತಾರೆ. ಬಿಗ್‍ಬಾಸ್ ಮನೆಯ ವಾಸ ತುಂಬಾನೇ ಖುಷಿ ಕೊಡ್ತು ಅಂತಾ ತಿಳಿಸಿದರು.

    ಈ ವೇಳೆ ಮಾತನಾಡುತ್ತಾ ಮನೆಗೆ ಪ್ರವೇಶ ನೀಡಿದ್ದು, ಹೊರ ಬಂದಿದ್ದು, ಸುದೀಪ್ ಜೊತೆ ಮಾತನಾಡಿದ್ದು ಎಲ್ಲವನ್ನು ತಿಳಿಸಿದರು. ತಮ್ಮ ಜೊತೆಯಲ್ಲಿದ್ದ ಕೆಲವು ಸ್ಪರ್ಧಿಗಳ ಬಗ್ಗೆಯೂ ಮಾತನಾಡಿದ್ರು.

    1. ಆ್ಯಂಡಿ: ಒಳ್ಳೆಯ ಹುಡುಗ, ಸ್ವಲ್ಪ ಕೆಟ್ಟ ಬುದ್ದಿ. ಅವರ ತಂದೆ ಆರ್ಮಿಯಲ್ಲಿದ್ದಂತಹ ವ್ಯಕ್ತಿ ಮತ್ತು ತುಂಬಾ ಒಳ್ಳೆಯವರು. ಆದ್ರೆ ಈ ರೀತಿ ಚೇಷ್ಟೆಗಳನ್ನು ಮಾಡುವುದರಿಂದ ಕುಟುಂಬಸ್ಥರಿಗೆ ತುಂಬಾ ನೋವಾಗುತ್ತದೆ. ಜೀವನದಲ್ಲಿ ತುಂಬಾ ಸೋತಿದ್ದೇನೆ. ಹೇಗಾದರೂ ಮಾಡಿ ಗೆಲ್ಲಬೇಕೆಂಬ ಹಠ ತೊಟ್ಟ ಹುಡುಗ.

    2. ಧನರಾಜ್: ಮದುವೆಯಾಗಿ ಆರು ವರ್ಷ ಆಗಿದ್ರೂ, ಇನ್ನು ಬದುಕೇ ಕಟ್ಟಿಕೊಂಡಿಲ್ಲ. ಜೀವನೋಪಾಯಕ್ಕೆ ಕೆಲಸ ಮಾಡಿಕೊಂಡಿದ್ರೂ ಇದೂವರೆಗೂ ಒಂದು ಬ್ರೇಕ್ ಸಿಕ್ಕಿಲ್ಲ. ಇಷ್ಟು ಸಂಪಾದನೆ ಮಾಡಿದ್ರೆ ನನ್ನ ಜೀವನ ಚೆನ್ನಾಗಿರುತ್ತೆ ಅಂತ ಪದೇ ಪದೇ ಹೇಳುತ್ತಾನೆ. ಇಂತಹವರಿಗೆಲ್ಲ ಮನೆಯಿಂದ ಹೊರಬಂದ ಮೇಲೆ ಒಂದು ಬ್ರೇಕ್ ಸಿಗಬೇಕಿದೆ.

    3. ಕವಿತಾ ಗೌಡ: ಏನಾದರೂ ಮಾಡಿ, ಯಾರು ಏನು ಅಂದುಕೊಂಡರು ಪರವಾಗಿಲ್ಲ ಈ ಆಟ ಗೆಲ್ಲಬೇಕೆಂದು ನಿರ್ಧರಿಸಿ ಮನೆಗೆ ಬಂದ ಹುಡುಗಿ.

