Tag: ಮುನ್ನಾರ್ ರೆಸಾರ್ಟ್

  • ಕೇರಳದಲ್ಲಿ ವರುಣನ ಆರ್ಭಟ – ಮುನ್ನಾರ್ ರೆಸಾರ್ಟ್ ನಲ್ಲಿ ಸಿಲುಕಿದ 60 ಪ್ರವಾಸಿಗರು

    ಕೇರಳದಲ್ಲಿ ವರುಣನ ಆರ್ಭಟ – ಮುನ್ನಾರ್ ರೆಸಾರ್ಟ್ ನಲ್ಲಿ ಸಿಲುಕಿದ 60 ಪ್ರವಾಸಿಗರು

    ತಿರುವನಂತಪುರಂ: ಕೇರಳದ ಭಾರೀ ಮಳೆಗೆ ಮುನ್ನಾರ್ ಎಂಬ ಜನಪ್ರಿಯ ಗಿರಿಧಾಮದ ಸಮೀಪದಲ್ಲಿರುವ ಇಡುಕ್ಕಿ ಪಾಲಿವಾಸಲ್ ರೆಸಾರ್ಟ್‍ನಲ್ಲಿ 20 ಮಂದಿ ವಿದೇಶಿಯರು ಸೇರಿದಂತೆ 60 ಮಂದಿ ಪ್ರವಾಸಿಗರು ಸಿಲುಕಿಕೊಂಡಿದ್ದಾರೆ.

    ಭಾರೀ ಮಳೆಯಿಂದಾಗಿ ಭೂಕುಸಿತ ಉಂಟಾಗಿದ್ದು, ಈ ಜರ್ಜರಿತ ಸ್ಥಿತಿಯಿಂದಾಗಿ ಎಲ್ಲಾ ರಸ್ತೆಗಳನ್ನು ನಿರ್ಬಂಧಿಸಲಾಗಿದೆ. ಪ್ರವಾಸಿಗರು ಎರಡು ದಿನಗಳಿಂದ ರೆಸಾರ್ಟ್ ನಲ್ಲಿ ಸಿಲುಕಿಕೊಂಡಿದ್ದಾರೆ. ಎನ್‍ಡಿಆರ್‍ಎಫ್ ತಂಡ ರಕ್ಷಣಾ ಕಾರ್ಯಚರಣೆಯಲ್ಲಿ ತೊಡಗಿಕೊಂಡಿದ್ದು, ಪ್ರವಾಹ ಪೀಡಿತರನ್ನು ತಲುಪವಲ್ಲಿ ಪ್ರಯತ್ನ ನಡೆಸುತ್ತಿದೆ ಎಂದು ವರದಿಯಾಗಿದೆ.

    ರಾಜ್ಯದಲ್ಲಿ ಸಂಭವಿಸುತ್ತಿರುವ ಭಾರೀ ಮಳೆಯಿಂದಾಗಿ ಕೇರಳಕ್ಕೆ ಯಾರು ಭೇಟಿ ನೀಡಬಾರದೆಂದು ಯುನೈಟೆಡ್ ಸ್ಟೇಟ್ಸ್ ಮುನ್ನೆಚರಿಕೆಯನ್ನು ವಹಿಸಿದೆ. ನೈರುತ್ಯ ಮಾನ್ಸೂನ್ ಮಳೆಯಿಂದಾಗಿ ಕೇರಳದಲ್ಲಿ ಭೂಕುಸಿತ ಮತ್ತು ಪ್ರವಾಹ ಉಂಟಾಗಿದೆ. ಈ ಮಳೆಯಿಂದಾಗಿ ಮೃತಪಟ್ಟವರ ಸಂಖ್ಯೆ 26 ಕ್ಕೆ ಏರಿದೆ. ಭಾನುವಾರ ಭಾರೀ ಮಳೆಯಾಗಿದ್ದು, ಇಡುಕ್ಕಿ ಮತ್ತು ಉತ್ತರದ ಭಾಗಗಳ ಗುಡ್ಡಗಾಡು ಜಿಲ್ಲೆಗಳಲ್ಲಿ ಭೂಕುಸಿತ ಉಂಟಾಗಿತ್ತು. ಮಳೆಯ ಹಿನ್ನೆಲೆಯಲ್ಲಿ ಶಇಡುಕ್ಕಿ ಜಿಲ್ಲೆಯ ಎಲ್ಲಾ ಪ್ರವಾಸಿ ಕೇಂದ್ರಗಳ ಪ್ರವೇಶವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ ಎಂದು ಸರ್ಕಾರ ಆದೇಶಿಸಿದೆ.

    ಕೇರಳ ರಾಜ್ಯ ವಿಕೋಪ ನಿರ್ವಹಣೆ ಅಧಿಕಾರಿಗಳು ಇಡುಕ್ಕಿ ವಝಾಥೋಪ್, ಮರಿಯಾಪುರಂ, ಕಂಜಿಕುಝಿ, ವತಿಕುಡಿ ಮತ್ತು ಕೊನಾಥಾಡಿ ಪಂಚಾಯತ್‍ಗಳಿಗೆ ಪ್ರಯಾಣಿಸದಂತೆ ನಾಗರಿಕರಿಗೆ ಸಲಹೆ ನೀಡಿದೆ. ತುಂಬಿ ಹರಿಯುತ್ತಿರುವ ಜಲಾಶಯದಿಂದ ನೀರನ್ನು ನದಿಗೆ ಬಿಡಲಾಗುತ್ತಿದ್ದು, ನದಿಗಳ ಬಳಿ ಜನರು ಎಚ್ಚರಿಕೆ ವಹಿಸುವಂತೆ ಹೇಳಿದ್ದಾರೆ. ನದಿಗಳು ಪ್ರವಾಹ ಮಟ್ಟ ಮೀರಿ ಹರಿಯುತ್ತಿದ್ದು, ರಾಜ್ಯದ ಎಲ್ಲ ಜಲಾಶಯಗಳು ಭರ್ತಿಯಾಗಿದ್ದು, 24 ಅಣೆಕಟ್ಟುಗಳ ಗೇಟ್‍ಗಳನ್ನು ತೆರೆಯಲಾಗಿದೆ.

    ಚೆರುಥೋನಿ ಪಟ್ಟಣದ ಜನರನ್ನು ಸ್ಥಳಾಂತರಿಸುವುದರೊಂದಿಗೆ ಚೆರೊಥೋನಿ ಅಣೆಕಟ್ಟಿನ ಎಲ್ಲಾ 5 ಗೇಟ್‍ಗಳನ್ನು ತೆರೆಯಲಾಗಿದೆ. ಪಟ್ಟಣದಲ್ಲಿರುವ ಸೇತುವೆ ಉತ್ತರ ಹಾಗೂ ದಕ್ಷಿಣ ಇಡುಕ್ಕಿ ಸಂಪರ್ಕಿಸುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews