Tag: ಮುನ್ಸಿಪಲ್ ಕಾರ್ಪೋರೇಷನ್

  • ಗೇಮಿಂಗ್ ಝೋನ್‌ನಲ್ಲಿ ಅಗ್ನಿ ಅವಘಡ ಪ್ರಕರಣ – 7 ಅಧಿಕಾರಿಗಳು ಅಮಾನತು

    ಗೇಮಿಂಗ್ ಝೋನ್‌ನಲ್ಲಿ ಅಗ್ನಿ ಅವಘಡ ಪ್ರಕರಣ – 7 ಅಧಿಕಾರಿಗಳು ಅಮಾನತು

    – ಹೈಕೋರ್ಟ್‌ ತರಾಟೆ ಬಳಿಕ ಎಚ್ಚೆತ್ತ ಗುಜರಾತ್‌ ಸರ್ಕಾರ

    ಗಾಂಧಿನಗರ: ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಮೇ 25ರಂದು ಗೇಮಿಂಗ್‌ ಝೋನ್‌ನಲ್ಲಿ ನಡೆದ ಅಗ್ನಿ ಅವಘಡ (Gaming Zone Fire Accident) ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್‌ ಸರ್ಕಾರ (Gujarat Govt) ಸೋಮವಾರ 7 ಅಧಿಕಾರಿಗಳನ್ನು ಅಮಾನತುಗೊಳಿಸಿದೆ.

    ಅಗತ್ಯ ಅನುಮೋದನೆಗಳಿಲ್ಲದೇ ಗೇಮಿಂಗ್‌ ಝೋನ್‌ ಕಾರ್ಯನಿರ್ವಹಿಸಲು ಅನುಮತಿ ನೀಡಿದ್ದು ಅಧಿಕಾರಿಗಳ ನಿರ್ಲಕ್ಷ್ಯವನ್ನು ತೋರಿಸಿದೆ. ಹಾಗಾಗಿ ವಿಶೇಷ ತನಿಖಾ ತಂಡ (SIT) ಸಲ್ಲಿಸಿದ ವರದಿ ಆಧರಿಸಿ 7 ಅಧಿಕಾರಿಗಳನ್ನ ಅಮಾನತುಗೊಳಿಸಲಾಗಿದೆ. ಪ್ರಕರಣದಲ್ಲಿ ಪೊಲೀಸರು ಈಗಾಗಲೇ ಕೆಲವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣದಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆ ಅವರನ್ನ ಪತ್ತೆ ಮಾಡಿ ಬಂಧಿಸಲು 17 ತಂಡಗಳನ್ನ ರಚಿಸಲಾಗಿದೆ ಎಂದು ಗೃಹ ಸಚಿವ ಹರ್ಷ ಸಾಂಘ್ವಿ (Harsh Sanghavi) ತಿಳಿಸಿದ್ದಾರೆ. ಇದನ್ನೂ ಓದಿ: ಅದಾನಿ ಗ್ರೂಪ್‌ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡದಂತೆ ಮೋದಿ, ರಾಹುಲ್‌ಗೆ ನಿರ್ದೇಶಿಸಿ: ಕೋರ್ಟ್‌ಗೆ ಅರ್ಜಿ ಸಲ್ಲಿಕೆ

