Tag: ಮುಧೋಳ ನಾಯಿ

  • ಸಚಿವ ಅನಂತ್ ಕುಮಾರ್ ಹೆಗ್ಡೆ ಬಾಯಲ್ಲಿ ಚರಂಡಿ ನೀರು ಹರಿಯುತ್ತಿದೆ- ಸಿಎಂ ವಾಗ್ದಾಳಿ

    ಸಚಿವ ಅನಂತ್ ಕುಮಾರ್ ಹೆಗ್ಡೆ ಬಾಯಲ್ಲಿ ಚರಂಡಿ ನೀರು ಹರಿಯುತ್ತಿದೆ- ಸಿಎಂ ವಾಗ್ದಾಳಿ

    ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗ್ಡೆಯವರನ್ನು ಟೀಕಿಸುವ ಭರದಲ್ಲಿ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.

    ಚಾಮರಾಜ ಕ್ಷೇತ್ರದ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅನಂತ್‍ಕುಮಾರ್ ಹೆಗ್ಡೆ ಬಾಯಲ್ಲಿ ಕಲಗಚ್ಚು ಇದೆ. ಆತನ ನಾಲಿಗೆಯಲ್ಲಿ ಚರಂಡಿ ನೀರು ಹರಿಯುತ್ತಿದೆ. ಆ ಮೋದಿ ಮುಧೋಳ ನಾಯಿಂದ ಕಾಂಗ್ರೆಸ್ ನಿಯತ್ತು ಕಲಿಬೇಕು ಅಂತಾನೆ. ಅವನಿಗೇ ನಿಯತ್ತಿಲ್ಲ ಬೆಳೆಸಿದ ಅಡ್ವಾಣಿಯನ್ನೇ ಮೂಲೆ ಗುಂಪು ಮಾಡಿದ್ದಾನೆ. ಇವರೆಲ್ಲ ಕಾಂಗ್ರೆಸ್‍ಗೆ ಪಾಠ ಹೇಳ್ತಿದ್ದಾರೆ. ಇವರಿಬ್ಬರನ್ನ ಏನು ಮಾಡ್ಬೇಕು ಹೇಳಿ ಅಂತ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಚುನಾವಣೆಯಲ್ಲಿ ನಾಯಿ ಅಲ್ಲ, ಜನ ಮತ ಹಾಕೋದು- ಪ್ರಧಾನಿ ವಿರುದ್ಧ ಪ್ರಕಾಶ್ ರೈ ಕೆಂಡಾಮಂಡಲ

    ಇತ್ತೀಚೆಗಷ್ಟೇ ಮುಧೋಳ ನಾಯಿಯನ್ನು ನೋಡಿ ಕಾಂಗ್ರೆಸ್ ನವರು ಕಲೀಬೇಕು ಅಂತ ಮೋದಿ ಹೇಳಿಕೆಗೆ ಬಹುಭಾಷಾ ನಟ ಪ್ರಕಾಶ್ ರೈ ಕೂಡ ಕಿಡಿಕಾರಿದ್ದರು. ಮತ ಹಾಕಲು ನಾಯಿಗಳು ಬರಲ್ಲ. ಮನಷ್ಯರು ಬರೋದು ಅಂತ ವಾಗ್ದಾಳಿ ನಡೆಸಿದ್ದರು. ಇದನ್ನೂ ಓದಿ: ಭಾರತೀಯ ಸೇನೆಗೆ ರಾಜ್ಯದ ಮುಧೋಳ ಸೇರ್ಪಡೆ: ವಿಶೇಷತೆ ಏನು? ಬೇರೆ ನಾಯಿಗಳಿಗಿಂತ ಭಿನ್ನ ಹೇಗೆ?