    4. ರಾಕೇಶ್: ರಾಕೇಶ್ ಗುಡ್ ನೆಸ್ ಮತ್ತು ಗುಡ್ ಮಿಲ್ಕ್ ಅಂತಾ ಹೇಳಿಕೊಂಡು ಆಟವಾಡುತ್ತಿದ್ದಾನೆ. ಒಂದು ರೀತಿ ಸಮಯಸಾಧಕ, ತಮ್ಮ ಮುಖಕ್ಕೆ ತಾನೇ ಬಣ್ಣ ಬಳೆದುಕೊಳ್ಳುತ್ತಿದ್ದಾನೆ. ಮನೆಯಲ್ಲಿ ಮುಖಕ್ಕೆ ಬಣ್ಣ ಬಳೆದುಕೊಂಡು ತನಗೆ ಬೇಕಾದಂತೆ ಎಲ್ಲರನ್ನು ಬಳಸಿಕೊಂಡು ಆಟ ಆಡುತ್ತಿದ್ದಾನೆ. ಮನೆಯಿಂದ ಹೊರಬಂದ ಮೇಲೆ ರಾಕೇಶ್ ತುಂಬಾ ಕಷ್ಟ ಆಗಲಿದೆ.

    5. ನವೀನ್ ಸಜ್ಜು: ತುಂಬಾನೇ ಸರಳವಾದ ವ್ಯಕ್ತಿ. ಲೆಕ್ಕ ಹಾಕಿ ಆಟವಾಡುವಂತಹ ವ್ಯಕ್ತಿ ನವೀನ್ ಅಲ್ಲ. ಯಾರಾದ್ರೂ ತಪ್ಪು ಮಾಡಿದ್ರೆ ಹೇಳೋಕೆ ಹೋಗ್ತಾನೆ. ಅವರು ಕೇಳಿಲ್ಲ ಅಂದ್ರೆ ನಮಗ್ಯಾಕೆ ಗುರುಗಳೇ ಅಂತಾ ಬಂದು ಬಿಡುತ್ತಾನೆ.

    6. ರಶ್ಮಿ: ಅವಳು ತುಂಬಾ ಒಳ್ಳೆಯ ಹುಡುಗಿ. ಮನೆಯಲ್ಲಿ ನನಗೂ ಮತ್ತು ರಶ್ಮಿಗೆ ಹೊಂದಾಣಿಕೆ ಆಗುತ್ತಿತ್ತು. ಇಬ್ಬರು ಕೆಲಸ ಮಾಡಿದ್ದು, ಫೀಲ್ಡ್ ಹೇಗಿದೆ ಎಂಬುದನ್ನು ಅರ್ಥ ಮಾಡಿಕೊಂಡ ಹುಡುಗಿ. ನೇರವಾದ ವ್ಯಕ್ತಿತ್ವ, ಆದ್ರೆ ಮಾತಿನಲ್ಲಿ ಸ್ವಲ್ಪ ಖಾರ ಜಾಸ್ತಿ. ಆ ಖಾರ ಬಿಗ್‍ಬಾಸ್ ಮನೆಯಲ್ಲಿ ಬೇಕಾಗಿರಲಿಲ್ಲ. ನಾನು ಹೇಳಿದ ನಂತರ 5ನೇ ವಾರದಿಂದ ಆ ಖಾರ ಕಡಿಮೆ ಆಗುತ್ತಾ ಬಂತು. ಎಲ್ಲದನ್ನು ಮೊದಲು ನಾನೇ ಹೇಳಬೇಕು. ಬೇಡವಾದ ವಿಚಾರದಲ್ಲಿಯೂ ಮೂಗು ತೂರಿಸೋದನ್ನು ಬಿಟ್ಟರೆ ಒಳ್ಳೆಯ ಹುಡುಗಿ.

    7. ಶಶಿ: ಇವಾಗ ಇಂಡಸ್ಟ್ರಿಗೆ ಬಂದಿದ್ದಾನೆ. ಒಳ್ಳೆ ಹುಡುಗ ಅಂತ ಹೇಳಬೇಕು ಅನ್ನೋಷ್ಟರಲ್ಲಿ ಗೋಡೆಗೆ ಕೈ ಹೊಡೆದುಕೊಳ್ಳುತ್ತಾನೆ. ಎಂಎಸ್ಸಿ ಮಾಡಿ ಬಿಗ್ ಬಾಸ್ ಮನೆಗೆ ಬಂದು ನಾಟಕ ಮಾಡುತ್ತಿದ್ದಾನೆ. ಇನ್ನು ಸಮಯ ಇದೆ, ಎಲ್ಲರ ವ್ಯಕ್ತಿತ್ವ ಗೊತ್ತಾಗುತ್ತದೆ.

