Tag: ಮುಧೋಳ ಪೊಲೀಸ್

  • ತಂದೆಯನ್ನ ಕೊಂದು 20 ತುಂಡು ಮಾಡಿ ಕೊಳವೆ ಬಾವಿಗೆ ಬಿಸಾಡಿದ ಪಾಪಿ ಮಗ

    ತಂದೆಯನ್ನ ಕೊಂದು 20 ತುಂಡು ಮಾಡಿ ಕೊಳವೆ ಬಾವಿಗೆ ಬಿಸಾಡಿದ ಪಾಪಿ ಮಗ

    ಬಾಗಲಕೋಟೆ: ದೆಹಲಿಯ (Newdelhi) ಲಿವಿಂಗ್ ರಿಲೇಷನ್‌ಶಿಪ್ ಗೆಳತಿ ಶ್ರದ್ಧಾವಾಕರ್ ಹತ್ಯೆ ಕೇಸ್‌ನಂತೆ (Shraddha Walker) ಬಾಗಲಕೋಟೆಯಲ್ಲಿ ನಡೆದಿರುವ ಹತ್ಯೆಯೊಂದು (Murder) ಸಾರ್ವಜನಿಕರನ್ನ ಬೆಚ್ಚಿ ಬೀಳಿಸಿದೆ.

    ಬಾಗಲಕೋಟೆಯ ಮುಧೋಳ ನಗರದಲ್ಲಿ ಪಾಪಿ ಮಗನೊಬ್ಬ ತನ್ನ ತಂದೆಯನ್ನ ಕೊಂದು 20 ತುಂಡುಗಳಾಗಿ ಕತ್ತರಿಸಿ, ಕೊಳವೆ ಬಾವಿಗೆ ಬಿಸಾಡಿರುವ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪರಶುರಾಮ ಕುಳಲಿ (54) ಕೊಲೆಯಾದ ವ್ಯಕ್ತಿ. ಇವರ ಮಗ ವಿಠ್ಠಲ ಕುಳಲಿ(21) ಕೊಲೆ ಆರೋಪಿ ಆಗಿದ್ದಾನೆ. ಇದನ್ನೂ ಓದಿ: ಬಾದಾಮಿ ಕ್ಷೇತ್ರದಲ್ಲೇ ಸಿದ್ದರಾಮಯ್ಯಗೆ ಬಹಿಷ್ಕಾರ..!

    ಕಳೆದ ಮಂಗಳವಾರ (ಡಿಸೆಂಬರ್ 6)ರಂದು ಹತ್ಯೆ ನಡೆದಿದೆ ಎನ್ನಲಾಗಿದೆ. ತಂದೆ ಕುಡಿದ ಮತ್ತಿನಲ್ಲಿ ಮಗನಿಗೆ ಬೈಯ್ಯೋದು, ಹಲ್ಲೆ ಮಾಡೋದು ಮಾಡ್ತಿದ್ದರು. ಇದರಿಂದ ರೋಸಿ ಹೋಗಿದ್ದ ಮಗ, ಕಬ್ಬಿಣದ ರಾಡ್‌ನಿಂದ ತಲೆಗೆ ಬಲವಾಗಿ ಹೊಡೆದು ಹತ್ಯೆ ಮಾಡಿದ್ದಾನೆ. ನಂತರ ಮೃತದೇಹವನ್ನು ಕೊಳವೆ ಬಾವಿಗೆ ಹಾಕಲು ಹೋಗಿದ್ದಾನೆ. ಕೊಳವೆ ಬಾವಿಗೆ ದೇಹ ಇಳಿಯದೇ ಇದ್ದಾಗ, ಕೊಡಲಿಯಿಂದ ತುಂಡು ತುಂಡಾಗಿ ಕತ್ತರಿಸಿ, ನಂತರ ಕೊಳವೆ ಬಾವಿಗೆ ಹಾಕಿದ್ದಾನೆ. ಇದನ್ನೂ ಓದಿ: ಪಕ್ಷಕ್ಕೆ ತೊಂದರೆಯಾದ್ರೆ ನೀವಿಬ್ಬರೇ ಕಾರಣ – ಸಿದ್ದು, ಡಿಕೆಶಿಗೆ ಕೆ.ಸಿ ವೇಣುಗೋಪಾಲ್ ಖಡಕ್ ವಾರ್ನಿಂಗ್

    ಇದೀಗ ಕೊಲೆ ರಹಸ್ಯ ಬಯಲಾಗಿದೆ. ಜೆಸಿಬಿಯಿಂದ (JCB) ಕೊಳವೆ ಬಾವಿ ಅಗೆದು ಮೃತದೇಹದ ಭಾಗಗಳನ್ನ ಪೊಲೀಸರು (Mudhol Police) ಹೊರ ತೆಗೆದಿದ್ದಾರೆ. ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಾಪಿ ಮಗನನ್ನ ಪೊಲೀಸರು ಬಂಧಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]