  • ಚುನಾವಣೆಯಲ್ಲಿ ನಾಯಿ ಅಲ್ಲ, ಜನ ಮತ ಹಾಕೋದು- ಪ್ರಧಾನಿ ವಿರುದ್ಧ ಪ್ರಕಾಶ್ ರೈ ಕೆಂಡಾಮಂಡಲ

    ಚುನಾವಣೆಯಲ್ಲಿ ನಾಯಿ ಅಲ್ಲ, ಜನ ಮತ ಹಾಕೋದು- ಪ್ರಧಾನಿ ವಿರುದ್ಧ ಪ್ರಕಾಶ್ ರೈ ಕೆಂಡಾಮಂಡಲ

    ಗದಗ: ಬಿಜೆಪಿ ವಿರೋಧ ಮಾಡುವವರು ಮುಧೋಳ ನಾಯಿ ನೋಡಿ ಕಲಿಯಿರಿ ಎಂಬ ಪ್ರಧಾನಿ ಮೋದಿ ಹೇಳಿಕೆಗೆ ಬಹುಭಾಷಾ ನಟ ಪ್ರಕಾಶ್ ರೈ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ರು.

    ಗದಗ ನಗರದಲ್ಲಿ ಖಾಸಗಿ ಹೋಟೆಲ್ ನಲ್ಲಿ ನಡೆದ ಸಂವಾದ ಕಾರ್ಯಕ್ರಮದ ನಂತರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಪ್ರಕಾಶ್ ರೈ, ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ರು. ಮೋದಿ ಮುಧೋಳ ನಾಯಿ ಬಗ್ಗೆ ಮಾತಾಡ್ತಾರೆ. ಬಿಜೆಪಿ ವಿರೋಧಿಗಳು ಮುಧೋಳ ನಾಯಿ ನೋಡಿ ಕಲಿಬೇಕು ಅಂತಾರೆ. ಇನ್ನು ಸೈನ್ಯದಲ್ಲಿ ಮುಧೋಳ ನಾಯಿಗೆ ಕೆಲಸ ಕೊಡ್ತಾರಂತೆ. ಆದ್ರೆ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ನಾಯಿ ಮತ ಹಾಕಲ್ಲ. ಜನ ಮತ ಹಾಕ್ತಾರೆ ಅಂತ ಕಿಡಿಕಾರಿದ್ರು.

    ಇಲ್ಲಿನ ನಾಯಿಗಳು ಜನರ ಪ್ರೀತಿ, ಊಟಕ್ಕಾಗಿ ಮನೆ ಕಾಯುತ್ತವೆ. ಆದ್ರೆ ಮತ ಹಾಕೋದು ರೈತರು, ಯುವಕರು. ಹೀಗಾಗಿ ನಮ್ಮ ಗತಿ ನಾಯಿ ಪಾಡು ಆಗಲು ಬಿಡಲ್ಲ ಅಂತ ಮೋದಿ ವಿರುದ್ಧ ಗರಂ ಆದ್ರು.

    ಪ್ರಧಾನಿ ಸ್ಥಾನಕ್ಕೆ ಗೌರವ ಕೊಡಿ. ನಾವು ಮನುಷ್ಯರು ಆದ್ರೆ ಪ್ರಧಾನಿಗಳ ದೃಷ್ಠಿಯಲ್ಲಿ ನಾವು ನಾಯಿಗಿಂತ ಕಡೆಯಾದ್ವಾ ಅಂತ ಪ್ರಶ್ನಿಸಿದ್ರು. ಪ್ರಧಾನಿ ಮೋದಿ ಅವರಿಗೆ ಅಭಿವೃದ್ಧಿ ಅನ್ನೋದು ಬರಿ ಸುಳ್ಳು. ಇನ್ನು ಇದೇ ವೇಳೆ ಪ್ರಧಾನಿ ಮೋದಿ ಅವರ ಮಹದಾಯಿ ಹೇಳಿಕೆ ಹಾಗೂ ಅನಂತಕುಮಾರ್ ಹೆಗ್ಡೆ ಅವರ ಸಂವಿಧಾನ ಬದಲಾವಣೆ ಹೇಳಿಕೆಗೆ ನಟ ಪ್ರಕಾಶ್ ರೈ ಕಿಡಿಕಾರಿದ್ರು.

    ಇದಕ್ಕೂ ಮೊದಲು ಬಹುಭಾಷಾ ನಟ ಪ್ರಕಾಶ್ ರೈ ಗದಗ ನಗರದ ತೋಂಟದಾರ್ಯ ಮಠಕ್ಕೆ ಭೇಟಿ ನೀಡಿದ್ದರು. ಮಠಕ್ಕೆ ಭೇಟಿ ನೀಡಿ ವಾಪಾಸ್ ಹೊರಡೋ ವೇಳೆ ಆವರಣದಲ್ಲಿಯೇ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ರೈಗೆ ಮುತ್ತಿಗೆ ಹಾಕಿ ಘೇರಾವ್ ಹಾಕಿ ಕಪ್ಪು ಬಟ್ಟೆ ಪ್ರದರ್ಶನ ಮಾಡಿದ್ರು.