    8. ಜಯಶ್ರೀ: ತಾನು ಹಿರಿಯ ಕಲಾವಿದೆ ಎಂಬ ಭ್ರಮೆಯಲ್ಲಿದ್ದಾರೆ. ಗ್ರೂಪ್ ನಲ್ಲಿದ್ರೆ ನನ್ನ ಸೇವ್ ಮಾಡ್ತಾರೆ ಭ್ರಮೆಯಿತ್ತು. ಕೊನೆಗೆ ಗುಂಪಿನಲ್ಲಿದ್ದವರೇ ನಾಮಿನೇಟ್ ಮಾಡಿದರು. ಏನಾದರು ಸಲಹೆ ನೀಡಿದ್ರೆ ತೆಗೆದುಕೊಳ್ಳುವ ಮನಸ್ಥಿತಿ ಇಲ್ಲ. ಜೀವನದಲ್ಲಿ ಎಲ್ಲ ಕಷ್ಟಗಳನ್ನು ನೋಡಿದ್ದೇನೆ ಎಂಬ ಮಾತುಗಳು. ಗ್ರೂಪ್ ಬಿಟ್ಟು ಹೊರಗಡೆ ಬರಲಿಲ್ಲ.

    9. ಅಕ್ಷತಾ: ತುಂಬಾನೇ ನಾಟಕದ ಸ್ವಭಾವದ ಹುಡುಗಿ ಅಲ್ಲಲ್ಲ ಹೆಂಗಸು. ಹುಡುಗಿ ಅಂದ್ರೆ ತಪ್ಪಾಗುತ್ತದೆ. ಜೀವನ ಮತ್ತು ನಾಟಕ ಎರಡೂ ಬೇರೆ ಎಂಬುವುದು ಆಕೆಗೆ ಗೊತ್ತಿಲ್ಲ. ಜೀವನ ನಾವು ರೂಪಿಸಿಕೊಂಡ ಹಾಗೆ ಇರುತ್ತದೆಯೇ ಹೊರತು ಬೇರೆಯವರು ಹೇಳಿದಂತೆ ಇರಬಾರದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಿಗ್ ಮನೆಯಿಂದ ಒಂದೇ ದಿನ ಇಬ್ಬರು ಸ್ಪರ್ಧಿಗಳು ಔಟ್..!

    ಬಿಗ್ ಮನೆಯಿಂದ ಒಂದೇ ದಿನ ಇಬ್ಬರು ಸ್ಪರ್ಧಿಗಳು ಔಟ್..!

    ಬೆಂಗಳೂರು: ಬಿಗ್‍ಬಾಸ್ ಸೀಸನ್ 6 ರಲ್ಲಿ ಒಬ್ಬೊಬ್ಬರಂತೆ ಪ್ರತಿವಾರ ಬಿಗ್ ಮನೆಯಿಂದ ಎಲಿಮಿನೆಟ್ ಮೂಲಕ ಹೊರ ಹೋಗುತ್ತಿದ್ದಾರೆ. ಆದರೆ ಈ ವಾರದಲ್ಲಿ ಇಬ್ಬರು ಸ್ಪರ್ಧಿಗಳು ಎಲಿಮೆನೆಟ್ ಆಗಿದ್ದಾರೆ.

    ಸ್ಪರ್ಧಿ ಮುರಳಿ ಮತ್ತು ಜೀವಿತಾ ಇಬ್ಬರು ಈ ವಾರ ಬಿಗ್ ಬಾಸ್ ಮನೆಯಿಂದ ಎಲಿಮಿನೆಟ್ ಮೂಲಕ ಹೊರ ಬಂದಿದ್ದಾರೆ. ಒಟ್ಟು ಬಿಗ್ ಮನೆಯಲ್ಲಿ 10 ಮಂದಿ ಸ್ಪರ್ಧಿಗಳು ಇದ್ದರು. ಈ ವಾರದಲ್ಲಿ ಸ್ಪರ್ಧಿ ನವೀನ್, ಶಶಿ, ಕವಿತಾ, ಆ್ಯಂಡಿ, ರಾಕೇಶ್, ರಶ್ಮಿ, ಅಕ್ಷತಾ ಮತ್ತು ಧನ್‍ರಾಜ್ ಸೇವ್ ಆಗಿದ್ದಾರೆ. ಕೊನೆಯಲ್ಲಿ ಉಳಿದಿದ್ದ ಜೀವಿತಾ ಮತ್ತು ಮುರಳಿ ಅವರು ಎಮಿಲಿನೆಟ್ ಆಗಿದ್ದು, ಬಿಗ್ ಮನೆಯಿಂದ ಹೊರ ಬಂದಿದ್ದಾರೆ.