    ಹೈಕೋರ್ಟ್‌ ತರಾಟೆ ಬಳಿಕ ಎಚ್ಚೆತ್ತ ಸರ್ಕಾರ:
    ರಾಜ್‌ಕೋಟ್‌ನ ಟಿಆರ್‌ಪಿ ಗೇಮಿಂಗ್ ಝೋನ್‌ನಲ್ಲಿ ಸಂಭವಿಸಿದ ಅಗ್ನಿಅವಘಡಕ್ಕೆ ಸಂಬಂಧಿಸಿದಂತೆ ಮುನ್ಸಿಪಲ್ ಕಾರ್ಪೊರೇಷನ್ ಅನ್ನು ಗುಜುರಾತ್ ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿತ್ತು. ಅಧಿಕಾರಿಗಳ ನಿರ್ಲಕ್ಷ್ಯ ಆಡಳಿತ ಯಂತ್ರದ ಮೇಲಿನ ನಂಬಿಕೆಯನ್ನು ಪ್ರಶ್ನಿಸುವಂತಾಗಿದೆ ಎಂದು ಹೇಳಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾ. ಬಿರೇನ್ ವೈಷ್ಣವ್ ಮತ್ತು ನ್ಯಾ.ದೇವನ್ ದೇಸಾಯಿ ಅವರನ್ನೊಳಗೊಂಡ ವಿಶೇಷ ಪೀಠ, ಗೇಮಿಂಗ್ ವಲಯ ನಿರ್ವಾಹಕರು ರಾಜ್‌ಕೋಟ್ ಮುನ್ಸಿಪಲ್ ಕಾರ್ಪೊರೇಷನ್‌ನಿಂದ (Muncipal Corporation) ಕಡ್ಡಾಯ ಅನುಮತಿಗಳು ಮತ್ತು ಪರವಾನಗಿಗಳನ್ನು ತೆಗೆದುಕೊಂಡಿಲ್ಲ ಎಂದು ವರದಿಯಾಗಿದೆ. ಅಧಿಕಾರಿಗಳು ಏನು ನಿದ್ದೆ ಮಾಡುತ್ತಿದ್ದಾರ ಎಂದು ಖಾರವಾಗಿ ಪ್ರಶ್ನಿಸಿತ್ತು. ಕೋರ್ಟ್‌ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕೆಲವೇ ಗಂಟೆಗಳಲ್ಲಿ ಸರ್ಕಾರ 7 ಅಧಿಕಾರಿಗಳನ್ನ ಅಮಾನತುಗೊಳಿದೆ. ಇದನ್ನೂ ಓದಿ: ಮುಂಬೈ ತಾಜ್‌ ಹೋಟೆಲ್‌, ಏರ್‌ಪೋರ್ಟ್‌ಗೆ ಬಾಂಬ್‌ ಬೆದರಿಕೆ – ಉತ್ತರ ಪ್ರದೇಶದಲ್ಲಿ ಲೊಕೇಶನ್‌ ಪತ್ತೆ!

    ಡಿಎನ್‌ಎ ಮೂಲಕ ಗುರುತು ಪತ್ತೆ ಕಾರ್ಯ:
    ಅಗ್ನಿ ದುರಂತಕ್ಕೆ ಸಿಕ್ಕಿ ಸಜೀವ ಹೊಂದಿರುವವರ ಗುರುತನ್ನು ಡಿಎನ್‌ಎ ಮೂಲಕ ಪತ್ತೆ ಮಾಡುವ ಕಾರ್ಯಕ್ಕೆ ಸರ್ಕಾರ ಮುಂದಾಗಿದೆ. ಶನಿವಾರ ಸಂಭವಿಸಿದ ಬೆಂಕಿ ಅವಘಡದಲ್ಲಿ 7 ಅಪ್ರಾಪ್ತರು ಸೇರಿ 28 ಮಂದಿ ಸಾವನ್ನಪ್ಪಿದ್ದರು. ಈ ಪೈಕಿ ಒಬ್ಬರ ಮೃತದೇಹ ಮಾತ್ರ ನಾಪತ್ತೆಯಾಗಿದ್ದು, ಉಳಿದ ಮೃತದೇಹಗಳನ್ನ ಹೊರತೆಗೆಯಲಾಗಿದೆ. ಸೋಮವಾರವಾದ ಇಂದು ಟಿಆರ್‌ಪಿ ಗೇಮಿಂಗ್ ಝೋನ್ ಫೈರ್ ಸೈಟ್‌ನಿಂದ ಪತ್ತೆಯಾದ ಕನಿಷ್ಠ 5 ಸುಟ್ಟ ದೇಹಗಳ ಗುರುತುಗಳನ್ನು ಡಿಎನ್‌ಎ ಮೂಲಕ ದೃಢಪಡಿಸಲಾಗಿದೆ. ಉಳಿದ ಮಾದರಿಗಳ ಪರೀಕ್ಷೆ ನಡೆಯುತ್ತಿದ್ದು, ಶೀಘ್ರವೇ ಎಲ್ಲ ಮೃತ ದೇಹಗಳ ಗುರುತು ಪತ್ತೆಯಾಗಲಿದೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಪ್ರಣಾಳಿಕೆ ಭರವಸೆಯಿಂದಾಗುವ ಆರ್ಥಿಕ ಲಾಭ ಅಭ್ಯರ್ಥಿಯ ಭ್ರಷ್ಟಾಚಾರವಲ್ಲ – ಜಮೀರ್‌ಗೆ ಸುಪ್ರೀಂ ರಿಲೀಫ್

  • ಗೇಮಿಂಗ್ ಝೋನ್‌ನಲ್ಲಿ ಅಗ್ನಿ ಅವಘಡ ಪ್ರಕರಣ – ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್