     

  • ವಿಜಯಪುರ: ಯುಗಾದಿ ಮರುದಿನ ದೇವಿಯ ಆರಾಧನೆ ಹೆಸರಲ್ಲಿ ನಡೆಯುತ್ತೆ ಮೊಲಗಳ ಮಾರಣಹೋಮ

    ವಿಜಯಪುರ: ಯುಗಾದಿ ಮರುದಿನ ದೇವಿಯ ಆರಾಧನೆ ಹೆಸರಲ್ಲಿ ನಡೆಯುತ್ತೆ ಮೊಲಗಳ ಮಾರಣಹೋಮ

    ವಿಜಯಪುರ: ನಗರದ ಜೋರಾಪುರ ಪೇಟ್ ನಲ್ಲಿರುವ ಗೋಂಧಳಿ ಗಲ್ಲಿಯ ದುರ್ಗಾ ದೇವಸ್ಥಾನದಲ್ಲಿ ಯುಗಾದಿ ಹಬ್ಬದ ಮರುದಿನ ದೇವಿಯ ಆರಾಧನೆ ಹೆಸರಲ್ಲಿ ಮುಗ್ದ ಮೊಲಗಳ ಮಾರಣಹೋಮ ನಡೆಯುತ್ತದೆ.

    ಯುಗಾದಿ ಹಬ್ಬದ ದಿನದಂದು ದೇವಸ್ಥಾನಗಳಿಗೆ ವಿಶೇಷ ಪೂಜೆ ಸಲ್ಲಿಸಿ, ಗೆಳೆಯರು ಮತ್ತು ಸಂಬಂಧಿಕರೊಂದಿಗೆ ಬೇವು-ಬೆಲ್ಲ ವಿನಿಮಯ ಮಾಡುವುದು ಹಬ್ಬದ ವಿಶೇಷತೆ. ಆದ್ರೆ ವಿಜಯಪುರದಲ್ಲಿ ಯುಗಾದಿ ಮರುದಿನ ಬೇಟೆಗೆ ಪ್ರಸಿದ್ಧವಾದ ಮುಧೋಳ ನಾಯಿಗಳೊಂದಿಗೆ ದೂರದ ಊರುಗಳಿಂದ ಭಕ್ತರು ಬರುತ್ತಾರೆ. ಸಂಜೆ ವೇಳೆಗೆ ನಾಯಿಗಳೊಂದಿಗೆ ಬೇಟೆಗೆ ತೆರಳುವ ಭಕ್ತರು ನೂರಾರು ಮೊಲ ಮತ್ತು ಕಾಡು ಮಿಕಗಳನ್ನು ಸೆರೆ ಹಿಡಿದು ತರುತ್ತಾರೆ.

    ಬೇಟೆಯಾಡಿ ತರುವ ಮೊಲಗಳನ್ನ ದೇವಿಯ ಹೆಸರಲ್ಲಿ ಬಲಿ ಕೊಡುತ್ತಾರೆ. ಈ ಪ್ರಾಣಿಗಳ ಮಾರಣಹೋಮ ಮಾಡಿದ ನಂತರ ದೇವಸ್ಥಾನದ ಆವರಣದಲ್ಲಿ ಅಡುಗೆ ತಯಾರಿಸಿ ತಿನ್ನುತ್ತಾರೆ. ಈ ಪದ್ಧತಿ ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿದ್ದು, ಪೊಲೀಸರು ಇದಕ್ಕೆ ಯಾವುದೇ ಕಡಿವಾಣ ಹಾಕಿಲ್ಲ. ಈ ದೇವಸ್ಥಾನ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಮತ್ತು ಪೊಲೀಸ್ ಹೆಡ್ ಕ್ವಾಟರ್ಸ್‍ಗೆ ಕೂಗಳತೆಯ ದೂರದಲ್ಲಿದೆ.