    ಸ್ಪರ್ಧಿ ಮುರಳಿ ಅವರು ಬಿಗ್ ಬಾಸ್ ಆರಂಭದ ದಿನದಿಂದಲೂ ತುಂಬಾ ಚೆನ್ನಾಗಿ ಆಟವಾಡಿಕೊಂಡು ಬರುತ್ತಿದ್ದರು. ಆದರೆ ಜೀವಿತಾ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದು, ಕೆಲವು ವಾರಗಳಿಂದಷ್ಟೇ ಬಿಗ್ ಮನೆಯಲ್ಲಿ ಇದ್ದರು. ಆದರೆ ಇಬ್ಬರು ಒಟ್ಟಿಗೆ ಒಂದೇ ವಾರ ಎಲಿಮಿನೆಟ್ ಆಗಿದ್ದಾರೆ.

    ಈ ವಾರ ಇಬ್ಬರು ಎಲಿಮಿನೆಟ್ ಆಗುತ್ತಾರೆ ಎಂಬುದು ಬಿಗ್ ಬಾಸ್ ಸ್ಪರ್ಧಿಗಳಿಗೆ ಗೊತ್ತಿರಲಿಲ್ಲ. ಆದರೆ ಮುರಳಿ ಅವರು ಎಲಿಮೆನೆಟ್ ಆಗಿದ್ದಕ್ಕೆ ಮನೆಯಲ್ಲಿ ಉಳಿದ ಸ್ಪರ್ಧಿಗಳು ಅವರನ್ನು ಕಳುಹಿಸುವಾಗ ಕಣ್ಣೀರು ಹಾಕಿದ್ದಾರೆ. ಬಿಗ್‍ಬಾಸ್ ರಿಲಿಯಾಟಿ ಶೋನಲ್ಲಿ ವಾರದ ಕೊನೆಯಲ್ಲಿ ಅಂದರೆ ಶನಿವಾರ ಪ್ರೇಕ್ಷಕರು ಕೊಟ್ಟಿದ್ದ ವೋಟಿನ ಆಧಾರದ ಮೇರೆಗೆ ಸ್ಪರ್ಧಿಗಳನ್ನು ಎಲಿಮಿನೆಟ್ ಮಾಡಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗೌರಿ-ಗಣೇಶ ಹಬ್ಬಕ್ಕೆ ಸ್ಟಾರ್ ನಟರಿಂದ ಶುಭಾಶಯ

    ಗೌರಿ-ಗಣೇಶ ಹಬ್ಬಕ್ಕೆ ಸ್ಟಾರ್ ನಟರಿಂದ ಶುಭಾಶಯ

    ಬೆಂಗಳೂರು: ರಾಜ್ಯಾದ್ಯಂತ ಇಂದು ಗೌರಿ ಗಣೇಶ ಹಬ್ಬವನ್ನು ಆಚರಿಸುತ್ತಿದ್ದಾರೆ. ಅಲ್ಲದೇ ಸ್ಟಾರ್ ನಟರು ಕೂಡ ಗೌರಿ ಗಣೇಶ ಹಬ್ಬವನ್ನು ಆಚರಿಸಿ ನಾಡಿನ ಸಮಸ್ತ ಜನರಿಗೆ ಹಬ್ಬದ ಶುಭಾಶಯ ತಿಳಿಸಿದ್ದಾರೆ.

    ಸಮಸ್ತ ಕರುನಾಡ ಜನತೆಗೆ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು ನಿಮ್ಮೆಲ್ಲ ಸಂಕಷ್ಟಗಳು ದೂರವಾಗಿ ಜೀವನದ ಎಲ್ಲಾ ಸುಖ ಸಂತೋಷ ನಿಮ್ಮದಾಗಲಿ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಗಣೇಶನ ಮುಂದೆ ಕೈ ಮುಗಿಯುತ್ತಿರುವ ಫೋಟೋ ಹಾಕಿ ಎಲ್ಲರಿಗೂ ಶುಭಾಶಯ ತಿಳಿಸಿದ್ದಾರೆ.

    ಸಮಸ್ತ ಕನ್ನಡ ನಾಡಿನ ಜನತೆಗೆ ಗೌರಿ ಹಣೇಶ ಹಬ್ಬದ ಶುಭಾಶಯಗಳು. ಎಲ್ಲರೂ ಯಾವಾಗಲೂ ಖುಷಿಯಾಗಿರಿ, ಸಂತೋಷವಾಗಿರಿ ಹಾಗೂ ಖುಷಿಯನ್ನು ಹಂಚುತ್ತಿರಿ. ನಿಮ್ಮೆಲರಿಗೂ ನನ್ನ ಕಡೆಯಿಂದ ನಿಮ್ಮಗೆಲ್ಲ ಹೆಚ್ಚಿನ ಪ್ರೀತಿ ಎಂದು ಕಿಚ್ಚ ಸುದೀಪ್ ಟ್ವೀಟ್ ಮಾಡಿ ರಾಜ್ಯದ ಜನರಿಗೆ ಶುಭಾಶಯ ತಿಳಿಸಿದ್ದಾರೆ.

    ನನ್ನ ಉಸಿರಿನಲ್ಲಿ ಬೆರೆತ ಕನ್ನಡ ನಾಡಿನ ಸಮಸ್ತ ಬಂಧುಗಳಿಗೆ ಗೌರಿ ಗಣೇಶನ ಹಬ್ಬದ ಶುಭಾಶಯಗಳು. ನೂರೂ ಕಾಲ ಸುಖ ಸಂತೋಷದಿಂದ ನೆಮ್ಮದಿಯಾಗಿ ನಗುತ ಬಾಳಿ. ಶುಭದಿನ ಶುಭೋದಯ ಎಂದು ನವರಸನಾಯಕ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

    ರೋರಿಂಗ್ ಸ್ಟಾರ್ ಮುರಳಿ ಕೂಡ ‘ಭರಾಟೆ’ ಚಿತ್ರತಂಡದಿಂದ ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಶುಭಾಶಯ ತಿಳಿಸಿದ್ದಾರೆ. ಎಲ್ಲರಿಗೂ ಶುಭಾಶಯ ತಿಳಿಸಿ ಎಲ್ಲರಿಗೂ ಗುಡ್ ಲಕ್ ಎಂದು ಟ್ವೀಟ್ ಮಾಡಿದ್ದಾರೆ.

    ಗೌರಿ ಶಕ್ತಿ, ಶೌರ್ಯದ ಪ್ರತೀಕವಾದರೆ, ಗಣಪತಿಯು ವಿದ್ಯೆ, ಜ್ಞಾನದ ಪ್ರತೀಕ. ಪ್ರತಿಯೊಬ್ಬ ವ್ಯಕ್ತಿಗೂ ಈ ಎರಡೂ ಗುಣಗಳಿಂದಲೇ ವ್ಯಕ್ತಿತ್ವ ವಿಕಾಸವಾಗಲು ಸಾಧ್ಯ. ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು ಎಂದು ಗೋಲ್ಡನ್ ಸ್ಟಾರ್ ಗಣೇಶ್ ಟ್ವೀಟ್ ಮಾಡಿದ್ದಾರೆ.

    https://twitter.com/actressharshika/status/1039806642374823941

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವರ್ಷಾಂತ್ಯಕ್ಕೆ ಸಾಲು ಸಾಲು ಸಿನಿಮಾ- ಪ್ರೇಕ್ಷಕರನ್ನು ಮನರಂಜಿಸಲು ಮಫ್ತಿ, ಗೌಡ್ರು ಹೋಟೆಲ್ ರೆಡಿ!