    ಗೇಮಿಂಗ್ ಝೋನ್‌ನಲ್ಲಿ ಅಗ್ನಿ ಅವಘಡ ಪ್ರಕರಣ – ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್

    ಅಹಮದಾಬಾದ್: ರಾಜ್‌ಕೋಟ್‌ನ (Rajkot) ಟಿಆರ್‌ಪಿ ಗೇಮಿಂಗ್ ಝೋನ್‌ನಲ್ಲಿ (Gaming Zone) ಸಂಭವಿಸಿದ ಅಗ್ನಿಅವಘಡಕ್ಕೆ (Fire Accident) ಸಂಬಂಧಿಸಿದಂತೆ ಮುನ್ಸಿಪಲ್ ಕಾರ್ಪೊರೇಷನ್ (Muncipal Corporation) ಅನ್ನು ಗುಜುರಾತ್ ಹೈಕೋರ್ಟ್ (Gujarat Highcourt) ತೀವ್ರ ತರಾಟೆಗೆ ತೆಗೆದುಕೊಂಡಿದೆ. ಅಧಿಕಾರಿಗಳ ನಿರ್ಲಕ್ಷ್ಯ ಆಡಳಿತ ಯಂತ್ರದ ಮೇಲಿನ ನಂಬಿಕೆಯನ್ನು ಪ್ರಶ್ನಿಸುವಂತಾಗಿದೆ ಎಂದು ಹೇಳಿದೆ.

    ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ಬಿರೇನ್ ವೈಷ್ಣವ್ ಮತ್ತು ನ್ಯಾ.ದೇವನ್ ದೇಸಾಯಿ ಅವರನ್ನೊಳಗೊಂಡ ವಿಶೇಷ ಪೀಠ, ಗೇಮಿಂಗ್ ವಲಯ ನಿರ್ವಾಹಕರು ರಾಜ್‌ಕೋಟ್ ಮುನ್ಸಿಪಲ್ ಕಾರ್ಪೊರೇಷನ್‌ನಿಂದ ಕಡ್ಡಾಯ ಅನುಮತಿಗಳು ಮತ್ತು ಪರವಾನಗಿಗಳನ್ನು ತೆಗೆದುಕೊಂಡಿಲ್ಲ ಎಂದು ವರದಿಯಾಗಿದೆ. ಅಧಿಕಾರಿಗಳು ಏನು ನಿದ್ದೆ ಮಾಡುತ್ತಿದ್ದಾರ ಎಂದು ಖಾರವಾಗಿ ಪ್ರಶ್ನಿಸಿದೆ. ಇದನ್ನೂ ಓದಿ: ನಕ್ಸಲರಿಂದ ನಿರಂತರ ಬೆದರಿಕೆ- ಪದ್ಮಶ್ರೀ ಹಿಂದಿರುಗಿಸಲು ಹೇಮಚಂದ್ ಮಾಂಝಿ ನಿರ್ಧಾರ

    ನಮ್ಮ ಆದೇಶದ ನಾಲ್ಕು ವರ್ಷಗಳ ನಂತರವೂ ಅಗ್ನಿ ಸುರಕ್ಷತೆಯ ವಿಷಯದಲ್ಲಿ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಆರ್‌ಎಂಸಿ ಹೇಗೆ ಹೊಣೆಯಾಗುವುದಿಲ್ಲ? ಇದಕ್ಕೆ ಅಧಿಕಾರಿಗಳು ಹೊಣೆ. ಈ ಬಗ್ಗೆ ಪರಿಶೀಲನೆ ನಡೆಯದಿರುವುದು ಯಾರ ತಪ್ಪು ಎಂದು ಆಕ್ರೋಶ ವ್ಯಕ್ತಪಡಿಸಿತು. ಇದನ್ನೂ ಓದಿ: ಇವಿಎಂ ಯಂತ್ರಗಳು ಏನು ಆಗದೇ ಹೋದರೆ ಸರಿ, ಜನ ನಮ್ಮ ಪರವಾಗಿದ್ದಾರೆ: ಡಿಕೆಶಿ