    ವರ್ಷಾಂತ್ಯಕ್ಕೆ ಸಾಲು ಸಾಲು ಸಿನಿಮಾ- ಪ್ರೇಕ್ಷಕರನ್ನು ಮನರಂಜಿಸಲು ಮಫ್ತಿ, ಗೌಡ್ರು ಹೋಟೆಲ್ ರೆಡಿ!

    ಬೆಂಗಳೂರು: ವರ್ಷದ ಕೊನೆಯಲ್ಲಿ ಸ್ಯಾಂಡಲ್‍ವುಡ್‍ನಲ್ಲಿ ಸಾಲು ಸಾಲು ಸಿನಿಮಾಗಳು ಪ್ರೇಕ್ಷಕರನ್ನ ಮೋಡಿ ಮಾಡಲು ಬರುತ್ತಿವೆ. ಅದರಲ್ಲೂ ಈ ವಾರ ತೆರೆಕಾಣುತ್ತಿರುವ ಎರಡು ಸಿನಿಮಾಗಳಿಗಾಗಿ ಪ್ರೇಕ್ಷಕರು ಕಾದು ಕುಳಿತ್ತಿದ್ದರು.

    2017ರ ಕೊನೆಯ ತಿಂಗಳಲ್ಲಿ ಸ್ಯಾಂಡಲ್‍ವುಡ್ ಮಸ್ತ್ ಮನೋರಂಜನೆ ನೀಡಲು ಸಜ್ಜಾಗಿದ್ದು, ಈ ವಾರ `ಮಫ್ತಿ’, `ಗೌಡ್ರು ಹೋಟೆಲ್’, `ಮಂತ್ರಂ’, `ಡ್ರೀಮ್ ಗರ್ಲ್’ ಸಿನಿಮಾಗಳು ತೆರೆಕಂಡಿವೆ.

    ಕನ್ನಡ ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾ ಮಫ್ತಿ ರಾಜ್ಯಾದ್ಯಂತ ಸುಮಾರು 400ಕ್ಕೂ ಹೆಚ್ಚು ಥಿಯೇಟರ್‍ಗಳಲ್ಲಿ ಪ್ರದರ್ಶನಗೊಳ್ತಿದೆ. ಸೆಂಚುರಿ ಸ್ಟಾರ್ ಶಿವಣ್ಣ ಮತ್ತು ಶ್ರೀಮುರುಳಿ ಅಭಿನಯಿಸಿರುವ ಚಿತ್ರದ ಟ್ರೇಲರ್ ಈಗಾಗಲೇ ಯೂಟ್ಯೂಬ್‍ನಲ್ಲಿ ಹವಾ ಎಬ್ಬಿಸಿದೆ. ಮಫ್ತಿ ಮೂಲಕ ನರ್ತನ್ ತಮ್ಮ ಮೊದಲ ಸಿನಿಮಾದಲ್ಲೇ ನಿರ್ದೇಶನದ ಕೌಶಲ್ಯ ತೋರಿಸಿದ್ದಾರೆ. ಖ್ಯಾತ ನಿರ್ಮಾಪಕ ಜೋಡಿ ಜಯಣ್ಣ, ಭೋಗೇಂದ್ರ ನಿರ್ಮಾಣದೊಂದಿಗೆ ಕುಂದಾಪುರದ ಸಕಲಕಲಾವಲ್ಲಭ ರವಿ ಬಸ್ರೂರ್ ಅವರ ಸಂಗೀತದಲ್ಲಿ ಚಿತ್ರ ಮೂಡಿಬಂದಿದೆ.

    ಮತ್ತೊಂದು ಸಿನಿಮಾ `ಗೌಡ್ರು ಹೋಟೆಲ್’ ತೆರೆ ಕಂಡಿದ್ದು, ಮಾಲಿವುಡ್‍ನಲ್ಲಿ ಸೂಪರ್ ಹಿಟ್ ಆಗಿದ್ದ `ಉಸ್ತಾದ್ ಹೋಟೆಲ್’ ಸಿನಿಮಾವನ್ನು ಕನ್ನಡಕ್ಕೆ `ಗೌಡ್ರು ಹೋಟೆಲ್’ ಹೆಸರಿನಲ್ಲಿ ಖ್ಯಾತ ನಿರ್ದೇಶಕ ಪಿ.ಕುಮಾರ್ ತಂದಿದ್ದಾರೆ. ಎಮಿನೆಂಟ್ ಮೂವೀ ಮೇಕರ್ಸ್ ನಿರ್ಮಾಣದಲ್ಲಿ `ಗೌಡ್ರು ಹೋಟೆಲ್’ ಅದ್ಧೂರಿಯಾಗಿ ನಿರ್ಮಾಣವಾಗಿದೆ. ಕಾಲಿವುಡ್‍ನ ಖ್ಯಾತ ಸಂಗೀತ ನಿರ್ದೇಶಕ ಯುವನ್ ಶಂಕರ್ ಹಾಡುಗಳಿಗೆ ತಂತಿ ಮೀಟಿದ್ದಾರೆ. ಈ ಸಿನಿಮಾ ಒಂದು ತಾತ-ಮೊಮ್ಮಗನ ಬಾಂಧವ್ಯದ ಕಥೆಯಾಗಿದ್ದು, ಪ್ರಕಾಶ್ ರೈ ತಾತನಾಗಿ, ಲಂಡನ್‍ನಲ್ಲಿ ಎಂಜಿನಿಯರಿಂಗ್ ಮುಗಿಸಿರುವ ರಚನ್ ಚಂದ್ರ ಮೊಮ್ಮಗನಾಗಿ ಅಭಿನಯಿಸಿದ್ದಾರೆ. ಇದೇ ಮೊದಲ ಬಾರಿಗೆ ಮೊಮ್ಮಗನಾಗಿ ಕ್ಯಾಮೆರಾ ಎದುರಿಸಿದ್ದು, ರಚನ್‍ಗೆ ಜೋಡಿಯಾಗಿ ನಟಿ ವೇದಿಕಾ ಸಾಥ್ ನೀಡಿದ್ದಾರೆ.

    ಮೂರನೇ ಸಿನಿಮಾ `ಡ್ರೀಮ್ ಗರ್ಲ್’. ರಿಂಗ್ ರೋಡ್ ಶುಭ ಸಿನಿಮಾದ ನಂತರ ಪಟ್ರೆ ಅಜಿತ್ ನಾಯಕನಾಗಿ ಅಭಿನಯಿಸುತ್ತಿರುವ ಸಿನಿಮಾ ಇದಾಗಿದೆ. ಚಿತ್ರದಲ್ಲಿ ಅಮೃತಾ ರಾವ್ ಮತ್ತು ದೀಪಿಕಾ ದಾಸ್ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಲಕ್ಷಣ್ ನಾಯಕ್ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಗಂಧರ್ವ ಸಂಗೀತ ಸಂಯೋಜನೆ ಮಾಡಿದ್ದಾರೆ. ‘ಡ್ರೀಮ್ ಗರ್ಲ್’ ಲವ್ ಸಸ್ಪೆನ್ಸ್ ಕಥಾಹಂದರ ಹೊಂದಿದೆ.

    ನಾಲ್ಕನೇ ಸಿನಿಮಾ `ಮಂತ್ರಂ’. ಟ್ರೇಲರ್‍ನಿಂದಲೇ ಪ್ರೇಕ್ಷಕರ ಕುತೂಹಲವನ್ನು ಹೆಚ್ಚಿಸಿದ ಸಿನಿಮಾ ಇದಾಗಿದ್ದು, ನೈಜ ಘಟನೆಯ ಆಧಾರವಿಟ್ಟುಕೊಂಡು ಕಥೆಯನ್ನು ಎಣೆಯಲಾಗಿದೆ. ಎಸ್.ಎಸ್. ಸಜ್ಜನ್ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಮಣಿಶೆಟ್ಟಿ ಹಾಗೂ ಪಲ್ಲವಿ ಸಿನಿಮಾದಲ್ಲಿ ನಾಯಕ ನಾಯಕಿಯಾಗಿ ಅಭಿನಯಿಸಿದ್ದಾರೆ. ರಷೀದ್ ಖಾನ್ ಸಂಗೀತ ನಿರ್ದೇಶನ ಮಾಡಿದ್ದು, ರಾಜಶೇಖರ್ ಛಾಯಾಗ್ರಹಣ ಮಾಡಿದ್ದಾರೆ.