    ಗೇಮಿಂಗ್ ಝೋನ್‌ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಒಂಭತ್ತು ಮಕ್ಕಳು ಸೇರಿ 28 ಮಂದಿ ಸಾವನ್ನಪ್ಪಿದ್ದರು. ಘಟನೆ ಬಳಿಕ ಮಾಲೀಕ ಸೇರಿ ಮೂವರನ್ನು ಬಂಧಿಸಲಾಗಿತ್ತು. ಪ್ರಕರಣದಲ್ಲಿ ನಿರ್ಲಕ್ಷ್ಯ ತೋರಿದ ಆರು ಅಧಿಕಾರಿಗಳನ್ನು ಅಮಾನತುಗೊಳಿಸಿ ಗುಜರಾತ್ ಸರ್ಕಾರ ಸೋಮವಾರ ಆದೇಶ ಹೊರಡಿಸಿತ್ತು. ಇದನ್ನೂ ಓದಿ:  ಶಾರ್ಟ್‌ಸರ್ಕ್ಯೂಟ್‌ನಿಂದ ಎಲೆಕ್ಟ್ರಿಕ್‌ ಚಾರ್ಜಿಂಗ್ ಬ್ಯಾಟರಿ ಅಂಗಡಿ ಧಗಧಗ

  • ಕೋಲ್ಕತ್ತಾ ಮುನ್ಸಿಪಲ್ ಕಾರ್ಪೋರೇಷನ್ ಚುನಾವಣೆ ವೇಳೆ ಬಾಂಬ್ ಸ್ಫೋಟ

    ಕೋಲ್ಕತ್ತಾ ಮುನ್ಸಿಪಲ್ ಕಾರ್ಪೋರೇಷನ್ ಚುನಾವಣೆ ವೇಳೆ ಬಾಂಬ್ ಸ್ಫೋಟ

    ಕೋಲ್ಕತ್ತಾ: ಮುನ್ಸಿಪಲ್ ಕಾರ್ಪೋರೇಷನ್‍ಗೆ ಚುನಾವಣೆ ನಡೆಯ ವೇಳೆ ಕೋಲ್ಕತ್ತಾದ ಸೀಲ್ದಾಹ್ ಪ್ರದೇಶದ ಮತಗಟ್ಟೆಯ ಹೊರಗೆ ಕಚ್ಚಾ ಬಾಂಬ್ ಸ್ಫೋಟಗೊಂಡಿದೆ.

    ಈ ಘಟನೆಯಲ್ಲಿ ಮೂವರು ಮತದಾರರು ಗಾಯಗೊಂಡಿದ್ದಾರೆ. ಅವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ. ಗಾಯಗೊಂಡವರಲ್ಲಿ ಒಬ್ಬರು ಕಾಲು ಕಳೆದುಕೊಂಡಿದ್ದು, ಉಳಿದ ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಈ ಸ್ಫೋಟ ಸಂಭವಿಸಿದೆ. ಗಾಯಗೊಂಡ ಮೂವರು ಇದೇ ಕ್ಷೇತ್ರದದ ಮತದಾರರು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ MES ಪುಂಡರ ಅಟ್ಟಹಾಸ – ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಹಾನಿ, ಬಸ್ ಮೇಲೆ ಕಲ್ಲು ತೂರಾಟ

    ಘಟನೆಯ ಬಳಿಕ ದುಷ್ಕರ್ಮಿಗಳು ಪರಾರಿಯಾಗಿದ್ದು, ಆರೋಪಿಗಳನ್ನು ಪತ್ತೆ ಹಚ್ಚಲು ಸಿಸಿಟಿವಿ ದೃಶ್ಯವಾಳಿಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಮರುಪ್ರತಿಷ್ಠಾಪನೆ

    ಮತದಾನದ ಹಿನ್ನೆಲೆಯಲ್ಲಿ ಕೋಲ್ಕತ್ತಾ ನಗರದಲ್ಲಿ 23,000 ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಸುಮಾರು ಸಂಜೆ 5 ಗಂಟೆಯವರೆಗೆ ಮತದಾನ ನಡೆದಿತ್ತು

  • ವಡೋದರಾದಲ್ಲಿ ಪಾನಿಪುರಿ ಬ್ಯಾನ್!

    ವಡೋದರಾದಲ್ಲಿ ಪಾನಿಪುರಿ ಬ್ಯಾನ್!

    ಗಾಂಧಿನಗರ: ಪಾನಿಪುರಿ ಮಾರಾಟ ಮಾಡದಂತೆ ಗುಜರಾತಿನ ವಡೋದರಾದ ಮುನ್ಸಿಪಲ್ ಕಾರ್ಪೋರೇಷನ್ ಆದೇಶ ಹೊರಡಿಸಿದೆ.

    ಸ್ಥಳೀಯರ ಆರೋಗ್ಯ ದೃಷ್ಟಿಯಿಂದ ಇಂತಹದೊಂದು ನಿರ್ಧಾರವನ್ನು ವಡೋದರಾ ಮುನ್ಸಿಪಲ್ ಕಾರ್ಪೋರೇಷನ್ ಕೈಗೊಂಡಿದೆ. ಆದೇಶವನ್ನು ಮೀರಿ ಅಕ್ರಮವಾಗಿ ಪಾನಿ ತಯಾರಿಸುತ್ತಿದ್ದ ಮಳಿಗೆಗಳ ಮೇಲೆ ದಾಳಿ ಮಾಡಿ ಅವರಿಂದ ತ್ಯಾಜ್ಯ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

    ಮುಂಗಾರು ಸಮಯದಲ್ಲಿ ಪಾನಿಪುರಿ ಪ್ರಿಯರ ದಂಡು ರಸ್ತೆ ಬದಿಯ ಮಳಿಗೆಗಳಲ್ಲಿ ಬೇಲ್‍ಪುರಿ, ಪಾನಿಪುರಿ ತಿನ್ನಲು ಸರದಿಯಲ್ಲಿ ನಿಂತಿರುತ್ತಾರೆ. ಹೀಗಾಗಿ ಪಾನಿಪುರಿ ಸೇವನೆ ಸಾರ್ವಜನಿಕರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬಿರುತ್ತಿದೆ. ವಡೋದರಾ ಸ್ಥಳೀಯ ನಿವಾಸಿಗಳು ಕಳೆದ ಕೆಲವು ದಿನಗಳಿಂದ ಟೈಫಾಯಿಡ್, ಜಾಂಡಿಸ್ ಹಾಗೂ ಫುಡ್ ಪಾಯಿಸನ್‍ಗೆ ತುತ್ತಾಗಿದ್ದರು. ಇದಕ್ಕೆ ಪಾನಿಪುರಿ ಸೇವನೆಯೇ ಕಾರಣ ಎಂದು ಅರಿತ ಮುನ್ಸಿಪಲ್ ಕಾರ್ಪೋರೇಷನ್ ಅಧಿಕಾರಿಗಳು ಹಾಗೂ ಸದಸ್ಯರು ಪಾನಿಪುರಿ ಮಾರಾಟಕ್ಕೆ ತಡೆ ಹಾಕಿದ್ದಾರೆ.

    ನಗರದಲ್ಲಿ ಪಾನಿಪುರಿ ತಯಾರಿಸುತ್ತಿದ್ದ ಮಳಿಗೆಗಳ ಮೇಲೆ ದಿಢೀರ್ ದಾಳಿ ನಡೆಸಿದ ವೇಳೆ ಶಾಕಿಂಗ್ ದೃಶ್ಯಗಳು ಕಣ್ಣಿಗೆ ಬಿದ್ದಿವೆ. ಹಾಳಾದ ಹಿಟ್ಟು, ಕಂದುಬಣ್ಣದ ಅಡುಗೆ ಎಣ್ಣೆ, ಕೊಳೆತ ಆಲೂಗಡ್ಡೆ ಕೊಳಚೆ ನೀರು ಸೇರಿದಂತೆ ಸಾವಿರಾರು ಕೆಜಿ ಸಾಮಗ್ರಿಗಳನ್ನು ವಶಕ್ಕೆ ಪಡೆದು ನಗರದ ಹೊರವಲಯದಲ್ಲಿ ಪಾಲಿಕೆ ಬೀಸಾಡಿದೆ.

    ಮುನ್ಸಿಪಲ್ ಕಾರ್ಪೋರೇಷನ್ ಸಿಬ್ಬಂದಿ ಹಾಗೂ ಆರೋಗ್ಯ ಇಲಾಖೆ ವಡೋದಾರದಲ್ಲಿ ಪಾನಿಪುರಿ ತಯಾರಿಸುತ್ತಿದ್ದ 50 ತಯಾರಿಕಾ ಮಳಿಗೆಗಳ ಮೇಲೆ ದಾಳಿ ಮಾಡಿದ್ದವು. ಇದರಿಂದಾಗಿ 4 ಸಾವಿರ ಕೆಜಿ ಪುರಿ, 3.5 ಸಾವಿರ ಕೆಜಿ ಆಲೂಗಡ್ಡೆ ಹಾಗೂ 1.2 ಸಾವಿರ ಲೀಟರ್ ಆಮ್ಲೀಯ ನೀರು (ಆಸಿಡಿಕ್ ವಾಟರ್) ವಶಪಡಿಸಿಕೊಳ್ಳಲಾಗಿದೆ.